Tag: srimuruli

  • ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಹೊಸ ಹುಲಿ ಬರ್ತಿದೆ: ಯುವರಾಜ್ ಕುಮಾರ್ ಬೆನ್ನಿಗೆ ನಿಂತ ಶ್ರೀಮುರಳಿ

    ಶ್ರೀಮುರಳಿ (Srimuruli) ಗುಡುಗಿದ್ದಾರೆ. ಇಷ್ಟು ದಿನ ಸುಮ್ನನಿದ್ದ ಹುಲಿ ಏಕಾಎಕಿ ಗರ್ಜಿಸಿದೆ. `ದೊಡ್ಮನೆ ಯುಗ ಮುಗಿಯಿತು ಅನ್ನಬೇಡಿ. ಈಗ ಹೊಸ ಹುಲಿ ಬರುತ್ತಿದೆ. ಹುಷಾರಾಗಿರಿ…’ ಹೀಗಂತ ಧಗಧಗಿಸಿದ್ದಾರೆ ಶ್ರೀಮುರಳಿ. ಅದಕ್ಕೆ ಕಾರಣ ಏನು? ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದರು? ದೊಡ್ಮನೆ ಯುವ ನೆನಪಾಗಿದ್ದೇಕೆ? ಇನ್ನು ಮುಂದೆ ಯರ‍್ಯಾರಿಗೆ ಕಾದಿದೆ ಮಾರಿ ಹಬ್ಬ? ಅದರ ಇಂಚಿಂಚು ಮಾಹಿತಿ ನಿಮ್ಮ ಮುಂದೆ.

    Yuvaraj Kumar

    ದೊಡ್ಡಮನೆ… ಹೆಡ್ಡಾಫೀಸು… ಅಣ್ಣಾವ್ರ ಮನೆ… ಸದಾಶಿವನಗರದ ಬಂಗಲೆ… ವಾಟ್ ಎ ವರ್ಡ್ಸ್? ಸದಾಶಿವನಗರ ಅಂದರೆ ಸಾಕು ಕರುನಾಡಿನ ಯಾವುದೇ ಮೂಲೆಯಲ್ಲಿ ನಿಂತ ವ್ಯಕ್ತಿಯೂ ಹೇಳುತ್ತಿದ್ದ ಒಂದೇ ಒಂದು ಸಾಲು ಏನು ಗೊತ್ತೆ? `ಓಹ್…ಅಣ್ಣಾವ್ರು ಇರುತ್ತಾರಲ್ಲ ಆ ಏರಿಯಾನಾ?’ ಅದು ನೋಡಿ ರಾಜ್‌ಕುಮಾರ್‌ಗಿದ್ದ ತಾಕತ್ತು. ಅದು ನೋಡಿ ಅಣ್ಣಾವ್ರ ಹೆಸರಿಗಿದ್ದ ದೌಲತ್ತು. ಅದೊಂದೇ ಸಾಕು ರಾಜ್ಕುಮಾರ್ ಆಗಲೂ ಈಗಲೂ ಆಳಿ, ಬೆಳಗಿಮೆರೆಯುತ್ತಿರುವುದು. ಶಿವಣ್ಣ ಬಂದರು. ಜಾಗವನ್ನು ಭರ್ತಿ ಮಾಡಿಕೊಂಡರು. ಅಪ್ಪು ಬಂದ ಮೇಲಂತೂ ಅಣ್ಣಾವ್ರನ್ನೇ ನಾವು ನೋಡುತ್ತಿದ್ದೇವೆ ಎಂದು ಬಿಟ್ಟಿತು ಕರುನಾಡು. ಅಲ್ಲಿಗೆ ನಯಾ ರಾಜಕುಮಾರನ ಕಣ್ಣಲ್ಲಿ ಅಣ್ಣಾವ್ರ ನೆರಳು ದೀಪ ಹಚ್ಚಿತು.

    ಅಪ್ಪು (Puneeth) ನೋಡನೋಡುತ್ತಲೇ ಪುನೀತ್ ರಾಜ್‌ಕುಮಾರ್, ಅಣ್ಣಾವ್ರ ಜಾಗವನ್ನು ತುಂಬಲು ಸಜ್ಜಾದರು. ಸೇಮ್ ಟು ಸೇಮ್ ಅಣ್ಣಾವ್ರ ರೀತಿ ವಿಭಿನ್ನ ಪಾತ್ರಗಳನ್ನು ಮಾಡಿದರು. ಮಾಸ್, ಕ್ಲಾಸ್, ಫ್ಯಾಮಿಲಿ ಮ್ಯಾನ್, ಆಕ್ಷನ್ ಹೀರೋ, ಲವ್ವರ್ ಬಾಯ್…ಎಲ್ಲವೂ ಅಪ್ಪು ಸಿನಿಮಾಗಳಲ್ಲಿ ಹೊಳೆದವು. ಕರುನಾಡು ಆ ದೀಪ ಆರದಂತೆ ನೋಡಿಕೊಳ್ಳಲು ನಿರ್ಧರಿಸಿತು. ಒಂದೊಂದೇ ಸಿನಿಮಾಕ್ಕೆ ಜೀವ ತುಂಬುತ್ತಾ ತುಂಬುತ್ತಾ ಅಪ್ಪು ಕಡೇ ದಿನಗಳಲ್ಲಿ ಮೆರವಣಿಗೆ ಹೊರಟರು. ಅದೇ ರಾಜಕುಮಾರ ಸಿನಿಮಾ. ಅಕ್ಷರಶಃ ಆ ಚಿತ್ರದಲ್ಲಿ ಅಪ್ಪು ಥೇಟ್ ಅಣ್ಣಾವ್ರನ್ನೇ ಮೈ ಮೇಲೆ ಆವಾಹಿಸಿಕೊಂಡಿದ್ದರು. ನಯಾ ರಾಜಕುಮಾರ ಸಿಂಹಾಸನದಲ್ಲಿ ವಿರಾಜಮಾನರಾದರು.

    ಇಲ್ಲ ದೇವರು ಅದ್ಯಾಕೊ ಕ್ರೂರಿಯಾಗಿಬಿಟ್ಟ. ಕೆಲವೇ ಕೆಲವು ನಿಮಿಷಗಳಲ್ಲಿ ಅಪ್ಪು ಈ ಲೋಕಕ್ಕೆ ವಿದಾಯ ಹೇಳಬೇಕಾಯಿತು. ಅದು ನಂಬುವ ಮಾತಾ? ಅದು ಅರಗಿಸಿಕೊಳ್ಳುವ ವಿಷಯವಾ? ಎದೆ ಎದೆ ಬಡಿದುಕೊಂಡಿತು ಕರುನಾಡು. ವಾರಗಟ್ಟಲೆ ಒಲೆ ಊರಿಯಲಿಲ್ಲ. ನಿದ್ದೆ ಹತ್ತಲಿಲ್ಲ.  ಜೀವ ಕಳೆದುಕೊಂಡವರು ಎಷ್ಟೋ ಮಂದಿ ಸಾಕು ಈ ಜನ್ಮ ಎಂದಿದ್ದು ಸುಳ್ಳಲ್ಲ. ಅದು ಅಪ್ಪು ನೀಡಿದ ಮರ್ಮಾಘಾತ. ಅಲ್ಲಿಂದ ಕೆಲವು ಕಿಡಿಗೇಡಿಗಳು ಬೊಗಳಲು ಆರಂಭಿಸಿದವು. `ಅಣ್ಣಾವ್ರ ಸಾಮ್ರಾಜ್ಯ ಅಷ್ಟೇ…ಇನ್ನು…ಮುಗೀತು ಬಿಡಿ…’ ಎಲುಬಿಲ್ಲದ ನಾಲಿಗೆ ಅಲ್ಲಾಡಿದವು. ಅದಕ್ಕೆ ಉತ್ತರ ಎನ್ನುವಂತೆ ಶ್ರೀಮುರಳಿ ಗುಡುಗಿದ್ದಾರೆ. `ಯುವ  (Yuvaraj Kumar) ಹುಲಿ ಬರ್ತಿದೆ, ನೋಡ್ತಾ ಇರಿ…’

    ಶ್ರೀಮುರುಳಿ ಹೇಳಿದ್ದು ಇಷ್ಟೇ. ಆದರೆ ಅದರಲ್ಲಿ ಅದೆಷ್ಟೋ ವರ್ಷಗಳ ಕಿಚ್ಚು ಕೆರಳಿತ್ತು. ಮನಸೊಳಗೆ ಹುದುಗಿಸಿಟ್ಟಿದ್ದ ನೋವು, ಅಸಮಾಧಾನ, ಸಂಕಟ ಎಲ್ಲವನ್ನೂ ಅದೊಂದು ಮಾತಿನಲ್ಲಿ ಹೇಳಿ ನಿರಮ್ಮಳವಾದರು ಶ್ರೀಮುರುಳಿ. ಅಪ್ಪು ಹೋದ ಮೇಲೆ ಹಿಂದಿಂದೆ ಕುಹಕ ಮಾಡಿದವರು ಅದ್ಯಾವುದೋ ಶಾಪ ಎಂದು ಹೀಗಳೆದವರು. ಅಪ್ಪು ಹೋದ ಮೇಲೆ ನಮ್ಮದೇ ಸಾಮ್ರಾಜ್ಯ ಎಂದು ವಿಕೃತಿ ತೋರಿಸಿದವರಿಗೆ ಮುರುಳಿ ಮರಳಿ ಮರಳಿ ಹೊರಳಿ ಏಳದಂತೆ ಉತ್ತರ ನೀಡಿದ್ದಾರೆ. ಪರಿಣಾಮ ಕಣ್ಣ ಮುಂದಿದೆ. ಯುವರಾಜ್‌ಕುಮಾರ್ ಯುವನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಯಾರ‍್ಯಾರು ನಶೆ ಏರಿಸಿಕೊಂಡು ಬೊಗಳಿದ್ದರೊ ಅವರಿಗೆಲ್ಲ ಸೆಡ್ಡು ಹೊಡೆಯಲು ಸಿದ್ಧರಾಗಿದ್ದಾರೆ.

     

    ಇದು ನೋಡಿ ಶ್ರೀಮುರುಳಿ ಮಾತಿನ ಮರ್ಮ. ಬಣ್ಣದ ಲೋಕ ಅಂದರೆ ಅಸೂಯೆ, ಕೋಪ, ಅಸಹನೆ ಇದ್ದದ್ದೇ. ಆದರೆ ಅದ್ಯಾವಾಗ ದ್ವೇಷಕ್ಕೆ ತಿರುಗುತ್ತದೋ ಆಗಿನಿಂದಲೇ ಆರಂಭ ರಕ್ತಪಾತದ ಸಂಚು, ಸ್ಕೆಚ್ಚು. ಅಂಥ ದೇಹಗಳಿಗೆ ನೀರಿಳಿಸಲು ಯುವ ಮೈ ಕೊಡವಿ ಎದ್ದು ನಿಂತಿದ್ದಾರೆ. ಅಪ್ಪು ಬಿಟ್ಟು ಹೋದ ಸಿಂಹಾಸನ ಖಾಲಿಯಾಗಿದೆ. ಅದರ ಮೇಲೆ ನೀವೇ ಕೂಡಬೇಕು ಎನ್ನುತ್ತಿದ್ದಾರೆ ಜನ. ಬರೀ ಅಪ್ಪು ರಾಜ್ ಭಕ್ತಗಣ ಮಾತ್ರ ಅಲ್ಲ. ಸಕಲ ಅಸಲಿ ಕನ್ನಡಿಗರು ಇದನ್ನೆ ಜಪ ಮಾಡುತ್ತಿದ್ದಾರೆ. ಆ ಯುದ್ಧ ಆರಂಭವಾಗಲಿದೆ. ಇನ್ನೇನಿದ್ದರೂ ದೊಡ್ಮನೆ ಮೆರವಣಿಗೆಯಷ್ಟೇ ಬಾಕಿ.

  • ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಕೆಜಿಎಫ್ 2 ಬಾಕ್ಸ್ ಆಫೀಸಿನಲ್ಲಿ ಎಲ್ಲ ದಾಖಲೆಗಳನ್ನು ಹಿಂದಿಕ್ಕೆ ಮತ್ತಷ್ಟು ದಾಖಲೆಗಳನ್ನು ಮಾಡುವತ್ತ ದಾಪುಗಾಲಿಟ್ಟಿದೆ. ಆ ಯಶಸ್ಸನ್ನು ತನ್ನ ಪಾಡಿಗೆ ತಾನು ಬಿಟ್ಟು, ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಶೂಟಿಂಗ್ ನಿತ್ತ ಮುಖ ಮಾಡಿದ್ದಾರೆ. ಆದರೂ, ಈ ಮಧ್ಯ ಕೆಜಿಎಫ್ 3 ಸಿನಿಮಾದ ಬಗ್ಗೆ ಚರ್ಚೆ ಶುರುವಾಗಿತ್ತು. ಈ ವರ್ಷವೇ ಕೆಜಿಎಫ್ 3 ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದೂ ಸುದ್ದಿ ಆಗಿತ್ತು. ಆದರೆ, ಐದಾರು ವರ್ಷ ಪ್ರಶಾಂತ್ ನೀಲ್, ಕನ್ನಡ ಸಿನಿಮಾ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

    ಕೆಜಿಎಫ್ 3 ಸಿನಿಮಾಗೆ ಇದೇ ವರ್ಷದಿಂದ ಚಾಲನೆ ಸಿಗುತ್ತಿದೆ ಎಂದಾಗ, ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿ, ಈ ಸುದ್ದಿಯೇ ಸುಳ್ಳು ಎಂದು ಹೇಳಿದ್ದರು. ಸದ್ಯಕ್ಕೆ ಈ ಕುರಿತು ಯೋಚಿಸಿಲ್ಲ ಎನ್ನುವಂತೆ ಉತ್ತರಿಸಿದ್ದರು. ಈ ಮಾತಿಗೆ ಪುಷ್ಠಿ ಕೊಡುವಂತೆ ತೆಲುಗಿನಲ್ಲಿ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದೆ ಮೈತ್ರಿ ಮೂವ್ಹಿ ಮೇಕರ್ಸ್. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ತಿಂಗಳು ಅಂತ್ಯದೊಳಗೆ ಈ ಸಿನಿಮಾದ ಶೂಟಿಂಗ್ ಶುರುವಾಗುತ್ತದೆ. ಈವರೆಗೂ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳು ತಡವಾಗಿಯೇ ಬಿಡುಗಡೆ ಆಗಿದ್ದರಿಂದ, ಸಲಾರ್ ಚಿತ್ರದ ಬಿಡುಗಡೆ ಕೂಡ ಮುಂದಿನ ವರ್ಷಕ್ಕೆ ಹೋಗಬಹುದು ಎನ್ನಲಾಗುತ್ತಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಅವರು ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಸಲಾರ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಈ ಸಿನಿಮಾಗಳು ರೆಡಿಯಾಗಿ ಬಿಡುಗಡೆ ಆಗುವ ಹೊತ್ತಿಗೆ ನಾಲ್ಕೈದು ವರ್ಷಗಳೇ ಆಗಬಹುದು. ಆನಂತರ ಪ್ರಶಾಂತ್ ನೀಲ್, ಕನ್ನಡದ ಸಿನಿಮಾ ಮಾಡಲಿದ್ದಾರೆ ಎನ್ನುತ್ತಾರೆ ಅವರ ಆಪ್ತರು. ಹಾಗಂತ ಸಲಾರ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಚಿತ್ರಗಳು ಕನ್ನಡದಲ್ಲಿ ಬರುವುದಿಲ್ಲವಾ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಯಾಕೆಂದರೆ, ಎರಡೂ ಚಿತ್ರಗಳು ನೇರವಾಗಿ ಕನ್ನಡದಲ್ಲಿ ಆಗದೇ ಇದ್ದರೂ, ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗಲಿವೆ. ಇದನ್ನೂ ಓದಿ: `ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಸದಾನಂದ ವಿವಾಹ

    ಈ ಎರಡೂ ಚಿತ್ರಗಳು ಮುಗಿದ ನಂತರ ಪ್ರಶಾಂತ್ ನೀಲ್ ಮತ್ತ್ಯಾವ ಚಿತ್ರಗಳನ್ನು ಮಾಡಲಿದ್ದಾರೆ ಎನ್ನುವ ಕುತೂಹಲವಿದೆ. ಅದಕ್ಕೆ ಉತ್ತರ ಇನ್ನೂ ಸಿಗದೇ ಇದ್ದರೂ, ಅವರ ಮುಂದೆ ಇನ್ನೂ ಎರಡು ಕನ್ನಡ ಚಿತ್ರಗಳಿವೆ. ಒಂದು ಶ್ರೀಮುರುಳಿಗಾಗಿ ಅವರು ಒಂದು ಚಿತ್ರ ಮಾಡುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದು ಕೆಜಿಎಫ್ 3. ಈ ಎರಡು ಚಿತ್ರಗಳಲ್ಲಿ ಮೊದಲು ಯಾವುದು ಎನ್ನುವುದೇ ಸದ್ಯಕ್ಕಿರುವ ಕುತೂಹಲ.

  • ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಅಮ್ಮನ ಹಳೆಯ ಫೋನ್ ನೋಡೋಕಾಗ್ದೆ ಗಿಫ್ಟ್ ನೀಡಿದ ಶ್ರೀಮುರುಳಿ

    ಬೆಂಗಳೂರು: ನಟ ಶ್ರೀ ಮುರಳಿ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿದ್ದು, ಸಿನಿಮಾ ಹಾಗೂ ವೈಯಕ್ತಿಕ ಜೀವನದ ಕುರಿತು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಮ್ಮನಿಗೆ ಗಿಫ್ಟ್ ನೀಡಿದ ವಿಚಾರವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

    ಅಮ್ಮನಿಗೆ ಗಿಫ್ಟ್ ನೀಡಿರುವ ಕುರಿತು ಶ್ರೀ ಮುರುಳಿ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಸಣ್ಣ ಅಹಂ ಭಾವವಿತ್ತು. ಹೀಗಾಗಿ ಇದನ್ನು ಕ್ಲಿಯರ್ ಮಾಡುತ್ತಿದ್ದೇನೆ. ನಮ್ಮ ಅಮ್ಮ ಹೊಸ ಫೋನ್ ಕೇಳಿರಲಿಲ್ಲ. ಅವರು ದೊಡ್ಡ ಡಿಮ್ಯಾಂಡ್ ಇಟ್ಟಿದ್ದರಂತೆ. ಹೀಗಾಗಿ ಹಳೆ ಫೋನ್ ನೋಡಲು ಆಗದೆ ಅಮ್ಮನಿಗೆ ಫೋನ್ ಗಿಫ್ಟ್ ನೀಡಿದೆ. ಈಗ ಅವರ ಡಿಮ್ಯಾಂಡ್ ಕೇಳಿ ಆಶ್ಚರ್ಯವಾಯಿತು. ಸರಿ ಮಾ ಹೇಳಿದ್ದೀನಿ. ನಿಮ್ಮ ಅತ್ತೆಗೆ ಹೆಳ್ಬಿಡಮ್ಮ ಎಂದು ಅವರ ಪತ್ನಿ ವಿದ್ಯಾ ಶ್ರೀಮುರುಳಿಗೆ ಟ್ಯಾಗ್ ಮಾಡಿದ್ದಾರೆ. ಅಮ್ಮನಿಗೆ ಫೋನ್ ಕೊಡಿಸಿದ್ದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆ ಸಿನಿಮಾ ಬಳಿಕ ಮದಗಜ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. 2019ರ ಜನವರಿಯಲ್ಲೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕುರಿತು ಅಧೀಕೃತವಾಗಿ ಘೋಷಣೆ ಮಾಡಿಲಾಗಿತ್ತು. ಬಳಿಕ ಸ್ವಲ್ಪ ದಿನಗಳ ಕಾಲ ಅಪ್‍ಡೇಟ್ ಸಿಕ್ಕಿರಲಿಲ್ಲ. ನಂತರ ಚಿತ್ರದ ನಾಯಕಿಯ ಅಯ್ಕೆಯ ಕುರಿತು ಮದಗಜ ಸದ್ದು ಮಾಡಿತ್ತು. ಆಶಿಕಾ ರಂಗನಾಥ್ ರೋರಿಂಗ್ ಸ್ಟಾರ್ ಶ್ರೀಮುರುಳಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬುದು ಇದೇ ವೇಳೆ ಬಹಿರಂಗವಾಯಿತು.

    ಹಿರೋಯಿನ್ ಆಯ್ಕೆಯಾಗುತ್ತಿದ್ದಂತೆ ಶೂಟಿಂಗ್‍ಗೆ ಸಿದ್ಧತೆ ಮಾಡಿಕೊಂಡಿದ್ದ ಮದಗಜ ಚಿತ್ರತಂಡ ಉತ್ತರ ಭಾರತದತ್ತ ತೆರಳಿತ್ತು. ಮೊದಲ ಹಂತದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ಮಾಡಲಾಗಿತ್ತು. ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ಮರಳುತ್ತಿದ್ದಂತೆ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಚಿತ್ರೀಕರಣ ಅಲ್ಲಿಗೆ ನಿಂತಿದೆ. ಲಾಕ್‍ಡೌನ್ ವೇಳೆ ಶ್ರೀಮುರುಳಿ ಸಹ ಕುಟುಂಬದೊಂದಿಗೆ ಕಾಲ ಕಳೆದಿದ್ದಾರೆ.

    ಎರಡನೇ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮುಂದುವರಿಸಲು ನಿರ್ಧರಿಸಲಾಗಿತ್ತು. ಅರಮನೆ ನಗರಿಯಲ್ಲಿ ಇನ್ನೇನು ಚಿತ್ರಕರಣ ಆರಂಭಿಸುವಷ್ಟರಲ್ಲಿ ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿತು. ಬಳಿಕ ಇಡೀ ಸಿನಿಮಾ ರಂಗ ಸ್ತಬ್ಧವಾಗಿ ಎಲ್ಲರೂ ಮನೆಯಲ್ಲೇ ಕಾಲ ಕಳೆಯುವಂತಾಯಿತು. ಲಾಕ್‍ಡೌನ್ ಎಫೆಕ್ಟ್ ನಿಂದಾಗಿ ಮದಗಜ ಚಿತ್ರೀಕರಣ ಸಹ ಸ್ಥಗಿತಗೊಂಡಿತು. ಇದೀಗ ನಿಧಾನವಾಗಿ ಚಿತ್ರೀಕರಣ ಆರಂಭವಾಗಿದ್ದು, ಹಲವು ಸಿನಿಮಾಗಳ ಕಾರ್ಯ ಶುರುವಾಗಿದೆ. ಆದರೆ ಮದಗಜ ಚಿತ್ರದ ಶೂಟಿಂಗ್ ಆರಂಭಿಸುವ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ.

    ವಿಶೇಷ ಎಂಬಂತೆ ಚಿತ್ರದ ಸ್ಕ್ರಿಪ್ಟ್‍ನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಫೈನಲ್ ಮಾಡುತ್ತಿದ್ದರು. ಲಾಕ್‍ಡೌನ್ ಹಿನ್ನೆಲೆ ಕೆಜಿಎಫ್-2 ಸಿನಿಮಾ ಶೂಟಿಂಗ್ ಸಹ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಶಾಂತ್ ನೀಲ್ ಮದಗಜ ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹೇಶ್ ಕುಮಾರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರುತ್ತಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಚಿತ್ರೀಕರಣವನ್ನಾಧರಿಸಿ ಕಥೆ ಹೆಣೆಯಲಾಗಿದೆ. ಈ ಸ್ಕ್ರಿಪ್ಟ್‍ನ್ನು ಪ್ರಶಾಂತ್ ನೀಲ್ ಅವರು ಫೈನಲ್ ಮಾಡಿದ್ದಾರೆ. ಹೆಚ್ಚು ಜನರನ್ನು ತಲುಪುವ ರೀತಿಯಲ್ಲಿ ಕಟ್ಟಿಕೊಡಲಿದ್ದಾರೆ ಎಂದು ನಿರ್ಮಾಪಕ ಉಮಾಪತಿ ಮಾಹಿತಿ ನೀಡಿದ್ದರು.

  • ಗಳಿಕೆಯಲ್ಲೂ ದಾಖಲೆ ಸೃಷ್ಟಿಸಿತು ಶ್ರೀಮುರಳಿ ಭರಾಟೆ!

    ಗಳಿಕೆಯಲ್ಲೂ ದಾಖಲೆ ಸೃಷ್ಟಿಸಿತು ಶ್ರೀಮುರಳಿ ಭರಾಟೆ!

    ಬೆಂಗಳೂರು: ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟಕ್ಕೂ ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರ ಬಿಡುಗಡೆ ಪೂರ್ವದಲ್ಲಿ ಯಾವ ಖದರಿನೊಂದಿಗೆ ಸಾಗಿ ಬಂದಿತ್ತೋ ಅದನ್ನೇ ಮೀರಿಸುವಂತೆ ಬಹುತೇಕ ಕಡೆಗಳಲ್ಲಿ ಹೌಸ್ ಫುಲ್ ಪ್ರದರ್ಶನವಾಗುತ್ತಿದೆ. ಈ ಮೂಲಕ ನಾಯಕ ಶ್ರೀಮುರಳಿ ಮತ್ತು ಶ್ರೀಲೀಲಾ ಜೋಡಿ ದೊಡ್ಡ ಮಟ್ಟದಲ್ಲಿಯೇ ಕಮಾಲ್ ಮಾಡಿದೆ. ಓರ್ವ ನಿರ್ದೇಶಕನಾಗಿ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಕಂಡಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಕಣ್ಣುಗಳಲ್ಲಿಯೂ ಮಹಾ ಗೆಲುವಿನ ಖುಷಿ ಸ್ಪಷ್ಟವಾಗಿಯೇ ಫಳ ಫಳಿಸುತ್ತಿದೆ.

    ಇದು ಭರಪೂರ ಗೆಲುವು. ಒಂದು ಸಿನಿಮಾ ಒಪ್ಪಿಕೊಂಡರೆ ಅದರಲ್ಲಿನ ಪಾತ್ರಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ನಾಯಕ ನಟ, ಪ್ರತೀ ಕ್ಷಣವೂ ಸಿನಿಮಾವನ್ನೇ ಧ್ಯಾನಿಸುವ ನಿರ್ದೇಶಕ ಮತ್ತು ಪ್ರತೀ ಫ್ರೇಮಿನಲ್ಲಿಯೂ ಅದ್ಧೂರಿತನವೇ ಮಿರುಗಬೇಕೆಂಬ ಕನಸು ಹೊಂದಿರೋ ನಿರ್ಮಾಪಕರು. ಇವಿಷ್ಟರ ಮಹಾ ಸಂಗಮವಾದರೆ ಜನ ಚಪ್ಪರಿಸಿಕೊಂಡು ನೋಡುವಂಥಾ ದೃಶ್ಯಕಾವ್ಯವೊಂದು ಅಣಿಗೊಳ್ಳುತ್ತದೆ ಎಂದೇ ಅರ್ಥ. ಅದು ಭರಾಟೆ ವಿಚಾರದಲ್ಲಿಯೂ ನಿಜವಾಗಿದೆ. ಎತ್ತಲಿಂದ ಯಾವ ವಿಭಾಗಗಳತ್ತ ಕಣ್ಣು ಹಾಯಿಸಿದರೂ ಎಲ್ಲದರಲ್ಲಿಯೂ ಪರಿಪೂರ್ಣ ಕಸುಬುದಾರಿಕೆಯ ಭರಾಟೆಯೇ ಎದ್ದು ಕಾಣಿಸುತ್ತದೆ. ಅದಕ್ಕೆ ತಕ್ಕುದಾದ ಸಮ್ಮಾನವೇ ಪ್ರೇಕ್ಷಕರ ಕಡೆಯಿಂದ ಸಿಕ್ಕಿದೆ.

    ಅಷ್ಟಕ್ಕೂ ಮುಹೂರ್ತ ಕಂಡ ದಿನದಿಂದಲೇ ಭರಾಟೆಯ ಸುದ್ದಿಗಳ ಭರಾಟೆ ಶುರುವಾಗಿತ್ತು. ರಾಜಸ್ಥಾನದ ಮರುಭೂಮಿಯ ಹಿನ್ನೆಲೆಯಲ್ಲಿ ಶ್ರೀಮುರಳಿ ಭಿನ್ನವಾದ ಪೋಷಾಕಿನಲ್ಲಿ ಮಿಂಚಿದ ಫೋಟೋಗಳ ಮೂಲಕವೇ ಈ ಸಿನಿಮಾ ಕ್ರೇಜ್ ತಾರಕಕ್ಕೇರಿತ್ತು. ಅದೇ ಆವೇಗದೊಂದಿಗೆ ಸಾಗಿ ಬಂದು ಬಿಡುಗಡೆಗೊಂಡ ಭರಾಟೆಗೆ ಮೊದಲ ದಿನವೇ ರಾಜ್ಯಾದ್ಯಂತ ಸಿಕ್ಕಿದ್ದ ಭಾರೀ ಜನ ಬೆಂಬಲದ ಭರಾಟೆ. ಅದೆಂಥಾ ಅದ್ಧೂರಿ ಓಪನಿಂಗ್ ಎಂದರೆ, ಅದರ ಪರಿಣಾಮ ಗಳಿಕೆಯ ಮೊತ್ತದಲ್ಲಿಯೇ ಪ್ರತಿಫಲಿಸಿತ್ತು. ಮೊದಲ ದಿನ ಈ ಚಿತ್ರ ಮಾಡಿದ ಕಲೆಕ್ಷನ್ನು 8.36 ಕೋಟಿ. ಇದೀಗ ವಾರ ಕಳೆಯೋದರೊಳಗೇ ಆ ಮೊತ್ತ ಇಪ್ಪತೈದು ಕೋಟಿಯನ್ನೂ ಕ್ರಾಸ್ ಮಾಡಿಕೊಂಡು ಮುಂದುವರೆಯುತ್ತಿದೆ. ಎಲ್ಲ ಸೆಂಟರ್ ಗಳಲ್ಲಿಯೂ ಅದ್ಭುತವೆಂಬಂಥಾ ಪ್ರದರ್ಶನ ಕಾಣುತ್ತಿರೋ ಭರಾಟೆ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ.

  • ಬೊಬ್ಬಿರಿದ ಶ್ರೀಮುರಳಿಯ ಭರ್ಜರಿ ಭರಾಟೆ!

    ಬೊಬ್ಬಿರಿದ ಶ್ರೀಮುರಳಿಯ ಭರ್ಜರಿ ಭರಾಟೆ!

    ಬೆಂಗಳೂರು: ಶ್ರೀಮುರಳಿ ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಮಾಡಿದರೂ ಮಾಸ್ ಅವತಾರದಲ್ಲಿ ಮಿಂಚುತ್ತಾ ಬರುತ್ತಿದ್ದಾರೆ. ಉಗ್ರಂ ಚಿತ್ರದ ಮೂಲಕ ಶುರವಾಗಿದ್ದ ಆ ಹಂಗಾಮಾ ರಥಾವರ ಮತ್ತು ಮಫ್ತಿ ಮೂಲಕ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಹೀಗೆ ಸಾಗಿ ಬಂದಿರೋ ಶ್ರೀಮುರಳಿ ಭರಾಟೆಯಲ್ಲಿಯೂ ಮತ್ತದೇ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಈ ಹಿಂದೆಯೇ ಸಾಬೀತಾಗಿತ್ತು. ಆದರೆ ಟ್ರೇಲರ್ ಮೂಲಕ ಕಾಣಿಸಿದ್ದು ಮಾತ್ರ ಮತ್ತೊಂದು ಥರದ ಛಾಯೆ. ಯಾವ ಕ್ರಿಯಾಶೀಲ ನಟರೂ ಮತ್ತೆ ಮತ್ತೆ ಒಂದೇ ಥರದ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಅಂಥಾ ಬದಲಾವಣೆಯ ಪರ್ವ ಕಾಲದಲ್ಲಿದ್ದ ಶ್ರೀಮುರಳಿಯೀಗ ಅತ್ಯಂತ ಭಿನ್ನವಾದ ಕಥೆ ಮತ್ತು ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಅಂಥಾ ಬದಲಾವಣೆಗೆ ಕಾರವಾಗಿರೋ ‘ಭರಾಟೆ’ ಇದೀಗ ಶುರುವಾಗಿದೆ.

    ಇದು ಬೊಬ್ಬಿರಿದು ಅಬ್ಬರಿಸಿದ ಶ್ರೀಮುರಳಿಯ ಭರ್ಜರಿ ಭರಾಟೆ ಅಂತ ನಿಸ್ಸಂಶಯವಾಗಿ ಯಾರಿಗಾದರೂ ಅನ್ನಿಸದಿರೋದಿಲ್ಲ. ಅಂಥಾ ರುಚಿಕಟ್ಟಾದ ಚಿತ್ರವನ್ನೇ ಚೇತನ್ ಕುಮಾರ್ ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೂ ಇದೊಂದು ವಿಶೇಷವಾದ ಕಥೆಯ ಚಿತ್ರ ಎಂಬ ಬಗ್ಗೆ ಚಿತ್ರತಂಡ ಸುಳಿವುಗಳನ್ನು ಬಿಟ್ಟು ಕೊಡುತ್ತಲೇ ಬಂದಿತ್ತು. ಅದಕ್ಕೆ ತಕ್ಕುದಾದ ಕಥೆಯೊಂದಿಗೆ ಈ ಚಿತ್ರ ಶ್ರೀಮುರಳಿಯವರನ್ನು ಹಲವಾರು ಶೇಡುಗಳಲ್ಲಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುವಲ್ಲಿ ಗೆದ್ದಿದೆ. ಥರ ಥರದ ಶೇಡುಗಳಿರೋ ಪಾತ್ರದ ಮೂಲಕ ಶ್ರೀಮುರಳಿ ಕೂಡಾ ಎಲ್ಲರೂ ಅಚ್ಚರಿಗೊಳ್ಳುವಂಥಾ ಅಭಿನಯ ನೀಡಿದ್ದಾರೆ.

    ಭರಾಟೆಯ ಕಥೆ ತೆರೆದುಕೊಳ್ಳುವುದೇ ರಾಜಸ್ಥಾನದಿಂದ. ಇಲ್ಲಿ ಶ್ರೀಮುರಳಿ ಜಗನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಈತನಿಗೆ ನಾಟಿ ಔಷಧದ ವಿದ್ಯೆ ಎಂಬುದು ತಂದೆಯಿಂದ ಬಂದ ಬಳುವಳಿ. ನಾನಾ ರೀತಿಯ ಕಾಯಿಲೆಗಳಿಗೆ ಈ ಮೂಲಕವೇ ಔಷಧಿ ಕೊಡುತ್ತಾ ಅದರ ನಡುವೆಯೇ ಪ್ರವಾಸಿಗರ ಪಾಲಿಗೆ ಗೈಡ್ ಆಗಿಯೂ ಜನ್ ಕಾರ್ಯ ನಿರ್ವಹಿಸುತ್ತಿರುತ್ತಾನೆ. ಈ ನಾಟಿ ವೈದ್ಯ ಮತ್ತು ಗೈಡ್ ಕೆಲಸದ ನಡುವೆಯೇ ಜನುಮಾಂತರದ್ದೆಂಬಂತಿರೋ ವೈಶಮ್ಯದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ. ಇದೇ ಹೊತ್ತಿನಲ್ಲಿ ಜಗನ್ ಕರ್ನಾಟಕಕ್ಕೆ ಪ್ರವೇಶಿಸುವಂಥಾ ಸಂದರ್ಭ ಸೃಷ್ಟಿಯಾಗುತ್ತೆ. ಅಲ್ಲೆಯೇ ತಾಜಸ್ಥಾನದಲ್ಲಿ ಗೈಡ್ ಆಗಿದ್ದಾಗ ಸಿಕ್ಕಿದ್ದ ಹುಡುಗಿ ಮತ್ತೆ ಮುಖಾ ಮುಖಿಯಾಗುತ್ತಾಳೆ.

    ಅಲ್ಲಿಂದ ಗಾಢ ಪ್ರೇಮ ಮತ್ತು ನಖಶಿಖಾಂತ ಉರಿದು ಬೀಳುವಂಥಾ ದ್ವೇಷದ ಕಥಾನಕ ಗರಿಗೆದರಿಕೊಳ್ಳುತ್ತದೆ. ಅಲ್ಲಿಂದಾಚೆಗೆ ರೋಮ ರೋಮವೂ ನಿಮಿರಿಕೊಳ್ಳುವಂತಾ ಮಾಸ್ ಸನ್ನಿವೇಶಗಳು, ರೋಮಾಂಚನಗೊಳಿಸೋ ಪ್ರೇಮ ಸನ್ನಿವೇಶಗಳು ಮತ್ತು ಮನಮಿಡಿಯುವ ಕೌಟುಂಬಿಕ ಕಥನದೊಂದಿಗೆ ಕಥೆ ಮುಂದುವರೆಯುತ್ತೆ. ಮೊದಲೇ ತಿಳಿದಿರುವಂತೆ ಇಲ್ಲಿ ಖಳ ನಟರ ದಂಡೇ ಇದೆ. ಅವರೆಲ್ಲರ ಪಾತ್ರಗಳನ್ನೂ ಕೂಡಾ ಚೇತನ್ ಕುಮಾರ್ ಅಷ್ಟೇ ಆಸ್ಥೆಯಿಂದ ಎದುರಾಳಿಗಳ ಎದೆ ಅದುರುವಂತೆ ಕಟ್ಟಿ ಕೊಟ್ಟಿದ್ದಾರೆ. ಇದೊಂದು ಸಂಕೀರ್ಣವಾದ ಕಥೆ. ಒಂದೆಳೆ ಆಚೀಚೆಯಾದರೂ ಗೊತ್ತುಗುರಿಗಳೆಲ್ಲ ಚೆದುರಿ ಚೆಲ್ಲಾಪಿಲ್ಲಿಯಾಗುವ ದುರಂತವೆದುರಾಗುತ್ತಿತ್ತು.

    ಆದರೆ ಚೇತನ್ ಕುಮಾರ್ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಯಾವ ಗೊಂದಲ ಗೋಜಲುಗಳಿಗೂ ಆಸ್ಪದವಿಲ್ಲದಂತೆ ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಭರಾಟೆಯನ್ನು ಕಟ್ಟಿ ಕೊಟ್ಟಿದ್ದಾರೆ. ಜಗನ್ ಆಗಿ ಶ್ರೀಮುರಳಿ ನಟನೆಯ ವಿರಾಟ್ ರೂಪವನ್ನೇ ಪ್ರದರ್ಶಿಸಿದ್ದಾರೆ. ಕಿಸ್ ಮೂಲಕ ಗಮನ ಸೆಳೆದಿದ್ದ ಶ್ರೀಲೀಲಾ ಮಹತ್ವದ ತಮ್ಮ ಪಾತ್ರವನ್ನು ಸಮರ್ಥವಾಗಿಯೇ ನಿಭಾಯಿಸಿದ್ದಾರೆ. ಸಾಯಿಕುಮಾರ್ ಬ್ರದರ್ಸ್ ಸೇರಿದಂತೆ ಎಲ್ಲರ ಪಾತ್ರಗಳೂ ನೆನಪಿಟ್ಟುಕೊಳ್ಳುವಂತಿವೆ. ಕ್ಯಾಮೆರಾ ವರ್ಕ್, ಹಿನ್ನೆಲೆ ಸಂಗೀತ, ಸಂಕಲನ ಸೇರಿದಂತೆ ಎಲ್ಲವೂ ಫುಲ್ ಮಾಕ್ರ್ಸ್ ತೆಗೆದುಕೊಳ್ಳಬಹುದಾದ ಶೈಲಿಯಲ್ಲಿಯೇ ಮೂಡಿ ಬಂದಿವೆ. ಈ ಮೂಲಕ ನಿರ್ದೇಶಕ ಚೇತನ್ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ನಿರ್ಮಾಪಕ ಸುಪ್ರೀತ್ ಅವರ ಶ್ರದ್ಧೆಗೆ, ಕನಸುಗಾರಿಕೆಗೆ ಪ್ರತೀ ಫ್ರೇಮುಗಳಲ್ಲಿಯೂ ಸಾಕ್ಷಿಗಳು ಸಿಗುತ್ತವೆ. ಒಟ್ಟಾರೆಯಾಗಿ ಭರಾಟೆ ಫ್ಯಾಮಿಲಿ ಪ್ಯಾಕೇಜಿನಂತೆ ಮೂಡಿ ಬಂದಿದೆ.

    ರೇಟಿಂಗ್ : 4/5 

  • ಭರಾಟೆ: ಮಫ್ತಿ ನಂತ್ರ ಎದೆ ಅದುರಿಸೋ ಅವತಾರವೆತ್ತಿದ ರೋರಿಂಗ್ ಸ್ಟಾರ್!

    ಭರಾಟೆ: ಮಫ್ತಿ ನಂತ್ರ ಎದೆ ಅದುರಿಸೋ ಅವತಾರವೆತ್ತಿದ ರೋರಿಂಗ್ ಸ್ಟಾರ್!

    ಬೆಂಗಳೂರು: ಉಗ್ರಂ ಎಂಬ ಚಿತ್ರದ ಮೂಲಕವೇ ಪಕ್ಕಾ ಮಾಸ್ ಇಮೇಜ್ ಪಡೆದುಕೊಂಡು ಆ ನಂತರವೂ ಅದರಲ್ಲಿಯೇ ಮಿಂಚುತ್ತಾ ಮುನ್ನಡೆಯುತ್ತಿರುವವರು ರೋರಿಂಗ್ ಸ್ಟಾರ್ ಶ್ರೀಮುರಳಿ. ಆ ನಂತರದಲ್ಲಿ ಮಫ್ತಿಯಲ್ಲಿ ಮತ್ತದೇ ತಣ್ಣಗಿನ ಪರಾಕ್ರಮದ ಮೂಲಕ ಅಭಿಮಾನಿಗಳನ್ನು ಖುಷಿಗೊಳಿಸಿದ್ದ ಅವರೀಗ ಭರಾಟೆಯ ಅಬ್ಬರದಲ್ಲಿ ಮತ್ತೊಮ್ಮೆ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಮುಂದಾಗಿದ್ದಾರೆ. ಚಿತ್ರೀಕರಣ ಶುರುವಾದಂದಿನಿಂದ ಈ ಕ್ಷಣದವರೆಗೂ ಒಂದೇ ಆವೇಗದ ಪ್ರಚಾರ ಪಡೆದುಕೊಳ್ಳುತ್ತಿರೋ ಭರಾಟೆ ಶ್ರೀಮುರಳಿ ಇಮೇಜನ್ನು ಮತ್ತಷ್ಟು ಮಿರುಗುವಂತೆ ಮಾಡೋ ಲಕ್ಷಣಗಳೂ ಇವೆ.

    ಯಾವುದೇ ಚಿತ್ರಗಳಾದರೂ ದೃಶ್ಯ ಕಾವ್ಯವಾಗೋದು ನಿರ್ಮಾಪಕರ ಕನಸುಗಾರಿಕೆಯಿಂದಲೇ. ಭರಾಟೆ ವಿಚಾರದಲ್ಲಿಯೂ ಅದು ನಿಜವಾಗಿದೆ. ನಿರ್ಮಾಪಕ ಸುಪ್ರೀತ್ ಅಂತಹ ಕನಸಿನೊಂದಿಗೆ, ವ್ಯವಹಾರದ ಮನಸ್ಥಿತಿಯನ್ನೆಲ್ಲ ಬದಿಗಿಟ್ಟು ಅಪ್ಪಟ ಕಲಾ ಪ್ರೇಮದಿಂದಲೇ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೂ ಚೇತನ್ ಕುಮಾರ್‍ಗಾಗಿ ಈ ಸಿನಿಮಾ ನಿರ್ಮಾಣ ಮಾಡಿರೋದಾಗಿ ಹೇಳಿಕೊಳ್ಳುತ್ತಾ ಬಂದಿರೋ ಸುಪ್ರೀತ್ ಪಾಲಿಗೆ ಭರಾಟೆ ಮಹಾ ಕನಸು. ಈ ಕಾರಣದಿಂದಲೇ ರೋರಿಂಗ್ ಸ್ಟಾರ್ ಮತ್ತಷ್ಟು ಅಬ್ಬರದೊಂದಿಗೆ ಮಿಂಚುವಂತಾಗಿದೆ.

    ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಮುಹೂರ್ತದ ದಿನದಿಂದಲೇ ಮಿರುಗಲಾರಂಭಿಸಿದ್ದಾರೆ. ಕಾಸ್ಟ್ಯೂಮ್ ಸೇರಿದಂತೆ ಎಲ್ಲದರಲ್ಲಿಯೂ ಅವರು ಈ ಹಿಂದಿನದಕ್ಕಿಂತಲೂ ಭಿನ್ನವಾದ ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡಿದ್ದಾರೆ. ರಾಜಸ್ಥಾನಿ ಶೈಲಿಯ ಉಡುಗೆ ತೊಡುಗೆಯಿಂದ ಆರಂಭವಾಗಿ ಟ್ರೇಲರುಗಳಲ್ಲಿ ಖಡಕ್ ಲುಕ್ಕಲ್ಲಿ ಕಾಣಿಸಿಕೊಳ್ಳುವವರೆಗೂ ರೋರಿಂಗ್ ಸ್ಟಾರ್ ಅಬ್ಬರದ ಭರಾಟೆ ಅನೂಚಾನವಾಗಿಯೇ ಮುಂದುವರೆದಿದೆ. ಈ ಕಾರಣದಿಂದಲೇ ಶ್ರೀಮುರಳಿ ಅಭಿಮಾನಿಗಳ ಪಾಲಿಗೆ ದಸರೆ ಮತ್ತು ದೀಪಾವಳಿಯ ಮಧ್ಯೆ ಮತ್ತೊಂದು ಹಬ್ಬದಂತೆ ಭರಾಟೆ ತೆರೆ ಕಾಣುತ್ತಿದೆ.