Tag: Srinagar

  • ಪಹಲ್ಗಾಮ್‌ ದಾಳಿಯಲ್ಲಿ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಬಂಧನ

    ಪಹಲ್ಗಾಮ್‌ ದಾಳಿಯಲ್ಲಿ ಉಗ್ರರಿಗೆ ಸಹಾಯ ಮಾಡಿದ್ದ ವ್ಯಕ್ತಿ ಬಂಧನ

    ಶ್ರೀನಗರ: ಏಪ್ರಿಲ್ 22 ರ ಪಹಲ್ಗಾಮ್ ದಾಳಿ (Pahalgam Attack) ಭಯೋತ್ಪಾದಕರಿಗೆ ಸಹಾಯ ಮಾಡಿದ್ದ ವ್ಯಕ್ತಿಯನ್ನು ಜಮ್ಮು ಮತ್ತು ಕಾಶ್ಮೀರ (Jammu & Kashmir) ಪೊಲೀಸರು ಬಂಧಿಸಿದ್ದಾರೆ.

    ಪಹಲ್ಗಾಮ್ ಬಳಿಯ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ 26 ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ಭದ್ರತಾ ಪಡೆಗಳು ಆಪರೇಷನ್ ಮಹಾದೇವ್ ಸಮಯದಲ್ಲಿ ಪಹಲ್ಗಾಮ್‌ ದಾಳಿಯ ಇಬ್ಬರು ಉಗ್ರರನ್ನು ಹೊಡೆದುರುಳಿಸಿ, ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದರು. ಅವುಗಳನ್ನು ವಿಧಿವಿಜ್ಞಾನ ವಿಶ್ಲೇಷಣೆಯ ನಂತರ ಮೊಹಮ್ಮದ್ ಕಟಾರಿಯಾ ಎಂಬಾತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳ ಪತ್ತೆಗೆ ನೆರವಾಯ್ತು ಬುಲೆಟ್‌ ಶೆಲ್‌ ಟೆಸ್ಟಿಂಗ್‌ – ಬ್ಯಾಲಿಸ್ಟಿಕ್ಸ್‌ ಮ್ಯಾಚಿಂಗ್‌ ಹೇಗೆ ನಡೆಯುತ್ತೆ?

    ಕಟಾರಿಯಾನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಪಹಲ್ಗಾಮ್ ದಾಳಿಗೆ ಕಾರಣರಾದ ಎಲ್ಲರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ನಿರಂತರ ಗಮನಹರಿಸುತ್ತಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ.

    ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಒಂದು ಬಣವು ಪಹಲ್ಗಾಮ್‌ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಶ್ರೀನಗರ ಬಳಿಯ ಡಚಿಗಮ್‌ನಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮೇ 22 ರಂದು ಭದ್ರತಾ ಪಡೆಗಳಿಗೆ ಗುಪ್ತಚರ ಮಾಹಿತಿ ಸಿಕ್ಕಿತ್ತು. ಅದರ ಬೆನ್ನಲ್ಲೇ ಆಪರೇಷನ್ ಮಹಾದೇವ್ ನಡೆಸಲಾಯಿತು. ಇದನ್ನೂ ಓದಿ: ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ – ಪಹಲ್ಗಾಮ್‌ ಪಾತಕಿ ಬೆನ್ನಲ್ಲೇ ಮತ್ತಿಬ್ಬರು ಉಗ್ರರು ಎನ್‌ಕೌಂಟರ್‌

  • 1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ

    1990ರ ಕಾಶ್ಮೀರಿ ಪಂಡಿತ್ ನರ್ಸ್ ಹತ್ಯೆ ಕೇಸ್; ಶ್ರೀನಗರದ 8 ಸ್ಥಳಗಳ ಮೇಲೆ ಎಸ್‌ಐಎ ದಾಳಿ

    ಶ್ರೀನಗರ: 1990ರಲ್ಲಿ ಕಾಶ್ಮೀರಿ ಪಂಡಿತ್ ನರ್ಸ್ ಸರಳಾ ಭಟ್ ಅವರ ಹತ್ಯೆಯ ತನಿಖೆ ನಡೆಸುತ್ತಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ (SIA) ಮಂಗಳವಾರ ಶ್ರೀನಗರದ (Srinagar) ಎಂಟು ಸ್ಥಳಗಳ ಮೇಲೆ ದಾಳಿ ನಡೆಸಿದೆ.

    ನಿಷೇಧಿತ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF)ನೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ವ್ಯಕ್ತಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಜೆಕೆಎಲ್‌ಎಫ್‌ನ ಮಾಜಿ ನಾಯಕ ಪೀರ್ ನೂರುಲ್ ಹಕ್ ಶಾ, ಯಾಸಿನ್ ಮಲಿಕ್, ಜಾವೀದ್ ಮೀರ್ ಮನೆ ಮೇಲೆ ರೇಡ್ ಮಾಡಲಾಗಿದೆ. ದಾಳಿ ವೇಳೆ ದಾಖಲೆಗಳು ಮತ್ತು ಡಿಜಿಟಲ್ ಡೇಟಾ ಸೇರಿದಂತೆ ಅಪರಾಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಎ ತಿಳಿಸಿದೆ. ಇದನ್ನೂ ಓದಿ: ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    35 ವರ್ಷಗಳ ಹಿಂದೆ ಅನಂತನಾಗ್ ಜಿಲ್ಲೆಯ ಸರಳಾ ಭಟ್ (Sarla Bhat), ಶ್ರೀನಗರದ ಸೌರಾದಲ್ಲಿರುವ ಶೇರ್-ಇ-ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. 1990ರ ಏಪ್ರಿಲ್ 18ರ ರಾತ್ರಿ ಭಯೋತ್ಪಾದಕರು ಆಕೆಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಾಕ್ಷಿ-ಪುರಾವೆಗಾಗಿ 8 ಕಡೆ ರೇಡ್ ಮಾಡಿರುವ ಎಸ್‌ಐಎ, ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಜೊತೆ ನಂಟು ಹೊಂದಿದ್ದ ಹಲವರ ಮನೆಗಳಲ್ಲಿ ಶೋಧ ನಡೆಸಿದೆ.

  • ಪಹಲ್ಗಾಮ್ ದಾಳಿ ಬಳಿಕ ಆಫ್‌ ಆಗಿದ್ದ ಸ್ಯಾಟಲೈಟ್‌ ಫೋನ್ ದಿಢೀರ್ ಆನ್‌ – ಇದೇ ಸುಳಿವಿಂದ ಉಗ್ರರ ಬೇಟೆ!

    ಪಹಲ್ಗಾಮ್ ದಾಳಿ ಬಳಿಕ ಆಫ್‌ ಆಗಿದ್ದ ಸ್ಯಾಟಲೈಟ್‌ ಫೋನ್ ದಿಢೀರ್ ಆನ್‌ – ಇದೇ ಸುಳಿವಿಂದ ಉಗ್ರರ ಬೇಟೆ!

    ಶ್ರೀನಗರ: ಪಹಲ್ಗಾಮ್ ದಾಳಿ (Pahalgam Attac) ಬಳಿಕ ಆಫ್ ಆಗಿದ್ದ ಸ್ಯಾಟಲೈಟ್ ಫೋನ್‌ಗಳು 2 ದಿನದ ಹಿಂದೆ ಅಕ್ಟಿವ್ ಆಗಿದ್ದು, ಉಗ್ರರನ್ನು ಬೇಟೆಯಾಡಲು ಸೇನೆಗೆ ಸಹಕಾರಿಯಾಗಿದೆ ಎಂಬ ವಿಷಯ ತಿಳಿದುಬಂದಿದೆ.

    ಪಹಲ್ಗಾಮ್ ದಾಳಿ ಬಳಿಕ ಸ್ಯಾಟ್‌ಲೈಟ್‌ ಫೋನ್‌ಗಳ ಮೇಲೆ ಸೇನೆ ನಿಗಾ ಇಟ್ಟಿತ್ತು. ಉಗ್ರರ ದಾಳಿ ಬಳಿಕ ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದ ಸ್ಯಾಟ್‌ಲೈಟ್‌ ಫೋನ್‌ಗಳು ಆನ್‌ ಆಗಿದ್ದು, `ಆಪರೇಷನ್ ಮಹದೇವ್ʼ (Operation Mahade) ಕಾರ್ಯಾಚರಣೆಗೆ ಕಾರಣವಾಯಿತು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.

    ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್‌ನಲ್ಲಿ (Dachigam Encounter) ಸ್ಯಾಟಲೈಟ್‌ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಆದರೆ ಅಲ್ಲಿ ಯಾವ ಜನವಸತಿ ಇಲ್ಲ. ಅನುಮಾನಾಸ್ಪದ ಕರೆಯಿಂದ ಸೇನೆ ಕಾರ್ಯಾಚರಣೆಗೆ ಮುಂದಾಯಿತು. ಎನ್‌ಕೌಂಟರ್‌ನಲ್ಲಿ‌ ಮೂವರು ಉಗ್ರರು ಹತ್ಯೆ ಮಾಡಲಾಗಿದೆ. ಹತ್ಯೆಯಾದ ಒಬ್ಬ ಉಗ್ರನನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    ಹಾಶಿಮ್ ಮೂಸಾ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾಗೆ ಸೇರಿದವನು ಎಂಬ ಅನುಮಾನ ಇದೆ. ಉಳಿದಂತೆ ಹತ್ಯೆಯಾದ ಉಗ್ರರನ್ನು ಇನ್ನೂ ಗುರುತಿಸಲಾಗಿಲ್ಲ. ಮೃತದೇಹಗಳನ್ನು ಕೆಳಗೆ ತರಲು ಸಮಯ ತೆಗೆದುಕೊಳ್ಳುತ್ತದೆ. ಹತ್ಯೆಗೀಡಾದ ಭಯೋತ್ಪಾದಕರ ಗುರುತುಗಳನ್ನು ಖಚಿತಪಡಿಸಿಕೊಳ್ಳಲು ಡ್ರೋನ್ ಬಳಕೆ ಮಾಡಲಾಗುತ್ತಿದೆ.

    ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈ ಹಿಂದೆ ಬಂಧಿಸಿದ್ದ ಪರ್ವೇಜ್ ಮತ್ತು ಬಶೀರ್ ಅಹ್ಮದ್ ಎಂದು ಗುರುತಿಸಲಾದ ಇಬ್ಬರು, ಪಹಲ್ಗಾಮ್ ದಾಳಿಯಲ್ಲಿ ಮೂವರು ಪಾಕಿಸ್ತಾನಿ ಲಷ್ಕರ್ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿಸಿದ್ದರು. ಇವರಿಗೆ ಹತ್ಯೆಯಾದ ಉಗ್ರರ ಫೋಟೋ ತೋರಿಸಿ ಮಾಹಿತಿ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇನ್ನೂ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ಹುವಾವೇ ಉಪಗ್ರಹ ಫೋನ್ ಬಳಸಿದ್ದರು. ದಾಳಿಯ ನಂತರ ಆ ಸಾಧನವನ್ನು ಬಳಸಲಾಗಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

  • Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    Operation Mahadev | ಪಹಲ್ಗಾಮ್‌ ನರಮೇಧಕ್ಕೆ ಕಾರಣವಾಗಿದ್ದ ಪ್ರಮುಖ ಉಗ್ರ ಯೋಧರ ಗುಂಡಿಗೆ ಬಲಿ

    – ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಹಾಶಿಮ್‌ ಮೂಸ

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ. ಹತ್ಯೆಗೈದ ಮೂವರಲ್ಲಿ ಓರ್ವ ಉಗ್ರ ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾಗಿದ್ದ ಮುಖ್ಯ ಹಂತಕ ಅನ್ನೋದು ಖಚಿತವಾಗಿದೆ.

    ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಪ್ರಮುಖ ಉಗ್ರ ಹಾಶಿಮ್‌ ಮೂಸಾ ಅಲಿಯಾಸ್‌ ಸುಲೇಮಾನ್‌ ಮೂಸಾನನ್ನ ಹೊಡೆದುರುಳಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಮೂಲಗಳು ಮಾಹಿತಿ ಹಂಚಿಕೊಂಡಿವೆ.

    ಹಾಶಿಮ್‌ ಮೂಸಾ ಯಾರು?
    ಹಾಶಿಮ್‌ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ (Pakistani Para Commando) ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.

    Pahalgam 7

    ಮೂವರು ವಿದೇಶಿ ಉಗ್ರರ ಹತ್ಯೆ
    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಆಪರೇಷನ್‌ ಮಹಾದೇವ್‌ ಕಾರ್ಯಾಚರಣೆಯಲ್ಲಿ ಹಾಶಿಮ್‌ ಮೂಸಾ ಸೇರಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಸೇನೆಯ ಚಿನಾರ್ ಕಾರ್ಪ್ಸ್ ನೇತೃತ್ವದಲ್ಲಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರೊಂದಿಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ.

    ಮೂವರು ಉಗ್ರರನ್ನು ಹತ್ಯೆಗೈದ ಬಳಿಕ ದಚಿಗಮ್ ಅರಣ್ಯ ಪ್ರದೇಶದಲ್ಲಿ ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ.

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    Operation MAHADEV | ಪಹಲ್ಗಾಮ್‌ ದಾಳಿಯ ಮೂವರು ಶಂಕಿತ ಉಗ್ರರನ್ನು ಹತ್ಯೆಗೈದ ಸೇನೆ

    – ಶ್ರೀನಗರ ಬಳಿಯ ಲಿಡ್ವಾಸ್‌ನಲ್ಲಿ ಎನ್‌ಕೌಂಟರ್

    ಶ್ರೀನಗರ: ʻಆಪರೇಷನ್‌ ಮಹಾದೇವ್‌ʼ (Operation MAHADEV) ಅಡಿಯಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯೊಂದರಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್‌ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರನ್ನ ಹತ್ಯೆಗೈದಿವೆ.

    ಸೇನೆಯ ಹಿರಿಯ ಅಧಿಕಾರಿಗಳ ಪ್ರಕಾರ, ಈ ಮೂವರು ಏಪ್ರಿಲ್‌ 22ರ ಪಹಲ್ಗಾಮ್‌ ಭಯೋತ್ಪಾದಕ ದಾಳಿಯಲ್ಲಿ (Pahalgam Terrorist Attack) ಭಾಗಿಯಾಗಿದ್ದರೆಂದು ಶಂಕಿಸಲಾಗಿದೆ. ಅಲ್ಲದೇ ಲಷ್ಕರ್‌ ಮುಖವಾಣಿ ಟಿಆರ್‌ಎಫ್‌ (The Resistance Front) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಿಂದಲೇ ಬಂದರೆಂದು ಏಕೆ ಅನ್ಕೋತೀರಿ, ಉಗ್ರರು ದೇಶದೊಳಗೇ ಬೆಳೆದಿರಬಹುದು – ʻಕೈʼ ನಾಯಕ ಚಿದಂಬರಂ ಹೇಳಿಕೆ ವಿವಾದ

    ಸೇನೆಯ ಚಿನಾರ್ ಕಾರ್ಪ್ಸ್ ಕಂಪನಿ ಮತ್ತು ಜಮ್ಮು ಮತ್ತು ಕಾಶ್ಮೀರ (Jammu And Kashmir) ಪೊಲೀಸರು ನಡೆಸಿದ ಯಶಸ್ವಿ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನ ಹತ್ಯೆಗೈಯಲಾಗಿದೆ. ಲಿಡ್ವಾಸ್‌ನ ದಚಿಗಮ್ ಶ್ರೀನಗರದ ಹೊರವಲಯದಲ್ಲಿರುವ ದಟ್ಟ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಬೆಟ್ಟದ ದುರ್ಗಮ ಹಾದಿಯು ಟ್ರಾಲ್‌ಗೆ ಸಂಪರ್ಕ ಕಲ್ಪಿಸುತ್ತದೆ. ಈ ಪ್ರದೇಶದಲ್ಲಿ‌ ಹಿಂದೆಯೂ ಟಿಆರ್‌ಎಫ್‌‌ ಉಗ್ರ ಸಂಘಟನೆಯ ಚಟುವಟಿಕೆಗಳು ನಡೆಯುತ್ತಿತ್ತು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: UP | ಅವಸಾನೇಶ್ವರ ಮಹಾದೇವ ದೇವಾಲಯದಲ್ಲಿ ಕಾಲ್ತುಳಿತ – ಇಬ್ಬರು ಭಕ್ತರು ಸಾವು, 29 ಮಂದಿಗೆ ಗಾಯ

    ಪೊಲೀಸರ ಜಂಟಿ ಕಾರ್ಯಾಚರಣೆ ಮುಂದುವರಿದಿದೆ. ಕಳೆದ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಟಿಆರ್‌ಎಫ್ ಉಗ್ರರ ಅಡಗು ತಾಣವನ್ನಸೇನೆ ಧ್ವಂಸಗೊಳಿಸಿತ್ತು. ಆದ್ರೆ 2 ದಿನಗಳ ಹಿಂದೆ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ. ಅಲ್ಲದೇ ಇನ್ನಷ್ಟು ಉಗ್ರರು ಈ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪೊಲೀಸಪ್ಪನ ಪತ್ನಿಗೆ ಅತ್ತೆ, ಮಾವನಿಂದ ಕಿರುಕುಳ – ವಿಡಿಯೋ ಹರಿಬಿಟ್ಟು ಮಹಿಳೆ ಆತ್ಮಹತ್ಯೆ

    ದಚಿಗಮ್ ಅರಣ್ಯವನ್ನ ಈಗಾಗಲೇ ಟಿಆರ್‌ಎಫ್‌ನ ಮುಖ್ಯ ಅಡಗುತಾಣವೆಂದು ಪರಿಗಣಿಸಲಾಗಿದೆ. ಇದೇ ಗುಂಪು ಇತ್ತೀಚೆಗೆ ಎಲ್‌ಒಸಿ ಬಳಿ ನಡೆದಿದ್ದ ನೆಲಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿತ್ತು, ಇದರಲ್ಲಿ ಓರ್ವ ಸೈನಿಕ ಹುತಾತ್ಮರಾಗಿ ಮೂವರು ಗಾಯಗೊಂಡಿದ್ದರು. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಸಾರ್ವಜನಿಕರು ಮನೆಯಿಂದ ಆಚೆ ಬರದಂತೆ ಭದ್ರತಾ ಪಡೆದಗಳು ಎಚ್ಚರಿಕೆ ನೀಡಿವೆ.

  • ವಾಯುಸೀಮೆ ಬಳಸಲು ಪಾಕ್‌ ನಿರಾಕರಿಸಿದ ಬಳಿಕ ನಿಮಿಷಕ್ಕೆ 8,500 ಅಡಿಯಂತೆ ಇಳಿಸಿ ವಿಮಾನ ಲ್ಯಾಂಡಿಂಗ್‌!

    ವಾಯುಸೀಮೆ ಬಳಸಲು ಪಾಕ್‌ ನಿರಾಕರಿಸಿದ ಬಳಿಕ ನಿಮಿಷಕ್ಕೆ 8,500 ಅಡಿಯಂತೆ ಇಳಿಸಿ ವಿಮಾನ ಲ್ಯಾಂಡಿಂಗ್‌!

    – 227 ಮಂದಿ ಹೊತ್ತು 36,000 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವಿಮಾನ

    ನವದೆಹಲಿ: ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ (IndiGo Flight) ಪ್ರಕ್ಷುಬ್ಧತೆ ತಪ್ಪಿಸಲು ಪಾಕ್ ವಾಯುಸೀಮೆ ಬಳಸಲು ನಿರಾಕರಿಸಿದ ಬಳಿಕ ನಿಮಿಷಕ್ಕೆ 8,500 ಅಡಿಯಂತೆ ಇಳಿಸಿ ವಿಮಾನವನ್ನು ಸುರಕ್ಷಿತವಾಗಿ ಶ್ರೀನಗರದಲ್ಲಿ ಲ್ಯಾಂಡಿಗ್‌ ಮಾಡಲಾಗಿತ್ತು ಎಂದು ವರದಿಗಳು ತಿಳಿಸಿವೆ.

    ಇತ್ತೀಚಿನ ವರದಿಗಳ ಪ್ರಕಾರ ಅತಿಯಾದ ಬಿರುಗಾಳಿಗೆ ಸಿಲುಕಿ ಇಂಡಿಗೋ ವಿಮಾನ ಪಕ್ಷುಬ್ಧತೆ ಎದುರಿಸಿತ್ತು. ಇದರೊಂದಿಗೆ ಆಲಿಕಲ್ಲು ಮಳೆಗೆ ಸಿಲುಕಿದ ಪರಿಣಾಮ ಸಮಸ್ಯೆ ಎದುರಾಗಿತ್ತು. ಹೀಗಾಗಿ 6E-2142 ಇಂಡಿಗೋ ವಿಮಾನವು ನಿಮಿಷಕ್ಕೆ 8,500 ಅಡಿಯಂತೆ ಇಳಿಯಿತು. ಸಾಮಾನ್ಯವಾಗಿ ವಿಮಾನವನ್ನು ನಿಮಿಷಕ್ಕೆ 1,500 ರಿಂದ 3,000 ಅಡಿಯಂತೆ ಇಳಿಸಿ ಲ್ಯಾಂಡಿಂಗ್‌ ಮಾಡಲಾಗುತ್ತದೆ. ಆದ್ರೆ ಅಂದು ನಿಮಿಷಕ್ಕೆ 8,500 ಅಡಿಯಂತೆ ಇಳಿಸಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಡೇಂಜರ್‌ನಲ್ಲಿದ್ದರೂ ದೆಹಲಿ-ಶ್ರೀನಗರ ಇಂಡಿಗೋ ವಿಮಾನಕ್ಕೆ ತನ್ನ ವಾಯುಸೀಮೆ ಬಳಸಲು ನಿರಾಕರಿಸಿದ ಪಾಕ್‌

    IndiGo Flight Damege

    ಡಿಜಿಸಿಎಯ ಪ್ರಾಥಮಿಕ ವರದಿಯ ಪ್ರಕಾರ, ಸಂಸತ್ ಸದಸ್ಯರು ಸೇರಿದಂತೆ 227ಕ್ಕೂ ಜನರನ್ನು ಹೊತ್ತ ವಿಮಾನವು 36,000 ಅಡಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ಪಠಾಣ್‌ಕೋಟ್ ಬಳಿ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಪ್ರಕ್ಷುಬ್ಧತೆ ಎದುರಿಸಿತ್ತು ಎಂದು ವಿವರಿಸಿದೆ. ಇದನ್ನೂ ಓದಿ: ಮೋದಿಜೀ ಪೊಳ್ಳು ಭಾಷಣ ನಿಲ್ಲಿಸಿ… ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಏಕೆ ಕುದಿಯುತ್ತೆ? – ರಾಗಾ

    ಮನವಿ ನಿರಾಕರಿಸಿದ್ದ ಪಾಕ್:‌
    ಇಂಡಿಗೋ ವಿಮಾನವು ಪ್ರಕ್ಷುಬ್ಧತೆಯನ್ನು ತಪ್ಪಿಸಲು ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಸೀಮೆ ಬಳಸಲು ಅನುಮತಿ ಕೋರಿತ್ತು. ಅಮೃತಸರದ ಬಳಿಕ ನಡೆಸುತ್ತಿರುವಾಗ ಅಸ್ಥಿರ ಹವಾಮಾನವನ್ನು ಗಮನಿಸಿದ ಪೈಲಟ್, ಸುರಕ್ಷತಾ ಕಾರಣಗಳಿಗಾಗಿ ತನ್ನ ವಾಯುಸೀಮೆ ಮೂಲಕ ಹಾರಾಟ ನಟಡೆಸಲು ಪಾಕಿಸ್ತಾನಿ ವಾಯು ಸಂಚಾರ ನಿಯಂತ್ರಣ ಸಂಪರ್ಕಿಸಿದರು. ಆದಾಗ್ಯೂ, ವಿನಂತಿಯನ್ನು ಪಾಕ್ ನಿರಾಕರಿಸಿತು. ಆದಾಗ್ಯೂ ವಿಮಾನವು ತನ್ನ ನಿಗದಿತ ಮಾರ್ಗದಲ್ಲಿ ತಲುಪಿ ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.

    6ಇ2142 ವಿಮಾನವು ಐದು ಸದಸ್ಯರ ತೃಣಮೂಲ ಕಾಂಗ್ರೆಸ್ (TMC) ನಿಯೋಗ ಸೇರಿದಂತೆ 227 ಮಂದಿಯನ್ನ ಹೊತ್ತೊಯ್ಯುತ್ತಿತ್ತು. ದೆಹಲಿಯಿಂದ ಹೊರಟು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

    ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ ಸೇಫ್ ಆಗಿದ್ದಾರೆ. ಪೈಲಟ್‌ಗಳ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ ಭಾರೀ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.

  • ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

    ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿ – ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಎಮರ್ಜೆನ್ಸಿ

    -‌ ಅಪಾಯದ ಅಂಚಿನಿಂದ ಪಾರಾದ‌ ವಿಮಾನ
    – ಭಯಭೀತರಾಗಿ ಕಿರುಚಾಡಿದ ಪ್ರಯಾಣಿಕರು

    ನವದೆಹಲಿ: ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಹಾನಿಯಾದ ಪರಿಣಾಮ ದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ (IndiGo) ವಿಮಾನದಲ್ಲಿ ಎಮರ್ಜೆನ್ಸಿ ಘೋಷಿಸಲಾಯಿತು. ಕಡೆಗೆ ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಆಯಿತು.

    ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಮಂಗಳವಾರ ಸಂಜೆ ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿತು. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ದೊಂದಿಗೆ ತುರ್ತು ಪರಿಸ್ಥಿತಿ ಘೋಷಿಸಿದರು. ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು

    ಎಟಿಸಿಗೆ ಪೈಲಟ್‌ ಎರ್ಮೆಜೆನ್ಸಿ ಘೋಷಿಸಿದರು. ಮಳೆ ಮತ್ತು ಆಲಿಕಲ್ಲು ರಭಸದಿಂದ ವಿಮಾನ ಅಲುಗಾಡಿತು. ವಿಮಾನ ಅಲುಗಾಡುತ್ತಿದ್ದಂತೆ ಪ್ರಯಾಣಿಕರು ಆಘಾತಗೊಂಡರು. ಭಯಭೀತಿರಾದ ಪ್ರಯಾಣಿಕರಿಂದ ಕಿರುಚಾಡಿದರು.

    6E2142 ವಿಮಾನವು ಶ್ರೀನಗರ ಸಮೀಪಿಸುತ್ತಿದ್ದಾಗ ಆಲಿಕಲ್ಲು ಮಳೆಯಿಂದ ತೀವ್ರ ಹಾನಿಗೆ ಒಳಗಾಯಿತು. ಆಲಿಕಲ್ಲು ಹೊಡೆತಕ್ಕೆ ವಿಮಾನದ ಮುಂಭಾಗ ಡ್ಯಾಮೇಜ್‌ ಆಯಿತು. ಆದರೆ ಸಿಬ್ಬಂದಿ ಸಂಜೆ 6:30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು. ವಿಮಾನ ಇಳಿದ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು: ಪಾಕ್‌ ಅಧಿಕಾರಿ ಮುಂದೆ ಆಸೆ ವ್ಯಕ್ತಪಡಿಸಿದ್ದ ಜ್ಯೋತಿ

    ವಿಮಾನದಲ್ಲಿದ್ದ ಎಲ್ಲ 227 ಮಂದಿಯೂ‌ ಸೇಫ್ ಆಗಿದ್ದಾರೆ. ಪೈಲಟ್‌ಗಳ‌ ಚಾಕಚಕ್ಯತೆಯಿಂದ ಎಲ್ಲ ಪ್ರಯಾಣಿಕರು ಸೇಫ್ ಆಗಿ ಬದುಕುಳಿದಿದ್ದಾರೆ. ವಿಮಾನದ ಮುಂಭಾಗ (Nose damage) ಭಾರೀ ಪ್ರಮಾಣದಲ್ಲಿ‌ ಹಾನಿಗೀಡಾಗಿದ್ದು, ಈ ಹಾನಿಯನ್ನು ನೋಡಿದವರು ಪ್ರಯಾಣಿಕರು ಪವಾಡಸದೃಶರಾಗಿ ಬದುಕುಳಿದಿದ್ದಾರೆ ಎನ್ನುವಷ್ಟು ಗಂಭೀರ ಪ್ರಮಾಣದಲ್ಲಿ ವಿಮಾನ ಹಾನಿಗೊಳಗಾಗಿದೆ.

  • ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? – ರಾಜನಾಥ್ ಸಿಂಗ್

    ಶ್ರೀನಗರ: ಪಾಕಿಸ್ತಾನದ (Pakistan) ಬಳಿ ಪರಮಾಣು ಶಸ್ತ್ರಾಸ್ತ್ರಗಳು ಇದ್ದರೆ ಸುರಕ್ಷಿತವೇ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಪ್ರಶ್ನಿಸಿದ್ದಾರೆ.

    ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವೆ ಕದನ ವಿರಾಮ ಘೋಷಣೆಯಾದ 5 ದಿನಗಳ ಬಳಿಕ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಶ್ರೀನಗರಕ್ಕೆ (Srinagar) ಭೇಟಿ ನೀಡಿದರು. ಶ್ರೀನಗರದಲ್ಲಿರುವ 15 ಕಾರ್ಪ್ಸ್ ಪ್ರಧಾನ ಕಚೇರಿಗಳಿಗೆ ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಭೇಟಿ ವೇಳೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಜೊತೆಗಿದ್ದರು.ಇದನ್ನೂ ಓದಿ: ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಪಾಕ್‌ನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿದ ದಾಳಿಯ ಕುರಿತು ಪರಿಶೀಲನೆ ನಡೆಸುತ್ತಿರುವ ವೇಳೆ ಮಾತನಾಡಿದ ಅವರು, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸಾಮರ್ಥ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದು, ಈ ಕುರಿತು ಮೇಲ್ವಿಚಾರಣೆ ನಡೆಸಲು ಅಂತರರಾಷ್ಟ್ರೀಯ ಹಸ್ತಕ್ಷೇಪಕ್ಕೆ ಕರೆ ನೀಡಿದರು. ನಮ್ಮ ಸೇನೆ ಹೊಂದಿರುವ ಗುರಿ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ. ಇಂದು ಭಾರತ ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞೆ ಮಾಡಿದ್ದು, ಅದು ಎಷ್ಟು ದೃಢವಾಗಿದೆ ಎಂದರೆ ನಾವು ಪರಮಾಣು ಬೆದರಿಕೆ ಬಗ್ಗೆಯೂ ತಲೆ ಕೆಡಿಕಿಕೊಳ್ಳುವುದಿಲ್ಲ. ಪಾಕಿಸ್ತಾನ ಎಷ್ಟು ಬೇಜವಾಬ್ದಾರಿಯಿಂದ ಬೆದರಿಕೆ ಹಾಕಿದೆ ಎಂಬುವುದನ್ನು ಇಡೀ ಜಗತ್ತು ನೋಡಿದೆ. ಆದರೆ ಇಂದು ಆ ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಇರುವುದು ಸುರಕ್ಷಿತವೇ ಎನ್ನುವ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ ಎಂದರು.

    ಭದ್ರತೆ, ಭಾರತೀಯ ಸಶಸ್ತ್ರ ಪಡೆಗಳ ಯುದ್ಧ ತಯಾರಿ, ಗಡಿಭಾಗದಲ್ಲಿ ಪಾಕ್ ಶೆಲ್ ದಾಳಿ ನಡೆಸಿದ ಪ್ರದೇಶಗಳನ್ನು ಪರಿಶೀಲಿಸಿ, ಭಯೋತ್ಪಾದನೆ ಹಾಗೂ ಭಯೋತ್ಪಾದಕರ ವಿರುದ್ಧ ಹೋರಾಡುವ ನಮ್ಮ ಯೋಧರಿಗೆ ಹಾಗೂ ಪಹಲ್ಗಾಮ್‌ನಲ್ಲಿ ಪ್ರಾಣ ಕಳೆದುಕೊಂಡ ನಾಗರಿಕರಿಗೆ ನಾನು ತಲೆಬಾಗುತ್ತೇನೆ. ಗಾಯಗೊಂಡ ಸೈನಿಕರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪಾರ್ಥಿಸುತ್ತೇನೆ ಎಂದರು.

    ಆಪರೇಷನ್ ಸಿಂಧೂರ ಇದು ಭಯೋತ್ಪಾದನೆಯ ವಿರುದ್ಧ ಭಾರತದ ಅತಿದೊಡ್ಡ ಕಾರ್ಯಾಚರಣೆ. ಭಯೋತ್ಪಾದನೆಯನ್ನು ಕೊನೆಗೊಳಿಸಲು ನಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಪಾಕ್ ಧ್ವಜ, ಸರಕುಗಳ ಮಾರಾಟ ನಿಲ್ಲಿಸುವಂತೆ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ವಾರ್ನಿಂಗ್

  • ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಅವರು ನಮ್ಮ ತಲೆಗೆ ಹೊಡೆದ್ರೆ, ನಾವು ಎದೆ ಬಗೆಯುತ್ತೇವೆ: ಪಾಕ್‌ಗೆ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ

    ಶ್ರೀನಗರ: ಅವರು ನಮ್ಮ ತಲೆಗೆ ಹೊಡೆದರೆ, ನಾವು ಎದೆ ಬಗೆಯುತ್ತೇವೆ ಎಂದು ಉಗ್ರರ ಓಲೈಸುವ ಪಾಕಿಸ್ತಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath Singh) ಖಡಕ್‌ ಸಂದೇಶ ರವಾನಿಸಿದ್ದಾರೆ.

    ಭಾರತದ ‘ಆಪರೇಷನ್ ಸಿಂಧೂರ’ (Operation Sindoor) ನಂತರ ಕಣಿವೆಗೆ ರಕ್ಷಣಾ ಸಚಿವರು ಮೊದಲ ಭೇಟಿ ನೀಡಿದರು. ಶ್ರೀನಗರದಲ್ಲಿರುವ (Srinagar) ಸೇನೆಯ 15 ಕಾರ್ಪ್ಸ್ ಪ್ರಧಾನ ಕಚೇರಿಗೆ ತೆರಳಿ ಸೇನಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಇದನ್ನೂ ಓದಿ: ಭಾರತದ ದಾಳಿ ನಂತ್ರ ಪಾಕ್‌ನಲ್ಲಿ ಪರಮಾಣು ವಿಕಿರಣ ಸೋರಿಕೆ ಆಗ್ತಿದ್ಯಾ? ಮತ್ತೆ ಜಗತ್ತಿನ ಮುಂದೆ ಬೆತ್ತಲಾದ ಪಾಕ್‌

    ಮೊದಲನೆಯದಾಗಿ, ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ವೀರ ಯೋಧರ ತ್ಯಾಗಕ್ಕೆ ನಾನು ನಮಸ್ಕರಿಸುತ್ತೇನೆ. ಅವರ ಸ್ಮರಣೆಗೆ ನಾನು ಗೌರವ ಸಲ್ಲಿಸುತ್ತೇನೆ. ಪಹಲ್ಗಾಮ್‌ನಲ್ಲಿ ಕೊಲ್ಲಲ್ಪಟ್ಟ ಮುಗ್ಧ ನಾಗರಿಕರಿಗೂ ನಾನು ಗೌರವ ಸಲ್ಲಿಸುತ್ತೇನೆ. ಗಾಯಗೊಂಡ ಸೈನಿಕರ ಶೌರ್ಯಕ್ಕೂ ನಾನು ನಮಸ್ಕರಿಸುತ್ತೇನೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

    ಇಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ನಿಮ್ಮೊಂದಿಗೆ ಇರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಆಪರೇಷನ್ ಸಿಂಧೂರ ಸಮಯದಲ್ಲಿ ನಿಮ್ಮೆಲ್ಲರ ಹೋರಾಟಕ್ಕೆ ಇಡೀ ರಾಷ್ಟ್ರವೇ ಹೆಮ್ಮೆಪಡುತ್ತದೆ. ನಿಮ್ಮ ರಕ್ಷಣಾ ಸಚಿವರಾಗುವ ಮೊದಲು, ನಾನು ಭಾರತೀಯ ನಾಗರಿಕ. ರಕ್ಷಣಾ ಸಚಿವರಾಗುವುದರ ಜೊತೆಗೆ, ಭಾರತೀಯ ಪ್ರಜೆಯಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ನಾನು ಇಲ್ಲಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ನ 14 ಸೈನಿಕರ ಹತ್ಯೆ – ಪೂರ್ತಿ ವೀಡಿಯೋ ರಿಲೀಸ್‌ ಮಾಡಿದ ಬಲೂಚಿಸ್ತಾನ

    ಪಹಲ್ಗಾಮ್ ದಾಳಿಯ ನಂತರ, ಜಮ್ಮು ಮತ್ತು ಕಾಶ್ಮೀರದ ಜನರು ಪಾಕಿಸ್ತಾನ ಮತ್ತು ಭಯೋತ್ಪಾದಕರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ನಾನು ಜಮ್ಮು ಮತ್ತು ಕಾಶ್ಮೀರದ ಜನರಿಗೆ ನಮಸ್ಕರಿಸುತ್ತೇನೆ. ಶತ್ರುಗಳನ್ನು ನಾಶಪಡಿಸಿದ ಆ ಶಕ್ತಿಯನ್ನು ಅನುಭವಿಸಲು ನಾನು ಇಲ್ಲಿದ್ದೇನೆ. ಗಡಿಯಾಚೆಗಿನ ಪಾಕಿಸ್ತಾನಿ ಚೌಕಿಗಳನ್ನು ಮತ್ತು ಬಂಕರ್‌ಗಳನ್ನು ನೀವು ನಾಶಪಡಿಸಿದ ರೀತಿ, ಶತ್ರುಗಳು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

  • ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ಶ್ರೀನಗರ, ಜಮ್ಮು ಸೇರಿ 5 ನಗರಗಳಿಗೆ ಇಂಡಿಗೋ, ಏರ್‌ ಇಂಡಿಯಾ ವಿಮಾನ ಹಾರಾಟ ರದ್ದು

    ನವದೆಹಲಿ: ಇಂಡಿಗೋ (IndiGo) ಮತ್ತು ಏರ್ ಇಂಡಿಯಾ (Air India) ಇಂದು ಶ್ರೀನಗರ, ಜಮ್ಮು, ಅಮೃತಸರ, ಚಂಡೀಗಢ ಮತ್ತು ಇತರ ಮೂರು ಗಡಿ ನಗರಗಳಿಗೆ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ.

    ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗಳಿಗೆ ದ್ವಿಮುಖ ವಿಮಾನ ಕಾರ್ಯಾಚರಣೆಯನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಇಂಡಿಗೋ ಜಮ್ಮು, ಅಮೃತಸರ, ಚಂಡೀಗಢ, ಲೇಹ್, ಶ್ರೀನಗರ ಮತ್ತು ರಾಜ್‌ಕೋಟ್‌ಗಳಿಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸಹ ರದ್ದುಗೊಳಿಸಿದೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧ ಮರಳಿ ಗಡಿಯತ್ತ – ಬೀಳ್ಕೊಟ್ಟ ಗುಬ್ಬಿ ನಾಗರಿಕರು

    ಇತ್ತೀಚಿನ ಬೆಳವಣಿಗೆ ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೇ 13ರ ಮಂಗಳವಾರ ರದ್ದುಗೊಳಿಸಲಾಗಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಿಮಗೆ ಮಾಹಿತಿ ನೀಡುತ್ತೇವೆ ಎಂದು ಏರ್ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

    ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದ ವಿಮಾನ ನಿಲ್ದಾಣಗಳು ಸೋಮವಾರ ನಾಗರಿಕ ವಿಮಾನಯಾನಕ್ಕಾಗಿ ಮತ್ತೆ ತೆರೆದಿದ್ದವು. ಕಳೆದ ವಾರ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳಲ್ಲಿ ಮೇ 15ರ ಬಳಿಕ ನಾಗರಿಕ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಳ್ಳಲಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೋಮವಾರ ಪ್ರಕಟಿಸಿದೆ. ಇದನ್ನೂ ಓದಿ: ಎರಡೂ ಕಡೆಯಿಂದ ಒಂದೇ ಒಂದು ಗುಂಡು ಹೊಡೆಯಬಾರದು: DGMO ಸಭೆಯಲ್ಲಿ ಏನಾಯ್ತು?

    ಅಧಂಪುರ, ಅಂಬಾಲಾ, ಅವಂತಿಪುರ, ಬಟಿಂಡಾ, ಬಿಕಾನೇರ್, ಹಲ್ವಾರ, ಹಿಂಡನ್, ಜೈಸಲ್ಮೇರ್, ಕಾಂಡ್ಲಾ, ಕಂಗ್ರಾ (ಗಗ್ಗಲ್), ಕೆಶೋದ್, ಕಿಶನ್‌ಗಢ್, ಕುಲು ಮನಾಲಿ (ಭುಂಟರ್), ಮುಂದ್ರಾ, ಮುಂದ್ರಾ, ಪಠಾಣ್, ಪಠಾಣ್, ಸಾರ್ವಭೌಮ, ಪಠಾಣ್, ಸಿವಿಲಿಯನ್ ಫ್ಲೈಟ್ ಕಾರ್ಯಾಚರಣೆಯನ್ನು ಪುನರಾರಂಭಿಸಲು ವಿಮಾನ ನಿಲ್ದಾಣಗಳಿಗೆ ಅನುಮತಿಸಲಾಗಿದೆ.