Tag: Srinagar

  • ಹಿಜ್ಬಲ್ ಮುಜಾಹಿದೀನ್ ಉಗ್ರ ಕೆಲವೇ ಗಂಟೆಯಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?

    ಹಿಜ್ಬಲ್ ಮುಜಾಹಿದೀನ್ ಉಗ್ರ ಕೆಲವೇ ಗಂಟೆಯಲ್ಲಿ ಸಿಕ್ಕಿ ಬಿದ್ದಿದ್ದು ಹೇಗೆ?

    ಶ್ರೀನಗರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟ ಮಾಡಿ ಒಬ್ಬ ಹುಡುಗನ ಸಾವಿನ ಕಾರಣನಾಗಿ, 33 ಮಂದಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಯಾಸಿನ್ ಭಟ್‍ನನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ.

    ಆರೋಪಿ ಗ್ರೆನೇಡ್ ದಾಳಿ ನಡೆಸಲು ಇಂದು ಬೆಳಗ್ಗೆಯೇ ಜಮ್ಮುವಿನ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ. ಪೂರ್ವ ನಿಯೋಜಿತ ಪ್ಲಾನ್‍ನಂತೆ 10.30ರ ವೇಳೆಗೆ ಹೊರಟು ನಿಂತಿದ್ದ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಬಸ್ ಕೆಳಗೆ ಗ್ರೆನೇಡ್ ಎಸೆದು ಸ್ಥಳದಿಂದ ಪರಾರಿಯಾಗಿದ್ದ. ಆದರೆ ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

    ಸಿಸಿಟಿವಿ ದೃಶ್ಯ ಹಾಗೂ ಘಟನಾ ಸ್ಥಳದಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ 11.45ರ ವೇಳೆಗೆ ಎಲ್ಲಾ ಪೊಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಗಳಿಗೆ ಮಾಹಿತಿ ತಿಳಿಸಲಾಗಿತ್ತು. ಕೆಂಪು ಬಣ್ಣದ ಬ್ಯಾಗ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿ ಕಂಡು ಬಂದರೆ ವಶಕ್ಕೆ ಪಡೆದುಕೊಳ್ಳಿ ಎಂದು ಉತ್ತರದ ಎಸ್‍ಪಿ ಅಮೃತ್‍ಪಾಲ್ ಸಿಂಗ್ ಹಾಗೂ ಎಸ್‍ಡಿಪಿಒ ಜಸ್ವಂತ್ ಸಿಂಗ್ ಎಲ್ಲಾ ಪೊಲೀಸ್ ಠಾಣೆಗೆ ಸಂದೇಶ ಕಳುಹಿಸಿದ್ದರು.

    ಈ ಸಂದೇಶ ಬಂದ ಬಳಿಕ ನಗೊರ್ಟಾ ಎಸ್‍ಡಿಪಿಒ ಮೋಹನ್ ಶರ್ಮಾ ಹಾಗೂ ನಗೊರ್ಟಾ ಎಸ್‍ಎಚ್‍ಒ ದೀಪಕ್ ಪಥಾನಿಯ ಅವರು ಬಾನ್ ಟೋಲ್ ಪ್ಲಾಜಾ ಬಳಿ ತಪಾಸಣೆ ನಡೆಸುತ್ತಿದ್ದಾಗ ಶಂಕೆಯ ಆಧಾರದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

    ವಿಚಾರಣೆ ನಡೆಸಿದ ವೇಳೆ ಆತ ತನ್ನ ಹೆಸರು ಯಾಸಿರ್ ಜಾವೇದ್ ಭಟ್, ಕುಲ್ಗಮ್‍ನ ಜವೇದ್ ಭಟ್ ಪುತ್ರ ಎಂಬ ಮಾಹಿತಿಯನ್ನು ನೀಡಿದ್ದಾನೆ. ಮತ್ತಷ್ಟು ವಿಚಾರಣೆ ನಡೆಸಿದಾಗ ನಾನೇ ಜಮ್ಮು ನಿಲ್ದಾಣದಲ್ಲಿ ಈ ಕೃತ್ಯವನ್ನು ನಡೆಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

    ಸದ್ಯ ಉಗ್ರನನ್ನು ಬಂಧಿಸಿರುವ ಪೊಲೀಸರು ಕೃತ್ಯದ ಹಿಂದೆ ಸಂಚು ರೂಪಿಸಿದ್ದರ ಬಗ್ಗೆ ಮಾಹಿತಿ ಪಡೆಯಲು ತನಿಖೆ ಮುಂದುವರಿಸಿದ್ದಾರೆ. ಜೈಶ್ ಎ ಮೊಹಮ್ಮದ್ ಸಂಘಟನೆಗೆ ಭಾರತೀಯ ಯೋಧರು ಗುರಿಯಾದರೆ, ಹಿಜ್ಬುಲ್ ಮುಜಾಹಿದೀನ್ ಉಗ್ರರಿಗೆ ಸಾಮಾನ್ಯ ಜನರೇ ಟಾರ್ಗೆಟ್ ಎನ್ನಲಾಗಿದೆ. ಕುಲ್ಗಾಂ ಜಿಲ್ಲೆಯ ಹಿಜ್ಬುಲ್ ಮುಜಾಹಿದೀನ್ ಜಿಲ್ಲಾ ಕಮಾಂಡರ್ ಫಾರೂಕ್ ಅಹ್ಮದ್ ಭಟ್ ಅಲಿಯಾಸ್ ಒಮರ್ ಗ್ರೆನೇಡ್ ದಾಳಿ ನಡೆಸಲು ಸೂಚನೆ ನೀಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮ್ಮು ಬಸ್ ನಿಲ್ದಾಣದಲ್ಲಿ ಸ್ಫೋಟ – ಗ್ರೆನೇಡ್ ಎಸೆದ ಕೆಲ ಗಂಟೆಗಳಲ್ಲೇ ಉಗ್ರ ಅರೆಸ್ಟ್

    ಜಮ್ಮು ಬಸ್ ನಿಲ್ದಾಣದಲ್ಲಿ ಸ್ಫೋಟ – ಗ್ರೆನೇಡ್ ಎಸೆದ ಕೆಲ ಗಂಟೆಗಳಲ್ಲೇ ಉಗ್ರ ಅರೆಸ್ಟ್

    ಶ್ರೀನಗರ: ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ಸ್ಫೋಟಿಸಿದ್ದ ಉಗ್ರನನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯಾಸಿನ್ ಭಟ್ ಬಂಧಿತ ಉಗ್ರ. ಈತ ನಿಷೇಧಿತ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದನಾ ಸಂಘಟನೆಗೆ ಸೇರಿದವನಾಗಿದ್ದಾನೆ. ಘಟನೆ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಐಜಿಪಿ ಮನೀಷ್ ಕೆ ಸಿನ್ಹಾ ಮಾಹಿತಿ ನೀಡಿದ್ದಾರೆ.

    ಕುಲ್ವಾಮ್ ಜಿಲ್ಲೆಯ ಹಿಜ್ಬುಲ್‍ಮುಜಾಹಿದೀನ್ ಜಿಲ್ಲಾ ಕಮಾಂಡರ್ ಫರೂಕ್ ಅಹ್ಮದ್ ಭಟ್ ಅಲಿಯಾಸ್ ಓಮರ್, ಯಾಸಿರ್ ಭಟ್‍ಗೆ ಗ್ರೆನೇಡ್ ದಾಳಿ ನಡೆಸಿಲು ಸೂಚನೆ ನೀಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಘಟನೆಯಲ್ಲಿ ಒಬ್ಬ ಸಾವನ್ನಪ್ಪಿದ್ದು, 33 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವನನ್ನು 17 ವರ್ಷದ ಮೊಹಮ್ಮದ್ ಶರೀಕ್ ಎಂದು ಗುರುತಿಸಲಾಗಿದೆ.

    ಯಾಸಿನ್ ಇಂದು ಬೆಳಗ್ಗೆ ಕುಲ್ಗಾಮ್ ನಿಂದ ಜಮ್ಮುವಿಗೆ ಆಗಮಿಸಿದ್ದ. ಸ್ಥಳದಲ್ಲಿ ಇದ್ದ ಪ್ರತ್ಯಕ್ಷದರ್ಶಿಗಳು ಓರ್ವ ವ್ಯಕ್ತಿ ಜೀನ್ಸ್ ಹಾಗೂ ಕೆಂಪು ಬಣ್ಣದ ಬ್ಯಾಗ್ ಹೊಂದಿದ್ದ ಎಂದು ಮಾಹಿತಿ ನೀಡಿದ್ದರು. ಇದರ ಜೊತೆ ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿತ್ತು. ಈ ಆಧಾರದ ಹಿನ್ನೆಲೆಯಲ್ಲಿ ಯಾಸಿರ್ ಭಟ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆದಾಗ ಕೃತ್ಯ ಬೆಳಕಿಗೆ ಬಂದಿದೆ.

    11.30ಕ್ಕೆ ಜಮ್ಮುವಿನಿಂದ ಹೊರಡಲು ಸಿದ್ಧವಿದ್ದ ಬಸ್ ಕೆಳಗೆ ಗ್ರೆನೇಡ್ ಎಸೆದ ಪರಿಣಾಮ ಹಲವು ಮಂದಿ ಗಾಯಗೊಂಡಿದ್ದಾರೆ. ಕಳೆದ ಮೇ ತಿಂಗಳಿಂದ ಇದು ಮೂರನೇ ಬಾರಿಗೆ ಉಗ್ರರು ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದ್ದಾರೆ. ಭಾರೀ ಪ್ರಮಾಣದ ಸಾವು ನೋವು ಸಂಭವಿಸಲೆಂದು ಉಗ್ರರು ಬಸ್ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದರು.

    ನಗರದ ಕಾನೂನು ಸುವ್ಯವಸ್ಥೆ ಮತ್ತು ಶಾಂತಿಗೆ ಭಂಗ ತರುವ ಉದ್ದೇಶದಿಂದ ಈ ಸ್ಫೋಟ ನಡೆಸಲಾಗಿದೆ. ಸ್ಫೋಟ ಸಂಭವಿಸಿದ ವೇಳೆ ಜೀವ ಉಳಿಸಿಕೊಳ್ಳಲು ಜನ ಓಡಿ ಹೋಗಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈಗ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಐಜಿಪಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯ ಸೇನೆಯಿಂದ ಕಾಶ್ಮೀರಿ ಶಾಲೆಗಳಿಗೆ 25 ಬೆಂಚ್ ಡೆಸ್ಕ್, ಕಂಪ್ಯೂಟರ್, ವಾಟರ್ ಟ್ಯಾಂಕ್ ಪೂರೈಕೆ

    ಭಾರತೀಯ ಸೇನೆಯಿಂದ ಕಾಶ್ಮೀರಿ ಶಾಲೆಗಳಿಗೆ 25 ಬೆಂಚ್ ಡೆಸ್ಕ್, ಕಂಪ್ಯೂಟರ್, ವಾಟರ್ ಟ್ಯಾಂಕ್ ಪೂರೈಕೆ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರಿ ಅಡಿಯಲ್ಲಿರುವ ಶಾಲೆಗಳಿಗೆ ಸದ್ಭಾವನಾ ಕಾರ್ಯಚರಣೆಯ ಮೂಲಕ ಭಾರತೀಯ ಸೇನೆಯೂ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಒದಗಿಸಿದೆ.

    ಜಮ್ಮು-ಕಾಶ್ಮೀರದ ಸಾಂಬಾ ಸೆಕ್ಟರ್ ನಲ್ಲಿರುವ ಬಾರಿಖಾದಿ ಪ್ರಾಂತ್ಯದ ಸರ್ಕಾರಿ ಶಾಲೆಯನ್ನು ಭಾರತೀಯ ಸೇನೆ ಸದ್ಭಾವನಾ ಕಾರ್ಯಚರಣೆಯ ಮೂಲಕ ಜೀರ್ಣೋದ್ಧಾರ ಮಾಡಿದೆ. ಯೋಧರು ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ಮಾತನಾಡಿಸಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡಿದ್ದಾರೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

    ಪಾಕಿಸ್ತಾನದ ದಾಳಿ ಮತ್ತು ಉಗ್ರರ ಹಾವಳಿಯಿಂದಾಗಿ ಗಡಿಭಾಗದ ಶಾಲೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರೆ ಮುಂದೆ ನಿಂತು ಶಾಲೆಯ ಪುನಾರಂಭ ಮಾಡಿದ್ದಾರೆ.

    ಸೇನೆಯೂ ಸರ್ಕಾರಿ ಶಾಲೆಗೆ, ಒಂದು ವಾಟರ್ ಟ್ಯಾಂಕ್, ಕೂಲರ್ ಸಹಿತ ಒಂದು ಶುದ್ಧ ಕುಡಿಯುವ ನೀರಿನ ಯಂತ್ರ, 25 ಬೆಂಚ್ ಡೆಸ್ಕ್ ಗಳು, ನಾಲ್ಕು ಕಂಪ್ಯೂಟರ್ ಗಳು ಮತ್ತು ಅದರ ಪರಿಕರಗಳು ಹಾಗೂ ಕಟ್ಟಡ ಎಲ್ಲವರನ್ನು ಆಪರೇಷನ್ ಸಧ್ಬಾವನಾ ಅಡಿಯಲ್ಲಿ ಒದಗಿಸಿದೆ.

    ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಭಾರತೀಯ ಸೈನ್ಯವು ‘ಆಪರೇಷನ್ ಸಧ್ಭಾವನಾ’ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಅಡಿಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ತರಬೇತಿಯಂತಹ ಕಾರ್ಯಕ್ರಮವನ್ನು ಸಹ ಸೇನೆಯಲ್ಲಿರುವ ಯೋಧರು ಆಯೋಜನೆ ಮಾಡುತ್ತಾರೆ. ಸೇನೆಯ ಈ ಕಾರ್ಯಕ್ಕೆ ಸ್ಥಳೀಯರು ಕೂಡ ಖುಷಿ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 40 ಯೋಧರ ಬಲಿ ಪಡೆದಿದ್ದ ಪುಲ್ವಾಮಾದಲ್ಲಿ ಮತ್ತೆ ಬಾಂಬ್ ಸ್ಫೋಟ

    40 ಯೋಧರ ಬಲಿ ಪಡೆದಿದ್ದ ಪುಲ್ವಾಮಾದಲ್ಲಿ ಮತ್ತೆ ಬಾಂಬ್ ಸ್ಫೋಟ

    – ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕ್ ತಂತ್ರ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿ ಮಾಡಿ 40 ಭಾರತೀಯ ಯೋಧರನ್ನು ಬಲಿಪಡೆದಿದ್ದ ಸ್ಥಳದಲ್ಲಿ ಮತ್ತೆ ಬಾಂಬ್ ಸ್ಫೋಟವಾಗಿದೆ.

    ಪುಲ್ವಾಮಾ ಜಿಲ್ಲೆಯ ತ್ರಾಲ್‍ನಲ್ಲಿ ಸುಧಾರಿತ ಸ್ಫೋಟಕ (ಐಇಡಿ) ಬ್ಲಾಸ್ಟ್ ಮಾಡಿದ್ದು, ಮಿಲಿಟರಿಯನ್ನು ಟಾರ್ಗೆಟ್ ಮಾಡಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ್ದಾರೆ. ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಬಾಂಬ್ ಸ್ಫೋಟವಾಗಿದೆ ಎಂದು ಹೇಳಲಾಗುತ್ತಿದೆ.

    ಈ ಸ್ಫೋಟದಿಂದ ಓರ್ವ ನಾಗರಿಕನಿಗೆ ಗಾಯವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದೆ. ಕಳೆದ ದಿನವಷ್ಟೆ ಶಾಂತಿ ಸ್ಥಾಪನೆಗಾಗಿ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡುವುದಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಕೊನೆಗೆ ಸತಾಯಿಸಿ ಸತಾಯಿಸಿ ಶುಕ್ರವಾರ ರಾತ್ರಿ 9 ಗಂಟೆಯ ಸುಮಾರಿಗೆ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ್ದರು. ಆದರೆ ಪಾಪಿ ಪಾಕಿಸ್ತಾನ ಮತ್ತೆ ಬಾಂಬ್ ಸ್ಫೋಟ ಮಾಡುವ ಮೂಲಕ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ.

    ವಿಷ ಬೆರೆಸಲು ತಂತ್ರ:
    ಫೆಬ್ರವರಿ 14 ರಂದು ಸೈನಿಕರು ಹೋಗುತ್ತಿದ್ದ ವಾಹನಗಳ ಮೇಲೆ ಉಗ್ರ ದಾಳಿ ಮಾಡಿದ್ದನು. ಇದರಿಂದ 40 ಯೋಧರು ಹುತಾತ್ಮರಾಗಿದ್ದರು. ಆದರೆ ಈಗ ಮತ್ತೆ ಪಾಕಿಸ್ತಾನ ಬಾಂಬ್ ದಾಳಿ ಮಾಡಿದೆ. ಇನ್ನೊಂದು ಕಡೆ ಪಾಕಿಸ್ತಾನ ಭಾರತದ ಸೈನಿಕರ ಹತ್ಯೆಗೆ ಸಂಚು ಮಾಡಿದ್ದು, ಸೈನಿಕರ ಆಹಾರದಲ್ಲಿ ವಿಷ ಬೆರೆಸಲು ಪಾಕಿಸ್ತಾನ ಕುತಂತ್ರ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಪಾಕಿಸ್ತಾನ ಸೇನಾ ಶಿಬಿರಗಳಲ್ಲಿರುವ ಆಹಾರ ಡಿಪೋದಲ್ಲಿ ವಿಷ ಬೆರೆಸಲು ಪಿತೂರಿ ಮಾಡಿದ್ದು, ಇದನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐ ಜೊತೆ ಸೇರಿ ಸಂಚು ರೂಪಿಸಿದೆ ಎಂದು ಹೇಳಲಾಗುತ್ತಿದೆ. ಕಾಶ್ಮೀರದಲ್ಲಿರುವ ಭಯೋತ್ಪಾದಕರು ವಿಷ ಬೆರೆಸಬಹುದು ಎಂದು ಪಡಿತರ ಡಿಪೋಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಸತ್ತ ಸೋಗಿನಲ್ಲಿ ಐವರು ಯೋಧರನ್ನು ಕೊಂದ ಉಗ್ರ

    ಶ್ರೀನಗರ: ಇಡೀ ದೇಶಕ್ಕೆ ದೇಶವೇ ಅಭಿನಂದನ್ ಸ್ವಾಗತಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರು. ಆದರೆ ಕಣಿವೆ ನಾಡಿನಲ್ಲಿ ಉಗ್ರರು ತಮ್ಮ ಕುತಂತ್ರಿ ಬುದ್ಧಿ ಮುಂದುವರಿಸಿದ್ದು, ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಐವರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ.

    ಉಗ್ರರು ಮತ್ತು ಸೇನಾಪಡೆಗಳ ನಡುವೆ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಐವರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದಾರೆ.

    ಗುಂಡಿನ ದಾಳಿಯಲ್ಲಿ ಉಗ್ರಗಾಮಿಯೋರ್ವ ಸತ್ತಂತೆ ನಟಿಸಿದ್ದು, ಹತ್ತಿರ ಬರುತ್ತಿದ್ದ ಸೇನಾಪಡೆ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಈ ವೇಳೆ ಸಿಆರ್‍ಪಿಎಫ್ ಇನ್ಸ್ ಪೆಕ್ಟರ್ ಹಾಗೂ ನಾಲ್ವರು ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇತ್ತ ಸತ್ತಂತೆ ನಟಿಸಿ ಯೋಧರನ್ನು ಕೊಂದ ಉಗ್ರ ಕೂಡ ಫಿನೀಶ್ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.

    ಭಾರತ ಮತ್ತು ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದರೂ ಪಾಕಿಸ್ತಾನ ತನ್ನ ಕುತಂತ್ರಿ ಬುದ್ಧಿ ಬಿಟ್ಟಿಲ್ಲ. ಉಗ್ರರ ಮೂಲಕ ಗಡಿ ನಿಯಂತ್ರಣ ರೇಖೆಯ ಕುಪ್ವಾರದ ಹಂದ್ವಾರದಲ್ಲಿ ಶಾಂತಿ ಕದಡುತ್ತಿದೆ.

    ಗಡಿಯಲ್ಲಿನ ಕೊನೆಯ ಹಳ್ಳಿಗಳಲ್ಲಿ ವಾಸವಾಗಿರುವವರ ಭದ್ರತೆಗಾಗಿ ಪೂಂಚ್ ಸೆಕ್ಟರ್‍ನಲ್ಲಿ ಸೇನಾ ಬಂಕರ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಸೇನೆ ನಮ್ಮ ಸುತ್ತಮುತ್ತಲೇ ಇರುವುದರಿಂದ ನಮಗೆ ಪಾಕಿಸ್ತಾನ ನೀಡುತ್ತಿದ್ದ ಭೀತಿ ದೂರಾಗಿದೆ ಅಂತ ಸ್ಥಳೀಯರು ಹೇಳುತ್ತಿದ್ದಾರೆ. ಈ ಮಧ್ಯೆ ಗಡಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿ ಹುತಾತ್ಮರಾದ ಇಬ್ಬರು ಪೈಲಟ್‍ಗಳ ಅಂತ್ಯಕ್ರಿಯೆ ಹುಟ್ಟೂರುಗಳಲ್ಲಿ ಸೇನಾ ಗೌರವದೊಂದಿಗೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಬ್ಬರು ಉಗ್ರರು ಮಟಾಷ್ -3 ಉಗ್ರರನ್ನ ಸುತ್ತುವರಿದ ಭಾರತೀಯ ಸೇನೆ

    ಇಬ್ಬರು ಉಗ್ರರು ಮಟಾಷ್ -3 ಉಗ್ರರನ್ನ ಸುತ್ತುವರಿದ ಭಾರತೀಯ ಸೇನೆ

    ಶ್ರೀನಗರ: ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಇಂದು ಮುಂಜಾನೆ ಭದ್ರತಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.

    ಭದ್ರತಾಪಡೆ ಇಬ್ಬರು ಉಗ್ರರನ್ನು ಎನ್‍ಕೌಂಟರ್ ಮಾಡಿದೆ. ಅಲ್ಲದೇ ಸ್ಥಳದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಕುಪ್ವಾರದಲ್ಲೂ ಉಗ್ರರ ಉಪಟಳ ಮುಂದುವರಿದಿದ್ದು, ಮೂವರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಸುತ್ತುವರಿದಿದೆ.

    ಹಂದ್ವಾರದಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದರು. ಮುಂಜಾನೆ ಏಕಾಏಕಿ ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಭದ್ರತಾ ಪಡೆಯೂ ಕೂಡ ಪ್ರತ್ಯುತ್ತರವಾಗಿ ಅವರ ವಿರುದ್ಧ ಗುಂಡಿನ ಚಕಮಕಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸದ್ಯಕ್ಕೆ ಭಯೋತ್ಪದಾಕರು ಗುಂಡಿನ ಚಕಮಕಿ ನಿಲ್ಲಿಸಿದ್ದು, ಮೂವರು ಲಷ್ಕರ್ ಉಗ್ರರನ್ನು ಭಾರತೀಯ ಸೇನೆ ಸುತ್ತುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಿನ ವಿಡಿಯೋ ತೋರಿಸಿ ಭಾರತದ ವಿಮಾನ ಹೊಡೆದಿದ್ದೇವೆ ಎಂದು ಪಾಕ್ ಬೊಗಳೆ!

    ಬೆಂಗ್ಳೂರಿನ ವಿಡಿಯೋ ತೋರಿಸಿ ಭಾರತದ ವಿಮಾನ ಹೊಡೆದಿದ್ದೇವೆ ಎಂದು ಪಾಕ್ ಬೊಗಳೆ!

    ಬೆಂಗಳೂರು: 2016ರಲ್ಲಿ ಜೋಧ್‍ಪುರ್ ನಲ್ಲಿ ಪತನವಾಗಿದ್ದ ಮಿಗ್ ವಿಮಾನದ ದೃಶ್ಯ ಬಳಸಿ ಇಂದು ನಾವು ಬುದ್ಗಾಮ್‍ನಲ್ಲಿ ಭಾರತದ ಎರಡು ಯುದ್ಧ ವಿಮಾನ ಹೊಡೆದುರಳಿಸಿದೆ ಎಂದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ.

    ಪಾಕ್ ಮಾಧ್ಯಮಗಳು ಹಳೆಯ ವಿಡಿಯೋವನ್ನು ಪ್ರಸಾರ ಮಾಡಿ ಭಾರತದ ವಿಮಾನಗಳನ್ನು ನಾವು ಹೊಡೆದಿದ್ದೇವೆ ಎಂದು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿವೆ.

    ಇದರ ಜೊತೆಯಲ್ಲೇ ಬೆಂಗಳೂರಿನ ಏರ್ ಶೋ ಪೂರ್ವಭಾವಿಯಾಗಿ ಯಲಹಂಕದಲ್ಲಿ ಪತನಗೊಂಡಿದ್ದ ಸೂರ್ಯಕಿರಣ್ ವಿಮಾನದ ಪೈಲಟ್ ಅವರನ್ನು ಸ್ಥಳೀಯರು ರಕ್ಷಿಸುತ್ತಿರುವ ವಿಡಿಯೋಗಳನ್ನು ಪಾಕ್ ಜನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಬುದ್ಗಾಮ್‍ನ ನಸಲಾಪುರದಲ್ಲಿ ಗಸ್ತು ತಿರುಗುವ ವೇಳೆ ಮಿಗ್ ಹೆಲಿಕಾಪ್ಟರ್ ಪತನಗೊಂಡಿತ್ತು. ಆದರೆ ಪಾಕಿಸ್ತಾನ 2016ರಲ್ಲಿ ಪತನಗೊಂಡ ಹಳೆ ವಿಡಿಯೋವನ್ನು ಪ್ಲೇ ಮಾಡಿ ನಾವು ಭಾರತದ ಯುದ್ಧ ವಿಮಾನ ಹೊಡೆದುರಳಿಸಿದ್ದೇವೆ ಎಂದು ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ.

    ಪಾಕಿಸ್ತಾನದ ಸೇನಾ ವಕ್ತಾರ ಮೇಜರ್ ಜನರರಲ್ ಅಸಿಫ್ ಗಫೂರ್ ತಮ್ಮ ಟ್ವಿಟ್ಟರಿನಲ್ಲಿ, “ಗಡಿ ನಿಯಂತ್ರಣ ರೇಖೆಯನ್ನು ಕ್ರಾಸ್ ಮಾಡಿದ್ದರಿಂದ ಭಾರತದ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಪಾಕಿಸ್ತಾನದ ವಾಯುಸೇನೆ ಹೊಡೆದುರಳಿಸಿದೆ” ಎಂದು ಟ್ವೀಟ್ ಮಾಡಿ ಹೇಳಿಕೆ ನೀಡಿದ್ದರು.

    ಬೆಂಗಳೂರಿನಲ್ಲಿ ಏರ್ ಶೋ ಅಭ್ಯಾಸದ ವೇಳೆ ಎರಡು ಸೂರ್ಯಕಿರಣ ಪತನಗೊಂಡಿತ್ತು. ಈ ವೇಳೆ ಪ್ಯಾರಾಚೂಟ್‍ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪೈಲೆಟ್‍ನನ್ನು ಸ್ಥಳೀಯರು ಅವರನ್ನು ಸಹಾಯ ಮಾಡಿದ್ದರು.

    ಈ ವಿಡಿಯೋವನ್ನು ಪಾಕಿಸ್ತಾನದವರು ಬಳಸಿಕೊಂಡು, “ನಮ್ಮ ಪಾಕಿಸ್ತಾನ ಸೇನೆ ಭಾರತದ ಪೈಲಟ್ ನನ್ನು ಸೆರೆ ಹಿಡಿದು ಈ ರೀತಿ ನೋಡಿಕೊಂಡಿದ್ದಾರೆ. ನಮ್ಮ ಪಾಕಿಸ್ತಾನದ ಸೈನ್ಯಕ್ಕೆ ಸೆಲ್ಯೂಟ್” ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/ShiiteSMTeam/status/1100660609379643392

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜಮ್ಮು ಕಾಶ್ಮೀರದಲ್ಲಿ ಮಿಗ್ ವಿಮಾನ ಪತನ – ಇತ್ತ ಪಾಕಿಸ್ತಾನದ ಯುದ್ಧ ವಿಮಾನ ಭಾರತಕ್ಕೆ ಪ್ರವೇಶ?

    ಜಮ್ಮು ಕಾಶ್ಮೀರದಲ್ಲಿ ಮಿಗ್ ವಿಮಾನ ಪತನ – ಇತ್ತ ಪಾಕಿಸ್ತಾನದ ಯುದ್ಧ ವಿಮಾನ ಭಾರತಕ್ಕೆ ಪ್ರವೇಶ?

    ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಹುತಾತ್ಮರಾಗಿದ್ದಾರೆ. ಬುದ್ಗಾಮ್‍ನ ನಸಲಾಪುರದಲ್ಲಿ ಗಸ್ತು ತಿರುಗುವ ವೇಳೆ ಮಿಗ್ ವಿಮಾನ ಪತನಗೊಂಡಿದೆ.

    ಜಮ್ಮು- ಕಾಶ್ಮೀರದ ನೌಶೇರಾ ವಲಯದಲ್ಲಿ ಪಾಕಿಸ್ತಾನದ ಮೂರು ಯುದ್ಧ ವಿಮಾನ ಗಡಿ ಉಲ್ಲಂಘನೆ ಮಾಡಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ದಾಳಿ ನಡೆಸುವ ಉದ್ಧೇಶದಿಂದ ಭಾರತಕ್ಕೆ ಪ್ರವೇಶಿಸಿದೆ. ಪಾಕಿಸ್ತಾನದ ಯುದ್ಧ ವಿಮಾನಗಳು ಪೂಂಚ್ ಹಾಗೂ ರಜೌರಿಯಲ್ಲಿ ಬಾಂಬ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.

    ಪಾಕಿಸ್ತಾನ ಯುದ್ಧ ವಿಮಾನ ಪೂಂಚ್ ಹಾಗೂ ರಜೌರಿಯಲ್ಲಿ ಬಾಂಬ್ ದಾಳಿ ಮಾಡಿದ್ದು, ಯಾವ ಪ್ರದೇಶ ಹಾನಿಯಾಗಿದೆ ಎಂಬುದು ಅಧಿಕೃತವಾಗಿ ತಿಳಿದು ಬರಲಿದೆ. ಪಾಕಿಸ್ತಾನ ಬಾಂಬ್ ದಾಳಿ ಮಾಡಿದ ಬಳಿಕ ಭಾರತ ಪ್ರತಿ ದಾಳಿ ನಡೆಸಿದೆ. ಭಾರತ ಪ್ರತಿ ದಾಳಿ ನಡೆಸುತ್ತಿದ್ದಂತೆ ಪಾಕಿಸ್ತಾನದ ಯುದ್ಧ ವಿಮಾನ ಅಲ್ಲಿಂದ ಕಾಲ್ತಿತಿದೆ ಎಂದು ವರದಿಯಾಗಿದೆ.

    2018ರ ಅಕ್ಟೋಬರ್ ನಲ್ಲಿ ಮಿಗ್ ಫೈಟರ್ ವಿಮಾನವೊಂದು ರಾಜಸ್ಥಾನದ ಜೋಧಪುರದ ಬಾಂದ್ ಸಮೀಪದ ದೆವ್ಲಿಯಾ ಗ್ರಾಮದ ಬಳಿ ಪತನಗೊಂಡಿತ್ತು. ಪೈಲಟ್ ವಿಮಾನದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ: ಕಾಶ್ಮೀರಿ ಉಗ್ರರಿಗೆ ಸೇನೆಯಿಂದ ಖಡಕ್ ವಾರ್ನಿಂಗ್

    ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ: ಕಾಶ್ಮೀರಿ ಉಗ್ರರಿಗೆ ಸೇನೆಯಿಂದ ಖಡಕ್ ವಾರ್ನಿಂಗ್

    ಶ್ರೀನಗರ: ಶರಣಾಗಿ ಇಲ್ಲವೇ ಸಾಯಲು ಸಿದ್ಧರಾಗಿರಿ ಎಂದು ಹೇಳುವ ಮೂಲಕ ಕಾಶ್ಮೀರದ ಉಗ್ರರಿಗೆ ಭಾರತೀಯ ಸೇನೆ ಖಡಕ್ ಸಂದೇಶವನ್ನು ರವಾನಿಸಿದೆ.

    ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಸೇರಿ ಯಾರೇ ಬಂದೂಕು ಹಿಡಿದಿದ್ದರೂ ಅವರನ್ನು ಹತ್ಯೆ ಮಾಡಲಾವುದು ಎಂದು ಸೇನೆಯ ಹಿರಿಯ ಅಧಿಕಾರಿಗಳು ಉಗ್ರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಪುಲ್ವಾಮಾ ದಾಳಿಯ ಸಂಚುಕೋರನ ಹತ್ಯೆಯಾದ ಬಳಿಕ ಸೇನಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಯಾರೆಲ್ಲ ಸ್ಥಳೀಯ ಉಗ್ರರ ಜೊತೆ ಸೇರಿದ್ದಾರೋ ಅವರೆಲ್ಲರೂ ಶರಣಾಗಬೇಕು. ತಾಯಂದಿರು ಮಕ್ಕಳನ್ನು ಶರಣಾಗುವಂತೆ ಮಾಡಬೇಕು ಎಂದು ಸೇನಾ ಅಧಿಕಾರಿಗಳು ಈ ವೇಳೆ ಮನವಿ ಮಾಡಿದರು.

    ಪಾಕಿಸ್ತಾನ ಮುಂದಾಳತ್ವದ ಭಯೋತ್ಪಾದಕ ಸಂಘಟನೆಗಳನ್ನು ಕಾಶ್ಮೀರದ ಕಣಿವೆಯಿಂದ ಸಂಪೂರ್ಣವಾಗಿ ನಾವು ನಿರ್ಮೂಲನೆ ಮಾಡುತ್ತೇವೆ. ದೇಶವೂ ಗನ್ ಹಿಡಿದ ಕಾಶ್ಮೀರಿ ಯುವಕರಿಗೆ ಶರಣಾಗುವ ಅವಕಾಶವನ್ನು ನೀಡಿದೆ. ಈ ಮೂಲಕ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಅವಕಾಶ ನೀಡಲಾಗಿದೆ ಎಂದು ಸೇನಾ ಲೆಫ್ಟಿನೆಂಟ್ ಕನ್ವಾಲ್ ಜೀತ್ ಸಿಂಗ್ ಧಿಲ್ಲೊನ್ ಹೇಳಿದರು.

    ಕಾಶ್ಮೀರಿ ಸಮಾಜದಲ್ಲಿ ಮಕ್ಕಳ ತಾಯಂದಿರು ವಿಶೇಷ ಪಾತ್ರವಹಿಸುತ್ತಾರೆ. ಹೀಗಾಗಿ ಮಾಧ್ಯಮಗಳ ಮೂಲಕ ಅವರಲ್ಲಿ ಮನವಿ ಮಾಡುತ್ತಿದ್ದೇವೆ. ಉಗ್ರರ ಜೊತೆ ಕೈ ಜೋಡಿಸಿರುವ ಮಕ್ಕಳನ್ನು ಶರಣಾಗುವಂತೆ ಮನವೊಲಿಸಿ ಮುಖ್ಯವಾಹಿನಿಗೆ ಮರಳುವಬಂತೆ ಮಾಡಬೇಕು. ಒಂದು ವೇಳೆ ಶರಣಾಗದೇ ಗನ್ ಹಿಡಿದರೆ ಅವರನ್ನು ಸೇನೆ ನಿರ್ಮೂಲನೆ ಮಾಡುತ್ತದೆ ಎಂದರು.

    ಸೋಮವಾರ ನಡೆದ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ನಾಲ್ವರು ಯೋಧರು ಸೇರಿದಂತೆ ಒಬ್ಬ ಪೊಲೀಸ್ ಪೇದೆ ಹುತಾತ್ಮರಾಗಿದ್ದರು. ಕಾರ್ಯಾಚರಣೆಯಲ್ಲಿ ಜೈಶ್ ಉಗ್ರ ಸಂಘಟನೆಯ ಕಮಾಂಡರ್ ಕಮ್ರಾನ್ ಸೇರಿದಂತೆ ಮೂವರನ್ನ ಸೇನಾಪಡೆ ಹೊಡೆದುರುಳಿಸಿತ್ತು. ಉಗ್ರ ಕಮ್ರಾನ್ ಪುಲ್ವಾಮಾ ದಾಳಿಯ ಹಿಂದಿದ್ದ ಪ್ರಮುಖ ಸಂಚುಕೋರ ಎಂದು ಸೇನೆ ಮಾಹಿತಿ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!

    ಯೋಧರ ಬಲಿಗೆ ಕಾರಣನಾದ ಮಾಸ್ಟರ್ ಮೈಂಡ್ ಫಿನಿಶ್!

    – ಸೇನಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ

    ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿ ಬಳಿಕ ಸೈನಿಕರು ಭರ್ಜರಿಯಾಗಿ ಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ರಕ್ತ ರಕ್ಕಸ ಅಬ್ದುಲ್ ರಶೀದ್ ಘಾಸಿಯನ್ನು ಯೋಧರು ಇಂದು ಹತ್ಯೆ ಮಾಡಿದ್ದಾರೆ. ಅಬ್ದುಲ್ ರಶೀದ್ ಜೊತೆ ಜೈಷ್ ಸಂಘಟನೆಯ ಮತ್ತೋರ್ವ ಕಮಾಂಡರ್ ಕರಮ್‍ ನನ್ನು ಸಹ ಯೋಧರು ಹತ್ಯೆ ಮಾಡಿದ್ದಾರೆ. ಸುದೀರ್ಘ 9 ಗಂಟೆಗಳ ಗುಂಡಿನ ಚಕಮಕಿ ನಂತರ ಈ ಕಾರ್ಯಚರಣೆ ಯಶಸ್ವಿಯಾಗಿ ನಡೆದಿದೆ.

    ಖಚಿತ ಮಾಹಿತಿ ಮೇರೆಗೆ ಪುಲ್ವಾಮಾ ಜಿಲ್ಲೆಯ ಪಿಂಗ್ಲಾನ್ ಪ್ರದೇಶದಲ್ಲಿ ಯೋಧರ ಹಾಗೂ ಉಗ್ರರ ನಡುವೆ ಅಹೋರಾತ್ರಿ ಭೀಕರ ಕಾಳಗ ನಡೆಯುತ್ತಿತ್ತು. 40 ಯೋಧರ ಬಲಿ ಪಡೆದ ಆದಿಲ್ ದಾರ್ ಗೆ ನೆರವು ನೀಡಿದ್ದ ಉಗ್ರರ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸೈನಿಕರು ಆ ಪ್ರದೇಶವನ್ನು ಸುತ್ತುವರಿದು ದಾಳಿ ನಡೆಸಿದಾಗ ಉಗ್ರರು ಪ್ರತಿ ದಾಳಿ ನಡೆಸಿದ್ದರು. ಈ ವೇಳೆ ಓರ್ವ ನಾಗರಿಕ ಸಹಿತ ನಾಲ್ವರು ಯೋಧರು ಇಂದು ಕೂಡ ಹುತಾತ್ಮರಾಗಿದ್ದಾರೆ.

    ಬಳಿಕ ಭರ್ಜರಿ ಕಾರ್ಯಾಚರಣೆ ನಡೆಸಿದ ಯೋಧರು, 40 ಯೋಧರ ಬಲಿ ಪಡೆದ ಮಾಸ್ಟರ್ ಮೈಂಡ್ ಆದ ಅಬ್ದುಲ್ ರಶೀದ್ ಹಾಗೂ ಕರಮ್‍ನನ್ನು ಇದೀಗ ಹತ್ಯೆ ಮಾಡಿದ್ದಾರೆ. ಇನ್ನೂ 6 ಜನ ಉಗ್ರರು ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಯೋಧರು ಪಿಂಗ್ಲಾನ್‍ನ ಪ್ರತಿ ಮನೆಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಭಾರತೀಯ ಸೇನೆ ಪ್ರತಿಕಾರ ತೀರಿಸಿಕೊಂಡಿದ್ದು ಹೇಗೆ?
    ಆತ್ಮಾಹುತಿ ದಾಳಿ ನಡೆದ ಆವಂತಿಪೂರದಿಂದ ಕೇವಲ 10 ಕಿ.ಮೀ ದೂರದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಭಾನುವಾರ ರಾತ್ರಿ 8.30ರ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಕಟ್ಟಡವೊಂದರಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಸೇನೆಗೆ ಸಿಕ್ಕಿದೆ. ಬಳಿಕ ಮಧ್ಯರಾತ್ರಿ ಹೊತ್ತಿಗೆ ಪಿಂಗ್ಲಾನ್ ಪ್ರಾಂತ್ಯದ ಆ ಕಟ್ಟಡವನ್ನು ಸೇನೆ ಸುತ್ತುವರಿದಿತ್ತು. 55 ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್, ಪೊಲೀಸ್ ಮತ್ತು ಸಿಆರ್ ಪಿಎಫ್ ಒಳಗೊಂಡು ಭಾರತೀಯ ಸೇನೆ ಈ ಕಾರ್ಯಚರಣೆ ನಡೆಸಿ ಮೊದಲು ಉಗ್ರರಿಗೆ ಶರಣಾಗಲು ಸೂಚಿಸಿದ್ದರು. ಆದರೆ ಉಗ್ರರು ಶರಣಾಗುವ ಬದಲು ಯೋಧರಿಗೆ ಗುಂಡಿನ ದಾಳಿ ನಡೆಸಿದ್ದರು. ಇಂದು ಬೆಳಗ್ಗಿನ ಜಾವದವರೆಗೂ ನಿರಂತರವಾಗಿ ಭೀಕರ ಗುಂಡಿನ ಚಕಮಕಿ ನಡೆದಿದೆ. ಆಗ ಗುಂಡಿನ ಚಕಮಕಿ ವೇಳೆ ಓರ್ವ ಮೇಜರ್ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಆದರೂ ಎದೆಗುಂದದೆ ಯೋಧರು ಕಾರ್ಯಾಚರಣೆ ಮುಂದುವರಿಸಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿದ್ದ ಇಡೀ ಕಟ್ಟಡವನ್ನೇ ಉಡಾಯಿಸಿದ್ದಾರೆ.

    https://www.youtube.com/watch?v=N6ra83ZHCWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv