ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ (Pushpa 2) ಡಿ.6ರಂದು ರಿಲೀಸ್ ಆಗಲಿದೆ. ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರದ ಕುರಿತು ಇಂಟರೆಸ್ಟಿಂಗ್ ಮಾಹಿತಿಯೊಂದು ಸಿಕ್ಕಿದೆ. ಈ ಸಿನಿಮಾದ ಐಟಂ ಹಾಡಿಗೆ ಕನ್ನಡದ ನಟಿ ಶ್ರೀಲೀಲಾ (Sreeleela) ಕುಣಿದಿದ್ದಾರೆ. ಆ ಫೋಟೋ ಲೀಕ್ ಕೂಡ ಆಗಿದೆ.
ಈ ಹಿಂದೆ ಈ ಹಾಡಿಗೆ ಬಾಲಿವುಡ್ ನಟಿಯರ ಹೆಸರೆಲ್ಲ ಕೇಳಿ ಬಂದಿತ್ತು. ಅದರಲ್ಲೂ ಶ್ರದ್ಧಾ ಕಪೂರ್ (Shraddha Kapoor) ಈ ಚಿತ್ರದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
‘ಪುಷ್ಪ 1’ರಲ್ಲಿ ಸಮಂತಾ ಡ್ಯಾನ್ಸ್ ಮಾಡಿದ್ದ ಹಾಡು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಚಿತ್ರದ ಗೆಲುವಿಗೆ ಕಥೆಯ ಜೊತೆ ಸಮಂತಾ ಡ್ಯಾನ್ಸ್ ಪ್ಲಸ್ ಆಗಿತ್ತು. ಹಾಗಾಗಿಯೇ ಪುಷ್ಪ 2ರಲ್ಲೂ ಇದನ್ನೇ ಫಾರ್ಮುಲಾ ಬಳಸುತ್ತಿದ್ದಾರೆ. ಈ ಹಿಂದೆ ಐಟಂ ಹಾಡಿಗೆ ಹೆಜ್ಜೆ ಹಾಕಲು ಜಾನ್ವಿ ಕಪೂರ್, ತೃಪ್ತಿ ದಿಮ್ರಿ, ಶ್ರೀಲೀಲಾ ಹೀಗೆ ಅನೇಕರ ಹೆಸರು ಸದ್ದು ಮಾಡಿತ್ತು. ಈಗ ಶ್ರೀಲೀಲಾ ಕುಣಿದಿರೋದೇ ಪಕ್ಕಾ ಆಗಿದೆ.
ಇದೀಗ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಶ್ರದ್ಧಾಗೆ (Shraddha Kapoor) ಚಿತ್ರತಂಡ ಮಣೆ ಹಾಕಿದೆ ಎನ್ನಲಾಗಿತ್ತು. ಚಿತ್ರದಲ್ಲಿ ನಟಿಗೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಲು ಕೇಳಲಾಗಿದೆ ಎಂದೂ ಹೇಳಲಾಗಿತ್ತು. ಆದರೆ, ಈಗ ಚಿತ್ರಣವೇ ಬದಲಾಗಿದೆ. ಈಗಾಗಲೇ ಹಾಡಿನ ಚಿತ್ರೀಕರಣ ಕೂಡ ಮುಗಿದಿದೆ.
ತೆಲುಗು ಚಿತ್ರರಂಗದ ಪ್ರಾಮಿಸಿಂಗ್ ಹೀರೋ ನಿತಿನ್ (Nitin) 32ನೇ ಸಿನಿಮಾ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ (Extra-Ordinary Man). ಫಸ್ಟ್ ಲುಕ್ ಹಾಗೂ ಹಾಡುಗಳ ಮೂಲಕ ಗಮನಸೆಳೆದಿರುವ ಈ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಮೊದಲು ಡಿಸೆಂಬರ್ 23ಕ್ಕೆ ಚಿತ್ರ ತೆರೆಗೆ ತರುವುದಾಗಿ ಚಿತ್ರತಂಡ ಅನೌನ್ಸ್ ಮಾಡಿತ್ತು. ಈಗ ಅಂದುಕೊಂಡ ದಿನಕ್ಕಿಂತ ಮುನ್ನ ಅಂದ್ರೆ ಡಿಸೆಂಬರ್ 8ಕ್ಕೆ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ ಥಿಯೇಟರ್ ಗೆ ಲಗ್ಗೆ ಇಡಲಿದೆ.
ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿರುವ ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ಗೆ ವಕ್ಕಂತಂ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ನಿತಿನ್ ಗೆ ಜೋಡಿಯಾಗಿ ಮೋಸ್ಟ್ ಬ್ಯುಸಿಯೆಸ್ಟ್ ನಟಿ ಶ್ರೀಲೀಲಾ (Srileela) ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬೋದಲ್ಲಿ ಮೂಡಿಬಂದಿರುವ ಡೇಂಜರ್ ಪಿಲ್ಲಾ ಹಾಡು ಯೂಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿವೆ.
ಇನ್ನು, ‘ಎಕ್ಸ್ಟಾ-ಆರ್ಡಿನರಿ ಮ್ಯಾನ್’ಗೆ ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿರುವ ಚಿತ್ರ, ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಡಿಸೆಂಬರ್ 8ಕ್ಕೆ ರಿಲೀಸ್ ಆಗಲಿದೆ.
ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಪುಷ್ಪಾ 2 ಸಿನಿಮಾದಿಂದ ಹೊಸ ಅಪ್ ಡೇಟ್ ಬಂದಿದ್ದು, ಅದು ಅಲ್ಲು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಹಲವು ತಿಂಗಳಿಂದ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಶೇಕಡಾ 90ರಷ್ಟು ಚಿತ್ರೀಕರಣ ಆಗಿದೆ ಎಂದು ನಂಬಲಾಗಿತ್ತು. ಆದರೆ, ಈವರೆಗೂ ಶೂಟಿಂಗ್ ಆಗಿದ್ದು ಕೇವಲ ಶೇಕಡಾ 30 ರಿಂದ 40ರಷ್ಟು ಅಷ್ಟೇ ಎಂದು ಗೊತ್ತಾಗಿದೆ. ಹಾಗಾಗಿ ಅಂದುಕೊಂಡ ಸಮಯಕ್ಕೆ ಸಿನಿಮಾ ರಿಲೀಸ್ ಆಗುವುದು ಅನುಮಾನವಾಗಿದೆ.
ಒಂದು ಕಡೆ ಚಿತ್ರೀಕರಣ ಕುಂಟುತ್ತಾ ಸಾಗಿದ್ದರೂ, ಮತ್ತೊಂದು ಕಡೆ ಚಿತ್ರತಂಡದಿಂದ ಸುದ್ದಿ ಮೇಲೆ ಸುದ್ದಿಗಳು ಸಿಗುತ್ತಿವೆ. ಅದರಲ್ಲೂ ಈ ಸಿನಿಮಾದ ಐಟಂ ಸಾಂಗ್ ಕುರಿತಾಗಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ. ಹಲವಾರು ನಟಿಯರ ಹೆಸರು ಕೂಡ ಈವರೆಗೂ ಕೇಳಿ ಬಂದಿವೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ
ಪುಷ್ಪ ಸಿನಿಮಾ ಹಿಟ್ ಆಗಲು ‘ಹುಂ ಅಂಟವಾ ಮಾವ’ ಐಟಂ ಸಾಂಗ್ (Item Song) ಕೂಡ ಕಾರಣ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸಮಂತಾ ಈ ಹಾಡಿಗೆ ಮೈಚಳಿ ಬಿಟ್ಟು ಕುಣಿದಿದ್ದರು. ಪಡ್ಡೆಗಳ ಹೃದಯದಲ್ಲಿ ಚಿಟ್ಟೆ ಹಾರಿಸಿದ್ದರು. ಈ ಹಾಡು ಹಿಟ್ ಆಗಿದ್ದರಿಂದ, ಚಿತ್ರದ ಗೆಲುವಿಗೂ ಅದು ಸಹಕಾರಿ ಆಯಿತು. ಪುಷ್ಪ 2ನಲ್ಲೂ ಅಂಥದ್ದೊಂದು ಫಾರ್ಮುಲಾವನ್ನು ಮತ್ತೆ ವರ್ಕ್ ಮಾಡುತ್ತಿದ್ದಾರೆ ನಿರ್ದೇಶಕರು. ಪುಷ್ಪ 2ನಲ್ಲೂ ಒಂದು ಐಟಂ ಸಾಂಗ್ ಇರಲಿದ್ದು, ಅದಕ್ಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಊವರ್ಶಿ ಬದಲು ಕನ್ನಡದ ನಟಿ ಶ್ರೀಲೀಲಾ (Sreeleela) ಡಾನ್ಸ್ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಸದ್ಯ ತೆಲುಗು ಚಿತ್ರೋದ್ಯಮದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಸ್ಪರ್ಧೆಗೆ ಬಿದ್ದಿದ್ದಾರೆ. ರಶ್ಮಿಕಾಗೆ ಸಿಗಬೇಕಿದ್ದ ಹಲವು ಅವಕಾಶಗಳನ್ನು ಶ್ರೀಲೀಲಾ ಕಿತ್ತುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪುಷ್ಪಾ 2 ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದರೆ, ಶ್ರೀಲೀಲಾ ಕೇವಲ ಐಟಂ ಹಾಡಿಗೆ ಸೊಂಟ ಬಳುಕಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಹೊರ ಬೀಳದೇ ಇದ್ದರೂ, ಸುದ್ದಿಯಂತೂ ಸಖತ್ ಸೇಲ್ ಆಗುತ್ತಿದೆ.
ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 ಸಿನಿಮಾದ ಶೂಟಿಂಗ್ ಕುಂಟುತ್ತಾ ಸಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್ (Climax) ದೃಶ್ಯದ ಚಿತ್ರೀಕರಣವನ್ನು ಮಾಡಲು ನಿರ್ದೇಶಕ ಸುಕುಮಾರನ್ (Sukumaran) ಪ್ಲ್ಯಾನ್ ಮಾಡಿದ್ದು, ಅದೊಂದು ರೋಮಾಂಚನಕಾರಿ ನೀಡುವಂತಹ ಸನ್ನಿವೇಶವಾಗಿದೆ ಎಂದು ಹೇಳಲಾಗುತ್ತಿದೆ. ಈ ದೃಶ್ಯವನ್ನು ತಿರುಪತಿ ಜಿಲ್ಲೆಯ ಪೂರ್ವ ಘಟ್ಟದಲ್ಲಿರುವ ಸ್ವರ್ಣಮುಖಿ (Swarnamukhi) ನದಿಯ ತೀರದಲ್ಲಿ ಶೂಟ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಅಲ್ಲು ಅರ್ಜುನ್ ಜೊತೆ ಫಾಸಿಲ್ ಕೂಡ ಭಾಗಿಯಾಗಲಿದ್ದಾರಂತೆ. ಈ ದೃಶ್ಯಕ್ಕೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ರಕ್ತ ಚಂದನವನ್ನು ಕಳ್ಳ ಮಾರ್ಗದಲ್ಲಿ ಸಾಗಿಸುವ ಪುಷ್ಪರಾಜನ ವಿರುದ್ಧ ಭನ್ವಿರ್ ಸಿಂಗ್ ಮಾಡುವ ದಾಳಿಯೇ ಕ್ಲೈಮ್ಯಾಕ್ಸ್ ದೃಶ್ಯ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್
ಈ ನಡುವೆ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.
ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ.
ತೆಲುಗು ಚಿತ್ರರಂಗದ ಪ್ರಾಮಿಸಿಂಗ್ ಹೀರೋ ನಿತಿನ್ (Nikhil) 32ನೇ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಲಾಗಿದೆ. ವಕ್ಕಂತಂ ವಂಶಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ‘ಎಕ್ಸ್ಟ್ರಾಡಿನರಿ ಮ್ಯಾನ್’ (Extraordinary Man) ಎಂಬ ಕ್ಯಾಚಿ ಟೈಟಲ್ (Title) ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ನ ಒಂದು ಫೋಟೋದಲ್ಲಿ ನಿತಿನ್ ಗಡ್ಡ, ಕೂದಲು ಬಿಟ್ಟು ರಗಡ್ ಆಗಿ ಕಾಣಿಸಿಕೊಂಡಿದ್ರೆ, ಮತ್ತೊಂದು ಫೋಟೋದಲ್ಲಿ ಸ್ಟೈಲೀಶ್ ಆಗಿ ಮಿಂಚಿದ್ದಾರೆ. ಎರಡು ಶೇಡ್‌ನಲ್ಲಿ ನಾಯಕನನ್ನು ಪರಿಚಯ ಮಾಡಿಕೊಡಲಾಗಿದೆ. ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ನಿತಿನ್ ನಟಿಸಿದ್ದಾರೆ.
ಎಕ್ಸ್ಟ್ರಾಡಿನರಿ ಮ್ಯಾನ್ ಔಟ್ ಅಂಡ್ ಔಟ್ ಎಂಟರ್ ಟೈನ್ಮೆಂಟ್ ಸಿನಿಮಾವಾಗಿದ್ದು, ಈಗಾಗಲೇ ಶೇಕಡಾ 60ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಲಾಗಿದೆ. ಇನ್ನು, ನಿತಿನ್ ಗೆ ಜೋಡಿಯಾಗಿ ಮೋಸ್ಟ್ ಹ್ಯಾಪನಿಂಗ್ ನಟಿ ಶ್ರೀಲೀಲಾ (Sreeleela, ) ನಟಿಸುತ್ತಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಬಿಗ್ ಬಾಸ್ ದೀಪಿಕಾ ದಾಸ್ ಮೋಜು-ಮಸ್ತಿ
ಈ ಮೊದಲು ಈ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿರುವುದಾಗಿ ಚಿತ್ರತಂಡ ತಿಳಿಸಿತ್ತು. ನಿತಿನ್- ರಶ್ಮಿಕಾ ನಟನೆಯ ‘ಭೀಷ್ಮ’ ಸಿನಿಮಾ ಹಿಟ್ ಆಗಿತ್ತು. ಹಾಗಾಗಿ ಅದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಘೋಷಣೆ ಆಗಿತ್ತು. ಚಿತ್ರದಲ್ಲಿ ರಶ್ಮಿಕಾ ನಟಿಸೋದು ಕನ್ಫರ್ಮ್ ಆಗಿತ್ತು. ಸಿನಿಮಾ ಮುಹೂರ್ತ ಸಮಾರಂಭದಲ್ಲೂ ರಶ್ಮಿಕಾ ಭಾಗಿ ಆಗಿದ್ದರು. ಡೇಟ್ಸ್ ಕಾರಣದಿಂದ ರಶ್ಮಿಕಾ ಚಿತ್ರದಿಂದ ಹೊರ ನಡೆದಿದ್ದು, ಆ ಜಾಗಕ್ಕೆ ಶ್ರೀಲೀಲಾ ಎಂಟ್ರಿಯಾಗಿದೆ.
ಸುಧಾಕರ್ ರೆಡ್ಡಿ ಹಾಗೂ ನಿಖಿತಾ ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿರುವ ಎಕ್ಸ್ಟ್ರಾಡಿನರಿ ಮ್ಯಾನ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಬರುತ್ತಿದೆ. ಟೈಟಲ್ ಹಾಗೂ ಫಸ್ಟ್ ಲುಕ್ ಅನೌನ್ಸ್ ಮಾಡಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನೂ ಸಹ ತಿಳಿಸಿದೆ. ಇದೇ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್ 23ಕ್ಕೆ ಎಕ್ಸ್ಟ್ರಾಡಿನರಿ ಮ್ಯಾನ್ ಸಿನಿಮಾ ತೆರೆಗೆ ಬರಲಿದೆ.
ಉಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಹಾಗೂ ಬೋಯಾಪಾಟಿ ಶ್ರೀನು (Boyapati Srinu) ಕಾಂಬಿನೇಷನ್ ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರಕ್ಕೆ ‘ಸ್ಕಂದ’ (Skanda) ಎಂದು ಹೆಸರಿಡಲಾಗಿದೆ. ಸ್ಕಂದನಾಗಿ ರಾಮ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಗ್ಲಿಂಪ್ಸ್ ಮೂಲಕ ಚಿತ್ರತಂಡ ಪವರ್ ಫುಲ್ ಟೈಟಲ್ (Title) ರಿವೀಲ್ ಮಾಡಿದೆ.
ಕಾರ್ತಿಕೇಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಇನ್ನೊಂದು ಹೆಸರೇ ಸ್ಕಂದ. ಪಂಚಿಂಗ್ ಡೈಲಾಗ್ ಮೂಲಕ ಮಾಸ್ ಅವತಾರದಲ್ಲಿ ರಾಮ್ ಪೋತಿನೇನಿ ಧಗಧಗಿಸಿದ್ದಾರೆ. ದಸರಾಗೆ ಸ್ಕಂದ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿತ್ತು. ಆದರೆ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ
ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಸ್ಕಂದ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ (Srileela) ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ.
ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ. ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಮಾಸ್ ಅವತಾರ, ಪವರ್ ಫುಲ್ ಟೈಟಲ್ ಸ್ಕಂದ ಅಬ್ಬರ ಜೋರಾಗಿದೆ.
ಪೂಜಾ ಹೆಗಡೆ (Pooja Hegde) ವಾರದಿಂದ ಸುದ್ದಿಯಲ್ಲಿದ್ದಾರೆ. ಒಂದೇ ಸಿನಿಮಾ ಬಿಟ್ಟು ಹೊರ ಬಂದಿದ್ದೇ ಕಾರಣ. ಸತತ ಸೋಲಿನಿಂದ ಒದ್ದಾಡುತ್ತಿರುವ ಪೂಜಾ ‘ಗುಂಟೂರು ಖಾರಂ’ (Guntur Kharam) ನಿಂದ ದೂರವಾದರು. ಮಹೇಶ್ ಬಾಬು ಜೊತೆ ನಟಿಸುವ ಅವಕಾಶ ಕಳೆದುಕೊಂಡರು. ಇದಕ್ಕೆಲ್ಲ ಯಾವ್ಯಾವುದೋ ಕಾರಣ ಎನ್ನುವ ಖಬರ್ ಹರಡಿತು. ಆದರೆ ಅಸಲಿಗೆ ಬಾಲಿವುಡ್ ಸ್ಟಾರ್ ಡೈರೆಕ್ಟರ್ ಇದಕ್ಕೆ ಮೂಲ ಹೂರಣ ಎನ್ನುವ ಮಾತು ಹೊಗೆಯಾಡುತ್ತಿದೆ. ಯಾಕಾಗಿ ಪೂಜಾ ಖಾರ ತಿನ್ನಲು ಒಲ್ಲೆ ಎಂದರು? ಬಾಲಿವುಡ್ ನಿರ್ದೇಶಕನ ಸ್ಕೆಚ್ ಮತ್ತೇನು? ಗುಂಟೂರು ಪೂಜಾ ಸಜಾ ಕಥನ ನಿಮ್ಮ ಮುಂದೆ.
ಪೂಜಾ ಹೆಗಡೆ ಕಳೆದ ನಾಲ್ಕು ವರ್ಷಳಿಂದ ಒಂದೇ ಒಂದು ಹಿಟ್ ಕೊಟ್ಟಿಲ್ಲ. ಟಾಪ್ ಸ್ಟಾರ್ಸ್ ಜೊತೆ ಕುಣಿದರೂ ಜನರು ಕ್ಯಾರೇ ಎನ್ನಲಿಲ್ಲ. ಒಂದಾದರೂ ಹಿಟ್ ಕೊಡಬೇಕು. ಇದನ್ನೇ ಜಪ ಮಾಡಿದರೂ ದೇವರು ಆಶೀರ್ವಾದ ಮಾಡಲಿಲ್ಲ. ಇದೇ ಹೊತ್ತಲ್ಲಿ ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಸಿನಿಮಾಕ್ಕೆ ಬುಲಾವ್ ಬಂದಿತು. ಆದರೆ ಅದು ತಡವಾಯಿತು. ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು
ಪೂಜಾ ಕೊಟ್ಟ ಡೇಟ್ಸ್ ಮುಗಿಯಿತು. ಪೂಜಾ ಔಟ್ ಆದರು. ಆ ಜಾಗಕ್ಕೆ ಅದೇ ಚಿತ್ರಕ್ಕೆ ಸೆಕೆಂಡ್ ಹೀರೋಯಿನ್ ಆಗಿದ್ದ ಕನ್ನಡದ ಶ್ರೀಲೀಲಾ (Srileela) ಪವಡಿಸಿ ಪಕಪಕ ನಕ್ಕರು. ಆದರೆ ಪೂಜಾ ಆ ಚಿತ್ರದಿಂದ ಹೊರ ಬೀಳಲು ಅಸಲಿ ಕಾರಣ ಇದ್ಯಾವುದೂ ಅಲ್ಲ, ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ (Karan Johar) ಅನ್ನೋದು ಗಿಚ್ಚಿ ಗಿಲಿಗಿಲಿ.
ಬಾಲಿವುಡ್‌ನಲ್ಲಿ (Bollywood) ಪೂಜಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದ್ಯಾವುದೂ ಹೇಳಿಕೊಳ್ಳುವ ಹೆಸರು ತರಲಿಲ್ಲ. ಖುದ್ದು ಸಲ್ಮಾನ್ ಖಾನ್ ಜೊತೆ ಕುಣಿದ ಕಿಸಿ ಕಾ ಭಾಯಿ ಕಿಸಿ ಕೀ ಜಾನ್ ಕೂಡ ಅಂಗಾತ ಮಲಗಿತು. ಟಾಲಿವುಡ್‌ನಲ್ಲಿ ಗುಂಟೂರು ಖಾರಂ ಮಾತ್ರ ಕೈಯಲ್ಲಿತ್ತು. ನಿರ್ದೇಶಕ ತ್ರಿವಿಕ್ರಮ್ ಸ್ಕಿಪ್ಟ್ ಚೇಂಜ್ ಮಾಡಿದ್ದು, ಪೂಜಾ ಪಾತ್ರಕ್ಕೆ ಕತ್ತರಿ ಹಾಕಿದ್ದು, ಶ್ರೀಲೀಲಾಗೆ ರತ್ನಗಂಬಳಿ ಹಾಸಿದ್ದು. ಇದೆಲ್ಲ ಒಂದೇ ಕುಕ್ಕರಿನಲ್ಲಿ ಬೆಂದಾಗ ಪೂಜಾ ಕುದ್ದು ಹೋಗದೇ ಇರುತ್ತಾರಾ? ಅದಕ್ಕೆ `ನೀನು ಬ್ಯಾಡ ನಿನ್ ಸಿನಿಮಾನೂ ಬ್ಯಾಡ…’ ಅಂತ ಸ್ವಾಟೆ ತಿರುವಿ ಎದ್ದು ಬಂದರಂತೆ. ಇದೇ ನಿಜವಾ ಅಥವಾ ಬೇರೆ ಯಾರಾದರೂ ಊದಿನ ಕಡ್ಡಿ ಹಚ್ಚಿದರಾ? ಆಗ ಕರಣ್ ಕುಲುಕುಲು ನಗುತ್ತಾ ಬಂದರಲ್ಲಾ.
ಕರಣ್ ಜೋಹರ್ ಬಾಲಿವುಡ್‌ನ ದೊಡ್ಡ ಹೆಸರು. ಅವರದೇ ಬ್ಯಾನರ್‌ನ ಎರಡು ಸಿನಿಮಾಗಳಿಗೆ ಪೂಜಾರನ್ನು ಬುಕ್ ಮಾಡಿದ್ದಾರಂತೆ. `ಕಾಲಿವುಡ್, ಟಾಲಿವುಡ್‌ಗೆ ಮಾರೋ ಗೋಲಿ. ಬಾಲಿವುಡ್‌ನಲ್ಲಿ ಆಡು ಬಾ ಹೋಳಿ…’ ಹೀಗೆ ಎರಡೂ ಕೈಗಳಿಂದ ಅಪ್ಪಿಕೊಂಡಿದ್ದಾರೆ. ನಾಲ್ಕು ಸಿನಿಮಾ ಗೋತಾ ಹೊಡೆದ ಸುಸ್ತಿನಲ್ಲಿದ್ದ ಪೂಜಾಗೆ ಕರಣ್ ಕಣ್ಣಲ್ಲಿ ಐರನ್ ಕಂಟೆಂಟ್ ಇರುವ ಕರಿಬೇವಿನ ಸೊಪ್ಪು ಕಾಣಿಸಿದೆ. ಫಲಿತಾಂಶ ಟಾಲಿವುಡ್‌ಗೆ ಟಾಟಾ ಬಾಲಿವುಡ್‌ನಲ್ಲಿ ಆಟ. ಜಸ್ಟ್ ಆರಂಭ. ಹತ್ತಿದ ಏಣಿ ಒದ್ದಿರುವ ಡಸ್ಕಿ ಬ್ಯೂಟಿಗೆ ಬಾಲಿವುಡ್ ಮಾವಿನ ಹಣ್ಣು ತಿನ್ನಿಸುತ್ತಾ ಅಥವಾ ಹಸಿ ಹಾಗಲಕಾಯಿ ಹಸಿಹಸಿಯಾಗಿಯೇ ಮುಕ್ಕಿಸುತ್ತಾ? ನೋಡೋಣ. ಕಾಯೋಣ.
ಅಖಂಡ ಸಿನಿಮಾದ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಬೋಯಾಪಾಟಿ ಶ್ರೀನು ನಿರ್ದೇಶನದಲ್ಲಿ ಮೂಡಿಬರ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಬೋಯಾಪಾಟಿರಾಪೋ. ಉಸ್ತಾದ್ ರಾಮ್ ಪೋತಿನೇನಿ ನಟನೆಯ ಮಾಸ್ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಈ ಚಿತ್ರವನ್ನು ಅಕ್ಟೋಬರ್ 20ರಂದು ದಸರಾ ಪ್ರಯುಕ್ತ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. ಆದರೀಗ ನಿಗದಿತ ಸಮಯಕ್ಕಿಂತಲೂ ಒಂದು ತಿಂಗಳು ಮುಂಚಿತವಾಗಿಯೇ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ಸೆಪ್ಟಂಬರ್ 15ರಂದು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬೋಯಾಪಾಟಿರಾಪೋ ವಿಶ್ವಾದ್ಯಂತ ರಿಲೀಸ್ ಆಗಲಿದೆ. ವೈಟ್ ಅಂಡ್ ವೈಟ್ ಪಂಚೆ ತೊಟ್ಟು ಕೈಯಲ್ಲಿ ಕಾಫಿ ಕಪ್ ಹಿಡಿದು ಹಸಿರನ್ನೇ ಹಾಸಿ ಹೊದ್ದಿರುವ ಭತ್ತದ ಗದ್ದೆಯಲ್ಲಿ ರಾಮ್ ಪೋತಿನೇನಿ ಕುಳಿತಿರುವ ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ
ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಬೋಯಾಪಾಟಿರಾಪೋ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ.
ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಬೋಯಾಪಾಟಿರಾಪೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸದ್ಯ ಬೋಯಾಪಾಟಿರಾಪೋ ಎಂಬ ತಾತ್ಕಾಲಿಕ ಶೀರ್ಷಿಕೆ ಫಿಕ್ಸ್ ಮಾಡಲಾಗಿದೆ.
ಟಾಲಿವುಡ್ ಚಿತ್ರರಂಗದ ಪ್ರತಿಭಾನ್ವಿತ ನಟ ಉಸ್ತಾದ್ ರಾಮ್ ಪೋತಿನೇನಿ (Ustad Ram Pothineni) ಮೈಸೂರಿಗೆ (Mysore) ಬಂದಿಳಿದಿದ್ದಾರೆ. ಅವರ ನಟನೆಯ ‘ಬೊಯಾಪತಿ ರಾಪೊ’ ಸಿನಿಮಾದ ಶೂಟಿಂಗ್ ಇಂದಿನಿಂದ ನಡೆಯುತ್ತಿದ್ದು ಈ ತಿಂಗಳು 15ನೇ ತಾರೀಖಿನವರೆಗೂ ಅವರು ಮೈಸೂರಿನಲ್ಲೇ ಬೀಡು ಬಿಡಲಿದ್ದಾರೆ. ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಇದಾಗಿದೆ. ಉಸ್ತಾದ್ ರಾಮ್ ಪೋತಿನೇನಿ ಜೊತೆಗೆ ಕನ್ನಡತಿ ಶ್ರೀಲೀಲಾ (Srileela) ಕೂಡ ಇದ್ದಾರೆ.
ಈ ಹಿಂದೆ ಉಸ್ತಾದ್ ರಾಮ್ ಪೋತಿನೇನಿ ಹುಟ್ಟುಹಬ್ಬದಂದು ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ (First Glimpses) ರಿಲೀಸ್ ಆಗಿತ್ತು. ಕೈಯಲ್ಲಿ ಕತ್ತಿ ಹಿಡಿದು, ಎಮ್ಮೆಯೊಟ್ಟಿಗೆ ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ರಾಮ್ ಪೋತಿನೇನಿ ಎಂಟ್ರಿ ಕೊಟ್ಟ ಗ್ಲಿಂಪ್ಸ್ ಸಖತ್ ಸದ್ದು ಕೂಡ ಮಾಡಿತ್ತು. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ : ತಾಯಿ ಆಗಲಿದ್ದಾರೆ ನಟಿ ಸ್ವರಾ ಭಾಸ್ಕರ್
ಮಾಸ್ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಈ ಸಿನಿಮಾಗೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಸಾರಥಿ ಬೋಯಾಪಾಟಿ ಸೀನು (Boyapati Seenu) ಆಕ್ಷನ್ ಕಟ್ ಹೇಳಿದ್ದಾರೆ. ಲವರ್ ಬಾಯ್ ಆಗಿ ಮಿಂಚುತ್ತಿದ್ದ ರಾಮ್ ಪೋತಿನೇನಿ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಗೆ ಜೋಡಿಯಾಗಿ ನಟಿಸಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮೆರಾ ವರ್ಕ್, ತಮನ್ ಎಸ್ ಎಸ್ ಮ್ಯೂಸಿಕ್ ಕಿಕ್ ಚಿತ್ರಕ್ಕಿದೆ.
ಬೋಯಾಪಾಟಿ ಶೀನು ಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ನಡಿ ಶ್ರೀನಿವಾಸ್ ಚಿತ್ತೂರಿ ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಪಕ್ಕ ಮಾಸ್ ಎಂಟರ್ ಟೈನರ್ ಜಾನರ್ ನ ಈ ಚಿತ್ರ ಇದೇ ವರ್ಷ ಅಕ್ಟೋಬರ್ 20ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.
ಬಾಲಯ್ಯ (Balayya) ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ
ಶೂಟಿಂಗ್ ಸ್ಥಳದಲ್ಲಿ ಇದ್ದವರ ಮಾಹಿತಿ ಪ್ರಕಾರ, ಅದು ಕೋಪದಿಂದ ಹೊಡೆದ ಘಟನೆಯಲ್ಲವಂತೆ. ಅಂಥದ್ದೊಂದು ದೃಶ್ಯ ಸಿನಿಮಾದಲ್ಲಿತ್ತು ಎಂದು ಹೇಳಲಾಗುತ್ತಿದೆ. ಬಾಲಯ್ಯ ಕುಟುಂಬದ ಸೊಸೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸೊಸೆಯನ್ನು ಹೊಡೆಯುವಂತಹ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಶ್ರೀಲೀಲಾ ಅವರೇ ದೃಶ್ಯ ನೈಜವಾಗಿ ಬರಲಿ ಎನ್ನುವ ಕಾರಣಕ್ಕಾಗಿ ಜೋರಾಗಿ ಕೆನ್ನೆಗೆ ಬಾರಿಸಿ ಎಂದು ಬಾಲಯ್ಯನವರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದು ನಿಜವೋ ಯಾವುದು ಸುಳ್ಳು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.