Tag: Srinivas Prasad

  • ಸಿದ್ದರಾಮಯ್ಯರನ್ನು ತಾಲಿಬಾನಿಗೆ ಕಳಿಸಬೇಕು: ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯರನ್ನು ತಾಲಿಬಾನಿಗೆ ಕಳಿಸಬೇಕು: ಶ್ರೀನಿವಾಸ್ ಪ್ರಸಾದ್

    ಮೈಸೂರು: ಸಿದ್ದರಾಮಯ್ಯ ಮಾತಾನಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಿಡಿಕಾರಿದ್ದಾರೆ.

    ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡಿನ ಉಪಚುನಾವಣೆ ನನ್ನ ಸದಾ ಚುಚ್ಚುತ್ತಿರುತ್ತದೆ. ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆ. ಆದರೆ ನಂಜನಗೂಡು ಉಪಚುನಾವಣೆ ವೇಳೆ ಸಿದ್ದರಾಮಯ್ಯ ಎಷ್ಟು ಅಧಿಕಾರ ದುರುಪಯೋಗ ಮಾಡಿಕೊಂಡರು. ಆಗ ನನ್ನ ಬಳಿ ಹಣ ಇರಲಿಲ್ಲ. ಪೊಲೀಸರ ಎದುರೇ ಕಾಂಗ್ರೆಸ್‍ನವರು ಅವತ್ತು ಹಣ ಹಂಚಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ನನಗೆ ತುಂಬಾ ನೋವು ಕೊಟ್ಟರು. ಇಂತಹವರು ಈಗ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ ಎಂದು ಆರೋಪಿಸುತ್ತಾರೆ. ಅವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ. ಇದನ್ನೂ ಓದಿ: ಯುಪಿ ಜನತೆಗೆ 10 ಲಕ್ಷ ರೂ.ವರೆಗೂ ಉಚಿತ ಚಿಕಿತ್ಸೆ – ಪ್ರಿಯಾಂಕಾ ಗಾಂಧಿ ಭರವಸೆ

    ಸಿದ್ದರಾಮಯ್ಯ ಎರಡು ಕಡೆ ಚುನಾವಣೆಗೆ ನಿಲ್ಲದೇ ಇದ್ದಿದ್ದರೆ ಕಾಟೂರು ತೋಟದ ಮನೆ ಸೇರಿ ಕೊಳ್ಳಬೇಕಿತ್ತು. ಇದನ್ನೆಲ್ಲಾ ಮರೆತು ಸಿದ್ದರಾಮಯ್ಯ ಇವತ್ತು ಬಾಯಿಗೆ ಬಂದ ರೀತಿ ಮಾತಾಡುವುದನ್ನು ಕಲಿತಿದ್ದಾರೆ. ಸಿದ್ದರಾಮಯ್ಯ ಮಾತಾಡುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಇವರನ್ನು ಒಂದು ತಿಂಗಳು ತಾಲಿಬಾನಿಗೆ ಕಳಿಸಬೇಕು. ಪ್ರಧಾನಿ ಬಗ್ಗೆ ಬಾಯಿಗೆ ಬಂದಂತೆ ಮಾತಾಡುವುದನ್ನು ಮೊದಲು ನಿಲ್ಲಿಸಲಿ. ಲೋಕಸಭಾ ಚುನಾವಣೆಯಲ್ಲಿ ಏನೇನಾಯ್ತು ಗೊತ್ತಿಲ್ವಾ? ಒಂದು ಸೀಟ್ ಗೆದ್ದು ಉಳಿದ ಕಡೆ ನೆಗೆದು ಬಿದ್ದು ಹೋದ್ರಿ. ಇದೆಲ್ಲಾ ಮರೆತು ಹೋಯ್ತಾ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಸೋಲಿಸಿ ಬಿಜೆಪಿ ಗೆಲ್ಲಿಸೋದೇ ಸಿದ್ದು & ಟೀಂನ ಉದ್ದೇಶ: ಹೆಚ್‍ಡಿಕೆ ಕಿಡಿ

    ಇನ್ನೂ ಜೆಡಿಎಸ್ ಪಾರ್ಟಿಯಲ್ಲ. ಅದೊಂದು ಕಂಪನಿಯಷ್ಟೇ ಬೆಂಕಿ ಹಾಕಿದ ಕಡೆ ಕೈ ಕಾಯಿಸಿಕೊಳ್ಳಿ ಅಷ್ಟೇ. ಯಾರಿಗೂ ಬಹುಮತ ಬಾರದೇ ಇದ್ದರೆ ಸಾಕು ಎನ್ನುವುದೇ ನಿಮ್ಮ ಲೆಕ್ಕಾಚಾರ. ನಿಮ್ಮ ಇತಿಮಿತಿ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

  • ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ಸಿದ್ದರಾಮಯ್ಯನನ್ನು ಒಂದು ತಿಂಗಳು ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

    ಮೈಸೂರು: ಪತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನದ ತಾಲಿಬಾನ್ ಪ್ರದೇಶಕ್ಕೆ ಕಳುಹಿಸಬೇಕೆಂದು ಮೈಸೂರು ಸಂಸದ ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಕೂಡ ಮಾಧ್ಯಮಗಳಲ್ಲಿ ಅವರ ಹೇಳಿಕೆ ನೋಡಿದ್ದೇನೆ. ಚುನಾವಣೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ಮಾತು ಮಿತಿ ಮೀರಿದೆ. ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ, ಪ್ರತಿ ಪಕ್ಷಕ್ಕೂ ಒಂದು ಜವಾಬ್ದಾರಿ ಇದೆ. ಪ್ರತಿಪಕ್ಷದ ನಾಯರ ಮಾತು ಮಿತಿ ಮೀರಿದೆ. ವಿರೋಧ ಪಕ್ಷದ ನಾಯಕ ಅವರ ಜವಾಬ್ದಾರಿ ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.

    ಪ್ರಧಾನ ಮಂತ್ರಿಗಳಿಗೆ ಒಂದು ಗೌರವ ಇದೆ. ಅವರ ಬಗ್ಗೆ ಈ ರೀತಿಯಲ್ಲಿ ಅವಹೇಳನ ಮಾಡಬಾರದು. ಒಂದು ತಿಂಗಳು ತಾಲಿಬಾನ್‍ಗಳ ಜೊತೆಗೆ ಸಿದ್ದರಾಮಯ್ಯನನ್ನು ಕಳುಹಿಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈ ರೀತಿಯ ಹೇಳಿಕೆಗಳಿಂದ ಬಹಳ ನೋವಾಗಿದೆ. ಬೇರೆ ಸಮಯದಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ. ನಾನು ಚುನಾವಣಾ ಕ್ಷೇತ್ರಗಳಿಗೆ ಹೋಗಿಲ್ಲ. ಆದರೆ ಚುನಾವಣೆಯಲ್ಲಿ ನಾವು ಎರಡು ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿರೋ ತಾಲಿಬಾನ್ ಜೊತೆ  RSS ಹೋಲಿಕೆ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

    ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿರೋ ತಾಲಿಬಾನ್ ಜೊತೆ RSS ಹೋಲಿಕೆ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

    ಚಾಮರಾಜನಗರ: ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿದವರು ತಾಲಿಬಾನ್ ಗಳು. ಹೀಗಾಗಿ ಈ ತಾಲಿಬಾನ್ ಜೊತೆ ಆರ್.ಎಸ್.ಎಸ್ ಹೋಲಿಕೆ ಸರಿಯಲ್ಲ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಯನ್ನು ತಾಲಿಬಾನ್ ಗೆ ಹೋಲಿಸಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಿಡಿಕಾರಿರುವ ಸಂಸದರು, ಪ್ರತಿ ಪಕ್ಷದ ನಾಯಕನ ಗಾಡಿ ಮಗುಚಿಕೊಳ್ಳುತ್ತಿದೆ. ಆವೇಷಭರಿತವಾಗಿ ಬಿಜೆಪಿಯನ್ನ ತಾಲಿಬಾನ್ ಹೋಲಿಸುತ್ತಿದ್ದಾರೆ. ಈ ಶತಮಾನದ ರಾಕ್ಷಿಸಿ ಕೃತ್ಯ ಎಸಗಿರುವವರು ತಾಲಿಬಾನಿಗಳು. ರಕ್ತದ ಕೋಡಿ ಹರಿಸಿದ್ದಾರೆ. ತಾಲಿಬಾನಿಗಳು ರಾಕ್ಷಸರ ರೀತಿ ವರ್ತಿಸುತ್ತಿದ್ದಾರೆ. ಅಂತಹವರೊಂದಿಗೆ ಬಿಜೆಪಿ ಹೋಲಿಸುತ್ತೀರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಕತ್ತಿದ್ರೆ ಮೈಸೂರಿಗೆ ಬಂದು ಪಕ್ಷ ಸಂಘಟನೆ ಮಾಡಿ ಗೆಲ್ಲಿ- ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಚಾಲೆಂಜ್

    ಸಿದ್ದರಾಮಯ್ಯ ನೀವು ಈ ದೇಶದ ಪ್ರಜೆ, ಅತ್ಯಂತ ದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ದೇಶದ ಯಾವುದನ್ನ ಸಹ ತಾಲಿಬಾನ್ ಗೆ ಹೋಲಿಸಬಾರದು. ಸಿದ್ದರಾಮಯ್ಯಗೆ ಬುದ್ಧಿ ಸ್ಥಿಮಿತ ಇಲ್ಲಾ. ಅವರ ಹೇಳಿಕೆಯಿಂದ ನನ್ನ ಮನಸಿಗೆ ಬಹಳ ನೋವಾಗಿದೆ ಎಂದರು. ಇದನ್ನೂ ಓದಿ: RSS ಅನ್ನು ತಾಲಿಬಾನ್‍ಗೆ ಹೋಲಿಕೆ ಮಾಡಿದ್ರೆ ಕಾಂಗ್ರೆಸ್ ಐತಿಹಾಸವನ್ನು ತೆಗೆಯಬೇಕಾಗುತ್ತೆ: ಮುತಾಲಿಕ್

    ಪ್ರತಿಪಕ್ಷದ ನಾಯಕ ಹಾಗೂ ಅಧ್ಯಕ್ಷರ ಬಗ್ಗೆ ನಾನು ಮಾತನಾಡುವುದೇ ಬೇಡ. ಎಂದು ವ್ಯಂಗ್ಯವಾಡಿದ ಶ್ರೀನಿವಾಸಪ್ರಸಾದ್, ನೀವು ಮತ್ತು ನಿಮ್ಮ ಅಧ್ಯಕ್ಷರು ಬನ್ನಿ ಚರ್ಚೆಗೆ. ನಮ್ಮ ಪಕ್ಷದಿಂದ ಕಟೀಲ್ ಮತ್ತು ಬೊಮ್ಮಾಯಿ ಬರುತ್ತಾರೆ ಎಂದು ಸವಾಲು ಹಾಕಿದರು.

    ಒಬ್ಬ ಸಂಭವೀತ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾರೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಅತ್ಯತ್ತುಮವಾದ ಆಡಳಿತ ಕೊಡುತ್ತಿದ್ದಾರೆ. ಈಗಾಗಲೇ ವರಿಷ್ಟರು ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗಲು ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಾಲಿಬಾನ್‍ಗೂ, RSSಗೂ ವ್ಯತ್ಯಾಸ ಇದೆ: ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

  • ತಾಕತ್ತಿದ್ರೆ ಮೈಸೂರಿಗೆ ಬಂದು ಪಕ್ಷ ಸಂಘಟನೆ ಮಾಡಿ ಗೆಲ್ಲಿ- ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಚಾಲೆಂಜ್

    ತಾಕತ್ತಿದ್ರೆ ಮೈಸೂರಿಗೆ ಬಂದು ಪಕ್ಷ ಸಂಘಟನೆ ಮಾಡಿ ಗೆಲ್ಲಿ- ಸಿದ್ದುಗೆ ಶ್ರೀನಿವಾಸ್ ಪ್ರಸಾದ್ ಚಾಲೆಂಜ್

    ಚಾಮರಾಜನಗರ: ತಾಕತ್ತಿದ್ರೆ ಮೈಸೂರಿನಲ್ಲಿ ಚುನಾವಣೆಗೆ ಬನ್ನಿ, ಪಕ್ಷ ಸಂಘಟನೆ ಮಾಡಿ ಗೆಲ್ಲಿ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಂಸದ ಶ್ರೀನಿವಾಸ್ ಪ್ರಸಾದ್ ಬಹಿರಂಗ ಸವಾಲು ಹಾಕಿದ್ದಾರೆ.

    ಚಾಮರಾಜನಗರದ ನಂದಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದು ಜಮೀರ್ ಕಾಲಿಡಿದುಕೊಂಡು ಚಾಮರಾಜಪೇಟೆಗೆ ಹೋಗುತ್ತಿದ್ದಾರೆ. ನಿಮಗೆ ಧೈರ್ಯ ಇದ್ದರೆ ಮೈಸೂರಿಗೆ ಬಂದು ಪಕ್ಷವನ್ನ ಸಂಘಟನೆ ಮಾಡಿ ಚುನಾವಣೆ ಗೆಲ್ಲಿ. ಮೊದಲು ಮುಖ್ಯಮಂತ್ರಿಗಳಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

    ನೀವು ಮುಖ್ಯಮಂತ್ರಿಯಾಗಿ ಎರಡೆರಡು ಕ್ಷೇತ್ರದಲ್ಲಿ ಚುನಾವಣೆ ನಿಲ್ಲುತ್ತೀರಾ ಎಂದು ಗುಡುಗಿದ ಸಂಸದರು, ಬಿಜೆಪಿಯನ್ನ ಎದುರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಅಮೇಥಿ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾರೆ. ಕೇವಲ ಸೋನಿಯಾ ಗಾಂಧಿ ಮಾತ್ರ ಉತ್ತರ ಪ್ರದೇಶದಲ್ಲಿ ಗೆದ್ದಿದ್ದಾರೆ ಎಂದರು. ಇದನ್ನೂ ಓದಿ: ಅನುಭವಿ, ಹಿರಿಯ ನಾಯಕ ಶ್ರೀನಿವಾಸಗೌಡ ಕಾಂಗ್ರೆಸ್ಸಿಗೆ ಬಂದ್ರೆ ಒಳ್ಳೆಯದು: ರಮೇಶ್ ಕುಮಾರ್

    ರಾಹುಲ್ ಗಾಂಧಿ ಕೇರಳಕ್ಕೆ ಪಲಾಯನ ಮಾಡಿದ್ದು, ದೇಶದಲ್ಲಿ ನೆಲೆ ಇಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ನಿಮ್ಮ ಪಾರ್ಟಿಯನ್ನ ಬಲಪಡಿಸಿ, ಕೇರಳದಲ್ಲಿ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದರು.

  • ಕೋವಿಡ್ ಕಂಟ್ರೋಲ್‍ನಲ್ಲಿದೆ, ಸದ್ಯಕ್ಕೆ ಲಾಕ್ ಡೌನ್ ಹೇರಲ್ಲ: ಸೋಮಶೇಖರ್

    ಕೋವಿಡ್ ಕಂಟ್ರೋಲ್‍ನಲ್ಲಿದೆ, ಸದ್ಯಕ್ಕೆ ಲಾಕ್ ಡೌನ್ ಹೇರಲ್ಲ: ಸೋಮಶೇಖರ್

    ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಭೀತಿ ಶುರುವಾಗಿದೆ. ಆದ್ರೆ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಕಂಟ್ರೋಲ್‍ನಲ್ಲಿದೆ, ಸದ್ಯಕ್ಕೆ ಲಾಕ್ ಡೌನ್ ಹೇರಲ್ಲ ಎಂದು ಸಚಿವ ಸೋಮಶೇಖರ್ ಹೇಳಿದ್ದಾರೆ.

    ಚಾಮರಾಜನಗರಕ್ಕೆ ಮೊದಲ ಬಾರಿ ಭೇಟಿ ಕೊಟ್ಟು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕಂಟ್ರೋಲ್‍ನಲ್ಲಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಹೇರುವುದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಮೂರನೇ ಅಲೆ ಬರುತ್ತೆ ಅಂತಾ ಹೇಳುತ್ತಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಕೋವಿಡ್, ಪ್ರವಾಹ ನಿಯಂತ್ರಣ ನಿರ್ವಹಣೆ ಬಗ್ಗೆ ಉಸ್ತುವಾರಿಗೆ ಸಿಎಂ ಜವಾಬ್ದಾರಿ ನೀಡಿದ್ದಾರೆ. ಕೋವಿಡ್ ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿರ್ವಹಣೆ ಬಗ್ಗೆ ಮೂರು, ನಾಲ್ಕು ದಿನದಲ್ಲಿ ಸಿಎಂಗೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಸಂಸದ ಶ್ರೀನಿವಾಸ್ ಪ್ರಸಾದ್ ಚುನಾವಣೆ ರಾಜಕೀಯಕ್ಕೆ ಗುಡ್ ಬೈ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಸಾದ್ ಹಿರಿಯ ರಾಜಕಾರಣಿ. ಐವತ್ತು ವರ್ಷಗಳ ರಾಜಕೀಯದಲ್ಲಿ ಏಳು, ಬೀಳು ಕಂಡಿದ್ದಾರೆ. ಅವರು ಕಂದಾಯ ಸಚಿವರಾಗಿದ್ದಾಗ ಬೆಂಗಳೂರಿನಲ್ಲಿ 18 ಕಿಲೋ ಮೀಟರ್ ವ್ಯಾಪ್ತಿಯ ರಸ್ತೆ ಕ್ರಮಬದ್ಧ ಮಾಡುವ ಐತಿಹಾಸಿಕ ಕ್ರಮ ಕೈಗೊಂಡಿದ್ದರು. ಆರೋಗ್ಯ, ವಯಸ್ಸಿನ ದೃಷ್ಟಿಯಿಂದ ತಮ್ಮ ಅವಧಿ ಮುಗಿದ ನಂತರ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ ಎಮದರು.

    ಇದೇ ವೇಳೆ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಬಿಜೆಪಿ ಸೇರ್ಪಡೆಯಾಗುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಬೇಕಾದರೂ ಬಿಜೆಪಿಗೆ ಬರಬಹುದು. ಬಿಜೆಪಿ ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತವಿದೆ. ಮೇಕೆದಾಟು ಯೋಜನೆ ವಿರೋಧಿಸಿ ಅಣ್ಣಾಮಲೈ ಉಪವಾಸ ಸತ್ಯಾಗ್ರಹ ವಿಚಾರವಾಗಿ ಈಗಾಗಲೇ ನಮ್ಮ ಸಿಎಂ ಖಡಕ್ ಉತ್ತರ ನೀಡಿದ್ದಾರೆ. ರಾಜಕೀಯ ಮೈಲೇಜ್ ತೆಗೆದುಕೊಳ್ಳಲು ಅಣ್ಣಾಮಲೈ ಸತ್ಯಾಗ್ರಹ ಮಾಡಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದಲೇ ವೀಕೆಂಡ್ ಕರ್ಫ್ಯೂ ಜಾರಿ

  • ಆತ್ಮತೃಪ್ತಿಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶ್ರೀನಿವಾಸ್ ಪ್ರಸಾದ್

    ಆತ್ಮತೃಪ್ತಿಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿ: ಶ್ರೀನಿವಾಸ್ ಪ್ರಸಾದ್

    ಮೈಸೂರು: ನನ್ನ ರಾಜಕೀಯ ಜೀವನದ ಎಲ್ಲಾ ಏಳು-ಬೀಳುಗಳನ್ನು ದಾಖಲಿಸಿದ್ದೇನೆ. ನಾನು ಆತ್ಮತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ಮೈಸೂರಿನಲ್ಲಿ ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

    ಶ್ರೀನಿವಾಸ್ ಪ್ರಸಾದ್ ಅವರ 75ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಅವರ 50 ವರ್ಷದ ರಾಜಕೀಯ ಜೀವನದ ಪುಸ್ತಕ ಬಿಡುಗಡೆಯಾಗಲಿದೆ. ಈ ಬಗ್ಗೆ ಮಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದ ಎಲ್ಲಾ ಏಳು-ಬೀಳು ದಾಖಲಿಸಿದ್ದೇನೆ. ನಾನು ಆತ್ಮ ತೃಪ್ತಿಯಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ. ನಾಲ್ಕು ವರ್ಷದ ಹಿಂದೆಯೇ ನಾನು ನಿವೃತ್ತಿ ಬಯಸಿದ್ದೆ. ಆದರೆ ರಾಜಕೀಯ ಬೆಳವಣಿಗೆ ಬೇರೆಯಾದ ಕಾರಣ ಮತ್ತೇ ಸ್ಪರ್ಧೆ ಮಾಡಿದ್ದೆ. ಮುಂದೆ ನಾನು ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಈ ಮಾತಿನಿಂದ ಹಿಂದೆ ಸರಿಯುವುದು ಇಲ್ಲ ಎಂದರು.

    2019ರ ವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಪಕ್ಷೇತರನಾಗಿ ಕೂಡ ಸ್ಪರ್ಧಿಸಿದ್ದೇನೆ. ಕಾಂಗ್ರೆಸ್‍ನಲ್ಲಿ ಹೆಚ್ಚು ಬಾರಿ ಸ್ಪರ್ಧಿಸಿದ್ದೇನೆ. ನಾನು ರಾಜಕೀಯ ಬೆಳವಣಿಗೆ ಆದಂತಹ ಸಂದರ್ಭದಲ್ಲಿ ಬದಲಾವಣೆಗಳೊಂದಿಗೆ ಅನಿವಾರ್ಯ ಕಾರಣಗಳಿಂದ ಹಲವು ಚುನಾವಣೆಗಳನ್ನು ಎದುರಿಸಿದ್ದೇನೆ. ಈ ಹಿಂದೆ ನನ್ನ ಮನಸ್ಸಿಗೆ ನೋವಾಗುವಂತಹ ಘಟನೆ ನಡೆದ ಬಳಿಕ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೆ. ಆದರೆ ನನ್ನ ಅಭಿಮಾನಿಗಳು ಒಪ್ಪದ ಕಾರಣ ಎರಡು ವರ್ಷಗಳ ಮತ್ತೆ ಮುಂದುವರಿದು 2019ರ ಚುನಾವಣೆಗಳಲ್ಲಿ ಎದುರಿಸಿದ್ದೇನೆ ಎಂದರು. ಇದನ್ನೂ ಓದಿ: ಜಮೀರ್, ಬೇಗ್ ಮನೆಗೆ ಇಡಿ ದಾಳಿ- ಸಿದ್ದರಾಮಯ್ಯನವ್ರೇ ಇದರ ಪಲಾನುಭವಿಯಂತೆ!

    ಚುನಾವಣೆಗಳಲ್ಲಿ ನಾನು ಯಾವ ಪರಿಸ್ಥಿತಿಗಳಲ್ಲಿ ಎದುರಿಸಿದ್ದೇನೆ ಎಂಬುದನ್ನು ಬಿಡುಗಡೆಯಾಗಲಿರುವ ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. ಹಾಗಾಗಿ ನನಗೆ ಆ ಎಲ್ಲಾ ಚುನಾವಣೆಯ ಸಂದರ್ಭಗಳಲ್ಲಿ ನನ್ನ ನಿಲುವಿನ ಕುರಿತು ಆತ್ಮತೃಪ್ತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ : ಧೃವನಾರಾಯಣ್ ವ್ಯಂಗ್ಯ

    ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ : ಧೃವನಾರಾಯಣ್ ವ್ಯಂಗ್ಯ

    ಮೈಸೂರು: ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತು ಹೇಳಿದ್ದೆ ಹೇಳೋ ಕಿಸುಬಾಯಿ ದಾಸಯ್ಯ ಥರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವ ನಾರಾಯಣ್ ಹರಿಹಾಯ್ದಿದ್ದಾರೆ.

    ವಿಧಾನಸಭೆ ಚುನಾವಣೆ ಮುಗಿದು ಮೂರು ವರ್ಷವಾಯಿತು. ಲೋಕಸಭೆ ಚುನಾವಣೆ ಮುಗಿದು ಎರಡು ವರ್ಷಗಳಾಯಿತು. ಅಂದಿನಿಂದಲೂ ಸಂಸದ ಶ್ರೀನಿವಾಸ್ ಪ್ರಸಾದ್ ಒಂದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಡಿದ್ದೇ ಹಾಡೋ ಕಿಸುಬಾಯಿ ದಾಸಯ್ಯ ಎಂಬಂತೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದನ್ನೇ ಪದೇ ಪದೇ ಹೇಳುತ್ತಿದ್ದಾರೆ ಎಂದರು.

    ಸಿದ್ದರಾಮಯ್ಯನವರನ್ನು ಸೋಲಿಸಿದ್ದೇ ಅವರ ಸಾಧನೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರು ಸೋತಿರುವುದು ಜೆಡಿಎಸ್ ವಿರುದ್ಧವೇ ಹೊರತು ಬಿಜೆಪಿ ವಿರುದ್ಧ ಅಲ್ಲ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿಗೆ ಠೇವಣಿ ಕೂಡಾ ಸಿಕ್ಕಿಲ್ಲ. ಪ್ರಸಾದ್ ಸುಮ್ಮನೆ ಕುಳಿತು ಮಾತನಾಡುವುದಲ್ಲ. ಸಂಸದರಾಗಿ ಎರಡು ವರ್ಷಗಳ ಇವರ ಸಾಧನೆ ಏನು ಎಂಬುದನ್ನು ಮೊದಲು ತಿಳಿಸಬೇಕು ಎಂದು ಆಗ್ರಹಿಸಿದರು.

  • ಹೈಕಮಾಂಡ್, ಸಿಎಂ ಯಡಿಯೂರಪ್ಪ ನಡುವೆ ಎರಡು ವರ್ಷದ ಒಪ್ಪಂದವಾಗಿತ್ತು: ಸಂಸದ ಶ್ರೀನಿವಾಸ್ ಪ್ರಸಾದ್

    ಹೈಕಮಾಂಡ್, ಸಿಎಂ ಯಡಿಯೂರಪ್ಪ ನಡುವೆ ಎರಡು ವರ್ಷದ ಒಪ್ಪಂದವಾಗಿತ್ತು: ಸಂಸದ ಶ್ರೀನಿವಾಸ್ ಪ್ರಸಾದ್

    – ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲ
    – ವಿಶ್ವನಾಥ್, ನಾನು ಬಿಜೆಪಿಯನ್ನ ಕಟ್ಟಿದವರಲ್ಲ

    ಚಾಮರಾಜನಗರ: ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರದ ಕುರಿತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವೆ ಎರಡು ವರ್ಷಗಳ ಅಗ್ರಿಮೆಂಟ್ ಆಗಿತ್ತು. ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಒಪ್ಪಂದ ಆಗಿತ್ತು. ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ. ಎರಡು ವರ್ಷ ಸಿಎಂ ಆಗಿ ಅಂತಾ ಹೈ ಕಮಾಂಡ್ ಹೇಳಿತ್ತು. ಸಿಎಂ ಬಿಎಸ್‍ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

    ಪಕ್ಷದ ಮುಖ್ಯ ಹುದ್ದೆಯಲ್ಲಿ 75 ವರ್ಷ ಮೇಲ್ಪಟ್ಟವರು ಇರಬಾರದೆಂದು ಪಕ್ಷದ ನಿಲುವಾಗಿದೆ. ವಿಶೇಷ ಸಂದರ್ಭದಲ್ಲಿ ಯಡಿಯೂರಪ್ಪ ಸಿಎಂ ಆದರು. ಇದೂವರೆಗಿದ್ದ ಉಹಾಪೋಹಕ್ಕೆ ತೆರೆಬಿದ್ದಿದೆ. ಯಡಿಯೂರಪ್ಪ ಮತ್ತು ಹೈಕಮಾಂಡ್ ನಡುವೆ ಆಗಿದ್ದ ಮಾತುಕತೆಯಂತೆ ಸಿಎಂ ನಡೆದುಕೊಂಡಿದ್ದಾರೆ. ಈಗ ಒಂದು ಹಂತಕ್ಕೆ ಬಂದಿದೆ ಅಂತಾ ಚಾಮರಾಜನಗರದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದರು.

    ಇದೇ ವೇಳೆ ಮುಂಬೈ ಫ್ರೆಂಡ್ಸ್ ಗೆ ಮಂತ್ರಿ ಸ್ಥಾನ ಕೊಡಬಾರದೆಂಬ ಎಂಎಲ್‍ಸಿ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. ವಿಶ್ವನಾಥ್ ಹೇಳಿಕೆಗೆ ಚಿಕ್ಕಾಸಿನ ಬೆಲೆ ಇಲ್ಲ. ವಿಶ್ವನಾಥ್ ಹತಾಶವಾದ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವನಾಥ್ ಏನ್ ಬಿಜೆಪಿ ಹೈಕಮಾಂಡಾ? ನಮ್ಮ ತೇವಲಿಗೆ ಈ ರೀತಿಯ ಹೇಳಿಕೆ ಕೊಡಬಾರದು. ನಾನು, ವಿಶ್ವನಾಥ್ ಬಿಜೆಪಿ ಪಕ್ಷ ಕಟ್ಟಿದ್ದವರಲ್ಲ. ಬದಲಾದ ರಾಜಕಾರಣದಲ್ಲಿ ಬಿಜೆಪಿಗೆ ಬಂದಿದ್ದು ನಮ್ಮ ಕರ್ತವ್ಯವನ್ನ ನಿಷ್ಠೆಯಿಂದ ನಿರ್ವಹಿಸಬೇಕೆ ಹೊರತು ಈ ರೀತಿ ಮಾತನಾಡಬಾರದು ಎಂದು ವಿಶ್ವನಾಥ್ ವಿರುದ್ದ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: RSS ಬುದ್ಧಿ 0, ಮುಸ್ಲಿಮರ ಮೇಲಿನ ದ್ವೇಷ 100%: ಭಾಗವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ

    ಬಿಎಸ್‍ವೈ ಮುಂದುವರಿಕೆಗೆ ಸ್ವಾಮೀಜಿಗಳ ಒತ್ತಾಯ ವಿಚಾರವಾಗಿ ಸ್ವಾಮೀಜಿಗಳು ಸೂಪರ್ ಹೈಕಮಾಂಡ್ ಅಲ್ಲವೆಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಸಿಡಿಮಿಡಿಗೊಂಡರು. ಪಕ್ಷಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಈ ರೀತಿಯ ಹೇಳಿಕೆ ನೀಡಬಾರದು ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಮುಂದಿನ ಸಿಎಂ ಯಾರೆಂದು ಇನ್ನೆರಡು ದಿನದಲ್ಲಿ ಗೊತ್ತಾಗಲಿದೆ. ಯಾರು ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಪಕ್ಷ ಸಂಘಟಿಸಿದ ಯಡಿಯೂರಪ್ಪನವರನ್ನು ಹೈಕಮಾಂಡ್ ಗೌರವಯುತವಾಗಿ ನಡೆಸಿಕೊಂಡಿದೆ ಎಂದರು. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್‍ವೈ

  • ಎಲ್ಲದಕ್ಕೂ ಮೂಹೂರ್ತ ಇಟ್ಟಿದ್ದು ಇಲ್ಲೇ, ಈಗಲೂ ಇಟ್ಟಿದ್ದೇವೆ: ಎಚ್. ವಿಶ್ವನಾಥ್

    ಎಲ್ಲದಕ್ಕೂ ಮೂಹೂರ್ತ ಇಟ್ಟಿದ್ದು ಇಲ್ಲೇ, ಈಗಲೂ ಇಟ್ಟಿದ್ದೇವೆ: ಎಚ್. ವಿಶ್ವನಾಥ್

    ಮೈಸೂರು: ಎಲ್ಲದಕ್ಕೂ ಮುಹೂರ್ತ ಇಟ್ಟಿದ್ದು ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಈಗಲೂ ಮುಹೂರ್ತ ಇಟ್ಟಿದ್ದೇವೆ. ಯಾವುದಕ್ಕೆ ಎಂದು ಹೇಳುವುದಿಲ್ಲ ಎನ್ನುವ ಮೂಲಕ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕುತೂಹಲ ಮೂಡಿಸಿದ್ದಾರೆ.

    ಮೈಸೂರಿನಲ್ಲಿ ಇಂದು ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿದ್ದ ಎಚ್. ವಿಶ್ವನಾಥ್ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮೂಹೂರ್ತ ಇಟ್ಟಿದ್ದೇವೆ. ಸಿದ್ದರಾಮಯ್ಯ ಸೋಲಿಗೂ ಇಲ್ಲೇ ಮುಹೂರ್ತ ಇಟ್ಟಿದ್ದು. ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದು. ಯಡಿಯೂರಪ್ಪ ಸಿಎಂ ಆಗುವುದಕ್ಕೂ ಮುಹೂರ್ತ ಇಟ್ಟಿದ್ದು ಇಲ್ಲಿಯೇ. ನಂತರದ ಹಲವು ಬೆಳವಣಿಗೆ ಪ್ರಸಾದ್ ಮನೆ ಸಾಕ್ಷಿ ಆಗಿದೆ. ಈಗಲೂ ಪ್ರಸಾದ್ ಭೇಟಿಯ ಜೊತೆ ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಬಗ್ಗೆ ಮಾತನಾಡಿದ್ದೇವೆ ಎಂದರು. ಇದನ್ನೂ ಓದಿ: ಮತ್ತೆ ಡಿಸಿಗೆ ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ – ಇನ್ಮುಂದೆ ಮಾತಾಡಲ್ಲವೆಂದು ಕದನ ವಿರಾಮ ಘೋಷಣೆ!

    ಸದ್ಯಕ್ಕೆ ಯಾವ ವಿಚಾರಕ್ಕೆ ಮುಹೂರ್ತ ಎಂದು ಹೇಳುವುದಿಲ್ಲ. ಕಾದು ನೋಡೋಣ. ಸಿಎಂ ಯಡಿಯೂರಪ್ಪ ಅವರಿಗೆ ಆರೋಗ್ಯ ಸರಿಯಿಲ್ಲ. ಅವರ ಆರೋಗ್ಯ ಸರಿಯಾಗಬೇಕು. ಅದರ ಜೊತೆ ರಾಜ್ಯದ ಆಡಳಿತದ ಆರೋಗ್ಯವು ಸರಿಯಾಗಬೇಕು. ಇದಕ್ಕಾಗಿ ಹೈಕಮಾಂಡ್ ಶೀಘ್ರವೇ ಒಂದು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ಪುಷ್ಠಿ ಕೊಟ್ಟಂತೆ ಹೇಳಿಕೆ ನೀಡಿದರು.

    ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ಗೊಂದಲ ಇದೆ. ಕೆಲವರು ದೆಹಲಿಗೆ ಹೋಗಿದ್ದಾರೆ. ಇನ್ನು ಕೆಲವರು ಹೇಳಿಕೆ ಕೊಡುತ್ತಿದ್ದಾರೆ. ಈ ಮಧ್ಯೆ ಯಡಿಯೂರಪ್ಪನವರು ಏನೂ ಮಾತನಾಡುತ್ತಿಲ್ಲ. ಯಾರು ಏನೇ ಮಾಡಿದ್ರು ತೀರ್ಮಾನ ಮಾಡೋದು ಹೈಕಮಾಂಡ್. ಹಾಗಾಗಿ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ ಎಂಬ ವಿಶ್ವಾಸ ಹೊಂದಿದ್ದೇವೆ ಎಂದರು.

  • ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕ ಕೊರೊನಾಗೆ ಬಲಿ

    ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕ ಕೊರೊನಾಗೆ ಬಲಿ

    ಮೈಸೂರು: ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕರೊಬ್ಬರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.

    ಶಂಕರ್(78) ಕೊರೊನಾಗೆ ಬಲಿಯಾದ ಆಪ್ತ ಸಹಾಯಕ. ಇವರು ಕಳೆದ 40 ವರ್ಷಗಳಿಂದ ಶ್ರೀನಿವಾಸ್ ಪ್ರಸಾದ್ ಬಳಿ ಆಪ್ತ ಸಹಾಯಕರಾಗಿದ್ದರು.

    ಶಂಕರ್ ಅವರಲ್ಲಿ ಒಂದು ವಾರದ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಪ್ತ ಸಹಾಯಕನ ಸಾವಿಗೆ ಸಂಸದರು ಕಂಬನಿ ಮಿಡಿದಿದ್ದಾರೆ.

    ಸಕಾಲದಲ್ಲಿ ಆಕ್ಸಿಜನ್ ಸಿಗದ ಕಾರಣ ಸೋಮವಾರ ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ರಮೇಶ್ ಮೃತಪಟ್ಟಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಮೇಶ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

    ಏ.13ರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಉಸಿರಾಟದ ಸಮಸ್ಯೆ ಮಾತ್ರ ಅಲ್ಲದೇ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ವೆಂಟಿಲೇಟರ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತದ್ದ ರಮೇಶ್ ಅವರಿಗೆ ನಿನ್ನೆ ಆಕ್ಸಿಜನ್ ಕೊರತೆಯಾಗಿತ್ತು. ಸರಿಯಾದ ಸಮಯದಲ್ಲಿ ಆಕ್ಸಿಜನ್ ಆಸ್ಪತ್ರೆಯಲ್ಲಿ ದೊರೆಯದ ಕಾರಣ ರಮೇಶ್ ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದರು.