Tag: Sringeri

  • ಶೃಂಗೇರಿ ಶಾರದಾಂಬಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಪನ್ನ

    ಶೃಂಗೇರಿ ಶಾರದಾಂಬಾ ರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಂಪನ್ನ

    ಚಿಕ್ಕಮಗಳೂರು: ಶೃಂಗೇರಿ ಶಾರದಾಂಬಾ ದೇವಾಲಯದಲ್ಲಿ (Sringeri Sharadamba Temple) ಅದ್ದೂರಿ ರಥೋತ್ಸವ ನೆರವೇರಿದೆ. ಶೃಂಗೇರಿ ಕಿರಿಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ (Adda Pallaki Utsava) ಹಾಗೂ ಶಾರದಾಂಬೆ ರಥೋತ್ಸವ ಏಕಕಾಲದಲ್ಲಿ ನಡೆಯಿತು. ಈ ಮೂಲಕ ದಸರಾ ಮಹೋತ್ಸವ ಸಂಪನ್ನಗೊಂಡಿದೆ.

     

    ರತ್ನಖಚಿತ ಕಿರೀಟ ಧರಿಸಿ, ರತ್ನಖಚಿತವಾದ ಅಡ್ಡಪಲ್ಲಕ್ಕಿಯಲ್ಲಿ ಶ್ರೀಗಳ ಮೆರವಣಿಗೆ ಮಾಡಲಾಯಿತು. 10 ದಿನಗಳಿಂದ ನಡೆಯುತ್ತಿದ್ದ ಉತ್ಸವ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಸಂಪನ್ನಗೊಂಡಿತು. ರಥೋತ್ಸವ ಹಾಗೂ ಅಡ್ಡಪಲ್ಲಕ್ಕಿ ಉತ್ಸವ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆಮೂಲೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಹಿಂದೂಗಳ ಜೊತೆ ಹಿಂದೂಗಳೇ ನಿಲ್ಲಬೇಕು – 26 ಕುಟುಂಬಕ್ಕೆ ಶೃಂಗೇರಿ ಮಠದಿಂದ 2 ಲಕ್ಷ ಪರಿಹಾರ

    ಶೃಂಗೇರಿ ಶಾರದಾಂಬಾ ಮಠದ ಆವರಣದಲ್ಲಿ ವಿಶೇಷ ಟ್ಯಾಬ್ಲೋಗಳನ್ನು ಸಹ ನಿರ್ಮಿಸಲಾಗಿತ್ತು. ಸುಂದರವಾದ ಟ್ಯಾಬ್ಲೋಗಳನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಇದನ್ನೂ ಓದಿ: 3 ತಿಂಗಳು ನನ್ನ ಮನೆಮುಂದೆ ಮಾಧ್ಯಮಗಳು ಕಾಯೋ ಹಾಗೇ ಮಾಡಿದ್ದು ಯಾರ ಪ್ರೇರಣೆಯಿಂದ – HDD ಕಿಡಿ

  • ನಾಳೆ ರಕ್ತ ಚಂದ್ರ ಗ್ರಹಣ – ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆಗೆ ನಿರಂತರ ಜಲಾಭಿಷೇಕ

    ನಾಳೆ ರಕ್ತ ಚಂದ್ರ ಗ್ರಹಣ – ಶೃಂಗೇರಿ ಶಾರದೆ, ಹೊರನಾಡು ಅನ್ನಪೂರ್ಣೆಗೆ ನಿರಂತರ ಜಲಾಭಿಷೇಕ

    – ಕಿಗ್ಗಾದ ಋಷ್ಯಶೃಂಗೇಶ್ವರ, ಕಳಸದ ಕಳಸೇಶ್ವರನಿಗೂ ವಿಶೇಷ ಪೂಜೆ

    ಚಿಕ್ಕಮಗಳೂರು: ಭಾನುವಾರ (ಸೆ.6) ನಡೆಯಲಿರುವ ರಕ್ತ ಚಂದ್ರ ಗ್ರಹಣ (Blood Moon Eclipse) ಹಿನ್ನೆಲೆ ಶೃಂಗೇರಿ ಶಾರದಾಂಭೆ (Sringeri Sharadamba Temple), ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನ (Horanadu Annapoorneshwari Temple) ಸೇರಿದಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ನಿರಂತರ ಜಲಾಭಿಷೇಕ ನೆರವೇರಲಿದೆ.

    ಶೃಂಗೇರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ. ಇದನ್ನೂ ಓದಿ: ನಾಳೆ ರಕ್ತಚಂದ್ರಗ್ರಹಣ – ಕೌತುಕದ ಬಗ್ಗೆ ವಿಜ್ಞಾನಿಗಳು ಹೇಳೋದೇನು?

    ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.

    ಕಿಗ್ಗಾದ ಋಷ್ಯಶೃಂಗೇಶ್ವರ ಹಾಗೂ ಕಳಸದ ಕಳಸೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನಡೆಯಲಿದೆ. ಪ್ರಸಾದ ಇರುವುದಿಲ್ಲ. ಗ್ರಹಣದ ವೇಳೆ ಈಶ್ವರನಿಗೆ ನಿರಂತರ ಜಲಾಭಿಷೇಕ ನಡೆಯಲಿದೆ. ನಾಲ್ಕು ಪ್ರಮುಖ ದೇವಾಲಯದಲ್ಲೂ ಗ್ರಹಣ ಆರಂಭದಿಂದ ಅಂತ್ಯದವರೆಗೆ ನಿರಂತರ ಜಲಾಭಿಷೇಕ ನಡೆಯಲಿದೆ. ಇದನ್ನೂ ಓದಿ: ಸೆ.7 ರಕ್ತಚಂದ್ರಗ್ರಹಣ – ಗರ್ಭಿಣಿಯರು ಏನು ಮಾಡಬೇಕು? ತಜ್ಞ ವೈದ್ಯರ ಸಲಹೆಗಳೇನು?

  • ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

    ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಗಾಳಿ, ಮಳೆ ಅಬ್ಬರ ಮುಂದುವರೆದಿದ್ದು, ಧಾರಾಕಾರ ಗಾಳಿ, ಮಳೆಗೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿ (Sringeri) ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ.

    ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ (Land Slide) ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆ ಮಧ್ಯೆಯೇ ರಸ್ತೆಗೆ ಉರುಳಿರುವ ಮಣ್ಣಿನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ. ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆಗಳು ಕುಸಿದು ಬಿದ್ದಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೂ ಮೂರು ದಿನಗಳವರೆಗೆ ಭಾರೀ ಮಳೆ ಮುನ್ಸೂಚನೆ

    ಮಳೆ ಜೊತೆ ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಾತ್ರಿ ಇಡೀ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಶೃಂಗೇರಿಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಇದನ್ನೂ ಓದಿ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ – ವಾಹನ ಸಂಚಾರ ಸಂಪೂರ್ಣ ಬಂದ್

    ಈ ವರ್ಷ ಜನವರಿಯಿಂದಲೂ ನಿರಂತರವಾಗಿ ಮಳೆಯಾಗಿದ್ದು, ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ. ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ಭೂಮಿ ಕುಸಿಯುವ ಆತಂಕ ಎದುರಾಗಿದ್ದು, ವಾಹನ ಚಾಲಕರು ಬದಲಿ ಮಾರ್ಗವನ್ನು ಬಳಸಬೇಕಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಮುಂದುವರೆದಿದೆ.

    ಶನಿವಾರ ಕೂಡ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಳೆ ನಿರಂತರವಾಗಿದ್ದು, ಮತ್ತಷ್ಟು ಅನಾಹುತ ಸಂಭವಿಸುವ ಆತಂಕ ಸ್ಥಳೀಯರನ್ನ ಕಾಡುತ್ತಿದೆ.

  • ವಿಜೃಂಭಣೆಯಿಂದ ನೆರವೇರಿದ ಮಳೆ ದೇವರು ಖ್ಯಾತಿಯ ಋಷ್ಯಶೃಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

    ವಿಜೃಂಭಣೆಯಿಂದ ನೆರವೇರಿದ ಮಳೆ ದೇವರು ಖ್ಯಾತಿಯ ಋಷ್ಯಶೃಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

    ಚಿಕ್ಕಮಗಳೂರು: ಮಳೆ ದೇವರೆಂದೇ ಪ್ರಸಿದ್ಧಿಯಾಗಿರುವ ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗೇಶ್ವರ ಸ್ವಾಮಿಯ ವಾರ್ಷಿಕ ಮಹಾರಥೋತ್ಸವವು (Rishyasringeshwara Maha Rathotsava) ವಿಜೃಂಭಣೆಯಿಂದ ನೆರವೇರಿದೆ.

    ಇತಿಹಾಸ ಪ್ರಸಿದ್ಧ ಈ ದೇವಸ್ಥಾನದ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಯನ್ನು ಮಳೆ ದೇವರೆಂದೆ ಸ್ಥಳೀಯರು ಹಾಗೂ ರಾಜ್ಯ-ದೇಶದಾದ್ಯಂತ ಭಕ್ತರು ನಂಬಿದ್ದಾರೆ. ಮಳೆ ಇಲ್ಲದ ಬರಗಾಲದ ಸಂದರ್ಭದಲ್ಲಿ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಮಳೆಯಾಗುವ ಪ್ರತೀತಿಯೂ ಇದೆ. ಹೀಗಾಗಿ ಪುರಾತನ ಕಾಲದಿಂದಲೂ ಎಲ್ಲಾ ಪೂಜಾ ಕಾರ್ಯಕ್ರಮಗಳು ನಡೆದುಕೊಂಡು ಬಂದಿದ್ದು ಮಹಾರಥೋತ್ಸವವೂ ನಡೆಯುತ್ತಿದೆ. ಇದನ್ನೂ ಓದಿ: ಯಡಿಯೂರು ಸಿದ್ದಲಿಂಗೇಶ್ವರ ಜಾತ್ರೆ ಸಂಪನ್ನ

    ಸೋಮವಾರ ಜಾತ್ರಾ ಧ್ವಜಾರೋಹಣ ನಡೆದಿದ್ದು ಇಂದು ಮಹಾರಥೋತ್ಸವ ನಡೆದಿದೆ. ರಥೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಧನ್ಯರಾಗಿದ್ದಾರೆ. ಜಾತ್ರಾ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆದಿದ್ದು ರಥೋತ್ಸವದ ನಂತರ ಕಿಗ್ಗಾ ಸುತ್ತಮುತ್ತಲಿನ ಊರುಗಳಲ್ಲಿ ಜಾತ್ರೆಯ ಹಬ್ಬವು ನಡೆಯಲಿದೆ. ಬೆಳಗ್ಗೆ ಸ್ವಲ್ಪ ದೂರದವರೆಗೆ ಎಳೆದ ಬ್ರಹ್ಮರಥವನ್ನು ರಾತ್ರಿ ಭಕ್ತಾಧಿಗಳು ಪೂರ್ಣವಾಗಿ ರಾಜಾಬೀದಿಗಳಲ್ಲಿ ಎಳೆದು ಸ್ವಾಮಿಯನ್ನು ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ.

    ನಂತರ ತಮ್ಮ ಮನೆಗಳಲ್ಲಿ ಹಬ್ಬದೂಟ ಮಾಡಿ ಸಂಬಂಧಿಕರು, ಸ್ನೇಹಿತರೊಡನೆ ಊಟ ಮಾಡುತ್ತಾರೆ. ಊರ ಜಾತ್ರೆಗೆ ಹೊರ ಊರಗಳಲ್ಲಿ ಕೆಲಸದ ನಿಮಿತ್ತ ನೆಲಸಿರುವ ಎಲ್ಲರೂ ಬಂದು ಊರಿನ ದೇವರ ದರ್ಶನ ಮಾಡಿ ನಮಸ್ಕರಿಸಿ ಹೋಗುವುದು ವಾಡಿಕೆ. ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿ ಸಂದರ್ಭದಲ್ಲಿ ಸರ್ಕಾರವೇ ಇಲ್ಲಿ ಪೂಜೆ ಸಲ್ಲಿಸುತ್ತದೆ. ಈ ದೇವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೆಚ್ಚಿನ ಧೈವಗಳಲ್ಲೊಂದು.  ಇದನ್ನೂ ಓದಿ: ವಕ್ಫ್ ಆಸ್ತಿಯಲ್ಲಿ ಬಡವರಿಗಾಗಿ ಶಾಲೆ, ಆಸ್ಪತ್ರೆ ಮನೆ ಕಟ್ಟಿಸ್ತೇವೆ – ಸಿಎಂ ಯೋಗಿ

  • ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್‌ ಕರೆಸಿದ ಕುಡುಕ!

    ಚಿಕ್ಕಮಗಳೂರು | ಕುಡಿದ ಮತ್ತಲ್ಲಿ ಹುಚ್ಚಾಟ – ತಮಾಷೆಗೆ 40 ಕಿಮೀ ದೂರದಿಂದ ಅಂಬುಲೆನ್ಸ್‌ ಕರೆಸಿದ ಕುಡುಕ!

    ಚಿಕ್ಕಮಗಳೂರು: ಕುಡಿದ ಮತ್ತಲ್ಲಿ ವ್ಯಕ್ತಿಯೊಬ್ಬ ಸುಮ್ಮನೆ 108ಕ್ಕೆ ಕರೆ ಮಾಡಿ, 40 ಕಿ.ಮೀ ದೂರದಿಂದ ಅಂಬುಲೆನ್ಸ್‌ (Ambulance) ಕರೆಸಿರುವುದು ಶೃಂಗೇರಿಯಲ್ಲಿ (Sringeri) ನಡೆದಿದೆ.

    ಕುಡಿದ ಮತ್ತಿನಲ್ಲಿ, ನಾನು ಆಕಾಶದ ಕೆಳಗೆ ಭೂಮಿಯ ಮೇಲೆ ಇದ್ದೀನಿ ಬೇಗ ಬನ್ನಿ, ಶೃಂಗೇರಿಯಲ್ಲಿ ಗಲಾಟೆಯಾಗಿ ತುಂಬಾ ಪೆಟ್ಟಾಗಿದೆ ಎಂದು ಅಂಬುಲೆನ್ಸ್‌ಗೆ ಕರೆ ಮಾಡಿದ್ದಾನೆ. ಇದನ್ನು ನಂಬಿದ ಅಂಬುಲೆನ್ಸ್‌ ಸಿಬ್ಬಂದಿ ಬಾಳೆಹೊನ್ನೂರಿನಿಂದ 40 ಕಿ.ಮೀ ದೂರದಿಂದ ಶೃಂಗೇರಿಗೆ ಬಂದಿದ್ದಾರೆ.

    ಈ ವೇಳೆ ಕುಡುಕ ನನಗೆ ಅಂಬುಲೆನ್ಸ್‌ ಬೇಡ, ತಾಕತ್‌ ಇದ್ರೆ ನನ್ನನ್ನ ಹಿಡಿರಿ ಎಂದು ಆಂಬುಲೆನ್ಸ್‌ ಸಿಬ್ಬಂದಿಗೆ ಅವಾಜ್‌ ಹಾಕಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಕುಡುಕನನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಬಳಿಕ ಸ್ಥಳೀಯರು ಅಲ್ಲೇ ವೈನ್‌ ಶಾಪ್‌ನಲ್ಲಿದ್ದ ಅಡಗಿಕೊಂಡಿದ್ದ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರ ಬಳಿ ಸ್ಥಳೀಯರು ಕರೆದುಕೊಂಡು ಹೋಗುತ್ತಿದ್ದಂತೆ, ಸರ್ ತಪ್ಪಾಯ್ತು ಬಿಡಿ ಸರ್ ಎಂದು ಗೋಗರೆದಿದ್ದಾನೆ.

  • ಚಿಕ್ಕಮಗಳೂರು| ತಹಶೀಲ್ದಾರ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ!

    ಚಿಕ್ಕಮಗಳೂರು| ತಹಶೀಲ್ದಾರ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ!

    ಚಿಕ್ಕಮಗಳೂರು: ತಹಶೀಲ್ದಾರ್ ಹಾಗೂ ಪೊಲೀಸರ ಎದುರೇ ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ತಾಲೂಕು ಕಾಂಗ್ರೆಸ್ (Congress) ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಫೀಕ್ ಅಹಮದ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶೃಂಗೇರಿಯಲ್ಲಿ (Sringeri) ನಡೆದಿದೆ.

    ರಫೀಕ್ ಶೃಂಗೇರಿಯಲ್ಲಿ ಕಲ್ಲಂಗಡಿ ಹಣ್ಣಿನ ಮಾರಾಟಕ್ಕಾಗಿ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. ಈ ಶೆಡ್‍ನ್ನು ತಹಶೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲು ಮುಂದಾಗಿದ್ದಾರೆ. ಈ ವೇಳೆ ಅವರ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಬಡವರು ಬದುಕಿಗಾಗಿ ಶೆಡ್ ನಿರ್ಮಿಸಿಕೊಂಡಿರುವುದೇ ಅಪರಾಧ, ದೊಡ್ಡವರು – ಶ್ರೀಮಂತರು ಕೆರೆ ಒತ್ತುವರಿ ಮಾಡಬಹುದು, ಸೊಪ್ಪಿನ ಬೆಟ್ಟವನ್ನೂ ಒತ್ತುವರಿ ಮಾಡಬಹುದು. ಕೆರೆ ಒತ್ತುವರಿ ಮಾಡಿದ್ರೂ ತಪ್ಪಲ್ಲ. ಅಪಾರ್ಟ್‍ಮೆಂಟ್ ಕಟ್ಟಿದ್ರೂ ತಪ್ಪಲ್ಲ. ಬಡವರು ಬದುಕಿಗಾಗಿ ಶೆಡ್ ಹಾಕಿಕೊಂಡ್ರೆ ತಪ್ಪಾ? ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಎಂದು ರಫಿಕ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಅಲ್ಪಸಂಖ್ಯಾತ ಸಮುದಾಯದವರಿಗೆ ಸರ್ಕಾರದಿಂದ ಯಾವುದೇ ಉಪಯೋಗವಿಲ್ಲ. ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಗೆಲ್ಲಿಸೋದಕ್ಕೆ ನಾವು ಜೀವ ತೇಯ್ದಿದ್ದೇವೆ. ಆದರೆ, ಅವರು ಯಾವ ಸಹಾಯ ಮಾಡಿಲ್ಲ. ಏನೂ ಹೇಳಿಲ್ಲ, ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ವಿಷ ಕುಡಿದಿದ್ದಾರೆ. ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ನಕ್ಸಲರ ಶರಣಾಗತಿಗೆ ದನಕಾಯೋ ವೃದ್ಧೆಯ ಮಧ್ಯಸ್ಥಿಕೆ

    ನಕ್ಸಲರ ಶರಣಾಗತಿಗೆ ದನಕಾಯೋ ವೃದ್ಧೆಯ ಮಧ್ಯಸ್ಥಿಕೆ

    – ಜೀವ ಉಳಿಸೋ ಕೆಲ್ಸ ಅಂತ ಒಪ್ಕೊಂಡೆ!

    ಚಿಕ್ಕಮಗಳೂರು: ರಾಜ್ಯದಲ್ಲಿ 6 ಜನ ನಕ್ಸಲರು ಶರಣಾಗಿರುವುದರ ಹಿಂದೆ ದನಕಾಯುವ ವೃದ್ಧೆಯೊಬ್ಬರು ಮಧ್ಯಸ್ಥಿಕೆವಹಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಸರ್ಕಾರ ಹಾಗೂ ನಕ್ಸಲರ ನಡುವೆ ಸಂಧಾನಕ್ಕೆ ಗೌರಮ್ಮ ಎಂಬ ಅಜ್ಜಿ ಕೊಂಡಿಯಾಗಿದ್ದರು. ಶರಣಾಗತಿ ಪ್ರಕ್ರಿಯೆಗೆ ವಿಕ್ರಂಗೌಡ ಎನ್‌ಕೌಂಟರ್‌ಗೂ ಮುನ್ನವೇ ಸಂಧಾನಕ್ಕೆ ಯತ್ನ ನಡೆದಿತ್ತು. ಸುಮಾರು 72 ದಿನಗಳ ಕಾಲ ಈ ಪ್ರಯತ್ನ ನಡೆದಿದೆ.

    ನಾಗರೀಕ ವೇದಿಕೆಯ ಸದಸ್ಯರ ಸಂಧಾನ ಪತ್ರವನ್ನು ನಕ್ಸಲರಿಗೆ ತಲುಪಿಸುವಲ್ಲಿ ಗೌರಮ್ಮ ಮಹತ್ವದ ಪಾತ್ರವಹಿಸಿದ್ದಾರೆ. 20 ರಿಂದ 30 ಕಿಲೋಮೀಟರ್ ನಡೆದುಕೊಂಡೆ ಸಂಪರ್ಕ ಸೇತುವೆಯಾಗಿ ಈ ಕೆಲಸ ಮಾಡಿದ್ದಾರೆ.

    ಶೃಂಗೇರಿ ತಾಲೂಕಿನ ಕಿಗ್ಗಾದ ಕಿತ್ತಲೆಮನೆ ನಿವಾಸಿಯಾದ ಗೌರಮ್ಮ ದನ ಕಾಯುತ್ತಾ ಸೌದೆ ತರಲು ಕಾಡಿಗೆ ಹೋಗಿದ್ದಾಗ ಕಾಡಿನಲ್ಲಿ ಗೌರಮ್ಮರನ್ನ ಭೇಟಿಯಾಗಿ ಮಾತನಾಡಿಸಿದ್ದ ನಕ್ಸಲರು, ಚೀಟಿ ಕೊಡ್ತೀವಿ, ಕೊಡ್ತೀರಾ ಎಂದು ಕೇಳಿದ್ದರು. ಆಗ ಭಯ ಆಗುತ್ತೆ ಎಂದು ಹೇಳಿದ್ದೆ. ಬಳಿಕ ಜೀವ ಉಳಿಸೋ ಕೆಲಸ ಎಂದು ನನಗೂ ಖುಷಿ ಆಯ್ತು. ಎಲ್ಲಾ ಕಡೆ ಹೊಡೆದು ಹಾಕ್ತಾರೆ, ಅವರ ಜೀವ ಉಳಿಬೇಕು ಎಂದು ಈ ಕಾರ್ಯಕ್ಕೆ ಮುಂದಾದೆ ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.

    ಈ ರೀತಿ ನಕ್ಸಲರ ಸಮಸ್ಯೆ ಬಗೆಹರಿಯಿತು, ಆದರೆ, ಜನರ ಸಮಸ್ಯೆ ಬಗೆಹರಿಯಲಿಲ್ಲ. ಅವರು ಹೊರಬಂದ ಮೇಲೆ ಜನರ ಪರ ಹೋರಾಟ ಮಾಡಬೇಕು. ನಮ್ಮ ಮನೆ ಸೇರಿದಂತೆ, ಊರಿನ ಯಾರ ಮನೆಗೂ ಹಕ್ಕುಪತ್ರ ಇಲ್ಲ ಎಂದು ಗೌರಮ್ಮ ಹೇಳಿಕೊಂಡಿದ್ದಾರೆ.

  • ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಕಾಮನ್ ಸೆನ್ಸ್ ಇರಬೇಕು: ಸಿ.ಟಿ ರವಿ ವಿರುದ್ಧ ಡಿಕೆಶಿ ಕಿಡಿ

    ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಕಾಮನ್ ಸೆನ್ಸ್ ಇರಬೇಕು: ಸಿ.ಟಿ ರವಿ ವಿರುದ್ಧ ಡಿಕೆಶಿ ಕಿಡಿ

    – ಸಿ.ಟಿ ರವಿ ದೊಡ್ಡ ಡ್ರಾಮಾ ಮಾಸ್ಟರ್

    ಚಿಕ್ಕಮಗಳೂರು: ಸಿ.ಟಿ ರವಿ (C.T Ravi) ಅವರನ್ನ ನ್ಯಾಷನಲ್ ಲೀಡರ್ ಎಂದು ತಿಳಿದುಕೊಂಡಿದ್ದೆ. ಆದರೆ ಅವರು ಸಿ.ಟಿ.ರವಿ ದೊಡ್ಡ ಡ್ರಾಮಾ ಮಾಸ್ಟರ್ ಎಂದು ಡಿಸಿಎಂ ಡಿ.ಕೆ ಶಿವಕುಮಾರ್  (D.K Shivakumar) ಹೇಳಿದ್ದಾರೆ.

    ಶೃಂಗೇರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಿ.ಟಿ ರವಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ ಎಂಬ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಅವರ ಮಾತು-ವಿಚಾರ ನೋಡಿದ್ರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪೆÇ್ಪೀದು ಬೇಡ, ಆತ್ಮಸಾಕ್ಷಿ ಒಪ್ಪಿದ್ರೆ ಸಾಕು. ಹಾಗೆ ಮಾತಾಡಬೇಕು ಎಂದಿದ್ದಾರೆ.

    100 ಜನ ಬಿಜೆಪಿ ನಾಯಕರು ಹಾಗೆ ಮಾತನಾಡಬಾರದಿತ್ತು ಎಂದು ಹೇಳಿದ್ದಾರೆ. ಕ್ಷಮೆ ಕೇಳಿದ್ರೆ ಮುಗಿದುಹೋಯ್ತು. ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋದ್ರೆ ಕೊನೆ ಇಲ್ಲ. ಅವರ ಹತ್ತಿರ ತನಿಖಾ ತಂಡ ಇದೆ, ತನಿಖೆ ಮಾಡಿಸಿಕೊಳ್ಳಲಿ ಎಂದಿದ್ದಾರೆ.

    ಸಿ.ಟಿ.ರವಿ ಬಂದೂಕಿನ ವಿಷಯ ಮಾತನಾಡಿದ್ದಾರೆ. ಯಾರಾದ್ರೂ ಸಿಎಂ ಮನೆಗೆ ಬಂದೂಕು ತಂದು ಶರಣಾಗ್ತಾರಾ? ಬೇಸಿಕ್ ಕಾಮನ್ ಸೆನ್ಸ್ ಇರಬೇಕು, ಪೆÇಲೀಸರು ಏನು ಮಾಡಬೇಕು ಅದನ್ನು ಮಾಡುತ್ತಾರೆ. ಗೌಪ್ಯ ಯಾವ ರೀತಿ ಕಾಪಾಡಬೇಕು. ಅವರ ಕೆಲಸ ಅವರು ಮಾಡ್ತಾರೆ. ನಾವು ಹಸ್ತಕ್ಷೇಪ ಮಾಡಲ್ಲ. ನಕ್ಸಲರನ್ನ ಶರಣಾಗತಿ ಮಾಡ್ಸಿದ್ದಾರೆ, ಅದಕ್ಕೆ ಖುಷಿ ಪಡಬೇಕು. ಮೊಸರಲ್ಲಿ ಕಲ್ಲು ಹುಡುಕೋದೇ ಆಯ್ತು ಅವರದ್ದು ಎಂದು ಕಿಡಿಕಾರಿದ್ದಾರೆ.

  • ನನಗ್ಯಾರ ಬೆಂಬಲವೂ ಬೇಡ, ನನಗಾಗಿ ಕೂಗೋದು ಬೇಡ: ಡಿಕೆಶಿ

    ನನಗ್ಯಾರ ಬೆಂಬಲವೂ ಬೇಡ, ನನಗಾಗಿ ಕೂಗೋದು ಬೇಡ: ಡಿಕೆಶಿ

    ಚಿಕ್ಕಮಗಳೂರು: ನನಗೆ ಯಾರ ಬೆಂಬಲವೂ ಬೇಡ, ನನಗಾಗಿ ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗೋದು ಬೇಡ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K. Shivakumar) ಹೇಳಿದ್ದಾರೆ.

    ಶೃಂಗೇರಿ (Sringeri) ಮಠದ ಹಿರಿಯ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷವಾದ ಹಿನ್ನಲೆ, ಮಠದ ಆವರಣದಲ್ಲಿ ನಡೆಯುತ್ತಿರುವ ಸುವರ್ಣಭಾರತೀ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ. ಕಾರ್ಯಕ್ರಮಕ್ಕೆ ತೆರಳುವ ಮುನ್ನ ಬೆಂಬಲಿಗರು ಅವರ ಪರ ಘೋಷಣೆ ಕೂಗಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯಿಸಿ, ನನಗೆ ಯಾರ ಬೆಂಬಲವಾಗಲಿ, ಘೋಷಣೆ ಕೂಗೋದು ಬೇಡ ಎಂದಿದ್ದಾರೆ.

    ಟೆಂಪಲ್ ರನ್ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ದಿನ ಪೂಜೆ ಮಾಡ್ತೀನಿ. ನಾನು ಧರ್ಮದ ಮೇಲೆ ನಂಬಿಕೆ ಇಟ್ಟವನು. ಸಮಾಜ, ಜನ, ರಾಜ್ಯ, ಪಕ್ಷ, ಕುಟುಂಬಕ್ಕಾಗಿ ಪೂಜೆ ಮಾಡ್ತೀನಿ. ಟೆಂಪಲ್ ರನ್ ಏನಿಲ್ಲ, ಹಾಗಾದ್ರೆ ದೇವಸ್ಥಾನ ಏಕೆ, ಬೀಗ ಹಾಕ್ಬಿಡಿ. ದೇವನೊಬ್ಬ ನಾಮ ಹಲವು ಎನ್ನುವ ತತ್ವದ ಮೇಲೆ ನಂಬಿಕೆ ಇಟ್ಟವನು ನಾನು. ಅವರವರ ನಂಬಿಕೆ ಅವರವರ ಆಚಾರ-ವಿಚಾರ ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.

    ರಾಜಕಾರಣದಲ್ಲಿ ಯಾವ ತಿರುವು ಅವಶ್ಯಕತೆ ಇಲ್ಲ. ಪಕ್ಷ, ಹೈಕಮಾಂಡ್ ಹೇಳಿದ್ದೇ ಅಂತಿಮ. ನನಗೆ ಯಾರ ಒತ್ತಾಯ, ಬೆಂಬಲ ಏನೂ ಬೇಡ. ನನಗಾಗಿ ಕಾರ್ಯಕರ್ತರು, ಶಾಸಕರು, ಬೆಂಬಲಿಗರು, ಕೂಗೋದು ಬೇಡ. ಮಾಡೋ ಕೆಲಸ ಮಾಡೋಣ, ಫಲಾಫಲ ದೇವರಿಗೆ ಬಿಡೋಣ ಎಂದಿದ್ದಾರೆ,

  • ಶೃಂಗೇರಿಗೆ ಡಿಕೆಶಿ ಭೇಟಿ – ಕಾರ್ತ ವೀರ್ಯಾರ್ಜುನನಿಗೆ ವಿಶೇಷ ಪೂಜೆ

    ಶೃಂಗೇರಿಗೆ ಡಿಕೆಶಿ ಭೇಟಿ – ಕಾರ್ತ ವೀರ್ಯಾರ್ಜುನನಿಗೆ ವಿಶೇಷ ಪೂಜೆ

    ಚಿಕ್ಕಮಗಳೂರು: ಶೃಂಗೇರಿ (Sringeri) ಶಾರದಾಂಬೆ ದೇಗುಲಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಭೇಟಿ ನೀಡಿದ್ದಾರೆ. ಈ ವೇಳೆ ದೇಗುಲದ ಗೋಡೆ ಮೇಲಿರುವ ಕಾರ್ತ ವೀರ್ಯಾರ್ಜುನನಿಗೆ (Kartavirya Arjuna) ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಇದೇ ಮೊದಲ ಬಾರಿಗೆ ಡಿಕೆಶಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಸಿದ್ದಾರೆ. ಅಧಿಕಾರ ಹಾಗೂ ಶತೃ ಸಂಹಾರಕ್ಕಾಗಿ ಕಾರ್ತ ವೀರ್ಯಾರ್ಜುನನಿಗೆ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಅಲ್ಲದೇ ಕಳೆದು ಹೋದ ವಸ್ತುವಿಗಾಗಿ ಇಲ್ಲಿ ವಿಶೇಷ ಪೂಜೆ ಮಾಡುತ್ತಾರೆ.

    ಶೃಂಗೇರಿ ಮಠದ ಆವರಣದ ನವಗ್ರಹ ಆಕಾರದ ದೇವಾಲಯದ ಗೋಡೆ ಮೇಲೆ ಕಾರ್ತ ವೀರ್ಯಾರ್ಜುನ ಕೆತ್ತನಿ ಇದೆ.

    ಮಹಾಭಾರತದ ಕಾಲದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಪಾಂಡವರು ಕಾರ್ತ ವೀರ್ಯಾರ್ಜುನನ ಮೊರೆ ಹೋಗಿದ್ದರು ಎಂಬ ಪ್ರತೀತಿ ಇದೆ.