Tag: srinivas

  • ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತ ಸುಮಯಾ ಕುಟುಂಬಕ್ಕೆ 5 ಲಕ್ಷ ಚೆಕ್‌ ವಿತರಣೆ

    ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ (District Hospital) ಸಿಸೇರಿಯನ್‌ (Cesarean) ಬಳಿಕ ಸಾವನ್ನಪ್ಪಿದ ಬಾಣಂತಿ ಸುಮಯಾ ಅವರ ಕುಟುಂಬಸ್ಥರಿಗೆ ಶಾಸಕ ಡಾ. ಶ್ರೀನಿವಾಸ್‌ (Dr Srinivas) ಅವರು ಸರ್ಕಾರದ 5 ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದ್ದಾರೆ.

    ಸಿಸೇರಿಯನ್ ಬಳಿಕ ಐವರು ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಇದೇ ವೇಳೆ ಜಿಲ್ಲಾಸ್ಪತ್ರೆಯಲ್ಲಿ ನ.10ರಂದು ಹೆರಿಗೆ ಮಾಡಿಸಿಕೊಂಡಿದ್ದ ಕೂಡ್ಲಿಗಿಯ ಸುಮಯಾ, ಹೆರಿಗೆ ಬಳಿಕ ಅಂಗಾಂಗ ವೈಫಲ್ಯದಿಂದ ಬಳಲಿ ಡಿ. 5 ರಂದು ಮೃತಪಟ್ಟಿದ್ದರು. ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಗೆ ಗರ್ಭಿಣಿಯರ ಹಿಂದೇಟು – ದಾಖಲಾತಿ ಪ್ರಮಾಣ ಅರ್ಧಕರ್ಧ ಇಳಿಕೆ

    ಭಾನುವಾರ ಮೃತ ಬಾಣಂತಿ ಸುಮಯಾ ಕುಟುಂಬಸ್ಥರಿಗೆ ಕುಡ್ಲಿಗಿ ಶಾಸಕ ಡಾ. ಎನ್ ಟಿ ಶ್ರೀನಿವಾಸ್‌ ಅವರು 5 ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು.

    ಚೆಕ್ ನೀಡಿ, ಮಗುವಿನ ಆರೋಗ್ಯ ವಿಚಾರಿಸಿದ ಶಾಸಕ ಡಾ. ಎನ್ ಟಿ ಶ್ರೀನಿವಾಸ್, ಮಗುವಿನ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಕುಟುಂಬಸ್ಥರಿಗೆ ಹೇಳಿದರು.

     

  • ಡಿಟೆಕ್ಟಿವ್ ಗಜವದನ ಚಿತ್ರಕ್ಕೆ ಮುಹೂರ್ತ

    ಡಿಟೆಕ್ಟಿವ್ ಗಜವದನ ಚಿತ್ರಕ್ಕೆ ಮುಹೂರ್ತ

    ಹಿಂದೆ ‘ಮಂಡ್ಯದ ಹುಡುಗರು’, ‘ಗರ್ನಲ್’ ಚಿತ್ರಗಳನ್ನು ನಿರ್ದೇಶಿಸಿದ್ದ ಜೆ‌.ಜೆ.ಶ್ರೀನಿವಾಸ್  (Srinivas)ನಿರ್ದೇಶಿಸಿ ಹಾಗೂ ನಿರ್ಮಾಣವನ್ನು ಮಾಡುತ್ತಿರುವ ‘ಡಿಟೆಕ್ಟಿವ್‌ ಗಜವದನ’ (Detective Gajavadana)ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಇಟ್ಟಮಡುವಿನ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಕಲಾವಿದನಾಗಿ ಸಕ್ರಿಯರಾಗಿರುವ ಬಸು ಕುಮಾರ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ಮಾಹಿತಿ ನೀಡಿದರು.

    ಇದು ನನ್ನ ನಿರ್ದೇಶನದ ಮೂರನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಜೆ‌.ಜೆ ಶ್ರೀನಿವಾಸ್, ಡಿಟೆಕ್ಟಿವ್‌ ಗಜವದನ ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ  ಬೆಂಗಳೂರಿನಲ್ಲೇ ಹೆಚ್ಚು ಚಿತ್ರೀಕರಣ ನಡೆಯಲಿದೆ. ಕುಟುಂಬ ಸಮೇತ ನೋಡಬಹುದಾದ ಚಿತ್ರ ಇದಾಗಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬರುವ ಭರವಸೆಯಿದೆ ಎಂದರು.

    ನಾನು ಡಿಟೆಕ್ಟಿವ್‌ ಗಜವದನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ‌.  ನಾನು ಚಿತ್ರದಲ್ಲಿ ಡಿಟೆಕ್ಟಿವ್‌ಆಗಿರುವುದಿಲ್ಲ. ನನ್ನ ಕುಟುಂಬ ತೊಂದರೆಯಲ್ಲಿ ಸಿಲುಕಿದಾಗ ಡಿಟೆಕ್ಟಿವ್‌ ಆಗುತ್ತೇನೆ. ಕಥೆಯೇ ಚಿತ್ರದ ನಿಜವಾದ ಹೀರೋ ಎನ್ನಬಹುದು. ಚಂದನ ರಾಘವೇಂದ್ರ, ಎಂ.ಎಸ್ ಉಮೇಶ್, ವಿಜಯ್ ಚೆಂಡೂರ್, ದಿನೇಶ್ ಮಂಗಳೂರು, ವಿಕ್ರಮ್, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಎ.ಟಿ.ಸಂಗೀತ ನಿರ್ದೇಶನ, ಶ್ಯಾಮ್ ಛಾಯಾಗ್ರಹಣ ಹಾಗೂ ನಾಗೇಂದ್ರ ಅರಸ್ ಅವರ ಸಂಕಲನ‌ವಿರುವ ಈ ಚಿತ್ರಕ್ಕೆ ನಾನು ಸೇರಿದಂತೆ ಸಾಕಷ್ಟು ನಿರ್ಮಾಪಕರು ಕೈ ಜೋಡಿಸಿದ್ದಾರೆ. ಜಗದೀಶ್ ನಿಡವಳ್ಳಿ ಕಥೆ ಬರೆದಿದ್ದಾರೆ ಎಂದು ನಟ ಬಸು ಕುಮಾರ್ ತಿಳಿಸಿದರು.

    ಶ್ರೀನಿವಾಸ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಟಿ ಚಂದನ ರಾಘವೇಂದ್ರ. ಕಲಾವಿದರಾದ ಎಂ.ಎಸ್.ಉಮೇಶ್, ವಿಜಯ್ ಚೆಂಡೂರ್, ವಿಕ್ರಮ್ ಹಾಗೂ ಸಹ ನಿರ್ಮಾಪಕ ರಾಘವೇಂದ್ರ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕರಾದ ನಾಗೇಶ್ ಕುಮಾರ್ ಹಾಗೂ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು.

  • ‘ಧೀರ’ನಾಗಿ ತೆರೆಗೆ ಬರಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ

    ‘ಧೀರ’ನಾಗಿ ತೆರೆಗೆ ಬರಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ

    ಇಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅವರ ಹುಟ್ಟುಹಬ್ಬ. ಈ ದಿನ ಶಿವಣ್ಣ ಅಭಿನಯಿಸಲಿರುವ  ಅನೇಕ ಚಲನಚಿತ್ರಗಳ, ಸಿನಿಮಾ ಶೀರ್ಷಿಕೆಗಳ‌ ಅನೌನ್ಸ್ ಆಗಿದೆ. ಆ ಚಿತ್ರಗಳಲ್ಲಿ ‘ಧೀರ’ (Dheera) ಚಿತ್ರವೂ ಒಂದು. ಹೆಚ್.ಸಿ. ಶ್ರೀನಿವಾಸ್ (Srinivas) (ಶಿಲ್ಪ ಶ್ರೀನಿವಾಸ್) ಅರ್ಪಿಸುತ್ತಿರುವ ಈ ಚಿತ್ರವನ್ನು ಚಿಲ್ಲಿ ಫಿಲಂಸ್ ಎಂಟರ್ ಟೈನ್ ಮೆಂಟ್ ಅಡಿಯಲ್ಲಿ ಸಾಗರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ನವೀನ್ ಶೆಟ್ಟಿ  (Naveen Shetty) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌.

    ಸಿನಿಮಾ ನಟನಾಗಬೇಕೆಂಬ ಕನಸು ಹೊತ್ತು 12 ವರ್ಷಗಳ ಹಿಂದೆ ಮಲೆನಾಡಿಂದ  ಬೆಂಗಳೂರಿಗೆ ಬಂದ ನವೀನ್ ಶೆಟ್ಟಿ ಅವರು  ಎಸ್. ನಾರಾಯಣ್, ಓಂ ಪ್ರಕಾಶ್ ರಾವ್, ಗಡ್ಡ ವಿಜಿ ಅವರ ಜೊತೆ ಸಹಾಯಕನಾಗಿ ಕೆಲಸ‌ ಮಾಡಿದ್ದಾರೆ. ಇಲ್ಲಿ ಬಂದಮೇಲೆ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಹುಟ್ಟಿ ಅದರಲ್ಲೇ ಪರಿಣತಿ ಪಡೆದಿಕೊಂಡಿದ್ದಾರೆ. ನಂತರ ಓಟಿಟಿ ವೇದಿಕೆಗೆಂದೇ ‘ನಿಧಾನವಾಗಿ ಚಲಿಸಿ’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಒಮ್ಮೆ ಆ ಚಿತ್ರವನ್ನು  ವೀಕ್ಷಿಸಿದ ಶಿವಣ್ಣ  ಮೆಚ್ಚಿ ಬೆನ್ನು ತಟ್ಟಿದ್ದಾರೆ. ಅದೇ ಸಮಯದಲ್ಲಿ ತಾವು ಶಿವಣ್ಣ ಅವರಿಗೆಂದೇ  ಮಾಡಿಕೊಂಡಿದ್ದ ‘ಧೀರ’ ಕಥೆಯನ್ನು ಹೇಳಿ  ಅವರನ್ನು ಒಪ್ಪಿಸಿದ್ದಾರೆ.

     

    ತೆರೆಮೇಲೆ  ಶಿವಣ್ಣ ಅವರನ್ನು ಬೇರೆಯದೇ ರೀತಿ ತೋರಿಸ ಹೊಟಿರುವ ನವೀನ್ ಶಟ್ಟಿ, ಮಾಸ್, ಅಂಡರ್ ವರ್ಲ್ಡ್, ಮ್ಯೂಸಿಕಲ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಅನ್ನು ಈ ಚಿತ್ರದಲ್ಲಿ ಹೇಳ ಹೊರಟಿದ್ದಾರೆ. ಕಲಿಯುಗ ಕರ್ಣ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರಕ್ಕೆ ಎಂ.ಎನ್. ಕೃಪಾಕರ್ ಅವರು  ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಧೀರ ಚಿತ್ರದ ಪ್ರಿಪ್ರೊಡಕ್ಷನ್ ವರ್ಕ್ ನಡೆಯುತ್ತಿದ್ದು, ಶೀಘ್ರದಲ್ಲೇ ನಾಯಕಿ ಸೇರಿದಂತೆ ಉಳಿದ ತಾಂತ್ರಿಕ ವರ್ಗವನ್ನು ಪ್ರಕಟಿಸಲಾಗುವುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ಶಿವರಾಜ್ ಕುಮಾರ್ ಹುಟ್ಟ ಹಬ್ಬಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡ ‘ಘೋಸ್ಟ್’ ಟೀಮ್

    ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು (Birthday) ಸಂಭ್ರಮದಿಂದ ಆಚರಿಸಲು ಘೋಸ್ಟ್ ಚಿತ್ರತಂಡ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅವರು ಹುಟ್ಟ ಹಬ್ಬದ ಎರಡು ದಿನ ಮುಂಚೆಯೇ ಅಭಿಮಾನಿಗಳು ಮತ್ತು ಚಿತ್ರತಂಡ ಸರ್ವ ರೀತಿಯ ಸಿದ್ಧತೆ ನಡೆಸಿದೆ. ಜುಲೈ ೧೨ ರಂದು ಸೆಂಚುರಿಸ್ಟಾರ್ ಜನುಮದಿನ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಕಟೌಟ್ ಹಾಕಲಾಗಿದೆ. ಅಭಿಮಾನಿಗಳ ಸಂಭ್ರಮಾಚರಣೆ 2 ಕಟೌಟ್ ಗಳು ಸಾಕ್ಷಿಯಾಗಲಿವೆ.

    ಈಗಾಗಲೇ ಘೋಸ್ಟ್ ಚಿತ್ರದ ಲುಕ್ ನಲ್ಲಿ ಕಟೌಟ್ ರೆಡಿಯಾಗಿದ್ದು, ಜುಲೈ 12ಕ್ಕೆ ಶಿವರಾಜ್ ಕುಮಾರ್ ಸಿನಿಮಾ ಹಾಡುಗಳನ್ನು ಸಂತೋಷ್ ಚಿತ್ರಮಂದಿರದಲ್ಲಿ ಹಾಕಲಾಗುತ್ತದೆ ಎಂದು ತಿಳಿದು ಬಂದಿದೆ. ಅಲ್ಲದೇ ಅದೇ ಚಿತ್ರಮಂದಿರದಲ್ಲೇ ಘೋಸ್ಟ್ ಸಿನಿಮಾ ಟೀಸರ್ (Teaser) ಕೂಡ ರಿಲೀಸ್ ಆಗಿ ಪ್ರದರ್ಶನ ಆಗಲಿದೆ.  ಈಗಾಗಲೇ ಶಿವರಾಜ್‌ಕುಮಾರ್ ‘ಘೋಸ್ಟ್’ (Ghost) ಸಿನಿಮಾದ ಬಿಗ್ ಡ್ಯಾಡಿ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಘೋಸ್ಟ್ ಸಿನಿಮಾ ನಿರ್ದೇಶಕ ಶ್ರೀನಿ (ಜುಲೈ 9) ಅವರ ಹುಟ್ಟುಹಬ್ಬದಂದು ಶಿವಣ್ಣ ಫ್ಯಾನ್ಸ್ ಹ್ಯಾಪಿ ನ್ಯೂಸ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಶಿವರಾಜ್‌ಕುಮಾರ್ (Shivarajkumar) ಅವರು ಕನ್ನಡ ಸಿನಿಮಾಗಳ ಜೊತೆ ಪರಭಾಷೆಯ ಸಿನಿಮಾಗಳಲ್ಲೂ ಮಿಂಚ್ತಿದ್ದಾರೆ. ಕೈತುಂಬಾ ಸಿನಿಮಾಗಳಿವೆ. ಸದ್ಯ ಘೋಸ್ಟ್ ಸಿನಿಮಾದ ಲುಕ್‌ನಿಂದ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಬಿಗ್ ಡ್ಯಾಡಿ ಎಂಬ ಪೋಸ್ಟರ್ ಲುಕ್‌ನಿಂದ ಶಿವಣ್ಣ ಕಿಕ್ ಕೊಡ್ತಿದ್ದಾರೆ. ಅದರ ಜೊತೆಗೆ ಈ ಬಿಗ್ ಡ್ಯಾಡಿ ಅಂದರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೌತುಕ ಮೂಡುವ ಹಾಗೇ ಮಾಡಿದ್ದಾರೆ. ಇದನ್ನೂ ಓದಿ:‘ರಂಗಬಲಿ’ ಸಕ್ಸಸ್ ಮೀಟ್‌ನಿಂದ ನಾಗ ಶೌರ್ಯ ವಾಕ್ ಔಟ್

    ಇದೇ ಜುಲೈ 12ರಂದು ಎನರ್ಜಿಟಿಕ್ ಹೀರೋ ಶಿವಣ್ಣ ಅವರ ಜನ್ಮದಿನ. ಪ್ರತಿ ವರ್ಷದಂತೆ ಈ ಬಾರಿ ಕೂಡ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಲಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ‘ಘೋಸ್ಟ್’ ಸಿನಿಮಾ ತಂಡದಿಂದ ‘ಬಿಗ್ ಡ್ಯಾಡಿ’ ವೀಡಿಯೋ ರಿಲೀಸ್ ಆಗಲಿದೆ. ಅಂದು ಬೆಳಗ್ಗೆ 11.45ಕ್ಕೆ ಬಿಗ್ ಡ್ಯಾಡಿ ಪರಿಚಯ ಆಗಲಿದೆ. ಈ ಮೂಲಕ ಬಿಗ್ ಡ್ಯಾಡಿ ಅಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

     

    ಈ ಪೋಸ್ಟರ್‌ನಲ್ಲಿ ಶಿವಣ್ಣ ಅವರು ರೈಫಲ್ ಹಿಡಿದು ನಿಂತಿದ್ದಾರೆ. ಈ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ನಿರ್ದೇಶಕ ಎಂ.ಜಿ. ಶ್ರೀನಿವಾಸ್ (Director Shrinivas) ಅವರ ಬರ್ತ್‌ಡೇಯಂದು ಪೋಸ್ಟರ್ ರಿವೀಲ್ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಕನ್ನಡ ಚಿತ್ರರಂಗದಲ್ಲಿ ಶ್ರೀನಿ ಅವರು ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ‘ಘೋಸ್ಟ್’ ಚಿತ್ರದಲ್ಲಿ ಅವರು ಶಿವಣ್ಣ ಜೊತೆ ಕೈ ಜೋಡಿಸಿರುವುದರಿಂದ ಹೈಪ್ ಹೆಚ್ಚಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ವುಡ್’ ಎನ್ನುವ ಕೆಟಗರಿಯನ್ನೇ ಬಾಯ್ಕಾಟ್ ಮಾಡಿ : ನಟ ಅನುಪಮ್ ಖೇರ್

    ‘ವುಡ್’ ಎನ್ನುವ ಕೆಟಗರಿಯನ್ನೇ ಬಾಯ್ಕಾಟ್ ಮಾಡಿ : ನಟ ಅನುಪಮ್ ಖೇರ್

    ನ್ನಡ ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದಂತೆಯೇ ಬಾಲಿವುಡ್ ನಟ ನಟಿಯರ ವರಸೆಯೇ ಬದಲಾಗಿದೆ. ಭಾರತೀಯ ಸಿನಿಮಾ ರಂಗವೆಂದರೆ ಅದು ಕೇವಲ ಬಾಲಿವುಡ್ ಎನ್ನುತ್ತಿದ್ದವರು ಇದೀಗ ತಮ್ಮ ಮಾತಿನ ಧಾಟಿಯನ್ನೇ ಬದಲಾಯಿಸುತ್ತಿದ್ದಾರೆ. ಹಿಂದಿ ಹೊರತಾಗಿ ಉಳಿದ ಚಿತ್ರಗಳನ್ನು ಪ್ರಾದೇಶಿಕ ಸಿನಿಮಾಗಳೆಂದು ಕರೆಯುತ್ತಿದ್ದವರು ಇದೀಗ ಭಾರತೀಯ ಸಿನಿಮಾ ರಂಗ ಎಂದರೆ ಎಲ್ಲ ಚಿತ್ರರಂಗವನ್ನೂ ಒಳಗೊಂಡಿರುವಂಥದ್ದು ಎನ್ನುತ್ತಿದ್ದಾರೆ.

    ಈ ಮಾತಿಗೆ ಸಾಕ್ಷಿ ಎನ್ನುವಂತೆ ಬೆಂಗಳೂರಿಗೆ ಬಂದಿಳಿದಿರುವ ಬಾಲಿವುಡ್ ನಟ ಅನುಪಮ್ ಖೇರ್ (Anupam Kher), ‘ವುಡ್’ ಎನ್ನುವುದಕ್ಕೆ ಬಾಯ್ಕಾಟ್ ಮಾಡಿ ಎಂದು ಹೇಳಿದ್ದಾರೆ. ಘೋಸ್ಟ್ ಸಿನಿಮಾದ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದಿರುವ ಅನುಪಮ್ ಖೇರ್, ‘ಭಾರತೀಯ ಚಿತ್ರರಂಗ ಎಂದರೆ ಅಲ್ಲರನ್ನೂ ಒಳಗೊಂಡಿದ್ದು. ಇದೀಗ ವುಡ್ ಎನ್ನುವುದನ್ನೇ ಕಿತ್ತು ಹಾಕಿ. ಅದನ್ನು ಬಾಯ್ಕಾಟ್ ಮಾಡಿದರೆ, ನಾವೆಲ್ಲರೂ ಒಂದಾಗುತ್ತೇವೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಅನುಪಮ್ ಖೇರ್ ಮಾತ್ರವಲ್ಲ, ಹಿಂದಿಯ ಅನೇಕ ಕಲಾವಿದರು ಇಂತಹ ಮಾತುಗಳನ್ನು ಆಡಿದ್ದಾರೆ. ಬಾಲಿವುಡ್ ಚಿತ್ರರಂಗ ಮಕಾಡೆ ಮಲಗುತ್ತಿದ್ದಂತೆಯೇ ಈ ಮಾತು ಗಟ್ಟಿಯಾಗಿದೆ. ದಕ್ಷಿಣದ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ್ದೇ ಈ ಮಾತುಗಳ ಬದಲಾವಣೆ ಕಾರಣವಾಗಿದೆ. ಅಲ್ಲದೇ, ಅನುಪಮ್ ಖೇರ್ ಇದೀಗ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

    ಅಂದ ಹಾಗೆ ಅನುಪಮ್ ಖೇರ್ ಸದ್ಯ ಶ್ರೀನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಘೋಸ್ಟ್ (Ghost) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್ ಕುಮಾರ್ (Shivraj Kumar) ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾ ಎರಡು ಭಾಗದಲ್ಲಿ ಮೂಡಿ ಬರಲಿದೆ. ಈ ಚಿತ್ರದಲ್ಲಿ ಶಿವಣ್ಣ ಘೋಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

  • ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಹಣದ ಹೊಳೆ- ಶ್ರೀನಿವಾಸ್ ವಿರುದ್ಧ ವ್ಯಾಪಕ ಆಕ್ರೋಶ

    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಿಂದ ಹಣದ ಹೊಳೆ- ಶ್ರೀನಿವಾಸ್ ವಿರುದ್ಧ ವ್ಯಾಪಕ ಆಕ್ರೋಶ

    ನೆಲಮಂಗಲ: ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್ (Srinivas) ವಿರುದ್ಧ ಆರೋಪವೊಂದು ಕೇಳಿಬಂದಿದೆ.

    ಚುನಾವಣೆ ಸಮಯದಲ್ಲಿ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ಕಸರತ್ತಿಗೆ ಮುಂದಾಗುತ್ತಿದ್ದಾರೆ. ಅಂತೆಯೇ ಶ್ರೀನಿವಾಸ್ ಅವರು ಕೂಡ ಮತದಾರರನ್ನು ತನ್ನತ್ತ ಸೆಳೆಯಲು ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್‌ಗೆ ರಮೇಶ್ ಜಾರಕಿಹೊಳಿ ಶಾಕ್

    ನೆಲಮಂಗಲ ತಾಲೂಕಿನಲ್ಲಿ ಮತದಾರರಿಗೆ ಬೆಳಗ್ಗೆ ಕುಕ್ಕರ್ ಹಂಚಿಕೆ, ರಾತ್ರಿ ಹಣದ ಹಂಚಿಕೆ ಮಾಡುತ್ತಿದ್ದಾರೆ. ಕುಕ್ಕರ್ ಪಡೆಯಲು ಗ್ರಾಮಸ್ಥರು ಮುಗಿಬಿದ್ದಾರೆ. ಈ ಕುರಿತು ಶ್ರೀನಿವಾಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಎದ್ದಿದೆ.

    ಮತದಾರರನ್ನು ತನ್ನತ್ತ ಸೆಳೆಯಲು ಹಣ (Money) ದ ಹೊಳೆ ಹರಿಸಿರುವ ಆರೋಪ ಕೇಳಿಬಂದಿದೆ. ಹಬ್ಬದ ಉಡುಗೊರೆ ಎಂದು ಶ್ರೀನಿವಾಸ್ ಕುಕ್ಕರ್ ಹಂಚಿಕೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಮುನ್ನವೇ ಮತದಾರರಿಗೆ ವಿವಿಧ ರೀತಿಯಲ್ಲಿ ಆಮಿಷ ಒಡ್ಡಲಾಗುತ್ತಿದೆ.

    ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ವಿವಿಧ ಆಮಿಷದ ಗಿಮಿಕ್ ಗೆ ಮುಂದಾಗಿರುವ ಶ್ರೀನಿವಾಸ್ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಿಗೆ ಶಾ ಶಾಕ್‌ – ಬೆಂಗಳೂರು ಗೆಲ್ಲಲು ಬಿಗ್ ಟಾಸ್ಕ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡಕ್ಕೆ ವಿಜಯ್ ಸೇತುಪತಿ: ಇನ್ನೂ ಕನ್ಫರ್ಮ್ ಆಗಿಲ್ಲ ಅಂತಿದೆ ಟೀಮ್

    ಕನ್ನಡಕ್ಕೆ ವಿಜಯ್ ಸೇತುಪತಿ: ಇನ್ನೂ ಕನ್ಫರ್ಮ್ ಆಗಿಲ್ಲ ಅಂತಿದೆ ಟೀಮ್

    ಶಿವರಾಜ್ ಕುಮಾರ್ (Shivraj Kumar) ಮತ್ತು ಶ್ರೀನಿ (Srinivas) ಕಾಂಬಿನೇಷನ್ ನ ‘ಘೋಸ್ಟ್’ (Ghost) ಸಿನಿಮಾ ಕುರಿತಾಗಿ ದಿನಕ್ಕೊಂದು ಸುದ್ದಿ ಹೊರ ಬೀಳುತ್ತಿವೆ. ಮೊನ್ನೆಯಷ್ಟೇ ಬಾಲಿವುಡ್ ನಟ ಅನುಪಮ್ ಖೇರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮತ್ತೋರ್ವ ಹೆಸರಾಂತ ನಟನ ಹೆಸರು ತೇಲಿಬಂದಿದ್ದು, ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಕೂಡ ಘೋಸ್ಟ್ ಸಿನಿಮಾದ ಭಾಗವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ತಮಿಳು, ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಬ್ಯುಸಿಯಾಗಿರುವ ವಿಜಯ್ ಸೇತುಪತಿ, ನಿಜವಾಗಿಯೂ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಾರಾ ಎನ್ನುವ ಪ್ರಶ್ನೆ ಅನೇಕರದ್ದು. ಅದಕ್ಕೆ ನಿರ್ದೇಶಕ ಶ್ರೀನಿ ಹೇಳುವುದು ಹೀಗೆ, ‘ವಿಜಯ್ ಸೇತುಪತಿ ಅವರನ್ನು ಅಪ್ರೋಚ್ ಮಾಡಿದ್ದೇವೆ. ಅವರಿಂದ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ. ಈ ಮೂಲಕ ತಾವು ವಿಜಯ್ ಸೇತುಪತಿ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಮಾಡಿದ್ದೇವೆ ಎಂದು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಸಿಹಿ ಸುದ್ದಿ ಕೊಡಲು ಸಜ್ಜಾದ್ರಾ ನಟ ಸಿದ್ಧಾರ್ಥ್- ಅದಿತಿ ರಾವ್‌ ಹೈದರಿ?

    ಈಗಾಗಲೇ ಎರಡು ಹಂತದ ಚಿತ್ರೀಕರಣವನ್ನು ಮುಗಿಸಿರುವ ಶ್ರೀನಿ, ಮೂರನೇ ಹಂತದ ಶೂಟಿಂಗ್ ಅನ್ನು ಫೆ.10 ರಿಂದ ಬೆಂಗಳೂರಿನಲ್ಲೇ ಆರಂಭಿಸಲಿದ್ದಾರೆ. ಈ ಹಂತದ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್, ಅರ್ಚನಾ ಜೋಯಿಸ್ ಸೇರಿದಂತೆ ಹಲವರು ಇರಲಿದ್ದಾರೆ. ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರ ಇದಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗುಬ್ಬಿಯಲ್ಲಿ ಜೋರಾಯ್ತು ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ- 10 ಜನರ ವಿರುದ್ಧ FIR

    ಗುಬ್ಬಿಯಲ್ಲಿ ಜೋರಾಯ್ತು ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ- 10 ಜನರ ವಿರುದ್ಧ FIR

    ತುಮಕೂರು : ಜೆಡಿಎಸ್‌ (JDS) ಕಾರ್ಯಕರ್ತರು ಹಾಗೂ ಶಾಸಕ ಶ್ರೀನಿವಾಸ್‌ (Srinivas) ಅಭಿಮಾನಿಗಳ ನಡುವೆ ನಡೆದ ನಿಂದನೆ, ಆರೋಪ, ಪ್ರತ್ಯಾರೋಪಗಳ ಬೆನ್ನಲ್ಲೇ 10 ಜನರ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

    ವಿಧಾನಸಭಾ ಕ್ಷೇತ್ರದ ಚುನಾವಣೆ (Election) ಹತ್ತಿರವಾಗುತ್ತಿದ್ದಂತೆ ರಾಜಕೀಯ ಕೆಸರೆರಚಾಟ ಹೆಚ್ಚಾಗುತ್ತಿದೆ. ಗುಬ್ಬಿ ಕ್ಷೇತ್ರದಲ್ಲಿ ಆಕಾಂಕ್ಷಿಗಳಿಗಿಂತ ಅಭಿಮಾನಿಗಳ ರಾಜಕೀಯ ಕೆಸರೆರಚಾಟ ಜೋರಾಗಿದೆ. ಕಳೆದ 2 ದಿನಗಳಿಂದಲೂ ಜೆಡಿಎಸ್‌‌ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕ ಶ್ರೀನಿವಾಸ್‌ನ ಅಭಿಮಾನಿಗಳು ರಾಜಕೀಯ ವಾಕ್ಸಮರಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಸಕಲೇಶಪುರ ವಲಯ ಅರಣ್ಯಾಧಿಕಾರಿ ಶಿಲ್ಪಾ ಎಸ್.ಎಲ್ ಅಮಾನತು

    ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಂಡು ನಿಂದಿಸಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್‌ನ ಕಾರ್ಯಕರ್ತರು ಹಾಗೂ ಶ್ರೀನಿವಾಸ್‌ನ ಅಭಿಮಾನಿಗಳು ಸೇರಿ ಒಟ್ಟು 10 ಮಂದಿಯ ಮೇಲೆ ಗುಬ್ಬಿ (Gubbi) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ನಡುವೆ ಜೆಡಿಎಸ್‌ ಕಾರ್ಯಕರ್ತರ ರಕ್ಷಣೆಗೆ ತೆರೆಮರೆಯಲ್ಲಿ ಜೆಡಿಎಸ್‌ ಪಕ್ಷದ ಆಕಾಂಕ್ಷಿ ನಾಗರಾಜು ನಿಂತರೆ, ಶ್ರೀನಿವಾಸ್‌ ಅಭಿಮಾನಿಗಳ ಪರ ಶ್ರೀನಿವಾಸ್‌ ಪರೋಕ್ಷ ಬೆಂಬಲಕ್ಕೆ ನಿಂತಿದ್ದಾರೆ. ಇದನ್ನೂ ಓದಿ: ಟೀ, ಸಿಗರೇಟ್‍ಗೆ ಸಾಲ ಕೊಡಲಿಲ್ಲವೆಂದು ಬಡ ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ: ನಾವೂ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದ ನಟಿ

    ನಟಿ ಅಭಿನಯಗೆ 2 ವರ್ಷ ಜೈಲು ಶಿಕ್ಷೆ: ನಾವೂ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದ ನಟಿ

    ತ್ತಿಗೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ನಡೆಸಿದ್ದಾರೆ ಎನ್ನುವ ಕಾರಣಕ್ಕಾಗಿ ನಟಿ ಅಭಿನಯಗೆ ನಿನ್ನೆಯಷ್ಟೇ ಹೈಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಭಿನಯ ಅವರ ಸಹೋದರನ ಪತ್ನಿ ಲಕ್ಷ್ಮಿದೇವಿ ಅನ್ನುವವರು ಅಭಿನಯ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ವಿಚಾರಣೆ ನಡೆಸಿದ ಹೈಕೋರ್ಟ್ ಅಭಿನಯ ಅವರಿಗೆ 2 ವರ್ಷ ಮತ್ತು ಅವರ ತಾಯಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಭಿನಯ, ‘ಇದು ಇಪ್ಪತ್ತು ವರ್ಷದ ಕೇಸು. ಕಳೆದ ಬಾರಿ ತೀರ್ಪು ನಮ್ಮಂತೆ ಆಗಿತ್ತು. ಇದೀಗ ಅವರಂತೆ ಆಗಿದೆ. ನಾವು ಕಾನೂನು ಸಮರವನ್ನು ಮುಂದುವರೆಸುತ್ತೇವೆ. ಲಕ್ಷ್ಮಿದೇವಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾನೂನು ಹೋರಾಟ ಮುಂದುವರೆಯುತ್ತದೆ, ಮುಂದೇನಾಗತ್ತೋ ನೋಡೋಣ’ ಎಂದಿದ್ದಾರೆ. ಅತ್ತಿಗೆ ಮಾಡಿರುವ ಎಲ್ಲ ಆರೋಪಗಳನ್ನೂ ಈ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದ್ದಾರೆ.  ಇದನ್ನೂ ಓದಿ: ಜಗ್ಗೇಶ್ ನಟನೆ `ರಾಘವೇಂದ್ರ ಸ್ಟೋರ್ಸ್’ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಸಂತೋಷ್‌ ಆನಂದ್‌ರಾಮ್

    ಏನಿದು ಪ್ರಕರಣ? : ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದರು ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು‌ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ  2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು. 1998 ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆ ವೇಳೆ ಶ್ರೀನಿವಾಸ್ ಅವರು 80 ಸಾವಿರ ನಗದು, 250 ಗ್ರಾಂ ಚಿನ್ನಭರಣ ಪಡೆದಿದ್ದರು ಎಂದು ಹೇಳಲಾಗಿತ್ತು. ನಂತರ ಮತ್ತೆ ಒಂದು ಲಕ್ಷ ಹಣ ತರುವಂತೆ ಅಭಿನಯ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿತ್ತು ಎಂದು ದೂರು ದಾಖಲಾಗಿತ್ತು.

    ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು  ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಲಕ್ಷ್ಮೀದೇವಿ. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ ಅದೇಶ.

    Live Tv
    [brid partner=56869869 player=32851 video=960834 autoplay=true]

  • ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

    ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು

    ಮ್ಮ ಕುಟುಂಬದ ಜೊತೆ ಭಾಗಿಯಾಗಿ ಸಹೋದರನ ಪತ್ನಿಗೆ ಕಿರುಕುಳ ನೀಡಿದರು ಮತ್ತು ವರದಕ್ಷಿಣಿ ತರುವಂತೆ ಪೀಡಿಸಿದರು ಎನ್ನುವ ಕಾರಣಕ್ಕಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿರುವ ಖ್ಯಾತನಟಿ ಅಭಿನಯ ಅವರ ಕುಟುಂಬದ ಕುರಿತು ಹಲವು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾರೆ. ಅಭಿನಯ ಸಹೋದರನ ಪತ್ನಿ ಲಕ್ಷ್ಮಿದೇವಿ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಅದೊಂದು ನರಕದ ಮನೆಯಾಗಿತ್ತು’ ಎಂದು ಹೇಳಿಕೊಂಡಿದ್ದಾರೆ.

    ನಾನು ಗಂಡನ ಮನೆಯಲ್ಲಿ ಇದ್ದದ್ದು ಒಂದೇ ವರ್ಷ ಮಾತ್ರ. ಎಲ್ಲ ರೀತಿಯ ನರಕವನ್ನೂ ಅನುಭವಿಸಿದೆ. ತಿನ್ನೋಕೆ ಒಂದ್ ರೊಟ್ಟಿ, ಸ್ನಾನ ಮಾಡೋಕೆ ಒಂದ್ ಬಕೆಟ್ ನೀರು ಜೊತೆಗೆ ಪರಪುರುಷನ ಜೊತೆ ಸಹಕರಿಸು ಅಂತ ಚಿತ್ರಹಿಂಸೆ ಕೊಡುತ್ತಿದ್ದರು. ಪರಪುರುಷನನ್ನು ಮನೆಗೂ ಕರೆದುಕೊಂಡು ಬರುತ್ತಿದ್ದರು. ಅಭಿನಯ ಚಿತ್ರ ನಟಿಯಾದರೂ, ಅವರು ನನ್ನ ನೆರವಿಗೆ ಬರಲಿಲ್ಲ. ಅವರೂ ಕೂಡ ಹಿಂಸೆ ಕೊಟ್ಟರು ಎಂದು ಮಾತನಾಡಿದ್ದಾರೆ ಲಕ್ಷ್ಮಿದೇವಿ. ಇದನ್ನೂ ಓದಿ: ಕೊನೆಗೂ ಹೊರಬಿತ್ತು ಕೆ.ಎಲ್ ರಾಹುಲ್ -ಅಥಿಯಾ ಮದುವೆ ಡೇಟ್

    ಏನಿದು ಪ್ರಕರಣ?
    ನಟಿ ಅಭಿನಯ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮಿದೇವಿ ಅವರಿಗೆ ವರದಕ್ಷಿಣೆ ಕಿರುಕುಳ ನೀಡಿದರು ಎನ್ನುವ ಕಾರಣಕ್ಕಾಗಿ ವರದಕ್ಷಿಣೆ ಕಿರುಕುಳ ಕೇಸಲ್ಲಿ ಜೈಲು‌ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಅಭಿನಯ ಅವರ ಅಣ್ಣನ ಪತ್ನಿ ಲಕ್ಷ್ಮಿದೇವಿ  2002 ರಲ್ಲಿ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಭಿನಯ ಸೇರಿದಂತೆ ಐವರ ಮೇಲೆ ಕೇಸ್ ದಾಖಲಾಗಿತ್ತು. 1998 ರಲ್ಲಿ ಅಭಿನಯ ಅಣ್ಣ ಶ್ರೀನಿವಾಸ್ ಜೊತೆ ಲಕ್ಷ್ಮೀದೇವಿ ವಿವಾಹವಾಗಿದ್ದರು. ಮದುವೆ ವೇಳೆ ಶ್ರೀನಿವಾಸ್ ಅವರು 80 ಸಾವಿರ ನಗದು, 250 ಗ್ರಾಂ ಚಿನ್ನಭರಣ ಪಡೆದಿದ್ದರು ಎಂದು ಹೇಳಲಾಗಿತ್ತು. ನಂತರ ಮತ್ತೆ ಒಂದು ಲಕ್ಷ ಹಣ ತರುವಂತೆ ಅಭಿನಯ ಕುಟುಂಬಸ್ಥರಿಂದ ಕಿರುಕುಳ ನೀಡಲಾಗಿತ್ತು ಎಂದು ದೂರು ದಾಖಲಾಗಿತ್ತು.

    ಹಣದ ಬೇಡಿಕೆ ಇಟ್ಟಿದ್ದ ಅಭಿನಯ ಕುಟುಂಬವು  ಲಕ್ಷ್ಮೀದೇವಿಗೆ ಕಿರುಕುಳ ನೀಡಿ ತವರು ಮನೆಗೆ ಕಳುಹಿಸಿದ್ದರು. ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಲಕ್ಷ್ಮಿದೇವಿ ದೂರು ನೀಡಿದ್ದರು. ಚಂದ್ರಾಲೇಔಟ್ ಪೊಲೀಸರ ಚಾರ್ಜ್ ಶೀಟ್ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಐವರು ಆರೋಪಿಗಳಿಗೆ 2012ರಲ್ಲಿ ತಲಾ 2 ವರ್ಷ ಶಿಕ್ಷೆ ಪ್ರಕಟ ಮಾಡಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಲಕ್ಷ್ಮೀದೇವಿ. ಪ್ರಕರಣದಲ್ಲಿ ಶ್ರೀನಿವಾಸ್, ರಾಮಕೃಷ್ಣ, ಸಾವನ್ನಪ್ಪಿದ್ದಾರೆ. ಅಭಿನಯ, ಚಲುವರಾಜ್, ಜಯಮ್ಮ ಎಂಬುವವರಿಗೆ ಎರಡು ವರ್ಷ ಜೈಲು ಶಿಕ್ಷೆ ನೀಡಿದ ಅದೇಶ.

    Live Tv
    [brid partner=56869869 player=32851 video=960834 autoplay=true]