Tag: Srinagar

  • ಪುಲ್ವಾಮಾದಲ್ಲಿ ಮತ್ತೆ ಗುಂಡಿನ ದಾಳಿ- ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

    ಪುಲ್ವಾಮಾದಲ್ಲಿ ಮತ್ತೆ ಗುಂಡಿನ ದಾಳಿ- ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮ

    – ಓರ್ವ ನಾಗರಿಕನೂ ಬಲಿ

    ಶ್ರೀನಗರ: ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರೆದಿದೆ. ಸೇನಾ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

    ಮೇಜರ್ ಡಿ.ಎಸ್ ದೊಂಡಿಯಾಲ್, ಹೆಡ್ ಕಾನ್ಸ್ ಸ್ಟೇಬಲ್ ಸೇವಾರಾಂ, ಸಿಪಾಯಿ ಅಜಯ್ ಕುಮಾರ್, ಹರೀಶ್ ಸಿಂಗ್ ಹುತಾತ್ಮರಾಗಿದ್ದಾರೆ. ಸಿಪಾಯಿ ಗುಲ್ಜಾರ್ ಮಹಮ್ಮದ್ ಗೆ ಗಂಭೀರ ಗಾಯಗಳಾಗಿದ್ದು ಅವರಿಗೆ ಬದಾಮಿಬಾಗ್ ನಲ್ಲಿರುವ ಸೇನೆಯ 92ನೇ ಬೇಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿನ ದಾಳಿಗೆ ಮುಷ್ತಾಕ್ ಅಹ್ಮದ್ ಎಂಬ ನಾಗರಿಕ ಕೂಡ ಬಲಿಯಾಗಿದ್ದಾರೆ.

    ಪುಲ್ವಾಮಾ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ಯೋಧರ ಹಾಗೂ ಉಗ್ರರ ನಡುವೆ ಅಹೋರಾತ್ರಿ ಭೀಕರ ಕಾಳಗ ನಡೆದಿದೆ. 40 ಯೋಧರ ಬಲಿ ಪಡೆದ ಆದಿಲ್ ದಾರ್ ಗೆ ನೆರವು ನೀಡಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈನಿಕರು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದಾಗ ಉಗ್ರರು ಪ್ರತಿ ದಾಳಿ ನಡೆಸಿದ್ದಾರೆ.

    55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್ ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆಯನ್ನು ಕೈಕೊಂಡಿತ್ತು. ಯೋಧರು ತಮ್ಮನ್ನು ಸುತ್ತುವರಿದಿದ್ದಾರೆ ಎಂದು ತಿಳಿದ ಜೈಷ್ ಇ ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಉಗ್ರರು ಅಲ್ಲಿಂದ ಪರಾರಿ ಆಗಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮುಂದಿನ ತಿಂಗ್ಳು ನಿಶ್ಚಯವಾಗಿತ್ತು ಹುತಾತ್ಮರಾದ ಮೇಜರ್ ಮದ್ವೆ

    ಮುಂದಿನ ತಿಂಗ್ಳು ನಿಶ್ಚಯವಾಗಿತ್ತು ಹುತಾತ್ಮರಾದ ಮೇಜರ್ ಮದ್ವೆ

    ಶ್ರೀನಗರ: ಜಮ್ಮು ಕಾಶ್ಮೀರ ಪುಲ್ವಾಮಾ ದಾಳಿ ನಡೆದ 48 ಗಂಟೆಗಳ ಅವಧಿಯಲ್ಲೇ ಸುಧಾರಿತ ಐಇಡಿ ಸ್ಫೋಟ ಸಂಭವಿಸಿ 31 ವರ್ಷದ ಮೇಜರ್ ಚಿತ್ರೇಶ್ ಸಿಂಗ್ ಬಿಶ್ಟ್ ಹುತಾತ್ಮರಾಗಿದ್ದರು.

    ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‍ನ ಲಾಮಾ ಪ್ರದೇಶದಲ್ಲಿ ಶನಿವಾರ ಸಂಜೆ 3 ಗಂಟೆಯ ವೇಳೆಗೆ ಸ್ಫೋಟ ಸಂಭವಿಸಿತ್ತು. ಸೇನಾ ಯೋಧರು ಗಸ್ತು ತಿರುಗುತ್ತಿರುವ ವೇಳೆ ಮಣ್ಣಿನಲ್ಲಿ ಹೂತ್ತಿಟ್ಟ ಕೆಲ ವಸ್ತು ಪತ್ತೆಯಾಗಿತ್ತು. ಅದನ್ನು ಪರಿಶೀಲಿಸುತ್ತಿದ್ದ ವೇಳೆ ಐಇಡಿ ಏಕಾಏಕಿ ಬ್ಲಾಸ್ಟ್ ಆಗಿ ಮೇಜರ್ ವೀರಮರಣ ಅಪ್ಪಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಸೇನಾ ಅಧಿಕಾರಿ ದೇವೇಂದ್ರ ಆನಂದ್, ನೆಲದಲ್ಲಿ ಪತ್ತೆಯಾಗಿದ್ದ ಸ್ಫೋಟಗಳಲ್ಲಿ ಒಂದು ಐಇಡಿಯನ್ನು ಮೇಜರ್ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು. ಆದರೆ ಎರಡನೇ ಸ್ಫೋಟಕ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮತ್ತೊರ್ವ ಯೋಧ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಉತ್ತರಾಖಂಡದ ಡೆಕರಾಡೂನ್ ಸೇರಿದ್ದ ಮೇಜರ್ ಚಿತ್ರೇಶ್ ಸಿಂಗ್ ಅವರಿಗೆ ಮುಂದಿನ ತಿಂಗಳು ವಿವಾಹ ಕಾರ್ಯಕ್ರಮ ನಿಗಧಿಯಾಗಿತ್ತು. ಡೆಹರಾಡೂನ್‍ನಲ್ಲೇ ವಿವಾಹ ಸಮಾರಂಭ ನಡೆಯಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿತ್ತು ಎಂಬ ಮಾಹಿತಿ ಲಭಿಸಿದೆ.

    ಗಡಿ ಗಸ್ತು ತಿರುಗುವ ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಲು ಉಗ್ರರು ಇಂತಹ ಐಇಡಿ ಸ್ಫೋಟಗಳನ್ನು ಭೂಮಿಯಲ್ಲಿ ಹೂತ್ತಿಟ್ಟರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಲಾಂ ‘ಗುರು’

    ಸಲಾಂ ‘ಗುರು’

    https://www.youtube.com/watch?v=vxN4YG2ENAc

  • ನರ ಪಿಶಾಚಿ…!!

    ನರ ಪಿಶಾಚಿ…!!

    https://www.youtube.com/watch?v=8F-W6B8PpsI

  • 2,547 ಯೋಧರು ಒಟ್ಟಿಗೆ ಬಸ್ಸಿನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದರು ಯಾಕೆ?

    2,547 ಯೋಧರು ಒಟ್ಟಿಗೆ ಬಸ್ಸಿನಲ್ಲಿ ಶ್ರೀನಗರಕ್ಕೆ ತೆರಳುತ್ತಿದ್ದರು ಯಾಕೆ?

    ಶ್ರೀನಗರ: ಪಾಕಿಸ್ತಾನದ ಬೆಂಬಲಿತ ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಪುಲ್ವಾಮಾ ದಾಳಿಯ ಹೊಣೆ ಹೊತ್ತು ಕೊಂಡಿರುವ ವಿಚಾರ ಎಲ್ಲರಿಗೂ ತಿಳಿದ ಸಂಗತಿ. ಆದರೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಲು ಉಗ್ರರಿಗೆ ಹೇಗೆ ಅವಕಾಶ ಸಿಕ್ಕಿತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    2,547 ಮಂದಿ ಯೋಧರು ತಮ್ಮ ರಜೆಯನ್ನು ಕಳೆದು ಮರಳಿ ಕರ್ತವ್ಯಕ್ಕೆ ಹಾಜರಾಗಲು ಆಗಮಿಸಿದ್ದರು. ಈ ಅವಧಿಯಲ್ಲಿ ಜಮ್ಮುವಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರ ಬದಲಾವಣೆ ಆಗುತ್ತಿತ್ತು. ಸೇನೆಯಲ್ಲಿ ಇದು ಸಾಮಾನ್ಯ ಪ್ರಕ್ರಿಯೆ ಆದ ಕಾರಣ ಯೋಧರನ್ನು ಹೊತ್ತ ಸುಮಾರು 78 ಬಸ್ಸುಗಳು ಹೈವೇನಲ್ಲಿ ಸಾಗಿತ್ತು. ಬೆಳಗ್ಗೆ 3:30ಕ್ಕೆ ಜಮ್ಮುವಿನಿಂದ ಹೊರಟಿದ್ದ ಬಸ್ಸುಗಳು ಅವಂತಿಪೊರದ ಬಳಿ ಮಧ್ಯಾಹ್ನ 3:30ಕ್ಕೆ ಬಂದಾಗ ಸೂಸೈಡ್ ಬಾಂಬರ್ ಅದಿಲ್ ಅದಮ್ ದಾರ್ ಸ್ಫೋಟಕಗಳನ್ನು ತುಂಬಿಸಿಕೊಂಡು ಯೋಧರ ವಾಹನಕ್ಕೆ ಡಿಕ್ಕಿ ಹೊಡೆದಿದ್ದ.

    ಮಂಗಳವಾರ ಮತ್ತು ಬುಧವಾರ ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ವಿಪರೀತ ಮಂಜು ಇದ್ದ ಕಾರಣ ರಸ್ತೆ ಸಂಪರ್ಕವನ್ನು ಬಂದ್ ಮಾಡಲಾಗಿತ್ತು. ಗುರುವಾರ ಬೆಳಗ್ಗೆ ಸೈನಿಕರು ಬಸ್ಸಿನ ಮೂಲಕ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಪಡೆದು ಈ ದಾಳಿ ನಡೆಸಲಾಗಿದೆ. 2,547 ಸೈನಿಕರು ಶ್ರೀನಗರಕ್ಕೆ ಹೆದ್ದಾರಿಯಲ್ಲೇ ತೆರಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಉಗ್ರರಿಗೆ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.

    22 ವರ್ಷದ ಅದಿಲ್ ದಾರ್ 2017ದಲ್ಲಿ 12ನೇ ತರಗತಿಯ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಘಟನೆ ನಡೆದ 10 ಕಿಮೀ ದೂರದಲ್ಲಿ ವಾಸವಾಗಿದ್ದ. ಈ ಕಾರಣಕ್ಕೆ ಜೈಶ್ ಸಂಘಟನೆ ಈತನಿಗೆ ದಾಳಿ ನಡೆಸಲು ಜವಾಬ್ದಾರಿ ನೀಡಿತ್ತು.

    ಉಗ್ರನಿಗೆ ಮೊದಲಿಗೆ ಯಾವುದೇ ಪೈಶಾಚಿಕ ಕೃತ್ಯ ಒಪ್ಪಿಸಿರಲಿಲ್ಲ. ಈತನನು ಉಗ್ರ ಸಂಘಟನೆಯ `ಸಿ’ ಗ್ರೇಡ್‍ನಲ್ಲಿಡಲಾಗಿತ್ತು ಅಂತ ತಿಳಿದು ಬಂದಿದೆ. ಗುರುವಾರ ಈತ 350 ಕೇಜಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರನ್ನು ಸೇನಾ ವಾಹನಕ್ಕೆ ಗುದ್ದಿಸಿ ಫಿದಾಯಿನ್ ದಾಳಿ ನಡೆಸಿ ನಾನೀಗ ಸ್ವರ್ಗಕ್ಕೆ ಹೋಗ್ತೇನೆ ಎಂದು ಡೈಲಾಗ್ ಹೊಡೆದಿದ್ದ.

    ಸ್ಫೋಟದ ತೀವ್ರಗೆ ಸುಮಾರು 10 ಕಿ.ಮೀ. ಶಬ್ದ ಕೇಳಿತ್ತು. ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿತ್ತು ಅಂತ ಸ್ಥಳೀಯರು ಹೇಳಿದ್ದಾರೆ. ಸ್ಫೋಟಕ್ಕೆ ಆರ್ ಡಿಎಕ್ಸ್ ಅಲ್ಲ, ಉತ್ಕೃಷ್ಟ ಯೂರಿಯಾ ಬಳಸಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಜ್‍ನಾಥ್ ಸಿಂಗ್

    ಯೋಧರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ರಾಜ್‍ನಾಥ್ ಸಿಂಗ್

    – ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

    ಶ್ರೀನಗರ: ಪುಲ್ವಾಮಾದಲ್ಲಿ ನಡೆದ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಯೋಧರ ಪಾರ್ಥಿಕ ಶರೀರಕ್ಕೆ ಕೇಂದ್ರ ಗೃಹ ಸಚಿವರಾದ ರಾಜ್‍ನಾಥ್ ಸಿಂಗ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಅಂತಿಮ ನಮನ ಸಲ್ಲಿಸಲು ಸಚಿವರು ಜಮ್ಮ ಕಾಶ್ಮೀರದ ಬದ್ಗಾಮ್‍ಗೆ ಆಗಮಿಸಿದ್ದರು. ರಾಜ್‍ನಾಥ್ ಸಿಂಗ್ ಅವರಿಗೆ ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿ ದಿಲ್‍ಬಾಗ್ ಸಿಂಗ್ ಸಾಥ್ ನೀಡಿದರು. ಈ ವೇಳೆ ಸ್ವತಃ ರಾಜ್‍ನಾಥ್ ಸಿಂಗ್ ಹಾಗೂ ದಿಲ್‍ಬಾಗ್ ಸಿಂಗ್ ಪಾರ್ಥಿವ ಶರೀರಕ್ಕೆ ಹೆಗಲು ನೀಡಿದರು.

    ಕೆಲ ಕಾಲ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಅಂತಿಮ ನಮನವನ್ನು ಸಲ್ಲಿಸಿದರು. ಸೇನಾ ಗೌರವ ನೀಡಿದ ಬಳಿಕ ಯೋಧರ ಪಾರ್ಥಿವ ಶರೀರವನ್ನು ದೆಹಲಿಯ ಪಾಲಂ ವಾಯುನೆಲೆಗೆ ಕೊಂಡ್ಯೊಲಾಯಿತು. ಆ ಬಳಿಕ ಯೋಧರ ಸ್ವಗ್ರಾಮಗಳಿಗೆ ಮೃತ ಶರೀರವನ್ನು ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ.

    ಈ ದಾಳಿಯ ಪ್ರತೀಕಾರ ತೀರಿಸಿಯೇ ತೀರಿಸುತ್ತೇವೆ ಎಂದು ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ ರಾಜ್‍ನಾಥ್ ಸಿಂಗ್ ಅವರು, ವೀರ ಭೂಮಿಯಲ್ಲಿ ಹುಟ್ಟಿದ, ವೀರ ಯೋಧರ ಕಾಣಿಕೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ -ಕರ್ಫ್ಯೂ ಜಾರಿ

    ಜಮ್ಮು ಕಾಶ್ಮೀರದಲ್ಲಿ ಕಲ್ಲು ತೂರಾಟ -ಕರ್ಫ್ಯೂ ಜಾರಿ

    ಶ್ರೀನಗರ: ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಜಮ್ಮು ಕಾಶ್ಮೀರದ ಹಲವೆಡೆ ಪ್ರತಿಭಟನೆ ನಡೆದಿದ್ದು, ಈ ವೇಳೆ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲು ತೂರಾಟ ಕೂಡ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕರ್ಫ್ಯೂ  ಜಾರಿ ಮಾಡಲಾಗಿದೆ.

    ಜಮ್ಮು  ನವಬಾದ್, ಭಕ್ಷಿನಗರ್, ಜಾನಿಪುರ್ ಸೇರಿ ಹಲವು ಭಾಗಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಸೇನೆಯ ಅಧಿಕಾರಿಗಳು ಕೂಡ ಜನರಲ್ಲಿ ಶಾಂತಿ ಕಾಪಾಡಲು ಮನವಿ ಮಾಡಿದರೂ ಕೂಡ ಹೋರಾಟಗಳು ತೀವ್ರಗೊಂಡ ಕಾರಣದಿಂದ ಕರ್ಫ್ಯೂ ಜಾರಿ ಮಾಡಲಾಗಿದೆ. ಅಲ್ಲದೇ ದಾಳಿ ಬೆನ್ನಲ್ಲೇ ಜಮ್ಮುವಿನಲ್ಲಿ ಮೊಬೈಲ್ ಹಾಗೂ ಇಂಟರ್‍ನೆಟ್, ಫೋನ್ ಸಂಪರ್ಕ ಬಂದ್ ಮಾಡಲಾಗಿದೆ.

    ಜಮ್ಮು ಕಾಶ್ಮೀರದ ಉಪ ಕಮಿಷನರ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಜಮ್ಮು ಸಿಟಿ ಸೇರಿದಂತೆ ವಿವಿಧೆಡೆ ಕರ್ಫ್ಯೂ ಜಾರಿ ಮಾಡಲಾಗಿದೆ. ಅದರಲ್ಲೂ ಜಮ್ಮು ಓಲ್ಡ್ ಸಿಟಿ ಪ್ರದೇಶದಲ್ಲಿ ಹೆಚ್ಚಿನ ಪ್ರತಿಭಟನೆಗಳು ನಡೆದಿದೆ. ಧ್ವನಿವರ್ಧಕಗಳಲ್ಲಿ ಈ ಬಗ್ಗೆ ರಕ್ಷಣಾ ಪಡೆ ಮಾಹಿತಿ ನೀಡಿ ಘೋಷಣೆ ಮಾಡಲಾಗುತ್ತಿದೆ. ಪರಿಣಾಮ ನಗರದಲ್ಲಿ ಬಹುತೇಕ ಸ್ತಬ್ಧವಾಗಿದೆ.

    ದಾಳಿಯನ್ನ ಖಂಡಿಸಿದ ಜಮ್ಮು ಕಾಶ್ಮೀರದ ವ್ಯಾಪಾರಿ ಒಕ್ಕೂಟ ಕೂಡ ಬಂದ್‍ಗೆ ಕರೆ ನೀಡಿದ್ದು, ಹೈ ಕೋರ್ಟ್ ವಕೀಲರ ಸಂಘ ಸೇರಿದಂತೆ ಹಲವು ಸ್ಥಳೀಯ ಸಂಘಟನೆಗಳು ದಾಳಿಯನ್ನು ಖಂಡಿಸಿದೆ. ಇದೇ ವೇಳೆ ಭಾರತೀಯ ವಿದೇಶಾಂಗ ಇಲಾಖೆಯಿಂದ ಪಾಕಿಸ್ತಾನದ ರಾಯಭಾರಿ ಸೊಹೈಲ್ ಮಹಮೂದ್ ಅವರಿಗೆ ಬುಲಾವ್ ನೀಡಿದ್ದು, ಸೊಹೈಲ್ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನು ಭೇಟಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಪಾಕ್ ವಿರುದ್ಧ ಸೇಡು ತೀರಿಸಿಕೊಂಡ ಭಾರತೀಯ ಸೇನಾ ಪಡೆ!

    ಶ್ರೀನಗರ: ಶುಕ್ರವಾರ ಮೂವರು ಪೊಲೀಸ್ ಪೇದೆಯನ್ನು ಅಪಹರಿಸಿ ಹತ್ಯೆ ಮಾಡಿದ್ದ ಪಾಕ್ ವಿರುದ್ಧ ಭಾರತೀಯ ಸೇನಾ ಪಡೆ 5 ಮಂದಿ ಉಗ್ರರನ್ನು ಸೆದೆಬಡಿಯುವ ಮೂಲಕ ತನ್ನ ಸೇಡು ತೀರಿಸಿಕೊಂಡಿದೆ.

    ಶುಕ್ರವಾರ ಮುಂಜಾನೆ ಮೂವರು ಪೊಲೀಸರ ಮನೆಗೆ ನುಗ್ಗಿ ಅವರನ್ನು ಅಪಹರಿಸಿ ಉಗ್ರರು ಹತ್ಯೆ ಮಾಡಿದರು. ಈ ಘಟನೆ ನಸುಕಿನಲ್ಲೇ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಗಡಿ ದಾಟುತ್ತಿದ್ದ ಐವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.

    ಭಾರತೀಯ ಸೇನೆಯ ಸಿಬ್ಬಂದಿಗಳ ಒಂದು ತಂಡ, ಕೇಂದ್ರ ರಿಸರ್ವ್ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಗುರುವಾರ ಕಾರ್ಡಿನ್ ಮತ್ತು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವೇಳೆ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದರು. ಶುಕ್ರವಾರದ ತನಕ ಗುಂಡಿನ ಚಕಮಕಿ ಕೊನೆಗೆ ಒಂದು ಎನ್‍ಕೌಂಟರ್ ಆಗಿ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿದ್ದಾರೆ.

    ಗುರುವಾರ ಇಬ್ಬರು ಉಗ್ರರನ್ನು ಕೊಲ್ಲಲಾಗಿದ್ದು, ಇನ್ನುಳಿದ ಮೂವರು ಮಂದಿ ಉಗ್ರರನ್ನು ಶುಕ್ರವಾರ ಹತ್ಯೆ ಮಾಡಲಾಗಿದೆ. ಹತ್ಯೆಗೊಳಗಾದವರೆಲ್ಲರೂ ಉಗ್ರರು ಎಂದು ಗುರುತಿಸಲಾಗಿದೆ ಅಂತಾ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಯ ಹಿನ್ನೆಲೆ ಇತ್ತೀಚೆಗೆ ಹಿಜ್ಬುಲ್ ಮುಜಾಹಿದೀನ್ ತಂಡದಿಂದ ಮುಸ್ಲಿಂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಬಂದಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ 6 ಎಸ್‍ಪಿಓ ಅಧಿಕಾರಿಗಳು ರಾಜಿನಾಮೆ ನೀಡಿದ್ದಾರೆ ಎಂಬ ಮಾಹಿತಿ ಕೇಳಿ ಬರುತ್ತಿತ್ತು. ಆದ್ರೆ ಈ ವದಂತಿಯನ್ನು ಕೇಂದ್ರ ಗೃಹ ಇಲಾಖೆ ನಿರಾಕರಿಸಿದೆ.

    ಉಗ್ರರಿಂದ ಹತ್ಯೆಗೊಳಗಾದ ಮೂವರು ಪೊಲೀಸ್ ಅಧಿಕಾರಿಗಳಾದ ಜವಾನ್ಸ್ ನಿಸಾರ್ ಅಹಮ್ಮದ್, ಫಿರ್ದೋಸ್ಸ್ ಕುಚಾಯ್ ಹಾಗೂ ಕುಲ್ವಾನ್ಟ್ ಸಿಂಗ್ ಅವರಿಗೆ ಗೌರವವನ್ನು ಸಲ್ಲಿಸುತ್ತೇವೆ. ಇನ್ನೂ ಮುಂದೆ ಈ ಅಮಾನವೀಯ ಕೃತ್ಯವನ್ನು ಖಂಡಿಸಿ ಅಪರಾಧಿಗಳನ್ನು ಕಾನೂನಿನ ಪ್ರಕಾರ ಸೆದೆಬಡಿಯುತ್ತೇವೆ ಎಂದು ಕಾಶ್ಮೀರದ ಪೊಲೀಸ್ ಪಡೆ ಟ್ವೀಟ್ ಮಾಡಿದೆ.

    ಬಹುಕಾಲದ ನಂತರ ಪಾಕ್-ಭಾರತದ ಚರ್ಚಿಗೆ ಅವಕಾಶ ಸಿಕ್ಕಿತ್ತು. ಆದರೆ ಇದೀಗ ಈ ನೀಚ ಕೃತ್ಯವೆಸಗಿದ್ದರಿಂದ ಪಾಕ್‍ನೊಂದಿಗೆ ದೀರ್ಘ ಗಂಟೆಯ ಚರ್ಚೆಯನ್ನು ಭಾರತ ರದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    9ರ ಬಾಲಕಿ ಮೇಲೆ ಮಲ ಸಹೋದರ, ಸ್ನೇಹಿತರಿಂದ ಗ್ಯಾಂಗ್‍ರೇಪ್, ಕೊಲೆ

    ಶ್ರೀನಗರ: 9 ವರ್ಷದ ಬಾಲಕಿ ಮೇಲೆ ಮಲ ಸಹೋದರ ಸೇರಿದಂತೆ ಆತನ ಸ್ನೇಹಿತರು ಸಾಮೂಹಿಕವಾಗಿ ಅತ್ಯಾಚಾರ ನಡೆಸಿ ಆಕೆಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ ತಾಯಿ ಮತ್ತು ಮಲ ಸಹೋದರ ಸೇರಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

    ಅಗಸ್ಟ್ 23 ರಂದು ಉರಿ ನಿವಾಸಿಯಾಗಿರುವ ತಂದೆ ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಭಾನುವಾರ ಬಾಲಕಿಯ ಮೃತದೇಹ ಹತ್ತಿರದ ಅರಣ್ಯ ಪ್ರದೇಶದ ಪತ್ತೆಯಾಗಿದ್ದು, ಈ ಸಂಬಂಧ ಈ ಪ್ರಕರಣ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಬಾರಾಮುಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಹುಸೇನ್ ಮಿರ್ ಹೇಳಿದ್ದಾರೆ.

    ಎಸ್‍ಐಟಿ ಈ ಕುರಿತು ಮಲ ತಾಯಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಿದಾಗ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿರುವ ವಿಚಾರ ಬಳಕಿಗೆ ಬಂದಿದೆ.

    ಪತಿಯ ಎರಡನೆಯ ಹೆಂಡತಿ ಮತ್ತು ಆಕೆಯ ಮಕ್ಕಳ ಮೇಲೆ ಮಲತಾಯಿ ದ್ವೇಷ ಹೊಂದಿದ್ದಳು. ಹರಿತವಾದ ಚಾಕುವನ್ನು ತಯಾರಿ ಮಾಡಿ ಬಾಲಕಿಯನ್ನು ಹತ್ತಿರವಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಲ ತಾಯಿಯ 14 ವರ್ಷದ ಮಗ ಹಾಗೂ ಆತನ ಸ್ನೇಹಿತರು ಸೇರಿ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ. ಕೃತ್ಯ ಎಸಗಿದ ನಂತರ ಬಾಲಕಿಯನ್ನು ಕಟ್ಟಿ ಹಾಕಿ ಸಹೋದರ ಕೊಡಲಿಯಿಂದ ತಲೆ ಹೊಡೆದಿದ್ದಾನೆ. ಮತ್ತೊಬ್ಬ ಆರೋಪಿ ಬಾಲಕಿಯ ಕಣ್ಣುಗಳ ಮೇಲೆ ಚಾಕುವಿನಿಂದ ಇರಿದಿದ್ದಾನೆ. ನಂತರ ಮೃತ ದೇಹವನ್ನು ಪೊದೆಯೊಳಗೆ ಎಸೆದು ಕೊಂಬೆಗಳಿಂದ ಮರೆಮಾಡಿದ್ದಾರೆ. ಈ ಎಲ್ಲ ಕೃತ್ಯ ನಡೆಯುವಾಗ ಸ್ಥಳದಲ್ಲೇ ಮಲತಾಯಿ ನಿಂತಿದ್ದಳು ಎಂದು ಪೊಲೀಸರು ತಿಳಿಸಿದರು.

    ಕೃತ್ಯಕ್ಕೆ ಬಳಸಿದ್ದ ಕೊಡಲಿ ಮತ್ತು ಚಾಕುವನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು, ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv