Tag: Srinagar

  • ಪೂಂಚ್‍ನಲ್ಲಿ ಅಕ್ರಮವಾಗಿ ಗಡಿ ದಾಟುತ್ತಿದ್ದ ವ್ಯಕ್ತಿ ಅರೆಸ್ಟ್

    ಶ್ರೀನಗರ: ಜಮ್ಮುವಿನ ಪೂಂಚ್ ಜಿಲ್ಲೆಯ ಮೆಂಧರ್ ಗ್ರಾಮದಲ್ಲಿ ಸೋಮವಾರ ಭಾರತೀಯ ಸೇನೆಯು ನುಸುಳುಕೋರನೊಬ್ಬನನ್ನು ಬಂಧಿಸಿದೆ.

    ಅಧಿಕಾರಿಯೊಬ್ಬರ ಪ್ರಕಾರ, ನುಸುಳುಕೋರನು ಜಿಲ್ಲೆಯ ಪೂಂಚ್‍ನ ಮೆಂಧರ್ ಪ್ರದೇಶದ ಬಲ್ನೋಯ್ ಗ್ರಾಮದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ನುಸುಳಲು ಪ್ರಯತ್ನಿಸುತ್ತಿದ್ದನು. ಈ ವೇಳೆ ಸೇನೆಯು ಅವನನ್ನು ಬಂಧಿಸಿದೆ. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?

    ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಸೇನೆ ಮತ್ತು ಪೊಲೀಸರ ತಂಡಗಳು ಸ್ಥಳದಲ್ಲೇ ಇವೆ. ವ್ಯಕ್ತಿಯ ವಿಚಾರಣೆ ಮುಗಿದ ನಂತರ ಹೆಚ್ಚಿನ ವಿವರಗಳು ಲಭ್ಯವಾಗುತ್ತವೆ ಎಂದು ಅಧಿಕಾರಿ ತಿಳಿಸಿದ್ದಾರೆ.

  • ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಸಾವು

    ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಸಾವು

    ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರ ಜಿಲ್ಲೆಯ ಝಕುರಾ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.

    ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಾಯ್ಬಾ(ಎಲ್‌ಇಟಿ)ದೊಂದಿಗೆ ಸಂಪರ್ಕ ಹೊಂದಿದ್ದ ಇಬ್ಬರು ಭಯೋತ್ಪಾದಕರ ಮೇಲೆ ಶ್ರೀನಗರ ಪೊಲೀಸರು ಶನಿವಾರ ಬೆಳಗ್ಗೆ ಎನ್‌ಕೌಂಟರ್ ನಡೆಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಹತರಾಗಿರುವ ಉಗ್ರರಲ್ಲಿ ಒಬ್ಬನನ್ನು ಇಖ್ಲಾಕ್ ಹಾಜಂ ಎಂದು ಗುರುತಿಸಲಾಗಿದೆ ಮತ್ತು ಘಟನಾ ಸ್ಥಳದಲ್ಲಿ 2 ಪಿಸ್ತೂಲ್‌ಗಳು ಪತ್ತೆಯಾಗಿವೆ ಎಂದು ಕಾಶ್ಮೀರದ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್

    ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ನೇಮಕಗೊಂಡಿದ್ದ ಅಲಿ ಮುಹಮ್ಮದ್ ಗನಿ ಅವರನ್ನು ಜನವರಿ 29 ರಂದು ಹಾಸನ್‌ಪೋರಾದಲ್ಲಿ ಶಂಕಿತ ಉಗ್ರರು ಗುಂಡಿಕ್ಕಿ ಕೊಂದಿದ್ದರು. ಅವರ ಹತ್ಯೆಯಲ್ಲಿ ಹಾಜಂ ಭಾಗಿಯಾಗಿದ್ದ ಎಂದು ಕುಮಾರ್ ತಿಳಿಸಿದ್ದಾರೆ.

    ಗನಿ ಅವರ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗನಿ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ  ಇಬ್ರಾಹಿಂ ಸುತಾರ ನಿಧನ

     

    ಈ ವಾರದ ಆರಂಭದಲ್ಲೂ ಶೋಪಿಯಾನ್ ಜಿಲ್ಲೆಯ ಅಮಿಶಿಜಿಪೋರಾ ಪ್ರದೇಶದಲ್ಲಿ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಎಎಸ್‌ಐ ಶಬೀರ್ ಅಹ್ಮದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಅವಳಿ ಎನ್‌ಕೌಂಟರ್‌ನಲ್ಲಿ ಜೆಇಎಂ ಕಮಾಂಡರ್ ಸೇರಿ ಐವರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅವಳಿ ಎನ್‍ಕೌಂಟರ್ ನಡೆದಿದ್ದು, ಪರಿಣಾಮ ಜೆಇಎಂ ಕಮಾಂಡರ್ ಜಾಹಿದ್ ವಾನಿ ಸೇರಿದಂತೆ 5 ಭಯೋತ್ಪಾದಕರು ಹತರಾಗಿದ್ದಾರೆ.

    ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಇಂದು ಟ್ವಿಟ್ಟರ್ ನಲ್ಲಿ, ಕಳೆದ 12 ಗಂಟೆಗಳಲ್ಲಿ ನಡೆದ ಅವಳಿ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಎ-ತೊಯ್ಬಾ(ಎಲ್‍ಇಟಿ) ಮತ್ತು ಜೈಶ್-ಎ-ಮೊಹಮ್ಮದ್(ಜೆಇಎಂ) ಜೊತೆ ಸಂಬಂಧ ಹೊಂದಿದ ಐವರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಂಗಗಳ ಕಾಟ – ಪಂಚಾಯ್ತಿ ಎಲೆಕ್ಷನ್ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧಾರ

    ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಬುದ್ಗಾಮ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳೊಂದಿಗೆ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳು ನಡೆದಿದ್ದು, ಹತ್ಯೆಗೀಡಾದ ಐವರು ಭಯೋತ್ಪಾದಕರ ಪೈಕಿ ಜೆಇಎಂ ಕಮಾಂಡರ್ ಭಯೋತ್ಪಾದಕ ಜಾಹಿದ್ ವಾನಿ ಕೂಡ ಇದ್ದಾನೆ. ಪಾಕಿಸ್ತಾನದ 5 ಮಂದಿ ಭಯೋತ್ಪಾದಕರು ಕಳೆದ 12 ಗಂಟೆಗಳಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ ಹತರಾಗಿದ್ದಾರೆ. ನಮಗೆ ಇದು ದೊಡ್ಡ ಯಶಸ್ಸು ಎಂದು ಅವರು ಬರೆದುಕೊಂಡಿದ್ದಾರೆ.

    ಪೊಲೀಸರ ಪ್ರಕಾರ, ಪುಲ್ವಾಮಾ ಜಿಲ್ಲೆಯ ನೈರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದಾರೆ. ಈ ವೇಳೆ ಭಯೋತ್ಪಾದಕರ ಬಳಿ ಇದ್ದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ ದಾಳಿ- 6 ಇಸ್ಲಾಮಿಕ್ ಸ್ಟೇಟ್ ಉಗ್ರರ ಹತ್ಯೆ

    ಬುದ್ಗಾಮ್‍ನ ಚ್ರಾರ್-ಇ-ಶರೀಫ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕ ಮೃತನಾಗಿದ್ದಾನೆ. ಎಕೆ 56 ರೈಫಲ್ ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

  • ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ

    ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ

    ಶ್ರೀನಗರ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹಿಮದಿಂದ ಆವೃತವಾದ ಶ್ರೀನಗರ ನಿಲ್ದಾಣದ ಫೋಟೋವನ್ನು ಶೇರ್ ಮಾಡಿ, ‘ಭೂಮಿಯ ಮೇಲಿನ ಸ್ವರ್ಗ’ ಎಂದು ಬರೆದುಕೊಂಡಿದ್ದಾರೆ.

    ಅಶ್ವಿನಿ ವೈಷ್ಣವ್ ಅವರು ಭಾನುವಾರ ಶ್ರೀನಗರ ರೈಲು ನಿಲ್ದಾಣ ಹಿಮದಿಂದ ಆವೃತವಾಗಿರುವ ಫೋಟೋವನ್ನು ಟ್ವಟ್ಟರ್ ನಲ್ಲಿ ಹಂಚಿಕೊಂಡಿದ್ದು, ಭೂಮಿಯ ಮೇಲೆ ಸ್ವರ್ಗವಿದ್ದರೆ, ಅದು ಇದು ಎಂದು ಫುಲ್ ಖುಷ್ ಆಗಿ ಬರೆದಿದ್ದಾರೆ. ಇದನ್ನೂ ಓದಿ: ಹಿರಿಯ ಸಾಹಿತಿ, ರಾಷ್ಟ್ರಪ್ರಶಸ್ತಿ ವಿಜೇತ ಎನ್.ಎಸ್.ದೇವಿಪ್ರಸಾದ್ ನಿಧನ

    ಜಮ್ಮು ಮತ್ತು ಕಾಶ್ಮೀರದ ವಾರಾಂತ್ಯದಲ್ಲಿ ಭಾರೀ ಹಿಮಾದಿಂದ ಕೂಡಿತ್ತು, ಆಗ ಅದನ್ನು ನೋಡುವುದೇ ಚಂದ. ಈ ಅನುಭವವನ್ನು ನೇರವಾಗಿ ನೋಡಿದರೆ ಮಾತ್ರ ಗೊತ್ತಾಗುತ್ತೆ. ಇನ್ನೂ ಇಲ್ಲಿನ ಜನರು ಸೋಶಿಯಲ್ ಮೀಡಿಯಾದಲ್ಲಿ ಪ್ರಕೃತಿಯ ಸೊಬಗಿನ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ. ಆ ಫೋಟೋಗಳನ್ನು ನೋಡಿದ ನೆಟ್ಟಿಗರು ಅವರಿರುವಲ್ಲಿಯೇ ‘ವಿ ಮಿಸ್’ ಎಂದು ಕಮೆಂಟ್ ಮಾಡುತ್ತಿದ್ದಾರೆ.

    ಕೊರೊನಾ ಕಾರಣದಿಂದ ಈ ವರ್ಷ ಜಮ್ಮು-ಕಾಶ್ಮಿರಾದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಭಾರತದಲ್ಲಿ ದಿನೇ ದಿನೇ ಕೊರೊನಾ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರು ತಮ್ಮ ಹುಷಾರಿನಲ್ಲಿ ಇರಬೇಕು. ಇದನ್ನೂ ಓದಿ: ಮೇಕೆದಾಟು ಯೋಜನೆ ಸ್ಥಗಿತಗೊಂಡ್ರೆ ಕಾಂಗ್ರೆಸ್ ಪಕ್ಷದವರೇ ನೇರ ಹೊಣೆ: ಭೈರತಿ ಬಸವರಾಜ್

  • ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಕೆರಾನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕ್ ಸೈನಿಕನನ್ನ ಹತ್ಯೆ ಮಾಡಲಾಗಿದ್ದು, ಆತನ ಶವವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಭಾರತೀಯ ಸೇನೆಯು ಇಂದು ತನ್ನ ಪಾಕಿಸ್ತಾನಿ ಸಹವರ್ತಿಯನ್ನು ಕೇಳಿದೆ.

    ಮೇಜರ್ ಜನರಲ್ ಎಎಸ್ ಪೆಂಧಾರ್ಕರ್ ಘಟನೆ ಕುರಿತು ಮಾಹಿತಿ ನೀಡಿದ್ದು, ಕೆರಾನ್ ಸೆಕ್ಟರ್‌ನಲ್ಲಿ ಬಿಎಟಿ(ಪಾಕ್ ಸೇನೆಯ ಗಡಿ ಕಾರ್ಯಾಚರಣೆ ತಂಡ)ಯ ಸೈನಿಕ ಭಾರತಕ್ಕೆ ನುಸುಳಲು ಪ್ರಯತ್ನಿಸಿದನು. ಇದನ್ನು ಎಲ್‍ಒಸಿಯಲ್ಲಿನ ಪಡೆಗಳು ಕಂಡುಹಿಡಿದಿದ್ದು, ಆತನನ್ನು ಹತ್ಯೆ ಮಾಡಿದೆ ಎಂದು ತಿಳಿಸಿದರು.

    ಮೃತ ಸೈನಿಕನ ಬಳಿಯಿದ್ದ ಗುರುತಿನ ಚೀಟಿಯಿಂದ ಈತ ಒಬ್ಬ ಪಾಕಿಸ್ತಾನಿ ಪ್ರಜೆ ಎಂದು ತಿಳಿದುಬಂದಿದೆ. ಈತನ ಹೆಸರು ಮೊಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನ ಸೇನೆಯ ಬಾರ್ಡರ್ ಆಕ್ಷನ್ ಟೀಮ್ ಅಥವಾ ಬಿಎಟಿಯ ಸದಸ್ಯನಾಗಿದ್ದಿರಬಹುದು ಎಂದು ವಿವರಿಸಿದರು. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಪಾಕ್ ಸೈನಿಕರು ಈ ರೀತಿ ಹೊಂಚು ಹಾಕಿ ಒಳನುಸುಳಲು ಪ್ರಯತ್ನಿಸುತ್ತಾರೆ ಎಂದು ನಾವು ಮೊದಲೇ ಗುರುತಿಸಿದ್ದೆವು. ಅದಕ್ಕೆ ಈ ಬಗ್ಗೆ ಕಾರ್ಯಾಚರಣೆಯನ್ನು ಮಾಡಲಾಗುತ್ತಿತ್ತು. ಈ ಪರಿಣಾಮ ಪಾಕ್ ಸೈನಿಕ ಭಾರತದ ಒಳನುಸುತ್ತಿದ್ದಂತೆ ಆತನನ್ನು ಹತ್ಯೆ ಮಾಡಲಾಯಿತು. ಈ ವೇಳೆ ಒಂದು ಎಕೆ ರೈಫಲ್, ಮದ್ದುಗುಂಡುಗಳು ಮತ್ತು ಏಳು ಗ್ರೆನೇಡ್‍ಗಳೊಂದಿಗೆ ಆತನ ಶವವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

    ಪಾಕ್ ಎಷ್ಟೇ ಪ್ರಯತ್ನ ಪಟ್ಟರು ಗಡಿಭಾಗದಲ್ಲಿ ಕಣ್ಗಾವಲು ಇನ್ನೂ ಪ್ರಗತಿಯಲ್ಲಿದೆ. ನಾವು ಪಾಕಿಸ್ತಾನ ಸೇನೆಗೆ ಹಾಟ್‍ಲೈನ್ ಸಂಪರ್ಕವನ್ನು ಮಾಡಲಾಗಿದ್ದು, ಹತ್ಯೆಗೀಡಾದ ವ್ಯಕ್ತಿಯ ದೇಹವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ ಎಂದರು.

    ಆತನ ಶವವನ್ನು ಪರಿಶೀಲಿಸಿದಾಗ ಪಾಕಿಸ್ತಾನದ ರಾಷ್ಟ್ರೀಯ ಗುರುತಿನ ಚೀಟಿ ಮತ್ತು ಆ ದೇಶದ ಆರೋಗ್ಯ ಸಚಿವಾಲಯ ನೀಡಿದ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ಪತ್ತೆಯಾಗಿವೆ. ಕಾರ್ಡ್‍ನಲ್ಲಿರುವ ಫೋಟೋದಲ್ಲಿ ಮೃತ ವ್ಯಕ್ತಿ ಪಾಕ್ ಸಶಸ್ತ್ರ ಪಡೆಗಳ ಸಮವಸ್ತ್ರ ಧರಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್

    ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕದನ ವಿರಾಮ ಒಪ್ಪಂದ ಎಂದು ಘೋಷಿಸಲಾಗಿತ್ತು. ಆದರೆ ಈ ಪ್ರಯತ್ನದಿಂದ ಆ ಒಪ್ಪಂದವನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ ಎಂದರು.

  • ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ

    ಬಸ್ ಮೇಲೆ ದಾಳಿಗೈದ ಮೂವರು ಉಗ್ರರ ಹತ್ಯೆ

    ಶ್ರೀನಗರ: ಪೊಲೀಸ್ ಬಸ್ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರನ್ನು ಭದ್ರತಾ ಪಡೆ ಶ್ರೀನಗರದಲ್ಲಿ ಎನ್‍ಕೌಂಟರ್ ಮಾಡಿ ಹತ್ಯೆ ಮಾಡಿದೆ.

    ಡಿಸೆಂಬರ್ 13 ರಂದು ಶ್ರೀನಗರದ ಹೊರವಲಯದಲ್ಲಿ ಪೊಲೀಸ್ ಬಸ್ ಮೇಲೆ ದಾಳಿ ಮಾಡಿದ ಉಗ್ರರನ್ನು ಪೊಲೀಸರು ಗುರುವಾರ ರಾತ್ರಿ ಎನ್‍ಕೌಂಟರ್ ಮಾಡಿದ್ದಾರೆ.

    ಜಮ್ಮು ಮತ್ತು ಕಾಶ್ಮೀರ ಸಶಸ್ತ್ರ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ದಾಳಿಯಲ್ಲಿ ಭಾಗಿಯಾಗಿದ್ದ ಎಲ್ಲ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಭಯೋತ್ಪಾದಕರಲ್ಲಿ ಒಬ್ಬನನ್ನು ಜೆಇಎಂ ಭಯೋತ್ಪಾದಕ ಸುಹೇಲ್ ಅಹ್ಮದ್ ರಾಥರ್ ಎಂದು ಗುರುತಿಸಲಾಗಿದೆ. ಕಳೆದ 36 ಗಂಟೆಗಳಲ್ಲಿ ಇದು ಮೂರನೇ ಎನ್‍ಕೌಂಟರ್ ಆಗಿದ್ದು, ಹತರಾದ ಉಗ್ರರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ:  ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

    ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಮತ್ತು ಕುಲ್ಗಾಮ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ ಆರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು

  • ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

    ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

    ಶ್ರೀನಗರ: ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ನಮ್ಮ ಪಕ್ಷದೊಂದಿಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಹೇಳುವ ಮೂಲಕ ಎಲ್ಲ ಊಹಾಪೋಹಗಳಿಗೆ ಇಂದು ತೆರೆ ಎಳೆದಿದ್ದಾರೆ.

    ಪಂಜಾಬ್‍ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರಂತೆ ನೀವು ಸಹ ಪಕ್ಷದಿಂದ ಹೊರಬರುವ ಸಾಧ್ಯತೆ ಇದೆ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ’24 ಕ್ಯಾರೆಟ್ ಕಾಂಗ್ರೆಸ್ಸಿಗರು’ ಪಕ್ಷ ಮತ್ತು ನಮ್ಮ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಅಸಮಾಧಾನವಿಲ್ಲ. ಬದಲಿಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ:  ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಹೌದು, ನಾನು ಕಾಂಗ್ರೆಸ್ಸಿಗ. ನಾನು ಕಾಂಗ್ರೆಸ್ಸಿಗ ಅಲ್ಲ ಎಂದು ನಿಮಗೆ ಯಾರು ಹೇಳಿದರು? 24 ‘ಕ್ಯಾರೆಟ್’ ಕಾಂಗ್ರೆಸ್ಸಿಗ. 18 ಕ್ಯಾರೆಟ್ 24 ಕ್ಯಾರೆಟ್‍ಗೆ ಸವಾಲು ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು. ವಿಭಜಿಸುವ ಪಕ್ಷಗಳು ವಿಭಜನೆಯನ್ನು ಮಾತ್ರ ನೋಡುತ್ತವೆ. ನಾವು ಜನರನ್ನು ಜೋಡಿಸುವವರು. ನಾವು ಏಕೀಕರಣಕ್ಕಾಗಿ ಏಕತೆಯನ್ನು ಬೆಸೆಯುತ್ತೇವೆ ಎಂದರು.

    ಸುಧಾರಣೆಗಳ ಕರೆ ಕುರಿತು ಮಾತನಾಡಿದ ಅವರು, ಪ್ರತಿ ಪಕ್ಷ, ಪ್ರತಿ ಸಮಾಜ ಮತ್ತು ದೇಶದಲ್ಲಿ ಸುಧಾರಣೆಗಳ ಅಗತ್ಯವಿದೆ. ಸುಧಾರಣೆಗಳು ಪ್ರತಿ ಪಕ್ಷದಲ್ಲಿ ನಿರಂತರ ಪ್ರಕ್ರಿಯೆ ಮತ್ತು ಅವಶ್ಯಕವಾಗಿದೆ. ಸುಧಾರಣೆಗಳಿಂದಾಗಿ ಹಿಂದಿನ ಅನೇಕ ದುಷ್ಪರಿಣಾಮಗಳು ಇಂದು ಸಮಾಜದಲ್ಲಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: 40 ವರ್ಷ ಮೇಲ್ಪಟ್ಟ ಮಹಿಳೆಯರು ಮೋದಿಯಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಜೀನ್ಸ್ ತೊಟ್ಟ ಹುಡುಗಿಯರಲ್ಲ: ದಿಗ್ವಿಜಯ್ ಸಿಂಗ್

    ರಾಜಕಾರಣಿಗಳು ಜನರ ಕಲ್ಯಾಣಕ್ಕಾಗಿ ಸರಿಯಾದ ಕೆಲಸಗಳನ್ನು ಮಾಡಬೇಕಾಗಿತ್ತು. ಆದರೆ ಕೆಲವೊಮ್ಮೆ ಅವರು ಜನರನ್ನು ವಿಭಜಿಸುವ ಮೂಲಕ ಸೈತಾನನ ಕೆಲಸವನ್ನು ಮಾಡುತ್ತಾರೆ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಕಿಡಿಕಾರಿದರು.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ ಭವಿಷ್ಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಯಜಮಾನರು. ಯಾವುದೇ ಪಕ್ಷದ ಸೋಲು ಮತ್ತು ಗೆಲುವು ಅವರ ಕೈಯಲ್ಲಿದೆ. ಈ ಹಿನ್ನೆಲೆ ಪ್ರಸ್ತುತ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ನಿರುದ್ಯೋಗದಿಂದಾಗಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ಜನರು ಬಿಜೆಪಿಯಿಂದ ಬೇಸತ್ತಿದ್ದಾರೆ ಎಂದು ಹೇಳಿದರು.

  • 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

    29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

    ಶ್ರೀನಗರ: ಪಾಕಿಸ್ತಾನದ ಜೈಲಿನಲ್ಲಿ 29 ವರ್ಷಗಳ ಕಾಲ ಬಂಧಿಯಾಗಿದ್ದ ಜಮ್ಮು ಮತ್ತು ಕಾಶ್ಮೀರಾದ ಕುಲದೀಪ್ ಸಿಂಗ್ ತಾಯಿನಾಡು ಭಾರತಕ್ಕೆ ಕಾಲಿಟ್ಟಿದ್ದಾರೆ.

    ಔರಂಗಾಬಾದ್‍ನ ಮೊಹಮ್ಮದ್ ಗುಫ್ರಾನ್ ಅವರೊಂದಿಗೆ ಕಥುವಾ ನಿವಾಸಿ 53 ವರ್ಷದ ಕುಲದೀಪ್ ಸಿಂಗ್ ಅವರನ್ನು ಸೋಮವಾರ ಪಾಕಿಸ್ತಾನ ಜೈಲಿನಿಂದ ಬಿಡುಗಡೆ ಮಾಡಲಾಯಿತು. ಬಳಿಕ ಸಿಂಗ್ ಅವರು ಪಂಜಾಬ್‍ನ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿರುವ ರೆಡ್‍ಕ್ರಾಸ್ ಭವನವನ್ನು ತಲುಪಿದ್ದು, ನಿನ್ನೆ ರಾತ್ರಿ ತಮ್ಮ ತವರು ಮನೆಗೆ ಹಿಂತಿರುಗಿದ್ದಾರೆ. ಈ ವೇಳೆ ಕಥುವಾದ ಜನರು ಸಿಂಗ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಇದನ್ನೂ ಓದಿ: ಪ್ರಕೃತಿ ಸೌಂದರ್ಯ ಸವಿಯಿರಿ: ಬೆಂಗಳೂರು-ಶಿವಮೊಗ್ಗ ರೈಲಿಗೆ ವಿಸ್ಟಾಡಾಮ್ ಕೋಚ್

    ತಮ್ಮ ಅನುಭವದ ಕುರಿತು ಮಾತನಾಡಿದ ಸಿಂಗ್ ಅವರು, 1992 ರಲ್ಲಿ ನಮ್ಮನ್ನು ಬಂಧನಕ್ಕೊಳಪಡಿಸಿದ ನಂತರ ಪಾಕಿಸ್ತಾನಿ ಏಜೆನ್ಸಿಗಳು ಮೂರು ವರ್ಷಗಳ ಕಾಲ ನಮಗೆ ಚಿತ್ರಹಿಂಸೆ ನೀಡಿತ್ತು. ನಂತರ ನಮ್ಮನ್ನು ಬೇಹುಗಾರಿಕೆ ಆರೋಪದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ಪರಿಣಾಮ ನಮ್ಮನ್ನು ಅಲ್ಲಿನ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು ಎಂದು ವಿವರಿಸಿದರು.

    ನನ್ನ ಎಲ್ಲ ಸ್ನೇಹಿತರಿಗೆ, ಗ್ರಾಮಸ್ಥರಿಗೆ ಮತ್ತು ವಿಶೇಷವಾಗಿ ಯುವಕರಿಗೆ ನನ್ನ ಸಂದೇಶವೆಂದರೆ, ನಿಮ್ಮನ್ನು ಹಾನಿ ಮಾಡುವ ತಪ್ಪು ಮಾರ್ಗಗಳಿಂದ ದೂರವಿರಿ. ಆದರೆ, ದೇಶಕ್ಕಾಗಿ ತ್ಯಾಗ ಮಾಡುವ ಸಂದರ್ಭ ಬಂದರೆ ಯಾವುದೇ ಕಾರಣಕ್ಕೂ ಹಿಂದೆ ಸರಿಯಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಫಲಪುಷ್ಪ ಪ್ರದರ್ಶನದಲ್ಲಿ ಅರಳಿದ ಹೂ ಮನಸ್ಸಿನ ‘ಅಪ್ಪು’

    ಈ ಕುರಿತು ಮಾತನಾಡಿದ ಸಿಂಗ್ ಸಂಬಂಧಿಕರು, ಪಾಕಿಸ್ತಾನದಲ್ಲಿ ಬಂಧನಕ್ಕೊಳಗಾದ ನಂತರ, ಲಾಹೋರ್‍ನ ಕೋಟ್ ಲಖ್‍ಪತ್ ಜೈಲಿನಿಂದ ಅವರು ನಮಗೆ ಪತ್ರ ಬರೆದಿದ್ದರು. ಆಗ ಮಾತ್ರ ನಮಗೆ ಅವರು ಎಲ್ಲಿದ್ದಾರೆ ಎಂದು ತಿಳಿಯಿತು. ಈಗ ಮತ್ತೆ ಇವರು ಮನೆಗೆ ವಾಪಸ್ ಆಗಿರುವುದು ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

  • ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ – ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 2 ಉಗ್ರರ ಹತ್ಯೆ, ಇನ್ನಿಬ್ಬರ ಬಂಧನ

    ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ – ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 2 ಉಗ್ರರ ಹತ್ಯೆ, ಇನ್ನಿಬ್ಬರ ಬಂಧನ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸ್ ಅಧಿಕಾರಿ ಮತ್ತು ನಾಗರಿಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರರ ವಿರುದ್ಧ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಅಪರಿಚಿತ ಇಬ್ಬರು ಉಗ್ರರು ಹತ್ಯೆಯಾಗಿದ್ದಾರೆ. ಎಲ್‌ಇಟಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಇಬ್ಬರು ಉಗ್ರರನ್ನು ವಶಕ್ಕೆ ಪಡೆಯಲಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರ ಹತ್ಯೆಯಾಗಿದ್ದಾರೆ. ಕೆಲ ದಿನಗಳ ಹಿಂದೆ ನಾಗರಿಕ ಮತ್ತು ಪೊಲೀಸ್ ಅಧಿಕಾರಿ ಹತ್ಯೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್‌ನ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮಕ್ಕಳನ್ನು ಹೊಂದುವ ದಂಪತಿಗೆ 23.5 ಲಕ್ಷ ಸಾಲ ಸೌಲಭ್ಯ – ಚೀನಾ ಆಫರ್

    ದಕ್ಷಿಣ ಭಾರತದ ಶೋಪಿಯಾನ್ ಚೌಗಾಮ್ ಪ್ರದೇಶದಲ್ಲಿ ಉಗ್ರರು ಇರುವ ಬಗ್ಗೆ ಮಾಹಿತಿ ತಿಳಿದು ಭದ್ರತಾ ಪಡೆ ಕಾರ್ಯಾಚರಣೆ ನಡೆಸಿತ್ತು. ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಉಗ್ರರನ್ನು ವಶಕ್ಕೆ ಪಡೆಯಲು ಭದ್ರತಾ ಪಡೆ ಮುಂದಾಗಿತ್ತು. ಆದರೆ ಭದ್ರತಾ ಪಡೆಯ ವಿರುದ್ಧ ಉಗ್ರರು ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಸಿಬ್ಬಂದಿ ಎನ್‌ಕೌಂಟರ್ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅವರು ಯಾರು, ಯಾವ ಸಂಘಟನೆಗೆ ಸೇರಿದವರು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರು ಚಳಿಗಾಲದಲ್ಲಿ ಧರಿಸಬಹುದಾದ 5 ಸ್ಟೈಲಿಶ್ ಕ್ಯಾಪ್‍ಗಳು

  • ಪುಲ್ವಾಮದಲ್ಲಿ ಸ್ಫೋಟಕ ಸಾಮಾಗ್ರಿ ಪತ್ತೆ – ತಪ್ಪಿದ ಭಾರೀ ದುರಂತ

    ಪುಲ್ವಾಮದಲ್ಲಿ ಸ್ಫೋಟಕ ಸಾಮಾಗ್ರಿ ಪತ್ತೆ – ತಪ್ಪಿದ ಭಾರೀ ದುರಂತ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ಸುಧಾರಿತ ಸ್ಫೋಟಕ ಸಾಮಾಗ್ರಿ (ಐಇಡಿ) ಪತ್ತೆಯಾಗಿದ್ದು, ಭದ್ರತಾ ಪಡೆಗಳು ಸ್ಫೋಟಕವನ್ನು ನಾಶಪಡಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

    ಖಚಿತ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆ ದಕ್ಷಿಣ ಕಾಶ್ಮೀರದ ವಾನ್‍ಪೋರಾ ಪ್ರದೇಶದ ನೆವಾ – ಶ್ರೀನಗರ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ರಸ್ತೆಯ ಬದಿಯಲ್ಲಿ ಸುಮಾರು 5 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಮಾಗ್ರಿ ಪತ್ತೆಯಾಗಿದ್ದು, ಅದನ್ನು ಕಂಟೈನರ್ ಗೆ ಜೋಡಿಸಲಾಗಿತ್ತು. ಭದ್ರತಾ ಪಡೆಗಳು ಇದನ್ನು ಪತ್ತೆ ಹಚ್ಚುವ ಮೂಲಕ ಭಾರೀ ದುರಂತವನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪತ್ತೆಯಾಗಿರುವ ಸ್ಫೋಟಕ ಸಾಮಾಗ್ರಿಯನ್ನು ಪೊಲೀಸ್ ಹಾಗೂ ಬಾಂಬ್ ನಿಷ್ಕ್ರಿಯ ತಂಡ ನಾಶಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಲಾಗಿದೆ. ಕಳೆದ ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು ಉಗ್ರರು ಪೊಲೀಸ್ ಸಿಬ್ಬಂದಿ ಹಾಗೂ ನಾಗರಿಕರನ್ನು ಗುರಿ ಮಾಡಿ ದಾಳಿ ನಡೆಸುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಪುಲ್ವಾಮದ ಬಂಡ್ಜಾವೋದಲ್ಲಿ ಭಯೋತ್ಪಾದಕರು ಪೊಲೀಸ್ ಮೇಲೆ ಗುಂಡು ಹಾರಿಸಿದ್ದು ಪೊಲೀಸ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಉಗ್ರರ ದಾಳಿ – ಪೊಲೀಸ್‌ ಅಧಿಕಾರಿ, ನಾಗರಿಕ ಹತ್ಯೆ

    ಬುಧವಾರ ಅನಂತನಾಗ್ ಪಟ್ಟಣದ ಬಿಜ್ಬೆಹಾರ್‍ನಲ್ಲಿ ಸಹಾಯಕ ಸಬ್ ಇನ್‍ಸ್ಪೆಕ್ಟರ್ ಅಧಿಕಾರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಪೊಲೀಸ್ ಅಧಿಕಾರಿ ಗಂಭೀರ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗ ಮಧ್ಯೆ ಮೃತಪಟಿದ್ದರು. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ