ಘಟನೆ ಕುರಿತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಸರಪಂಚ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಬಾರಾಮುಲ್ಲಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸರಪಂಚ್ ಫಯಾಜ್ ಅಹ್ಮದ್ ಭಟ್ ಅವರ ದುರದೃಷ್ಟಕರ ನಿಧನದಿಂದ ನೋವಾಗಿದೆ. ಈ ದುಃಖದ ಸಮಯದಲ್ಲಿ ನನ್ನ ಆಲೋಚನೆಗಳು ಅವರ ಕುಟುಂಬದೊಂದಿಗೆ ಇವೆ. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭಾಷಾವಾರು ಪ್ರಾಂತ್ಯಗಳನ್ನು ರಚಿಸಿರುವುದನ್ನು ನೆನಪಿಸಬಯಸುತ್ತೇನೆ: ಡಿಕೆಶಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ಮಂಗಳವಾರ ಹಜಾಮ್ ಮೊಹಲ್ಲಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ಮತ್ತು ಸೇನೆಯು ಉಗ್ರರ ಅಡಗುತಾಣವನ್ನು ಭೇದಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಮೋದಿ, ಅಮಿತ್ ಶಾರನ್ನು ನಿಂದಿಸಿದ್ದ ವ್ಯಕ್ತಿ ಬಂಧನ
ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಗಡಿಯಾಚೆಯಿಂದ ಕಳ್ಳಸಾಗಣೆ ಮಾಡಿ ಆ ಪ್ರದೇಶದಲ್ಲಿ ಇರಿಸಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರಾಗಿ ಹೊಸದಾಗಿ ಸೇರಿದವರಿಗೆ ಈ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ವಿತರಣೆ ಮಾಡಲು ಇಲ್ಲಿ ಸಂಗ್ರಹಿಸಿ ಇಡಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶ್ರೀನಗರ: ಭಯೋತ್ಪಾದನೆ ವಿರುದ್ಧ ಒಟ್ಟಿಗೆ ಹೋರಾಟ ಮಾಡೋಣ ಎಂದು ಕಾಶ್ಮೀರಿಗಳಿಗೆ ಭಾರತೀಯ ಸೇನೆ ವಿಶೇಷ ಸಂದೇಶ ಕೊಟ್ಟಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆಗಳು ಹೆಚ್ಚುತ್ತಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆ ಭಾರತೀಯ ಸೇನೆಯು, ಸಮಾಜದ ಪ್ರತಿಯೊಂದು ವರ್ಗವು ಹೇಗೆ ಭಯೋತ್ಪಾದನೆಯ ನೋವನ್ನು ಅನುಭವಿಸಿದೆ ಎಂಬುದನ್ನು ಒತ್ತಿಹೇಳುವ ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಎಲ್ಲರೂ ಒಟ್ಟಿಗೆ ಭಯೋತ್ಪಾದನೆ ವಿರುದ್ಧ ಹೋರಾಟ ಮಾಡೋಣ ಎಂದು ನಾಗರಿಕರಿಗೆ ಕರೆ ನೀಡಿದೆ. ಇದನ್ನೂ ಓದಿ: ಪಾಕ್ ಹೊಗಳುವ ಹಾಡು ಹಾಕಿದ ಇಬ್ಬರ ವಿರುದ್ಧ ಕೇಸ್
ಟ್ವಿಟ್ಟರ್‌ನಲ್ಲಿ ಏನಿದೆ?
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ‘ಕಾಶ್ಮೀರ್ ಫೈಟ್ಸ್ ಬ್ಯಾಕ್’ ಎಂಬ ಶೀರ್ಷಿಕೆಯಡಿಯಲ್ಲಿ ಟ್ವೀಟ್ ಮಾಡಿದೆ. ಈ ಟ್ವೀಟ್‍ನಲ್ಲಿ, ಜನರು ಭಯೋತ್ಪಾದನೆಯಿಂದ ಅನುಭವಿಸುತ್ತಿರುವ ನೋವು ಕೊನೆಗೊಳಿಸಲು ಭದ್ರತಾ ಪಡೆಗಳನ್ನು ಇನ್ನಷ್ಟು ಬಲಪಡಿಸಬೇಕು. ನಮ್ಮ ಸೇನೆ ಜೊತೆಗೆ ನಾಗರಿಕರು ಕೈಜೋಡಿಸಬೇಕು ಎಂದು ಕೇಳಿಕೊಂಡರು.
— NORTHERN COMMAND – INDIAN ARMY (@NorthernComd_IA) April 15, 2022
ವೀಡಿಯೋದಲ್ಲಿ, ಕಾಶ್ಮೀರಿ ಪಂಡಿತರ ನಿರ್ಗಮನ, ರಕ್ಷಣಾ ಕಾರ್ಯಾಚರಣೆಗಳು ಮತ್ತು ಕಲ್ಲು ತೂರಾಟದ ದೃಶ್ಯಗಳನ್ನು ತೋರಿಸಲಾಗಿದೆ. ದಶಕಗಳಿಂದ ಭಯೋತ್ಪಾದಕರು ಕಾಶ್ಮೀರಿ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದಾರೆ. ವಿವಿಧ ಸಮುದಾಯಗಳ ನಡುವೆ ಹೇಗೆ ದ್ವೇಷವನ್ನು ಹುಟ್ಟುಹಾಕಿದ್ದಾರೆ ಎಂಬುದನ್ನು ಈ ವೀಡಿಯೋ ಎತ್ತಿ ತೋರಿಸುತ್ತೆ. ಈ ಮೂಲಕ ಕೋಮು ಸೌಹಾರ್ದತೆಯ ಮಹತ್ವವನ್ನು ಒತ್ತಿಹೇಳುತ್ತದೆ.
ಶುಜಾತ್ ಬುಖಾರಿ, ಅರ್ಜುಮಂಡ್ ಮಜೀದ್, ಮಖನ್ ಲಾಲ್ ಬಿಂದ್ರೂ, ಸರಪಂಚ್ ಅಜಯ್ ಪಂಡಿತ್, ಸುಪಿಂದರ್ ಕೌರ್, ವಾಸಿಂ ಬಾರಿ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತ್ ಮತ್ತು ಪರ್ವೇಜ್ ಅಹ್ಮದ್ ದಾರ್ ಸೇರಿದಂತೆ ಭಯೋತ್ಪಾದಕರಿಂದ ಹತ್ಯೆಗೀಡಾದ ಕಾಶ್ಮೀರಿಗಳಿಗೆ ವೀಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಯಬಾಗದಲ್ಲಿ ಆರನೇ ವಾರಕ್ಕೆ ಕಾಲಿಟ್ಟ ‘ಕನ್ನೇರಿ’ ಚಿತ್ರ – ಪ್ರೇಕ್ಷಕರಿಂದ ಸಂಭ್ರಮಾಚರಣೆ
ಕೊನೆಯಲ್ಲಿ, ಈ ಹೋರಾಟದಲ್ಲಿ ಕಾಶ್ಮೀರ ಏಕಾಂಗಿಯಾಗಿಲ್ಲ. ನಿಮ್ಮೊಂದಿಗೆ ನಾವಿದ್ದೇವೆ. ಒಟ್ಟಾಗಿ ನಾವು ಈ ಹೋರಾಟವನ್ನು ಗೆಲ್ಲುತ್ತೇವೆ. ಯಾರು ಬೇಕಾದರೂ ನಮ್ಮ ಜೊತೆ ಕೈಜೋಡಿಸಿ ಎಂದು ಬರೆದು ಭಾರತೀಯ ಸೇನೆ ಕರೆ ನೀಡಿದೆ.
ಶ್ರೀನಗರ: ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿತ್ತು. ಆದರೆ ಮತ್ತೆ ಇದಕ್ಕೆ ಚಾಲನೆ ನೀಡಲಾಗಿದೆ. ಏಪ್ರಿಲ್ 11 ರಿಂದ ಅಮರನಾಥ ಯಾತ್ರೆಗೆ ಭಕ್ತಾದಿಗಳು ನೋಂದಣಿ ಮಾಡಿಕೊಳ್ಳಬಹುದು ಎಂದು ಅಮರನಾಥಜೀ ಪುಣ್ಯ ಕ್ಷೇತ್ರದ ಸಿಇಓ ನಿತೀಶ್ವರ್ ಕುಮಾರ್ ಹೇಳಿದ್ದಾರೆ.
ಜೂನ್ 30 ರಿಂದ ಆಗಸ್ಟ್ 11ರ ವರೆಗೂ ಯಾತ್ರೆ ನಡೆಸಲು ತೀರ್ಮಾನಿಸಲಾಗಿದ್ದು, ಯಾತ್ರೆ ಕೈಗೊಳ್ಳುವ ಭಕ್ತಾದಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಶ್ರೈನ್ ಬೋರ್ಡ್‍ನ ವೆಬ್‍ಸೈಟ್ ಅಥವಾ ಮೂಬೈಲ್ ಅಪ್ಲಿಕೇಶನ್ ಮೂಲಕ ನೋಂದಣಿ ಮಾಡಿಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ವಿಜಯನಗರದ ನೆಲದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ
ಕೊರೊನಾದಿಂದಾಗಿ ಕಳೆದ ಎರಡು ವರ್ಷದಿಂದ ಯಾತ್ರೆ ರದ್ದಾಗಿದ್ದು, ಈ ವರ್ಷ ಮೂರು ಲಕ್ಷ ಜನರು ಯಾತ್ರೆ ಮಾಡುವ ನಿರೀಕ್ಷೆಗಳಿದೆ. ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ 3,000 ಜನರು ಉಳಿದುಕೊಳ್ಳಲು ವ್ಯವಸ್ಥೆ ಇರುವ ಯಾತ್ರಿ ನಿವಾಸ ನಿರ್ಮಾಣ ಮಾಡಲಾಗಿದೆ. ಅಲ್ಲಿ ಭಕ್ತಾಧಿಗಳು ತಂಗಲು ಅವಕಾಶ ಮಾಡಿಕೊಡಲಾಗಿದೆ.
2019 ಆಗಸ್ಟ್ 5 ರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಮೊದಲ ಬಾರಿ ಯಾತ್ರೆಯನ್ನು ಭದ್ರತೆಯ ಕಾರಣದಿಂದ ರದ್ದು ಮಾಡಲಾಗಿತ್ತು. ಇದಾದ ಬಳಿಕ ಎರಡು ವರ್ಷ ಕೊರೊನಾ ಕಾರಣಗಳಿಂದ ರದ್ದು ಮಾಡಲಾಗಿತ್ತು. ಕಳೆದ ಮೂರು ವರ್ಷಗಳಿಂದ ಅಮರನಾಥ ಯಾತ್ರೆ ನಡೆದಿರಲಿಲ್ಲ. ಇದನ್ನೂ ಓದಿ: ನದಿಗೆ ಹಾರಿ ಅರಣ್ಯಾಧಿಕಾರಿ ಆತ್ಮಹತ್ಯೆ?
ಶ್ರೀನಗರ: ಸ್ವಾತಂತ್ರ್ಯದ 75 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದ ಉಧಮ್‍ಪುರದ ಗ್ರಾಮ ಸದ್ದಲ್‍ಗೆ ಕೇಂದ್ರ ಸರ್ಕಾರದ ‘ಅನ್ಟೈಡ್ ಗ್ರ್ಯಾಂಟ್ಸ್ ಸ್ಕೀಮ್’ ಅಡಿಯಲ್ಲಿ ಬುಧವಾರ ಮೊದಲ ಬಾರಿಗೆ ವಿದ್ಯುತ್ ಪಡೆಯುವ ಮೂಲಕ ಕತ್ತಲೆಯಿಂದ ಮುಕ್ತಿ ದೊರೆತಿದೆ.
ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದರಿಂದ ಈ ಗ್ರಾಮದ ನಿವಾಸಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯಕ್ಕಾಗಿ ಆಶಾಭಾವನೆ ಮೂಡಿಸಿದ್ದಾರೆ. ಮೊದಲು, ಹಳ್ಳಿಯಲ್ಲಿ ಸಂಜೆಯ ಸಮಯದಲ್ಲಿ ಬೆಳಕಿನ ಏಕೈಕ ಮೂಲವೆಂದರೆ ಮೇಣದಬತ್ತಿಗಳು ಮತ್ತು ಎಣ್ಣೆ ದೀಪಗಳು, ಅದು ಕ್ರಮೇಣ ಅವರ ದೈನಂದಿನ ಜೀವನದ ಭಾಗವಾಯಿತು. ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಗ್ರಹ ಮಾಡೋದು ಹರಾಮ್, ಆದ್ರೇ ಜೀವನೋಪಾಯಕ್ಕೆ ಅದು ಅನಿವಾರ್ಯ: ಉಮರ್ ಷರೀಫ್
ಈ ಕಾರ್ಯಾಚರಣೆಯ ಯಶಸ್ಸಿಗಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಜಾರಿಗೆ ಬಂದ ಪಂಚಾಯತ್ ರಾಜ್ ಕಾಯ್ದೆಯ ಮೂರು ಹಂತದ ವ್ಯವಸ್ಥೆಗೆ ಗ್ರಾಮಸ್ಥರು ಮನ್ನಣೆ ನೀಡಿದ್ದಾರೆ. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ, ಉಧಮ್‍ಪುರ ಆಡಳಿತ ಮತ್ತು ವಿದ್ಯುತ್ ಇಲಾಖೆಗೆ ಮಕ್ಕಳು ಕೃತಜ್ಞರಾಗಿದ್ದಾರೆ. ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಖಂಡಿಸಿ ಧಾರವಾಡದಲ್ಲಿ ಪ್ರತಿಭಟನೆ
8 ನೇ ತರಗತಿ ವಿದ್ಯಾರ್ಥಿನಿ ಪ್ಯಾರ್ ಸಿಂಗ್ ಅನ್ನುವವರು ಮಾತನಾಡಿ, ಈಗ ನಾವು ಯಾವುದೇ ತೊಂದರೆಯಿಲ್ಲದೆ ಆರಾಮವಾಗಿ ಓದುತ್ತೇವೆ. ಈ ಹಿಂದೆ ವಿದ್ಯುತ್ ಇಲ್ಲದ ಕಾರಣ ಎಣ್ಣೆ ದೀಪ ಹಚ್ಚಿಕೊಂಡು ಓದಬೇಕಾಗಿತ್ತು. ಇದರಿಂದ ನಮಗೆ ಹೆಚ್ಚು ಬೇಸರ ತರಿಸುತ್ತಿತು ಎಂದರು. 72 ವರ್ಷದ ತಾತ ಬದರಿನಾಥ್ ಅವರು, ಮಾತನಾಡಿ, ಹಿಂದಿನ ಪೀಳಿಗೆಯವರಂತು ವಿದ್ಯುತ್ ಪವಾಡವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟು ಸುದೀರ್ಘ ಕಾಯುವಿಕೆಯ ನಂತರ ನಮಗೆ ವಿದ್ಯುತ್ ಒದಗಿಸಿದ ಇಲಾಖೆಗೆ ಇಂದು ನಾವು ಕೃತಜ್ಞರಾಗಿರುತ್ತೇವೆ ಎಂದು ಖುಷಿಪಟ್ಟರು.
ಎಕ್ಸಿಕ್ಯೂಟಿವ್ ಇಂಜಿನಿಯರ್ (ಎಕ್ಸ್‌ಇಎನ್), ಪವರ್ ಡೆವಲಪ್‍ಮೆಂಟ್ ಡಿಪಾರ್ಟ್‍ಮೆಂಟ್ (ಪಿಡಿಡಿ) ಉಧಮ್‍ಪುರ್ ಜಾವೇದ್ ಹುಸೇನ್ ಅಖ್ತರ್ ಮಾತನಾಡಿ, ಗ್ರಾಮ ಸದ್ದಲ್ ಭಾರತ ಸರ್ಕಾರದ ನಿರ್ದೇಶನಗಳೊಂದಿಗೆ ಸಂಪೂರ್ಣವಾಗಿ ವಿದ್ಯುದ್ದೀಕರಿಸಲ್ಪಟ್ಟಿದೆ. ಇದಕ್ಕೆ 10.28 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ತಿಳಿಸಿದರು.
ಸರ್ಕಾರ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ, 25 ಕೆವಿಎ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಿದ ನಂತರ ಗ್ರಾಮದ ಸುಮಾರು 25 ಮನೆಗಳು ಪ್ರಯೋಜನ ಪಡೆದಿವೆ. ಇದು ಜಿಲ್ಲೆಯ ವಿದ್ಯುತ್ ವಲಯದಿಂದ ಐತಿಹಾಸಿಕ ಸಾಧನೆಯಾಗಿದೆ. ಉಧಂಪುರದ ಪಂಚರಿ ತಹಸಿಲ್‍ನಲ್ಲಿರುವ ಪಂಚಾಯತ್ ಹಲ್ಕಾ ಕುಲ್ತ್ಯಾರ್ ಬಾಳದ ವಾರ್ಡ್ ಸಂಖ್ಯೆ 5ರ ಅಡಿಯಲ್ಲಿ ಈ ಗ್ರಾಮವು ಬರುತ್ತದೆ.
ಶ್ರೀನಗರ: ಪುಲ್ವಾಮಾದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆದ ಕೆಲವೇ ಗಂಟೆಗಳ ನಂತರ ಉಗ್ರರು ನಡೆಸಿದ ದಾಳಿಯ ವೇಳೆ ಸಿಆರ್‌ಪಿಎಫ್ ಸಿಬ್ಬಂದಿಯೊಬ್ಬರು ಹುತಾತ್ಮರಾಗಿದ್ದು, ಇನ್ನೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಶ್ರೀನಗರದ ಭದ್ರತಾ ಪಡೆಗಳ ಜಂಟಿ ಚೆಕ್ ಪಾಯಿಂಟ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ದಿ ಕಾಶೀರ್ ಫೈಲ್ಸ್ ಸಿನಿಮಾ ಬಂದ ನಂತರ ಕಾಶ್ಮೀರಿ ಕಣಿವೆಯ ಒಂದೊಂದೇ ದುರಂತ ಕಥೆಗಳು ಆಚೆ ಬರುತ್ತಿವೆ. ಕಾಶ್ಮೀರ ಪಂಡಿತರ ವಲಸೆ ಮತ್ತು ಮಾರಣಹೋಮದ ಕಥೆಗಳನ್ನು ಸಾಮಾನ್ಯರಲ್ಲ, ಸಿಲೆಬ್ರಿಟಿಗಳು ಕೂಡ ಹೇಳಿಕೊಳ್ಳುತ್ತಿದ್ದಾರೆ. ಅದೂ, ತಮ್ಮ ಕುಟುಂಬದಲ್ಲಿ ನಡೆದ ಘಟನೆಗಳನ್ನು ಎನ್ನುವುದು ವಿಶೇಷ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
ನಾಲ್ಕು ದಿನಗಳ ಹಿಂದೆಯಷ್ಟೇ ಬಾಲಿವುಡ್ ನಟಿ ಯಾಮಿ ಗೌತಮ್ ತಮ್ಮ ಕುಟುಂಬಕ್ಕೆ ಆದ ದೌರ್ಜನ್ಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಇದೀಗ ಮತ್ತೋರ್ವ ಬಾಲಿವುಡ್ ನಟಿ ಸಂದೀಪ ಧರ್ ಕೂಡ ತಮ್ಮ ಜೀವನದಲ್ಲಿ ನಡೆದ ಆ ದುರಂತದ ಕಥೆಯನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?
“ಅವರು ಹೇಳಿದರು, ಕುಟುಂಬದ ಸಮೇತ ಕಾಶ್ಮೀರ ತೊರೆಯಬೇಕೆಂದು. ರಾತ್ರೋರಾತ್ರಿ ಹೋಗುವುದು ಎಲ್ಲಿಗೆ? ಅದೂ ನಮ್ಮದೇ ನೆಲೆಬಿಟ್ಟು. ಹಿಂಸೆಗೆ ಹೊರಡಲೇಬೇಕಿತ್ತು. ಅದಕ್ಕಾಗಿ ಅಪ್ಪ ಟ್ರಕ್ ವೊಂದರ ಸಹಾಯ ಪಡೆದು. ಟ್ರಕ್ ನಲ್ಲಿ ಬಚ್ಚಿಟ್ಟುಕೊಂಡೇ ಹೋಗುವುದು ಅನಿವಾರ್ಯವಾಗಿತ್ತು. ನನ್ನ ತಂಗಿಯನ್ನು ಕಾಪಾಡಿಕೊಳ್ಳಲು ನನ್ನ ತಂದೆ ಟ್ರಕ್ ಸೀಟ್ ಕೆಳಗೆ ಬಚ್ಚಿಟ್ಟಿದ್ದರು. ಮಧ್ಯೆ ರಾತ್ರಿ ಹೀಗೆ ಹೋಗುವುದು ಎಷ್ಟು ಕಷ್ಟ ಎನ್ನುವುದನ್ನು ನಾನು ಬಲ್ಲೆ. ದಿ ಕಾಶ್ಮೀರ್ ಫೈಲ್ಸ್ ನಲ್ಲೂ ಇಂತಹ ದೃಶ್ಯಗಳಿವೆ. ಅದನ್ನು ನೋಡಿ ನನಗೆ ಜೀವವೇ ಹೋದಂತಾಯಿತು. ತನ್ನ ತವರು ಮನೆ ಬಗ್ಗೆ ಸದಾ ನೆನಪಿಸಿಕೊಳ್ಳುತ್ತಿದ್ದ ನನ್ನ ಅಜ್ಜಿ ತೀರಿಹೋದರು. ಅದೊಂದು ನರಕಸದೃಶ್ಯ ಬದುಕು” ಎಂದು ಸಂದೀಪ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಇಂತಹ ಚಿತ್ರವನ್ನು ಮಾಡಿ, ಜಗತ್ತಿಗೆ ಸತ್ಯವನ್ನು ತೋರಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ಧನ್ಯವಾಗಳನ್ನೂ ಅವರು ತಿಳಿಸಿದ್ದಾರೆ.
ಹೆಚ್ಚಿನ ಭಯೋತ್ಪಾದಕರು ಈ ಜಾಗದಲ್ಲಿ ಅಡಗಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಕಾಶ್ಮೀರದಲ್ಲಿ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಗಳ ಜಂಟಿ ತಂಡಗಳ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ತಿಳಿದು ಬಂದಿದೆ.
ಇದು ಈ ವರ್ಷದ 21ನೇ ಎನ್‍ಕೌಂಟರ್ ಆಗಿದ್ದು, ಇಲ್ಲಿಯವರೆಗೆ, ಭದ್ರತಾ ಪಡೆಗಳು 36 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿದೆ. 20ಕ್ಕೂ ಹೆಚ್ಚು ಭಯೋತ್ಪಾದಕರನ್ನು ಜೀವಂತವಾಗಿ ಸೆರೆಹಿಡಿಯಲಾಗಿದ್ದು, ಭಯೋತ್ಪಾದಕ ಸಹಚರರ ವಿರುದ್ಧದ ಕಾರ್ಯಾಚರಣೆಯೂ ಮುಂದುವರಿದಿದೆ.
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಹಾಡಹಗಲೇ ಶ್ರೀನಗರದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಮತ್ತು ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಂದು ಭಾನುವಾರವಾದ ಕಾರಣ ಮಾರುಕಟ್ಟೆಯಲ್ಲಿ ಜನ ಜಂಗುಳಿ ಇರುತ್ತದೆ. ಇದನ್ನೇ ಗುರಿಯಾಗಿಟ್ಟುಕೊಂಡು ಉಗ್ರರು ದಾಳಿ ನಡೆಸಿದ್ದಾರೆ.ಸಂಜೆ 4:20ರ ಸುಮಾರಿಗೆ ಹರಿ ಸಿಂಗ್ ಹೈ ಸ್ಟ್ರೀಟ್‍ನಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳ ನಿಯೋಜನೆಯ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಮೊಹಮ್ಮದ್ ಅಸ್ಲಾಮ್ ಮಖ್ದೂಮಿ(71) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Jammu and Kashmir: Several injured including police personnel in a grenade attack at Amira Kadal market, Srinagar. All the injured have been shifted to hospital: Police pic.twitter.com/mfhDhlKD2v
ಉಳಿದ ಗಾಯಾಳುಗಳನ್ನು ಶ್ರೀ ಮಹಾರಾಜ ಹರಿ ಸಿಂಗ್ (ಎಸ್‍ಎಂಹೆಚ್‍ಎಸ್) ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಮತ್ತು ಘಟನೆಯಲ್ಲಿ ಗಾಯಗೊಂಡವರ ಪೈಕಿ ಪೊಲೀಸರೂ ಸಹ ಇದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲ್ವಾಲ್ ಹೇಳಿದ್ದಾರೆ. ಇದನ್ನೂ ಓದಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅನುಷ್ಕಾ ಶರ್ಮಾ ಶುಭ ಹಾರೈಕೆ
#UPDATE | One civilian died in the grenade attack at Amira Kadal market in Srinagar.
ಇದೀಗ ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಕೋರ ಉಗ್ರನಿಗಾಗಿ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿವೆ. ಅತಿ ಶೀಘ್ರದಲ್ಲೇ ಉಗ್ರನನ್ನು ಪತ್ತೆ ಹಚ್ಚಿ ಬಂಧಿಸುವುದಾಗಿ ಭದ್ರತಾ ಪಡೆಗಳು ತಿಳಿಸಿವೆ. ಈವರೆಗೆ ಯಾವುದೇ ಉಗ್ರ ಸಂಘಟನೆಯೂ ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ತಿಳಿದುಬಂದಿದೆ.
Condemn this dastardly attack. People of J&K have been paying with their lives & sadly neither India nor Pakistan are doing anything to end the conflict & stop this bloodshed. My prayers are with the bereaved families & loved ones. https://t.co/USJxsk04vv
ಸದ್ಯ ಈ ಕುರಿತಂತೆ ಟ್ವೀಟ್ ಮಾಡಿರುವ ಎಂದು ಸಚಿವೆ ಮೆಹಬೂಬಾ ಮುಫ್ತಿ ಅವರು, ಈ ಭೀಕರ ದಾಳಿಯನ್ನು ಖಂಡಿಸುತ್ತೇನೆ. ಜಮ್ಮು ಮತ್ತು ಕಾಶ್ಮೀರದ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ದುಃಖಕರ ವಿಚಾರವೆಂದರೆ ಭಾರತ ಅಥವಾ ಪಾಕಿಸ್ತಾನವು ಈ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಈ ರಕ್ತಪಾತವನ್ನು ನಿಲ್ಲಿಸಲು ಏನನ್ನೂ ಮಾಡುತ್ತಿಲ್ಲ. ದುಃಖದಲ್ಲಿರುವ ಕುಟುಂಬಸ್ಥರಿಗೆ ಮತ್ತು ಅವರ ಪ್ರೀತಿಪಾತ್ರರಿಗಾಗಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಶ್ರೀನಗರ: 31 ತಿಂಗಳ ಕಾಲ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ಶಾಲೆಗಳು ಮತ್ತೆ ಪುನಾರಂಭವಾಗಿದೆ.
ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತು. ಅಲ್ಲದೆ ಈ ಪ್ರದೇಶಗಳ ಇಂಟರ್ನೆಟ್ ಸೇವೆಗೂ ಸಹ ನಿರ್ಬಂಧ ಹೇರಲಾಗಿತ್ತು. ಇದೇ ವೇಳೆ ಗಡಿ ಪ್ರದೇಶದಲ್ಲಿ ಭದ್ರತೆ ಮತ್ತು ಕೋವಿಡ್ ಹಿನ್ನೆಲೆ ಶಾಲೆಗಳನ್ನು ಮುಚ್ಚಲಾಗಿತ್ತು. ಪರಿಣಾಮ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳಿಗೆ ಆನ್‍ಲೈನ್ ಕ್ಲಾಸ್ ಕೇಳಿಸಿಕೊಳ್ಳುವುದು ಕಷ್ಟವಾಗಿತ್ತು. ಆದರೆ 31 ತಿಂಗಳ ಎಲ್ಲ ಕಷ್ಟಗಳ ನಂತರ ಮತ್ತೆ ಶಾಲೆ ಪ್ರಾರಂಭವಾಗಿದ್ದು, ಲಕ್ಷಾಂತರ ಮಕ್ಕಳು ಸಂತೋಷಗೊಂಡಿದ್ದಾರೆ.
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ, 9 ನೇ ತರಗತಿಯ ವಿದ್ಯಾರ್ಥಿ ಖಾರಿಯಾ ತಮ್ಮ ಶಾಲೆ ಮತ್ತೆ ಆರಂಭವಾದ ಕುರಿತು ಮಾತನಾಡಿದ್ದಾರೆ. ಈ ವೇಳೆ ಅವರು, ಯಾವುದೇ ಸ್ನೇಹಿತರು ನನ್ನನ್ನು ಗುರುತಿಸುತ್ತಿಲ್ಲ. ನಾನು ನನ್ನ ಬಸ್ ಸಂಖ್ಯೆ, ನನ್ನ ತರಗತಿ ಯಾವುದು ಎಂಬುದನ್ನೆ ಮರೆತಿದ್ದೇನೆ. ಈಗ ನಾನು ನನಗೆ ನೆನಪಿರುವ ಯಾರನ್ನಾದರೂ ಹುಡುಕಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದನು.
ಶ್ರೀನಗರದ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ 4,500 ವಿದ್ಯಾರ್ಥಿಗಳಿದ್ದು, ಅವರಿಗೆ ಭವ್ಯ ಸ್ವಾಗತವನ್ನು ಏರ್ಪಡಿಸಲಾಗಿತ್ತು. ಪುನರಾರಂಭದ ಮೊದಲ ವಾರವನ್ನು ಎಲ್ಲ ಶಾಲೆಗಳು ‘ಸಂತೋಷದ ವಾರ’ ಎಂದು ಘೋಷಿಸಲಾಗಿದೆ.
ಶಿಕ್ಷಕ ಸೈಯದ್ ಸುಮೈರಾ ಈ ಕುರಿತು ಮಾತನಾಡಿದ್ದು, 31 ತಿಂಗಳ ನಂತರ ನಾನು ಇಂದು ಜೀವಂತವಾಗಿದ್ದೇನೆ. ನಾವು ಬದುಕಿದ್ದೇವೆ. ನಾನು ಮತ್ತೆ ಇತರ ಶಿಕ್ಷಕರು ಯಾವುದೇ ರೀತಿ ವಿರಾಮ ತೆಗೆದುಕೊಳ್ಳದೆ ಶಾಲೆಗೆ ಬರುತ್ತಿದ್ದೆವು. ಆದರೆ ಮಕ್ಕಳಿಲ್ಲದೆ ಶಾಲೆ ದೆವ್ವದ ಮನೆಯಂತೆ ಕಾಣುತ್ತಿತ್ತು. ನಮ್ಮ ಕಣ್ಣಿಗೆ ಶಾಲೆಯ ಕಟ್ಟಡ ಭಯಾನಕವಾಗಿ ಕಾಣುತ್ತಿತ್ತು. ಆದರೆ ಇಂದು ಶಾಲೆಗೆ ಜೀವ ಬಂದಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಶಾಲೆಯನ್ನು ಮುಚ್ಚಿದ ಪರಿಣಾಮ ಶಿಕ್ಷಣದ ಜೊತೆಗೆ ಮಕ್ಕಳ ಸಾಮಾಜಿಕ ಮತ್ತು ಭಾವನಾತ್ಮಕ ಬಾಂಧವ್ಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು.