Tag: Srinivas murthy

  • ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ನ್ನಡ ಸಿನಿಮಾ ರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರಿಗೆ  ಕರ್ನಾಟಕ ಸರಕಾರವು 2018ರಲ್ಲಿ ಡಾ. ರಾಜ್ ಕುಮಾರ್ (Raj Kumar) ಪ್ರಶಸ್ತಿ ಘೋಷಣೆ ಆಗಿತ್ತು. ಪ್ರಶಸ್ತಿ (Award) ಘೋಷಣೆಯಾಗಿ ಐದು ವರ್ಷ ಕಳೆದರೂ, ಇವರಿಗೆ ಪ್ರಶಸ್ತಿ ಪ್ರದಾನವಾಗಿಲ್ಲ. ಈ ಕುರಿತು ಮಾತನಾಡಿರುವ ಶ್ರೀನಿವಾಸ್ ಮೂರ್ತಿ, ‘ಪ್ರಶಸ್ತಿಯನ್ನು ಇದುವರೆಗೂ ಕೊಟ್ಟಿಲ್ಲ. 2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ವರ್ಷಗಳ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು. ಆದರೆ, ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು?’ ಎಂದು ಪ್ರಶ್ನೆ ಮಾಡಿದ್ದಾರೆ.

    ಶ್ರೀನಿವಾಸಮೂರ್ತಿ ಅವರು ಬಣ್ಣ ಹಚ್ಚಿ 50 ವರ್ಷಗಳಾಗಿವೆ. ಇಂದು ಅವರು 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸದಾರಮೆ ಕಳ್ಳ ಎಂಬ ನಾಟಕ ಆಡುತ್ತಿದ್ದಾರೆ. ಬರೀ ಇವತ್ತಷ್ಟೇ ಅಲ್ಲ, ನಾಳೆ ಸಂಜೆ ಅದೇ ಸ್ಥಳದಲ್ಲಿ ‘ತರಕಾರಿ ಚೆನ್ನಿ ಎಂಬ ಇನ್ನೊಂದು ನಾಟಕದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.

    ‘ಹೇಮಾವತಿ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಯೋಗಾನರಸಿಂಹ ಅವರ ನಾಟಕದ (Drama) ಕಂಪೆನಿಯಲ್ಲಿ ಪಾತ್ರ ಮಾಡುತ್ತಿದ್ದರು. ನಂತರ ಅವರದ್ದೇ ಆದ ಜಿಕೆಎಸ್ ಕಲಾನಿಕೇತನ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ ‘ಬೇಡರ ಕಣ್ಣಪ್ಪ’, ‘ಸದಾರಮೆ, ‘ತರಕಾರಿ ಚೆನ್ನಿ’, ‘ಮುದುಕನ ಮದುವೆ’ ಮುಂತಾದ ನಾಟಕಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ಶ್ರೀನಿವಾಸಮೂರ್ತಿ ಇದುವರೆಗೂ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 32 ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರ ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದುಬಿಟ್ಟಿದೆ. ಮೂರ್ತಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ, ಅವರನ್ನು ಚಿತ್ರರಂಗ ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವಿದೆಯಾದರೂ, ತಮಗೆ ಎಷ್ಟು ಸಿಕ್ಕಿದೆಯೋ ಅದೆಲ್ಲ ಕೀರ್ತಿಯನ್ನು ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಮತ್ತು ಡಾ. ರಾಜಕುಮಾರ್ ಸಹೋದರ ವರದಪ್ಪ ಅವರಿಗೆ ಸಲ್ಲಿಸುತ್ತಾರೆ.

  • ಹಿರಿಯ ನಟ ಶ್ರೀನಿವಾಸ್ ಮೂರ್ತಿಗೆ 75 ವರ್ಷ: ಎರಡು ದಿನ ಕಾರ್ಯಕ್ರಮ

    ಹಿರಿಯ ನಟ ಶ್ರೀನಿವಾಸ್ ಮೂರ್ತಿಗೆ 75 ವರ್ಷ: ಎರಡು ದಿನ ಕಾರ್ಯಕ್ರಮ

    ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ (Actor) ಶ್ರೀನಿವಾಸ್ ಮೂರ್ತಿ (Srinivas Murthy). ಕೇವಲ ನಟರಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ (Producer) ಗುರುತಿಸಿಕೊಂಡವರು. ನಟನಾಗಿ ಗೆದ್ದು, ನಿರ್ಮಾಪಕರಾಗಿ ಸೋಲನ್ನುಂಡರು ಸಿನಿಮಾ ಬಗೆಗಿನ ಪ್ರೀತಿ ಯಾವತ್ತಿಗೂ ಅವರಿಗೆ ಕಡಿಮೆ ಆಗಿಲ್ಲ. ಈಗಲೂ ಸಿನಿಮಾ ಮತ್ತು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅವರಿಗೆ ತುಂಬು 75 ವರ್ಷ.

    ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಶ್ರೀನಿವಾಸಮೂರ್ತಿ ಅವರಿಗೆ ಈಗ 75 ವರ್ಷ (75 Years). ಅವರ ಬಣ್ಣದ ಬದುಕಿಗೆ 50 ವರ್ಷ. ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ಇದೇ ಮೇ 15 ಹಾಗೂ 16 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತರಕಾರಿ ಚೆನ್ನಿ’ ಹಾಗೂ ‘ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ ಮಾಹಿತಿ ನೀಡಿದರು. ಇದನ್ನೂ ಓದಿ:ರಾಣಾ ದಗ್ಗುಭಾಟಿ ಪತ್ನಿ ಪ್ರೆಗ್ನೆಂಟ್? ಮಿಹಿಕಾ ಬಜಾಜ್ ಪ್ರತಿಕ್ರಿಯೆ

    ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆ ಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದೆ. ಒಂದು ಸಲ ನನ್ನ ನಾಟಕವನ್ನು ನೋಡಿದ ಬಂಗಾರಪ್ಪನವರು ನನ್ನನ್ನು ಅಭಿನಂದಿಸಿದರು. ಅಲ್ಲಿಂದ ನನ್ನ ನಟನೆ ಮತ್ತಷ್ಟು ಹೆಚ್ಚಾಯಿತು. ತಮಿಳಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ತೊಂದರೆಯಾಯಿತು.  ‘ಅಪ್ಪು’ ಚಿತ್ರದ ನಂತರ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೆ ನನ್ನ ಕರೆದರೂ, ಆಗ ಇಲ್ಲಿ ನಾನು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಅಲ್ಲಿಗೆ ಹೋಗಲಿಲ್ಲ. ರಜನಿಕಾಂತ್ ಅವರು ಸಹ ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು? ಎಂದು ಕೇಳುತ್ತಿರುತ್ತಾರೆ  ಎಂದು ಶ್ರೀನಿವಾಸಮೂರ್ತಿ ಅವರು ಬೇರೆ ಭಾಷೆಗಳಿಂದ ತಮಗೆ ಬಂದಿದ್ದ ಅವಕಾಶಗಳ ಕುರಿತು ಮಾತನಾಡಿದರು.

  • ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು  ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಸ್ಯಾಂಡಲ್ ವುಡ್ ನ ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಚುನಾವಣೆಗೆ ಸ್ಪರ್ಧಿಸಿದ್ದರು ಎನ್ನುವ ವಿಚಾರ ತುಂಬಾ ಜನಕ್ಕೆ ಗೊತ್ತಿಲ್ಲ. ಸರ್ವೆ ಇಲಾಖೆಯಲ್ಲಿ ಸೆಕೆಂಡ್ ಡಿವಿಷನ್ ಕ್ಲರ್ಕ್ ಆಗಿದ್ದ ಶ್ರೀನಿವಾಸ್ ಮೂರ್ತಿ ಅವರನ್ನು ಎಂ.ಎಲ್.ಎ ಎಲೆಕ್ಷನ್ ಗೆ ನಿಲ್ಲಿಸಿದ್ದು ಬೇರೆ ಯಾರೂ ಅಲ್ಲ, ಹೆಚ್.ಡಿ ದೇವೇಗೌಡರು (H.D. Devegowda). ಈ ರೋಚಕ ವಿಷಯವನ್ನು ಸ್ವತಃ ಶ್ರೀನಿವಾಸ್ ಮೂರ್ತಿ ಅವರೇ ಹಂಚಿಕೊಂಡಿದ್ದಾರೆ.

    ಅದು 1973ರ ಸಮಯ. ಆಗ ಶ್ರೀನಿವಾಸ್ ಮೂರ್ತಿ ಅವರು ಸರ್ವೆ ಇಲಾಖೆಯಲ್ಲಿ ಎಸ್.ಡಿ.ಸಿ ಆಗಿದ್ದರು. ಜೊತೆಗೆ ಸಿನಿಮಾದಲ್ಲೂ ನಟಿಸುತ್ತಿದ್ದರು. ಶ್ರೀನಿವಾಸ್ ಮೂರ್ತಿ ಅವರ ಜನಪ್ರಿಯತೆ ಹಾಗೂ ಅವರದ್ದೇ ಜಾತಿಯ ಜನರು ಹೆಚ್ಚಿರುವ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಬೇಕು ಎಂದು ದೇವೇಗೌಡ ಲೆಕ್ಕಾಚಾರವಾಗಿತ್ತು. ಅದರಂತೆ ಶ್ರೀನಿವಾಸ್ ಮೂರ್ತಿ ಅವರ ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಿದ್ದರು.

    ಈ ಕುರಿತು ಮಾತನಾಡಿರುವ ಶ್ರೀನಿವಾಸ್ ಮೂರ್ತಿ, ‘ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವನನ್ನು ರಾಜೀನಾಮೆ ಕೊಡಿಸಿ ದೊಡ್ಡಬಳ್ಳಾಪುರ (Doddaballapur) ಕ್ಷೇತ್ರದಲ್ಲಿ ಎಂ.ಎಲ್.ಎ ಗೆ ನಿಲ್ಲಿಸಿದರು. ನಮ್ಮದೇ ಜಾತಿಯವರು ವೋಟು ಹಾಕುತ್ತಾರೆ ಎನ್ನುವ ಲೆಕ್ಕಾಚಾರ ದೇವೇಗೌಡರದ್ದಾಗಿತ್ತು. ರಾಜಕೀಯ ಅನುಭವ ಇಲ್ಲದ್ದಾಗಿದ್ದರಿಂದ ಸೋಲಬೇಕಾಯಿತು’ ಎಂದಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ಅಂದಹಾಗೆ ಶ್ರೀನಿವಾಸ್ ಮೂರ್ತಿಯವರು ಸ್ಪರ್ಧಿಸಿದ್ದು ಆರ್.ಎಲ್ ಜಾಲಪ್ಪ  (R.L. Jalappa) ಎದುರಾಗಿ. ಆ ವೇಳೆಯಲ್ಲಿ ಜಾಲಪ್ಪನವರು ಆ ಕ್ಷೇತ್ರದ ಜನರಿಗೆ ಬೇಕಾಗಿದ್ದೆಲ್ಲವನ್ನೂ ಮಾಡಿಕೊಟ್ಟಿದ್ದರು. ಅದರಲ್ಲೂ ನೇಕಾರರೇ ಅಲ್ಲಿ ಹೆಚ್ಚಿನ ಮತದಾರರು. ಅವರಿಗೂ ಸಾಕಷ್ಟು ಸಹಾಯ ಮಾಡಿದ್ದರು. ಹೀಗಾಗಿ ಶ್ರೀನಿವಾಸ್ ಮೂರ್ತಿ ಅವರಿಗೆ ಬೀಳಬೇಕಾಗಿದ್ದ ವೋಟು, ಜಾಲಪ್ಪನವರಿಗೆ ಬಿದ್ದಿದ್ದವು.

  • ನಟ ನವೀನ್ ಕೃಷ್ಣ ಸಹೋದರಿ ನೀತಾ ನಾಪತ್ತೆ: ಪತ್ತೆಗೆ ಸಹಕರಿಸಿ ಎಂದು ಮನವಿ

    ನಟ ನವೀನ್ ಕೃಷ್ಣ ಸಹೋದರಿ ನೀತಾ ನಾಪತ್ತೆ: ಪತ್ತೆಗೆ ಸಹಕರಿಸಿ ಎಂದು ಮನವಿ

    ಸ್ಯಾಂಡಲ್ ವುಡ್ ನಟ, ನಿರ್ದೇಶಕ ನವೀನ್ ಕೃಷ್ಣ (Naveen Krishna) ಅವರ ಸಹೋದರಿ ನೀತಾ ಪವರ್ (Neeta Pawar) ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದಾರೆ (missing). ಈ ಮಾಹಿತಿಯನ್ನು ಸ್ವತಃ ನವೀನ್ ಕೃಷ್ಣ ಅವರೇ ಸೋಷಿಯ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸಹೋದರಿಯ ಫೋಟೋ ಮತ್ತು ಮಾಹಿತಿಯನ್ನೂ ಪೋಸ್ಟ್ ಮಾಡಿರುವ ಅವರು, ‘ಕಂಡರೆ ಕೂಡಲೇ ತಿಳಿಸಿ ನಮ್ಮ ಅಕ್ಕ’ ಎಂದು ಬರೆದುಕೊಂಡಿದ್ದಾರೆ.

    ನವೀನ್ ಕೃಷ್ಣ ಅವರು ಪೋಸ್ಟ್ ಮಾಡಿರುವ ಪೋಸ್ಟರ್ ನಲ್ಲಿ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ನೀತಾ ಪವಾರ್ ಜನವರಿ 17 ರಂದು ಮಧ್ಯಾಹ್ನ 2:57ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ ಬಂದಿಲ್ಲ. ಹಾಗಾಗಿ ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ, ನಿಮಗೆ ಮಾಹಿತಿ ಸಿಕ್ಕರೆ ಕೂಡಲೇ ಸಂಪರ್ಕಿಸಿ ಎಂದು ಹಲವು ನಂಬರ್ ಗಳನ್ನು ಅವರು ನೀಡಿದ್ದಾರೆ.

    ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರ ಪುತ್ರನಾದ ನವೀನ್ ಕೃಷ್ಣ ಧಿಮಾಕು ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲೂ ನಟಿಸಿದ್ದಾರೆ. ಸ್ವತಃ ನಿರ್ದೇಶಕರಾಗಿ ಹಲವು ಧಾರಾವಾಹಿಗನ್ನು ನಿರ್ದೇಶನ ಮಾಡಿದ್ದಾರೆ. ಸದ್ಯ ಜೀ ವಾಹಿನಿಯಲ್ಲಿ ಮೂಡಿ ಬರಲಿರುವ ಹೊಸ ಧಾರಾವಾಹಿಯಲ್ಲೂ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿರಿಯ ನಟ ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರಿಗೆ ‘ಶ್ರೀ ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿ

    ಹಿರಿಯ ನಟ ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರಿಗೆ ‘ಶ್ರೀ ರಾಘವೇಂದ್ರ ಚಿತ್ರವಾಣಿ’ ಪ್ರಶಸ್ತಿ

    ಳೆದ 47 ವರ್ಷಗಳಿಂದ ಕನ್ನಡ ಚಿತ್ರರಂಗ ಮತ್ತು ಮಾಧ್ಯಮದ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಾ ಬಂದಿರುವುದು ಶ್ರೀ ರಾಘವೇಂದ್ರ ಚಿತ್ರವಾಣಿ (Raghavendra Chitravani) ಸಂಸ್ಥೆ. ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಿವಂಗತ ಡಿ.ವಿ.ಸುಧೀಂದ್ರ ಅವರಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆಗೆ 25 ವರ್ಷ ತುಂಬಿದ ಸಂದರ್ಭದಲ್ಲಿ, ಈ ಸುಧೀರ್ಘ ಯಾನಕ್ಕೆ ಕಾರಣಕರ್ತರಾಗಿದ್ದ ನಿರ್ಮಾಪಕರು ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠವನ್ನು ಆರಂಭಿಸಿದ್ದರು. ಕೇವಲ ಎರಡು ಪ್ರಶಸ್ತಿಗಳಿಂದ ಪ್ರಾರಂಭವಾದ ಈ ಸಮಾರಂಭಕ್ಕೆ ಆಗಮಿಸಿದ ಗಣ್ಯರು, ನಮ್ಮ ಸಂಸ್ಥೆಯ ಮೂಲಕ ಪ್ರಶಸ್ತಿ ಪ್ರದಾನ ಮಾಡಲು ಮುಂದಾಗಿದ್ದರು. ಹೀಗೆ ಆರಂಭವಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೀಗ 11 ಪ್ರಶಸ್ತಿಗಳಿಗೆ ವಿಸ್ತಾರವಾಗಿದೆ. ನಿರ್ಮಾಪಕರು ಮತ್ತು ಪತ್ರಕರ್ತರಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿರುವ ಕಲಾವಿದರು ಮತ್ತು ತಂತ್ರಜ್ನರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

    ಕಳೆದ ವರ್ಷ ಕೋವಿಡ್​ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿರಲಿಲ್ಲ. ಹಾಗಾಗಿ,  ಕಳೆದ ವರ್ಷದ ಶ್ರೀ ರಾಘವೇಂದ್ರ ಚಿತ್ತವಾಣಿ ಪ್ರಶಸ್ತಿಯನ್ನು ಈ ಬಾರಿ ನೀಡಲಾಗುತ್ತಿದೆ. ಸಂಸ್ಥೆಯ ಸ್ಥಾಪಕರಾದ ಶ್ರೀ ಡಿ.ವಿ, ಸುಧೀಂದ್ರ ಅವರ ಜನ್ಮದಿನದಂದು (ಜನವರಿ 25), ಈ ಸಮಾರಂಭವನ್ನು ಚಾಮರಾಜಪೇಟೆಯ ಕನ್ನಡ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಂಜೆ 5ಕ್ಕೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ 47ನೇ ವಾರ್ಷಿಕೋತ್ಸವ ಹಾಗೂ 21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್​ ಬಣಕಾರ್​, ನಟಿಯರಾದ ರಾಗಿಣಿ, ‘ಎ’ ಖ್ಯಾತಿಯ ಚಾಂದಿನಿ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    21 ಮತ್ತು 22ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪ್ರಶಸ್ತಿಗಳ ವಿವರ

    2021 ನೇ ಸಾಲಿನ ಪ್ರಶಸ್ತಿ :

     ಪಿ. ಧನರಾಜ್, ಹಿರಿಯ ಚಲನಚಿತ್ರ ನಿರ್ಮಾಪಕರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

     ಈಶ್ಚರ ದೈತೋಟ, ಹಿರಿಯ ಪತ್ರಕರ್ತರು, (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

    2022 ನೇ ಸಾಲಿನ ಪ್ರಶಸ್ತಿ :

    ಕುಮಾರ್ ಗೋವಿಂದ್, ಹಿರಿಯ ನಟ-ನಿರ್ಮಾಪಕರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

    ಸದಾಶಿವ ಶೆಣೈ, ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು (ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ)

    ರಾಜೇಶ್ ಕೃಷ್ಣನ್,  ಖ್ಯಾತ ಹಿನ್ನೆಲೆ ಗಾಯಕರು (ಡಾ. ರಾಜಕುಮಾರ್ ಪ್ರಶಸ್ತಿ, ಶ್ರೀಮತಿ ಪಾರ್ವತಮ್ಮ ರಾಜಕುಮಾರ್ ಕುಟುಂಬದವರಿಂದ)

    ಸಾಯಿಪ್ರಕಾಶ್, ಹಿರಿಯ ನಿರ್ದೇಶಕರು-ನಿರ್ಮಾಪಕರು (‘ಯಜಮಾನ’ ಚಿತ್ರದ ಖ್ಯಾತಿಯ ಆರ್. ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿ ಶ್ರೀಮತಿ ಭಾರತಿ ವಿಷ್ಣುವರ್ಧನ್​ ಅವರಿಂದ)

    ತುಳಸಿ, ಹಿರಿಯ ನಟಿ (ಖ್ಯಾತ ಅಭಿನೇತ್ರಿ ಡಾ. ಜಯಮಾಲ ಎಚ್.ಎಂ. ರಾಮಚಂದ್ರ ಪ್ರಶಸ್ತಿ)

    ನೋಬಿನ್ ಪಾಲ್, ಅತ್ಯುತ್ತಮ ಸಂಗೀತ ನಿರ್ದೇಶನ, ‘777 ಚಾರ್ಲಿ’ ಚಿತ್ರಕ್ಕಾಗಿ (ಎಂ.ಎಸ್. ರಾಮಯ್ಯ ಮೀಡಿಯಾ ಅಂಡ್ ಎಂಟರ್​ಟೈನ್​ಮೆಂಟ್​ ಪ್ರೈ ಲಿ ಪ್ರಶಸ್ತಿ)

    ಮಧುಚಂದ್ರ, ಅತ್ಯುತ್ತಮ ಕಥಾಲೇಖಕರು, ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರಕ್ಕಾಗಿ (ಖ್ಯಾತ ನಿರ್ದೇಶಕ-ನಿರ್ಮಾಪಕ ಶ್ರೀ ಕೆ.ವಿ. ಜಯರಾಂ ಪ್ರಶಸ್ತಿ, ಶ್ರೀಮತಿ ಮೀನಾಕ್ಷಿ ಜಯರಾಂ ಅವರಿಂದ)

    ಎಂ.ಜಿ. ಶ್ರೀನಿವಾಸ್ (ಶ್ರೀನಿ) ಅತ್ಯುತ್ತಮ ಸಂಭಾಷಣೆ, ‘ಓಲ್ಡ್ ಮಾಂಕ್’ ಚಿತ್ರಕ್ಕಾಗಿ (ಖ್ಯಾತ ಚಿತ್ರಸಾಹಿತಿ ಶ್ರೀ ಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಡಾ.ಎಚ್​.ಕೆ. ನರಹರಿ ಅವರಿಂದ)

    ಕಿರಣ್ ರಾಜ್ (‘777 ಚಾರ್ಲಿ’) ಚೊಚ್ಚಲ ಚಿತ್ರದ ನಿರ್ದೇಶನಕ್ಕಾಗಿ (ಹಿರಿತೆರೆ-ಕಿರುತೆರೆ ನಿರ್ದೇಶಕ ಶ್ರೀ ಬಿ. ಸುರೇಶ ಪ್ರಶಸ್ತಿ)

    ಪ್ರಮೋದ್ ಮರವಂತೆ, ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’ ಗೀತರಚನೆಗಾಗಿ (ಹಿರಿಯ ಪತ್ರಕರ್ತರಾದ ಶ್ರೀ.ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ)

    ಶ್ರೀನಿವಾಸಮೂರ್ತಿ, ಹಿರಿಯ ಪೋಷಕ ಕಲಾವಿದರು (ಹಿರಿಯ ಪತ್ರಕರ್ತ ಸಿ. ಸೀತಾರಾಂ ಸ್ಮರಣಾರ್ಥ ಪ್ರಶಸ್ತಿ, ಶ್ರೀಮತಿ ನಾಗಮಣಿ ಸೀತಾರಾಮ ಕುಟುಂಬದವರಿಂದ)

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ಬೆಳ್ಳಿತೆರೆಯಲ್ಲಿ ಕಾಯಕಯೋಗಿ ಬಸವಣ್ಣ: ಯಾರೆಲ್ಲ ಪಾತ್ರ ಮಾಡಿದ್ದಾರೆ ಗೊತ್ತಾ?

    ಕಾಯಕ ಮತ್ತು ವಚನಗಳ ಮೂಲಕ ಜಗತ್ತಿಗೆ ಸಮಸಮಾಜದ ಸಂದೇಶ ಸಾರಿರುವ ಜಗಜ್ಯೋತಿ ಬಸವೇಶ್ವರರ ಜಯಂತಿ ಇಂದು. ಬಸವಣ್ಣನ ಸಂದೇಶ ಸಾರುವಂತಹ ಅನೇಕ ಕೃತಿಗಳು ಸಾಹಿತ್ಯ ಲೋಕದಲ್ಲಿದ್ದರೆ, ಸಿನಿಮಾಗಳಲ್ಲೂ ಬಸವಣ್ಣನ ಪ್ರಸ್ತಾಪವಿದೆ. ಅವರ ಬದುಕಿನ ಕುರಿತಾದ ಸಿನಿಮಾಗಳು ಮೂಡಿ ಬಂದಿವೆ.

    ಕನ್ನಡ ಬೆಳ್ಳಿತೆರೆಯ ಮೇಲೆ ಬಸವಣ್ಣ ಹಾಡಾಗಿ, ವಚನವಾಗಿ, ಜೀವನ, ಕಾಯಕ ಹೀಗೆ ನಾನಾ ರೀತಿಯಲ್ಲಿ ಅಭಿವ್ಯಕ್ತಿಗೊಂಡಿದ್ದಾರೆ. ಶ್ರೇಷ್ಠ ದಾರ್ಶನಿಕನ ನೆನಪುಗಳನ್ನು ಸಿನಿಮಾ ರಂಗ ಹಲವು ಬಗೆಯಲ್ಲಿ ಕಟ್ಟಿಕೊಟ್ಟಿದೆ. ಬಸವಣ್ಣ ಸಿನಿಮಾದಲ್ಲಿ ಬಿಡಿಬಿಡಿಯಾಗಿ ಹಾಗೂ ಇಡಿಯಾಗಿಯೂ ಕಂಡಿದ್ದಾರೆ ಎನ್ನುವುದೇ ವಿಶೇಷ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಕನ್ನಡ ಸಿನಿಮಾ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಬಸವಣ್ಣನ ಕುರಿತಾಗಿ ತೆರೆಗೆ ಬಂದ ಸಿನಿಮಾ ‘ಜಗಜ್ಯೋತಿ ಬಸವೇಶ್ವರ’. 1959ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ಬಸವಣ್ಣನ ಪಾತ್ರ ಮಾಡಿದ್ದು ಹೊನ್ನಪ್ಪ ಭಾಗವತರ್. ಈ ಹೊತ್ತಿಗೆ ಬಸವಣ್ಣ ಅಂದಾಕ್ಷಣ ಇವರ ಭಾವಚಿತ್ರವೇ ಕಣ್ಮುಂದೆ ಬರುತ್ತದೆ. ಐವತ್ತರ ದಶಕದ ಕೊನೆಯಲ್ಲಿ ತೆರೆಕಂಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಟಿ.ವಿ. ಸಿಂಗ್ ಠಾಕೂರ್. ಈ ಸಿನಿಮಾದ ವಿಶೇಷ ಅಂದರೆ, ಡಾ.ರಾಜ್ ಕುಮಾರ್ ಅವರು ಬಿಜ್ಜಳನಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ಪ್ರಾದೇಶಿಕ ಸಿನಿಮಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಕೂಡ ಬಂತು.

    1983ರಲ್ಲೂ ಬಸವಣ್ಣನವರ ಕುರಿತಾಗಿ ಮತ್ತೊಂದು ಚಿತ್ರ ತೆರೆಕಂಡಿತು.  ‘ಕ್ರಾಂತಿಯೋಗಿ ಬಸವಣ್ಣ’ ಹೆಸರಿನಲ್ಲಿ ಮೂಡಿ ಬಂದ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶನ ಮಾಡಿದ್ದರು. ಅಶೋಕ್ ಬಸವಣ್ಣನ ಪಾತ್ರದಲ್ಲಿ ನಟಿಸಿದ್ದರು. ಮಾತೇ ಮಹಾದೇವಿ ಅವರೇ ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದು ವಿಶೇಷ. ಈ ಸಿನಿಮಾ ಸೆಟ್ಟೇರುತ್ತಿದೆ ಎನ್ನುವ ಹೊತ್ತಿನಲ್ಲಿ ಬಸವಣ್ಣನ ಪಾತ್ರವನ್ನು ಡಾ.ರಾಜ್ ಕುಮಾರ್ ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಅದಕ್ಕಾಗಿ ಡಾ.ರಾಜ್ ಕೂಡ ತಯಾರಾಗಿದ್ದರು ಎನ್ನುವ ಗಾಸಿಪ್ ಇದೆ. ಆದರೆ, ನಂತರದ ದಿನಗಳಲ್ಲಿ ಅಶೋಕ್ ಅವರು ಬಸವಣ್ಣನ ಪಾತ್ರಕ್ಕೆ ಆಯ್ಕೆಯಾದರು. ಈ ಸಿನಿಮಾ ಕೇವಲ ಬಸವಣ್ಣನ ಸುತ್ತ ಸುತ್ತದೇ ಕಲ್ಯಾಣ ಕ್ರಾಂತಿಗೆ ಕಾರಣರಾದ ಶಿವ ಶರಣ, ಶರಣೆಯರ ಪ್ರಸ್ತಾಪ ಕೂಡ ಇತ್ತು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಚಿಂದೂಡಿ ಬಂಗಾರೇಶ್ ನಿರ್ದೇಶನದಲ್ಲಿ ಮೂಡಿ ಬಂದ ದಾನಮ್ಮ ದೇವಿ ಸಿನಿಮಾದಲ್ಲಿ ಬಸವೇಶ್ವರರ ಪ್ರಸ್ತಾಪವಿದೆ. ಹರಳಯ್ಯ, ಮಡಿವಾಳ ಮಾಚಿದೇವ ಹೀಗೆ ಅನೇಕ ಶರಣರು ಸಿನಿಮಾದಲ್ಲಿ ಪ್ರಾಸಂಗಿಕವಾಗಿ ಬಂದು ಹೋಗುತ್ತಾರೆ. ಈ ಸಮಯದಲ್ಲಿ ಬಸವಣ್ಣ ಕೂಡ ಬರುತ್ತಾರೆ. ಈ ಪಾತ್ರವನ್ನು ನಟ ರಾಮಕೃಷ್ಣ ಅವರು ಮಾಡಿದ್ದರು. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ಟಿ.ಎಸ್. ನಾಗಾಭರಣ ನಿರ್ದೇಶನದಲ್ಲಿ ತಯಾರಾದ ‘ಅಲ್ಲಮ’ ಸಿನಿಮಾದಲ್ಲೂ ಬಸವಣ್ಣನ ಪಾತ್ರಕ್ಕೆ ನಿರ್ದೇಶಕರು ಸಾಕಷ್ಟು ಮಹತ್ವ ಕೊಟ್ಟಿದ್ದರು. ಅಲ್ಲಮನ ವಚನದ ಜೊತೆಗೆ ಬಸವೇಶ್ವರರ ವಚನಗಳನ್ನೂ ಈ ಸಿನಿಮಾದಲ್ಲಿ ಬಳಸಲಾಗಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರು ಬಸವಣ್ಣನ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಬಿ.ಎ ಪುರುಷೋತ್ತಮ ನಿರ್ದೇಶನದಲ್ಲಿ ‘ಮಹಾ ಶರಣ ಹರಳಯ್ಯ’ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ಬಸವಣ್ಣನ ಪಾತ್ರವೂ  ಪ್ರಮುಖವಾಗಿತ್ತು. ಹರಳಯ್ಯ ಮತ್ತು ಬಸವಣ್ಣನ ಮುಖಾಮುಖಿಯನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದರು ನಿರ್ದೇಶಕರು. ಈ ಸಿನಿಮಾದಲ್ಲಿ ಬಸವಣ್ಣನಾಗಿ ರಮೇಶ್ ಅರವಿಂದ್ ನಟಿಸಿದ್ದರು. ಇದನ್ನೂ ಓದಿ: ಮಗಳ ನಿರ್ಮಾಣದ ವೆಬ್ ಸೀರಿಸ್‌ನಲ್ಲಿ ಶಿವಣ್ಣ ಆಕ್ಟಿಂಗ್

    ಕನ್ನಡದ ಪ್ರತಿಭಾವಂತ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಅವರು ಕಿರುತೆರೆಯಲ್ಲಿ ಪ್ರಯೋಗವೊಂದನ್ನು ಮಾಡಿದ್ದರು. ಅವರು ಕಿರುತೆರೆಗಾಗಿ ‘ಕ್ರಾಂತಿಯೋಗಿ ಬಸವಣ್ಣ’ ಧಾರಾವಾಹಿ ನಿರ್ದೇಶಿಸಿ, ಬಸವಣ್ಣನ ಪಾತ್ರವನ್ನು ಅವರೇ ನಿರ್ವಹಿಸಿದದ್ರು. ಎರಡು ವರ್ಷಗಳ ಕಾಲ ಈ ಧಾರಾವಾಹಿ ಪ್ರಸಾರವಾಯಿತು. ಬಸವಣ್ಣನವರ ಬಹುತೇಕ ಬದುಕನ್ನು ಜನರ ಮುಂದಿಟ್ಟ ಅಪರೂಪದ ಧಾರಾವಾಹಿ ಇದಾಗಿತ್ತು.

  • ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರು

    ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರು

    ಇಂದು ಮಹಾ ಶಿವರಾತ್ರಿ. ಮಹಾದೇವನ ಆರಾಧಿಸುವ ಪುಣ್ಯದಿನ. ಶಿವನೊಲಿದರೆ ಭಯವಿಲ್ಲ ಎನ್ನುವಂತೆ ಅವನನ್ನು ಒಲಿಸಿಕೊಳ್ಳಲು ಸ್ಯಾಂಡಲ್ ವುಡ್ ಕೂಡ ಹಿಂದೆ ಬಿದ್ದಿಲ್ಲ. ಪರಶಿವನ ಮಹಿಮೆಯನ್ನು ಸಾರುವಂತಹ ಅನೇಕ ಚಿತ್ರಗಳನ್ನು ಮಾಡುವ ಮೂಲಕ ತೆರೆಯ ಮೇಲೂ ಶಿವನ ಅವತಾರಗಳನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಇದನ್ನೂ ಓದಿ : ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಪೌರಾಣಿಕ ಚಿತ್ರಗಳಲ್ಲಿ ಶಿವನಿಲ್ಲದೇ ಚಿತ್ರಗಳೇ ಇಲ್ಲ ಎನ್ನುವಷ್ಟು ಶಿವ ದರ್ಶನ ಮಾಡಿದ್ದಾನೆ. ಕೆಲ ನಟರಂತೂ ಈಗಲೂ ಶಿವನಾಗಿಯೇ ಅಭಿಮಾನಿಗಳು ಹೃದಯದಲ್ಲಿ ಉಳಿದಿದ್ದಾರೆ.  ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಭಾರತೀಯ ಹಲವು ಭಾಷೆಗಳಲ್ಲಿ ಮತ್ತು ಕಿರುತೆರೆಗಳಲ್ಲೂ ಶಿವನಾಮ ಸ್ಮರಣೆ ಮಾಡುವಂತಹ ಅನೇಕ ಚಿತ್ರಗಳು ಮತ್ತು ಧಾರಾವಾಹಿಗಳು ತೆರೆ ಕಂಡಿವೆ. ಮಹಾ ಶಿವರಾತ್ರಿ ದಿನದಂದು ಆ ಚಿತ್ರಗಳ, ಪಾತ್ರಗಳ ಒಂದು ನೋಟ. ಇದನ್ನೂ ಓದಿ : ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ

    ಪೌರಾಣಿಕ ಸಿನಿಮಾಗಳನ್ನು ಮಾಡುವಾಗ, ಅದರಲ್ಲೂ ವಿಶೇಷವಾಗಿ ಪುರಾಣ ಪ್ರಸಂಗಗಳನ್ನು ಆಧರಿಸಿ ಚಿತ್ರಗಳನ್ನು ಮಾಡುವಾಗ ಅಲ್ಲಿ ಶಿವನಿರಲೇಬೇಕು. ಹಾಗಾಗಿ ಕೈಲಾಸ ವಾಸ ಶಿವನಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ. ಬೇಡರ ಕಣ್ಣಪ್ಪ ಸಿನಿಮಾದಿಂದ ಶಿವನಿಗೆ ಮತ್ತಷ್ಟು ಬೇಡಿಕೆಯೂ ಹೆಚ್ಚಾಗಿದೆ.

    ಭೂ ಕೈಲಾಸ, ಭಕ್ತ ಸಿರಿಯಾಳ, ಗಿರಿಜಾ ಕಲ್ಯಾಣ, ಗಂಗೆ ಗೌರಿ, ಭಕ್ತ ಮಾರ್ಕಂಡೇಯ, ಸ್ವರ್ಣಗೌರಿ, ಶಿವ ಕೊಟ್ಟ ಸೌಭಾಗ್ಯ, ಭಕ್ತ ಮಲ್ಲಿಕಾರ್ಜುನ, ಶ್ರೀ ಮಂಜುನಾಥ, ಶಿವ ಮೆಚ್ಚಿದ ಕಣ್ಣಪ್ಪ, ಪಾರ್ವತಿ ಕಲ್ಯಾಣ ಹೀಗೆ ಶಿವನ ಕುರಿತಾಗಿ ಸಾಮಾಜಿಕ, ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳು ತೆರೆ ಕಂಡಿವೆ. ಪಿ.ಆರ್. ಕೌಂಡಿನ್ಯ ನಿರ್ದೇಶನದಲ್ಲಿ ಮೂಡಿ ಬಂದ ಶಿವರಾತ್ರಿ ಮಹಾತ್ಮೆಯಂತೂ ಶಿವನ ನಾನಾ ಅವತಾರಗಳನ್ನು ತೋರಿಸುವ ಮೂಲಕ ಜನಪ್ರಿಯತೆ ಪಡೆಯಿತು.

    ಇವರು ಶಿವನ ಪಾತ್ರಧಾರಿಗಳು :

    1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ರಾಮಚಂದ್ರ ಶಾಸ್ತ್ರಿಗಳು ಶಿವನ ಪಾತ್ರ ಮಾಡಿದ್ದರು. ನಂತರ 1967ರಲ್ಲಿ ತೆರೆಕಂಡ ಪಾರ್ವತಿ ಕಲ್ಯಾಣ ಚಿತ್ರದಲ್ಲಿ ರಾಜ್ ಕುಮಾರ್ ಶಿವನಾಗಿ ಭಕ್ತರನ್ನು ಆವರಿಸಿಕೊಂಡ ರೀತಿ ಬಣ್ಣಿಸಲೆಸದಳ.

    1973ರಲ್ಲಿ ಬಿಡುಗಡೆಯಾದ ದೂರದ ಬೆಟ್ಟ ಚಿತ್ರದಲ್ಲಿ ಉದಯ ಶಂಕರ್, 1981ರಲ್ಲಿ ರಿಲೀಸ್ ಆದ ಗುರು ಶಿಷ್ಯರು ಚಿತ್ರದಲ್ಲಿ ಶ್ರೀನಿವಾಸ್ ಮೂರ್ತಿ, 1983ರಲ್ಲಿ ತೆರೆಗೆ ಬಂದ ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ಅಶೋಕ್, 1988ರಲ್ಲಿ ಬಿಡುಗಡೆಯಾದ ಶಿವ ಮೆಚ್ಚಿದ ಕಣ್ಣಪ್ಪ ಚಿತ್ರದಲ್ಲಿ ರಾಜಕುಮಾರ್, ಶಬರಿ ಮಲೆ ಸ್ವಾಮಿ ಅಯ್ಯಪ್ಪ, ಕೊಲ್ಲೂರು ಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ ಹಾಗೂ ಬಾಲ ಶಿವ ಚಿತ್ರದಲ್ಲಿ ಶ್ರೀಧರ್, ಪ್ರಚಂಡ ಕುಳ್ಳ ಚಿತ್ರದಲ್ಲಿ ವಿಷ್ಣುವರ್ಧನ್, ಶ್ರೀಮಂಜುನಾಥ ಸಿನಿಮಾದಲ್ಲಿ ತೆಲುಗು ನಟ ಚಿರಂಜೀವಿ ಶಿವನ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ಶಿವನೇ ಆಗಿದ್ದಾರೆ.

    ‘ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲವಯ್ಯ..’ ಎಂದು ವಚನಗಳು ಸಾರಿದ್ದರೂ, ನಾದದಲ್ಲಿಯೂ ಶಿವನನ್ನು ಕಂಡಿದ್ದಾರೆ ಚಿತ್ರಪ್ರೇಮಿಗಳು.

    ಬೇಡರ ಕಣ್ಣಪ್ಪ  ಸಿನಿಮಾದ ‘ಶಿವಪ್ಪ ಕಾಯೋ ತಂದೆ’ ಹಾಡಂತೂ ನಿತ್ಯಮಂತ್ರದಂತೆ ಕೇಳುತ್ತಲೇ ಇರುತ್ತದೆ. ಭೂಮಿಗೆ ಬಂದ ಭಗವಂತ ಸಿನಿಮಾದ ‘ಶಿವ ಶಿವ ಎಂದರೆ ಭಯವಿಲ್ಲ’, ಹಾಲುಂಡ ತವರು ಸಿನಿಮಾದ ‘ಏಳು ಶಿವ, ಏಳು ಶಿವ’, ಭಕ್ತ ಸಿರಿಯಾಳ ಸಿನಿಮಾದ ‘ಏಕೋ ಈ ಕೋಪ ಶಂಕರಾ’, ಚೆಲ್ಲಿದ ರಕ್ತ ಸಿನಿಮಾದ ಶಿವನೊಲಿದರೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪೆಂಟಗನ್ ಚಿತ್ರದ ‘ಕಾಯೋ ಶಿವ ಕಾಪಾಡೋ ಶಿವ’ ಹೀಗೆ ನೂರಾರು ಹಾಡುಗಳು ಶಿವನ ಕುರಿತಾಗಿಯೇ ಸಿನಿಮಾದಲ್ಲಿ ಬಂದಿವೆ.

    ಧಾರಾವಾಹಿಗಳಲ್ಲೂ ನಾನಾ ನಟರು ಶಿವನ ಪಾತ್ರ ಮಾಡಿದ್ದಾರೆ. ಅದರಲ್ಲೂ ಹರಹರ ಮಹಾದೇವ ಧಾರಾವಾಹಿಯ ನಟ ವಿನಯ್ ಗೌಡ, ಕಿರುತೆರೆಯಲ್ಲೇ ನಾಲ್ಕನೇ ಬಾರಿಗೆ ನಾನಾ ಧಾರಾವಾಹಿಗಳಲ್ಲಿ ಶಿವನ ಪಾತ್ರ ಮಾಡಿ ಫೇಮಸ್ ಆಗಿದ್ದಾರೆ. ಒಂದು ರೀತಿಯಲ್ಲಿ ಶಿವನ ಪಾತ್ರ ಅಂದಾಕ್ಷಣ ಅವರೇ ನೆನಪಾಗುವಷ್ಟು ಶಿವನಾಗಿ ಅವರು ಜನರ ಮನಸ್ಸನ್ನು ಆವರಿಸಿಕೊಂಡಿದ್ದಾರೆ.

    ಫೋಟೋ ಕೃಪೆ : ಪ್ರಗತಿ ಅಶ್ವತ್ಥನಾರಾಯಣ್

  • ಇತಿಹಾಸ ಪ್ರಸಿದ್ಧ ತುಂಬಿದ ಕೆರೆಗೆ ಬಾಗಿನ ಸಮರ್ಪಿಸಿದ ಹಿರೇಮಠದ ಶ್ರೀ

    ಇತಿಹಾಸ ಪ್ರಸಿದ್ಧ ತುಂಬಿದ ಕೆರೆಗೆ ಬಾಗಿನ ಸಮರ್ಪಿಸಿದ ಹಿರೇಮಠದ ಶ್ರೀ

    ಬೆಂಗಳೂರು/ನೆಲಮಂಗಲ: ಸುಮಾರು 1980 ರಲ್ಲಿ ನಿರ್ಮಾಣವಾದ ಸಣ್ಣ ನೀರಾವರಿ ಕೆರೆ ಇಂದು ಪ್ರವಾಸಿಗರ ನೆಚ್ಚಿನ ತಾಣ, ಜೊತೆಗೆ ಹಲವಾರು ಮುಖಂಡರು ಸೇರಿ ತುಂಬಿದ ಕೆರೆಗೆ ಪಕ್ಷಾತೀತವಾಗಿ ಬಾಗಿನ ಸಮರ್ಪಿಸಿದ್ದಾರೆ.

    halenijagal lake

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಹೋಬಳಿಯ ಹಳೇನಿಜಗಲ್ ಕೆರೆಗೆ ತುಮಕೂರಿನ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಬಾಗಿನ ಅರ್ಪಿಸಿದರು, ಬಳಿಕ ಇದೇ ವೇಳೆ ಮಾತನಾಡಿದ ಅವರು, ಕಲ್ಲಿನ ಬಂಡೆಗಳ ನಡುವೆ ಬೆಟ್ಟದಿಂದ ಬರುವ ನೀರು ಕೆರೆಗೆ ಆಧಾರವಾಗಿದ್ದು, ಸುಮಾರು 50 ಎಕರೆ ಒಳಗೊಂಡಿದೆ. ಇಂದಿನ ಯುವ ಜನತೆ ವ್ಯಸನಗಳಿಗೆ ದಾಸರಾಗಬಾರದು. ಪೋಷಕರು ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ಮುಕ್ತವಾಗಿ ಬಿಡಬೇಕು. ಆದರೆ ಯುವಕರು ಮೈಸೂರಿನಲ್ಲಿ ಆದ ದುರ್ಘಟನೆಯಿಂದ ದೂರ ಇರಬೇಕು. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರ ಕಲಿಯಬೇಕು ಎಂದಿದ್ದಾರೆ. ಇದನ್ನೂ ಓದಿ:ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    halenijagal lake

    ನಂತರ ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಕೆರೆಯ ಬಗ್ಗೆ ಮಾತನಾಡಿ, ಈ ಕೆರೆ ಉದ್ದಾನ ವೀರಭದ್ರಸ್ವಾಮಿ ತಪೋಗೈದ ಭೂಮಿಯಾಗಿದೆ. ಯಡಿಯೂರು ಸಿದ್ದಲಿಂಗೇಶ್ವರರ ವರಪ್ರಸಾದವಾಗಿದ್ದು, ಕೋಡಿ ಬಸವಣ್ಣ ಎಂದೇ ಹೆಸರಾಗಿದೆ. ಕೆರೆ ಪ್ರತಿ ವರ್ಷ ನೆಲಮಂಗಲ ತಾಲೂಕಿನಲ್ಲೇ ಮೊದಲ ಕೆರೆಯಾಗಿ ತುಂಬುತ್ತಿದೆ, ಈ ಕೆರೆ ನೋಡಲು ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಪ್ರವಾಸಿಗರು ಮೈಮರೆತು, ಸೆಲ್ಫಿ ಕ್ರೇಜ್ ನಿಂದ ನಾಲ್ಕು ಮಂದಿ ಕಾಲೇಜು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಕೆರೆಗೆ ಸುತ್ತಲು ತಂತಿಬೇಲಿ ಹಾಕಬೇಕು, ರಸ್ತೆ ಮಾಡಬೇಕು ಎಂಬ ಒತ್ತಾಯವನ್ನು ಇಲಾಖೆ ಮತ್ತು ವಿಧಾನಮಂಡಲದಲ್ಲಿ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಬೈಕ್ ಚಲಾಯಿಸಿ ಅಪಘಾತ -ಯುವಕ ಸಾವು

    halenijagal lake

    ಈ ವೇಳೆಯಲ್ಲಿ ಅಗಳಕುಪ್ಪೆ ಗ್ರಾ.ಪಂ.ಉಪಾಧ್ಯಕ್ಷೆ ಪುಷ್ಪಕಲಾ ಶ್ರೀನಿವಾಸ್, ಸದಸ್ಯರಾದ ಶೋಭಾ ಗಂಗರಾಜು, ಚೈತ್ರ ಮಹೇಶ್, ಮುಖಂಡರಾದ ಮೋಹನ್ ಕುಮಾರ್, ಮಾಚನಹಳ್ಳಿ ಜಯಣ್ಣ, ಊರಿನ ಮುಖಂಡರಾದ ರವಿಕುಮಾರ್, ಕೆಂಪಣ್ಣ, ಕರವೇ ಮಂಜುನಾಥ್, ಇನ್ನಿತರು ಉಪಸ್ಥಿತರಿದ್ದರು.

  • ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ: ಸುರೇಶ್ ಕುಮಾರ್

    ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ: ಸುರೇಶ್ ಕುಮಾರ್

    ಬೆಂಗಳೂರು: ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.

    2006 ರಲ್ಲಿ ಟೆಂಟ್ ಶಾಲೆಯಾಗಿ ಪ್ರಾರಂಭವಾದ, ಬೆಂಗಳೂರು ಹೊರವಲಯ ನೆಲಮಂಗಲದ ಅಂಬೇಡ್ಕರ್ ನಗರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ನೂತನ ಶಾಲೆಯನ್ನು ಉದ್ಘಾಟಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಖಾಸಗಿ ಶಾಲಾ ಕಾಲೇಜುಗಳ ಶುಲ್ಕ ನಿಗದಿ ವಿಚಾರ ಚರ್ಚೆಯಲ್ಲಿದೆ. ಮೊನ್ನೆ ಆಯುಕ್ತರ ಸಭೆ ನಡೆದಿದೆ ಅವರು ವಿವರ ಕೊಡುತ್ತಾರೆ. ಪೋಷಕರಿಗೆ ಯಾವುದೇ ಹೊರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗುವಂತೆ ಹಾಗೂ ಪೋಷಕರಿಗೆ ಮತ್ತು ಖಾಸಗಿ ಶಾಲೆಗಳಿಗೆ ಇಬ್ಬರಿಗೂ ಬ್ಯಾಲೆನ್ಸ್ ಮಾಡುವಂತೆ ನಿರ್ಧಾರ ಕೈಗೊಳ್ಳುಲಾಗುತ್ತದೆ. ರಾಜ್ಯದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಪ್ರದೇಶಕ್ಕೂ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.

    ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು, ಧ್ವಜ ಸ್ತಂಭ, ಅಂಗನವಾಡಿ ಕಟ್ಟಡಗಳ ಉದ್ಘಾಟನೆ ಮಾಡಿದ ಸಚಿವರು ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕ ಶ್ರೀನಿವಾಸಮೂರ್ತಿ, ಮಾಜಿ ಶಾಸಕ ನಾಗರಾಜು, ಡಿಡಿಪಿಐ ಗಂಗಮಾರೇಗೌಡ ಸೇರಿದಂತೆ, ಇನ್ನಿತರ ಗಣ್ಯರು ಭಾಗಿಯಾಗಿದ್ದರು.