Tag: Srinagar

  • ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ

    ಪಾಕ್, ಚೀನಾಕ್ಕೆ ಠಕ್ಕರ್ – ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG- 29 ಯುದ್ಧ ವಿಮಾನ ನಿಯೋಜನೆ

    ಶ್ರೀನಗರ: ಶತ್ರುದೇಶಗಳಾದ ಪಾಕಿಸ್ತಾನ (Pakistan) ಮತ್ತು ಚೀನಾ (China) ಬೆದರಿಕೆಗಳನ್ನು ಎದುರಿಸುವ ಸಲುವಾಗಿ ಭಾರತ ಆಗಸ್ಟ್ 12ರ ಶನಿವಾರದಂದು ಶ್ರೀನಗರದಲ್ಲಿ (Srinagar) ಮೇಲ್ದರ್ಜೆಗೆರಿಸಿದ MiG -29 ಯುದ್ಧವಿಮಾನಗಳನ್ನು (Fighter Jet) ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.

    ಟ್ರೈಡೆಂಟ್ಸ್ ಸ್ಕ್ವಾಡ್ರನ್ (Tridents Squadron) ಅನ್ನು ಉತ್ತರದ ರಕ್ಷಕ ಎಂದು ಕರೆಯುತ್ತಿದ್ದು, ಶ್ರೀನಗರದ ವಾಯುನೆಲೆಯಲ್ಲಿ MiG -21 ಸ್ಕ್ವಾಡ್ರನ್‌ಗಳ ಬದಲಾಗಿ MiG -29 ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಗಡಿ ರಾಷ್ಟ್ರಗಳಿಂದ ಬರುವ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಫೈಟರ್ ಜೆಟ್‌ಗಳು ಒಳಗೊಂಡಿವೆ. ಇದನ್ನೂ ಓದಿ: ಭಾರತದಲ್ಲಿ ಏಕೆ ಮುಸ್ಲಿಮರನ್ನ ಕಂಡ್ರೆ ಇಷ್ಟೊಂದು ದ್ವೇಷ, ನಮ್ಮ ಮನದ ಮಾತನ್ನೂ ಕೇಳಿ – ಮೋದಿಗೆ ಮೌಲ್ವಿ ಮನವಿ

    2020ರ ಗಲ್ವಾನ್ ಘರ್ಷಣೆಯ ಮೊದಲ ಬಾರಿಗೆ MiG -29ರ ಮೊದಲನೇ ವಿಮಾನವನ್ನು ಲಡಾಖ್ ಸೆಕ್ಟರ್‌ನಲ್ಲಿ ನಿಯೋಜಿಸಲಾಗಿತ್ತು. ಇದು ಚೀನಾದ ಯಾವುದೇ ಬೆದರಿಕೆಯನ್ನು ವಿಫಲಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನೂ ಓದಿ: ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಪ್ರಧಾನಿ ನಗುತ್ತ ಜೋಕ್ ಮಾಡಿಕೊಂಡಿದ್ದಾರೆ – ರಾಹುಲ್ ಕಿಡಿ

    ಭಾರತೀಯ ವಾಯುಪಡೆಯ ಪೈಲೆಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ (Vipul Sharma) ಈ ಕುರಿತು ಮಾಹಿತಿ ನೀಡಿದ್ದು, ಶ್ರೀನಗರ ಕಾಶ್ಮೀರ ಕಣಿವೆ ಮಧ್ಯ ಭಾಗದಲ್ಲಿದೆ ಮತ್ತು ಅದರ ಎತ್ತರವು ಬಯಲು ಪ್ರದೇಶಕ್ಕಿಂತ ಹೆಚ್ಚಾಗಿರುತ್ತದೆ. ಈ ಪ್ರದೇಶದಲ್ಲಿ ಒತ್ತಡ ಹೆಚ್ಚಾಗಿದ್ದು, MiG -29 ಇದನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ್ರೋಹ ಕಾನೂನು ರದ್ದು: ಅಮಿತ್ ಶಾ ಮಸೂದೆ ಮಂಡನೆ

    ಮತ್ತೊಬ್ಬ ಲೀಡರ್ ಶಿವಂ ರಾಣಾ ಈ ಬಗ್ಗೆ ಮಾತನಾಡಿದ್ದಾರೆ. ಮೇಲ್ದರ್ಜೆಗೆ ಏರಿಸಿದ ಯುದ್ಧವಿಮಾನಗಳು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನದ ಅತಿದೊಡ್ಡ ಸಾಮರ್ಥ್ಯವೆಂದರೆ ಅದು ಭಾರತೀಯ ವಾಯುಪಡೆಯಿಂದ ಆರಿಸಲ್ಪಟ್ಟ ಪೈಲೆಟ್‌ಗಳು ಇದರಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಶತ್ರು ವಿಮಾನವನ್ನು ಜ್ಯಾಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಯರ ಅತ್ಯಾಚಾರಕ್ಕೆ ಗಲ್ಲುಶಿಕ್ಷೆ, ಗ್ಯಾಂಗ್‌ ರೇಪ್‌ಗೆ 20 ವರ್ಷ ಜೈಲು – ಲೋಕಸಭೆಯಲ್ಲಿ 3 ಮಸೂದೆ ಮಂಡಿಸಿದ ಅಮಿತ್‌ ಶಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ

    ಶಾಲೆಯಲ್ಲಿ ಅಬಯಾ ಧರಿಸಬಾರದು ಎಂದಿದ್ದಕ್ಕೆ ಪ್ರಿನ್ಸಿಪಾಲ್‌ಗೆ ಭಯೋತ್ಪಾದಕರಿಂದ ಬೆದರಿಕೆ

    ಶ್ರೀನಗರ: ಶಾಲೆಯಲ್ಲಿ ವಸ್ತ್ರಸಂಹಿತೆ (Dress Code) ಅನ್ನು ಅನುಸರಿಸಬೇಕಾಗಿ ಆದೇಶಿಸಿದ ಪ್ರಾಂಶುಪಾಲೆಗೆ (Principal) ಭಯೋತ್ಪಾದಕರ (Terrorists) ಗುಂಪೊಂದು ಬೆದರಿಕೆ ಹಾಕಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ (Srinagar) ನಡೆದಿದೆ. ಇದಾದ ಬಳಿಕ ತಕ್ಷಣವೇ ಪ್ರಾಂಶುಪಾಲರು ಕ್ಷಮೆಯಾಚಿಸಿ ವಿದ್ಯಾರ್ಥಿನಿಯರಿಗೆ ಅಬಯಾ (Abaya) ಧರಿಸಲು ಅನುಮತಿ ನೀಡಿದ್ದಾರೆ.

    ಶ್ರೀನಗರದ ವಿಶ್ವ ಭಾರತಿ ಎಂಬವರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಕೆಲ ವಿದ್ಯಾರ್ಥಿನಿಯರಿಗೆ ಶಾಲೆಯೊಳಗೆ ಅಬಯಾ (ಉದ್ದನೆಯ ನಿಲುವಂಗಿ) ಧರಿಸದಂತೆ ಹೇಳಿದ್ದರು. ಆದರೂ ಸಮವಸ್ತçದೊಂದಿಗೆ ಹಿಜಬ್ (ತಲೆಯ ಸ್ಕಾರ್ಫ್) ಧರಿಸಲು ಅನುಮತಿ ನೀಡಿದ್ದರು. ಆದರೆ ಕೆಲವು ವಿದ್ಯಾರ್ಥಿನಿಯರು ಡ್ರೆಸ್ ಕೋಡ್ ಅನ್ನು ಒಪ್ಪಿಕೊಳ್ಳಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದಾರೆ.

    ಪ್ರಾಂಶುಪಾಲರು ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಿದ್ದಾರೆ. ಇದು ತಮ್ಮ ಧಾರ್ಮಿಕ ಆಚರಣೆಗಳ ಪ್ರಕಾರ ಧರಿಸಲು ಬಯಸುವ ತಮ್ಮ ಆಯ್ಕೆಯ ವಿರುದ್ಧವಾಗಿದೆ ಎಂದು ವಿದ್ಯಾರ್ಥಿನಿಯರು ಪ್ರತಿಭಟಿಸಿದ್ದಾರೆ. ಅಬಯಾ ಧರಿಸಲೇಬೇಕಾದರೆ ನೀವು ಶಾಲೆಗೆ ಬರುವುದು ಬೇಡ. ಮದರಸಾಗೆ ಸೇರಿಕೊಳ್ಳಿ ಎಂದು ಪ್ರಿನ್ಸಿಪಾಲ್ ಹೇಳಿರುವುದಾಗಿ ಕೆಲವರು ಆರೋಪಿಸಿದ್ದಾರೆ. ಆದರೆ ಈ ಆರೋಪಗಳನ್ನು ಪ್ರಾಂಶುಪಾಲರು ನಿರಾಕರಿಸಿದ್ದಾರೆ.

    ಈ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗಿ ಬಳಿಕ ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿತು. ಸುದ್ದಿ ವಾಹಿನಿಗಳಲ್ಲೂ ಪ್ರಸಾರ ಮಾಡಲಾಯಿತು. ರಾಜಕೀಯ ಮುಖಂಡರು ಶಾಲೆಯ ಅಧಿಕಾರಿಗಳನ್ನು ಟೀಕಿಸಿದರು ಮಾತ್ರವಲ್ಲದೇ ಕರ್ನಾಟಕದಲ್ಲಿ ಹಿಜಬ್ ನಿಷೇಧವಾದ ಘಟನೆಗೆ ಹೋಲಿಸಿದರು. ಇದನ್ನೂ ಓದಿ: ರೈಲು ದುರಂತದ ಬಳಿಕ ಒಡಿಶಾದಲ್ಲಿ ಒಂದಿಲ್ಲೊಂದು ಅವಘಡ – ರೈಲು ಬೋಗಿಯಲ್ಲಿ ಆಕಸ್ಮಿಕ ಬೆಂಕಿ

    ಬಳಿಕ ಪ್ರಾಂಶುಪಾಲರು ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿನಿಯರು ಹಿಜಬ್ ಧರಿಸುತ್ತಾರೆ. ಆದರೆ ಅಬಯಾ ಧರಿಸುವವರು ಕೆಲವೇ ಹುಡುಗಿಯರು ಇದ್ದಾರೆ. ಹೀಗಾಗಿ ಶಾಲೆಯೊಳಗೆ ಅಬಯಾ ಧರಿಸದಂತೆ ಹೇಳಿರುವುದಾಗಿ ಅವರು ಸ್ಪಷ್ಟಪಡಿಸಲು ಯತ್ನಿಸಿದರು. ಆದರೆ ಈ ವಿಚಾರ ಅಲ್ಲಿಗೇ ತಣ್ಣಗಾಗದೇ ಭಯೋತ್ಪಾದಕರು ಕೂಡಾ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದರು.

    ಘಟನೆ ದೊಡ್ಡ ವಿವಾದವಾಗುತ್ತಿದ್ದಂತೆ ಭಯೋತ್ಪಾದಕರ ಗುಂಪೊಂದು ಶಾಲೆಯ ಪ್ರಾಂಶುಪಾಲರನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿದೆ. ಆಕೆ ಬಲಪಂಥೀಯಳೆಂದು ಆರೋಪಿಸಿದೆ. ಯಾವಾಗ ವಿಚಾರ ಭಯೋತ್ಪಾದಕರ ವರೆಗೆ ಹೋಯಿತೋ ಅಂದೇ ಸಂಜೆ ವೇಳೆಗೆ ಪ್ರಾಂಶುಪಾಲರು ಕ್ಷಮೆಯಾಚಿಸಿದ್ದಾರೆ.

    ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ನನ್ನ ಸಂಭಾಷಣೆಯನ್ನು ತಪ್ಪಾಗಿ ನಿರೂಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ, ವಿದ್ಯಾರ್ಥಿಗಳು ಅಥವಾ ಪೋಷಕರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಅದಕ್ಕೆ ಬೇಷರತ್ ಕ್ಷಮೆಯಾಚಿಸುತ್ತೇನೆ. ಇಂದಿನಿಂದ ವಿದ್ಯಾರ್ಥಿನಿಯರು ಅಬಯಾ ಧರಿಸಬಹುದು ಮತ್ತು ತರಗತಿಗಳಲ್ಲಿ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಇದನ್ನೂ ಓದಿ: ಟಿಕೆಟ್.. ಟಿಕೆಟ್.. ಟಿಕೆಟ್.. – ಸರ್ಕಾರಿ ಬಸ್ ಕಂಡಕ್ಟರ್ ಆಗಲಿದ್ದಾರೆ ಸಿಎಂ ಸಿದ್ದು!

  • ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಶ್ರೀನಗರ: ಕ್ರೂಸರ್ (Cruiser) ವಾಹನವೊಂದು ಕಮರಿಗೆ ಬಿದ್ದು 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ (jammu Kashmir) ದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ಸುದೇಶ್ ಕುಮಾರ್, ಅಖ್ತರ್ ಹುಸೇನ್, ಅಬ್ದುಲ್ ರಶೀದ್, ಮುಬ್ಶರ್ ಅಹ್ಮದ್, ಇಟ್ವಾ, ರಾಹುಲ್ ಮತ್ತು ಕರಣ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಆತನನ್ನು ಕಿಶ್ತ್ವಾದಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ದೇವಾನ್ಶ್ ಯಾದವ್ ಹೇಳಿದರು.

    ದಂಗದೂರು ಅಣೆಕಟ್ಟು ಸಮೀಪ ಪಾಕಲ್ ದುಲ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಕಾಮಗಾರಿ ಸ್ಥಳದಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಎಂದಿನಂತೆ ಸುಮಾರು 10 ಮಂದಿ ಕಾರ್ಮಿಕರು ದಚನ್ ಗ್ರಾಮದಲ್ಲಿರುವ ಕಾಮಗಾರಿ ಸ್ಥಳಕ್ಕೆ ಕ್ರೂಸರ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಆಳದ ಕಮರಿಗೆ ಬಿದ್ದಿದೆ.

    ಕ್ರೂಸರ್ ಕಂದಕಕ್ಕೆ ಉರುಳಿದ ಸುದ್ದಿಯಾಗುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಎಲ್ಲರ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ವಿವರಿಸಿದ್ದಾರೆ. ಇದನ್ನೂ ಓದಿ: The Kerala Story Effect: ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಗೆಳತಿಯಿಂದ ಪ್ರಿಯಕರನ ವಿರುದ್ಧ ರೇಪ್ ಕೇಸ್

    ಅಪಘಾತದ ವಿಚಾರ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕಿಶ್ತ್ವಾರ್ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

  • ಭೂಕಂಪನದ ಮಧ್ಯೆಯೇ ವೈದ್ಯರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ರು!

    ಭೂಕಂಪನದ ಮಧ್ಯೆಯೇ ವೈದ್ಯರು ಹೆರಿಗೆ ಮಾಡಿಸಿ ತಾಯಿ, ಮಗುವಿನ ಜೀವ ಉಳಿಸಿದ್ರು!

    ಶ್ರೀನಗರ: ಭೂಕಂಪನ (Erathquake) ನಡೆಯುತ್ತಿದ್ದಂತೆ ಹೆರಿಗೆ ಮಾಡಿಸಿ ವೈದ್ಯರು ತಾಯಿ-ಮಗುವಿನ ಜೀವವನ್ನು ಉಳಿಸಿದ ಘಟನೆ ಅನಂತ್‍ನಾಗ್ ಆಸ್ಪತ್ರೆಯಲ್ಲಿ ನಡೆದಿದೆ.

    ಮಂಗಳವಾರ ಮಹಿಳೆ ಹೆರಿಗೆಗೆಂದು (Delivery) ಬಿಜ್‍ಬೆಹರಾದ ಎಸ್‍ಡಿಹೆಚ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅದರಂತೆ ವೈದ್ಯರು ಹೆರಿಗೆ ಕಾರ್ಯಕ್ಕೆ ಮುಂದಾದ ಸಮಯದಲ್ಲಿ ಭೂಮಿ ಕಂಪಿಸಿದೆ. ಈ ವೇಳೆ ಧೃತಿಗೆಡದ ವೈದ್ಯರು ಲೋವರ್ ಸೆಗ್ಮೆಂಟ್ ಸಿಸೇರಿಯನ್ (Lower Segment Caesarean) ಮೂಲಕ ಯಶಸ್ವಿಯಾಗಿ ಹೆರಿಗೆ ಮಾಡಿ ತಾಯಿ ಹಾಗೂ ಮಗುವಿನ ಜೀವ ಉಳಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ, ಲೋವರ್ ಸೆಗ್ಮೆಂಟ್ ಸಿಸೇಯರಿನ್ ಮಾಡಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಸಿಬ್ಬಂದಿ ಶಸ್ತ್ರಚಿಕಿತ್ಸೆಯ ದೃಶ್ಯವನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ್ದರು.

    ವೀಡಿಯೋದಲ್ಲಿ ವೈದ್ಯರು ಹೆರಿಗೆ ಮಾಡಿಸುತ್ತಿದ್ದ ಸಂದರ್ಭದಲ್ಲಿ ಭೂಮಿ ಕಂಪಿಸುವುದನ್ನು ನೋಡಬಹುದು. ಅಫ್ಘಾನಿಸ್ತಾನದ ಹಿಂಡು ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಪರಿಣಾಮ ಅನಂತ್‍ನಾಗ್ ಕಣಿವೆಯಲ್ಲಿಯೂ ಭೂಮಿ ಕಂಪಿಸಿದೆ. ಭೂಕಂಪನದಿಂದ ಬೆಚ್ಚಿಬಿದ್ದ ಜನ ಮನೆಯಿಂದಾಚೆ ಓಡಿ ಬಂದಿದ್ದು, ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

  • ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಜಮ್ಮು ಕಾಶ್ಮೀರಕ್ಕೆ ಬಂತು ಮೊದಲ ಎಫ್‌ಡಿಐ – ಶಾಪಿಂಗ್‌ ಮಾಲ್‌ ನಿರ್ಮಾಣಕ್ಕೆ ಭೂಮಿ ಪೂಜೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ (Jammu Kashmir) ವಿದೇಶಿ ಬಂಡವಾಳ ಹೂಡಿಕೆ (FDI) ಅಡಿ ನಿರ್ಮಾಣವಾಗಲಿರುವ ಮೊದಲ ಯೋಜನೆಯ ನಿರ್ಮಾಣ ಕಾಮಗಾರಿ ಕೆಲಸ ಅಧಿಕೃತವಾಗಿ ಆರಂಭವಾಗಿದೆ.

    ಬುರ್ಜ್ ಖಲೀಫಾದ ಡೆವಲಪರ್ ಯುಎಇ ಮೂಲದ Emaar ಗ್ರೂಪ್ ಶ್ರೀನಗರದಲ್ಲಿ ಶಾಪಿಂಗ್ ಮಾಲ್ ನಿರ್ಮಾಣಕ್ಕೆ ಕೈಹಾಕಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 10 ಲಕ್ಷ ಚದರ ಅಡಿ ನಿರ್ಮಾಣವಾಗಲಿರುವ “ಮಾಲ್ ಆಫ್ ಶ್ರೀನಗರ”ಕ್ಕೆ ಭೂಮಿ ಪೂಜೆ ನೆರವೇರಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಮೋದಿಯ ಅತಿದೊಡ್ಡ TRP: ಮಮತಾ ಬ್ಯಾನರ್ಜಿ

    ಈ ಸಂದರ್ಭದಲ್ಲಿ ಮಾತನಾಡಿದ ಮನೋಜ್‌ ಸಿನ್ಹಾ, ಇದು 500 ಕೋಟಿ ರೂಪಾಯಿಗಳ ಹೂಡಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷವಾಗಿ ಶ್ರೀನಗರ ಮತ್ತು ಸುತ್ತಮುತ್ತಲಿನ ಜನರ ಬಹುಕಾಲದ ಕನಸು ಈಡೇರಲಿದೆ. ಜಮ್ಮುವಿನಲ್ಲಿ 150 ಕೋಟಿ ರೂ.ಗಳ ಐಟಿ ಟವರ್‌ ಸ್ಥಾಪಿಸಲಾಗುವುದು. ಅದಕ್ಕಾಗಿ ಭೂಮಿ ನೀಡಲಾಗಿದೆ ಎಂದು ತಿಳಿಸಿದರು.

    ಶ್ರೀನಗರ ಮತ್ತು ಜಮ್ಮುವಿನಲ್ಲಿ ಎಮಾರ್ ಯೋಜನೆಗಳಿಂದ ಉದ್ಯೋಗದ ಪರ್ವ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ರಾಜ್ಯ ಕೈಗಾರಿಕಾ ಪ್ರಗತಿಯತ್ತ ಸಾಗಲಿದೆ ಎಂದು ಹೇಳಿದರು.

    ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ಹಲವಾರು ಗಲ್ಫ್‌ ಮೂಲದ ಕಂಪನಿಗಳಿಗೆ ಹೂಡಿಕೆ ಮಾಡುವಂತೆ ಆಹ್ವಾನಿಸಿತ್ತು. ಕಳೆದ ವರ್ಷ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ದೇಶಗಳ ಸುಮಾರು 36 ಸಿಇಒಗಳು ಕಾಶ್ಮೀರಕ್ಕೆ ಭೇಟಿ ನೀಡಿದ್ದರು.

  • ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ

    ಭದ್ರತಾ ಪಡೆಯಿಂದ ಉಗ್ರರ ಮೇಲೆ ಗುಂಡಿನ ದಾಳಿ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾದಲ್ಲಿ (Pulwama) ಭಯೋತ್ಪಾದಕರು (Terrorists) ಹಾಗೂ ಭದ್ರತಾ ಪಡೆಯ (Security forces) ನಡುವೆ ಗುಂಡಿನ ದಾಳಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ದಕ್ಷಿಣ ಕಾಶ್ಮೀರದ ಪುಲ್ವಾಮಾದ ಮಿಟ್ರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದವು ಎಂದಿದ್ದಾರೆ. ಇದನ್ನೂ ಓದಿ: ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ- ಪಿಎಂ ಕಚೇರಿ ಅಧಿಕಾರಿ ಸೋಗಿನಲ್ಲಿ ಅರೆಸ್ಟ್ ಆದ ಕಿರಣ್ ಪಟೇಲ್ ಪತ್ನಿ

    ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದು, ಸೈನಿಕರು ಪ್ರತಿದಾಳಿ ನಡೆಸಿದ್ದಾರೆ. ಎನ್‍ಕೌಂಟರ್ (Encounter) ನಡೆಯುತ್ತಿದ್ದು, ಇಲ್ಲಿಯವರೆಗೆ ಎರಡೂ ಕಡೆಯಿಂದ ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ

  • PMO ಅಧಿಕಾರಿಯೆಂದು Z Plus ಸೆಕ್ಯೂರಿಟಿ ಪಡೆದು ಶ್ರೀನಗರದಲ್ಲಿ ಓಡಾಡಿದ್ದ ವಂಚಕ ಅರೆಸ್ಟ್

    PMO ಅಧಿಕಾರಿಯೆಂದು Z Plus ಸೆಕ್ಯೂರಿಟಿ ಪಡೆದು ಶ್ರೀನಗರದಲ್ಲಿ ಓಡಾಡಿದ್ದ ವಂಚಕ ಅರೆಸ್ಟ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಪ್ರಧಾನಮಂತ್ರಿ ಕಾರ್ಯಾಲಯದ ಹಿರಿಯ ಅಧಿಕಾರಿ ( PMO Official) ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಗುಜರಾತ್‍ನ ವಂಚಕನೊಬ್ಬ ಪೊಲೀಸರು ಬಂಧಿಸಿದ್ದಾರೆ.

    ವಂಚಕನನ್ನು ಕಿರಣ್ ಭಾಯ್ ಪಟೇಲ್ ಎಂದು ಗುರುತಿಸಲಾಗಿದೆ. ಕಿರಣ್ ಭಾಯ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀನಗರಕ್ಕೆ ( Srinagar) 2 ಬಾರಿ ಭೇಟಿ ನೀಡಿದ್ದ. ಈ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದ. ಅಷ್ಟೇ ಅಲ್ಲದೇ ಝಡ್ ಪ್ಲಸ್ ಭದ್ರತೆ ( Z-plus security), ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ, ಪಂಚತಾರಾ ಹೋಟೆಲ್‍ನಲ್ಲಿ ಅಧಿಕೃತ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿದ್ದ.

    ಪ್ರಧಾನಿ ಕಾರ್ಯಾಲಯದಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕರಂತೆ ನಾಟಕ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಜಮ್ಮು ಕಾಶ್ಮೀರದ ವಿವಿಧೆಡೆಯಲ್ಲಿ ಭದ್ರತಾ ಪಡೆ ಹಾಗೂ ಪೊಲೀಸರ ಬೆಂಗಾವಲಿನಲ್ಲಿ ವಿವಿಧೆಡೆ ಸಂಚರಿಸಿದ್ದ. ದೂಧಪತ್ರಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದ. ಆದರೆ ಈ ಸಂಬಂಧ ಪೊಲೀಸರು ಅನುಮಾನಗೊಂಡಿದ್ದಾರೆ. ಅಷ್ಟೇ ಅಲ್ಲದೇ ಗುಪ್ತಚರ ಸಂಸ್ಥೆಯು ಜೆಕೆ ಪೊಲೀಸರಿಗೆ ಎಚ್ಚರಿಕೆ ನೀಡಿದೆ ಎಂದು ಮೂಲಗಳ ತಿಳಿಸಿವೆ. ಇದನ್ನೂ ಓದಿ: ನಾನು ಕನಸು, ಮನಸ್ಸಿನಲ್ಲಿಯೂ ಜಾತಿ ರಾಜಕಾರಣ ಮಾಡಿಲ್ಲ: ಸಿ.ಟಿ ರವಿ

    ಈ ಹಿನ್ನೆಲೆಯಲ್ಲಿ ಆತನನ್ನು ಪರಿಶೀಲಿಸಿದ ಪೊಲೀಸರು ಶ್ರೀನಗರದ ಹೋಟೆಲ್‍ನಲ್ಲಿ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರ ತಂಡವೂ ತನಿಖೆಗೆ ಸಹಾಯ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಿರಣ್ ಪಟೇಲ್ 10 ದಿನಗಳ ಹಿಂದೆಯೇ ಬಂಧಿಸಲಾಗಿದ್ದು, ಅದನ್ನು ಪೊಲೀಸರು ರಹಸ್ಯವಾಗಿಟ್ಟಿದ್ದರು. ಆದರೆ ನ್ಯಾಯಾಂಗ ಬಂಧನ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

    ಕಿರಣ್ ಪಟೇಲ್‍ನ ಟ್ವಿಟ್ಟರ್‌ನಲ್ಲಿ ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ಸಿನ್ಹ್ ವಘೇಲಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ. ಅಷ್ಟೇ ಅಲ್ಲದೇ ವರ್ಜೀನಿಯಾದ ಕಾಮನ್‍ವೆಲ್ತ್ ವಿವಿಯಿಂದ ಪಿಹೆಚ್‍ಡಿ, ಐಐಎಂ ತಿರುಚ್ಚಿಯಿಂದ ಎಂಬಿಎ ಮತ್ತು ಬಿ.ಇ ಕಂಪ್ಯೂಟರ್ ಎಂಜಿನಿಯರ್ ಎಂದು ಬರೆದುಕೊಂಡಿದ್ದಾನೆ.

    ನಕಲಿ ಅಧಿಕಾರಿಯನ್ನು ಪತ್ತೆ ಹಚ್ಚುವಲ್ಲಿ ವಿಫಲರಾದ ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನನ್ನ ಆಡು ಭಾಷೆ, ನನ್ನ ಸಂಸ್ಕೃತಿ, ನನ್ನ ಹೋರಾಟ ನನ್ನ ಕ್ಷೇತ್ರದ ಜನರಿಗೆ ಗೊತ್ತಿದೆ: ಶಿವಲಿಂಗೇಗೌಡ

  • ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಸಂಸತ್ ನಲ್ಲಿ ‘ಪಠಾಣ್’ ಸಿನಿಮಾ ಹೊಗಳಿದ್ರಾ ಪ್ರಧಾನಿ ಮೋದಿ?

    ಪ್ರಧಾನಿ ನರೇಂದ್ರ ಮೋದಿ (Narendra Modi) ‘ಪಠಾಣ್’ (Pathan) ಸಿನಿಮಾವನ್ನು ಪರೋಕ್ಷವಾಗಿ ಸಂಸತ್ ನಲ್ಲಿ ಹೊಗಳಿದ್ದಾರೆ ಎನ್ನುವ ವಿಡಿಯೋ ಸಖತ್ ವೈರಲ್ ಆಗಿದೆ.  ಸಂಸತ್ ನಲ್ಲಿ ಅವರು ಮಾತನಾಡುತ್ತಾ, ‘ದಶಕಗಳ ನಂತರ ಶ್ರೀನಗರದಲ್ಲಿ ಥಿಯೇಟರ್ (Theatre) ಹೌಸ್ ಫುಲ್ ಕಂಡಿದೆ’ ಎಂದು ಹೇಳಿದ್ದಾರೆ. ಸದ್ಯ ಶ್ರೀನಗರದಲ್ಲಿ (Srinagar) ಪಠಾಣ್ ಸಿನಿಮಾ ಪ್ರದರ್ಶನ ಆಗುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಆಡಿದ್ದಾರೆ ಎಂದು ಬಣ್ಣಿಸಲಾಗುತ್ತಿದೆ.

    ಶಾರುಖ್ (Shah Rukh Khan) ಅಭಿಮಾನಿಗಳು ಮೋದಿ ಅವರ ಮಾತುಗಳನ್ನು ‘ಪಠಾಣ್’ ಸಿನಿಮಾ ಹಿನ್ನೆಲೆಯಲ್ಲೇ ಆಡಿದ್ದು ಎಂದು ಚರ್ಚೆ ಮಾಡುತ್ತಿದ್ದರೆ, ಮೋದಿ ಹಿಂಬಾಲಕರು ಶ್ರೀನಗರ ಇದೀಗ ಶಾಂತವಾಗಿ, ನೆಮ್ಮದಿಯಾಗಿ ಸಿನಿಮಾ ನೋಡುವಂತಹ ವಾತಾವರಣ ನಿರ್ಮಾಣವಾಗಿದೆ ಎನ್ನುವ ಅರ್ಥ ವಿವರಿಸುತ್ತಿದ್ದಾರೆ. ಮೋದಿ ಆಡಿದ ಆ ಮಾತು ಪಠಾಣ್ ಸಿನಿಮಾಗಿಂತಲೂ ಸಖತ್ ಫೇಮಸ್ ಕೂಡ ಆಗಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ನಡುವೆ ಕಾವಿತೊಟ್ಟು ಅಚ್ಚರಿ ಮೂಡಿಸಿದ ಮಿಲ್ಕಿ ಬ್ಯೂಟಿ

    ಪಠಾಣ್ ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ ಎನ್ನುವ ಕಾರಣಕ್ಕಾಗಿ ಬಾಯ್ಕಾಟ್ ಪಠಾಣ್ ಅಭಿಯಾನ ಶುರುವಾಗಿತ್ತು. ಕೆಲವು ಕಡೆ ಸಿನಿಮಾ ಪ್ರದರ್ಶನಕ್ಕೂ ಅಡೆತಡೆ ನೀಡಲಾಯಿತು. ಎಲ್ಲವನ್ನೂ ದಾಟಿಕೊಂಡು ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ. ಇನ್ನೂ ಹಲವು ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬಾಯ್ಕಾಟ್ ನಡುವೆಯೂ ಸಿನಿಮಾ ಗೆದ್ದಿರುವುದಕ್ಕೆ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Government) ಕಾಶ್ಮೀರದಲ್ಲಿ ಹಿಂದುತ್ವ ಅಜೆಂಡಾ ಪ್ರಚಾರ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು (Students) `ರಘುಪತಿ ರಾಘವ ರಾಜಾ ರಾಂ’ ಹಾಡುತ್ತಿರುವ ವೀಡಿಯೋವನ್ನು (Viral Video) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮುಫ್ತಿ, ಇದು ಕೇಂದ್ರ ಸರ್ಕಾರದ ಹಿಂದುತ್ವ (Hindutva) ಅಜೆಂಡಾವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!

    `ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಮ್ಮಾ ಮಸೀದಿಯನ್ನು (Jama Masjid) ಮುಚ್ಚುವುದು ಮತ್ತು ಶಾಲಾ ಮಕ್ಕಳಿಗೆ ಹಿಂದೂ ಸ್ತೋತ್ರ ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವವನ್ನು ಬಿಂಬಿಸಿದೆ ಎಂದು ಮುಫ್ತಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    1 ನಿಮಿಷ 45 ಸೆಕೆಂಡುಗಳಿರುವ ಈ ವೀಡಿಯೋನಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ `ರಘುಪತಿ ರಾಘವ ರಾಜಾ ರಾಂ’ (Raghupati Raghav Raja Ram) ಭಜನೆಯನ್ನು ಪಠಿಸುತ್ತಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    bjP

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ (BJP Leader) ಕವೀಂದರ್ ಗುಪ್ತಾ, ಮುಫ್ತಿಯವರು ಎಲ್ಲವನ್ನೂ ವಿವಾದಾತ್ಮಕವಾಗಿ ಪ್ರಯತ್ನಿಸುತ್ತಿದ್ದಾರೆ. ಕಾಶ್ಮೀರದ ಶಾಲೆಯೊಂದರಲ್ಲಿ ಹಾಡಿದ ಭಜನೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ಭಜನಾ ಗೀತೆಯಲ್ಲಿ `ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್’ ಕೂಡ ಇದೆ. ಮೆಹಬೂಬಾ ಮುಫ್ತಿಗೆ ಈ ಸನ್ಮತಿ ಸಿಗಲಿ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ಪಾಕಿಸ್ತಾನದ ಮೇಲೆ ಪರಾಕ್ರಮ ಮೆರೆದಿದ್ದ ಭಾರತದ ಮಿಗ್-21 ಫೈಟರ್ ಜೆಟ್ ಸೇನೆಯಿಂದ ನಿವೃತ್ತಿ

    ನವದೆಹಲಿ: ಪಾಕಿಸ್ತಾನ (Pakistan) ಶತ್ರು ಪಡೆಗಳ ಮೇಲೆ ಶೌರ್ಯ ಮೆರೆದಿದ್ದ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Abhinandan Varthaman) (ಪ್ರಸ್ತುತ ಗ್ರೂಪ್‌ ಕ್ಯಾಪ್ಟನ್‌) ಅವರ ಮಿಗ್-21 ಬೈಸನ್ ಫೈಟರ್ ಜೆಟ್ (MiG-21 Fighter Jets) ಇದೇ ಸೆಪ್ಟೆಂಬರ್ 30 ರಂದು ಭಾರತೀಯ ವಾಯುಪಡೆಯಿಂದ (Indian Air Force) ನಿವೃತ್ತಿಯಾಗಲಿದೆ.

    ಮಿಗ್-21 ಬೈಸನ್ 1960 ದಶಕದಲ್ಲಿ ಭಾರತೀಯ ವಾಯುಪಡೆಗೆ (IAF) ಸೇರ್ಪಡೆಗೊಳಿಸಲಾಯಿತು. ಆದರೆ 1980ರ ದಶಕಕದಿಂದ 400ಕ್ಕೂ ಹೆಚ್ಚು ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. 200ಕ್ಕೂ ಹೆಚ್ಚು ಪೈಲಟ್‌ಗಳು (Pilots) ಮತ್ತು 60 ನಾಗರಿಕರನ್ನು ಬಲಿ ತೆಗೆದುಕೊಂಡಿವೆ. ಪ್ರಸ್ತುತ 32 ಸ್ಕ್ವಾಡ್ರನ್‌ಗಳಿಗೆ ಇಳಿಕೆಯಾಗಿದೆ. ಭಾರತೀಯ ವಾಯುಪಡೆಯು ಸದ್ಯ 550 ಫೈಟರ್ ಜೆಟ್‌ಗಳ (Fighter Jets) ಸಾಮರ್ಥ್ಯಕ್ಕೆ ಇಳಿದಿದ್ದು, ಇನ್ನೂ 200 ಯುದ್ಧ ವಿಮಾನಗಳ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ಏರ್‌ಸ್ಟ್ರೈಕ್‌ನಲ್ಲಿ 300 ಉಗ್ರರು ಹತ – ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

    ಸದ್ಯ ಅಭಿನಂದನ್ ವರ್ಧಮಾನ್ ಅವರ ಮಿಗ್-21 ಫೈಟರ್ ಜೆಟ್ (ಶ್ರೀನಗರ ಮೂಲದ ನಂ.51 ಸ್ಕ್ವಾಡ್ರನ್)ಅನ್ನು ಸೆಪ್ಟೆಂಬರ್ 30 ರಂದು ಸೇನೆಯಿಂದ ನಿವೃತ್ತಿಗೊಳಿಸಲಿದ್ದು, 2025ರ ವೇಳೆಗೆ ಹಂತಹಂತವಾಗಿ ಬದಲಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೇ 1980 ದಶಕದಲ್ಲಿ ಸೇನೆಗೆ ಸೇರ್ಪಡೆಗೊಂಡ ಜಾಗ್ವಾರ್, ಮಿಗ್-29 ಹಾಗೂ ಮಿರಾಜ್ ನಂತಹ ಯುದ್ಧ ವಿಮಾನಗಳೂ ಹಳೆಯದ್ದಾಗುತ್ತಿದ್ದು, ಅವುಗಳು ಸಹ ಬದಲಾವಣೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 

    ಪಾಕ್ ವಿರುದ್ಧ ಪರಾಕ್ರಮ ಮೆರೆದಿದ್ದ ಅಭಿನಂದನ್:
    2019ರ ಫೆಬ್ರವರಿ 14ರಂದು 40 ಸಿಆರ್‌ಪಿಎಫ್ ಯೋಧರನ್ನು ಬಲಿ ತೆಗೆದುಕೊಂಡಿದ್ದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿಕಾರವಾಗಿ ಏರ್‌ಸ್ಟ್ರೈಕ್ ನಡೆಸಿ ಭಾರತ ಪ್ರತಿಕಾರ ತೀರಿಸಿಕೊಂಡಿತ್ತು. ಪಾಕಿಸ್ತಾನದ ಖೈಬರ್ ಪಕ್ತುಂಕ್ವಾ ಪ್ರದೇಶದ ಬಾಲಾಕೋಟ್‌ನಲ್ಲಿ ಜೈಷೆ ಮೊಹಮದ್ ಸಂಘಟನೆಗಳ ಉಗ್ರರ ಶಿಬಿರಗಳ ಮೇಲೆ 2019 ರ ಫೆಬ್ರವರಿ 26 ರಂದು ಭಾರತ ವೈಮಾನಿಕ ದಾಳಿ ನಡೆಸಿತ್ತು.

    ಫೆ.26ರ ನಸುಕಿನ ಜಾವ 3.30 ರಿಂದ 3.55ರ ನಡುವೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್ ಉಗ್ರರ ಶಿಬಿರಗಳ ಮೇಲೆ 12 ಮಿರಾಜ್-2000 ಯುದ್ಧ ವಿಮಾನಗಳು ದಾಳಿ ನಡೆಸಿದ್ದವು. ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 85 ಕಿಮೀ ಒಳನುಗ್ಗಿ ಭಾರತೀಯ ವಾಯುಪಡೆ ಈ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸುಮಾರು 300 ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಭಾರತ ತನ್ನ ನೆಲದಲ್ಲಿ ದೊಡ್ಡ ದಾಳಿ ನಡೆಸಿದೆ ಎಂದು ಗೊತ್ತಾದ ತಕ್ಷಣ ಪಾಕ್ ಕೂಡ ಪ್ರತಿ ದಾಳಿ ಮಾಡಿತ್ತು. ಪಾಕ್‌ನ ಪ್ರತಿದಾಳಿಯ ವೇಳೆ ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ವರ್ಧಮಾನ್ ಅವರು ತಮ್ಮ ಮಿಗ್-21 ರಿಂದ ಪಾಕಿಸ್ತಾನದ ಎಫ್-16 ಜೆಟ್ ವಿಮಾನವನ್ನು ಹೊಡೆದುರುಳಿಸಿದ್ದರು. ಅದಾದ ಬಳಿಕ ಪಾಕಿಸ್ತಾನ ಸೇನೆ ಅಭಿನಂದನ್ ಅವರನ್ನು ಬಂಧಿಸಿ ಮಾರ್ಚ್ 1ರ ಮಧ್ಯರಾತ್ರಿ ಬಿಡುಗಡೆ ಮಾಡಿತ್ತು.

    Live Tv
    [brid partner=56869869 player=32851 video=960834 autoplay=true]