Tag: srimurali

  • ಶ್ರೀಮುರಳಿ ಹೊಸ ಸಿನಿಮಾ ʻಪರಾಕ್ʼಗೆ ಮುಹೂರ್ತ

    ಶ್ರೀಮುರಳಿ ಹೊಸ ಸಿನಿಮಾ ʻಪರಾಕ್ʼಗೆ ಮುಹೂರ್ತ

    ಬಘೀರ ಸಿನಿಮಾದ ಸಕ್ಸಸ್ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಪರಾಕ್ ಎಂಬ ಚಿತ್ರ ಒಪ್ಪಿಕೊಂಡಿದ್ದಾರೆ. ಇಂದು ಬೆಂಗಳೂರಿನ (Bengaluru) ಬಂಡಿ ಮಹಾಕಾಳಿ ದೇಗುಲದಲ್ಲಿ ಪರಾಕ್ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

    ಬಳಿಕ ಸುದ್ದಿಗಾರರೊಂದಿಗೆ ಶ್ರೀಮುರಳಿ ಮಾತನಾಡಿ, “ಪರಾಕ್ ವಿಂಟೇಜ್ ಸೆಟ್‌ನಲ್ಲಿ ನಡೆಯುವ ಸಿನಿಮಾ. ಮುಂದಿನ ಚಿತ್ರ ಯಾವ ರೀತಿ ಕಥೆ ಆಯ್ಕೆ ಮಾಡಬೇಕು ಎಂಬ ಟೆನ್ಷನ್ ಇತ್ತು. ಸುಮಾರು 200 ಕಥೆ ಕೇಳಿದ್ದೆ. ಪರಾಕ್ ಸಿನಿಮಾ ತಂಡದ ಜೊತೆ ಎರಡು ವರ್ಷ ಈಗಾಗಲೇ ಟ್ರಾವೆಲ್ ಮಾಡಿದ್ದೆ. ಈ ತಿಂಗಳಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚರಣ್ ರಾಜ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ” ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಹಿರಿಯ ರಂಗಕರ್ಮಿ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ನಿಧನ

    ಯುವ ಪ್ರತಿಭೆ ಹಾಲೇಶ್ ಕೋಗುಂಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರವಾಗಿದೆ. ಈ ಮೊದಲು ಕೆಲವು ಕಿರು ಚಿತ್ರ ಮಾಡಿರೋ ಅನುಭವ ಇದೆ. ಇದೀಗ ಪರಾಕ್ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ.

    ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಈ ಪರಾಕ್ ಸಿನಿಮಾ ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಕ್ಯಾಮೆರಾ, ಉಲ್ಲಾಸ್ ಹೈದೂರ್ ಕಲಾ ನಿರ್ದೇಶನ, ಇಂಚರಾ ಸುರೇಶ್ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಉಳಿದ ಅಪ್ ಡೇಟ್ ನ್ನು ಚಿತ್ರತಂಡ ರಿವೀಲ್ ಮಾಡಲಿದೆ.ಇದನ್ನೂ ಓದಿ: ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು

  • `ಜೈ’ ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ

    `ಜೈ’ ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ

    ರಾವಳಿ ಭಾಗದ ಪ್ರತಿಭೆ ಹಾಗೂ ಬಿಗ್‌ಬಾಸ್ ಖ್ಯಾತಿಯ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡದ `ಜೈ’ (Jai) ಚಿತ್ರದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಶ್ರೀಮುರಳಿ (Srimurali) ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ (Rupeesh Shetty) ತುಳು ಭಾಷೆಯ ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ ಎಂದು ನಟ ಶ್ರೀಮುರಳಿ ರೂಪೇಶ್ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್‌ ರಾಮ್‌ ಚರಣ್‌

    ಅಂದಹಾಗೆ ಚಿತ್ರದ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರ ಮೂರನೆಯ ನಿರ್ದೇಶನದ ಚಿತ್ರ. ಈ ಹಿಂದೆ ಗಿರಿಗಿಟ್, ಸರ್ಕಸ್ ಎಂಬ ಚಿತ್ರದ ನಿರ್ದೇಶನ ಮಾಡಿದ್ದ ರೂಪೇಶ್ ಶೆಟ್ಟಿ, ಇದೀಗ `ಜೈ’ ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಹಿಂದೆ ಮಾಡಿದ್ದ ಎರಡು ಸಿನಿಮಾಗಳು ಸಕ್ಸಸ್ ಕಂಡಿವೆ. ಅದರಲ್ಲೂ ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರಂತೆ. ಇದೊಂದು ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಇರುವ ಚಿತ್ರವಾಗಿದೆಯಂತೆ. ಇದನ್ನೂ ಓದಿ: ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್

    ಇನ್ನು ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ (Advithi Shetty) ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರಂತೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.

    ಜೈ ಸಿನಿಮಾದ ಚಿತ್ರಕಥೆಯನ್ನ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ `ಜೈ’ ಸಿನಿಮಾದಲ್ಲಿ ನಾಯಕನಾಗಿ ರೂಪೇಶ್ ಶೆಟ್ಟಿ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ.

  • ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು: ಶ್ರೀಮುರಳಿ

    ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು: ಶ್ರೀಮುರಳಿ

    ಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ (Pahalgam Terrorist Attack) ಬಗ್ಗೆ ನಟ ಶ್ರೀಮುರಳಿ (Srimurali) ಕೆಂಡಕಾರಿದ್ದಾರೆ. ಅಮಾಯಕರ ಜೀವ ತೆಗೆದ ಉಗ್ರರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು ಎಂದು ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:‘ಕಿಸ್’ ನಟಿಗೆ ಅದೃಷ್ಟ- ಸಿದ್ಧಾರ್ಥ್ ಮಲ್ಹೋತ್ರಾಗೆ ಶ್ರೀಲೀಲಾ ಜೋಡಿ?

    ಪಹಲ್ಗಾಮ್ ದಾಳಿಯಲ್ಲಿ ಜೀವ ಕಳೆದುಕೊಂಡವರ ಬಗ್ಗೆ ನೋವಾಗ್ತಿದೆ. ಇದನ್ನೆಲ್ಲಾ ಯಾರು ಮಾಡಿದ್ದಾರೋ ಅವರನ್ನು ಹುಡ್ಕೊಂಡು ಹೋಗಿ ಹೊಡೆಯಬೇಕು. ಅಲ್ಲಿ ಸಮಾಧಾನವಿಲ್ಲ. ಈ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ. ಒಬ್ಬ ನಾಗರೀಕನಾಗಿ ಹೇಳಬೇಕು ಅಂದರೆ ಉಗ್ರರ ದಾಳಿ ವಿಷ್ಯ ಕೇಳಿ ಮೈಯಲ್ಲಿ ರಕ್ತ ಕುದಿಯುತ್ತಿದೆ. ಅವರ ಸಂಹಾರ ಆಗೋವರೆಗೂ ನಮಗೆ ನೆಮ್ಮದಿಯಿಲ್ಲ. ಅಮಯರ ಜೀವ ತೆಗೆದಿದ್ದಾರೆ. ಅದಕ್ಕೆ ಉಗ್ರರ ಅಂತ್ಯ ಆಗಲೇಬೇಕು ಎಂದು ಶ್ರೀಮುರಳಿ ಮಾತನಾಡಿದ್ದಾರೆ. ಇದನ್ನೂ ಓದಿ:‘ಬಾಹುಬಲಿ’ ನಟನ ಬಗ್ಗೆ ಹಗುರವಾಗಿ ಮಾತನಾಡಿದ ಮಂಚು ವಿಷ್ಣು- ಪ್ರಭಾಸ್ ಫ್ಯಾನ್ಸ್ ರೆಬೆಲ್

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಬಲಿಯಾಗಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ.

  • ‘ನಾನ್ ಪೋಲಿ’ ಚಿತ್ರತಂಡಕ್ಕೆ ರೋರಿಂಗ್‌ ಸ್ಟಾರ್‌ ಸಾಥ್-‌ ಟ್ರೈಲರ್‌ ಔಟ್‌

    ‘ನಾನ್ ಪೋಲಿ’ ಚಿತ್ರತಂಡಕ್ಕೆ ರೋರಿಂಗ್‌ ಸ್ಟಾರ್‌ ಸಾಥ್-‌ ಟ್ರೈಲರ್‌ ಔಟ್‌

    ನ್ನಡ ಸಿನಿಮಾ ರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಆ ಸಿನಿಮಾಗಳ ಸಾಲಿಗೆ ಈಗ ಹೊಸ ಸೇರ್ಪಡೆ ‘ನಾನ್ ಪೋಲಿ’ (Naan Poli) ಸಿನಿಮಾ. ಹೊಸ ತಂಡದ ಹೊಸ ಪ್ರಯತ್ನದ ಸಿನಿಮಾ ಇದಾಗಿದೆ. ಇದನ್ನೂ ಓದಿ:ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಗಿಣಿ ದ್ವಿವೇದಿ

    ‘ನಾನ್ ಪೋಲಿ’ ಎಂಬ ವಿಭಿನ್ನ ಟೈಟಲ್‌ನೊಂದಿಗೆ ಹೊಸಬರ ಸಿನಿಮಾ ಬರುತ್ತಿದೆ. ಇದೀಗ ಈ ಚಿತ್ರದ ನಿರ್ದೇಶಕ ಹಾಗೂ ನಟ ಯಶವಂತ್, ನಟಿ ದಿಶಾ ಮತ್ತು ಚಿತ್ರದ ತಂಡದವರೆಲ್ಲ ಸೇರಿ ಭಾನುವಾರ ಬೆಳಗ್ಗೆ 10 ಗಂಟೆಗೆ ನಟ ಶ್ರೀಮುರುಳಿರನ್ನು (Srimurali) ಭೇಟಿಯಾಗಿ ಟ್ರೈಲರ್ ಅನ್ನು ಬಿಡುಗಡೆ ಮಾಡಿಸಿದ್ದಾರೆ. ಈ ಚಿತ್ರದ ಟ್ರೈಲರ್ ವೀಕ್ಷಿಸಿದ ಶ್ರೀಮುರುಳಿ ಅವರು ಬಹಳ ಇಂಟರೆಸ್ಟಿಂಗ್ ಆಗಿದೆ ಹಾಗೂ ಚಿತ್ರದ ಶೀರ್ಷಿಕೆ ವಿಭಿನ್ನವಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, 5 ತಿಂಗಳಲ್ಲಿ ಪರಿಹಾರ: ರಿಷಬ್‌ಗೆ ಪಂಜುರ್ಲಿ ಅಭಯ

    ಈ ಚಿತ್ರದ ಶೀರ್ಷಿಕೆ ಇಷ್ಟವಾಗಿದ್ದು, ನಾಯಕ ಯಶ್ವಂತ್‌ಗೆ ಶುಭ ಕೋರಿದ್ದಾರೆ ಶ್ರೀಮುರಳಿ. ಈ ಚಿತ್ರದ ಹಾಡುಗಳನ್ನು ಕೇಳಿ, ಸಂಗೀತ ನಿರ್ದೇಶಕ ಚೇತನ್ ಅವರಿಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಸಬರಿಗೆ ಬೆಂಬಲಿಸಿ ಎಂದು ಶ್ರೀಮುರಳಿ ಕೇಳಿಕೊಂಡಿದ್ದಾರೆ.

  • ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

    ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು: ಶ್ರೀಮುರಳಿ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮದಿನದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಶಿವಣ್ಣ ಭೇಟಿ ಕೊಟ್ಟ ಬೆನ್ನಲ್ಲೇ ಶ್ರೀಮುರಳಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ಶ್ರೀಮುರಳಿ, ಅಪ್ಪು ಮಾಮ ಎಲ್ಲೇ ಇದ್ರೂ ನಗು ನಗುತ್ತಾ ಚೆನ್ನಾಗಿರು ಎಂದಿದ್ದಾರೆ. ಇದನ್ನೂ ಓದಿ:‘ಎಕ್ಕ’ ಸಿನಿಮಾದ ಫಸ್ಟ್‌ ಸಾಂಗ್‌ ಔಟ್- ಯುವ ರಾಜ್‌ಕುಮಾರ್ ಜಬರ್ದಸ್ತ್ ಪರ್ಫಾಮೆನ್ಸ್

    ಅಪ್ಪು ಮಾವನ 50ನೇ ವರ್ಷದ ಹುಟ್ಟುಹಬ್ಬ. ಈ ವರ್ಷ ನೋಡಿಕೊಂಡು ಹೋಗೋಣ ಅಂತ ಬಂದಿದ್ದೇವೆ. ಅಪ್ಪು ಮಾಮ ಎಲ್ಲೇ ಇದ್ದರೂ ನಗು ನಗುತ್ತಾ ಚೆನ್ನಾಗಿರಲಿ, ಅವರನ್ನ ಯಾವಾಗಲೂ ಮಿಸ್ ಮಾಡಿಕೊಳ್ಳುತ್ತೇವೆ. ಎಲ್ಲೋ ಒಂದು ಕಡೆ ನಮ್ಮ ಜೊತೆನೇ ಇದ್ದಾರೆ ಅನ್ನೋ ನಂಬಿಕೆಯಿದೆ. ಅಭಿಮಾನಿಗಳ ಪ್ರೀತಿಗೆ ನಾವು ಚಿರಋಣಿ. ಅವರಿಂದಲೇ ನಾವು, ಅವರೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

    ‘ಅಪ್ಪು’ ಸಿನಿಮಾ ಮೊದಲೇ ನೋಡಿದ್ದೇನೆ. ‘ಅಪ್ಪು’ ರೀ-ರಿಲೀಸ್ ಅಭಿಮಾನಿಗಳ ದಿನ ಎಂದಿದ್ದಾರೆ. ಅವರು ನೋಡಿ ಹೇಗೆ ಸಂಭ್ರಮಿಸುತ್ತಾರೋ, ಅದನ್ನು ನೋಡಿ ನಾವು ಸಂಭ್ರಮಿಸುತ್ತೇವೆ. ಇನ್ನೂ ನನಗೆ ಗೊತ್ತಿರೋದು ಒಬ್ಬರೇ ಅಪ್ಪು ಮಾಮ, ಅವರೇ ಪವರ್ ಸ್ಟಾರ್. ಅವರಂತೆ ಮತ್ತೊಬ್ಬರು ಇಲ್ಲ. ಅವರ ಹಾಗೇ ಆಗೋದಕ್ಕೂ ಅಸಾಧ್ಯ ಎನ್ನುತ್ತಾ ಶ್ರೀಮುರಳಿ ಭಾವುಕರಾಗಿದ್ದಾರೆ.

  • ಕಾಲಾಯ ತಸ್ಮೈ ನಮಃ – ದರ್ಶನ್ ಬೇಲ್ ಬಗ್ಗೆ ಶ್ರೀಮುರಳಿ ರಿಯಾಕ್ಷನ್

    ಕಾಲಾಯ ತಸ್ಮೈ ನಮಃ – ದರ್ಶನ್ ಬೇಲ್ ಬಗ್ಗೆ ಶ್ರೀಮುರಳಿ ರಿಯಾಕ್ಷನ್

    ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ (Darshan) ಜಾಮೀನು ಸಿಕ್ಕ ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಟ್ಟದ್ದು ಬರೋದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗೋಕೆ ಎಂದಿದ್ದಾರೆ. ಇದನ್ನೂ ಓದಿ:ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ

    ಶ್ರೀಮುರಳಿ ಕೆಟ್ಟದ್ದು ಬರೋದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗೋಕೆ ಜೊತೆಗೆ ಒಳ್ಳೆಯ ದಿನಗಳನ್ನು ತೋರಿಸೋಕೆ ಎಂದಿದ್ದಾರೆ. ಬಹುಶಃ ಏನೇ ನೋವಾಗಿದ್ರೂ ಇವತ್ತು ಎಲ್ಲರಿಗೂ ನೆಮ್ಮದಿ ಹಾಗೂ ಸಮಾಧಾನ ಸಿಕ್ಕಿದೆ. ಎಲ್ಲಾ ಕಡೆ ಹೇಳಿದ್ದೀನಿ, ಮತ್ತೊಮ್ಮೆ ಹೇಳ್ತಿದ್ದೀನಿ ಕಾಲಾಯ ತಸ್ಮೈ ನಮಃ ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ.

    ದರ್ಶನ್ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಅವರು ಆಸ್ಪತ್ರೆಯಿಂದ ಬಂದ್ಮೇಲೆ ಭೇಟಿ ಮಾಡುತ್ತೇನೆ ಎಂದು ಶ್ರೀಮುರಳಿ ಮಾತನಾಡಿದ್ದಾರೆ. ಇದನ್ನೂ ಓದಿ:ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್

  • ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್

    ಹೊಸ ಪ್ರತಿಭೆಗಳ ಜೊತೆ ಕೈ ಜೋಡಿಸಿದ ಶ್ರೀಮುರಳಿ- ಬರ್ತ್‌ಡೇಗೆ ‘ಪರಾಕ್’ ಸಿನಿಮಾ ಅನೌನ್ಸ್

    ರೋರಿಂಗ್ ಸ್ಟಾರ್ ಶ್ರೀಮುರಳಿ (Srimurali) ಇಂದು (ಡಿ.17) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ನಟನ ಬರ್ತ್‌ಡೇ ಪ್ರಯುಕ್ತ ‘ಪರಾಕ್’ (Parak) ಎಂಬ ಹೊಸ ಚಿತ್ರ ಘೋಷಣೆಯಾಗಿದೆ. ಒಂದು ಕೈಯಲ್ಲಿ ಗನ್ ಹಿಡಿದು ಬೆನ್ನು ತೋರಿಸ್ತಿರುವ ಶ್ರೀಮುರಳಿ ಬೆನ್ನಿಗೆ ಪಿಸ್ತೂಲ್ ಹಾಕಿ ಪ್ರತ್ಯಕ್ಷರಾಗಿದ್ದಾರೆ. ಇದನ್ನೂ ಓದಿ:ನಾನಿನ್ನೂ ಜೀವಂತವಾಗಿದ್ದೇನೆ – ಬಿಗ್ ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ

    ನವ ನಿರ್ದೇಶಕ ಹಾಲೇಶ್ ಕೋಗುಂಡಿ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಂದಷ್ಟು ಕಿರು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವವಿರುವ ಹಾಲೇಶ್, ಪರಾಕ್ ಸಿನಿಮಾ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

    ಮಾರ್ಚ್‌ನಲ್ಲಿ ‘ಪರಾಕ್’ ಚಿತ್ರದ ಶೂಟಿಂಗ್ ಶುರುವಾಗಲಿದೆ. ದೊಡ್ಡ ಬಜೆಟ್, ದೊಡ್ಡ ತಾರಾಗಣದಲ್ಲಿ ಚಿತ್ರ ನಿರ್ಮಾಣ ಮಾಡಲು ಚಿತ್ರ ಸಜ್ಜಾಗುತ್ತಿದೆ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ನಡಿ ‘ಪರಾಕ್’ ಸಿನಿಮಾ ನಿರ್ಮಾಣವಾಗುತ್ತಿದೆ.

  • ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ

    ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ನಟ ಶ್ರೀಮುರಳಿ

    ಸ್ಯಾಂಡಲ್‌ವುಡ್ ನಟ ಶ್ರೀಮುರಳಿ (Srimurali) ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಇಂದು (ಅ.8) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Kateel Durgaparameshwari Temple) ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ಸುದೀಪ್

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ನಟ ಶ್ರೀಮುರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ನಂತರ ಕ್ಷೇತ್ರದ ವತಿಯಿಂದ ಶ್ರೀಮುರಳಿಗೆ ವೆಂಕಟರಮಣ ಆಸ್ರಣ್ಣ ಅವರು ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು. ಬಳಿಕ ಮಾಧ್ಯಮಕ್ಕೆ ಮಾತನಾಡಿದ ನಟ, ನವರಾತ್ರಿ ಶುಭ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ. ನಾನು ಬಾಲ್ಯದಲ್ಲಿ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಇದೀಗ ಮತ್ತೆ ಇಲ್ಲಿಗೆ ಬರುವ ಅವಕಾಶ ಸಿಕ್ಕಿದೆ. ಸದ್ಯದಲ್ಲೇ ನಾನು ನಟಿಸಿರುವ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.

    ಕರಾವಳಿಯ ನಟರು ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈ ಬಗ್ಗೆ ಖುಷಿಯಿದೆ, ತುಳು ಚಿತ್ರರಂಗ ಬೆಳೆಯುತ್ತಿದೆ. ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗವು ಮುಂದುವರಿಯಬೇಕು ಎಂದು ಶ್ರೀಮುರಳಿ ಮಾತನಾಡಿದರು.

  • ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

    ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

    ಸ್ಯಾಂಡಲ್‌ವುಡ್ ನಟಿ ಮಾನ್ಯಾ ನಾಯ್ಡು (Manya Naidu) ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಹಾಲಿಡೇ ಕಳೆಯಲು ಮಗಳ ಜೊತೆ ಭಾರತಕ್ಕೆ ಮರಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: 1 ಕೋಟಿ ದೇಣಿಗೆ ನೀಡಿದ ಚಿರಂಜೀವಿ, ರಾಮ್ ಚರಣ್

    ಕನ್ನಡದ ಶಾಸ್ತ್ರಿ, ಶಂಭು ಸಿನಿಮಾದಲ್ಲಿ ನಟಿಸಿ ಗೆದ್ದಿದ್ದ ಮಾನ್ಯಾ ಮದುವೆಯ ಬಳಿಕ ವಿದೇಶದಲ್ಲಿ ಸೆಟಲ್ ಆದರು. ಈಗ ಒಂದಷ್ಟು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಮಾನ್ಯಾ, ಸಿನಿಮಾರಂಗದ ತನ್ನ ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಉಪೇಂದ್ರ ದಂಪತಿ (Upendra) ಮನೆಗೆ ಮಗಳೊಂದಿಗೆ ಮಾನ್ಯಾ ಭೇಟಿ ನೀಡಿ ಸಮಯ ಕಳೆದಿದ್ದಾರೆ.

    ಇನ್ನೂ ಶ್ರೀಮುರಳಿ (Srimurali) ಕುಟುಂಬದ ಜೊತೆ ಕೂಡ ಮಾನ್ಯಾ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಮಾನ್ಯಾ ಕಳೆದಿದ್ದಾರೆ. ಶ್ರೀಮುರಳಿ ಫ್ಯಾಮಿಲಿ ಭೋಜನ ಸವಿದಿದ್ದಾರೆ. ಇದನ್ನೂ ಓದಿ:ಬನಶಂಕರಿ ದೇವಿ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

    ಇನ್ನೂ ಅನುಪ್ರಭಾಕರ್ (Anuprabhakar) ಮನೆಗೂ ನಟಿ ಭೇಟಿ ನೀಡಿ, ವರ್ಷ ಸಿನಿಮಾ ಚಿತ್ರೀಕರಣದ ಸಂದರ್ಭವನ್ನು ಸ್ಮರಿಸಿದ್ದಾರೆ. ಅನುಪ್ರಭಾಕರ್ ಜೊತೆ ಮೊದಲು ಭೇಟಿಯಾಗಿದ್ದೆ ವರ್ಷ (Varsha) ಸಿನಿಮಾದ ಸೆಟ್‌ನಲ್ಲಿ ಎಂದು ಹೇಳುತ್ತಾ, ಅವರ ಮನೆಯಲ್ಲಿ ಕಳೆದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಮಾನ್ಯಾ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ ಅವರ ಮಾತೃ ಭಾಷೆ ತೆಲುಗು. ಅನೇಕ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಅವರು 2005ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ಕನ್ನಡ ಮಾತಾಡೋದನ್ನು ಕಲಿತಿದ್ದರು. ಈಗ ಅವರು ಮಗಳಿಗೂ ಕೂಡ ಕನ್ನಡ ಹೇಳಿಕೊಡುತ್ತಿದ್ದಾರೆ.

  • ‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

    ‘ಚೌಕಿದಾರ್’ ಆದ ‘ದಿಯಾ’ ಪೃಥ್ವಿ ಅಂಬಾರ್- ‘ರಥಾವರ’ ಡೈರೆಕ್ಟರ್‌ಗೆ ಶ್ರೀಮುರಳಿ ಸಾಥ್

    ‘ದಿಯಾ’ ಪೃಥ್ವಿ ಅಂಬಾರ್ (Pruthvi Ambar) ಮತ್ತು ‘ರಥಾವರ’ ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಹೊಸ ಸಿನಿಮಾಗೆ ಮಾಸ್ ಟೈಟಲ್ ಫಿಕ್ಸ್ ಮಾಡಲಾಗಿದೆ. ಪೃಥ್ವಿ ಈಗ ‘ಚೌಕಿದಾರ್’ (Chowkidaar) ಆಗಿದ್ದಾರೆ. ಕೆಂಪು ಬಣ್ಣದ ಅಕ್ಷರದ ಮೂಲಕ ಚಿತ್ರತಂಡ ಚೌಕಿದಾರ್ ರಿವೀಲ್ ಮಾಡಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ (Actor Srimurali) ಇದೀಗ ಚಂದ್ರಶೇಖರ್ ಬಂಡಿಯಪ್ಪ ಅವರ 6ನೇ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದು, ಚೌಕಿದಾರ್ ಟೈಟಲ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜೊತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ.

    ‘ಚೌಕಿದಾರ್’ ಟೈಟಲ್ ಕೇಳಿದ ತಕ್ಷಣ ಇದು ಮಾಸ್ ಸಿನಿಮಾ ಎಂದುಕೊಳ್ಳಬೇಡಿ. ಇದು ಪಕ್ಕ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ. ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರುತ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್‌ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು ಕಟ್ಟಿಕೊಟ್ಟಿರುವ ಅವರು ‘ಚೌಕಿದಾರ್’ ಸಿನಿಮಾದಲ್ಲಿ ಯಾವ ರೀತಿ ಕಥೆಯನ್ನು ಕಟ್ಟಿಕೊಟ್ಟಿದ್ದಾರೆಂಬುದು ಕುತೂಹಲ ಪ್ರೇಕ್ಷಕರಲ್ಲಿದೆ. ಇದನ್ನೂ ಓದಿ:ಮದುವೆಯಾದರೆ ಖುಷಿಯಾಗಿರುತ್ತೇನೆ ಎಂಬ ಭರವಸೆಯಿಲ್ಲ: ‘ಮೊನಾಲಿಸಾ’ ನಟಿ

    ಪ್ರತಿಭಾನ್ವಿತ ನಟ ಪೃಥ್ವಿ ಜೊತೆಗಿನ ಚಂದ್ರಶೇಖರ್ ಬಂಡಿಯಪ್ಪ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಈ ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡದ ಒಂದೊಂದಾಗಿ ಮಾಹಿತಿ ನೀಡಲಿದೆ.

    ‘ಆನೆ ಪಟಾಕಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ಬಂಡಿಯಪ್ಪ ಆ ಬಳಿಕ ‘ರಥಾವರ’ ಸಿನಿಮಾ ಮೂಲಕ ದೊಡ್ಡ ಹೆಸರು ಪಡೆದುಕೊಂಡರು. ಆ ಬಳಿಕ ‘ತಾರಕಾಸುರ’ ಸಿನಿಮಾ ಮಾಡಿ ಗೆದ್ದರು. ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್‌ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ‘ರೆಡ್ ಕಾಲರ್’ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

    ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರುತ್ತಿದ್ದಾರೆ.