Tag: Srinagar

  • ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

    ಮಳೆಯ ನಡುವೆ ಶ್ರೀ ಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿ

    – ಇತಿಹಾಸ ಪ್ರಸಿದ್ಧ ಶ್ರೀನಗರದ ಶ್ರೀ ಜ್ಯೇಷ್ಟೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
    – ಆ ಶಿವನೇ ಇಲ್ಲಿಗೆ ಕರೆಸಿಕೊಂಡಿದ್ದಾನೆ ಎಂದು ಭಾವುಕ

    ಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ (Jammu Kashmir) ಪ್ರವಾಸದಲ್ಲಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.

    ಶಿವನ ದೇವಸ್ಥಾನವೆಂದೇ ಕರೆಯಲ್ಪಡುವ ಈ ಪವಿತ್ರ ಶಂಕರಾಚಾರ್ಯ ದೇವಸ್ಥಾನದಲ್ಲಿ ದೇವರ ದರ್ಶನ‌ ಪಡೆದು ಪ್ರಾಥನೆ ಸಲ್ಲಿಸಿದ ಮಾಜಿ ಪ್ರಧಾನಿ, ಈ ಕ್ಷಣ ನನ್ನ ಬದುಕಿನ ಅನನ್ಯ ಕ್ಷಣ. ಶಿವ ದರ್ಶನದಿಂದ ಧನ್ಯನಾಗಿದ್ದೇನೆ ಎಂದು ಭಾವುಕರಾದರು. ಇದನ್ನೂ ಓದಿ: ವಾಧ್ವಾನ್ ಪೋರ್ಟ್ ಪ್ರಾಜೆಕ್ಟ್ ಉದ್ಘಾಟನೆ, ಗ್ಲೋಬಲ್ ಫಿನ್‌ಟೆಕ್ ಫೆಸ್ಟ್‌ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ನನ್ನನ್ನು ಇಲ್ಲಿಗೆ ಆ ಶಿವನೇ ಕರೆಸಿಕೊಂಡಿದ್ದಾನೆ ಎಂದು ಹೇಳಿದ ಮಾಜಿ ಪ್ರಧಾನಿಗಳು, ಬಹಳ ಹೊತ್ತು ದೇವಾಲಯದಲ್ಲಿಯೇ ಇದ್ದರು. ಮಳೆಯ ನಡುವೆಯೇ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರ ಸಹಾಯದಿಂದ ಮೆಟ್ಟಿಲು ಹತ್ತಿದ ಹೆಚ್‌ಡಿಡಿ, ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

    ಇಲ್ಲಿಗೆ ಭೇಟಿ ನೀಡಿ ಶಿವನ‌‌ ದರ್ಶನ ಪಡೆಯಬೇಕೆಂಬುದು ನನ್ನ ಜೀವಮಾನದ ಆಸೆಯಾಗಿತ್ತು. ಇವತ್ತು ನನ್ನ ಆಸೆ ನೆರವೇರಿದೆ. ನನ್ನನ್ನು ಇಲ್ಲಿಗೆ ಕರೆಸಿಕೊಂಡ ಆ ದೇವರಿಗೆ ಆಭಾರಿಯಾಗಿದ್ದೇನೆ ಎಂದು ಅವರು ಹೇಳಿದರು. ಇದನ್ನೂ ಓದಿ: ಅಸ್ಸಾಂ ವಿಧಾನಸಭೆಯ ಶುಕ್ರವಾರದ 2 ಗಂಟೆ ಅವಧಿಯ ನಮಾಜ್ ಬ್ರೇಕ್‌ಗೆ ತಡೆಯೊಡ್ಡಿದ ಸಿಎಂ ಶರ್ಮಾ

    ದೇಗುಲಕ್ಕೆ ತೆರಳಿದ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಿಗೆ CRPF ಪೊಲೀಸರು ಹಾಗೂ ಕಾಶ್ಮೀರ ಪೊಲೀಸರು ಭದ್ರತೆ ಒದಗಿಸಿದ್ದರು. ಗುರುವಾರ ಉರಿಯ ಜಲವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದ್ದ ದೇವೇಗೌಡರು, ಅಲ್ಲಿಗೆ ತೆರಳಲು ಶ್ರೀನಗರದಿಂದ ಬಾರಮುಲ್ಲಾವರೆಗೂ ರೈಲಿನಲ್ಲಿ ಪ್ರಯಾಣ ಮಾಡಿದ್ದರು.

    ಮಾಜಿ ಪ್ರಧಾನಿಗಳು ಇಲ್ಲಿನ ದಾಲ್ ಸರೋವರಕ್ಕೂ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಮಳೆಯ ಕಾರಣ ಅಲ್ಲಿಗೆ ಭೇಟಿ ನೀಡಲಾಗಲಿಲ್ಲ. ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಇಲ್ಲಿಗೆ ಬರುವೆ ಎಂದು ತಿಳಿಸಿದರು. ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

  • ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಇಬ್ಬರು ಭಯೋತ್ಪಾದಕರನ್ನು ಸದೆಬಡಿದ ಭದ್ರತಾ ಪಡೆ- ಓರ್ವ ಅಧಿಕಾರಿಗೆ ಗಾಯ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (jammu Kashmir) ಬಾರಾಮುಲ್ಲಾದಲ್ಲಿ ಇಂದು (ಬುಧವಾರ) ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ.

    ಬಾರಾಮುಲ್ಲಾದ ಸೋಪೋರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಪೋರ್‌ನ ಹಡಿಪೋರಾದಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ. ಅವರ ಗುರುತು ಪತ್ತೆ ಹಚ್ಚಲಾಗಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೋಮವಾರ, ಕೇಂದ್ರಾಡಳಿತ ಪ್ರದೇಶದ ಬಂಡಿಪೋರಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಭಯೋತ್ಪಾದಕನನ್ನು ಹತ್ಯೆ ಮಾಡಲಾಗಿತ್ತು. ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್‌ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ

    ಭಾನುವಾರ ರಾತ್ರಿ ಜಿಲ್ಲೆಯ ಅರಗಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಸರ್ಚ್ ಕಾರ್ಯಾಚರಣೆ ಆರಂಭಿಸಿದ ಬಳಿಕ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಎನ್‌ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

  • ಜಮ್ಮು-ಕಾಶ್ಮೀರದ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ!

    ಜಮ್ಮು-ಕಾಶ್ಮೀರದ ಎಲ್ಲಾ ಶಾಲೆಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ!

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu And Kashmir) ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸುವಂತೆ ಇಲ್ಲಿನ ಶಿಕ್ಷಣ ಇಲಾಖೆ (Education Department) ನಿರ್ದೇಶನ ನೀಡಿದೆ. ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳನ್ನೂ ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ (National Anthem) ಪ್ರಾರಂಭಿಸುವಂತೆ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಿದೆ.

    ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ನಿಗದಿಪಡಿಸಬೇಕು. ಇದು ವಿದ್ಯಾರ್ಥಿಗಳಲ್ಲಿ ಏಕತೆ ಮತ್ತು ಶಿಸ್ತಿನ ಭಾವನೆ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಮೂಲಕ ಸಮಗ್ರತೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಲು ಶಾಲೆಯ ಬೆಳಗ್ಗಿನ ವೇದಿಕೆ ಸಹಕಾರಿಯಾಗಲಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಇರುವ ಸಮಸ್ಯೆ ನಿವಾರಿಸಲು ಜಂಟಿ ಸರ್ವೇಗೆ ನಿರ್ಧಾರ: ಡಿಕೆಶಿ

    ಕೆಲವು ಶಾಲೆಗಳಲ್ಲಿ ಈಗಾಗಲೇ ಈ ನಿಯಮ ಪಾಲನೆಯಾಗುತ್ತಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಅಂತಹ ಮಹತ್ವದ ಆಚರಣೆಯನ್ನು ಏಕರೂಪವಾಗಿ ಪಾಲಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇನ್ನುಮುಂದೆ ಎಲ್ಲಾ ಶಾಲೆಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

    ಇದರೊಂದಿಗೆ ಅತಿಥಿ ಉಪನ್ಯಾಸಕರು ಹಾಗೂ ತಜ್ಞರನ್ನು ಆಹ್ವಾನಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾದಕ ವಸ್ತುಗಳ ವಿರುದ್ಧ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕುವೈತ್‌ ಅಗ್ನಿ ದುರಂತದಲ್ಲಿ ಕಲಬುರಗಿ ವ್ಯಕ್ತಿ ಸಾವು

  • ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಜಮ್ಮು ಕಾಶ್ಮೀರದಲ್ಲಿ ದೋಣಿ ಮುಳುಗಡೆ – ಶಾಲಾ ಮಕ್ಕಳು ಸೇರಿದಂತೆ ಹಲವರು ನಾಪತ್ತೆ

    ಶ್ರೀನಗರ: ಗಂಡಾಬಾಲ್‌ನಿಂದ ಶ್ರೀನಗರದ (Srinagar) ಬಟ್ವಾರಕ್ಕೆ ಶಾಲಾ ಮಕ್ಕಳು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು (Boat) ಝೇಲಂ ನದಿಯಲ್ಲಿ (Jhelum River) ಮುಳುಗಿದ ಪರಿಣಾಮ ಶಾಲಾ ಮಕ್ಕಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ.

    ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್ಯ ವಿಪತ್ತು ಪರಿಹಾರ ಪಡೆ ನಾಪತ್ತೆಯಾದ ಪ್ರಯಾಣಿಕರಿಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಝೇಲಂ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಇದನ್ನೂ ಓದಿ: ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಸಾವು

  • 300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ

    300 ಅಡಿ ಕಣಿವೆಗೆ ಉರುಳಿದ ವಾಹನ – 10 ಮಂದಿ ದುರ್ಮರಣ

    ಶ್ರೀನಗರ: ವಾಹನವೊಂದು 300 ಅಡಿ ಕಣಿವೆಗೆ ಉರುಳಿ ಬಿದ್ದ ಪರಿಣಾಮ 10 ಜನ ಸಾವಿಗೀಡಾದ ಘಟನೆ ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ (Srinagar-Jammu Highway) ನಡೆದಿದೆ. ರಾಂಬನ್ ಜಿಲ್ಲೆಯ ಬ್ಯಾಟರಿ ಚೆಶ್ಮಾ ಎಂಬ ಸ್ಥಳದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತದಲ್ಲಿ ಮೃತಪಟ್ಟವರೆಲ್ಲ ಶ್ರೀನಗರಕ್ಕೆ ತೆರಳುತ್ತಿದ್ದ ವಲಸೆ ಕಾರ್ಮಿಕರು ಎಂದು ತಿಳಿದು ಬಂದಿದೆ. ಭಾರೀ ಮಳೆಯ ನಡುವೆ, ರಾಜ್ಯ ವಿಪತ್ತು ನಿರ್ವಹಣಾ ಕಾರ್ಯಕರ್ತರು ಮತ್ತು ಪೊಲೀಸರು ಮೃತದೇಹಗಳನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಸಾವು

    ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಹೇಳಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಅಪಘಾತದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಸರ್ಕಾರದಿಂದ ಒದಗಿಸಲಾಗುವ ಎಲ್ಲಾ ನೆರವನ್ನು ನೀಡಲು ನಾನು ಜಿಲ್ಲಾ ಆಡಳಿತಕ್ಕೆ ಸೂಚಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ – ದಾಳಿಯ ಸಂಚುಕೋರ ಅರೆಸ್ಟ್‌

  • ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

    ಜಮ್ಮು ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಬಂಧನ – ಅಪಾರ ಶಸ್ತ್ರಾಸ್ತ್ರ ವಶ

    ಶ್ರೀನಗರ: ಶ್ರೀನಗರದಲ್ಲಿ (Srinagar) ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಭದ್ರತಾ ಪಡೆ (Security forces) ಬಂಧಿಸಿದೆ.

    ನಿರ್ದಿಷ್ಟ ಮಾಹಿತಿಯ ಮೇರೆಗೆ ನಿಷೇಧಿತ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿರುವ ನಾಲ್ವರು ಬರುತ್ತಿದ್ದಾರೆ ಎಂಬ ಮಾಹಿತಿ ಇತ್ತು. ಇದರಿಂದ ಶನಿವಾರ ಸಂಜೆ ನಗರದ ಹೊರವಲಯದಲ್ಲಿರುವ ನೌಗಾಮ್‍ನ ಕೆನಿಹಮಾ ಪ್ರದೇಶದಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗಿತ್ತು. ತಪಾಸಣೆಯ ಸಮಯದಲ್ಲಿ, ಭದ್ರತಾ ಪಡೆಗಳು ವಾಹನವನ್ನು ತಡೆದು ನಾಲ್ವರನ್ನು ಬಂಧಿಸಲಾಯಿತು ಎಂದು ಸೇನೆಯ (Indian Army) ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಉಗ್ರರ ಅಟ್ಟಹಾಸ- 70ಕ್ಕೂ ಹೆಚ್ಚು ಮಂದಿ ದುರ್ಮರಣ

    ಬಂಧಿತರನ್ನು ಮೊಹಮ್ಮದ್ ಯಾಸೀನ್ ಭಟ್, ಶೆರಾಜ್ ಅಹ್ಮದ್ ರಾಥರ್, ಗುಲಾಮ್ ಹಸನ್ ಖಾಂಡೆ ಹಾಗೂ ಇಮ್ತಿಯಾಜ್ ಅಹ್ಮದ್ ಭಟ್ ಎಂದು ಗುರುತಿಸಿದ್ದಾರೆ. ಬಂಧಿತರು ಲಕ್‍ನಂಬಲ್ ಜಫ್ರಾನ್ ಕಾಲೋನಿ ಪಂಥಾ ಚೌಕ್ ಮತ್ತು ಫ್ರೆಸ್ಟಾಬಲ್ ಪಾಂಪೋರ್‌ನ ನಿವಾಸಿಗಳು ಎಂಬುದು ತಿಳಿದು ಬಂದಿದೆ.

    ಉಗ್ರರಿಂದ ಮೂರು ಮ್ಯಾಗಜೀನ್‍ಗಳು, ಎಕೆ 56 ರೈಫಲ್, 7.62, 39 ಎಂಎಂನ 75 ಸುತ್ತುಗಳು, ಎರಡು ಮ್ಯಾಗಜೀನ್‍ಗಳಿರುವ ಗ್ಲೋಕ್ ಪಿಸ್ತೂಲ್, 9 ಎಂಎಂನ 26 ಸುತ್ತುಗಳು ಮತ್ತು ಆರು ಚೈನೀಸ್ ಗ್ರೆನೇಡ್‍ಗಳು ಸೇರಿದಂತೆ ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ವೇಳೆ, ಬಂಧಿತ ವ್ಯಕ್ತಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಎಂ ಜೊತೆ ನಂಟು ಹೊಂದಿರುವುದು ತಿಳಿದು ಬಂದಿದೆ.

    ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಚೆನ್ನೈ ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್‌ – ಇಂದು ಬೆಂಗಳೂರಿಗೆ

  • ಶ್ರೀನಗರದಿಂದ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ವಾಪಸ್ಸಾದ ಧ್ರುವ ಸರ್ಜಾ

    ಶ್ರೀನಗರದಿಂದ ಶೂಟಿಂಗ್ ಮುಗಿಸಿ, ಬೆಂಗಳೂರಿಗೆ ವಾಪಸ್ಸಾದ ಧ್ರುವ ಸರ್ಜಾ

    ಮಾರ್ಟಿನ್ ಸಿನಿಮಾದ ಶೂಟಿಂಗ್ ಗಾಗಿ ಶ್ರೀನಗರಕ್ಕೆ (Srinagar) ಪ್ರಯಾಣ ಬೆಳೆಸಿದ್ದ ನಟ ಧ್ರುವ ಸರ್ಜಾ (Dhruva Sarja) ಮತ್ತು ಟೀಮ್ ಬೆಂಗಳೂರಿಗೆ ವಾಪಸ್ಸಾಗಿದೆ. ವಾರಗಳ ಹಿಂದೆಯಷ್ಟೇ ವಿಮಾನ ಏರಿದ್ದ ಮಾರ್ಟಿನ್ ಚಿತ್ರ ತಂಡ, (Martin Movie Team) ವಿಮಾನ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.

    ಅಂತಿಮ ಚಿತ್ರೀಕರಣದಲ್ಲಿದ್ದ ಮಾರ್ಟಿನ್ ಚಿತ್ರತಂಡವು ಕಳೆದ ಸೋಮವಾರ ಸಂಜೆ ಸಾಂಗ್ ಶೂಟ್ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ (Indigo Flight) ತೆರಳುತ್ತಿತ್ತು. ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಪೈಲಟ್ ಪರದಾಡಿದ್ದರು.

    ಸೀಟ್ಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದರು. ಕೊನೆಗೆ ಪೈಲಟ್ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿತ್ತು. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದರು.

     

    ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದರು. ಬಗ್ಗೆ ನಟ ಧ್ರುವ ಸರ್ಜಾ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದದ ಫಲ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದರು.

  • ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ (Terror Funding) ಮಾಡಿದ ಪ್ರಮುಖ ಪ್ರಕರಣವೊಂದನ್ನು ಎಸ್‍ಐಎ ಅಧಿಕಾರಿಗಳು (State Investigation Agency) ಭೇದಿಸಿದ್ದಾರೆ.

    ಪ್ರಕರಣ ಸಂಬಂಧ ಹಿರಿಯ ಪೊಲೀಸ್ (Police) ಅಧಿಕಾರಿ ಮತ್ತು ಪ್ರಮುಖ ಉದ್ಯಮಿ ಸೇರಿದಂತೆ ಶಂಕಿತರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದು ಭಯೋತ್ಪಾದಕರಿಗೆ ಹಣ ನೀಡಿದ ಇತ್ತೀಚಿನ ಬಹುದೊಡ್ಡ ಪ್ರಕರಣವಾಗಿದೆ. ಕಾಶ್ಮೀರದ ತನಿಖಾ ಸಂಸ್ಥೆ ಎಸ್‍ಐಎ ಬುಧವಾರದಿಂದ ಶುಕ್ರವಾರದವರೆಗೂ ಈ ಪ್ರಕರಣದ ಶಂಕಿತರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಆಪ್ತನಿಂದಲೇ ಬಿಜೆಪಿಗೆ ಭಾರೀ ಮುಖಭಂಗ; ಅವಿಶ್ವಾಸ ಮಂಡನೆಯಲ್ಲಿ ಬಿಜೆಪಿಗೆ ಸೋಲು

    ಪ್ರಕರಣದಲ್ಲಿ 85 ಕೋಟಿ ರೂ. ಮೊತ್ತದ ಹಣವನ್ನು ಸಂಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಬಳಸಲಾಗಿದೆ ಎಂಬ ಶಂಕೆ ಇದೆ. ವಿಚಾರಣೆಯ ವೇಳೆ 85 ಕೋಟಿ ರೂ.ಗೂ ಅಧಿಕ ಮೊತ್ತದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

    ಸುಮಾರು 22 ಸ್ಥಳಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಪ್ರಕರಣಕ್ಕೆ ದುಬೈ ಲಿಂಕ್ ಇರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಚಿನ್ನ ಕಳ್ಳಸಾಗಾಣಿಕೆ ಮತ್ತು ಇನ್ನಿತರ ಅಕ್ರಮ ಮಾರ್ಗವಾಗಿ ಈ ಹಣ ವರ್ಗಾವಣೆಯಾಗಿದೆ. ಈ ಹಿಂದೆ ಬಯಲಾದ ಪ್ರಕರಣಗಳಿಗಿಂತ ಇದು ದೊಡ್ಡದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೌಥ್‌ ಇಂಡಿಯನ್‌ ಪೇಪರ್‌ ಮಿಲ್‌ಗೆ ಬೆಂಕಿ – ಲಕ್ಷಾಂತರ ಮೌಲ್ಯದ ಪೇಪರ್‌ ಭಸ್ಮ

  • ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಗಡಿ ನುಸುಳಲು ಉಗ್ರರ ಯತ್ನ – ಇಬ್ಬರನ್ನು ಹೊಡೆದುರುಳಿಸಿದ ಸೇನೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಗಡಿ ನುಸುಳಲು ಯತ್ನಿಸಿದ ನಾಲ್ವರು ಉಗ್ರರ (Terrorists) ಪೈಕಿ ಇಬ್ಬರನ್ನು ಭದ್ರತಾ ಪಡೆಗಳು (Indian Army) ಹೊಡೆದುರುಳಿಸಿವೆ.

    ಕಾರ್ಯಾಚರಣೆ ವೇಳೆ ಎರಡು ಎಕೆ 47 ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ತಪ್ಪಿಸಿಕೊಂಡ ಇನ್ನಿಬ್ಬರು ಉಗ್ರರಿಗಾಗಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಭಯೋತ್ಪಾದಕರ ಅಡಗು ತಾಣಗಳು ಪತ್ತೆಯಾಗಿದ್ದು ಅವುಗಳನ್ನು ನಾಶಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾರರು ಪ್ರತಿ ಅಭ್ಯರ್ಥಿಯಿಂದ ಹಣ ಪಡೆದು ಸರಿಯಾದ ವ್ಯಕ್ತಿಗೆ ಮತ ಹಾಕ್ತಾರೆ: ಗಡ್ಕರಿ

    ಅನಂತನಾಗ್‍ನ ದಟ್ಟವಾದ ಕಾಡುಗಳಲ್ಲಿ ಈ ತಿಂಗಳ ಆರಂಭದಲ್ಲಿ ಒಂದು ವಾರದ ಅವಧಿಯಲ್ಲಿ ಎನ್‍ಕೌಂಟರ್ ನಡೆಸಲಾಗಿತ್ತು. ಈ ವೇಳೆ ಲಷ್ಕರ್ ಕಮಾಂಡರ್ ಮತ್ತು ಇನ್ನೊಬ್ಬ ಭಯೋತ್ಪಾದಕನನ್ನು ಹತ್ಯೆಗೈಯಲಾಗಿತ್ತು. ಅಲ್ಲದೇ ಗುಂಡಿನ ಚಕಮಕಿಯಲ್ಲಿ ಮೂವರು ಅಧಿಕಾರಿಗಳು ಸೇರಿದಂತೆ ನಾಲ್ವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು.

    ಕೆಲವು ತಿಂಗಳ ಹಿಂದೆ ನಡೆದ ಸೇನಾ ವಾಹನದ ಮೇಲಿನ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೇ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುವವರ ವಿರುದ್ಧವು ಅಗತ್ಯ ಕ್ರಮ ಜರುಗಿಸಲಾಗುತ್ತಿದೆ. ಇದನ್ನೂ ಓದಿ: 84 ಬ್ಯಾಂಕ್ ಅಕೌಂಟ್, 854 ಕೋಟಿ ವಹಿವಾಟು – ಬೃಹತ್ ಸೈಬರ್ ಕ್ರೈಂ ಜಾಲ ಬೆಳಕಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    ಜಮ್ಮು ಕಾಶ್ಮೀರದ ಅಂಗಡಿಗಳ ಮೇಲೆ ಸೇನೆ ದಾಳಿ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಪ್ವಾರ ಜಿಲ್ಲೆಯ ಕೆಲವು ಅಂಗಡಿಗಳ ಮೇಲೆ ಭದ್ರತಾ ಪಡೆಗಳು (Indian Army) ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

    ಐದು ಎಕೆ 47 ರೈಫಲ್‍ಗಳು, ಏಳು ಪಿಸ್ತೂಲ್‍ಗಳು, ನಾಲ್ಕು ಹ್ಯಾಂಡ್ ಗ್ರೆನೇಡ್‍ಗಳು ಮತ್ತು ಸ್ಫೋಟಕ್ಕೆ ಬಳಸುವ ಅಪಾರ ಪ್ರಮಾಣದ ಮದ್ದುಗುಂಡುಗಳು ಪತ್ತೆಯಾಗಿದೆ. ಸ್ಫೋಟಕಗಳು ಹಾಗೂ ಅಧುನಿಕ ಶಸ್ತ್ರಾಸ್ತ್ರಗಳು ಹೇಗೆ ಇಲ್ಲಿಗೆ ತಲುಪಿವೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದರ ಹಿಂದಿರುವ ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸೇನೆ ಮಾಹಿತಿ ಕಲೆಹಾಕುತ್ತಿದೆ. ಇದನ್ನೂ ಓದಿ: ದೆಹಲಿಯಿಂದ ಪುಣೆಗೆ ಹೊರಡಬೇಕಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

    ಗುಪ್ತಚರ ಮಾಹಿತಿ ಮೇರೆಗೆ ಸೇನೆ ಕೆಲವು ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳು ಪತ್ತೆಯಾಗಿವೆ. ಸ್ಫೋಟಕಗಳ ಸಂಗ್ರಹದ ಹಿಂದೆ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರದ ಬಗ್ಗೆ ಸೇನೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

    ಈ ಪ್ರದೇಶದ ಸುತ್ತಮುತ್ತಲಿನ ಇನ್ನೂ ಅನೇಕ ಸಣ್ಣ ಅಂಗಡಿಗಳು ಹಾಗೂ ಮನೆಗಳಲ್ಲಿ ಶಸ್ತ್ರಾಸ್ತ್ರಗಳು ಇರುವ ಶಂಕೆ ಇದೆ. ಈ ಬಗ್ಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನದಂದು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಳೆದ ಮೂರು ದಿನಗಳಿಂದ ಈ ಬಗ್ಗೆ ಗಮನ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶ್ವಾನಗಳಿಂದಾಗಿ ಜಗಳ- ನೆರೆಮನೆಯ ಇಬ್ಬರನ್ನು ಗುಂಡಿಕ್ಕಿ ಕೊಂದ ವ್ಯಕ್ತಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]