Tag: srimurali

  • ಇಲ್ಲೇನು ಎಕ್ಸಾಂ ಬರೆಸಲ್ಲ, ಬಂದು ವೋಟು ಮಾಡಿ : ನಟ ಶ್ರೀಮುರಳಿ

    ಇಲ್ಲೇನು ಎಕ್ಸಾಂ ಬರೆಸಲ್ಲ, ಬಂದು ವೋಟು ಮಾಡಿ : ನಟ ಶ್ರೀಮುರಳಿ

    ಘೀರ ಸಿನಿಮಾದ ಶೂಟಿಂಗ್ ವೇಳೆ ಏಟು ಮಾಡಿಕೊಂಡು, ಶಸ್ತ್ರ ಚಿಕಿತ್ಸೆಯ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ನಟ ಶ್ರೀಮುರಳಿ (Srimurali) ತಪ್ಪದೇ ಮತಗಟ್ಟಿಗೆ ಬಂದು ಮತದಾನ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅವರು ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.

    ಮತದಾನದ (Voting) ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಮುರಳಿ, ‘ಮತದಾನ ನಮ್ಮ ಹಕ್ಕು ಮತ ಚಲಾಯಿಸಿದ್ದೇವೆ. ನಮ್ಮ ಬೂತ್ ಅಲ್ಲಿ ತುಂಬಾ ಜನ ಇದ್ರು, ನೋಡಿ ತುಂಬಾ ಖುಷಿ ಆಯ್ತು. ಹಿರಿಯ ನಾಗರೀಕರು ಬರ್ತಾ ಇದ್ದಾರೆ. ಪ್ರಜಾಪ್ರಭುತ್ವ ನಾವು ಆಯ್ಕೆ ಮಾಡಿಕೊಳ್ಳೋದು. ಯೂತ್ ಇನ್ನೂ ಬರ್ತಿಲ್ಲ ಅಂತಾ ಅಂದರೆ ಏನು ಹೇಳಬೇಕು. ಇಂತಹ ಜವಾಬ್ದಾರಿ ಮೆರೆಯಬಾರದು.  ಇಲ್ಲೇನೂ ಎಕ್ಸಾಂ ಬರೆಸಲ್ಲ ಬಂದು ಮತದಾನ ಮಾಡಿ. ನಿಮಗೆ ಬೇಕಾದ ನಾಯಕನನ್ನ ಆಯ್ಕೆ ಮಾಡಿಕೊಳ್ಳಿ. ಯಾರು ಯಾರು ಓಟ್ ಮಾಡಿಲ್ಲ ಅವರಿಗೆ ಏನು ಹೇಳಬೇಕು ಮಾಧ್ಯಮ ಮುಂದೆ ಮಾತಾಡಬಾರದು’ ಎಂದಿದ್ದಾರೆ.

    ಡಾ.ರಾಜ್ ಕುಟುಂಬದ ಅನೇಕ ಸದಸ್ಯರು ಒಟ್ಟಾಗಿಯೇ ಬಂದು ಮತ ಚಲಾಯಿಸಿದರು. ಅಣ್ಣಾವ್ರ ಪುತ್ರ ರಾಘವೇಂದ್ರ ರಾಜ್ ಕುಮಾರ್, ಅವರ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಒಟ್ಟಾಗಿ ಬಂದು ಮತದಾನ ಮಾಡಿದ್ದಾರೆ.

    ಮತದಾನದ ನಂತರ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ‘ಇದು ಮತದಾನ ಅಲ್ಲ, ಮತವನ್ನು ದಾನ ಮಾಡಬೇಡಿ. ಅದು ನಮ್ಮ ಹಕ್ಕು, ಹಕ್ಕನ್ನು ಎಲ್ಲರೂ ಚಲಾಯಿಸಿ ಎಂದರು. ಈ ಹಿಂದೆ ಅಪ್ಪ ಅಮ್ಮನ ಜೊತೆ ಬಂದು ವೋಟು ಮಾಡುತ್ತಿದ್ದೆವು. ಆಮೇಲೆ ಅಪ್ಪು ಜೊತೆ ಬಂದೆ. ಈಗ ಒಬ್ಬೊಬ್ಬರೆ ಹೋಗುತ್ತಿದ್ದಾರೆ. ಮುಂದಿನ ಪೀಳಿಗೆ ಮತದಾನಕ್ಕೆ ಸಜ್ಜಾಗುತ್ತಿದೆ ಎಂದರು.

    ಆರ್.ಆರ್ ನಗರ ಮತ ಕೇಂದ್ರಕ್ಕೆ ಪತಿ ಸಮೇತ ಆಗಮಿಸಿದ್ದ ನಟಿ ಅಮೂಲ್ಯ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಸರದಿ ಸಾಲಿನಲ್ಲಿ ಅರ್ಧ ಗಂಟೆಗೂ ಹೆಚ್ಚು ನಿಂತಿದ್ದ ಅಮೂಲ್ಯ, ಆ ನಂತರ ಸಾಲಿನಲ್ಲಿ ನಿಂತಿದ್ದವರಿಗೆ ಮನವಿ ಮಾಡಿಕೊಂಡು ಬೇಗ ವೋಟು ಹಾಕಿದ್ದಾರೆ.

    ಮತದಾನದ ನಂತರ ಮಾತನಾಡಿದ ಅಮೂಲ್ಯ, ತುಂಬಾ ಕ್ಯೂ ಇದೆ. ಇಷ್ಟು ಜನ ನೋಡಿ ಖುಷಿಯಾಯ್ತು. ಮಕ್ಕಳಿರೋದ್ರಿಂದ ರಿಕ್ವೆಸ್ಟ್ ಮಾಡಿದೆ, ಬೇಗ ಬಿಟ್ರು. ಆದ್ರೂ ಅರ್ಧ ಗಂಟೆ ಇದ್ದೆ. ಇದು ನಮ್ಮ ಹಕ್ಕು. ನಾವು ವೋಟ್ ಮಾಡಲೇಬೇಕು. ಸಮಯ ವ್ಯರ್ಥ ಮಾಡದೆ, ವೋಟ್ ಮಾಡಬೇಕು. ಈ ಬಾರಿ ಹೆಚ್ಚು ಮತದಾನ ಆಗುತ್ತೆ ಅಂದ್ಕೊಂಡಿದ್ದೇನೆ ಎಂದರು.

     

    ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಂಗಳೂರಿನ ಜೆ.ಪಿ ನಗರದಲ್ಲಿರುವ ಸೇಂಟ್ ಪೌಲ್ ಸ್ಕೂಲ್ ಗೆ ಆಗಮಿಸಿದ್ದ ಸಪ್ತಮಿ ಗೌಡ ಮತದಾನ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹಕ್ಕು ಚಲಾಯಿಸಿದ್ದೇನೆ. ಎಲ್ಲರೂ ತಪ್ಪದೇ ಮತದಾನ ಮಾಡಿ. ಮತದಾನ ಎಲ್ಲರ ಕರ್ತವ್ಯ ಎಂದರು.

  • ‘ಭೈರತಿ ರಣಗಲ್’ ಸಿನಿಮಾದಲ್ಲಿ ಶ್ರೀಮುರಳಿ ಇರುತ್ತಾರಾ? ಸ್ಪಷ್ಟನೆ ನೀಡಿದ ನಟ

    ‘ಭೈರತಿ ರಣಗಲ್’ ಸಿನಿಮಾದಲ್ಲಿ ಶ್ರೀಮುರಳಿ ಇರುತ್ತಾರಾ? ಸ್ಪಷ್ಟನೆ ನೀಡಿದ ನಟ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ನಟನೆಯ ‘ಭೈರತಿ ರಣಗಲ್’ (Bhairathi Rangal)  ಸಿನಿಮಾದಲ್ಲಿ 70%ರಷ್ಟು ಚಿತ್ರೀಕರಣ ಮುಗಿದ್ದು, ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಇದರ ನಡುವೆ ಮಫ್ತಿ ಪ್ರೀಕ್ವೇಲ್ ‘ಭೈರತಿ ರಣಗಲ್’ ಸಿನಿಮಾದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ (Sriimurali) ಇರುತ್ತಾರಾ ಎಂಬ ಪ್ರಶ್ನೆಗೆ ನಟ ಸ್ಪಷ್ಟನೆ ನೀಡಿದ್ದಾರೆ.

    ಚಿತ್ರದುರ್ಗಕ್ಕೆ ಕಾರ್ಯಕ್ರಮವೊಂದಕ್ಕಾಗಿ ಶ್ರೀಮುರಳಿ ಭೇಟಿ ನೀಡಿದ್ದರು. ‘ಬಘೀರ’ ಸಿನಿಮಾ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶ್ರೀಮುರಳಿ ಮಾಹಿತಿ ಹಂಚಿಕೊಂಡರು. ಬಹುನಿರೀಕ್ಷಿತ ‘ಭೈರತಿ ರಣಗಲ್’ ಸಿನಿಮಾದಲ್ಲಿ ಶ್ರೀಮುರಳಿ ನಟಿಸುತ್ತಿದ್ದಾರಾ? ಎಂಬುದರ ಸ್ವತಃ ಶ್ರೀಮುರಳಿ ಉತ್ತರಿಸಿದ್ದರು. ಈ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ ಎಂದು ಕ್ಲ್ಯಾರಿಟಿ ನೀಡಿದ್ದರು. ಇದನ್ನೂ ಓದಿ:‘ಕಾಂತಾರ’ ಪ್ರೀಕ್ವೇಲ್‌ನಲ್ಲಿ ರಿಷಬ್ ಶೆಟ್ಟಿ ಜೊತೆ ಜ್ಯೂ.ಎನ್‌ಟಿಆರ್

    ಭೈರತಿ ರಣಗಲ್ ಚಿತ್ರದಲ್ಲಿ ನಾನು ನಟನೆ ಮಾಡ್ತಿಲ್ಲ. ಅದು ಶಿವಣ್ಣ ಮಾಮನ ಮೂವಿ ಮಾತ್ರ ಅದ್ರಲ್ಲಿ ನಾನಿಲ್ಲ. `ಮಫ್ತಿ’ ಚಿತ್ರದ ಪ್ರೀಕ್ವೆಲ್ ಕಥೆ ಅದಾಗಿದೆ, ಅದ್ರಲ್ಲಿ ನಾನಿಲ್ಲ ಎಂದು ಶ್ರೀಮುರಳಿ ಸ್ಪಷ್ಟನೆ ನೀಡಿದ್ದಾರೆ. ‘ಭೈರತಿ ರಣಗಲ್’ ಸೀಕ್ವೆಲ್ ಬಗ್ಗೆ ಕೇಳಿದಕ್ಕೆ ನೋ ಕಾಮೆಂಟ್ಸ್ ಎಂದಿದ್ದಾರೆ. ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಶ್ರೀಮುರುಳಿ ವಿಶ್ ಮಾಡಿದ್ದಾರೆ.

    ಚಿತ್ರದಲ್ಲಿ ಶಿವರಾಜಕುಮಾರ್, ರುಕ್ಮಿಣಿ ವಸಂತ್ (Rukmini Vasanth), ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮುಂತಾದವರು ಅಭಿನಯಿಸುತ್ತಿದ್ದಾರೆ. ‘ಭೈರತಿ ರಣಗಲ್’ ಚಿತ್ರಕ್ಕೆ ನವೀನ್ ಕುಮಾರ್ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತವಿದೆ. ನರ್ತನ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

  • ಕಾರಿಗೆ ಕಾದು ಸುಸ್ತು, ಪತ್ನಿ ಜೊತೆ ಆಟೋದಲ್ಲಿ ಶ್ರೀಮುರಳಿ ಸವಾರಿ

    ಕಾರಿಗೆ ಕಾದು ಸುಸ್ತು, ಪತ್ನಿ ಜೊತೆ ಆಟೋದಲ್ಲಿ ಶ್ರೀಮುರಳಿ ಸವಾರಿ

    ಸ್ಯಾಂಡಲ್‌ವುಡ್ ನಟ ಶ್ರೀಮುರಳಿ (Sriimurali) ದಂಪತಿ ಕಾರ್ ಲೇಟ್ ಆಯ್ತು ಅಂತ ಆಟೋದಲ್ಲಿ ಮನೆಗೆ ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ಪತ್ನಿ ವಿದ್ಯಾ (Vidya Sriimurali) ಅವರು ನಗರದಲ್ಲಿ ಸೋಮವಾರ ಆಟೋ ಸವಾರಿ ಮಾಡಿದ್ದಾರೆ. ನಟನ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ವಿನಯ್ ಗೌಡ ಬರ್ತ್‌ಡೇ ಪಾರ್ಟಿಯಲ್ಲಿ ಸೆಲೆಬ್ರಿಟಿಗಳ ದಂಡು

    ಕಾರ್ ಬರೊದು ಲೇಟ್ ಆಗುತ್ತೆ ಅಂತ ಹಾಗೇ ಆಟೋಲೆ ಹೋಗೊಣ ಅನ್ಕೊಂಡ್ವಿ. ಆಟೋ ಸಿಗದೇ ನಡೆದು ನಡೆದು ಸಾಕಾಗಿತ್ತು (ನನ್ನ ಹೆಂಡತಿಗೆ ಕೋಪಾನು ಸ್ಟಾರ್ಟ್ ಆಗುತ್ತಿತ್ತು) ಆಗ ನನ್ನ ಆಪತ್ಭಾದವರಂತೇ ಇಬ್ಬರು ಹುಡುಗರು ನಮ್ಮನ್ನು ನೋಡಿ ಸಾಕಾಗಿ, ಆಟೋ ಹಿಡಿದು ನಮ್ಮ ಬಳಿ ತಂದರು. ಅವರಿಗೆ ಧನ್ಯವಾದ ಆಟೋ ಅಣ್ಣ ನಮ್ಮನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್ ಮಾಡಿದರು ಎಂದು ನಟ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by SriiMurali (@sriimurali)

    ಪರಾಕ್, ಬಘೀರ ಸಿನಿಮಾ ಕೆಲಸದಲ್ಲಿ ಶ್ರೀಮುರಳಿ ಬ್ಯುಸಿಯಾಗಿದ್ದಾರೆ. ಎರಡು ಸಿನಿಮಾದಲ್ಲೂ ಡಿಫರೆಂಟ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಅವತಾರದಲ್ಲಿ ಶ್ರೀಮುರಳಿ ಬರಲಿದ್ದಾರೆ.

    ಇತ್ತೀಚೆಗೆ ‘ಉಗ್ರಂ’ ಸಿನಿಮಾ 10 ವರ್ಷಗಳನ್ನು ಪೂರೈಸಿದೆ. ಮುಂದಿನ ದಿನಗಳಲ್ಲಿ ‘ಉಗ್ರಂ’ ಪಾರ್ಟ್ 2 ಬರುವ ಬಗ್ಗೆ ಪ್ರಶಾಂತ್ ನೀಲ್ ಸುಳಿವು ನೀಡಿದ್ದಾರೆ. ಸದ್ಯ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

  • ವಿಷ್ಣು ಅಂಕಲ್ ಗೆ ಆ ಜಾಗ ಕೊಡ್ಲಿ: ನಟ ಶ್ರೀಮುರಳಿ

    ವಿಷ್ಣು ಅಂಕಲ್ ಗೆ ಆ ಜಾಗ ಕೊಡ್ಲಿ: ನಟ ಶ್ರೀಮುರಳಿ

    ಹೆಸರಾಂತ ನಟ ವಿಷ್ಣುವರ್ಧನ್ (Vishnuvardhan) ಪುಣ್ಯಭೂಮಿ (Punyabhoomi) ಹೋರಾಟಕ್ಕೆ ನಟ ಶ್ರೀಮುರಳಿ (Srimurali) ಕೂಡ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಮುರಳಿ, ‘ವಿಷ್ಣುವರ್ಧನ್ ಅಭಿಮಾನಿಗಳ ಹೋರಾಟಕ್ಕೆ ನನ್ನ ಬೆಂಬಲ ಇದೆ. ಈಗಲಾದರೂ ಆ ವಿಚಾರಕ್ಕೆ ಒಂದು ಅಂತ್ಯ ಬೇಕು. ಅವರು ಕನ್ನಡದ ಸೂಪರ್ ಸ್ಟಾರ್. ವಿಷ್ಣು ಅಂಕಲ್ ಗೆ ಆ ಜಾಗ ಕೊಡ್ಲಿ. ಈ ವಿಚಾರಕ್ಕೆ ನನ್ನ ಬೆಂಬಲ ಪೂರ್ತಿಯಾಗಿದೆ’ ಎಂದಿದ್ದಾರೆ.

    ಡಾಲಿ, ಸುದೀಪ್ ಸಾಥ್

    ವಿಷ್ಣುವರ್ಧನ್ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಪುಣ್ಯಭೂಮಿ ಆಗಬೇಕು ಎಂದು ವಿಷ್ಣು ಅಭಿಮಾನಿಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳೆಲ್ಲರೂ ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ವಿಷ್ಣು ಅಭಿಮಾನಿಗಳ ಹೋರಾಟಕ್ಕೆ ನಟ ಡಾಲಿ ಧನಂಜಯ ಬೆಂಬಲ ಸೂಚಿಸಿದ್ದಾರೆ.

    ಕನ್ನಡ ಚಿತ್ರರಂಗದ ಮೇರು ನಟರು, ಹಿರಿಯಣ್ಣರಲ್ಲಿ ಒಬ್ಬರಾದ ಡಾ.ವಿಷ್ಣು ಸರ್ ಪುಣ್ಯಭೂಮಿಗೆ ರಾಜಧಾನಿಯಲ್ಲಿ ಅಂಗೈಯಗಲ ಜಾಗವಿಲ್ಲವೆಂಬುದು ಯಾಕೋ ಅರಗಿಸಿಕೊಳ್ಳಲಾಗುತ್ತಿಲ್ಲ. ಸರ್ಕಾರ ಕೂಡಲೇ ಡಾ.ವಿಷ್ಣು ಸರ್ ಪುಣ್ಯಭೂಮಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸುವೆ. ಅವರ ಅಭಿಮಾನಿಗಳ ಹೋರಾಟದಲ್ಲಿ ನಾನೂ ಇದ್ದೇನೆ. ಈ ವಿಷಯ ಬೇಗ ಸುಖಾಂತ್ಯ ಕಾಣಲಿ.  ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದ್ದಾರೆ

    ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಪುಣ್ಯಭೂಮಿಗಾಗಿ ಅಭಿಮಾನಿಗಳು ಹೋರಾಟಕ್ಕೆ ಮುಂದಾಗಿದ್ದಾರೆ. ವಿಷ್ಣು ಅಭಿಮಾನಿಗಳ ಬೆಂಬಲಕ್ಕೆ ಕಿಚ್ಚ ಸುದೀಪ್‌ ನಿಂತಿದ್ದಾರೆ. ವಿಷ್ಣು ಸಮಾಧಿ, ಸ್ಮಾರಕ ವಿಚಾರವಾಗಿ ಕಿಚ್ಚ ಸುದೀಪ್‌ ತಡರಾತ್ರಿ ಟ್ವೀಟ್‌ ಮಾಡಿದ್ದಾರೆ.

    ಡಾ.ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ನನ್ನದು ಅಂದು-ಇಂದು ಒಂದೇ ನಿಲುವು. ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿ ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ ಎಂದು ಎಕ್ಸ್‌ನಲ್ಲಿ ಸುದೀಪ್‌ ಪೋಸ್ಟ್‌ ಹಾಕಿದ್ದಾರೆ.

  • ಶ್ರೀಮುರಳಿ ಹುಟ್ಟು ಹಬ್ಬಕ್ಕೆ ‘ಪರಾಕ್’ ಸಿನಿಮಾ ಘೋಷಣೆ

    ಶ್ರೀಮುರಳಿ ಹುಟ್ಟು ಹಬ್ಬಕ್ಕೆ ‘ಪರಾಕ್’ ಸಿನಿಮಾ ಘೋಷಣೆ

    ಸ್ಯಾಂಡಲ್‌ವುಡ್‌ ರೋರಿಂಗ್‌ ಸ್ಟಾರ್‌ ಶ್ರೀಮುರಳಿ (Srimurali) ಇಂದು ಜನ್ಮದಿನದ (Happy Birthday) ಸಂಭ್ರಮದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಈ ಬಾರಿ ಅಭಿಮಾನಿಗಳ ಜೊತೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬದಲ್ಲಿ ಸಾಕಷ್ಟು ನೋವುಗಳು ಇದ್ದರೂ ಅದನ್ನು ಬದಿಗಿಟ್ಟು ಫ್ಯಾನ್ಸ್ ಭೇಟಿ ಮಾಡುತ್ತಿದ್ದಾರೆ. ಶ್ರೀಮುರಳಿ ಜನ್ಮದಿನ ಅಂಗವಾಗಿ ಸಖತ್ ಉಡುಗೊರೆಗಳು ಸಿಕ್ಕಿವೆ.

    ಶ್ರೀಮುರಳಿ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾವೊಂದು ಘೋಷಣೆಯಾಗಿದೆ. ಯುವ ಪ್ರತಿಭೆಗಳ ಜೊತೆ ಬಘೀರ ಕೈ ಜೋಡಿಸಿದ್ದಾರೆ. ರೋರಿಂಗ್ ಸ್ಟಾರ್ ಜನ್ಮೋತ್ಸವದ ಸ್ಪೆಷಲ್ ಆಗಿ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನವ ನಿರ್ದೇಶಕ ಹಾಲೇಶ್ ಕೋಗುಂಡಿ ಸಾರಥ್ಯದ ಚಿತ್ರಕ್ಕೆ ಪರಾಕ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

    ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್ (Halesh Kogundi) ಪರಾಕ್ (Parak) ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಕ್ರಿಯೇಟರ್ ಹಾಗೂ ಡೈರೆಕ್ಟರ್ ಆಗಿರುವ ಹಾಲೇಶ್ ಗೆ ಮಂಜುನಾಥ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಪರಾಕ್ ಸಿನಿಮಾವನ್ನು  ಬ್ರ್ಯಾಂಡ್ ಕೋಆಪರೇಟ್ಸ್ ಪ್ರೊಡಕ್ಷನ್ ಪ್ರೈವೇಟ್ ಲಿಮಿಟೆಡ್ ನಡಿ ನಿರ್ಮಾಣ ಮಾಡಲಾಗುತ್ತಿದೆ. ಕೋಗುಂಡಿ ಅಖಿಲೇಶ್ ಹಾಗೂ ಆಶಿಕ್ ಮಾಡಾಲ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

     

    ಬಹುತೇಕ ಬೆಣ್ಣೆ ನಗರಿ ದಾವಣಗೆರೆ ಪ್ರತಿಭೆಗಳೇ ಒಂದಾಗಿ ಮಾಡುತ್ತಿರುವ ಪರಾಕ್ ಚಿತ್ರದ ಟೈಟಲ್ ಪೋಸ್ಟರ್ ಆಕರ್ಷಕವಾಗಿದೆ. ಹೊಸ ಅವತಾರದಲ್ಲಿ ಶ್ರೀ ದರ್ಶನ ಕೊಟ್ಟಿದ್ದಾರೆ. ಸದ್ಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಪರಾಕ್ ಬಳಗ ಮೇ ಅಥವಾ ಜೂನ್ ತಿಂಗಳಿನಿಂದ ಶೂಟಿಂಗ್ ಅಖಾಡಕ್ಕೆ ಧುಮುಕುವ ಯೋಜನೆ ಹಾಕಿಕೊಂಡಿದೆ.

  • ನಿಮ್ಮ ಆಜ್ಞೆಯಂತೆ ಪಾಲಿಸ್ತೀನಿ: ಅತ್ತಿಗೆ ನೋವಿನಲ್ಲೂ ಶ್ರೀಮುರಳಿ ಹುಟ್ಟುಹಬ್ಬ

    ನಿಮ್ಮ ಆಜ್ಞೆಯಂತೆ ಪಾಲಿಸ್ತೀನಿ: ಅತ್ತಿಗೆ ನೋವಿನಲ್ಲೂ ಶ್ರೀಮುರಳಿ ಹುಟ್ಟುಹಬ್ಬ

    ನಾಳೆ ನಟ ಶ್ರೀಮುರಳಿ ಅವರ ಹುಟ್ಟು ಹಬ್ಬ (Birthday). ಈ ವರ್ಷದಲ್ಲಿ ಅತ್ತಿಗೆಯ ಸಾವಿನಿಂದಾಗಿ ಬಹುಶಃ ಶ್ರೀಮುರಳಿ (Srimurali) ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದೇ ನಂಬಲಾಗಿತ್ತು. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮತ್ತು ಅಭಿಮಾನಿಗಳನ್ನು ಅಂದು ಭೇಟಿ ಕೂಡ ಮಾಡಲಿದ್ದಾರೆ.

    ಈ ಕುರಿತಂತೆ ವಿಡಿಯೋವೊಂದನ್ನು ಮಾಡಿರುವ ಶ್ರೀಮುರಳಿ, ತಮ್ಮ ಮನದಾಳದ ಮಾತುಗಳನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಅತ್ತಿಗೆಯ ಕಳೆದುಕೊಂಡ ನೋವಿನ ಮಧ್ಯೆಯೂ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

    ಎಲ್ಲರಿಗೂ ನಮಸ್ಕಾರ. ಇಷ್ಟು ವರ್ಷದ ಹುಟ್ಟುಹಬ್ಬಕ್ಕೆ ಸೇರಲು ಆಗಿರಲಿಲ್ಲ. ಯಾಕೆ ಎಂಬುದು ನಿಮಗೂ ಗೊತ್ತು. ಈ ಬಾರಿಯೂ ಸೇರುವ ಪರಿಸ್ಥಿತಿ ಇರಲಿಲ್ಲ. ಆದ್ರೂ, ಅಭಿಮಾನಿಗಳ ಒತ್ತಾಯದ ಮೇರೆಗೆ , ನೀವು ಕೊಡ್ತಿರೋ ಪ್ರೀತಿ, ಏನ್‌ ಹೇಳಬೇಕು ಅಂತ ಗೊತ್ತಾಗ್ತಿಲ್ಲ. ನಿಮ್ಮ ಆಜ್ಞೆಯಂತೆಯೇ ನಡೀಬೇಕು. ಹಾಗಾಗಿ ಈ ವರ್ಷ ನಿಮ್ಮನ್ನೆಲ್ಲ ಭೇಟಿ ಮಾಡೋಕೆ ನನಗೊಂದು ಅವಕಾಶ ಸಿಕ್ಕಿದೆ. ಇದೇ ಡಿಸೆಂಬರ್‌ 17ನೇ ತಾರೀಖು, ವಸಂತ ನಗರದ ದೇವರಾಜ್‌ ಅರಸ್‌ ಭವನ್‌, ಮಿಲರ್ಸ್‌ ರೋಡ್‌, ಅಂಬೇಡ್ಕರ್‌ ಭವನ್‌ ಹಿಂದಿರುವ ಜಾಗದಲ್ಲಿ ಬೆಳಗ್ಗೆ 10:30 ನಂತರ ನಾನು ನಿಮಗೆ ಸಿಗ್ತಿನಿ’.

    “ಯಾರ್ಯಾರು ನೋಡಬೇಕು, ಮೀಟ್‌ ಮಾಡಬೇಕೋ, ಜೊತೆಗೆ ಸೇರೋಣ. ಮತ್ತೊಂದು ಮನವಿ. ಯಾರೂ ಹಾರ ತುರಾಯಿ, ಮತ್ತೊಂದು ಮಗದೊಂದು ಗಿಫ್ಟ್‌ ತರಬೇಡಿ. ಹಣ ಖರ್ಚು ಮಾಡಬೇಡಿ. ಅದು ನಿಮ್ಮ ದುಡಿಮೆ. ಇದಕ್ಕೆಲ್ಲ ಖರ್ಷು ಮಾಡಬೇಡಿ. ಮನಸ್ಸಿದ್ದರೆ, ಅನಾಥಾಶ್ರಮಕ್ಕೆ ನೀಡಿ, ದಾನ ಧರ್ಮ ಮಾಡಿ. ಖಾಲಿ ಕೈಯಲ್ಲಿ ಬನ್ನಿ. ಮನಸ್ಸು ಬಿಚ್ಚಿ ಮಾತನಾಡೋಣ. ನಿಮಗಾಗಿ, ನಿಮ್ಮನ್ನು ಭೇಟಿ ಮಾಡುವ ಉದ್ದೇಶಕ್ಕೆ ಮಾತ್ರ ಈ ಭೇಟಿ. ಬನ್ನಿ ಸಿಗೋಣ, ಜೈ ಹಿಂದ್‌’ ಎಂದು ಶ್ರೀಮುರಳಿ ಹೇಳಿದ್ದಾರೆ.

  • ನಟ ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಹೊಂಬಾಳೆಯಿಂದ ‘ಬಘೀರ’ ಗಿಫ್ಟ್

    ನಟ ಶ್ರೀಮುರಳಿ ಹುಟ್ಟು ಹಬ್ಬಕ್ಕೆ ಹೊಂಬಾಳೆಯಿಂದ ‘ಬಘೀರ’ ಗಿಫ್ಟ್

    ದೇ ಡಿಸೆಂಬರ್ 17ರಂದು ನಟ ಶ್ರೀಮುರಳಿ  ತಮ್ಮ ಹುಟ್ಟು ಹಬ್ಬವನ್ನು (Birthday) ಭರ್ಜರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಈ ಹುಟ್ಟು ಹಬ್ಬದ ದಿನದಂದು ಹೊಂಬಾಳೆ ಫಿಲ್ಮಸ್ ಭರ್ಜರಿ ಉಡುಗೊರೆಯನ್ನೇ ಕೊಡಲು ಸಿದ್ಧವಾಗಿದೆ. ಅಂದು ಶ್ರೀಮುರಳಿ ನಟನೆಯ ಬಘೀರ ಸಿನಿಮಾದ ಟೀಸರ್ ರಿಲೀಸ್ ಮಾಡಲು ರೆಡಿಯಾಗಿದೆ.

    ಹೌದು, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ. ಅಂದು ಶ್ರೀಮುರಳಿ ಅವರ ಹುಟ್ಟು ಹಬ್ಬವೂ ಆಗಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಹಾಗಾಗಿ ಟೀಸರ್ ಬಗ್ಗೆ ಕಾಯುವಂತಾಗಿದೆ. ಬಘೀರ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.

     

    ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟಾಗಿದ್ದರಿಂದ ಕೆಲ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಮತ್ತೆ ಮುರಳಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಬಹುತೇಕ ಚಿತ್ರೀಕರಣ ಮುಗಿದೆ ಎಂದು ಹೇಳಲಾಗುತ್ತಿದೆ.

  • ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಡಿ.17ಕ್ಕೆ ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾದ ಟೀಸರ್

    ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಬಘೀರ (Bagheera) ಸಿನಿಮಾ ಟೀಮ್ ನಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡವು, ಅದರ ಮೊದಲ ನೋಟವನ್ನು ಪ್ರೇಕ್ಷಕರಿಗೆ ತೋರಿಸಲು ಮುಂದಾಗಿದೆ. ಇದೇ ಡಿಸೆಂಬರ್ 17ಕ್ಕೆ ಸಿನಿಮಾದ ಟೀಸರ್ (Teaser) ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆ ಘೋಷಿಸಿದೆ.

    ಉಗ್ರಂ, ಭರಾಟೆ, ಮದಗಜ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಬಘೀರನಾಗಿ ಮಿಂಚಲು ರೆಡಿಯಾಗಿದ್ದಾರೆ. ಕೆಜಿಎಫ್’ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಬರೆದಿರುವ ಕಥೆಗೆ, ಡಾ.ಸೂರಿ ನಿರ್ದೇಶನ ಮಾಡುತ್ತಿದ್ದು, ಬಘೀರನಾಗಿ ಶ್ರೀಮುರಳಿ ಕಾಣಿಸಿಕೊಳ್ತಿದ್ದಾರೆ. ಚಿತ್ರದಲ್ಲಿ ಶ್ರೀಮುರಳಿ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಡಿಫರೆಂಟ್ ಸ್ಟೋರಿ ಮೂಲಕ ಮೋಡಿ ಮಾಡೋಕೆ ಶ್ರೀಮುರಳಿ ರೆಡಿಯಾಗಿದ್ದಾರೆ.

    ಈ ಹಿಂದೆಯೇ ಚಿತ್ರ ಫಸ್ಟ್ ಲುಕ್ ರಿವೀಲ್ ಆಗಿದ್ದು, ಶ್ರೀಮುರಳಿ ಸಖತ್ ಖಡಕ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ರು. ಈ ಲುಕ್ ನೋಡಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು. ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಹಾಗಾಗಿ ಟೀಸರ್ ಬಗ್ಗೆ ಕಾಯುವಂತಾಗಿದೆ. ಬಘೀರ ಯಾವ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿದೆ.

     

    ಶೂಟಿಂಗ್ ವೇಳೆ ಶ್ರೀಮುರಳಿಗೆ ಪೆಟ್ಟಾಗಿದ್ದರಿಂದ ಕೆಲ ಕಾಲ ಶೂಟಿಂಗ್ ಸ್ಥಗಿತಗೊಳಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಂಡು ಮತ್ತೆ ಮುರಳಿ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಇದೀಗ ಬಹುತೇಕ ಚಿತ್ರೀಕರಣ ಮುಗಿದೆ ಎಂದು ಹೇಳಲಾಗುತ್ತಿದೆ.

  • ಸ್ಪಂದನಾ ಪುಣ್ಯ ಸ್ಮರಣೆಯಲ್ಲಿ ಕುಂಟುತ್ತಲೇ ಎಂಟ್ರಿ ಕೊಟ್ಟ ನಟ- ಏನಾಯ್ತು ಶ್ರೀಮುರಳಿಗೆ?

    ಸ್ಪಂದನಾ ಪುಣ್ಯ ಸ್ಮರಣೆಯಲ್ಲಿ ಕುಂಟುತ್ತಲೇ ಎಂಟ್ರಿ ಕೊಟ್ಟ ನಟ- ಏನಾಯ್ತು ಶ್ರೀಮುರಳಿಗೆ?

    ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ (Spandana) 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ (Srimurali) ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ.

    ಉತ್ತರಕ್ರಿಯೆ ಇಂದು (ಆಗಸ್ಟ್ 16) ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ. ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮಗನ ಕೈ ಹಿಡಿದು ವಿಜಯ ಎಂಟ್ರಿ ಕೊಟ್ಟರೆ, ಅತ್ತಿಗೆ ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಾಲೇ ಶ್ರೀಮುರಳಿ (Srimurali) ಎಂಟ್ರಿ ಕೊಟ್ಟಿದ್ದಾರೆ. ಕಾಲಿನ ನೋವಿನಿಂದಲೇ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್‌ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು. ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.

    ಶಾಂತಿ ಹೋಮ(Shanthi Homa) ನೆರವೇರಿದ ಬಳಿಕ ಮಧ್ಯಾಹ್ನ 1 ಗಂಟೆಯಿಂದ ನಂತರ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ (ಬಿಬಿಎಂಪಿ ಮೈದಾನ) ಭೋಜನ ಆರಂಭವಾಗಿದೆ. ಮನೆಮಗಳು ಸ್ಪಂದನಾ ಆತ್ಮಕ್ಕೆ ಚಿರಶಾಂತಿ ಕೋರಲು ಸರ್ವರಿಗೂ ಭಾಗಿಯಾಗುವಂತೆ ಬಿ.ಕೆ ಶಿವರಾಂ ಮತ್ತು ಎಸ್.ಎ ಚಿನ್ನೆಗೌಡರು ಮತ್ತು ಕುಟುಂಬಸ್ಥರು ಸರ್ವರಿಗೂ ಆಹ್ವಾನ ನೀಡಿದ್ದರು. ಇದನ್ನೂ ಓದಿ:ತೆಲುಗಿನಲ್ಲಿ ಬರಲಿದೆ ಹಾಸ್ಟೆಲ್ ಹುಡುಗರ ಕಥೆ- ರಮ್ಯಾ ನಟಿಸಿದ್ದ ಪಾತ್ರಕ್ಕೆ ರಶ್ಮಿ ಗೌತಮ್ ನಟನೆ

    ಸುಮಾರು 4000 ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ವಿಐಪಿ- ಸಾರ್ವಜನಿಕರಿಗೆ ಬೇರೆ ಬೇರೆ ಊಟದ ವ್ಯವಸ್ಥೆ ಮಾಡಲಾಗಿದೆ. 80ಕ್ಕೂ ಹೆಚ್ಚು ಅಡುಗೆಯವರಿಂದ ಭೋಜನ ತಯಾರಿ ಮಾಡಿಸಿದ್ದಾರೆ. ಬರುವ ಗೆಸ್ಟ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಿದ್ದು, ಪೊಲೀಸ್ ಸಿಬ್ಬಂದಿಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಭೋಜನಕ್ಕೆ ಉಪ್ಪಿಟ್ಟು, ಪಲಾವ್, 2500 ಲಡ್ಡು, ಮಸಾಲಾ ವಡೆ, ಉದ್ದಿನ ವಡೆ, ಕೊಸಂಬರಿ, ಅನ್ನದ ಜೊತೆ ತರಕಾರಿ ಸಾರು ಮತ್ತು ತಿಳಿಸಾರು ಹಾಗೂ ಪಾಯಸ, ಮೊಸರು, ಹಪ್ಪಳ, ಆಬೊಂಡೆ ಸೇರಿದಂತೆ 21 ಬಗೆಯ ವಿವಿಧ ಖಾದ್ಯಗಳ ತಯಾರಿ ಮಾಡಲಾಗಿದೆ.

    ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ಕಣ್ಣೀರ ಕಡಲಲ್ಲಿ ವಿಜಯ ರಾಘವೇಂದ್ರ- ಅಣ್ಣನನ್ನು ತಬ್ಬಿ ಸಂತೈಸಿದ ಶ್ರೀಮುರಳಿ

    ತ್ನಿ ಸ್ಪಂದನಾ (Spandana) ನಿಧನ ವಿಜಯ ರಾಘವೇಂದ್ರಗೆ (Vijay Raghavendra) ಬರ ಸಿಡಿಲು ಬಡಿದಂತೆ ಆಗಿದೆ. ಅಂತಿಮ ವಿದಾಯಕ್ಕೆ ಕುಟುಂಬ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಕಣ್ಣೀರ ಕಡಲಲ್ಲಿ ಇರೋ ಅಣ್ಣ ವಿಜಯ್‌ಗೆ ಶ್ರೀಮುರಳಿ (Srimurali) ಸಂತೈಸುತ್ತಿದ್ದಾರೆ.

    ಡಾ.ರಾಜ್‌ಕುಮಾರ್ ಕುಟುಂಬಕ್ಕೆ ಒಂದರ ಹಿಂದೆ ಒಂದು ಆಘಾತ ಎದುರಾಗಿದೆ. ಅಪ್ಪು ನಿಧನದ ನಂತರ ಸ್ಪಂದನಾ ಸಾವು ಅರಗಿಸಿಕೊಳ್ಳದ ಆಘಾತವಾಗಿದೆ. ಜೋಡಿ ಹಕ್ಕಿಯಂತೆ ಇದ್ದ ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಜೋಡಿಯೇ ಮೇಲೆ ಅದು ಯಾರ ಕೆಟ್ಟ ಕಣ್ಣು ಬಿತ್ತೋ ಏನೋ ಎಂದು ವಿಜಯ ಆಪ್ತರು ಭಾವುಕರಾಗಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಜೊತೆಯಾಗಿ ಶ್ರೀಮುರಳಿ ನಿಂತಿದ್ದಾರೆ. ಇದನ್ನೂ ಓದಿ:ಆಗಿದ್ದು ಆಯ್ತು, ಮರೆತು ಬಿಡಪ್ಪಾ ಅಂತಾ ರಾಘುಗೆ ಹೇಳೋಕೆ ಆಗುತ್ತಾ- ರಾಘಣ್ಣ

    ಮಗ ಶೌರ್ಯನಿಗೆ ತಂದೆ ಮತ್ತು ಚಿಕ್ಕಪ್ಪ ಶ್ರೀಮುರಳಿ ಸಂತೈಸುತ್ತಿದ್ದಾರೆ. ಸ್ಪಂದನಾ ಇಲ್ಲದೇ ವಿಜಯ ಮುಂದೆ ಬದುಕಿನ ರಥವನ್ನ ಹೇಗೆ ನಡೆಸುತ್ತಾರೆ ಎಂಬುದು ಎಲ್ಲರಿಗೂ ಪ್ರಶ್ನೆ ಮೂಡಿದೆ.

    ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.

    ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನ ಅಂತ್ಯಕ್ರಿಯೆ ಹಿನ್ನೆಲೆಯಲ್ಲಿ ಹರಿಶ್ಚಂದ್ರಘಾಟ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬರ್ನಿಂಗ್‌ಗೆ ಸ್ಲಾಟ್ ಬುಕ್ಕಿಂಗ್ ಮಾಡಲಾಗಿದೆ. ಈಡಿಗ ಸಮುದಾಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರ ನಡೆಸಿ ಬಳಿಕ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಅಂತ್ಯಕ್ರಿಯೆಗೆ ಪೂಜೆ ಪುನಸ್ಕಾರ ಹಿನ್ನೆಲೆ ಬಿಬಿಎಂಪಿಯಿಂದ ಕೂಡ ಸ್ವಚ್ಛತಾ ಕಾರ್ಯ ಮಾಡಲಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]