Tag: Srinagar Kitty

  • ಸಂಜು ವೆಡ್ಸ್ ಗೀತಾ 2 ಮಹೂರ್ತ ಫಿಕ್ಸ್: ರಮ್ಯಾ ತಯಾರಿ ಆಗ್ತಿರೋದು ಇದೆ ಸಿನಿಮಾಗಾ?

    ಸಂಜು ವೆಡ್ಸ್ ಗೀತಾ 2 ಮಹೂರ್ತ ಫಿಕ್ಸ್: ರಮ್ಯಾ ತಯಾರಿ ಆಗ್ತಿರೋದು ಇದೆ ಸಿನಿಮಾಗಾ?

    ಶ್ರೀನಗರ ಕಿಟ್ಟಿ (Srinagar kitty) ಹುಟ್ಟು ಹಬ್ಬದ ದಿನದಂದು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರದ ಬಗ್ಗೆ ಸಣ್ಣದೊಂದು ಸುಳಿವು ಕೊಟ್ಟಿದ್ದರು ನಿರ್ದೇಶಕ ನಾಗಶೇಖರ್ (Nagasekhar). ಕಿಟ್ಟಿ ಹುಟ್ಟು ಹಬಕ್ಕಾಗಿ ಈ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದ್ದರು ನಿರ್ದೇಶಕರು. ಈ ಪೋಸ್ಟರ್ ಕೇವಲ ಹುಟ್ಟುಹಬ್ಬಕ್ಕೆ ಮೀಸಲಾಗಿರುತ್ತದೆ ಎಂದು ಗಾಂಧಿನಗರ ಮಾತಾಡಿಕೊಂಡಿತು. ಆದರೆ, ನಾಗಶೇಖರ್ ಬೇಗ ಅಪ್ ಡೇಟ್ ನೀಡಿದ್ದಾರೆ.

    ಸಂಜು ವೆಡ್ಸ್ ಗೀತಾ 2 ಸಿನಿಮಾದ ಮುಹೂರ್ತ (Muhurta)  ದಿನಾಂಕವನ್ನು ನಾಗಶೇಖರ್ ಫಿಕ್ಸ್ ಮಾಡಿದ್ದಾರೆ. ಆಗಸ್ಟ್ 15ರಂದು ಚಿತ್ರಕ್ಕೆ ಮುಹೂರ್ತವೆಂದು ನಾಗಶೇಖರ್ ಹೇಳಿಕೊಂಡಿದ್ದಾರೆ. ಮುಹೂರ್ತದ ನಂತರ ಶೂಟಿಂಗ್ ಯಾವಾಗ ಎಂದು ಅವರು ಹೇಳಿಕೊಂಡಿಲ್ಲ. ಒಂದು ಕಡೆ ನಾಗಶೇಖರ್ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ರಮ್ಯಾ ಭರ್ಜರಿ ತಯಾರಿ ನಡೆಸಿದ್ದಾರೆ. ಇದನ್ನೂ ಓದಿ:ತೆಲುಗಿನ ಮತ್ತೊಬ್ಬ ನಟಿಯ ದಾಂಪತ್ಯದಲ್ಲಿ ಬಿರುಕು- ಪತಿ ಜೊತೆ ಸ್ವಾತಿ ರೆಡ್ಡಿ ಡಿವೋರ್ಸ್?

    ರಮ್ಯಾ (Ramya) ಈ ಸಿನಿಮಾದಲ್ಲಿ ನಟಿಸುತ್ತಾರೋ ಇಲ್ಲವೋ. ಆದರೆ, ರಮ್ಯಾ ಅವರಂತೂ ಸಖತ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ವಿದೇಶದಲ್ಲಿ ಬೀಡುಬಿಟ್ಟಿರುವ ಅವರು, ತೂಕ ಇಳಿಸಿಕೊಂಡಿದ್ದಾರೆ. ಫಿಟ್ನೆಸ್ ನತ್ತ ದೃಷ್ಟಿನೆಟ್ಟಿದ್ದಾರೆ. ಇದು ಯಾವ ಚಿತ್ರಕ್ಕಾಗಿ ಎನ್ನುವುದು ಅವರು ಹೇಳಿಕೊಂಡಿಲ್ಲ. ಸದ್ಯ ಡಾಲಿ ಜೊತೆ ರಮ್ಯಾ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಈ ಸಿನಿಮಾ ತಯಾರಿಯಾ ಗೊತ್ತಿಲ್ಲ.

    ಸಂಜು ಐ ಲವ್ ಯೂ ಎಂಬ ಡೈಲಾಗ್, ಸಂಜು-ಗೀತಾ ಲವ್ ಕಹಾನಿ 2011ರಲ್ಲಿ ಸಿನಿ ಪ್ರೇಕ್ಷಕರಿಗೆ ಕಮಾಲ್ ಮಾಡಿತ್ತು. ಮತ್ತೆ ಈ ಜೋಡಿ ಅದ್ಯಾವಾಗ ಸಂಜು ಮತ್ತು ಗೀತಾ ಒಟ್ಟಿಗೆ ಬರಲಿದ್ದಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿಯಂತೂ ಸಿಕ್ಕಿದೆ. ಮುಂದೆ ಏನೆಲ್ಲ ಬೆಳವಣಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಪ್ಪಿ ಹುಟ್ಟು ಹಬ್ಬಕ್ಕೆ ‘ಬುದ್ದಿವಂತ’ 2 ರಿಲೀಸ್

    ಉಪ್ಪಿ ಹುಟ್ಟು ಹಬ್ಬಕ್ಕೆ ‘ಬುದ್ದಿವಂತ’ 2 ರಿಲೀಸ್

    ಮಕ್, ಅಯೋಗ್ಯ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿರುವ ಟಿ.ಆರ್ ಚಂದ್ರಶೇಖರ್,  ತಮ್ಮ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಮತ್ತೊಂದು ಬಹುನಿರೀಕ್ಷಿತ ಚಿತ್ರ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ (Upendra) ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರ ‘ಬುದ್ದಿವಂತ 2’. (Buddhivanta 2) ನಿರ್ಮಾಣ ಪೂರ್ಣಗೊಂಡಿದ್ದು ಇದೀಗ ಬಿಡುಗಡೆ ಸಮಯವನ್ನು ಚಿತ್ರದ ನಿರ್ಮಾಪಕರು ಬಹಿರಂಗಗೊಳಿಸಿದ್ದಾರೆ.

    ಈ ಬಾರಿಯ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ  ಅವರ ಅಭಿಮಾನಿಗಳಿಗೆ ಉಡುಗೊರೆಯಾಗಿ  ಚಿತ್ರವನ್ನು ಬೃಹತ್ ಪ್ರಮಾಣದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಹಾಗೂ ಬುದ್ದಿವಂತ -2  ಚಿತ್ರದ ಟೀಸರ್ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟೀಸರ್ ಮೂಲಕವೇ ಚಿತ್ರದ ಬಿಡುಗಡೆಯ ದಿನಾಂಕ ಕೂಡ ಘೋಷಣೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಇದನ್ನೂ ಓದಿ:ಕೋಟಿ ಕೊಟ್ರೂ ಸಿನಿಮಾದಲ್ಲಿ ಕಿಸ್‌ ಮಾಡಲ್ಲ- ಪ್ರಿಯಾಮಣಿ ಖಡಕ್‌ ಉತ್ತರ

    ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಯರಾಮ್ ಮಾಧವನ್ ಬುದ್ಧಿವಂತ 2 ಚಿತ್ರದ ನಿರ್ದೇಶಕರು. ಗುರುಕಿರಣ್ ಸಂಗೀತ ನೀಡಿದ್ದಾರೆ.  ಎಸ್ ನವೀನ್ ಕುಮಾರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಜಾಗೂ ರವಿವರ್ಮ, ವಿಕ್ರಮ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    ಉಪೇಂದ್ರ ಅವರಿಗೆ ನಾಯಕಿಯರಾಗಿ ಸೋನಾಲ್ (Sonal) ಮೊಂಟೆರೊ ಹಾಗೂ  ಮೇಘನಾ ರಾಜ್ (Meghana Raj)  ನಟಿಸಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty) ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಉಪೇಂದ್ರ ಹೊಸ ಬಗೆಯ ಪಾತ್ರ ಮಾಡಿದ್ದು, ಆ ಪಾತ್ರವೇ ಸಿನಿಮಾದ ವಿಶೇಷತೆಗಳಲ್ಲಿ ಒಂದು ಅಂತಾರೆ ನಿರ್ದೇಶಕರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆದಿತ್ಯ ಹುಟ್ಟುಹಬ್ಬಕ್ಕೆ ‘ಟೆರರ್’ ಚಿತ್ರದ ಟೀಸರ್ ರಿಲೀಸ್

    ಆದಿತ್ಯ ಹುಟ್ಟುಹಬ್ಬಕ್ಕೆ ‘ಟೆರರ್’ ಚಿತ್ರದ ಟೀಸರ್ ರಿಲೀಸ್

    ನಟ ಆದಿತ್ಯ ಅಭಿನಯದ ‘ಟೆರರ್’ (Terror) ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಾಯಕ ಆದಿತ್ಯ (Aditya) ಅವರ ಹುಟ್ಟುಹಬ್ಬದ ಸಲುವಾಗಿ ಚಿತ್ರತಂಡ ವಿಶೇಷ ಟೀಸರ್ (Teaser) ಬಿಡುಗಡೆ ಮಾಡಿದೆ‌.  ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು (R. Chandru) ಟೆರರ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿದರು. ಟೆರರ್ ಸಿನಿಮಾದ ಹೆಸರಿನಲ್ಲೆ ಒಂದು ಫೈಯರ್ ಇದೆ. ಟೀಸರಿನಲ್ಲಿ ಕಾಣುವ ಪ್ರತಿಯೊಂದು ಸನ್ನಿವೇಶಗಳು ಗಮನ ಸೆಳೆಯುತ್ತದೆ. ಟೀಸರ್ ನಲ್ಲಿಯೇ ಟೆರರ್ ದೊಡ್ಡ ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ ಎಂದು ಆರ್ ಚಂದ್ರು ಹಾರೈಸಿದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ನಿರ್ಮಾಪಕರಾದ ದೇವೇಂದ್ರ ರೆಡ್ಡಿ,  ರಮೇಶ್ ರೆಡ್ಡಿ, ಪ್ರಕಾಶ್, ಶ್ರೀನಗರ ಕಿಟ್ಟಿ ಮುಂತಾದವರು ಟೀಸರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಆದಿತ್ಯ ಅವರಿಗೆ ಹಾಗೂ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಈ ಕಥೆ ಕೇಳಿದ ಕೂಡಲೇ ನಿರ್ಮಾಪಕ ಸಿಲ್ಕ್ ಮಂಜು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಅವರ ಸಹಕಾರದಿಂದಲೇ ಈ ಸಿನಿಮಾ ಮಾಡಲು ಸಾಧ್ಯವಾಗುತ್ತಿದೆ.  ಸಿನಿಮಾದಲ್ಲಿ ಆದಿತ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty)ಕೂಡ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಕೋಟೆ ಪ್ರಭಾಕರ್, ಧರ್ಮ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಶೇಕಡಾ 30 ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕ ರಂಜನ್ ಶಿವರಾಮ್ ಗೌಡ ಹೇಳಿದರು.

    ಕನ್ನಡ ಚಿತ್ರರಂಗಕ್ಕೆ ‘A’ ಎಂಬ ಉತ್ತಮ ಚಿತ್ರಕೊಟ್ಟ ನಿರ್ಮಾಪಕ ಸಿಲ್ಕ್ ಮಂಜು ಅವರ ನಿರ್ಮಾಣದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರಂಜನ್ ಅವರು ಹೇಳಿದ ಕಥೆ ಇಷ್ಟವಾಯಿತು. ನನ್ನ ಹುಟ್ಟುಹಬ್ಬಕ್ಕಾಗಿ ವಿಶೇಷ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಇಲ್ಲಿ ಆಗಮಿಸಿರುವ ಪ್ರತಿಯೊಬ್ಬರಿಗೂ ನನ್ನ ಧನ್ಯವಾದ ಎಂದರು ನಾಯಕ ಆದಿತ್ಯ.  ‘ಎ’ ಸಿನಿಮಾ ಬಿಡುಗಡೆಯಾಗಿ 25 ವರ್ಷ ಆದ ಮೇಲೆ ಮತ್ತೊಂದು ನಿರೀಕ್ಷಿತ ಸಿನಿಮಾ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಸಿಲ್ಕ್ ಮಂಜು.

  • `ಸಂಜು ವೆಡ್ಸ್ ಗೀತಾ 2′ ಶ್ರೀನಗರ ಕಿಟ್ಟಿಗೆ ಮತ್ತೆ ರಮ್ಯಾ ನಾಯಕಿ?

    `ಸಂಜು ವೆಡ್ಸ್ ಗೀತಾ 2′ ಶ್ರೀನಗರ ಕಿಟ್ಟಿಗೆ ಮತ್ತೆ ರಮ್ಯಾ ನಾಯಕಿ?

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಮೋಡಿ ಮಾಡಿದ (Sanju Weds Geetha) ಚಿತ್ರದ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ರಮ್ಯಾ ಕೆರಿಯರ್‌ನಲ್ಲಿ ಮೈಲಿಗಲ್ಲು ಸೃಷ್ಟಿಸಿದ ಚಿತ್ರ `ಸಂಜು ವೆಡ್ಸ್ ಗೀತಾ’ ಸಿನಿಮಾದ ಸೀಕ್ವೆಲ್ ಬರುತ್ತಿದೆ. ಮತ್ತೆ `ಸಂಜು ಮತ್ತು ಗೀತಾ’ ಲವ್ ಸ್ಟೋರಿ ತೆರೆಯ ಮೇಲೆ ಮೋಡಿ ಮಾಡಲಿದೆ.

    ಸಂಜು ಐ ಲವ್ ಯೂ ಎಂಬ ಡೈಲಾಗ್, ಸಂಜು-ಗೀತಾ ಲವ್ ಕಹಾನಿ 2011ರಲ್ಲಿ ಸಿನಿ ಪ್ರೇಕ್ಷಕರಿಗೆ ಕಮಾಲ್ ಮಾಡಿತ್ತು. ಮತ್ತೆ ಈ ಜೋಡಿ ಅದ್ಯಾವಾಗ ಸಂಜು ಮತ್ತು ಗೀತಾ ಒಟ್ಟಿಗೆ ಬರಲಿದ್ದಾರೆ ಎಂದು ಕಾದು ಕುಳಿತಿದ್ದ ಫ್ಯಾನ್ಸ್‌ಗೆ ಈಗ ಸಿಹಿಸುದ್ದಿ ಸಿಕ್ಕಿದೆ. `ಸಂಜು ವೆಡ್ಸ್ ಗೀತಾ’ ಪಾರ್ಟ್ 2 ಬರಲಿದೆ ಎಂದು ಗಾಂಧಿನರದ ಅಡ್ಡಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಇದಕ್ಕೆಲ್ಲಾ ಕಾರಣವಾಗಿರೋದು ವೀಕೆಂಡ್ ಶೋನಲ್ಲಿ ರಮ್ಯಾ (Ramya) ಜೊತೆ ಶ್ರೀನಗರ ಕಿಟ್ಟಿ (Srinagar), ನಾಗಶೇಖರ್ (Nagashekar) ಭಾಗಿಯಾಗಿರೋದು.

    Weekend With Ramesh 5 ಶೋನಲ್ಲಿ ರಮ್ಯಾ ಮೊದಲ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ `ಸಂಜು ವೆಡ್ಸ್ ಗೀತಾ’ ಸಿನಿಮಾದ ತೆರೆ ಹಿಂದಿನ ಸಾಕಷ್ಟು ವಿಚಾರಗಳ ಬಗ್ಗೆ ನಿರ್ದೇಶಕ ನಾಗಶೇಖರ್, ಶ್ರೀನಗರ ಕಿಟ್ಟಿ ಮಾತನಾಡಿದರು. ಹಣದ ಅಭಾವದಿಂದ ನಿಂತು ಹೋಗಿದ್ದ ಈ ಚಿತ್ರಕ್ಕೆ ರಮ್ಯಾ ಬಂಡವಾಳ ಹಾಕಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರ ಬಗ್ಗೆ ನಾಗಶೇಖರ್ ವೇದಿಕೆಯಲ್ಲಿ ಹಂಚಿಕೊಂಡರು. ಬಳಿಕ ಈ ಚಿತ್ರದ ಡೈಲಾಗ್‌ಗೆ ರಮ್ಯಾ-ಕಿಟ್ಟಿ ಆಕ್ಟ್ ಮಾಡುವ ಮೂಲಕ ಮತ್ತೆ ಅದೇ ಕ್ರೇಜ್ ಹುಟ್ಟು ಹಾಕಿದ್ದರು. ಈ ಬೆನ್ನಲ್ಲೇ ಈ ಸಿನಿಮಾ ಸೀಕ್ವೆಲ್ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ. ಇದನ್ನೂ ಓದಿ:ಗಾಯಕನಿಂದಲೇ ನಟಿ ಆಕಾಂಕ್ಷ ಕೊಲೆ : ತಾಯಿಯ ಗಂಭೀರ ಆರೋಪ

    ಈಗಾಗಲೇ ನಿರ್ದೇಶಕ ನಾಗಶೇಖರ್ ಮತ್ತು ಶ್ರೀನಗರ ಕಿಟ್ಟಿ ಭೇಟಿಯಾಗಿ ಒಂದು ಹಂತದ ಮಾತುಕತೆಯಾಗಿದೆ ಎಂದು ಹೇಳಲಾಗುತ್ತಿದೆ. `ಸಂಜು ವೆಡ್ಸ್ ಗೀತಾ’ ಪಾರ್ಟ್ 2 ಬರೋದು ಫಿಕ್ಸ್ ಎನ್ನಲಾಗುತ್ತಿದೆ. ಶ್ರೀನಗರ ಕಿಟ್ಟಿಗೆ ರಮ್ಯಾನೇ ನಾಯಕಿಯಾಗುತ್ತಾರಾ ಅಥವಾ ಬೇರೇ ನಾಯಕಿ ಜೊತೆ ರೊಮ್ಯಾನ್ಸ್ ಮಾಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ. ಸದ್ಯದಲ್ಲೇ ಈ ಬಗ್ಗೆ ಬಿಗ್‌ ಅಪ್‌ಡೇಟ್‌ ಸಿಗಲಿದೆ.

  • ನಾಗಶೇಖರ್ ಬೆನ್ನಿಗೆ ನಿಂತ ರಮ್ಯಾ, `ಸಂಜು ವೆಡ್ಸ್ ಗೀತಾ’ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

    ನಾಗಶೇಖರ್ ಬೆನ್ನಿಗೆ ನಿಂತ ರಮ್ಯಾ, `ಸಂಜು ವೆಡ್ಸ್ ಗೀತಾ’ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

    ಕಿರುತೆರೆಯ ಜನಪ್ರಿಯ Weekend With Ramesh 5 ಶೋ ನೋಡುವ ಕಾತರಕ್ಕೆ ಇದೀಗ ತೆರೆ ಬಿದ್ದಿದೆ. ಮೊದಲ ಸಂಚಿಕೆಯಲ್ಲಿಯೇ ರಮ್ಯಾ (Ramya)  ಜೊತೆಗಿನ ಮಾತುಕತೆಯೊಂದಿಗೆ ಭರ್ಜರಿ ಓಪನಿಂಗ್ಸ್ ಪಡೆದುಕೊಂಡಿದೆ. ಸಾಧಕರ ಸಾಲಿನ ಮೊದಲ ಅತಿಥಿಯಾಗಿ ರಮ್ಯಾ ಅಲಂಕರಿಸಿದ್ದಾರೆ. ಬಾಲ್ಯ, ಶಾಲೆ, ಸಿನಿಮಾ ರಂಗ ಹೀಗೆ ಸಾಕಷ್ಟು ವಿಚಾರಗಳನ್ನ ನಟಿ ಬಿಚ್ಚಿದ್ದಾರೆ. ಅದರಲ್ಲೂ Sanju Weds Geetha ಚಿತ್ರದ ತೆರೆ ಹಿಂದಿನ ಅಸಲಿ ಕಥೆಯನ್ನ ಹೇಳಲಾಗಿದೆ.

    ಪುನೀತ್‌ಗೆ (Puneeth Rajkumar) ನಾಯಕಿಯಾಗಿ ಅಭಿ ಚಿತ್ರದ ಮೂಲಕ ರಮ್ಯಾ ಎಂಟ್ರಿ ಕೊಟ್ಟರು. ಎರಡನೇ ಹಿಟ್ ಸಿನಿಮಾ `ಎಕ್ಸ್ಕ್ಯೂಸ್‌ಮಿ’ ಬಳಿಕ `ಸಂಜು ವೆಡ್ಸ್ ಗೀತಾ’ ಸಿನಿಮಾದ ಸಕ್ಸಸ್ ಸೀಕ್ರೆಟ್ ಹೇಳಲಾಯಿತು. ಚಿತ್ರದ ನಿರ್ದೇಶಕ ನಾಗಶೇಖರ್ ಅವರ ವಿಡಿಯೋ ಪ್ರಸಾರ ಮಾಡಲಾಯಿತು. ಅದು ಮುಗಿದಂತೆಯೇ ನಾಗಶೇಖರ್ (Director Nagashekar) ಹಾಗೂ ನಾಯಕ ಶ್ರೀನಗರ ಕಿಟ್ಟಿ (Srinagar Kitty) ವೀಕೆಂಡ್ ವೇದಿಕೆಗೆ ಆಗಮಿಸಿ ರಮ್ಯಾಗೆ ಅಚ್ಚರಿ ಮೂಡಿಸಿದರು.

    ಹಣ ಖಾಲಿಯಾಗಿ `ಸಂಜು ವೆಡ್ಸ್ ಗೀತಾ’ ಸಿನಿಮಾ ನಿಂತು ಹೋಗಿತ್ತು. ಆಗ ರಮ್ಯಾ ತಮ್ಮ ಹಣ ಹಾಕಿ ಸಿನಿಮಾದ ಚಿತ್ರೀಕರಣ ಮುಗಿಯುವಂತೆ ಮಾಡಿದರು. ಆ ಸಿನಿಮಾ ಸೂಪರ್ ಹಿಟ್ ಆಗಿ ನನಗೆ ಒಂದು ನೆಲೆ ಕೊಟ್ಟಿತು. ನನ್ನ ಮನೆಯಲ್ಲಿ ನಾನು ದೇವರ ಜೊತೆಗೆ ವಸ್ತುವೊಂದನ್ನಿಟ್ಟು ಪೂಜಿಸುತ್ತೇನೆ ಅದನ್ನು ರಮ್ಯಾಗೆ ಉಡುಗೊರೆಯಾಗಿ ತಂದಿದ್ದೇನೆ ಎಂದು ರಮ್ಯಾಗೆ ನಾಗಶೇಖರ್‌ ಉಡುಗೊರೆ ಕೊಟ್ಟರು. ಉಡುಗೊರೆಯನ್ನು ಬಿಚ್ಚಿ ನೋಡಿದ ರಮ್ಯಾಗೆ ಶಾಕ್. ಅದು `ಸಂಜು ವೆಡ್ಸ್ ಗೀತಾ’ ಚಿತ್ರದ ಕ್ಲಾಪ್ ಬೋರ್ಡ್ ಆಗಿತ್ತು. ನಾಗಶೇಖರ್‌ಗೆ ಅದನ್ನು ತಾನೇ ಇಟ್ಟುಕೊಳ್ಳುವುದಾಗಿ ರಮ್ಯಾ ಹೇಳಿದರು. ಇದನ್ನೂ ಓದಿ: ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ವಿತರಣೆ: ನುಡಿದಂತೆ ನಡೆದುಕೊಂಡ ಯಶ್, ಪ್ರಕಾಶ್ ರಾಜ್

    ಈ ಸಿನಿಮಾದ ಶೂಟಿಂಗ್‌ಗಾಗಿ ಊಟಿಯಲ್ಲಿ ಬೀಡು ಬಿಟ್ಟಿದ್ದರು. ಯಾರ ಬಳಿಯೂ ಜಾಕೆಟ್, ಬೂಟ್ ಇಲ್ಲದ್ದನ್ನು ಕಂಡು ರಮ್ಯಾ ಹೋಗಿ ಎಲ್ಲರಿಗೂ ಜಾಕೆಟ್, ಬೂಟ್‌ಗಳನ್ನು ತಂದಿದ್ದನ್ನು ಸಹ ಇದೇ ಸಮಯದಲ್ಲಿ ನೆನಪಿಸಿಕೊಂಡರು. `ಸಂಜು ವೆಡ್ಸ್ ಗೀತಾ’ ಸಿನಿಮಾದ ಕತೆಯನ್ನು ರಮ್ಯಾರ ತಂದೆ ಮೊದಲು ಕೇಳಿ ಶುಭ ಹಾರೈಸಿದ್ದಲ್ಲದೆ, ಸಿನಿಮಾವನ್ನು ಮೊದಲು ನೋಡಿದ್ದು ಸಹ ಅವರೇ ಎಂಬುದನ್ನು ವೇದಿಕೆಯ ಮೇಲೆ ನಾಗಶೇಖರ್ ಬಿಚ್ಚಿಟ್ಟರು. ನಟ ಕಿಟ್ಟಿ ಸಹ ರಮ್ಯಾರ ಸ್ನೇಹವನ್ನು ನೆನಪಿಸಿಕೊಂಡರು. ರಮ್ಯಾ ಹಾಗೂ ಕಿಟ್ಟಿ ಸೇರಿ ಈ ಸಿನಿಮಾದ ದೃಶ್ಯವೊಂದನ್ನು ವೇದಿಕೆ ಮೇಲೆ ನಟಿಸಿದರು. ನಟಿ ರಮ್ಯಾ ಸಹ `ಸಂಜು ವೆಡ್ಸ್ ಗೀತಾ’ ಸಿನಿಮಾ ಚಿತ್ರೀಕರಣದ ನೆನಪುಗಳಿಗೆ ಜಾರಿದರು.

  • ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಈ ವಾರ ಸಿನಿ ಸುನಾಮಿ : ಹನ್ನೊಂದು ಚಿತ್ರಗಳು ಬಿಡುಗಡೆ

    ಸ್ಯಾಂಡಲ್ ವುಡ್ ನಲ್ಲಿ ಈ ವಾರ ಬರೋಬ್ಬರಿ ಹನ್ನೊಂದು ಚಿತ್ರಗಳು (Movie) ಬಿಡುಗಡೆ (Release) ಆಗುತ್ತಿವೆ. ಈ ಮೂಲಕ ನೋಡುಗನನ್ನೇ ಚಿತ್ರಗಳು ಬೆಚ್ಚಿ ಬೀಳಿಸಿವೆ. ಇತ್ತೀಚಿನ ದಿನಗಳಲ್ಲಿ ವಾರಕ್ಕೆ ನಾಲ್ಕೈದು ಚಿತ್ರಗಳು ರಿಲೀಸ್ ಆಗುವುದು ಸಾಮಾನ್ಯವಾಗಿತ್ತು. ಆದರೆ, ಈ ವಾರ ಹನ್ನೊಂದು ಚಿತ್ರಗಳು ರಿಲೀಸ್ ಆಗುವ ಮೂಲಕ ನಿರ್ಮಾಪಕರಲ್ಲಿ ಆತಂಕ ಮೂಡಿಸಿವೆ. ಕನ್ನಡದ ಹನ್ನೊಂದು ಚಿತ್ರಗಳ ಜೊತೆ ತೆಲುಗು, ತಮಿಳು ಮತ್ತು ಮಲಯಾಳಂ ಹಾಗೂ ಹಿಂದಿ ಚಿತ್ರಗಳು ಕೂಡ ಥಿಯೇಟರ್ ನಲ್ಲಿವೆ. ಹೀಗಾಗಿ ಕನ್ನಡದ ಪ್ರೇಕ್ಷಕ ಗೊಂದಲದಲ್ಲಿದ್ದಾನೆ.

    ಈ ವರ್ಷ ಶುರುವಾಗಿ ಇನ್ನೂ ಎರಡು ತಿಂಗಳು ಪೂರ್ತಿಯಾಗಿಲ್ಲ. ಆಗಲೇ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಐವತ್ತರ ಸಮೀಪವಿದೆ. ಈವರೆಗೂ ಕನ್ನಡದಲ್ಲೇ 47 ಚಿತ್ರಗಳು ಬಿಡುಗಡೆ ಆಗಿವೆ. ಈ ವಾರ ಸೌತ್ ಇಂಡಿಯನ್ ಹೀರೋ, ಸಂಭ್ರಮ, ಪಲಾರ್, ಜ್ಯೂಲಿಯಟ್ 2, ಹೊಟ್ಟೆಪಾಡು, ಗೌಳಿ, ಕ್ಯಾಂಪಸ್ ಕ್ರಾಂತಿ, ಅಸ್ತಿರ, ಅಂತರಂಗ, ಆರ್ಟಿಕಲ್ 370 ಮತ್ತು 1975 ಚಿತ್ರಗಳು ತೆರೆಗೆ ಬರುತ್ತಿವೆ. ಇದನ್ನೂ ಓದಿ: ‘ಪೆಂಟಗನ್’ ಸಿನಿಮಾದ 3ನೇ ಕಥೆಯ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್

    ಬಹುತೇಕ ಚಿತ್ರಗಳು ಹೊಸಬರದ್ದೇ ಆದರೂ, ಹೊಸ ಮತ್ತು ವಿಭಿನ್ನ ರೀತಿಯ ಕಾರಣಗಳಿಂದಾಗಿ ಕೆಲ ಚಿತ್ರಗಳು ಗಮನ ಸೆಳೆದಿವೆ. ಬಹುವರ್ಷಗಳ ನಂತರ ಶ್ರೀನಗರ ಕಿಟ್ಟಿ (Srinagar Kitty) ನಟನೆಯ ಚಿತ್ರ ತೆರೆ ಕಾಣುತ್ತಿದೆ. ಅಲ್ಲದೇ, ಈಗಾಗಲೇ ಫಸ್ಟ್ ರಾಂಕ್ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನರೇಶ್ (Naresh) ನಿರ್ದೇಶನದ ಮತ್ತೊಂದು ಚಿತ್ರ ತೆರೆ ಕಾಣುತ್ತಿದೆ. ಟ್ರೇಲರ್ ಮೂಲಕ ಗಮನ ಸೆಳೆದಿದ್ದ ಪಲಾರ್ ಚಿತ್ರ ಕೂಡ ಈ ವಾರ ಬೆಳ್ಳಿತೆರೆಯಲ್ಲಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿನೋದ್  ಪ್ರಭಾಕರ್ ಹೀರೋ, ಶ್ರೀನಗರ ಕಿಟ್ಟಿ ವಿಲನ್: ಇದು ‘ಮಾದೇವ’ ಅವತಾರ

    ವಿನೋದ್ ಪ್ರಭಾಕರ್ ಹೀರೋ, ಶ್ರೀನಗರ ಕಿಟ್ಟಿ ವಿಲನ್: ಇದು ‘ಮಾದೇವ’ ಅವತಾರ

    ವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮಾದೇವ (Madeva) ಸಿನಿಮಾ ಅಖಾಡಕ್ಕೆ ಇದೀಗ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. 80 ರ ದಶಕದ ಕಥೆಯನ್ನು ಒಳಗೊಂಡಿರುವ ಈ ಚಿತ್ರದಲ್ಲಿ  ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ವಿನೋದ್ (Vinod Prabhakar) ಎದುರು ಶ್ರೀನಗರ ಕಿಟ್ಟಿ (Shrinagar Kitty) ಖಳನಾಯಕನಾಗಿ ತೊಡೆ ತಟ್ಟಿದ್ದಾರೆ.  ಸಮುದ್ರ ಎಂಬ ಪವರ್ ಫುಲ್ ಪಾತ್ರದ ಮೂಲಕ ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ಅಬ್ಬರಿಸಲಿದ್ದಾರೆ.

    ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್ ಕೇಶವ್ ದೇವಸಂದ್ರ ಮಾದೇವ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.  ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ನಟಿಸುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ (Sonal Monthero) ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಸಿನಿಮಾಕ್ಕಿದೆ. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಹೈದ್ರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇಕಡ ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಒಬ್ಬ ಹೀರೋ ಚಿತ್ರಕ್ಕೆ ಮತ್ತೊಬ್ಬ ಹೀರೋ ನಿರ್ದೇಶಕ : ಇದು ಅರುಣ್ ಸಿನಿಮಾ

    ಒಬ್ಬ ಹೀರೋ ಚಿತ್ರಕ್ಕೆ ಮತ್ತೊಬ್ಬ ಹೀರೋ ನಿರ್ದೇಶಕ : ಇದು ಅರುಣ್ ಸಿನಿಮಾ

    ಗೊಂಬೆಗಳ ಲವ್ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಟ ಅರುಣ್, ಇದೀಗ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಸಿನಿಮಾ ರಂಗಕ್ಕೆ ನಿರ್ದೇಶಕನಾಗಬೇಕು ಎಂಬ ಕನಸ್ಹೊತ್ತು ಬಂದಿದ್ದ ಅರುಣ್, ಇದೀಗ ಆ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ತಮ್ಮ ಚೊಚ್ಚಲು ನಿರ್ದೇಶನದ ಸಿನಿಮಾಗೆ ಶ್ರೀನಗರ ಕಿಟ್ಟಿಯನ್ನು ನಾಯಕನನ್ನಾಗಿ ಮಾಡಿಕೊಂಡಿದ್ದಾರೆ. ಅತೀ ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಶುರು ಮಾಡುವುದಾಗಿ ತಿಳಿಸಿದ್ದಾರೆ.

    ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಅರಣ್ ಒಂದೊಳ್ಳೆ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಅರುಣ್ ಅವರಿಗೆ ಮರುಹುಟ್ಟು ಎಂದೇ ಹೇಳಬಹುದು. ಈ ಗೆಲುವಿನ ನಡುವೆಯೂ ಅವರು ಮತ್ತೊಂದು ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಶ್ರೀನಗರ ಕಿಟ್ಟಿ ಅವರನ್ನು ಹೀರೋ ಆಗಿ ಆಯ್ಕೆ ಮಾಡಿಕೊಂಡು ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಈ ಸಿನಿಮಾ ಸೆಟ್ಟೇರಲಿದೆ. ಇದನ್ನೂ ಓದಿ:ಡಾ.ಪುನೀತ್ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ : ಅಪ್ಪು ಕುಟುಂಬಕ್ಕೆ ಆಹ್ವಾನ

    ಚಾಮರಾಜನಗರವನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಸಿನಿಮಾವನ್ನು ಶೂಟ್ ಮಾಡಲಾಗುತ್ತಿದ್ದು, ಚಿತ್ರದ ಬಹುತೇಕ ಚಿತ್ರೀಕರಣ ಚಾಮರಾಜ ನಗರದಲ್ಲೇ ನಡೆಯಲಿದೆಯಂತೆ. ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಬರೆದಿರುವ ಅರುಣ್, ಇದೊಂದು ಪೊಲಿಟಿಕಲ್ ಡ್ರಾಮಾ ಕಥೆಯನ್ನು ಹೊಂದಿರುವ ಚಿತ್ರ ಎಂದು ಹೇಳಿದ್ದಾರೆ. ಮಾಸ್ ಮತ್ತು ಕ್ಲಾಸ್ ವರ್ಗಕ್ಕೆ ಈ ಸಿನಿಮಾ ಇಷ್ಟವಾಗಲಿದೆ ಎನ್ನುವುದು ಅರುಣ್ ಮಾತು.

    Live Tv
    [brid partner=56869869 player=32851 video=960834 autoplay=true]

  • ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್

    ವಿಜಯ್ ದುನಿಯಾದಲ್ಲಿ ‘ಭೀಮ’ ಎಂಟ್ರಿ : ನಟಿ ಮಾಲಾಶ್ರೀ ಬಳಿ ಇತ್ತು ಭೀಮ ಟೈಟಲ್

    ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರ ‘ಭೀಮ’ನಿಗೆ ನಿನ್ನೆ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.  ನಟರಾದ ಶ್ರೀನಗರ ಕಿಟ್ಟಿ, ಡಾಲಿ ಧನಂಜಯ, ನಿರ್ಮಾಪಕರಾದ ಕೆ.ಪಿ.ಶ್ರೀಕಾಂತ್, ನಾಗಿ ಮುಂತಾದ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದನ್ನೂ ಓದಿ : ಕನ್ನಡದಲ್ಲೂ ಬಂತು ಬಾಲಿವುಡ್ ನ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

    “ಸಲಗ” ನಂತರ “ಭೀಮ” ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯುವ ಹಾಗೂ ಉತ್ಸಾಹಿ ನಿರ್ಮಾಪಕರಾದ ಜಗದೀಶ್ ಹಾಗೂ ಕೃಷ್ಣ ಸಾರ್ಥಕ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.  ಕಂಡ ಕೆಲವು ಘಟನೆಗಳನ್ನು ಆಧರಿಸಿ ಕಥೆ ಸಿದ್ದಪಡಿಸಿಕೊಂಡಿದ್ದೀನಿ. ಚಿತ್ರಕ್ಕೆ ಶೀರ್ಷಿಕೆ ಏನಿಡಬೇಕೆಂದು ಬಹಳ ದಿನಗಳ ಚರ್ಚೆ ನಡೆದ ನಂತರ “ಭೀಮ” ಎಂಬ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದೀವಿ.  ಶೀರ್ಷಿಕೆ ಕೊಡಿಸಿದ ಜಗದೀಶ್ ಅವರಿಗೆ ಧನ್ಯವಾದ. ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ನಿರ್ದೇಶನದ ಜೊತೆಗೆ ನಾನು ನಾಯಕನಾಗೂ ಕಾಣಿಸಿಕೊಳ್ಳುತ್ತಿದ್ದೀನಿ.  ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್

    “ಜಯಮ್ಮನ ಮಗ” ಚಿತ್ರದಲ್ಲಿ ನನ್ನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಲ್ಯಾಣಿ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಬ್ಲ್ಯಾಕ್ ಡ್ರ್ಯಾಗನ್ ಮಂಜು ಅವರು ಸೇರಿದಂತೆ ಸಾಕಷ್ಟು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಇಂದಿನಿಂದ ಚಿತ್ರೀಕರಣ ಆರಂಭಿಸುತ್ತಿದ್ದೇನೆ. ನನ್ನ “ಸಲಗ” ಚಿತ್ರದ ಮುಹೂರ್ತ ಸಮಾರಂಭ ಸಹ ಈ ದೇವಸ್ಥಾನದಲ್ಲಿ ನಡೆದಿತ್ತು. ಎರಡನೇ ಚಿತ್ರದ ಮುಹೂರ್ತ ಇಲ್ಲೇ ನಡೆಯಬೇಕೆಂದು ಆಸೆಯಿತ್ತು. ಇಂತಹ ದೇವಸ್ಥಾನ ಪರಿಚಯಿಸಿದ ಕೆ.ಪಿ.ಶ್ರೀಕಾಂತ್ ಅವರಿಗೆ ಧನ್ಯವಾದ.  ಶ್ರೀನಗರ ಕಿಟ್ಟಿ, ಧನಂಜಯ ಸೇರಿದಂತೆ ಅನೇಕ ಚಿತ್ರರಂಗದ ಗೆಳೆಯರು ಆಗಮಿಸಿರುವುದು ಖುಷಿ ತಂದಿದೆ ಎಂದರು ನಾಯಕ ಹಾಗೂ ನಿರ್ದೇಶಕ ದುನಿಯಾ ವಿಜಯ್. ಇದನ್ನೂ ಓದಿ : ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್

    “ಜಯಮ್ಮನ ಮಗ” ಚಿತ್ರದಲ್ಲಿ ನನಗೆ ತಾಯಿಯ ಪಾತ್ರ ನೀಡಿದ್ದರು. ಈ ಚಿತ್ರದಲ್ಲೂ ನಾನು ಅವರ ತಾಯಿ. ಆ ಚಿತ್ರದಲ್ಲಿ ಸೌಮ್ಯ ಸ್ವಭಾವದ ತಾಯಿಯಾಗಿ ಕಾಣಿಸಿಕೊಂಡಿದ್ದೆ. ಇದರಲ್ಲಿ ಸ್ವಲ್ಪ ರೌದ್ರ ಸ್ಭಭಾವದವಳು ಎಂದು ಹಿರಿಯ ನಟಿ ಕಲ್ಯಾಣಿ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಅಂದಹಾಗೆ ಈ ಸಿನಿಮಾದ ಟೈಟಲ್ ಭೀಮ ನಟಿ ಮಾಲಾಶ್ರೀ ಅವರ ಬಳಿಯಿತ್ತು. ನಿರ್ಮಾಪಕ ಜಗದೀಶ್ ಮತ್ತು ದುನಿಯಾ ವಿಜಯ್ ಕೇಳಿದಾಗ ಪ್ರೀತಿಯಿಂದಲೇ ಆ ಟೈಟಲ್ ಕೊಟ್ಟಿದ್ದಾರೆ ನಟಿ ಮಾಲಾಶ್ರೀ.

  • ಬಂಬೂ ಸವಾರಿ ಚಿತ್ರಕ್ಕೆ ಸ್ಯಾಂಡಲ್ ವುಡ್ ಪ್ರತಿಭಾವಂತರ ಸಾಥ್

    ಬಂಬೂ ಸವಾರಿ ಚಿತ್ರಕ್ಕೆ ಸ್ಯಾಂಡಲ್ ವುಡ್ ಪ್ರತಿಭಾವಂತರ ಸಾಥ್

    ಇಂಗ್ಲಿಷ್ ಮಂಜ ಸಿನಿಮಾದ ಸಾರಥಿ ಆರ್ಯ ಎನ್.ಮಹೇಶ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ‘ಬಂಬೂ ಸವಾರಿ’ ಸಿನಿಮಾದ ಮುಹೂರ್ತ ಇವತ್ತು ಬೆಂಗಳೂರಿನ ಗುಂಡಾಂಜನೇಯ ದೇಗುಲದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡದ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕ ಸಿಂಪಲ್ ಸುನಿ, ನಟ ಶ್ರೀನಗರ ಕಿಟ್ಟಿ, ವಿನೋದ್ ಪ್ರಭಾಕರ್ ಹಾಗೂ ನಿರ್ದೇಶಕ ಕೆ.ಎಂ.ಚೈತನ್ಯ ಉಪಸ್ಥಿತರಿದ್ದರು. ಇದನ್ನು ಓದಿ: ‘ಅಣ್ಣಾವ್ರ ನಾಡು’: ಡಾ.ರಾಜ್ ಕುಮಾರ್ ನೆನೆದ ರಾಕಿಂಗ್ ಸ್ಟಾರ್ ಯಶ್

    ಸಿಂಪಲ್ ಸುನಿ, ಹೆಸರಲ್ಲಿಯೇ ಪಾಸಿಟಿವ್ ಇದೆ. ಸವಾರಿ ಅನ್ನುವ ಸಿನಿಮಾ ಮೈಲುಗಲ್ಲು ಸಾಧಿಸಿತ್ತು. ಮಹೇಶ್ ಪ್ರಚಲಿತ ವಿದ್ಯಮಾನಗಳ ಮೇಲೆ ಸಿನಿಮಾ ಕಥೆ ಹೇಳ್ತಾರೆ. ವರ್ಧನ್ ಒಳ್ಳೆ ಕಲಾವಿದ. ಹೊಸತಂಡದಲ್ಲಿ ಇರುವವರಿಗೆ ಎಲ್ಲರಿಗೂ ಶುಭ ಹಾರೈಕೆಗಳು. ಸವಾರಿ ನೂರು ದಿನ ಓಡಲಿ ಎಂದು ಹಾರೈಸಿದರು. ಶ್ರೀನಗರ ಕಿಟ್ಟಿ, ಮಹೇಶ್ ಮುಂದಿನ ಪ್ರಯತ್ನ. ನಾನು ಜಂಬೂ ಸವಾರಿ ಅಂತಾ ಅಂದುಕೊಂಡಿದ್ದೆ. ಟೈಟಲ್ ಹೇಳಿದ ಮೇಲೆ ಬಂಬೂ ಸವಾರಿ ಅಂತಾ ಗೊತ್ತಾಯ್ತು. ತಂತ್ರಜ್ಞನರು, ಕಲಾವಿದರು ಎಲ್ಲರಿಗೂ ಒಳ್ಳೆದಾಲಿ ಎಂದು ಶುಭ ಕೋರಿದರು. ಇದನ್ನೂ ಓದಿ : ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡ ಮೇಘಾ ಶೆಟ್ಟಿ

    ವಿನೋದ್ ಪ್ರಭಾಕರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಆಶೀರ್ವಾದದೊಂದಿಗೆ ಸಿನಿಮಾ ಪ್ರಾರಂಭ ಮಾಡಿದ್ದಾರೆ. ನಾನು ಕೂಡ ಕಿಟ್ಟಪ್ಪನ ತರಹ ಜಂಬೂ ಸವಾರಿ ಅಂದುಕೊಂಡಿದ್ದೆ. ನವಗ್ರಹ ಮಾಡುವಾಗ ಜಂಬೂ ಸವಾರಿ ಫೇಮಸ್ ಆಗಿತ್ತು. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಬೆಸ್ಟ್ ವಿಷಸ್ ತಿಳಿಸಿದರು. ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ

    ಬಂಬೂ ಸವಾರಿ ಸಿನಿಮಾದಲ್ಲಿ ತಾಂಡವ ರಾಮ, ವರ್ಧನ್, ದೀಪಕ್ ವಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದು, ಆದ್ಯ ಪ್ರಿಯಾ, ಅಭಿ ಸಾರಿಕಾ ನಾಯಕಿಯಾರಾಗಿ ಬಣ್ಣ ಹಚ್ಚಿದ್ದು, ಉಳಿದಂತೆ  ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ಬಾಲರಾಜ್ ವಾಡಿ, ಷರೀಫ್  ಕಲಾ ಬಳಗದಲ್ಲಿದೆ. ಬಂಬೂ ಸವಾರಿ ಕಲ್ಟ್ ಜಾನರ್ ಸಿನಿಮಾವಾಗಿದ್ದು, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಹಾಕಿಕೊಂಡಿದೆ.