Tag: srimurali

  • ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಸೆಟ್‍ನಲ್ಲಿ ಕಿಚ್ಚನನ್ನು ಭೇಟಿ ಮಾಡಿದ ಶ್ರೀಮುರಳಿ

    ಹೈದರಾಬಾದ್: ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಹೈದರಾಬಾದ್‍ನ ರಾಮೋಜಿ ಸಿಟಿಯಲ್ಲಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದರು. ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ ನಂತರ ಮುರಳಿ ಅವರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

    ಶ್ರೀಮುರಳಿ ಅವರು ತಮ್ಮ ಮುಂದಿನ ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸೆಂಟರ್ ಗೆ ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ತಮ್ಮ ‘ಪೈಲ್ವಾನ್’ ಚಿತ್ರದ ಚಿತ್ರೀಕರಣವನ್ನು ರಾಮೋಜಿ ಸಿಟಿಯಲ್ಲಿ ನಡೆಸುತ್ತಿದ್ದಾರೆ. ಈ ವೇಳೆ ಇಬ್ಬರು ನಟರು ಭೇಟಿ ಆಗಿದ್ದಾರೆ. ಇದನ್ನೂ ಓದಿ: ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

    ಶ್ರೀಮುರಳಿ ಅವರು ಕಿಚ್ಚ ಸುದೀಪ್ ಹಾಗೂ ನಟಿ ತಾರಾ ಅವರನ್ನು ಭೇಟಿ ಮಾಡಿರುವ ಫೋಟೋಗಳನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. “ಭರಾಟೆ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಆತ್ಮೀಯ ಗೆಳೆಯ ಕಿಚ್ಚ ಸುದೀಪ್ ಅವರನ್ನು ‘ಪೈಲ್ವಾನ್’ ಸೆಟ್‍ನಲ್ಲಿ ಭೇಟಿ ಮಾಡಿದೆ. ತುಂಬಾ ದಿನಗಳ ನಂತರ ಅವರನ್ನು ಭೇಟಿ ಮಾಡಿ ಖುಷಿಯಾಯಿತು. ನಾವಿಬ್ಬರು ಖುಷಿಯ ಕ್ಷಣಗಳನ್ನು ಕಳೆದವು. ಇಂದು ಸುದೀಪ್ ಅವರು ಭರಾಟೆ ಸೆಟ್‍ಗೆ ಭೇಟಿ ನೀಡಿದ್ದಾರೆ” ಎಂದು ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ.

    ಶ್ರೀಮುರಳಿ ಅವರ ಟ್ವೀಟ್‍ಗೆ ಕಿಚ್ಚ ಸುದೀಪ್ ಅವರು, “ನನಗೂ ಯಾವಾಗಲೂ ಖುಷಿ ಆಗುತ್ತದೆ. ಭರಾಟೆ ಚಿತ್ರದ ಟೀಸರ್ ಅದ್ಭುತವಾಗಿ ಕಾಣಿಸುತ್ತದೆ. ಭರಾಟೆ ಚಿತ್ರತಂಡಕ್ಕೆ ಶುಭಾಶಯಗಳು” ಎಂದು ರೀ-ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

    ಟಾಲಿವುಡ್ ಪ್ರಿನ್ಸ್ ಮಹೇಶ್ ಜೊತೆ ರೋರಿಂಗ್ ಸ್ಟಾರ್ ಮುರಳಿ

    ಹೈದರಾಬಾದ್: ಸ್ಯಾಂಡಲ್‍ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಜೊತೆಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶ್ರೀಮುರಳಿ ಅವರು ತಮ್ಮ ಮುಂದಿನ ಚೇತನ್ ಕುಮಾರ್ ನಿರ್ದೇಶನದ ‘ಭರಾಟೆ’ ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸೆಂಟರ್ ಗೆ ಹೋಗಿದ್ದಾರೆ. ಮಹೇಶ್ ಬಾಬು ಅವರು ಕೂಡ ಅಲ್ಲಿಯೇ ತಮ್ಮ ‘ಮಹರ್ಷಿ’ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದರು. ಈ ವೇಳೆ ಇಬ್ಬರು ಭೇಟಿ ಆಗಿದ್ದಾರೆ.

    ಮುರಳಿ ಹಾಗೂ ಮಹೇಶ್ ಭೇಟಿ ಆಗಿ ಸುಮಾರು ಒಂದು ಗಂಟೆವರೆಗೂ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ ಅವರು ಸ್ಯಾಂಡಲ್‍ವುಡ್ ಚಿತ್ರಗಳ ಟ್ರೆಂಡ್ ಬದಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಶ್ರೀಮುರಳಿ ಅವರಿಗೆ ಮಹೇಶ್ ಬಾಬು ಅವರ ಪರಿಚಯವಿದೆ. ಈ ಹಿಂದೆ ಇಬ್ಬರು ಹಲವಾರು ಬಾರಿ ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಇಬ್ಬರು ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿ ಆಗಿದ್ದಾರೆ. ಈ ವೇಳೆ ಮಹೇಶ್ ಅವರು ಮುರಳಿ ನಟಿಸಿದ ‘ಉಗ್ರಂ’ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

    ಶ್ರೀಮುರಳಿ ಹಾಗೂ ಮಹೇಶ್ ಬಾಬು ಅವರ ಜೊತೆಗಿರುವ ಫೋಟೋದಲ್ಲಿ ನಟ ಸಾಯಿ ಕುಮಾರ್ ಅವರು ಕೂಡ ಕಾಣಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೀದಿಗೆ ತಳ್ಳಲ್ಪಟ್ಟ ತಾಯಿಯ ಕಷ್ಟಕ್ಕೆ ಮರುಗಿದ ರೋರಿಂಗ್ ಸ್ಟಾರ್

    ಬೀದಿಗೆ ತಳ್ಳಲ್ಪಟ್ಟ ತಾಯಿಯ ಕಷ್ಟಕ್ಕೆ ಮರುಗಿದ ರೋರಿಂಗ್ ಸ್ಟಾರ್

    ಮಂಡ್ಯ: ಮಕ್ಕಳಿಂದ ಬೀದಿಗೆ ತಳ್ಳಲ್ಪಟ್ಟ ತಾಯಿಯೊಬ್ಬರು ಭಿಕ್ಷೆ ಬೇಡುತ್ತಿದ್ದನ್ನು ಕಂಡ ನಟ ಶ್ರೀಮುರಳಿ, ಮಹಿಳೆ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿಸಿದ್ದಾರೆ.

    ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಶೂಟಿಂಗ್ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದೆ. ಈ ವೇಳೆ ಸ್ನಾನಘಟ್ಟದ ಬಳಿ ಮಹಿಳೆಯೊಬ್ಬರು ಭಿಕ್ಷೆ ಬೇಡುತ್ತಾ ಕುಳಿತಿದ್ದರು. ಇದನ್ನು ಕಂಡ ಶ್ರೀಮುರಳಿ ಮಹಿಳೆಯ ಬಳಿ ತೆರಳಿ ಆತ್ಮೀಯವಾಗಿ ಮಾತನಾಡಿದ್ದಾರೆ. ಶ್ರೀಮುರುಳಿ ಅವರ ಆತ್ಮೀಯ ಮಾತು ಕಂಡ ಮಹಿಳೆ ತನ್ನ ಕಷ್ಟದ ಜೀವನವನ್ನು ಹೇಳಿ ಕಣ್ಣೀರಿಟ್ಟಿದ್ದಾರೆ.

    ಮಹಿಳೆಯ ಕಣ್ಣೀರು ಕಂಡ ಶ್ರೀಮುರುಳಿ ಅವರು ತನ್ನೊಂದಿಗೆ ಬರುವಂತೆ ಆಹ್ವಾನವನ್ನು ನೀಡಿದರು. ಆದರೆ ಶ್ರೀಮುರಳಿ ಅವರ ಆಹ್ವಾನವನ್ನು ಮಹಿಳೆ ನಯವಾಗಿ ತಿರಸ್ಕರಿಸಿದರು. ಬಳಿಕ ಮಹಿಳೆಗೆ ಸಹಾಯ ಮಾಡುವ ಭರವಸೆಯನ್ನು ನೀಡಿದರು.

    ಈ ಹಿಂದೆಯೂ ಇಂತಹ ಅಸಹಾಯ ಮಹಿಳೆಯ ಬಳಿ ಶ್ರೀಮುರಳಿ ಕುಳಿತು ಆತ್ಮೀಯವಾಗಿ ಮಾತನಾಡಿದ್ದರು. ಅವರ ಕಷ್ಟ ಸುಖ ಆಲಿಸುವ ಮೂಲಕ ನೋವನ್ನು ಮರೆಯುವಂತೆ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಶ್ರೀಮುರಳಿ ಅವರ ಪ್ರಯತ್ನಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇಂತಹ ತಾಯಿಯರು, ವೃದ್ಧರಿಗೆ ನಿಮ್ಮ ಸಮಯ ಕೊಟ್ಟು ಸುಖ ದುಃಖ ವಿಚಾರಿಸಿದ್ದಕ್ಕೆ ಧನ್ಯವಾದ. ಅವರಿಗೆ ನೀವು ಮಾತನಾಡಿಸಿದ ದಿನ ಸ್ಮರಣೀಯವಾಗಿರುತ್ತದೆ ಎಂದು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಕ್ರಾಂತಿ ಹಬ್ಬದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀಮುರಳಿ ವಿಶೇಷ ಪೂಜೆ

    ಸಂಕ್ರಾಂತಿ ಹಬ್ಬದಂದು ಚಾಮುಂಡಿ ಬೆಟ್ಟದಲ್ಲಿ ಶ್ರೀಮುರಳಿ ವಿಶೇಷ ಪೂಜೆ

    ಮೈಸೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ‘ಮದಗಜ’ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪೂಜೆಯನ್ನು ಮಾಡಿಸಿದೆ.

    ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದಗಜ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪ್ರತಿಗಳಿಗೆ ವಿಶೇಷ ಪೂಜೆ ಮಾಡಿಸಲಾಗಿದೆ. ಪೂಜೆ ಮಾಡಿಸಿದ ಬಳಿಕ ಚಿತ್ರತಂಡ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರದ ಕೆಲಸವನ್ನು ಆರಂಭಿಸಿದೆ. ರೋರಿಂಗ್ ಸ್ಟಾರ್ ಶ್ರೀಮುರುಳಿ ಮದಗಜ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ.

    ಭರಾಟೆ ಚಿತ್ರದ ನಂತರ ಶ್ರೀಮುರುಳಿ ಮದಗಜ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ದಿನ ಶ್ರೀಮುರಳಿ ಅವರು ನಿರ್ದೇಶಕ, ನಿರ್ಮಾಪಕರ ಜೊತೆ ಸೇರಿ ಚಿತ್ರದ ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಮಾಡಿಸಿದ್ದಾರೆ. ಶ್ರೀಮುರಳಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ವೇಳೆ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

    ಇದೇ ವೇಳೆ ಶ್ರೀಮುರಳಿ ಮಾಧ್ಯಮದ ಜೊತೆ ಮಾತನಾಡಿ, “ಭರಾಟೆ ಚಿತ್ರದ ಚಿತ್ರೀಕರಣ ಶೇ.40 ರಷ್ಟು ನಡೆದಿದೆ. ಈಗ ಮದಗಜ ಚಿತ್ರದ ಶೂಟಿಂಗ್ ಶುರುವಾಗುತ್ತಿದೆ. ಇಂದು ಸ್ಕ್ರಿಪ್ಟ್ ಹಾಗೂ ಲಿರಿಕ್ಸ್ ಪೂಜೆ ಅಮ್ಮನ ಸನ್ನಿಧಾನದಲ್ಲಿ ನೆರೆವೇರಿಸಿದ್ದೇವೆ. ಸಂಕ್ರಾಂತಿ ಹಬ್ಬದ ದಿನ ಅಮ್ಮನ ಸನ್ನಿಧಾನದಲ್ಲಿ ಪೂಜೆ ನಡೆಯುತ್ತಿರುವುದು ಖುಷಿ ಆಗುತ್ತಿದೆ. ಚಿತ್ರದ ಔಟ್‍ಪುಟ್ ತಯಾರಿ ಆಗುವುದ್ದಕ್ಕೆ ಇನ್ನೂ ಮೂರು ತಿಂಗಳು ಬೇಕು. ಭರಾಟೆ ಸಿನಿಮಾ ಮುಗಿದ ಮೇಲೆ ಮದಗಜ ಚಿತ್ರ ಶುರುವಾಗಲಿದೆ” ಎಂದು ಹೇಳುತ್ತಾ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ತಿಳಿಸಿದರು”.

    ಮದಗಜ ಚಿತ್ರವನ್ನು ‘ಅಯೋಗ್ಯ’ ಚಿತ್ರದ ಖ್ಯಾತಿಯ ನಿರ್ದೇಶಕ ಮಹೇಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಹೆಬ್ಬುಲಿ’ ಚಿತ್ರದ ನಿರ್ಮಾಪಕ ಉಮಾಪತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ‘ತ್ರಿ’ ಬ್ರದರ್ಸ್ ಸಂಗಮ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇದೇ ಮೊದಲ ಬಾರಿಗೆ ಮೂವರು ಸಹೋದರರು ಒಂದೇ ಸಿನಿಮಾ ಅಭಿನಯಿಸುತ್ತಿದ್ದು, ಕಮಾಲ್ ಮಾಡಲು ಬರುತ್ತಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಮೂವರು ಸಹೋದರರಿದ್ದು, ಇದುವರೆಗೂ ಒಂದೇ ಸಿನಿಮಾದಲ್ಲಿ ಅಭಿನಯಿಸಿಲ್ಲ. ಆದರೆ ಡೈಲಾಗ್ ಕಿಂಗ್ ಸಾಯಿ ಕುಮಾರ್, ಆರ್ಮುಗಂ ಖ್ಯಾತಿಯ ರವಿ ಶಂಕರ್ ಹಾಗೂ ಡೈರೆಕ್ಟರ್ ಕಮ್ ಆ್ಯಕ್ಟರ್ ಅಯ್ಯಪ್ಪ ಪಿ ಶರ್ಮ ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸಿನಿಮಾದಲ್ಲಿ ಈ ಮೂವರು ಸಹೋದರರು ಅಭಿನಯಿಸುತ್ತಿದ್ದಾರೆ. ಭರಾಟೆ ಸಿನಿಮಾದ ಮುಖ್ಯ ಪಾತ್ರದಲ್ಲಿ ರವಿ ಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಾಯಿಕುಮಾರ್ ಹಾಗೂ ಅಯ್ಯಪ್ಪ ಕೂಡ ಇಬ್ಬರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ರವಿ ಶಂಕರ್ ಹಾಗೂ ಅಯ್ಯಪ್ಪ ಇಬ್ಬರ ಶೂಟಿಂಗ್ ಸಿನಿಮಾದಲ್ಲಿ ಸಂಪೂರ್ಣಗೊಂಡಿದೆ. ಇನ್ನೂ ನಟ ಸಾಯಿ ಕುಮಾರ್ ಪಾತ್ರದ ಸಿನಿಮಾ ಚಿತ್ರೀಕರಣ ನಡೆಯಬೇಕಿದೆ.

    ಮೂವರು ಸಹೋದರರು ಸ್ಯಾಂಡಲ್‍ವುಡ್ ಮಾತ್ರವಲ್ಲದೇ ಬೇರೆ ಭಾಷೆಯಲ್ಲೂ ಅಭಿನಯಿಸಿದ್ದಾರೆ. ಅಯ್ಯಪ್ಪ ಅವರು ಇತ್ತೀಚೆಗೆ ಬಿಡುಗಡೆಯಾದ ನಟ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

    ಭರಾಟೆ ಸಿನಿಮಾ ‘ಬಹದ್ದೂರ್’ ಸಿನಿಮಾದ ನಿರ್ದೇಶಕ ಚೇತನ್ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿದೆ. ಈಗಾಗಲೇ ಸಿನಿಮಾದಲ್ಲಿ ನಟ ಶ್ರೀಮುರಳಿ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಿದ್ದು, ಡೈಲಾಗ್ ಮೂಲಕವೇ ಸಾಕಷ್ಟು ಸದ್ದು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ- ಅಭಿಮಾನಿಗಳಿಗೆ ಸಿಗಲಿದೆ ಗಿಫ್ಟ್

    37ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರೀಮುರಳಿ- ಅಭಿಮಾನಿಗಳಿಗೆ ಸಿಗಲಿದೆ ಗಿಫ್ಟ್

    ಬೆಂಗಳೂರು: ಸ್ಯಾಂಡಲ್‍ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

    ನಟ ಶ್ರೀ ಮುರಳಿ ಅವರು ತಮ್ಮ ಅಭಿಮಾನಿಗಳ ಜೊತೆ ಮನೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ತಮ್ಮ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಜೊತೆ ಅವರ ಕುಟುಂಬವರು ಕೂಡ ಇದ್ದರು. ಎಲ್ಲರೂ ಸೇರಿ ಒಟ್ಟಿಗೆ ಕೇಕ್ ಕಟ್ ಮಾಡಿ ಶ್ರೀ ಮುರುಳಿಗೆ ಶುಭಾಶಯವನ್ನು ತಿಳಿಸಿದ್ದಾರೆ.

    ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ನೀಡಿದ ಉಡುಗೊರೆಯನ್ನು ಓಪನ್ ಮಾಡಿದ್ದಾರೆ. ಅಭಿಮಾನಿಗಳು ನಟ ಶ್ರೀಮುರಳಿ ಅಭಿನಯದ ‘ಭರಾಟೆ’ ಸಿನಿಮಾದ ಫೋಟೋವನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ಬಳಿಕ ನಟ ಶ್ರೀಮುರಳಿ ಮಾತನಾಡಿ, ಹುಟ್ಟುಹಬ್ಬ ಸಂಪೂರ್ಣವಾಗಿ ಅಭಿಮಾನಿಗಳಿಗೆ ಸಲ್ಲಬೇಕು. ಪ್ರತಿಯೊಂದು ಚಿತ್ರವನ್ನೂ ನಾನು ಪ್ರೀತಿಸುತ್ತೇನೆ. ಭರಾಟೆ ಮತ್ತು ಮದಗಜ ಫಸ್ಟ್ ಲುಕ್ ಬಿಡುಗಡೆ ಮಾಡುತ್ತಿದ್ದೇವೆ. ಕೆಜಿಎಫ್ ಮುಗಿದ ಮೇಲೆ ಉಗ್ರಂವೀರಂ ಶುರು ಮಾಡುತ್ತೇನೆ ಎಂದು ಹೇಳಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಇಂದು ಶ್ರೀ ಮುರಳಿ ಹುಟ್ಟುಹಬ್ಬದ ಪ್ರಯುಕ್ತ ‘ಭರಾಟೆ’ ಸಿನಿಮಾ ಮೇಕಿಂಗ್ ಟೀಸರ್ ರಿಲೀಸ್ ಮಾಡಲಿದ್ದಾರೆ. ಅಷ್ಟೇ ಅಲ್ಲದೇ ಮುರುಳಿಯ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಕೂಡ ಇಂದೇ ರಿಲೀಸ್ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಕೆಜಿಎಫ್ ನಂತರ ಶುರುವಾಗಲಿದೆಯಾ ಉಗ್ರಂ ವೀರಂ?

    ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರದ ಮೂಲಕವೇ ನಿರ್ದೇಶಕರಾಗಿ ಸದ್ದು ಮಾಡಿದವರು ಪ್ರಶಾಂತ್ ನೀಲ್. ಆ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿ ಶ್ರೀಮುರಳಿಯ ಅದೃಷ್ಟವನ್ನೇ ಬದಲಿಸಿದ್ದೀಗ ಇತಿಹಾಸ. ಇಂಥಾ ನೀಲ್ ಇಂದು ಕೆಜಿಎಫ್ ಮೂಲಕ ದೇಶಾದ್ಯಂತ ಸುದ್ದಿಯಲ್ಲಿದ್ದಾರೆ. ಈ ಹೊತ್ತಿನಲ್ಲಿಯೇ ಕೆಜಿಎಫ್ ನಂತರ ಅವರು ಯಾವ ಚಿತ್ರ ನಿರ್ದೇಶನ ಮಾಡಲಿದ್ದಾರೆಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿತ್ತು. ಅದಕ್ಕೆ ಉತ್ತರದಂಥಾ ಸುದ್ದಿಯೊಂದು ಇದೀಗ ಹರಿದಾಡಲಾರಂಭಿಸಿದೆ!

    ಒಂದು ಮೂಲದ ಪ್ರಕಾರ ಈಗಾಗಲೇ ಪ್ರಶಾಂತ್ ನೀಲ್ ಹೊಸ ಚಿತ್ರಕ್ಕೆ ರೆಡಿಯಾಗಿದ್ದಾರೆ. ಆ ಚಿತ್ರಕ್ಕೆ ಉಗ್ರಂ ವೀರಂ ಎಂಬ ಟೈಟಲ್ಲೂ ಫಿಕ್ಸಾಗಿದೆ ಮತ್ತು ಇದರಲ್ಲಿ ಶ್ರೀಮುರಳಿ ಅವರೇ ನಾಯಕನಾಗಿಯೂ ನಟಿಸಲಿದ್ದಾರೆ!

    ಕೆಜಿಎಫ್ ಚಿತ್ರ ಬರೋಬ್ಬರಿ ಎರಡು ವರ್ಷಗಳ ಕಾಲ ಚಿತ್ರೀಕರಿಸಿಕೊಂಡಿತ್ತಲ್ಲಾ? ಆ ಬ್ಯುಸಿಯ ನಡುವೆಯೂ ಪ್ರಶಾಂತ್ ನೀಲ್ ಉಗ್ರಂ ವೀರಂ ಸ್ಕ್ರಿಪ್ಟ್ ವರ್ಕ್ ಮುಗಿಸಿಕೊಂಡಿದ್ದಾರಂತೆ. ಕೆಜಿಎಫ್ ಚಿತ್ರ ತೆರೆ ಕಾಣುತ್ತಲೇ ಈ ಚಿತ್ರದ ಉಳಿದ ಕೆಲಸ ಕಾರ್ಯಗಳಿಗೂ ಚಾಲನೆ ಕೊಡಲಿದ್ದಾರೆ. ಮುಂದಿನ ವರ್ಷದ ಆರಂಭದ ಹೊತ್ತಿಗೆಲ್ಲಾ ಈ ಚಿತ್ರ ಶುರುವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಭರಾಟೆ ಚಿತ್ರದಿಂದ ಛಾಯಾಗ್ರಾಹಕ ಭುವನ್ ಔಟ್?

    ಬೆಂಗಳೂರು: ಶ್ರೀಮುರಳಿ ಅಭಿನಯದ ಭರಾಟೆ ಚಿತ್ರಕ್ಕೆ ಚಿತ್ರೀಕರಣ ನಡೆಯುತ್ತಿರೋದು ಗೊತ್ತೇ ಇದೆ. ಚಿತ್ರೀಕರಣ ಶುರುವಾದಂದಿನಿಂದ ಇದುವರೆಗೂ ಈ ಚಿತ್ರದ ಕಡೆಯಿಂದ ಪ್ರೇಕ್ಷಕರಿಗೆ ಹಬ್ಬವಾಗುವಂಥಾದ್ದೇ ಸುದ್ದಿಗಳು, ಬೆಳವಣಿಗೆಗಳು ಜಾಹೀರಾಗುತ್ತಾ ಬಂದಿವೆ. ಆದರೀಗ ಈ ಚಿತ್ರದ ಬಹು ಮುಖ್ಯ ಭಾಗವಾಗಿದ್ದವರೊಬ್ಬರು ಚಿತ್ರತಂಡದಿಂದ ಹೊರಬಿದ್ದ ಸುದ್ದಿ ಬಂದಿದೆ!

    ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿಯೂ ಹೆಸರು ಮಾಡಿದ್ದವರು ಭುವನ್ ಗೌಡ. ಆ ನಂತರ ಅವರು ರಥಾವರ ಚಿತ್ರದಲ್ಲಿಯೂ ಶ್ರೀಮುರಳಿಯವರಿಗೆ ಸಾಥ್ ನೀಡಿದ್ದರು. ಇದೀಗ ಭರಾಟೆ ಚಿತ್ರದ ಮೂಲಕ ಭುವನ್ ಮತ್ತು ಶ್ರೀಮುರಳಿ ಕಾಂಬಿನೇಷನ್ ಮೂರನೇ ಸಲ ಒಂದಾಗಿತ್ತು. ಆದರೆ ಒಂದಷ್ಟು ಕಾಲ ಚಿತ್ರೀಕರಣ ನಡೆಸಿದ ನಂತರ ಇದೀಗ ಭುವನ್ ಗೌಡ ಏಕಾಏಕಿ ಈ ಚಿತ್ರದಿಂದ ಹೊರ ಬಂದಿದ್ದಾರೆನ್ನಲಾಗಿದೆ.

    ಛಾಯಾಗ್ರಾಹಕರೊಬ್ಬರು ಚಿತ್ರೀಕರಣ ಶುರುವಾದ ಮೇಲೆ ಹೊರ ಬಂದರೆ ಸಹಜವಾಗಿಯೇ ಅಚ್ಚರಿಯುಂಟಾಗುತ್ತದೆ. ಅದರ ಸುತ್ತ ರೂಮರ್‍ಗಳೂ ಶುರುವಾಗುತ್ತವೆ. ಅಂಥಾದ್ದೇ ಒಂದು ರೂಮರನ್ನು ಆಧರಿಸಿ ಹೇಳೋದಾದರೆ ಭುವನ್ ಗೌಡ ಮತ್ತು ನಿರ್ದೇಶಕ ಚೇತನ್ ಅವರ ನಡುವಿನ ವೈಮನಸ್ಸೇ ಈ ಬೆಳವಣಿಗೆಗೆ ಕಾರಣ ಎಂದೂ ಹೇಳಲಾಗುತ್ತಿದೆ.

    ಇದೆಲ್ಲದರ ಹಿಂದಿರೋ ಅಸಲೀ ವಿಚಾರ ಏನೆಂಬುದನ್ನು ಚಿತ್ರ ತಂಡವೇ ಹೇಳಬೇಕಿದೆ. ಆದರೆ ಭುವನ್ ಗೌಡ ಹೊರ ಬಂದಿರೋ ಸುದ್ದಿ ನಿಜಕ್ಕೂ ಶಾಕಿಂಗ್. ಯಶ್ ನಟಿಸಿರೋ ಕೆಜಿಎಫ್‍ನಂಥಾ ಚಿತ್ರಗಳಿಗೂ ಕ್ಯಾಮೆರಾ ಕಣ್ಣಾಗಿರುವ ಭುವನ್ ಗೌಡ ಬಹು ಬೇಡಿಕೆ ಹೊಂದಿರುವವರು. ಇಂಥವರು ಚಿತ್ರತಂಡದಿಂದ ಹೊರ ಬಿದ್ದ ಘಟನೆಯ ಸುತ್ತ ವಿನಾ ಕಾರಣ ಸುದ್ದಿಗಳು ಹರಡಿಕೊಳ್ಳುವ ಮೊದಲೇ ಚಿತ್ರ ತಂಡ ಇದರ ಹಿಂದಿನ ವಾಸ್ತವ ವಿಚಾರಗಳನ್ನು ಹೊರ ಹಾಕ ಬಹುದೇನೋ…?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಚಿತ್ರ-ಶ್ರೀ ಮುರಳಿ

    ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಚಿತ್ರ-ಶ್ರೀ ಮುರಳಿ

    ಬೆಂಗಳೂರು: ಎಂಎಲ್‍ಎ ಸಿನಿಮಾ ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ ಅಂತಾ ಖ್ಯಾತ ನಟ ಶ್ರೀಮುರಳಿ ಹೇಳಿದ್ದಾರೆ.

    ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ, ನಟ ಪ್ರಥಮ್ ಅಭಿನಯದ ಎಂಎಲ್‍ಎ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಮ್ಮ ಹುಡುಗ ಪ್ರಥಮ್ ಚಿತ್ರದ ಹಾಡನ್ನು ನಮ್ಮಿಂದಲೇ ಲಾಂಚ್ ಮಾಡ್ಸಿದ್ರು. ನಾನು ಈ ಚಿತ್ರದ ಹಾಡೊಂದನ್ನು ನೋಡಿದ್ದು ಅದು ತುಂಬಾ ರೊಮ್ಯಾಂಟಿಕ್ ಆಗಿ ಮೂಡಿಬಂದಿದೆ. ಹಾಡು ನೋಡಿ ತುಂಬಾನೇ ಖುಷಿ ಆಯ್ತು. ಪ್ರಥಮ್ ರವರಲ್ಲಿ ಒಂದು ರೊಮ್ಯಾಂಟಿಕ್ ಭಾವನೆ ಅಡಗಿದೆ. ಅದನ್ನು ಪರದೆಯ ಮೇಲೆ ತುಂಬಾ ಚೆನ್ನಾಗಿಯೇ ತೋರಿಸಿದ್ದಾರೆ. ಹಾಡುಗಳಲ್ಲಿ ಪ್ರಥಮ್ ನಟನೆಯನ್ನು ನೋಡಿ ನನಗೇ ಶಾಕ್ ಆಯ್ತು ಅಂತಾ ಅಂದ್ರು.

    ಆ ಹಾಡಿನಲ್ಲಿ ಅವರ ಅಭಿನಯ, ವಾಕಿಂಗ್ ಶೈಲಿ, ನೋಟ ಎಲ್ಲವೂ ಸಖತ್ತಾಗಿ ಮೂಡಿಬಂದಿದೆ. ಒಬ್ಬರ ಜೀವನದಲ್ಲಿ ಆಗುವ ಬದಲಾವಣೆ ಅವರನ್ನು ಇನ್ನೂ ಹೆಚ್ಚಿನ ಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತವೆ. ಆ ಸಾಲಿಗೆ ಪ್ರಥಮ್ ಸೇರುತ್ತಾರೆ. ಅವರ ಆ ಶಕ್ತಿಯೇ ಅವರನ್ನು ತುಂಬಾ ಎತ್ತರಕ್ಕೆ ಕೊಂಡೊಯ್ಯುತ್ತೆ ಅಂತಾ ಹಾರೈಸಿದರು.

    ಉತ್ತಮ ವಿಚಾರಗಳಿಂದ ಕೂಡಿರುವ ಪ್ರಥಮ್ ವಿಚಾರಗಳು ಅವರನ್ನು ಇನ್ನಷ್ಟು ಬೆಳೆಸುತ್ತವೆ. ಪ್ರಥಮ್ ರ ಈ ಹೊಸ ಪ್ರಯತ್ನವನ್ನು ಕೊಂಡಾಡಿದ ಶ್ರೀಮುರುಳಿ ಎಂಎಲ್‍ಎ ಚಿತ್ರಕ್ಕೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು.

  • ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ ನಟ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ (ಸತ್ಯನಾ.. ಧೈರ್ಯನಾ..) ಎಂಬ ಆಯ್ಕೆ ಇತ್ತು. ಅದರಲ್ಲಿ ಶ್ರೀಮುರಳಿ `ಧೈರ್ಯ’ ವನ್ನ ಆಯ್ಕೆ ಮಾಡಿಕೊಂಡಿದ್ದರು. ನಂತರ ಶಿವಣ್ಣ ನಿಮ್ಮ ಜೊತೆ ಅಭಿನಯಿಸಿದ ನಟಿಯರಲ್ಲಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ಫೋನ್ ಗೆ `ಐ ಲವ್ ಯುವರ್ ಐಸ್’ ಎಂದು ಸಂದೇಶ ಕಳುಹಿಸಬೇಕು ಎಂದು ಹೇಳಿದ್ದಾರೆ.


    ಶಿವಣ್ಣ ಹೇಳಿದಂತೆ ಮುರಳಿ ಅವರು ಧೈರ್ಯವಾಗಿ “ಐ ಲವ್ ಯುವರ್ ಐಸ್” (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ನಟಿ ಮಾನ್ಯ ಅವರ ಫೋನ್ ನಂಬರ್ ಗೆ ಮೆಸೇಜ್ ಕಳುಹಿಸಿದ್ದು, ಕಾರ್ಯಕ್ರಮದಲ್ಲಿ ಶಿವಣ್ಣ ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದ್ದಾರೆ.

    ನಟಿ ಮಾನ್ಯ ಅವರು ಕನ್ನಡದಲ್ಲಿ ದರ್ಶನ್, ಶ್ರೀಮುರಳಿ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಅಭಿಯಿಸಿದ್ದಾರೆ. 2005 ರಲ್ಲಿ ತೆರೆಕಂಡ ದಿವಂಗತ ಡಾ.ವಿಷ್ಣುವರ್ಧನ್ ನಟನೆಯ `ವರ್ಷ’, ದರ್ಶನ್ ಅಭಿನಯದ `ಶಾಸ್ತ್ರಿ’ ಮತ್ತು ಶ್ರೀಮುರಳಿ ಅಭಿನಯದ `ಶಂಭು’ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಮಾನ್ಯ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಭಿನಯಿಸಿದ್ದಾರೆ.

    ಸದ್ಯಕ್ಕೆ ನಟಿ ಮಾನ್ಯ ಮದುವೆಯಾಗಿ ಮಗುವಿನ ತಾಯಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಮಾನ್ಯ ಮತ್ತು ಶ್ರೀಮುರಳಿ ಇಬ್ಬರು ಮಾನ್ಯ ಒಳ್ಳೆಯ ಸ್ನೇಹಿತರು. ಅಷ್ಟೇ ಅಲ್ಲದೇ ಶ್ರೀಮುರಳಿ ಅವರ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಸ್ನೇಹಿತರಾಗಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ಅವರು ನ್ಯೂಯಾರ್ಕ್ ಗೆ ಹೋಗಿದ್ದಾಗ ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.