Tag: Srinagar

  • ಜಮ್ಮು-ಕಾಶ್ಮೀರದಲ್ಲಿ ಎಲ್‍ಇಟಿ ಕಮಾಂಡರ್, ಇಬ್ಬರು ಉಗ್ರರ ಎನ್‍ಕೌಂಟರ್

    ಜಮ್ಮು-ಕಾಶ್ಮೀರದಲ್ಲಿ ಎಲ್‍ಇಟಿ ಕಮಾಂಡರ್, ಇಬ್ಬರು ಉಗ್ರರ ಎನ್‍ಕೌಂಟರ್

    ಶ್ರೀನಗರ: ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ಮತ್ತು ಲಷ್ಕತ್-ಎ-ತೈಬಾ(ಎಲ್‍ಇಟಿ)ಕಮಾಂಡರ್ ನದೀಮ್ ಅಬ್ರಾರ್ ನಗರದ ಪರಿಂಪೋರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮಂಗಳವಾರ ಬೆಳಗ್ಗೆ ಸಾವನ್ನಪಿದ್ದಾರೆ.

    ಭದ್ರತಾ ಪಡೆಗಳ ಹಾಗೂ ಹಲವಾರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದ ಅಬ್ರಾರ್‍ರನ್ನು ಪೊಲೀಸರು ನಿನ್ನೆ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದರು. ವಿಚಾರಣೆಯಲ್ಲಿ ಅಬ್ರಾರ್ ತನ್ನ ಮನೆಯಲ್ಲಿ ಎಕೆ47 ರೈಫಲ್ ನನ್ನು ಮನೆಯಲ್ಲಿ ಇಟ್ಟುಕೊಂಡಿರುವ ವಿಚಾರ ಬಹಿರಂಗ ಪಡಿಸಿದ್ದಾನೆ.

    ಪರಿಶೀಲನೆ ನಡೆಸಿ ಎಕೆ47 ರೈಫಲ್‍ನನ್ನು ವಶಪಡಿಸಿಕೊಳ್ಳಲು ಪೊಲೀಸರು ಹೋದಾಗ, ಮನೆಯಲ್ಲಿ ಅಡವಿಕೊಂಡಿದ್ದ ಆರೋಪಿಯ ಸಹಚರರಿಬ್ಬರು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮನೆಯಲ್ಲಿದ್ದ ಭಯೋತ್ಪಾದಕರು ಮತ್ತು ಅಬ್ರಾರ್‍ರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ನಂತರ ಎಕೆ 47 ರೈಫಲ್‍ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.

    ಘಟನೆ ವೇಳೆ ಮೂವರು ಸಿಆರ್‍ಎಫ್ ಸಿಬ್ಬಂದಿ- ಸಹಾಯಕ ಕಮಾಂಡೆಂಟ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಮತ್ತು ಕಾನ್ಸ್‍ಟೇಬಲ್ ಕೂಡ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಬೇಡಿಕೆ ಭಾರೀ ಇಳಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟು ಬೇಕಿದೆ?

  • SPO ಮನೆಗೆ ನುಗ್ಗಿ ಉಗ್ರರ ಗುಂಡಿನ ದಾಳಿ – ಅಧಿಕಾರಿ, ಪತ್ನಿ, ಮಗಳು ಸಾವು

    SPO ಮನೆಗೆ ನುಗ್ಗಿ ಉಗ್ರರ ಗುಂಡಿನ ದಾಳಿ – ಅಧಿಕಾರಿ, ಪತ್ನಿ, ಮಗಳು ಸಾವು

    ಶ್ರೀನಗರ/ಪುಲ್ವಾಮಾ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಸ್ಪೆಷಲ್ ಪೊಲೀಸ್ ಆಫಿಸರ್ (SPO) ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಎಸ್‍ಪಿಓ ಫಯಾಜ್ ಅಹಮದ್ (41) ಮತ್ತು ಅವರ ಪತ್ನಿ, ಮಗಳು (23) ಸಾವನ್ನಪ್ಪಿದ್ದಾರೆ. ಸದ್ಯ ಇಲಾಖೆಯಲ್ಲಿ ನಾಕಾಬಂದಿ ಹಾಕಲಾಗಿದ್ದು, ಸರ್ಚಿಂಗ್ ಆಪರೇಷನ್ ಆರಂಭಿಸಲಾಗಿದೆ.

    ಭಾನುವಾರ ರಾತ್ರಿ ಸುಮಾರು 11 ಗಂಟೆಗೆ ಶಸ್ತ್ರಸಜ್ಜಿತ ಉಗ್ರರು ಫಯಾಜ್ ಅಹಮದ್ ಮನೆಯೊಳಗೆ ನುಗ್ಗಿದ್ದಾರೆ. ಫಯಾಜ್ ಮತ್ತು ಅವರ ಕುಟುಂಬದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಫಯಾಜ್ ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಪತ್ನಿ ರಾಜಾ ಬೇಗಂ ಹಾಗೂ ಮಗಳು ರಫಿಯಾ ಅನಂತನಾಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮಂಗಳವಾರ ಶ್ರೀನಗರದಲ್ಲಿ ಸಿಐಡಿ ಇನ್‍ಸ್ಪೆಕ್ಟರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನೌಗಾಮ್ ಇಲಾಖೆಯಲ್ಲಿ ಈ ಘಟನೆ ನಡೆದಿತ್ತು. ಶನಿವಾರ ಬರ್ಬರ್ ಶಾ ಇಲಾಖೆಯ ಪೊಲೀಸ್ ಮತ್ತು ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಜಾಯಿಂಟ್ ಪಾರ್ಟಿ ಮೇಲೆ ಉಗ್ರುರ ಗ್ರೆನೆಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು.

  • ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಗುಲಾಂ ನಬಿ ಆಜಾದ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು

    ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿರುದ್ಧ ಜಮ್ಮು ಕಾಶ್ಮೀರದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

    ಆಜಾದ್, ಗುಜ್ಜರ್ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಹೆಮ್ಮೆ ಎಂದು ಗುಣಗಾನ ಮಾಡಿದ್ದರು. ಈ ಮಾತು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಆಜಾದ್ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಆಜಾದ್ ಅವರನ್ನು ಕಾಂಗ್ರೆಸ್ ಪಕ್ಷ ಬಹಳ ಗೌರವದಿಂದ ನಡೆಸಿಕೊಂಡು ಬಂದಿತ್ತು. ಆದರೆ ಆಜಾದ್ ಮಾತ್ರ ಕಾಂಗ್ರೆಸ್ ಪರ ನಿಲ್ಲದೆ ಬೆಜೆಪಿಯ ಸ್ನೇಹಕ್ಕೆ ಹತ್ತಿರವಾಗಿ ಮೋದಿ ಅವರನ್ನು ಹೊಗಳಿರುವುದು ಬೇಸರ ತಂದಿದೆ. ಕಾಶ್ಮೀರದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಮಯದಲ್ಲೂ ಆಜಾದ್ ಇಲ್ಲಿ ಬಂದು ಕಾಂಗ್ರೆಸ್ ಪರ ಪ್ರಚಾರ ಮಾಡಿರಲಿಲ್ಲ. ಆದರೆ ಇದೀಗ ಇಲ್ಲಿಗೆ ಬಂದು ಮೋದಿ ಅವರನ್ನು ಹೊಗಲಿದ್ದಾರೆ ಎಂದು ಪ್ರತಿಭಟನಾ ನಿರತ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

    ಈ ಹಿಂದೆ ರಾಜ್ಯಸಭೆಯಿಂದ ನಿವೃತ್ತಿಯಾದ ಆಜಾದ್ ಅವರ ಕೆಲಸವನ್ನು ಶ್ಲಾಘಿಸಿ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದರು. ಆ ಬಳಿಕ ಆಜಾದ್ ಮೋದಿಯನ್ನು ನೋಡಿ ದೇಶದ ಜನರು ಕಲಿಯಲು ಸಾಕಷ್ಟಿದೆ. ಪ್ರಧಾನಿಯಾಗಿದ್ದರು ತಮ್ಮ ಹಿಂದಿನ ದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಕಾಯಕವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಹಾಗಾಗಿ ಮೋದಿ ಅವರ ಗುಣ ನನಗೆ ತುಂಬಾ ಹಿಡಿಸಿದೆ ಎಂದು ಹೊಗಳಿದ್ದರು.

  • ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

    ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಭಾರತ ದೇಶದ ಹೆಮ್ಮೆ. ಅವರು ತನ್ನ ಹಿಂದಿನ ದಿನಗಳ ಕುರಿತು ಮುಚ್ಚಿಡದೇ ಎಲ್ಲವನ್ನು ಹೇಳಿಕೊಂಡಿದ್ದಾರೆ ಎನ್ನುವ ಮೂಲಕ ಜಮ್ಮು ಕಾಶ್ಮೀರದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿದ್ದಾರೆ.

    ಗುಜ್ಜರ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆಜಾದ್, ನಾನು ನಮ್ಮ ದೇಶದ ಹಲವು ನಾಯಕರ ಬಗ್ಗೆ ಹೆಮ್ಮೆ ಪಡುತ್ತೇನೆ. ಅದರಲ್ಲೂ ನನ್ನಂತೆ ಗ್ರಾಮೀಣ ಪ್ರದೇಶಗಳಿಂದ ಬಂದು ರಾಜಕೀಯದಲ್ಲಿರುವವರು ಹಲವು ನಾಯಕರಿದ್ದಾರೆ. ನಮ್ಮ ದೇಶದ ಪ್ರಧಾನಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ ದೇಶದ ಜನರು ಪ್ರಧಾನಿಯನ್ನು ನೋಡಿ ಹಲವು ವಿಷಯಗಳನ್ನು ಕಲಿಯಬೇಕಿದೆ. ಅವರು ಪ್ರಧಾನಿಯಾಗಿದ್ದರೂ ತಮ್ಮ ಹಿಂದಿನದಿನಗಳಲ್ಲಿ ಚಹಾ ಮಾರಾಟ ಮಾಡುತ್ತಿದ್ದ ಬಗ್ಗೆ ಹೆಮ್ಮೆಯಿಂದ ನಾನು ಚಾಯ್ ವಾಲಾ ಎಂದುಕೊಂಡಿದ್ದಾರೆ. ಮೋದಿ ತನ್ನ ಹಿಂದಿನ ಕಾಯಕವನ್ನು ಮುಚ್ಚುಮರೆಯಿಲ್ಲದೆ ಹೇಳಿಕೊಂಡಿರುವುವು ಅವರ ಒಳ್ಳೆಯ ಗುಣ ಎಂದಿದ್ದಾರೆ.

    ಕೊರೊನಾ ಮತ್ತು ಅರ್ಟಿಕಲ್ 370 ರಿಂದ ಜಮ್ಮು ಕಾಶ್ಮೀರ ಆರ್ಥಿಕವಾಗಿ ಕುಸಿದಿದೆ. ಇದರಿಂದ ಜಮ್ಮು ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಸಹಕರಿಸಬೇಕಾಗಿದೆ. ಹಾಗೂ ಹೆಚ್ಚಿನ ಅನುದಾನವನ್ನು ನೀಡಿ ಕೈಗಾರಿಕೆಗಳನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.

    ಕೆಲದಿನಗಳ ಹಿಂದೆ ರಾಜ್ಯಸಭೆಯಿಂದ ನಿವೃತ್ತಿಯಾದ ಆಜಾದ್ ಅವರ ಕೆಲಸವನ್ನು ಶ್ಲಾಘಿಸಿ ಪ್ರಧಾನಿ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ್ದರು.

    ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊಂದಿರುವ 23 ಸದಸ್ಯರ ಗುಂಪಿನಲ್ಲಿರುವ ಆಜಾದ್ ಈಗಾಗಲೇ ಪಕ್ಷವನ್ನು ಆರಂಭದಿಂದ ಸಂಘಟಿಸಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿ ಹೈಕಮಾಂಡ್ ನಾಯಕರೇ ಹುಬ್ಬೇರುವಂತೆ ಮಾಡಿದ್ದಾರೆ.

  • 11 ತಿಂಗಳ ನಂತರ ಶ್ರೀನಗರದಲ್ಲಿ ರೈಲ್ವೇ ಆರಂಭ – ಸೇತುವೆ ಬಳಿ ಪತ್ತೆಯಾಯ್ತು ಐಇಡಿ

    11 ತಿಂಗಳ ನಂತರ ಶ್ರೀನಗರದಲ್ಲಿ ರೈಲ್ವೇ ಆರಂಭ – ಸೇತುವೆ ಬಳಿ ಪತ್ತೆಯಾಯ್ತು ಐಇಡಿ

    ಶ್ರೀನಗರ: ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ರೈಲ್ವೇ ಸೇವೆ ಶ್ರೀನಗರದಲ್ಲಿ 11 ತಿಂಗಳ ನಂತರ ಪುನರಾರಂಭಗೊಂಡಿದೆ. ಇತ್ತ ಶ್ರೀನಗರದ ರೈಲ್ವೇ ನಿಲ್ದಾಣದ ಬಳಿಯಲ್ಲಿ ಸುಧಾರಿತ ಐಇಡಿ ಸ್ಫೋಟಕ ಸಿಕ್ಕಿದೆ. ಶ್ರೀನಗರ- ಬಾರಾಮುಲ್ಲಾ ಹೆದ್ದಾರಿಯ ಸೇತುವೆ ಬಳಿ ಐಇಡಿ ಪತ್ತೆಯಾಗಿದೆ.

    ಐಇಡಿ ಲಭ್ಯವಾಗುತ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಭದ್ರತಾ ಸಿಬ್ಬಂದಿ ಸುತ್ತಲಿನ ಪ್ರದೇಶದಲ್ಲಿ ಸರ್ಚಿಂಗ್ ಅಪರೇಷನ್ ಆರಂಭಿಸಿದ್ದಾರೆ. ಬಿನಿಹಾಲ್-ಬಾರಮುಲ್ಲಾ ನಡುವೆ ಒಟ್ಟು 17 ರೈಲ್ವೇ ನಿಲ್ದಾಣಗಳು ಬರಲಿವೆ. ಫೆಬ್ರವರಿ 22ರಿಂದ ಬನಿಹಾಲ್-ಬಾರಮುಲ್ಲಾ ನಡುವಿನ ರೈಲ್ವೇ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದರು.

    ಕೊರೊನಾ ಹಿನ್ನೆಲೆ 2020 ಮಾರ್ಚ್ 19ರಿಂದ ಕಾಶ್ಮೀರದ ಘಟ್ಟ ಪ್ರದೇಶದಲ್ಲಿನ ರೈಲ್ವೆ ಸಂಚಾರವನ್ನ ಸ್ಥಗಿತಗೊಳಿಸಲಾಗಿತ್ತು. ಉದಮಪುರ-ಶ್ರೀನಗರ-ಬಾರಾಮುಲ್ಲಾ ನಡುವಿನ ರೈಲ್ವೇ ಲಿಂಕ್ (ಯುಎಸ್‍ಬಿಆರ್ ಎಲ್) ಆರಂಭಗೊಳ್ಳಲಿದೆ. ಕಾಶ್ಮೀರ ದೇಶದ ವಿವಿಧ ನಗರಗಳೊಂದಿಗೆ ಸಂಪರ್ಕ ಹೊಂದಲಿದ್ದು, ಮುಂದಿನ ವರ್ಷದ ಅಂತ್ಯದಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದರು.

    ಪೊಲೀಸರ ಮೇಲೆ ಫೈರಿಂಗ್: ಶುಕ್ರವಾರ ಉಗ್ರರು ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಫೈರಿಂಗ್ ವೇಳೆ ಗಾಯಗೊಂಡಿದ್ದ ಇಬ್ಬರು ಪೊಲೀಸರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಉಗ್ರರು ಎಕೆ-47 ಬಳಸಿ ಗುಂಡಿನ ದಾಳಿ ನಡೆಸಿರೋದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

  • ಭಯೋತ್ಪಾದಕರ ದಾಳಿಗೆ ಇಬ್ಬರು ಪೊಲೀಸರು ಬಲಿ

    ಭಯೋತ್ಪಾದಕರ ದಾಳಿಗೆ ಇಬ್ಬರು ಪೊಲೀಸರು ಬಲಿ

    ಶ್ರೀನಗರ: ಭಯೋತ್ಪಾದಕರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಶುಕ್ರವಾರ ಕಾಶ್ಮೀರದ ಶ್ರೀನಗರ ಜಿಲ್ಲೆಯ ಬಾಗಟ್ ಬರ್ಜುಲ್ಲಾದಲ್ಲಿ ನಡೆದಿದೆ. ಹೆಚ್ಚಿನ ಸುರಕ್ಷತೆ ಇರುವ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಬಾಗಾಟ್ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಮೃತಪಟ್ಟಿದ್ದು, ಮತ್ತೋರ್ವ ಪೊಲೀಸ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಭಯೋತ್ಪಾದಕರು ಬಹಳ ಸಮೀಪದಿಂದ ಗುಂಡು ಹಾರಿಸಿದ್ದರಿಂದ ಪೊಲೀಸ್ ಸಿಬ್ಬಂದಿ ಸಾರ್ಜೆಂಟ್ ಸಿ.ಟಿ ಮೊಹಮ್ಮದ್ ಯೂಸೂಫ್ ಮತ್ತು ಸಿಟಿ ಸುಹೇಲ್ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಾಕಾರಿಯಾಗದೆ ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ.

    ಸದ್ಯ ಆರೋಪಿಗಳನ್ನು ಪತ್ತೆ ಹಚ್ಚಲು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿರುವುದಾಗಿ ಪೊಲಿಸರು ತಿಳಿಸಿದ್ದಾರೆ. ಈ ಕುರಿರು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ಇಂದು ಶ್ರೀನಗರದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉಗ್ರಗಾಮಿಗಳ ಈ ಕೃತ್ಯವನ್ನು ನಾನು ಖಂಡಿಸುತ್ತೇನೆ ಮತ್ತು ಈ ಧೈರ್ಯಶಾಲಿಗಳ ಕುಟುಂಬಗಳಿಗೆ ಸಂತಾಪ ಸೂಚಿಸುವುದಾಗಿ ತಿಳಿಸಿದ್ದಾರೆ.

  • 31 ವರ್ಷಗಳ ನಂತರ ಶ್ರೀನಗರದ ದೇವಾಲಯ ಓಪನ್

    31 ವರ್ಷಗಳ ನಂತರ ಶ್ರೀನಗರದ ದೇವಾಲಯ ಓಪನ್

    ಶ್ರೀನಗರ: ಉಗ್ರವಾದದಿಂದಾಗಿ ಮುಚ್ಚಿದ ಶೀತಲ್ ನಾಥ್ ದೇವಾಲಯವಯವನ್ನು 31 ವರ್ಷಗಳ ನಂತರ ತೆರೆಯಲಾಗಿದೆ.

    ಬಸಂತ ಪಂಚಮಿಯ ಶುಭ ಸಂದರ್ಭದಲ್ಲಿ ಶೀತಲ್ ನಾಥ್ ದೇವಾಲಯವನ್ನು ತೆರೆಯಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ದೇವಾಲಯದ ಆಡಳಿತಮಂಡಳಿ ಸದಸ್ಯರು ತಿಳಿಸಿದ್ದಾರೆ.

    ಶ್ರೀನಗರದ ಹಬ್ಬಾ ಕಡಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶೀತಲ್ ನಾಥ್ ದೇವಾಲಯವನ್ನು ಉಗ್ರವಾದದ ಹಿನ್ನೆಲೆಯಲ್ಲಿ ಕಳೆದ 31 ವರ್ಷಗಳಿಂದ ಮುಚ್ಚಲಾಗಿತ್ತು. ದೇವಾಲಯವನ್ನು ಮುಚ್ಚಿದ ಬಳಿಕ ಇಲ್ಲಿನ ನೆಲೆಸಿದ್ದ ಹಿಂದೂ ಸಮುದಾಯದವರು ವಲಸೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

    ದೇವಾಲಯವನ್ನು ತೆರೆಯಲು ಸ್ಥಳೀಯ ಮುಸ್ಲಿಂ ಸಮುದಾಯದವರಿಂದ ಬೆಂಬಲ ಹಾಗೂ ಅಗತ್ಯ ಸಹಕಾರ ದೊರೆತಿದೆ. ಮುಂದಿನದಿನಗಳಲ್ಲಿ ನಿತ್ಯ ಪೂಜೆ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಸದಸ್ಯರಾದ ಸಂತೋಷ್ ರಾಜಧನ್ ತಿಳಿಸಿದ್ದಾರೆ.

  • ಅತ್ಯಂತ ಕಿರಿಯ ವಯಸ್ಸಿನಲ್ಲೇ ಪೈಲಟ್ – ಕಾಶ್ಮೀರಿ ಯುವತಿಯಿಂದ ಸಾಧನೆ

    ಅತ್ಯಂತ ಕಿರಿಯ ವಯಸ್ಸಿನಲ್ಲೇ ಪೈಲಟ್ – ಕಾಶ್ಮೀರಿ ಯುವತಿಯಿಂದ ಸಾಧನೆ

    ಶ್ರೀನಗರ: ಕಾಶ್ಮೀರದ ಯುವತಿಯೊಬ್ಬರು ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕಾಶ್ಮೀರದ ಆಯೇಷಾ ಅಜೀಜ್ (25) ಭಾರತದ ಅತ್ಯಂತ ಕಿರಿಯಾ ಮಹಿಳಾ ಪೈಲಟ್ ಆಗಿರುವ ಇವರು ಬೇರೆ ಯುವತಿಯರಿಗೆ ಸ್ಫೂರ್ತಿಯಾಗಿದ್ದಾರೆ.

    ಆಯೇಷಾ 15 ವರುಷದವಳಾಗಿದ್ದಾಗ ಪೈಲಟ್ ಲೈಸೆನ್ಸ್ ಪಡೆದುಕೊಂಡಿದ್ದಾರೆ. ಈ ಮೂಲಕವಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪೈಲಟ್ ಲೈಸೆನ್ಸ್ ಪಡೆದ ಕಿರಿಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ರಷ್ಯಾದ ಸೋಜೋಲ್ ಏರ್‍ಬೇಸ್‍ನಲ್ಲಿ ಮಿಗ್-29 ಜೆಟ್ ಹಾರಾಟ ತರಬೇತಿಯನ್ನು 2012ರಲ್ಲೇ ಪಡೆದಿದ್ದಾರೆ. ವಿಮಾನ ಹಾರಾಟ ಪದವಿಯನ್ನು ಬಾಂಬೆ ಫ್ಲೈಯಿಂಗ್ ಕ್ಲಬ್‍ನಿಂದ ಪಡೆದುಕೊಂಡಿದ್ದಾರೆ.2017 ರಲ್ಲಿ ಲೈಸೆನ್ಸ್ ಪಡೆದು ಇದೀಗ ಪೈಲಟ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ.

    ಕಾಶ್ಮೀರದ ಮಹಿಳೆಯರು ಶಿಕ್ಷಣದ ವಿಚಾರದಲ್ಲಿ ಉತ್ತಮವಾದ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಅನೇಕ ಯುವತಿಯರು ಸ್ನಾತಕೋತ್ತರ ಪದವಿ, ಡಾಕ್ಟರೇಟ್ ಮಾಡುತ್ತಿದ್ದಾರೆ. ಈ ಸವಾಲನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ನನ್ನ ಸಾಧನೆಯಲ್ಲಿ ನನ್ನ ಹೆತ್ತವರ ಪಾಲಿದೆ. ನನ್ನ ಕಲಿಕೆಗೆ ಅವರು ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಆಯೇಷಾ ಅಜೀಜ್ ಹೇಳಿಕೊಂಡಿದ್ದಾರೆ.

  • ಪೊಲೀಸ್, ಯೋಧರ ಮೇಲೆ ಉಗ್ರರ ದಾಳಿ – ಇಬ್ಬರಿಗೆ ಗಾಯ

    ಪೊಲೀಸ್, ಯೋಧರ ಮೇಲೆ ಉಗ್ರರ ದಾಳಿ – ಇಬ್ಬರಿಗೆ ಗಾಯ

    ಶ್ರೀನಗರ: ಇಂದು ಶ್ರೀನಗರದಲ್ಲಿ ಪೊಲೀಸ್ ಮತ್ತು ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ದು, ಓರ್ವ ಪೊಲೀಸ್ ಮತ್ತು ಒಬ್ಬ ನಾಗರಿಕನಿಗೆ ಗಾಯವಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಶ್ರೀನರಗದ ಹವಾಲ್ ಪ್ರದೇಶದ ಸಜ್ಗರಿಪೊರಾದಲ್ಲಿ ಈ ಘಟನೆ ನಡೆದಿದೆ. ಉಗ್ರರ ದಾಳಿಯ ವೇಳೆ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೊತೆಗೆ ಭಯೋತ್ಪಾದಕರನ್ನು ಬಂಧಿಸಲು ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದರು.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸರು, ಸಜ್ಗರಿಪೊರಾದ ಹವಾಲ್‍ನಲ್ಲಿ ಉಗ್ರರು ನಿರ್ದಾಕ್ಷಿಣ್ಯವಾಗಿ ಪೊಲೀಸರು ಮತ್ತು ಯೋಧರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಫಾರೂಕ್ ಅಹ್ಮದ್ ಚೋಪನ್ ಮತ್ತು ಸ್ಥಳೀಯ ನಾಗರಿಕ ಮುನೀರ್ ಅಹ್ಮದ್ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸ್ ಮತ್ತು ಸೈನಿಕರು ಪ್ರದೇಶವನ್ನು ಸುತ್ತವರಿದಿದ್ದಾರೆ ಎಂದು ತಿಳಿಸಿದೆ.

  • ಎಲ್‍ಓಸಿ ಬಳಿ 2 ಬಾರಿ ಗುಂಡಿನ ಚಕಮಕಿ – ಮೂವರು ಯೋಧರು ಹುತಾತ್ಮ, 3 ಉಗ್ರರು ಉಡೀಸ್

    ಎಲ್‍ಓಸಿ ಬಳಿ 2 ಬಾರಿ ಗುಂಡಿನ ಚಕಮಕಿ – ಮೂವರು ಯೋಧರು ಹುತಾತ್ಮ, 3 ಉಗ್ರರು ಉಡೀಸ್

    ಶ್ರೀನಗರ: ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರು ಮತ್ತು ಭಾರತೀಯ ಯೋಧರ ನಡುವೆ ಎರಡು ಬಾರಿ ಗುಂಡಿನ ಚಕಮಕಿ ನಡೆದಿದ್ದು, ಈ ಘಟನೆಗಳಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಜೊತೆಗೆ ಯೋಧರ ಗುಂಡಿಗೆ ಮೂವರು ಉಗ್ರರು ಬಲಿಯಾಗಿದ್ದಾರೆ.

    ಕುಪ್ವಾರಾ ಜಿಲ್ಲೆಯ ಎಲ್‍ಓಸಿ ಬಳಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಆರ್ಮಿ ಆಫೀಸರ್ ಮತ್ತು ಒಬ್ಬರು ಬಿಎಸ್‍ಎಫ್ ಪೇದೆ ಸೇರಿದಂತೆ ಮೂವರು ಭಾರತೀಯ ಯೋಧರು ಸಾವನ್ನಪ್ಪಿದ್ದಾರೆ. ಜೊತೆಗೆ ಎರಡು ದಾಳಿಯಲ್ಲಿ ಮೂವರು ಉಗ್ರರನ್ನು ಯೋಧರು ಗುಂಡಿಕ್ಕಿ ಕೊಂದಿದ್ದಾರೆ.

    ಉತ್ತರ ಕಾಶ್ಮೀರದ ಮಚಿಲ್ ಸೆಕ್ಟರ್ ಬಳಿ ರಾತ್ರಿ ಒಂದು ಗಂಟೆಗೆ ಎಲ್‍ಓಸಿ ಬಳಿ ಯಾರೋ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಗಸ್ತು ತಿರುಗುತ್ತಿದ್ದ ಯೋಧರು ಸ್ಥಳಕ್ಕೆ ಹೋದಾಗ ಗುಂಡಿನ ದಾಳಿ ಆರಂಭವಾಗಿದೆ. ಎರಡು ಗಂಟೆಗಳ ಕಾಲ ಗುಂಡಿನ ದಾಳಿ ನಡೆದಿದ್ದು, ಬಿಎಸ್‍ಎಫ್ ಪೇದೆ ಸುದೀಪ್ ಸರ್ಕಾರ್ ಹುತಾತ್ಮರಾಗಿದ್ದಾರೆ. ಜೊತೆಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.

    ಈ ವೇಳೆ ಸ್ಥಳಕ್ಕೆ ಹೆಚ್ಚುವರಿ ಯೋಧರು ಬಂದಿದ್ದು, ಕಾರ್ಯಚರಣೆ ಮಾಡಿದ್ದಾರೆ. ಆದರೆ ಬೆಳಗ್ಗೆ 10 ಗಂಟೆಗೆ ಮತ್ತೆ ಭಯೋತ್ಪಾದಕರು ಗುಂಡಿನ ದಾಳಿ ಮಾಡಿದ್ದಾರೆ. ಈ ವೇಳೆ ಓರ್ವ ಆರ್ಮಿ ಆಫೀಸರ್ ಸೇರಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಏಪ್ರಿಲ್‍ನಿಂದ ಇತ್ತೀಚೆಗೆ ನಡೆದ ಎನ್‍ಕೌಂಟರಿನಲ್ಲಿ ಇದು ಬಹುದೊಡ್ಡ ಕಾರ್ಯಚರಣೆ ಎಂದು ಆರ್ಮಿ ಅಧಿಕಾರಿಗಳು ತಿಳಿಸಿದ್ದಾರೆ.