Tag: Srinivas Prasad

  • ಮಂಗಳವಾರ ಶ್ರೀನಿವಾಸ್‌ ಪ್ರಸಾದ್‌ ಅಂತ್ಯಕ್ರಿಯೆ

    ಮಂಗಳವಾರ ಶ್ರೀನಿವಾಸ್‌ ಪ್ರಸಾದ್‌ ಅಂತ್ಯಕ್ರಿಯೆ

    ಮೈಸೂರು: ಇಂದು ವಿಧಿವಶರಾಗಿರುವ ಶ್ರೀನಿವಾಸ್‌ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ಮಂಗಳವಾರ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ‌ ಮಗಳು ಪ್ರತಿಮಾ ಪ್ರಸಾದ್‌ ಹೇಳಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇಂದು ಮಧ್ಯಾಹ್ನ 1 ಗಂಟೆ ತನಕ ಮನೆಯಲ್ಲಿ ಅಂತಿಮ ನಮನ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಂತರ ಅಶೋಕಪುರಂನ ಎನ್ ಟಿ ಎಂ ಶಾಲೆ ಆವರಣದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

    ಇಂದು ರಾತ್ರಿ ಇಡೀ ಅಂತಿಮ ನಮನಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ ಬೆಳಗ್ಗೆ 10 ಗಂಟೆಗೆ ಅಶೋಕಪುರಂ ನಲ್ಲಿ ಮೆರವಣಿಗೆಯ ಬಳಿಕ ಮಧ್ಯಾಹ್ನ 1 ಗಂಟೆ ಗೆ ಅಂತ್ಯಕ್ರಿಯೆ ನಡೆಸುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ಹರಿಕಾರ ಪ್ರಸಾದ್‌ – ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್‌ಡಿಡಿ ಸಂತಾಪ

  • ಕಾಫಿ ಅಂತಾ ಬರೆದುಕೊಟ್ಟು 2 ಗುಟುಕು ಕುಡಿದಿದ್ದ ಸಂಸದರು!

    ಕಾಫಿ ಅಂತಾ ಬರೆದುಕೊಟ್ಟು 2 ಗುಟುಕು ಕುಡಿದಿದ್ದ ಸಂಸದರು!

    ಬೆಂಗಳೂರು: ಹಿರಿಯ ರಾಜಕಾರಣಿ, ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (V. Srinivas Prasad) ಇಂದು ವಿಧಿವಶರಾಗಿದ್ದಾರೆ. ನಿನ್ನೆಯಷ್ಟೇ ಸಂಸದರು ಕಾಫಿ ಕೇಳಿ ಕುಡಿದಿದ್ದರು.

    ಹೌದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಸದರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದರು. ದರೆ ಭಾನುವಾರದಿಂದ ಮಾತನಾಡಲು ಆಗುತ್ತಿರಲಿಲ್ಲ. ಹೀಗಾಗಿ ನಿನ್ನೆ ಕುಟುಂಬಸ್ಥರು ಪೆನ್ನು ಹಾಗೂ ಪೇಪರ್ ಕೊಟ್ಟಿದ್ದರು. ಆಗ ಪೇಪರ್ ನಲ್ಲಿ ಕಾಫಿ ಅಂತ ಬರೆದಿದ್ದರು. ಈ ವೇಳೆ ಕಾಫಿ ತಂದು ಕೊಟ್ಟಿದ್ದರು. ಅಂತೆಯೇ ಎರಡು ಗುಟುಕು ಕಾಫಿ ಕುಡಿದಿದ್ದರು ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಸಾದ್ ಅವರು ಕೆಲ ದಿನಗಳ ಹಿಂದೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ನಸುಕಿನ ಜಾವ 1:27ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಟುಂಬಸ್ಥರು ಹಾಗೂ ಗಣ್ಯರು ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಶ್ರೀನಿವಾಸ್‌ ಪ್ರಸಾದ್‌ ವಿಧಿವಶ – ಪ್ರಭಾವಿ ದಲಿತ ನಾಯಕನ ರಾಜಕೀಯ ಏಳು-ಬೀಳಿನ ಹಾದಿ ಹೇಗಿತ್ತು?

  • ಸಾವಾದ್ರೂ ನಗುನಗುತ್ತಾ ಬೀಳ್ಕೊಡಿ ಅಂತಾ ತಂದೆ ಯಾವಾಗ್ಲೂ ಹೇಳ್ತಾ ಇದ್ರು: ಶ್ರೀನಿವಾಸ್ ಪ್ರಸಾದ್ ಮಗಳು

    ಸಾವಾದ್ರೂ ನಗುನಗುತ್ತಾ ಬೀಳ್ಕೊಡಿ ಅಂತಾ ತಂದೆ ಯಾವಾಗ್ಲೂ ಹೇಳ್ತಾ ಇದ್ರು: ಶ್ರೀನಿವಾಸ್ ಪ್ರಸಾದ್ ಮಗಳು

    – ಮೈಸೂರಿನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ಬೆಂಗಳೂರು: ನಮ್ಮ ತಂದೆ ಯಾವಾಗಲೂ ಸಂತೋಷವಾಗಿದ್ರು. ಅವರು ಸಾವಾದ್ರೂ ನಗುನಗುತ್ತಲೇ ಕಳಿಸಿಕೊಡಿ ಅಂತಾ ಹೇಳಿದ್ರು. ಅದೇ ರೀತಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ನಮ್ಮ ತಂದೆಯನ್ನ ಸಂತೋಷದಿಂದ ಬಿಳ್ಕೋಡೋಣ ಎಂದು ಶ್ರೀನಿವಾಸ್ ಪ್ರಸಾದ್ (V Srinivas Prasad) ಪುತ್ರಿ ಪ್ರತಿಮಾ ಪ್ರಸಾದ್ (Prathima Prasad) ಮನವಿ ಮಾಡಿಕೊಂಡರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂದೆಯ ಆರೋಗ್ಯ ಗಂಭೀರವಾಗಿತ್ತು. ಎಲ್ಲಾ ವೈದ್ಯರು ಅವರನ್ನ ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಇವತ್ತು ಪ್ರಯತ್ನ ಕೈಗೂಡದೆ ನಮ್ಮನ್ನು ಅಗಲಿದ್ದಾರೆ. ಇವತ್ತು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತೆ. ಇಡೀ ದಿನ ಅಂತಿಮ ದರ್ಶನ ಮನೆಯಲ್ಲೆ ಇರುವುದಿಲ್ಲ. ಒಂದು ಸಾರ್ವತ್ರಿಕ ಜಾಗ ನಿರ್ಧಾರ ಮಾಡಿ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತೆ ಎಂದರು.

    ಇಂದು ನುಕಿನ ಜಾವ 1:20 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಸೋಮವಾರ ಆರೋಗ್ಯ ಏರುಪೇರಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ವಿ. ಆರೋಗ್ಯ ಸುಧಾರಿಸಿದ್ದರಿಂದ ಡಿಸ್ಚಾರ್ಜ್ ಮಾಡಿಸಿದ್ವಿ. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕರೆದುಕೊಂಡು ಬಂದ್ವಿ. ಅವರಿಗೆ ಹೈಲಿ ಡಯಾಬಿಟಿಸ್ ಸಮಸ್ಯೆ ಇತ್ತು. 11 ವರ್ಷದ ಹಿಂದೆ ಅವರಿಗೆ ರಿನಲ್ ಟ್ರಾನ್ಸ್ ಪ್ಲಾಂಟ್ ಆಗಿತ್ತು. ಅದನ್ನೂ ಫೈಟ್ ಮಾಡಿದ್ದರು. ಆದರೆ ಇಂದು ಅವರನ್ನು ಉಳಿಸಿಕೊಳ್ಳೋದಕ್ಕೆ ಬಹಳ ಪ್ರಯತ್ನವನ್ನ ವೈದ್ಯರು ಮಾಡಿದ್ರು. ಆದರೆ ವಿಧಿ ಹೀಗೆ ಮಾಡಿದೆ ಎಂದು ಹೇಳಿದರು.

    2000 ಇಸವಿಯಿಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲೇ ಏನೇ ಅದ್ರೂ ಚಿಕಿತ್ಸೆ ಪಡೆಯುತ್ತಿದ್ರು. ಆಗಿನಿಂದ ಈ ಆಸ್ಪತ್ರೆ ಮೇಲೆ ಅವ್ರಿಗೆ ಬಹಳ ನಂಬಿಕೆ ಇತ್ತು ಎಂದ ಅವರು, ಆಸ್ಪತ್ರೆಯ ಎಲ್ಲ ವೈದ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

    ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ ತಮ್ಮ ಜರ್ನಿಯಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಅಂದುಕೊಂಡಿರಲಿಲ್ಲ. ಇದು ಬಹಳ ದುಃಖಕರವಾದ ವಿಷಯ, ಇದು ಕರ್ನಾಟಕ ಜನತೆಗೆ ಬಿಗ್ ಲಾಸ್. ಎಲ್ಲಾ ಜನಾಂಗದ ನಾಯಕರಾಗಿದ್ರು ಎಂದು ತಿಳಿಸಿದರು.

  • ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

    ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ

    ಮೈಸೂರು: ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ, ಮೈಸೂರು – ಚಾಮರಾಜನಗರ ಭಾಗದ ಪ್ರಭಾವಿ ದಲಿತ ನಾಯಕ ವಿ. ಶ್ರೀನಿವಾಸ ಪ್ರಸಾದ್ (Srinivasa Prasad) ನಿಧನರಾಗಿದ್ದಾರೆ.

    ಉಸಿರಾಟ ಸಮಸ್ಯೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಂಸದರು ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.‌ಸುದರ್ಶನ್ ಬಲ್ಲಾಳ್ ರಿಂದ  ಚಿಕಿತ್ಸೆ ನೀಡಲಾಗ್ತಾ ಇತ್ತು. ಆದರೆ ಇಂದು ನಸುಕಿನ ಜಾವ 1.27ರ ಸುಮಾರಿಗೆ  ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

    ರಾಜಕೀಯದ ಏಳು-ಬೀಳುಗಳ ನಡುವೆ ಸ್ವಾಭಿಮಾನಕ್ಕೆ ಹೆಸರಾಗಿದ್ದ 76 ವರ್ಷದ ಶ್ರೀನಿವಾಸ ಪ್ರಸಾದ್‌ ಅವರು ಕಳೆದ  ತಿಂಗಳು ರಾಜಕೀಯದಿಂದ ನಿವೃತ್ತಿ ಪಡೆದಿದ್ದರು. ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಸಂಸದರು, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಗ್ರಾಹಕ ಸೇವೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. 2013 ರಿಂದ 2016 ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಮತ್ತು ಮುಜರಾಯಿ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಈವರೆಗೆ 6 ಬಾರಿ ಲೋಕಸಭಾ ಚುನಾವಣೆ ಸೇರಿದಂತೆ ಒಟ್ಟು 14 ಚುನಾವಣೆಗಳಲ್ಲಿ ಸ್ಪರ್ಧಿಸಿ 11 ಬಾರಿ ಜಯಗಳಿಸಿದ್ದಾರೆ.

    ಪ್ರಸಾದ್ ಅವರಿಗೆ ಪ್ರತಿಮಾ ಪ್ರಸಾದ್, ಪೂರ್ಣಿಮಾ ಪ್ರಸಾದ್ ಮತ್ತು ಪೂನಂ ಪ್ರಸಾದ್ ಎಂಬ ಮೂರು ಜನ ಹೆಣ್ಣು ಮಕ್ಕಳು  ಇದ್ದಾರೆ.  

  • ಮೋದಿ ಸಮಾವೇಶಕ್ಕೆ ಬರಲ್ಲ: ಸಿಎಂ ಭೇಟಿ ಬೆನ್ನಲ್ಲೇ ಬಿಜೆಪಿಗೆ ಶಾಕ್‌ ಕೊಟ್ಟ ಶ್ರೀನಿವಾಸ್ ಪ್ರಸಾದ್‌

    ಮೋದಿ ಸಮಾವೇಶಕ್ಕೆ ಬರಲ್ಲ: ಸಿಎಂ ಭೇಟಿ ಬೆನ್ನಲ್ಲೇ ಬಿಜೆಪಿಗೆ ಶಾಕ್‌ ಕೊಟ್ಟ ಶ್ರೀನಿವಾಸ್ ಪ್ರಸಾದ್‌

    ಬೆಂಗಳೂರು/ಮೈಸೂರು: ಪ್ರಧಾನಿ ಮೋದಿ (Narendra Modi) ಆಗಮನ ಹೊತ್ತಲ್ಲೇ ಮೈಸೂರಿನಲ್ಲಿ(Mysuru) ಭಾರೀ ಬೆಳವಣಿಗೆಯಾಗಿದೆ. ಆರು ವರ್ಷಗಳ ಬಳಿಕ ಸಿಎಂ ಸಿದ್ದರಾಮಯ್ಯ (CM Siddaramaiah) ತಮ್ಮ ಹಳೆಯ ಮಿತ್ರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (Srinivasa Prasad) ನಿವಾಸಕ್ಕೆ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರೆ.

    ಈ ಬೆನ್ನಲ್ಲೇ ಭಾನುವಾರದ ಮೋದಿ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇಲ್ಲ. ಅದಕ್ಕಾಗಿ ಮೋದಿ ಸಮಾವೇಶದಿಂದ ದೂರ ಉಳಿಯುತ್ತೇನೆ ಎಂದು ಶ್ರೀನಿವಾಸ್ ಪ್ರಸಾದ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮ ವಾತಾವರಣವಿದೆ ಎನ್ನುವ ಮೂಲಕ ಬಿಜೆಪಿಗೆ (BJP) ಶಾಕ್ ಕೊಟ್ಟಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಸಿಟ್ಟು – ಮುಂಬೈಗೆ ಬರುತ್ತಿದ್ದ ಹಡಗನ್ನು ವಶಪಡಿಸಿಕೊಂಡ ಇರಾನ್‌

    ಸಿಎಂ ಮಾತನಾಡಿ, ಕಾಂಗ್ರೆಸ್ ಬಗ್ಗೆ ಕನಿಕರ ಇರಲಿ ಎಂದಿದ್ದೇನೆ ಅಷ್ಟೇ. ಅವರ ಬಳಿ ರಾಜಕೀಯ ಚರ್ಚಿಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ ಜನ್ಮದಿನದಂದೇ ಸಂಕಲ್ಪ ಪತ್ರ – ಭಾನುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ

    ಇದರ ಮಧ್ಯೆ ಎಚ್ಚೆತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಭಾನುವಾರ ಶ್ರೀನಿವಾಸ್ ಪ್ರಸಾದ್‌ರನ್ನು ಭೇಟಿ ಮಾಡುತ್ತೇನೆ. ಅವರು ಮೋದಿ ಕಾರ್ಯಕ್ರಮಕ್ಕೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಮೈಸೂರು: ಸಿದ್ದರಾಮಯ್ಯ (Siddaramaiah) ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ (V Srinivas Prasad) ಲೇವಡಿ ಮಾಡಿದ್ದಾರೆ.

    ವರುಣಾ ಕ್ಷೇತ್ರದಲ್ಲಿ (Varuna Constituency) ಸಿದ್ದರಾಮಯ್ಯ ಅಬ್ಬರದ ಪ್ರಚಾರದ ಕುರಿತು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಗುಡುಗಿದ್ರೆ ಹೆರಿಗೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗುತ್ತೆ. ಲೋಕಸಭೆಯಲ್ಲೂ ರಾಹುಲ್ ಗಾಂಧಿನ (Rahul Gandhi) ನಿಲ್ಲಿಸಿಕೊಂಡು ಗುಡುಗಿದ್ರು, ಮೋದಿ ಮುಳುಗೇಹೋದರು ಅನ್ನೋಹಾಗೇ ಗುಡುಗಿದ್ರು. ಕೊನೆಗೆ ಏನಾಯ್ತು? ರಾಜ್ಯದಲ್ಲಿ ಕೇವಲ 1 ಸೀಟು ಗೆದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಹನಿಮೂನ್‌ಗೆ ವಿದೇಶಕ್ಕೆ ಹಾರಿದ ಸಿಂಹಪ್ರಿಯಾ ಜೋಡಿ

    ಗುಡುಗಿ.. ಗುಡುಗಿ.. 30 ಸಾವಿರ ವೋಟ್‌ನಲ್ಲಿ ಸೋತರು. ವರುಣಾ ಕ್ಷೇತ್ರದಲ್ಲಿ 1 ಲಕ್ಷ ವೋಟ್ ಗೆಲ್ಲೋಕೆ ಸಾಧ್ಯನಾ? ಪ್ರತಿಪಕ್ಷ ನಾಯಕನಾಗಿ ಮಾತನಾಡುವ ಮಾತಾ ಅದು? ಸೋಮಣ್ಣ ಹೊರಗಿನವರು ಅನ್ನೋ ಸಿದ್ದರಾಮಯ್ಯ, ತಾವು ಬಾದಾಮಿಗೆ ಯಾಕೆ ಹೋದ್ರು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಸುಳ್ಳು ಸುದ್ದಿ ಬರೆದ ಸಿನಿಮಾ ವಿಶ್ಲೇಷಕನಿಗೆ ಚಳಿ ಬಿಡಿಸಿದ ನಟಿ ಊರ್ವಶಿ ರೌಟೇಲಾ

    ಇದೇ ವೇಳೆ ಬಿಜೆಪಿಯಲ್ಲಿ ಲಿಂಗಾಯತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಕೂಡ ಈ ಬಗ್ಗೆ ಮಾತನಾಡಬೇಡಿ ಅಂತಾ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಫಲಿತಾಂಶದ ನಂತರ ಯೋಚನೆ ಮಾಡೋಣ ಅಂತಾ ಹೇಳಿದ್ದಾರೆ. ಫಲಿತಾಂಶದ ಮೇಲೆ ದಲಿತ ಸಿಎಂ, ಅಥವಾ ಲಿಂಗಾಯತ ಸಿಎಂ ಅನ್ನೋದು ನಿರ್ಧಾರವಾಗುತ್ತೆ. ಪಕ್ಷದ ವರಿಷ್ಠರು ಅದನ್ನ ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.

  • ಬಿಎಸ್‌ವೈ, ವಿಜಯೇಂದ್ರ, ಶ್ರೀನಿವಾಸ್‌ ಪ್ರಸಾದ್‌ ನನಗೆ ಹಣ ಕೊಡಲು ಬಂದಿದ್ರು – ಹೆಚ್‌.ವಿಶ್ವನಾಥ್‌ ಹೊಸ ಬಾಂಬ್‌

    ಬಿಎಸ್‌ವೈ, ವಿಜಯೇಂದ್ರ, ಶ್ರೀನಿವಾಸ್‌ ಪ್ರಸಾದ್‌ ನನಗೆ ಹಣ ಕೊಡಲು ಬಂದಿದ್ರು – ಹೆಚ್‌.ವಿಶ್ವನಾಥ್‌ ಹೊಸ ಬಾಂಬ್‌

    ಮೈಸೂರು: ಜೆಡಿಎಸ್‌ (JDS) ತೊರೆದು ಬಿಜೆಪಿ (BJP) ಸೇರಲು ನನಗೆ ಹಣದ ಆಮಿಷ ಒಡ್ಡಿದ್ದರು. ಯಡಿಯೂರಪ್ಪ (Yediyurappa), ಅವರ ಮಗ ವಿಜಯೇಂದ್ರ (Vijayendra) ಹಾಗೂ ಶ್ರೀನಿವಾಸ್‌ ಪ್ರಸಾದ್‌ (Srinivas Prasad) ನನಗೆ ಹಣ ಕೊಡಲು ಬಂದಿದ್ದರು ಎಂದು ಬಿಜೆಪಿ ಎಂಎಲ್‌ಸಿ ಹೆಚ್‌.ವಿಶ್ವನಾಥ್‌ (Vishwanath) ಹೊಸ ಬಾಂಬ್‌ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದರ ಬಗ್ಗೆ ತಿಳಿಯಲು ಬಾಂಬೆ ಡೈರೀಸ್ ಓದಿ. ಬಾಂಬೆ ಡೈರೀಸ್‌ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದು ವಿಶ್ವನಾಥ್‌ ತಿಳಿಸಿದ್ದಾರೆ. ಆದರೆ ಎಷ್ಟು ಹಣ ಕೊಡಲು ಬಂದಿದ್ದರು? ನೀವು ಹಣ ಪಡೆದುಕೊಂಡಿರಾ ಎಂಬ ಪ್ರಶ್ನೆಗೆ ಉತ್ತರ ನೀಡಲಿಲ್ಲ. ಇದನ್ನೂ ಓದಿ: ಮಂಡ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್‌

    ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ವಿರುದ್ಧ ಕಿಡಿಕಾರಿದ ವಿಶ್ವನಾಥ್‌, ನಾನು ಅಲೆಮಾರಿ, ನೀವೂ ಅಲೆಮಾರಿಗಳ ರಾಜ. 40 ವರ್ಷಗಳಲ್ಲಿ ಎಷ್ಟು ಕಡೆ ಹೋಗಿಬಂದಿದ್ದೀರಿ ಗೊತ್ತಾ? ಒಂದೊಂದು ಪಕ್ಷಕ್ಕೆ ಎರಡೆರಡು ಬಾರಿ ಹೋಗಿ ಬಂದಿದ್ದೀರಿ. ಯಾರ ಪರವೂ ಧ್ವನಿ ಎತ್ತದ ನೀವೂ ಏಕಾಏಕಿ ನನ್ನ ಮೇಲೆ ಸೊಲ್ಲೆತ್ತಲು ಕಾರಣ ಏನು? ಯಾರನ್ನ ಮೆಚ್ಚಿಸಲು ಹೋಗುತ್ತಿದ್ದೀರಾ? ಈಗ ಬಿಜೆಪಿ ಸರ್ಕಾರ ವಿಸ್ತರಣೆ ಆಗತ್ತಿದೆ. ಇಲ್ಲಿ ಏನಾದರು ಪಡೆಯಲು ಈ ರೀತಿ ಮಾಡುತ್ತಿದ್ದೀರಾ? ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲ ಮಾತಾಡಬಾರದು. ನಾನು, ನೀವೂ ಹಳೆಯ ಸ್ನೇಹಿತರು. ನಿಮ್ಮ ಮಾತನ್ನು ಎಂದೂ ನಾನು ಹಿಂತೆಗೆದಿಲ್ಲ. ಅಳಿಯನಿಗೆ ನಂಜನಗೂಡು, ನರಸೀಪುರ ಮಗಳಿಗೆ ಕೊಡಿಸ್ಬೇಕು ಅಂತನಾ ಎಂದು ಖಾರವಾಗಿ ಪ್ರಶ್ನಿಸಿದರು.

    ವಿಜಯೇಂದ್ರ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದೇನು ಪ್ರಸಾದ್? ನಾನು ಇದನ್ನು ಹೇಳಬಾರದು ಅಂತ ಇದ್ದೆ. ಅವತ್ತು ನನ್ನ ಕೈಹಿಡಿದು ಕರ್ಕೊಂಡು ಬಂದ್ರಿ. ನಿಮ್ಮ ಮಾತಿಗೆ, ನಿಮ್ಮ ಸ್ನೇಹಕ್ಕೆ ನಾನು ಕಟ್ಟು ಬಿದ್ದೆ. ನಾನು, ನೀವೂ, ದಿ.ಪತ್ರಕರ್ತ ಮಹದೇವ ಪ್ರಕಾಶ್, ರಮೇಶ್ ನಾವು ನಾಲ್ಕೇ ಜನ ಇದ್ದದ್ದು. ಆದ್ರೆ ನೀವೂ ನಾನು ಸಿದ್ದರಾಮಯ್ಯ, ಖರ್ಗೆ ಅವರನ್ನ ಭೇಟಿ ಆಗಿದ್ದಕ್ಕೆ ಅಲೆಮಾರಿ ಅಂತೀರಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿದ್ದರಾಮಯ್ಯನಂಥ ದ್ರೋಹಿಯನ್ನು ನಾನು ಎಂದೂ ನೋಡಿಲ್ಲ: ಈಶ್ವರಪ್ಪ

    ಅವತ್ತು ನಾನು ಬಿಜೆಪಿಗೆ ಏನೆಲ್ಲ ಮಾಡಿದೆ. ಆದರೆ ನನಗೆ ಏನು ಕೊಡಲಿಲ್ಲ, ಏನೂ ಆಗಲಿಲ್ಲ. ಆದರೆ ಮುಕುಂದ್ ರಾವ್ ನನಗೆ ಎಂಎಲ್‌ಸಿ ಕೊಡಿಸಿದ್ರು. ಅವರಿಲ್ಲ ಅಂದಿದ್ರೆ ನನಗೆ ಏನು ಸಿಗ್ತಿರ್ಲಿಲ್ಲ. ಬಿಜೆಪಿ ಮೇಲೆ ನಂಬಿಕೆ ಹಾಳಗಬಾರದು ಅಂತ ಮಾತಾಡಿದ್ರು. ಅದರಿಂದ ನನಗೆ ಎಂಎಲ್‌ಸಿ ಸ್ಥಾನ ಸಿಕ್ತು. ಆದರೆ ಪ್ರಸಾದ್ ಸಾಹೆಬ್ರೆ ನಿಮಗೆ ನೈತಿಕತೆ ಇದೆ, ಅದನ್ನ ಕಳೆದುಕೊಳ್ಳಬೇಡಿ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ. ಆದರೆ ನೀವೂ ಎಷ್ಟೋ ಬಾರಿ ಅವಕಾಶಕ್ಕಾಗಿ ಹೋಗಿದ್ದೀರಿ. ನಾನು ಇರುವುದರಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ್ದೀನಿ ಎಂದು ತರಾಟೆಗೆ ತೆಗೆದುಕೊಂಡರು.

    Live Tv
    [brid partner=56869869 player=32851 video=960834 autoplay=true]

  • ನಾನು ನಿನ್ನನ್ನ ಸುಮ್ಮನೆ ಬಿಡಲ್ಲ- ಶ್ರೀನಿವಾಸ್ ಪ್ರಸಾದ್‍ಗೆ ರಮೇಶ್ ತಿರುಗೇಟು

    ನಾನು ನಿನ್ನನ್ನ ಸುಮ್ಮನೆ ಬಿಡಲ್ಲ- ಶ್ರೀನಿವಾಸ್ ಪ್ರಸಾದ್‍ಗೆ ರಮೇಶ್ ತಿರುಗೇಟು

    ಮೈಸೂರು: ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ (C Ramesh) ಹಾಗೂ ಸಂಸದ ಶ್ರೀನಿವಾಸ್ ಪ್ರಸಾದ್ (Srinivas Prasad) ನಡುವೆ ಮಾತಿನ ಚಕಮಕಿ ನಡೆದು ಏಕ ವಚನದಲ್ಲೇ ಪರಸ್ಪರ ವಾಗ್ದಾಳಿ ನಡೆಸಿ ಕೊಂಡಿದ್ದಾರೆ.

    ಮೈಸೂರು ಜಿಲ್ಲೆಯ ಟಿ ನರಸೀಪುರ ಅತಿಥಿ ಗೃಹ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಿ ರಮೇಶ್‍ರನ್ನು ಆಚೆ ಕಳುಹಿಸು ಎಂದ ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಕಾರ್ಯಕ್ರಮದಲ್ಲಿ ಬರಿ ಕೀಟಲೆ ಮಾಡಲಿಕ್ಕೆ ಬರುತ್ತೀಯಾ? ಎಂದು ಗದುರಿದ್ದಾರೆ. ಇದನ್ನೂ ಓದಿ; ಕೇಂದ್ರ, ರಾಜ್ಯ ಸರ್ಕಾರಗಳು ರೈತರ ಪಾಲಿಗೆ ಸತ್ತು ಹೋಗಿವೆ – ರೈತರ ಆಕ್ರೋಶ

    ಇದು ಬಿಜೆಪಿ (BJP) ಸರ್ಕಾರದ ಕಾರ್ಯಕ್ರಮ. ನನ್ನನ್ನ ಅವಮಾನ ಮಾಡಲಿಕ್ಕೆ ಕರೆದೆಯಾ? ಮತ್ತೊಮ್ಮೆ ನನ್ನನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡ. ನಿನ್ನ ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ನಾನು ಬರುವುದಿಲ್ಲ ನಾನು ನಿನ್ನನ್ನ ಸುಮ್ಮನೆ ಬಿಡಲ್ಲ ಸಂಸದ ಶ್ರೀನಿವಾಸ್ ಪ್ರಸಾದ್ ಗೆ ಸಿ ರಮೇಶ್ ತಿರುಗೇಟು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿರೋಧ

    ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ವಿರೋಧ

    ಚಾಮರಾಜನಗರ: (Chamarajanagara) ಹೊರಗಿನಿಂದ ಬಂದವರಿಗೆ ಟಿಕೆಟ್‌ ನೀಡುವುದಕ್ಕೆ ಬಿಜೆಪಿ (BJP) ಸಂಸದ ಶ್ರೀನಿವಾಸ್‌ ಪ್ರಸಾದ್‌ (Srinivas Prasad) ವಿರೋಧ ವ್ಯಕ್ತಪಡಿಸಿದರು.

    ನಗರದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಕಾರಿಣಿ ಸಭೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್ ಉದ್ಘಾಟಿಸಿದರು‌. ಇದನ್ನೂ ಓದಿ: ಕಾಂಗ್ರೆಸ್‌ನಿಂದ `ಸಿಎಂ ಅಂಕಲ್’ ಅಭಿಯಾನ – ಭುಗಿಲೆದ್ದ ಕೇಸರಿ ವಿವಾದ, ಸರ್ಕಾರಕ್ಕೆ ಹಲವು ಪ್ರಶ್ನೆ

    ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಲು ಸಂಸದ ವಿ.ಶ್ರೀನಿವಾಸ ಪ್ರಸಾದ್ ಇದೇ ವೇಳೆ ವಿರೋಧ ವ್ಯಕ್ತಪಡಿಸಿದರು. ನಮ್ಮ ಅಭಿಪ್ರಾಯ ಪರಿಗಣಿಸದಿದ್ದರೆ ಅವರು ಅನುಭವಿಸಬೇಕಾಗುತ್ತದೆ ಎಂದು ಖಡಕ್ ವಾರ್ನಿಂಗ್ ನೀಡಿದ ಅವರು, ಕ್ಷೇತ್ರದಲ್ಲಿ ಹಗಲು ರಾತ್ರಿ ಯಾರೂ ಕೆಲಸ ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. ಯಾರು ಹೋರಾಟ ಮಾಡಿದ್ದಾರೆ, ಯಾರು ಪಕ್ಷ ಸಂಘಟನೆ ಮಾಡಿದ್ದಾರೆ ಅವರನ್ನು ಆಯ್ಕೆ ಮಾಡುವ ಬಗ್ಗೆ ಹೈಕಮಾಂಡ್ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

    ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಕುರಿತು ಮಾತನಾಡಿದ ಅವರು, ಕೋಲಾರ ಸೇಫೆಸ್ಟ್‌ ಪ್ಲೇಸ್. ಅಲ್ಲಿ ಆರಾಮಾಗಿ ಗೆದ್ದು ಬರಬಹುದು‌ ಅಂತ ಸಿದ್ದರಾಮಯ್ಯ ಅಲ್ಲಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ನಿಂತಾಯ್ತು. ದೇವಸ್ಥಾನ, ಮಸೀದಿ, ಚರ್ಚ್‌ ಎಲ್ಲಾ ಕಡೆ ಹೋಗಿದ್ದಾರೆ. ಸುರಕ್ಷಿತ ಸ್ಥಳ ಹುಡುಕಿ‌, ಹುಡುಕಿ ಕೊನೆಗೆ ಕೋಲಾರಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯಗೆ ಒಳ್ಳೆಯದಾಗಲ್ಲ: ಸುಧಾಕರ್

    ಸುರಕ್ಷಿತ ಇಲ್ಲದಿದ್ರೆ ಬಾದಾಮಿ, ಚಾಮುಂಡೇಶ್ವರಿಯಲ್ಲಿ ಯಾಕೆ ನಿಲ್ಲಲಿಲ್ಲ? ಚಾಮರಾಜಪೇಟೆಯನ್ನು ನೋಡಿ ಆಗಿದೆ, ಹುಣಸೂರು ಆಯ್ತು, ಚಿಕ್ಕನಾಯಕನಹಳ್ಳಿ ಆಯ್ತು. ಕೊನೆಗೆ ಕೋಲಾರ ಸುರಕ್ಷಿತ ಅಂತ ಹೋಗಿದ್ದಾರೆ. ಕೋಲಾರದಲ್ಲಿ ಕುರುಬರು ಮುಸ್ಲಿಮರ ಮತ ಹೆಚ್ಚಾಗಿವೆ. ಹಾಗಾಗಿ ಸುಲಭವಾಗಿ ಗೆದ್ದು ಸಿಎಂ ಆಗಬಹುದು ಅಂತ ಅಲ್ಲಿಗೆ ಹೋಗಿದ್ದಾರೆ ಎಂದು ಕುಟುಕಿದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಗೆ ಜೆಡಿಎಸ್‌ ಜೊತೆ ಮೈತ್ರಿ ಅಗತ್ಯವಿಲ್ಲ: ಶ್ರೀನಿವಾಸ್‌ ಪ್ರಸಾದ್‌

    ಬಿಜೆಪಿಗೆ ಜೆಡಿಎಸ್‌ ಜೊತೆ ಮೈತ್ರಿ ಅಗತ್ಯವಿಲ್ಲ: ಶ್ರೀನಿವಾಸ್‌ ಪ್ರಸಾದ್‌

    ಮೈಸೂರು: ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಅನಿವಾರ್ಯ ಅಲ್ಲ. ಯಾರ ಮೈತ್ರಿಯೂ ಬೇಕಾಗಿಲ್ಲ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು.

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್‌ ಬೆಂಬಲ ಕೋರಿರುವ ಕುರಿತು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದ ಗೆದ್ದಿದ್ದು ಎಷ್ಟು ಸ್ಥಾನ ಎಂಬುದು ಗೊತ್ತಿದೆ. ಯಾರ ಮೈತ್ರಿಯೂ ಬಿಜೆಪಿಗೆ ಅಗತ್ಯವಿಲ್ಲ. ಅತಿ ಹೆಚ್ಚು ಸ್ಥಾನ ಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ದೊಡ್ಡ ಪಕ್ಷ ಬಿಜೆಪಿಗೆ ಯಾವ ಪಕ್ಷದ ಮೈತ್ರಿಯೂ ಬೇಕಾಗಿಲ್ಲ ಎಂದರು. ಇದನ್ನೂ ಓದಿ: ಚುನಾವಣೆ ಬಂದಾಗಲೆಲ್ಲ ಪಂಚಾಯ್ತಿ ಸದಸ್ಯರ ಬಗ್ಗೆ ಬಿಜೆಪಿಗೆ ಪ್ರೀತಿ ಉಕ್ಕಿಬರುತ್ತೆ: ಪ್ರಿಯಾಂಕ್ ಖರ್ಗೆ

    ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಬಗ್ಗೆ ಟೀಕೆ ಮಾಡುವುದು ಸರಿ. ತಮ್ಮ ಟೀಕೆಗೆ ಆರ್‌ಎಸ್‌ಎಸ್‌ ಅನ್ನು ಬಳಸಿಕೊಳ್ಳುವುದು ಸರಿಯಲ್ಲ. ಆರ್‌ಎಸ್‌ಎಸ್‌ ಒಂದು ರಾಜಕೀಯ ಪಕ್ಷವಲ್ಲ. ಹೀಗಾಗಿ ಅದರ ಮೇಲೆ ರಾಜಕೀಯವಾಗಿ ಟೀಕೆ ಸಲ್ಲದು ಎಂದು ತಿಳಿಸಿದರು.

    ಸಿದ್ದು ಮತ್ತು ಜಿಟಿಡಿ ಮೈತ್ರಿ ಕುರಿತು ಮಾತನಾಡಿ, ಸಿದ್ದರಾಮಯ್ಯ ಬದಾಮಿಗೆ ಹೋಗಿ ಚುನಾವಣೆಗೆ ನಿಂತಿದ್ದೆ ಅವರ ಅಸಹಾಯಕತೆಯನ್ನು ತೋರಿಸುತ್ತದೆ. ಒಂದು ಚುನಾವಣೆಯಲ್ಲಿ ಸೋತ ತಕ್ಷಣ ಕ್ಷೇತ್ರದಿಂದ ಓಡಿ ಹೋಗುವ ಮಾತಾಡುತ್ತಿದ್ದಾರೆ. ಇದು ಮೈಸೂರೇ ತಲೆ ತಗ್ಗಿಸುವ ವಿಚಾರ ಎಂದು ಕುಟುಕಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲೆ ಗೌರವವಿತ್ತು, ಆದ್ರೆ ಇತ್ತೀಚಿನ ಹೇಳಿಕೆ ನಿರಾಸೆ ತಂದಿದೆ: ಬೊಮ್ಮಾಯಿ

    ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಪರ್ವ ಮಾಡಿದ್ದರು. ಜನತಾ ಪರಿವಾರ ಕಟ್ಟುತ್ತೇನೆ ಅಂತ ಓಡಾಡಿದ್ದರು. ಆಗ ಇದೇ ಸಿದ್ದರಾಮಯ್ಯ ರಾತ್ರೋರಾತ್ರಿ ಊರು ಬಿಟ್ಟು ಬದಾಮಿಗೆ ಹೋಗಿ ನಿಂತರು. 35 ಸಾವಿರ ಮತಗಳಿಂದ ಸೋತಿದ್ದರೂ ಸಿದ್ದರಾಮಯ್ಯಗೆ ಬುದ್ದಿ ಬಂದಿಲ್ಲ. ಸಿಎಂ ಆಗಿ ನೀವೆ ಹೆದರಿಕೊಂಡು ಓಡಿಹೋದರೆ ಹೇಗೆ? ವೀರಾವೇಷದ ಮಾತುಗಳನ್ನು ಆಡುತ್ತೀರಾ. ಆದರೆ ಹೆದರಿ ಬದಾಮಿಗೆ ಹೋದಿರಿ. ಏನೋ ಚುನಾವಣೆಯಲ್ಲಿ ಗೆದ್ದು ಬಂದಿದ್ದೀರಾ. ಮೊದಲು ಅದನ್ನು ಉಳಿಸಿಕೊಳ್ಳಿ ಸಿದ್ದರಾಮಯ್ಯನವರೇ. ಚಿಮ್ಮನಕಟ್ಟಿ ಆಗಲೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.