Tag: srimurali

  • ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಮರಾಠಿ `ಉಗ್ರಂ’ ಸಿನಿಮಾಗೆ ಶಾನ್ವಿ ಶ್ರೀವಾಸ್ತವ್‌ ನಾಯಕಿ

    ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ನಟನೆಯ `ಉಗ್ರಂ’ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿತ್ತು. ಈ ಸಿನಿಮಾ ಅದೆಷ್ಟು ಜನರ ಪಾಲಿಗೆ ಗಾಂಧಿನಗರದಲ್ಲಿ ನೆಲೆ ನಿಲ್ಲಲು ಕಾರಣವಾಯ್ತು. ಇದೀಗ ಈ ಉಗ್ರಂ ಸಿನಿಮಾ ಪರಭಾಷೆಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ಮರಾಠಿಯಲ್ಲಿ ಉಗ್ರಂ ಸಿನಿಮಾ ರಿಮೇಕ್ ಆಗಲಿದೆ.

    `ಉಗ್ರಂ’ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರಳಿ ಕೆರಿಯರ್‌ಗೆ ಮರು ಜೀವ ಕೊಟ್ಟಂತಹ ಸಿನಿಮಾ. ಈ ಚಿತ್ರದಿಂದ ಶ್ರೀಮುರುಳಿ ಸಿನಿ ಕೆರಿಯರ್‌ಗೆ ಬಿಗ್ ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಇದೀಗ ಈ ಸಿನಿಮಾ ಮೇಲೆ ಪರಭಾಷಿಗರ ಕಣ್ಣು ಬಿದ್ದಿದೆ. 8 ವರ್ಷಗಳ ನಂತರ ಈ ಚಿತ್ರವನ್ನು ಮರಾಠಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ:ಮೊಹರಂ ಹಬ್ಬದಲ್ಲೂ ಅಪ್ಪು – ಹೊಂಡದಲ್ಲಿ ಪುನೀತ್ ಫೋಟೋ ಹಿಡಿದು ಬಂದ ಬಾಲಕ

    ಉಗ್ರಂ ಸಿನಿಮಾ ಮರಾಠಿ ಭಾಷೆಗೆ ರಿಮೇಕ್ ಆಗುತ್ತಿದೆ. ಸುಮಿತ್ ಕಕ್ಕಡ್ ಎಂಬುವವರು ಈ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಶ್ರೀಮುರುಳಿ ನಟಿಸಿದ ಪಾತ್ರಕ್ಕೆ ಶರದ್ ಖೇಳ್ಕರ್ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಕಾಣಿಸಿಕೊಳ್ತಿದ್ದಾರೆ. ಹರಿಪ್ರಿಯಾ ಪಾತ್ರಕ್ಕೆ ಶಾನ್ವಿ ಜೀವತುಂಬಲಿದ್ದಾರೆ. ಕನ್ನಡದಲ್ಲಿ `ಉಗ್ರಂ’ ಸಿನಿಮಾ ಸೌಂಡ್ ಮಾಡಿದಷ್ಟು, ಮರಾಠಿಯಲ್ಲೂ ಸೌಂಡ್ ಮಾಡುತ್ತಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಸೆಟ್ಟೇರಿದ `ಬಘೀರ’ ಸಿನಿಮಾ: ಪ್ರಶಾಂತ್‌ ನೀಲ್‌ ಕಥೆಗೆ ಶ್ರೀಮುರಳಿ ಹೀರೋ

    ಸೆಟ್ಟೇರಿದ `ಬಘೀರ’ ಸಿನಿಮಾ: ಪ್ರಶಾಂತ್‌ ನೀಲ್‌ ಕಥೆಗೆ ಶ್ರೀಮುರಳಿ ಹೀರೋ

    ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ  ʻಬಘೀರ’ ಸಿನಿಮಾ ಇಂದು ಸೆಟ್ಟೇರಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದಲ್ಲಿ ಮೂಡಿ ಬರಲಿರುವ, ಡಾ.ಸೂರಿ ಆ್ಯಕ್ಷನ್ ಕಟ್ ಹೇಳ್ತಿರುವ ʻಬಘೀರʼ ಚಿತ್ರದ ಮುಹೂರ್ತ ನೆರವೇರಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ ಈಗ ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಈ ಚಿತ್ರದ ಮುಹೂರ್ತ ಇಂದು ಸರಳವಾಗಿ ನೆರವೇರಿದೆ. ಈ ವೇಳೆ `ಬಘೀರ’ ಚಿತ್ರದ ನಟ ಶ್ರೀಮುರಳಿ, ನಿರ್ದೇಶಕ ಡಾ.ಸೂರಿ ಮತ್ತು ಹೊಂಬಾಳೆ ಫಿಲ್ಮ್ಸ್‌ ಸಂಸ್ಥಾಪಕ ವಿಜಯ್ ಕಿರಗಂದೂರು ಸಾರಥ್ಯದ ಚಿತ್ರಕ್ಕೆ ರಿಷಬ್ ಶೆಟ್ಟಿ, ಮತ್ತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಹೂರ್ತಕ್ಕೆ ಆಗಮಿಸಿ ಶುಭಹಾರೈಸಿದ್ದಾರೆ.

    `ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಪ್ರಶಾಂತ್ ನೀಲ್ ಕಥೆಯಲ್ಲಿ, ಶ್ರೀಮುರಳಿ ನಟಿಸಲಿದ್ದು, ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಈಗಷ್ಟೇ ಚಿತ್ರದ ಮುಹೂರ್ತ ನೆರವೇರಿಸಿಕೊಂಡಿರುವ ʻಬಘೀರʼ ಸಿನಿಮಾದ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ.

  • ನಟ ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ, ಅವರಿಗೆ ಸಿನಿಮಾ ಮಾಡುತ್ತೇನೆ: ಪ್ರಶಾಂತ್ ನೀಲ್

    ನಟ ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ, ಅವರಿಗೆ ಸಿನಿಮಾ ಮಾಡುತ್ತೇನೆ: ಪ್ರಶಾಂತ್ ನೀಲ್

    ಕೆಜಿಎಫ್ ಮೂಲಕ ವಿಶ್ವದ ಗಮನ ಸೆಳೆದಿರುವ ನಿರ್ದೇಶಕ ಪ್ರಶಾಂತ್ ನೀಲ್, ಈಗ ಬಹುಬೇಡಿಕೆಯ ನಿರ್ದೇಶಕ. ಮೊದಲನೆಯ ಸಿನಿಮಾದಲ್ಲಿ ತಾವು ಎಂತಹ ನಿರ್ದೇಶಕ ಎಂದು ತೋರಿಸಿದರೇ, ಎರಡನೇ ಚಿತ್ರದಲ್ಲಿ ತಮ್ಮ ಸಿನಿಮಾಗಳು ಯಾವ ರೀತಿಯ ಮಾರುಕಟ್ಟೆಯನ್ನು ಸೃಷ್ಟಿಸಬಲ್ಲವು ಎಂಬುದನ್ನು ಸಾಬೀತು ಪಡಿಸಿದರು. ಈಗ ರಿಲೀಸ್ ಆಗುತ್ತಿರುವ ಕೆಜಿಎಫ್ 2 ಸಿನಿಮಾ ಭಾರತೀಯ ಸಿನಿಮಾ ರಂಗದ ದಿಕ್ಕನ್ನೆ ಬದಲಿಸುತ್ತಿದೆ. ಇಂತಹ ಪ್ರಶಾಂತ್ ನೀಲ್ ಕೈಯಲ್ಲಿ ಸ್ಟಾರ್ ನಟರ ಎರಡು ಚಿತ್ರಗಳಿದ್ದು, ಅವೆರಡು ಪರಭಾಷೆಯ ನಟರ ಚಿತ್ರಗಳಾಗಿವೆ.  ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಪ್ರಶಾಂತ್ ನೀಲ್ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದು ‘ಉಗ್ರಂ’ ಚಿತ್ರದ ಮೂಲಕ. ಈ ಚಿತ್ರಕ್ಕೆ ಶ್ರೀಮುರಳಿ ನಾಯಕ. ಇದೇ ಸಿನಿಮಾ ಶ್ರೀಮುರಳಿಗೂ ಮತ್ತು ಪ್ರಶಾಂತ್ ನೀಲ್ ಅವರ ವೃತ್ತಿ ಬದುಕಿಗೂ ದೊಡ್ಡದೊಂದು ಬ್ರೇಕ್ ನೀಡಿತು. ಅಲ್ಲಿಂದ ಇಬ್ಬರೂ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡರು. ಸದ್ಯ ಪ್ರಶಾಂತ್ ನೀಲ್ ತೆಲುಗುನಟ ಪ್ರಭಾಸ್ ಗಾಗಿ ‘ಸಲಾರ್’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ, ನಂತರ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಚಿತ್ರ ಮಾಡಲಿದ್ದಾರೆ. ಹೀಗಾಗಿಯೇ ಪ್ರಶಾಂತ್ ನೀಲ್, ಕನ್ನಡದ ನಟರಿಗೆ ಸಿಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕುರಿತು ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಈ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲೇ ಉತ್ತರಿಸಿದ್ದಾರೆ ಪ್ರಶಾಂತ್. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ‘ನಾನು ಕನ್ನಡ ಸಿನಿಮಾದ ಮೂಲಕವೇ ಚಿತ್ರರಂಗಕ್ಕೆ ಪ್ರವೇಶ ಮಾಡಿದವನು. ನನ್ನಿಂದ ಕನ್ನಡಕ್ಕೆ ಏನೋ ಆಗಿದೆ ಎಂಬ ಭ್ರಮೆಯಲ್ಲಿ ಇಲ್ಲ. ನಾನು ಎಲ್ಲಿಗೆ ಹೋದರೂ, ಮತ್ತೆ ಬಂದು ಕನ್ನಡದಲ್ಲಿಯೇ ಚಿತ್ರ ಮಾಡುತ್ತೇನೆ. ಕನ್ನಡಕ್ಕೆ ನನ್ನ ಮೊದಲ ಆದ್ಯತೆ’ ಎಂದು ಹೇಳಿದ್ದಾರೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕನ್ನಡದ ಸಿನಿಮಾಗಳನ್ನೇ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇದನ್ನು ಓದಿ: ಬಂಕಿಮ್ ಚಂದ್ರ ಚಟರ್ಜಿ ಬಯೋಪಿಕ್: ಸ್ಕ್ರಿಪ್ಟ್ ಬರೆಯಲಿದ್ದಾರೆ ಜಕ್ಕಣ್ಣನ ತಂದೆ ವಿಜಯೇಂದ್ರ ಪ್ರಸಾದ್

    ಈ ಎರಡು ಸಿನಿಮಾಗಳು ಮುಗಿದ ನಂತರ ಅವರು ಶ್ರೀಮುರಳಿಗಾಗಿ ಮತ್ತೊಂದು ಚಿತ್ರ ಮಾಡುವುದಾಗಿಯೂ ತಿಳಿಸಿದ್ದಾರೆ ಪ್ರಶಾಂತ್ ನೀಲ್. ‘ಶ್ರೀಮುರಳಿಗೆ ಮಾತುಕೊಟ್ಟಿದ್ದೇನೆ. ಅವರಿಗಾಗಿ ಮುಂದಿನ ದಿನಗಳಲ್ಲಿ ಒಂದು ಸಿನಿಮಾ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಕನ್ನಡ ಸಿನಿಮಾ ರಂಗವನ್ನು ಬಿಟ್ಟು ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದಾರೆ ಪ್ರಶಾಂತ್.

  • ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾದ ಬಗ್ಗೆ ಮೊದಲಿನಿಂದಲೂ ಹಲವು ಊಹಾಪೋಹಗಳು ಕೇಳಿ ಬರುತ್ತಿವೆ. ಅದರಲ್ಲೀ ಸಲಾರ್ ಸಿನಿಮಾ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಎಂದು ಸುದ್ದಿ ಆಗಿತ್ತು. ಉಗ್ರಂ ಸಿನಿಮಾದ ಅನೇಕ ಅಂಶಗಳನ್ನು ಸಲಾರ್ ಚಿತ್ರಕ್ಕಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವುದರಿಂದ ಕನ್ನಡದ ಸಿನಿಮಾವನ್ನು ಸಲಾರ್ ರೂಪದಲ್ಲಿ ಮತ್ತೆ ಕನ್ನಡಕ್ಕೆ ಕೊಡುವುದು ಎಷ್ಟು ಸರಿ ಎಂದು ಚರ್ಚೆ ಕೂಡ ಮಾಡಲಾಗಿತ್ತು. ಈಗ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

    ಸಲಾರ್ ಕುರಿತಾಗಿ ಎಷ್ಟೇ ಗಾಸಿಪ್ ಗಳು ಕೇಳಿ ಬಂದರೂ, ಅದಕ್ಕೆ ಯಾವುದೇ ರೀತಿಯಲ್ಲಿ ಉತ್ತರ ಕೊಡಲು ಹೋಗಿರಲಿಲ್ಲ ಪ್ರಶಾಂತ್ ನೀಲ್. ಇದೀಗ ಅವರು ಉತ್ತರ ಕೊಟ್ಟಿದ್ದಾರೆ. ಕೆಜಿಎಫ್ 2 ಸಿನಿಮಾದ ಮಾಧ್ಯಮಗೋಷ್ಠಿಯಲ್ಲಿ ಸಲಾರ್ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಅವರು ಉತ್ತರಿಸುತ್ತಾ, ‘ನನ್ನ ಉಗ್ರಂ ಸಿನಿಮಾದ ಛಾಯೆ ನನ್ನೆಲ್ಲ ಸಿನಿಮಾಗಳಲ್ಲೂ ಇರುತ್ತದೆ. ಹಾಗೆಯೇ ಸಲಾರ್ ಸಿನಿಮಾದಲ್ಲಿ ಇದೆ. ಹಾಗಂತ ಅದು ಉಗ್ರಂ ಸಿನಿಮಾದ ರಿಮೇಕ್ ಅಲ್ಲ. ಉಗ್ರಂ ಸಿನಿಮಾದ ಯಾವ ದೃಶ್ಯ ಅಥವಾ ಸ್ಟೋರಿಯನ್ನು ಬಳಸಿಕೊಂಡಿಲ್ಲ. ಫ್ರೆಶ್ ಆಗಿರುವ ಕಥೆಯನ್ನೇ ಸಲಾರ್ ನಲ್ಲಿ ಹೇಳಿದ್ದೇನೆ’ ಎಂದಿದ್ದಾರೆ ಪ್ರಶಾಂತ್ ನೀಲ್. ಇದನ್ನೂ ಓದಿ: RK ಹೌಸ್‌ನಲ್ಲಿ ರಣಬೀರ್-ಆಲಿಯಾ ಮದುವೆ : ಆ ಸ್ಥಳದ ಹಿಂದಿದೆ ಇಂಟ್ರಸ್ಟಿಂಗ್ ಕಹಾನಿ

    ಸಲಾರ್ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಚಿತ್ರ. ಅಂದಾಜು 350 ಕೋಟಿಗೂ ಹೆಚ್ಚು ಬಂಡವಾಳವನ್ನು ಈ ಚಿತ್ರಕ್ಕಾಗಿ ವಿನಿಯೋಗಿಸಿದ್ದಾರೆ ವಿಜಯ್ ಕಿರಗಂದೂರು. ನಟ ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ಮಹತ್ವದ ಸಿನಿಮಾ ಇದಾಗಲಿದ್ದು, ಈ ಮೂಲಕ ಪ್ರಭಾಸ್ ಕನ್ನಡ ಎಂಟ್ರಿ ಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಅವರ ತೆಲುಗಿನ ಚೊಚ್ಚಲು ಸಿನಿಮಾ ಇದಾಗಿದ್ದರಿಂದ, ಈಗಾಗಲೇ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.

  • ಕೃತ್ಯದಲ್ಲಿ ನಾಯಕ ಆಸ್ಕರ್ ಕೃಷ್ಣ ಕೈವಾಡ

    ಕೃತ್ಯದಲ್ಲಿ ನಾಯಕ ಆಸ್ಕರ್ ಕೃಷ್ಣ ಕೈವಾಡ

    ಸ್ಕರ್ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಆಸ್ಕರ್ ಕೃಷ್ಣ, ನಂತರ ‘ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸಬಿಟ್ಟ’ ಚಿತ್ರದಿಂದ ನಾಯಕರೂ ಆದರು. ಇದೀಗ ಎರಡನೇ ಬಾರಿ ಕೃತ್ಯದ ಮೂಲಕ ಮತ್ತೆ ನಾಯಕರಾಗುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ ಅನ್ನು ಶ್ರೀಮುರಳಿ ಬಿಡುಗಡೆ ಮಾಡಿ, ಕೃತ್ಯದ ಕೆಲ ವಿಷಯಗಳನ್ನೂ ಹಂಚಿಕೊಂಡಿದ್ದಾರೆ.

    ’ಆಸ್ಕರ್’, ’ಮಿಸ್ ಮಲ್ಲಿಗೆ’ ’ಮೋನಿಕಾ ಈಸ್ ಮಿಸ್ಸಿಂಗ್’ ’ಮನಸಿನ ಮರೆಯಲಿ’ ಹಾಗೂ ಇತ್ತೀಚಿನ ’ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡ್ಸುಬಿಟ್ಟ’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಆಸ್ಕರ್ ಕೃಷ್ಣ’ಕೃತ್ಯ’ ಸಿನಿಮಾಗೆ ನಿರ್ದೇಶನ ಮಾಡುವುದರ ಜತೆಗೆ ನಿರ್ಮಾಣ ಮತ್ತು ನಾಯಕನ ಸ್ಥಾನವನ್ನೂ ಅಲಂಕರಿಸಿರುವುದು ವಿಶೇಷ. ಗೌತಮ್‌ ರಾಮಚಂದ್ರ ಈ ಚಿತ್ರದ ಸಹ ನಿರ್ಮಾಪಕ. ಆಸ್ಕರ್‌ ಕೃಷ್ಣರೊಂದಿಗೆ ಹಲವು ವರ್ಷಗಳಿಂದ ಒಡನಾಟದಲ್ಲಿರುವ ಗೌತಮ್‌ ರಾಮಕೃಷ್ಣರವರು ಸಾಫ್ಟ್‌ವೇರ್ ಉದ್ಯೋಗಿ. ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಇವರ ಜೊತೆ ಸೇರಿಕೊಂಡು ಬಂಡವಾಳ ಹೂಡುತ್ತಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ಟೈಟಲ್ ಪೋಸ್ಟರ್ ಅನಾವರಣ ಸಂದರ್ಭದಲ್ಲಿ ಹಿರಿಯ ನಿರ್ಮಾಪಕರಾದ ಬಾ.ಮ.ಹರೀಶ್, ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ಬಣಕಾರ್, ಬಾ.ಮ.ಗಿರೀಶ್, ನರಸಿಂಹರಾಜು, ಡಾ.ಸುನಿಲ್‌ಕುಮಾರ್, ವಿಜಯ್‌ಕುಮಾರ್‌ಸಿಂಹ, ಟಿಪ್ಪುವರ್ಧನ್ ಮುಂತಾದವರು ಉಪಸ್ಥಿತರಿದ್ದರು. ನಾಯಕಿ, ತಾರಾಗಣ ಮತ್ತು ತಂತ್ರಜ್ಘರ ವಿವರಗಳನ್ನು ಮಹೂರ್ತ ದಿನದಂದು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ.

  • ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

    ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ: ಶ್ರೀಮುರಳಿ

    ಹಾಸನ: ಮದಗಜ ಚಿತ್ರವನ್ನು ಅಭಿಮಾನಿಗಳು ಸ್ವೀಕರಿಸಿರುವುದು ಸಂತೋಷ ತಂದಿದೆ. ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ರೆ ನಮಗೆ ಖುಷಿ ಎಂದು  ಸ್ಯಾಂಡಲ್‌ವುಡ್ ನಟ ಶ್ರೀಮುರಳಿ ಅಭಿಪ್ರಾಯಪಟ್ಟಿದ್ದಾರೆ.

    ಹಾಸನದಲ್ಲಿ ಮದಗಜ ಚಿತ್ರ ರಿಲೀಸ್ ಆಗಿರುವ ಚಿತ್ರಮಂದಿರಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರಕ್ಕೆ ರಾಜ್ಯಾದ್ಯಂತ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಇಂದು ಅಭಿಮಾನಿಗಳ ದರ್ಶನಕ್ಕೆ ಹಾಸನಕ್ಕೆ ಬಂದಿದ್ದೇನೆ. ಜನರ ಪ್ರತಿಕ್ರಿಯೆ ಕಂಡು ತುಂಬಾ ಖುಷಿ ಆಗಿದೆ ಎಂದರು.

    OTTಯಲ್ಲಿ ಸಿನೆಮಾ ರಿಲೀಸ್ ವಿಚಾರವಾಗಿ ಪ್ರತಿಕ್ರಿಯಿಸಿ, OTT ಒಂದು ಡಿಜಿಟಲ್ ಫ್ಲಾಟ್‍ಫಾರ್ಮ್, OTTಯಲ್ಲಿ ಸಿನೆಮಾಗಳು ತಡವಾಗಿ ಬರಲು ತಯಾರಿ ಮಾಡ್ಕೋಬೇಕು. ಜನ ಥಿಯೇಟರ್‌ಗೆ ಬಂದು ಸಿನೆಮಾ ನೋಡಿದ್ರೆ ನಮಗೆ ಖುಷಿ. OTTಯಲ್ಲಿ ನಾವ್ಯಾರು ಸಿನೆಮಾವನ್ನು ಬೇಗ ರಿಲೀಸ್ ಮಾಡುತ್ತಿಲ್ಲ. ಹಿರಿಯರು, ತಿಳಿದವರು ಬುದ್ಧಿವಂತರು ಈ ಬಗ್ಗೆ ಏನಾದರೂ ಒಂದು ಮಾಡಬೇಕು. ಅವರು ಏನೇ ಹೇಳಿದ್ರು ನಾವು ಅವರ ಜೊತೆ ನಿಲ್ಲುತ್ತೇವೆ. ರಿಲೀಸ್ ಮಾಡಬೇಡಿ, ಚೇಂಜ್ ಮಾಡಿ ಎಂದು ಹೇಳುವಷ್ಟು ದೊಡ್ಡವರಲ್ಲ ನಾವು. ಅಭಿಮಾನಿಗಳು ಥಿಯೇಟರ್‌ಗೆ ಬಂದು ಸಿನೆಮಾ ನೋಡುವ ವಿಚಾರವಾಗಿ ನಾವೆಲ್ಲ ಒಟ್ಟಿಗೆ ಇರುತ್ತೇವೆ ಎಂದರು.

    ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ಬಿಂಗ್ ಆಗಿ ರಿಲೀಸ್ ಆಗುವ ವಿಚಾರದ ಬಗ್ಗೆ ಮಾತನಾಡಿ, ಅದರ ಬಗ್ಗೆ ಏನು ಹೇಳಬೇಕು ತಿಳಿಯುತ್ತಿಲ್ಲ. ತುಂಬ ವರ್ಷದಿಂದ ಡಬ್ಬಿಂಗ್ ನಮ್ಮ ರಾಜ್ಯದಲ್ಲಿ ಇರಲಿಲ್ಲ. ಇತ್ತೀಚೆಗೆ ಡಬ್ಬಿಂಗ್ ಚಿತ್ರ ರಿಲೀಸ್ ಆಗುತ್ತಿದೆ. ಏನಾದರೂ ಅಭಿಮಾಮಾನಿಗಳು ಒಪ್ಪಬೇಕಲ್ವಾ, ಕರ್ನಾಟಕದಲ್ಲಿ ಅದು ಎಷ್ಟರ ಮಟ್ಟಿಗೆ ವರ್ಕ್ ಆಗುತ್ತಿದೆ ಗೊತ್ತಿಲ್ಲ. ಆದರೆ ಅದು ಡೇಂಜರ್. ನಾವು ಒಳ್ಳೊಳ್ಳೆ ಸಿನೆಮಾ ಮಾಡ್ಬೇಕು. ನಮ್ಮ ಅಡುಗೆ ಸರಿಯಾಗಿ ಇರಬೇಕು ಎಂದು ವ್ಯಂಗ್ಯವಾಡಿದರು.

  • ಪಾತ್ರೆ ತೊಳ್ದಿಲ್ಲಾ ಅಂದ್ರೆ ಊಟ ಇಲ್ವಂತೆ- ಕಷ್ಟ ಹೇಳ್ಕೊಂಡ ಶ್ರೀಮುರಳಿ

    ಪಾತ್ರೆ ತೊಳ್ದಿಲ್ಲಾ ಅಂದ್ರೆ ಊಟ ಇಲ್ವಂತೆ- ಕಷ್ಟ ಹೇಳ್ಕೊಂಡ ಶ್ರೀಮುರಳಿ

    ಬೆಂಗಳೂರು: ಉಗ್ರಂ ಖ್ಯಾತಿಯ ಶ್ರೀಮುರಳಿ ಮನೆಯಲ್ಲಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ಹೋಮ್ ರೂಲ್ಸ್ ಕಟ್ಟುನಿಟ್ಟಾಗಿ ಪಾಲಿಸಲೇಬೇಕಂತೆ ಇಲ್ಲವಾದಲ್ಲಿ ಅವರ ಪತ್ನಿ ಗುರ್ ಅಂತಾರಂತೆ.

    ಲಾಕ್‍ಡೌನ್ ದಿನಗಳು ಹಲವು ನಟ, ನಟಿಯರಿಗೆ ಸಂತಸ ನೀಡಿದ್ದು, ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಬಾಲಿವುಡ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುತೇಕ ನಟರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಹತ್ತು ಹಲವು, ಚಟುವಟಿಕೆಗಳು ತಮ್ಮ ಹವ್ಯಾಸಗಳು ಸೇರಿದಂತೆ ಮನೆಗೆಲಸಗಳನ್ನೂ ಅಷ್ಟೇ ಇಷ್ಟಪಟ್ಟು ಮಾಡುತ್ತಿದ್ದಾರೆ.

    ಅದೇ ರೀತಿ ಇದೀಗ ಶ್ರೀಮುರಳಿಯವರಿಗೆ ಈ ಸಂಕಷ್ಟ ಎದುರಾಗಿದ್ದು, ಹೋಮ್ ರೂಲ್ಸ್ ಫಾಲೋ ಮಾಡಲೇಬೇಕಾಗಿದೆ. ಸಿನಿಮಾ ಕೆಲಸಗಳಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದ ಶ್ರೀಮುರಳಿಯವರಿಗೆ ಇದೀಗ ಪತ್ನಿ, ಮಕ್ಕಳು, ಕುಟುಂಬದೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿದ್ದು, ಇದನ್ನು ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ. ಇದರೊಂದಿಗೆ ಕಷ್ಟವನ್ನು ಪಡುತ್ತಿದ್ದಾರೆ.

    ತಾವು ಕಷ್ಟ ಪಡುತ್ತಿರುವುದರ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ಸದ್ಯಕ್ಕೆ ಹೋಮ್ ರೂಲ್ಸ್, ಊಟ ಬೇಕು ಅಂದ್ರೆ ಪಾತ್ರೆ ತೊಳೆಯಲೇಬೇಕು. ಇಲ್ಲಾ ಅಂದ್ರೆ ನನ್ನ ಹೆಂಡತಿ ವಿದ್ಯಾ ಗುರ್ ಅಂತಾರೆ. ಆದರೆ ಈ ಕೆಲಸದಿಂದ ಬೆವರು ಕಿತ್ಗೊಂಡು ಬರುತ್ತೆ ಎಂದು ಪಾತ್ರೆ ತೊಳೆಯುವ ಫೋಟೋ ಹಾಕಿದ್ದಾರೆ. ಈ ಮೂಲಕ ಮನೆಗೆಲಸವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.

    ಶ್ರೀ ಮುರಳಿ ಪೋಸ್ಟ್ ಗೆ ಅವರ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, ಲವ್ಡ್ ಇಟ್, ಎಂಜಾಯ್ ಬ್ರದರ್. ಅತ್ತಿಗೆ ರಾಕ್, ಬ್ರದರ್ ಶಾಕ್ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ ಕ್ಯೂಟ್ ಕಪಲ್, ಬೆಸ್ಟ್ ಟುಗೆದರ್ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ಅವರ ಅಭಿಮಾನಿಗಳು ಮನೆಗೆಲಸ ಮಾಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ನಟ ಶ್ರೀ ಮುರಳಿ ಅಭಿನಯದ ಮದಗಜ ಸಿನಿಮಾದ ಚಿತ್ರೀಕರಣ ಇತ್ತೀಚೆಗಷ್ಟೇ ಪ್ರಾರಂಭವಾಗಿದ್ದು, ಶ್ರೀ ಮುರುಳಿ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದರು. ಚಿತ್ರ ತಂಡ ಉತ್ತರ ಪ್ರದೇಶದಲ್ಲಿ ಅಘೋರಿಗಳ ಮಧ್ಯೆ ಶೂಟಿಂಗ್‍ಗೂ ತೆರಳಿತ್ತು. ನಂತರ ಈ ಚಿತ್ರಕ್ಕೆ ನಾಯಕಿ ಆಯ್ಕೆ ಬಗ್ಗೆ ಸಹ ಕುತೂಹಲ ಮೂಡಿತ್ತು. ಆಶಿಕಾ ರಂಗನಾಥ್ ಆಯ್ಕೆಯಾಗುವ ಮೂಲಕ ಕುತೂಹಲಕ್ಕೆ ತೆರೆಬಿತ್ತು. ಚಿತ್ರೀಕರಣ ಭರದಿಂದ ಸಾಗಿರುವಾಗಲೇ ಕೊರೊನಾ ವಕ್ಕರಿಸಿ, ಲಾಕ್‍ಡೌನ್ ಜಾರಿಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುವ ಸ್ಥಿತಿ ಬಂದೊದಗಿದೆ. ಈ ಸಮಯವನ್ನೂ ಎಂಜಾಯ್ ಮಾಡುತ್ತಿರುವ ಶ್ರೀಮುರಳಿ, ಮನೆ ಕೆಲಸದಲ್ಲಿ ಪತ್ನಿಗೆ ಸಹಾಯ ಮಾಡುತ್ತಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.

  • 20ನೇ ಲವ್ ಆನಿವರ್ಸರಿ- ಶ್ರೀಮುರಳಿ ದಂಪತಿಯ ಫೋಟೋಶೂಟ್

    20ನೇ ಲವ್ ಆನಿವರ್ಸರಿ- ಶ್ರೀಮುರಳಿ ದಂಪತಿಯ ಫೋಟೋಶೂಟ್

    ಬೆಂಗಳೂರು: ಸಾಮಾನ್ಯವಾಗಿ ಮದುವೆಯಾದ ನಂತರ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಇದೀಗ ಸ್ಯಾಂಡಲ್‍ವುಡ್ ನಟ ಶ್ರೀಮುರಳಿ ತಮ್ಮ ಲವ್ ವಾರ್ಷಿಕೋತ್ಸವವನ್ನು ಸೆಲಬ್ರೇಷನ್ ಮಾಡಿ, ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

    ಹೌದು, ನಟ ಶ್ರೀಮುರಳಿ ತಮ್ಮ 20ನೇ ಲವ್ ಆನಿವರ್ಸರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ. ಅಂದರೆ 1999 ಡಿಸೆಂಬರ್ 30 ರಂದು ಶ್ರೀಮುರಳಿ ತಮ್ಮ ಪತ್ನಿ ವಿದ್ಯಾ ಅವರಿಗೆ ಪ್ರಪೋಸ್ ಮಾಡಿದ್ದರು. ಹೀಗಾಗಿ ಅದೇ ದಿನ ತಮ್ಮ ಪ್ರೀತಿಯ ವಾರ್ಷಿಕೋತ್ಸವವನ್ನು ಆಚರಣೆ ಮಾಡಿದ್ದಾರೆ.

    “1999ರಿಂದ ನೀವು ನನ್ನ ಪಕ್ಕದ್ದಲ್ಲಿದ್ದೀರಿ, ಹೀಗಾಗಿ ಜೀವನದಲ್ಲಿ ನಾನು ತುಂಬಾ ಸಂತೋಷದಿಂದ ಇದ್ದೇನೆ. ನನ್ನ ಕಾಲೇಜಿನ ಪ್ರಿಯತಮೆ, ನಮ್ಮ ಎರಡು ಮಕ್ಕಳ ತಾಯಿ, ನಿಮ್ಮೊಂದಿಗೆ ನಾನು 2 ದಶಕಗಳನ್ನು ಕಳೆದಿದ್ದೇನೆ. ನಿಜಕ್ಕೂ ಇದೊಂದು ಸುಂದರ ಪ್ರಯಾಣವಾಗಿದೆ. ನಾನು ಬದುಕಿರುವವರೆಗೂ ತುಂಬಾ ಪ್ರೀತಿಸುತ್ತೇನೆ. 20ನೇ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.

    ಶ್ರೀಮುರಳಿ ಬಿಳಿ ಬಣ್ಣ ಕುರ್ತಾ ಧರಿಸಿದರೆ, ವಿದ್ಯಾ ಅವರು ಕೂಡ ಬಿಳಿ ಬಣ್ಣದ ಸೀರೆ ತೊಟ್ಟಿದ್ದರು. ಇಬ್ಬರು ತುಂಬಾ ಮುದ್ದಾಗಿ ಕಾಣಿಸುತ್ತಿದ್ದರು. ಶ್ರೀಮುರಳಿ ಮತ್ತು ವಿದ್ಯಾ ಇಬ್ಬರು 2008ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

    https://www.instagram.com/p/B6sjpJrnDfw/

  • ಪ್ರೀತಿ, ದ್ವೇಷಗಳ ಭರಾಟೆಯ ಟ್ರೈಲರ್ ನೋಡಿದ್ರೆ ಆಗುತ್ತೆ ರೋಮಾಂಚನ

    ಪ್ರೀತಿ, ದ್ವೇಷಗಳ ಭರಾಟೆಯ ಟ್ರೈಲರ್ ನೋಡಿದ್ರೆ ಆಗುತ್ತೆ ರೋಮಾಂಚನ

    -ಚಕಿತಗೊಳಿಸುತ್ತೆ ಭರಾಟೆಯಲ್ಲಿ ಶ್ರೀಮುರಳಿಯ ಅಬ್ಬರ

    ಬೆಂಗಳೂರು: ಚಂದನವನದಲ್ಲಿ ಸದ್ಯ ಸದ್ದು ಮಾಡುತ್ತಿರುವ ಚಿತ್ರ ಭರಾಟೆ. ಹಲವು ಹೊಸತನಗಳೊಂದಿಗೆ ಮೂಡಿಬಂದಿರುವ ಭರಾಟೆ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರತಂಡ ಸಹ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಟ್ರೈಲರ್, ಫೋಟೋ ಮತ್ತು ಹಾಡುಗಳ ಮೂಲಕ ತನ್ನತ್ತ ಸೆಳೆದುಕೊಂಡಿದ್ದ ಭರಾಟೆ ಇಂದು ಅಭಿಮಾನಿಗಳಿಗೆ ಮತ್ತೊಂದು ಟ್ರೈಲರ್ ಬಿಡುಗಡೆಗೊಳಿಸಿದೆ. ವೀಕೆಂಡ್ ಗೆ ಕನ್ನಡಾಭಿಮಾನಿಗಳಿಗೆ ಮಾಸ್ ಟ್ರೈಲರ್ ನ್ನು ಕಲರ್‍ಫುಲ್ ಬಾಡೂಟವಾಗಿ ಉಣಬಡಿಸಿದೆ.

    ಭರಾಟೆಯ ಅಬ್ಬರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸಿನಿಮಾದ ಹಲವು ಆಯಾಮಗಳನ್ನು ತೋರಿಸಿರುವ ಚಿತ್ರತಂಡ ಎಲ್ಲಿಯೂ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಡದೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೆಲ ಫೋಟೋಗಳನ್ನು ರಿವೀಲ್ ಗೊಳಿಸುತ್ತಾ ಬಂದ ಚಿತ್ರತಂಡ ಇಂದು ಫ್ರೂಟ್ ಸಲಾಡ್ ನೀಡಿದೆ. ಟ್ರೈಲರ್ ಎಲ್ಲ ವರ್ಗದ ಜನರನ್ನು ಸೆಳೆಯುವ ಶಕ್ತಿ ಹೊಂದಿದೆ ಎಂಬ ಮಾತುಗಳೇ ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.

    ಟ್ರೈಲರ್ ಮಾಸ್, ಫ್ಯಾಮಿಲಿ, ಲವ್, ಕಾಮಿಡಿ ಹದವಾದ ಮಿಶ್ರಣದಂತಿದ್ದು, ದೊಡ್ಡ ತಾರಾಬಳಗವನ್ನೇ ಭರಾಟೆ ಹೊಂದಿದೆ. ಬಹುತೇಕ ಚಿತ್ರದ ಎಲ್ಲ ಕಲಾವಿದರನ್ನು ಪರಿಚಯಿಸುವ ನಿರ್ದೇಶಕ ಪ್ರಯತ್ನ ಕಾಣಬಹುದಾಗಿದೆ. ಹಾಡುಗಳು, ಮ್ಯೂಸಿಕ್ ಒಂದು ರೀತಿ ನೋಡುಗನನ್ನು ಸಮ್ಮೋಹನಗೊಳಿಸುವಂತಿದೆ. ಚಿತ್ರದ ಸೆಟ್, ವಸ್ತ್ರಾಲಂಕಾರ ಎಲ್ಲವೂ ಭಿನ್ನವಾಗಿದ್ದು, ಯುವ ಆವೇಗದ ಕಥಾ ಹಂದರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಚೇತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭರಾಟೆ ಕಥೆಯನ್ನಂತೂ ರೋರಿಂಗ್ ಸ್ಟಾರ್ ಶ್ರೀಮುರಳಿಯ ಇಮೇಜಿಗೆ ತಕ್ಕುದಾಗಿಯೇ ಅವರು ಹೊಸೆದಿದ್ದಾರೆ. ಅದಕ್ಕೆ ತಕ್ಕುದಾದಂಥಾ ದೃಶ್ಯ ರೂಪವನ್ನೂ ನೀಡಿದ್ದಾರೆ.

    ಭರಾಟೆಯಲ್ಲಿ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಮೂವರು ಖಡಕ್ ಡೈಲಾಗ್, ಖದರ್ ಭರಾಟೆಯಲ್ಲಿ ಅಬ್ಬರಿಸುತ್ತಿದೆ. ಕ್ಲೈಮಾಕ್ಸ್ ಸಾಹಸ ದೃಶ್ಯಕ್ಕೆ 10 ಜನ ವಿಲನ್ಸ್ ಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸಿ ಆರ್ಭಟಿಸುತ್ತಿದ್ದಾರೆ. ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ನೀನಾಸಂ ಅಶ್ವತ್ಥ್, ದೀಪಕ್, ರಾಜವಾಡೆ ಮತ್ತು ಮನಮೋಹನ್ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ.

  • ನನ್ನ ಪತಿ ಕರ್ಜಿಕಾಯಿ ಕಳ್ಳ: ಶ್ರೀಮುರಳಿ ಪತ್ನಿ

    ನನ್ನ ಪತಿ ಕರ್ಜಿಕಾಯಿ ಕಳ್ಳ: ಶ್ರೀಮುರಳಿ ಪತ್ನಿ

    ಬೆಂಗಳೂರು: ಪತಿ ಶ್ರೀಮುರಳಿ ಕರ್ಜಿಕಾಯಿ (ಸಿಹಿ ತಿಂಡಿ) ಕದ್ದು ಅಮ್ಮನ ಕೈಗೆ ಸಿಕ್ಕಿ ಬಿದ್ದಿರುವ ವಿಡಿಯೋವನ್ನು ಪತ್ನಿ ವಿದ್ಯಾ ಶ್ರೀಮುರಳಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಪ್ರತಿ ವರ್ಷ ಅಜ್ಜಿ ಪೂಜೆಗಾಗಿ ಮನೆಯಲ್ಲಿ ಸಿಹಿತಿಂಡಿ ಮೊದಲೇ ತಯಾರಿಸಲಾಗುತ್ತದೆ. ಆದರೆ ಅತ್ತೆ ಪೂಜೆ ಆಗುವರೆಗೂ ತಿಂಡಿಯನ್ನು ಯಾರಿಗೂ ನೀಡಲ್ಲ. ಪತಿ ಶ್ರೀಮರುಳಿ ಮಾತ್ರ ಪ್ರತಿವರ್ಷ ಹೇಗಾದ್ರೂ ಮಾಡಿ ತಿಂಡಿಯನ್ನು ಕದಿಯುತ್ತಾರೆ. ಈ ವರ್ಷ ಅಮ್ಮನ ಕೈಗೆ ಸಿಕ್ಕಿ ಬಿದ್ದರು ಎಂದು ವಿದ್ಯಾ ಶ್ರೀಮುರಳಿ ತಮ್ಮ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    ಶ್ರೀಮುರಳಿ ಕದ್ದಿರುವ ಕರ್ಜಿಕಾಯಿಯನ್ನು ಜೇಬಿನಲ್ಲಿಟ್ಟಿಕೊಂಡಿದ್ದು, ಅಮ್ಮ ಅದನ್ನು ವಾಪಾಸ್ ಕೊಡುವಂತೆ ಹೇಳುತ್ತಿದ್ದಾರೆ. ಪುಟ್ಟ ಮಗುವಿನಂತೆ ಶ್ರೀಮುರಳಿ ಕರ್ಜಿಕಾಯಿ ನೀಡಲ್ಲ ಎಂದು ಹಠ ಮಾಡೋದನ್ನು ವಿಡಿಯೋದಲ್ಲಿ ನೋಡಬಹುದು.

    ಶ್ರೀಮುರಳಿ ನಟನೆಯ ಭರಾಟೆ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಉಗ್ರಂ ಮತ್ತು ಮಫ್ತಿ ಯಶಸ್ವಿನ ಬಳಿಕ ಭರಾಟೆ ಸಿನಿಮಾ ಪ್ರೇಕ್ಷಕರನ್ನು ರಂಜಿಸಲು ಬರಲಿದೆ. ಈ ಹಿಂದೆ ನಮ್ಮ ನಿರ್ದೇಶಕರು ಶೂಟಿಂಗ್ ಗೆ ಆಯ್ದುಕೊಳ್ಳುವ ಪ್ರದೇಶಗಳೇ ನಮಗೆಲ್ಲ ಅಚ್ಚರಿ ಹುಟ್ಟಿಸುತ್ತೆ. ಪ್ರತೀ ಕ್ಷಣವೂ ಹೊಸ ಹುಡುಕಾಟ ನಡೆಸೋ ನಿರ್ದೇಶಕರ ಜೊತೆ ಕೆಲಸ ಮಾಡೋದೇ ಸಂತಸದ ವಿಚಾರ ಅಂತ ಒಟ್ಟಾರೆ ಚಿತ್ರೀಕರಣದ ಅನುಭವಗಳನ್ನು ಶ್ರೀ ಮುರಳಿ ತೆರೆದಿಟ್ಟಿದ್ದರು.