Tag: srilanka

  • ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ದೇವರೆಂದು ಕಾಲಿಗೆ ಬಿದ್ದ ಅಭಿಮಾನಿಯ ಆಸೆ ಪೂರೈಸಿದ ಕೊಹ್ಲಿ – ನೆಟ್ಟಿಗರಿಂದ ಭಾರೀ ಮೆಚ್ಚುಗೆ

    ತಿರುವನಂತಪುರಂ: ಟೀಂ ಇಂಡಿಯಾ (Team India) ಸ್ಟಾರ್ ಕ್ರಿಕೆಟಿಗ, ಚೇಸ್ ಮಾಸ್ಟರ್ ಕೊಹ್ಲಿಗೆ (Virat Kohli) ವಿಶ್ವಾದ್ಯಂತ ಫ್ಯಾನ್ಸ್ ಇದ್ದಾರೆ ಅನ್ನೋದು ಗೊತ್ತಿದೆ. ಅಂತೆಯೇ ಕೊಹ್ಲಿ ಸಹ ತಮ್ಮ ಅಭಿಮಾನಿಗಳೊಂದಿಗೆ (Virat Kohli Fans)ಯಾವ ರೀತಿ ನಡೆದುಕೊಳ್ತಾರೆ, ಎಷ್ಟು ಪ್ರಾಮುಖ್ಯತೆ ಕೊಡ್ತಾರೆ ಅನ್ನೋದು ಕೆಲವು ಸನ್ನಿವೇಶಗಳಿಂದ ಸಾಕ್ಷಿಯಾಗುತ್ತಿದ್ದಾರೆ.

    ಭಾನುವಾರ ಶ್ರೀಲಂಕಾ (SriLanka) ವಿರುದ್ಧ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 317 ಭಾರೀ ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ವಿಶ್ವದಾಖಲೆ ಬರೆಯಿತು. ಈ ಪಂದ್ಯ ಮುಗಿಯುತ್ತಿದ್ದಂತೆ ಟೀಂ ಇಂಡಿಯಾ ಸಂಭ್ರಮದಲ್ಲಿತ್ತು. ಈ ವೇಳೆ ಸ್ಟೇಡಿಯಂಗೆ ಧುಮುಕಿದ ಅಭಿಮಾನಿಯೊಬ್ಬ ನೇರವಾಗಿ ವಿರಾಟ್ ಕೊಹ್ಲಿ ಅವರ ಕಾಲಿಗೆ ಬಿದ್ದರು, ಕೊಹ್ಲಿ ದೇವರೆಂದು ಕೊಂಡಾಡಿದರು. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಈ ವೇಳೆ ಭದ್ರತಾ ಸಿಬ್ಬಂದಿ ಆತನನ್ನ ತಡೆದು, ಹೊರಹಾಕಲು ಪ್ರಯತ್ನಿಸಿದರು. ಆದ್ರೆ ಅಭಿಮಾನಿ ಪರ ನಿಂತ ಕೊಹ್ಲಿ ಸ್ಟೇಡಿಯಂನಲ್ಲೇ ತನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಟ್ಟರು. ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್, ಕೊಹ್ಲಿ ಅಭಿಮಾನಿಗಳಿಗೆ ಫೋಟೋ ಗ್ರಾಫರ್‌ಆಗಿ ನಿಂತರು. ಇದನ್ನೂ ಓದಿ: ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು – ವಿಶ್ವದಾಖಲೆಯೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌

    ಶ್ರೀಲಂಕಾ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 390 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ 22 ಓವರ್‌ಗಳಲ್ಲೇ 73 ರನ್ ಗಳಿಸಿ ಸರ್ವಪತನ ಕಂಡಿತು. ಟೀಂ ಇಂಡಿಯಾ 317 ರನ್‌ಗಳ ಅಂತರದಿಂದ ಗೆದ್ದು ವಿಶ್ವದಾಖಲೆ ಬರೆಯಿತು. ಈ ಪಂದ್ಯದಲ್ಲಿ ಕೊನೆಯವರೆಗೂ ಅಜೇರಾಗಿ ಹೋರಾಡಿದ ಕೊಹ್ಲಿ 110 ಎಸೆತಗಳಲ್ಲಿ 166 ರನ್ (13 ಬೌಂಡರಿ, 8 ಸಿಕ್ಸ್) ಚಚ್ಚಿ ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ಸಿಕ್ಸರ್, ಬೌಂಡರಿಗಳ ಸುರಿಮಳೆ – ಕಿಂಗ್ ಕೊಹ್ಲಿಯಿಂದ ಸಚಿನ್ ದಾಖಲೆ ಉಡೀಸ್‌

    ತಿರುವನಂತಪುರಂ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವರ್ಷದ ಮೊದಲ ಏಕದಿನ ಸರಣಿಯಲ್ಲಿ 2 ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ (Sachin Tendulkar) ದಾಖಲೆಯನ್ನ ಉಡೀಸ್ ಮಾಡಿದ್ದಾರೆ.

    ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 85 ಎಸೆತಗಳಲ್ಲಿ ಶತಕ ಸಿಡಿಸಿದ ಕೊಹ್ಲಿ, ಸ್ವದೇಶದಲ್ಲಿ 21 ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಮುಖ್ಯವಾಗಿ ಏಕದಿನ ಪಂದ್ಯದಲ್ಲೀ ಶ್ರೀಲಂಕಾ (SriLanka) ವಿರುದ್ಧವೇ 10 ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆಯನ್ನ ಮುರಿದಿದ್ದಾರೆ. 

    ಸಚಿನ್ ತೆಂಡೂಲ್ಕರ್ 164 ಪಂದ್ಯಗಳ 102 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರೆ ಕೊಹ್ಲಿ 104 ಪಂದ್ಯಗಳ 101 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ. ಏಕದಿನದಲ್ಲಿ ಕೊಹ್ಲಿ ಒಟ್ಟು 46 ಶತಕ ಹೊಡೆದಿದ್ದು, ಲಂಕಾ ವಿರುದ್ಧವೇ 10 ಶತಕ ಬಾರಿಸಿದ್ದಾರೆ. ಈ ಹಿಂದೆ ಸಚಿನ್ ಲಂಕಾ ವಿರುದ್ಧ 9 ಶತಕ ಹೊಡೆದಿದ್ದರು. ಇದನ್ನೂ ಓದಿ: ಶತಕ ಹೊಡೆದು ಸಚಿನ್‌ ದಾಖಲೆ ಸರಿಗಟ್ಟಿದ ಕಿಂಗ್‌ ಕೊಹ್ಲಿ

    16ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ಅಂತಿಮವಾಗಿ 50 ಓವರ್ ತನಕ ಔಟಾಗದೇ 166 ರನ್ ಚಚ್ಚಿದ್ದಾರೆ. 14 ಬೌಂಡರಿ, 8 ಸಿಕ್ಸರ್‌ಗಳೂ ಇದರಲ್ಲಿ ಸೇರಿವೆ. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ ಕೊಹ್ಲಿ ಮೊದಲ 48 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅರ್ಧ ಶತಕ ಸಿಡಿಸಿದ್ದರು. ಬಳಿಕ 85 ಎಸೆತಗಳಲ್ಲಿ 100 ರನ್ ಚಚ್ಚಿದರು. ಶತಕದ ಬಳಿಕ 150.90 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೊಹ್ಲಿ ಮುಂದಿನ 25 ಎಸೆತಗಳಲ್ಲಿ 66 ರನ್ ಬಾರಿಸಿದರು. ಪರಿಣಾಮ ಲಂಕಾಗೆ ಟೀಂ ಇಂಡಿಯಾ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು.

    ಈವರೆಗೆ ಒಟ್ಟಾರೆಯಾಗಿ 74 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ (ODI Cricket) 46 ಶತಕ ಸಿಡಿಸಿದ್ದಾರೆ. ಇನ್ನೂ 3 ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ವಿಶ್ವದ ನಂ.1 ಆಟಗಾರ ಅಗಲಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಒಟ್ಟು 100 ಶತಕ ಬಾರಿಸಿರುವ ಸಚಿನ್ ಟೆಸ್ಟ್ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನ ಸಿಡಿಸಿದ್ದಾರೆ.

    2012 ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 183 ರನ್ ಗಳಿಸಿದ್ದು, ವಿರಾಟ್ ಕೊಹ್ಲಿ ಅವರ ಈವರೆಗಿನ ಅತಿಹೆಚ್ಚು ರನ್ ಆಗಿತ್ತು. ಇದೀಗ 162 ರನ್ ಕೊಹ್ಲಿಯ 2ನೇ ಅತ್ಯಧಿಕ ಸ್ಕೋರ್ ಆಗಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 390 ರನ್ ಗಳಿಸಿತು. ರೋಹಿತ್ ಶರ್ಮಾ 42, ಶುಭಮನ್ ಗಿಲ್ 116, ವಿರಾಟ್ ಕೊಹ್ಲಿ 166, ಶ್ರೇಯಸ್ ಅಯ್ಯರ್ 38, ಕೆ.ಎಲ್ ರಾಹುಲ್ 7, ಸೂರ್ಯಕುಮಾರ್ ಯಾದವ್ 4 ಹಾಗೂ ಅಕ್ಷರ್ ಪಟೇಲ್ 2 ರನ್ ಗಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಆರ್ಥಿಕ ಬಿಕ್ಕಟ್ಟು – ಪಾಕ್‌ನಲ್ಲಿ ಅಗತ್ಯ ವಸ್ತುಗಳ ಕೊರತೆ, ಚಿಕನ್ ಬೆಲೆಯೂ ಗಗನಕ್ಕೆ

    ಇಸ್ಲಾಮಾಬಾದ್: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ (Economic Crisis) ಪಾಕಿಸ್ತಾನ ಈಗಾಗಲೇ ಶ್ರೀಲಂಕಾ (SriLanka) ಪರಿಸ್ಥಿತಿಯನ್ನು ಎದುರಿಸುತ್ತಿದೆ.

    ದಿನದಿಂದ ದಿನಕ್ಕೆ ಪಾಕಿಸ್ತಾನದ (Pakistan) ಸ್ಥಿತಿ ದಾರುಣವಾಗ್ತಿದೆ. ಈಗಾಗಲೇ ಚಿಕನ್ (Chicken), ಗೋಧಿ ಹಿಟ್ಟಿನ ಬೆಲೆಗಳು ಗಗನಕ್ಕೇರಿವೆ. ಇದೀಗ ಮತ್ತಷ್ಟು ಅಗತ್ಯ ವಸ್ತುಗಳ ಕೊರತೆ ಭೀತಿಯೂ ಎದುರಾಗಿದೆ. ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟು – ಪಾಕಿಸ್ತಾನದಲ್ಲಿ ಇಂಧನ ಉಳಿಸಲು ಮಾಲ್, ಮಾರ್ಕೆಟ್, ಮದುವೆ ಹಾಲ್‌ಗಳು ಬಂದ್

    ಆಮದು ನಿಂತುಹೋಗಿರುವ ಕಾರಣ ಅಡುಗೆ ಎಣ್ಣೆ (Cooking Oil), ತುಪ್ಪದ ಬೆಲೆಗಳು ಹೆಚ್ಚಾಗಿವೆ. ಕಸ್ಟಮ್ಸ್ ಗೋದಾಮಿನಲ್ಲಿ ಮೂರೂವರೆ ಲಕ್ಷ ಟನ್ ಅಡುಗೆ ಎಣ್ಣೆ ಸ್ಟಾಕ್ ಇದ್ದರೂ, ಅದನ್ನು ಮಾರುಕಟ್ಟೆಗೆ ತರಲು ಬ್ಯಾಂಕ್‌ಗಳು ಲೆಟರ್ ಆಫ್ ಕ್ರೆಡಿಟ್ಸ್, ರಿಟೈನಿಂಗ್ ಪತ್ರಗಳನ್ನು ಕ್ಲಿಯರ್ ಮಾಡ್ತಿಲ್ಲ. ಹೀಗಾಗಿ ಆಮದು ಉತ್ಪನ್ನಗಳ ಮೇಲೆ ಸರ್‌ಚಾರ್ಜ್ (ತೆರಿಗೆ ರೂಪದ ಸುಂಕ) ಮತ್ತು ಇತರೆ ವೆಚ್ಚಗಳು ಹೆಚ್ಚುತ್ತಿವೆ. ಇದನ್ನೂ ಓದಿ: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಆರೋಪಿ ಶಂಕರ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

    ಮತ್ತೊಂದೆಡೆ ಡಾಲರ್ (US Dollar) ಎದುರು ಪಾಕ್ ರೂಪಾಯಿ ಅಪಮೌಲ್ಯ ಮುಂದುವರಿದಿದೆ. ಸದ್ಯ ವಿನಿಮಯ ಮೌಲ್ಯ ಒಂದು ಡಾಲರ್‌ಗೆ ಪಾಕಿಸ್ತಾನದ 228 ರೂಪಾಯಿ ಇದೆ. ಖರ್ಚು ಸರಿದೂಗಿಸಲು ಅಮೆರಿಕದಲ್ಲಿರುವ ಹಳೆಯ ರಾಯಭಾರ ಕಚೇರಿಯನ್ನೇ ಪಾಕ್ ಸರ್ಕಾರ ಮಾರಾಟ ಮಾಡಿದೆ. ಚೀನಾ (China) ಮೇಲೆ ಅಧಿಕ ಅವಲಂಬನೆ ಮತ್ತು ದುರಾಡಳಿತವೇ ಪಾಕಿಸ್ತಾನದ ಇಂದಿನ ಸ್ಥಿತಿಗೆ ಕಾರಣ ಎಂಬ ವ್ಯಾಖ್ಯಾನಗಳು ಕೇಳಿಬಂದಿವೆ.

    ಇತ್ತೀಚೆಗಷ್ಟೇ ಪಾಕಿಸ್ತಾನ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಲವು ಕ್ರಮ ಕೈಗೊಂಡಿತು. ಪಾಕಿಸ್ತಾನದ ಸರ್ಕಾರ ಇಂಧನ ಉಳಿಸಲು ಮಾರುಕಟ್ಟೆ, ಮಾಲ್, ಮದುವೆ ಹಾಲ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಘೋಷಿಸಿತು. ಇಂಧನ ಉಳಿಸಲು ಹಾಗೂ ಇತರ ದೇಶಗಳಿಂದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಈ ನಿರ್ಧಾರ ಮಾಡಲಾಗಿದೆ. ಈ ಕ್ರಮಕ್ಕೆ ಪಾಕಿಸ್ತಾನದ ಕ್ಯಾಬಿನೆಟ್ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್, ಬೌಂಡರಿ ಸುರಿಮಳೆ – ಸ್ಫೋಟಕ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಅಕ್ಷರ್ ಪಟೇಲ್

    ಸಿಕ್ಸರ್, ಬೌಂಡರಿ ಸುರಿಮಳೆ – ಸ್ಫೋಟಕ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಅಕ್ಷರ್ ಪಟೇಲ್

    ಮುಂಬೈ: ಭಾರತ-ಶ್ರೀಲಂಕಾ (INDvsSL) ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿದ ಟೀಂ ಇಂಡಿಯಾ (Team India) ಆಟಗಾರ ಅಕ್ಷರ್ ಪಟೇಲ್ (Axar Patel), ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರ ದಾಖಲೆಯನ್ನು ಸರಿಗಟ್ಟಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ.

    ಹೌದು. ಶ್ರೀಲಂಕಾ (SriLanka) ವಿರುದ್ಧದ 2ನೇ ಪಂದ್ಯದಲ್ಲಿ 209.67 ಸ್ಟ್ರೈಕ್‌ರೇಟ್‌ ನಲ್ಲಿ ಬ್ಯಾಟ್ ಬೀಸಿದ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸಿದ್ದಾರೆ. ಇದರಲ್ಲಿ 6 ಸಿಕ್ಸರ್, 2 ಬೌಂಡರಿಗಳು ಸೇರಿವೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ (T20I Cricket) 7ನೇ ಕ್ರಮಾಂಕದಲ್ಲಿ ಸ್ಫೋಟಕ ಅರ್ಧ ಶತಕ ಸಿಡಿಸಿ, ರವೀಂದ್ರ ಜಡೇಜಾ ಅವರ ದಾಖಲೆಯನ್ನ ಮುರಿದಿದ್ದಾರೆ. ರವೀಂದ್ರ ಜಡೇಜಾ 2020ರಲ್ಲಿ 7ನೇ ಕ್ರಮಾಂಕದಲ್ಲಿ ಬಂದು 44 ರನ್ ಸಿಡಿಸಿದ್ದರು.

    ಇಷ್ಟೇ ಅಲ್ಲದೇ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಭಾರತದ 5ನೇ ಆಟಗಾರ ಎನ್ನಿಸಿಕೊಂಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) 2007 T20 ವಿಶ್ವಕಪ್‌ನಲ್ಲಿ (ICC World) ಇಂಗ್ಲೆಂಡ್ (England) ವಿರುದ್ಧ ಕೇವಲ 12 ಎಸೆತಗಳಲ್ಲಿ 50 ರನ್ ಚಚ್ಚಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ

    ಆ ನಂತರ ಕೆ.ಎಲ್.ರಾಹುಲ್ (KL Rahul) 18 ಎಸೆತಗಳಲ್ಲಿ, ಸೂರ್ಯಕುಮಾರ್ ಯಾದವ್ (Suryakumar Yadav) 18 ಎಸೆತಗಳಲ್ಲಿ ಹಾಗೂ ಗೌತಮ್ ಗಂಭೀರ್ 19 ಎಸೆತಗಳಲ್ಲಿ ಸ್ಫೋಟಕ 50 ರನ್ ಸಿಡಿಸಿದ್ದಾರೆ. ಇದೀಗ ಈ ಸಾಲಿನಲ್ಲಿ ಅಕ್ಷರ್ ಪಟೇಲ್ ಸಹ ಸ್ಥಾನ ಪಡೆದಿದ್ದಾರೆ. 20 ಎಸತೆಗಳಲ್ಲಿ 50 ರನ್ (6 ಸಿಕ್ಸರ್, 2 ಬೌಂಡರಿ) ಪೂರೈಸಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ನೋಬಾಲ್ ಎಸೆಯುವುದು ಅಪರಾಧ – ಅರ್ಶ್‍ದೀಪ್ ಸಿಂಗ್ ತಪ್ಪಿಗೆ ಚಾಟಿ ಬೀಸಿದ ಪಾಂಡ್ಯ

    ಗುರುವಾರ ಭಾರತ ಶ್ರೀಲಂಕಾ ನಡುವಿನ ಟಿ20 ಸರಣಿಯ 2ನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 207 ರನ್‌ಗಳ ಗುರಿ ಬೆನ್ನತ್ತಿದ ಭಾರತ 8 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಪಂದ್ಯದಲ್ಲಿ 20 ಎಸೆತಗಳಲ್ಲಿ 50 ರನ್ ಚಚ್ಚಿದ ಅಕ್ಷರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾಕ್‌ನಲ್ಲಿ ಅರಾಜಕತೆ ಸೃಷ್ಟಿಸೋದು ನನಗೆ ಇಷ್ಟವಿಲ್ಲ- ಪ್ರತಿಭಟನಾ ರ‍್ಯಾಲಿ ಕೈಬಿಟ್ಟ ಇಮ್ರಾನ್ ಖಾನ್

    ಪಾಕ್‌ನಲ್ಲಿ ಅರಾಜಕತೆ ಸೃಷ್ಟಿಸೋದು ನನಗೆ ಇಷ್ಟವಿಲ್ಲ- ಪ್ರತಿಭಟನಾ ರ‍್ಯಾಲಿ ಕೈಬಿಟ್ಟ ಇಮ್ರಾನ್ ಖಾನ್

    ಇಸ್ಲಾಮಾಬಾದ್: ತಮ್ಮ ಮೇಲಿನ ಗುಂಡಿನ ದಾಳಿ ಬಳಿಕ ಸ್ವಲ್ಪ ಚೇತರಿಸಿಕೊಂಡಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್  ಖಾನ್ (Imran Khan), ತಮ್ಮ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ (Protest) ರ‍್ಯಾಲಿಯನ್ನು ಕೈಬಿಡುವ ಮಹತ್ವದ ಘೋಷಣೆ ಮಾಡಿದ್ದಾರೆ.

    ಪಾಕಿಸ್ತಾನದ ಸಂಸತ್ತು ಮತ್ತು ವಿವಿಧ ರಾಜ್ಯಗಳ ವಿಧಾನಸಭೆಗಳಲ್ಲಿರುವ ತಮ್ಮ ಪಕ್ಷದ ಎಲ್ಲ ಸದಸ್ಯರಿಗೂ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ. ಪಾಕಿಸ್ತಾನದ ಮುಖ್ಯ ನಗರ ರಾವಲ್‌ಪಿಂಡಿಯಲ್ಲಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್‌ರೀಕ್-ಎ-ಇನ್‌ಸಾಫ್ (PTI Party) ಆಯೋಜಿಸಿದ್ದ ಪ್ರತಿಭಟನೆಯು ದೊಡ್ಡಪ್ರಮಾಣದಲ್ಲಿ ಜನರು ಸೇರಿದ್ದರು. ಇಸ್ಲಾಮಾಬಾದ್‌ವರೆಗೆ ನಡೆಸಲು ಉದ್ದೇಶಿಸಿದ್ದ ರ‍್ಯಾಲಿಯನ್ನು ಅರ್ಧದಲ್ಲೇ ಕೈಬಿಡಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನೊಂದಿಗೆ ಸರಸವಾಡಲು ಪತಿಯನ್ನೇ ಕೊಂದ್ಲು – 25 ಅಡಿ ಆಳದ ಶೌಚಾಲಯದ ಗುಂಡಿಯಲ್ಲಿ ಹೂತಿಟ್ಳು

    ತಮ್ಮ ಪಕ್ಷದ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋನಲ್ಲಿ ಅವರು ಮಾತನಾಡಿದ್ದಾರೆ, ಈ ಸರ್ಕಾರದ ಭಾಗವಾಗಲು ನಮಗೆ ಇಷ್ಟವಿಲ್ಲ. ನಾನು ಎಲ್ಲ ಮುಖ್ಯಮಂತ್ರಿಗಳು ಮತ್ತು ಶಾಸಕಾಂಗ ಪಕ್ಷದ ನಾಯಕರನ್ನು ಸಂಪರ್ಕಿಸುತ್ತೇನೆ. ಎಲ್ಲ ವಿಧಾನಸಭೆಗಳಿಂದ ನಾವು ಹೊರಬರುತ್ತಿದ್ದೇವೆ. ನಮ್ಮದೇ ದೇಶವನ್ನು ನಾವು ಹಿಂಸಾಚಾರ, ಅಸ್ಥಿರತೆಗೆ ದೂಡುವ ಬದಲು ಈ ಭ್ರಷ್ಟ ಸರ್ಕಾರದಿಂದ (Pakistan Government) ಹೊರಬರುವುದು ಒಳ್ಳೆಯದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮಂಗ್ಳೂರಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ – ಪ್ರಸಿದ್ಧ ವೈದ್ಯೆ, ಯುವಕನ ವಿರುದ್ಧ ದೂರು ದಾಖಲು

    ಈ ತಿಂಗಳ ಆರಂಭದಲ್ಲಿ ಇಮ್ರಾನ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಸ್ವತಃ ಇಮ್ರಾನ್ ಖಾನ್‌ಗೂ ಗಾಯಗಳಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಇಮ್ರಾನ್ ಖಾನ್ ಚೇತರಿಸಿಕೊಂಡಿದ್ದರು. ನಮ್ಮ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ನಾವು ವಿಫಲರಾದೆವು ಎಂದು ಹೇಳಿದ್ದಾರೆ.

    ಶ್ರೀಲಂಕಾದಂಥ (SriLanka) ಪರಿಸ್ಥಿತಿಯನ್ನು ನಾವು ಇಲ್ಲಿಯೂ ನಿರ್ಮಿಸಬಹುದಿತ್ತು. ಆದರೆ ದೇಶದಲ್ಲಿ ಅರಾಜಕತೆ ಉಂಟಾಗಬಾರದು ಎನ್ನುವ ಕಾರಣಕ್ಕೆ ನಾವು ಇಸ್ಲಾಮಾಬಾದ್‌ವರೆಗಿನ ಪಾದಯಾತ್ರೆಯನ್ನು ಮುಂದೂಡಿದ್ದೇವೆ. ನಮ್ಮ ದೇಶಕ್ಕೆ ಯಾವುದೇ ಹಾನಿ ಉಂಟಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    ಕ್ಯಾನ್ಬೆರಾ: ಜಾನ್ ಪ್ರೈಲಿಂಕ್ (JanFrylinck), ಜೆಜೆ ಸ್ಮಿತ್ ಆಲ್‌ರೌಂಡರ್ ಆಟ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಟಿ20 ವಿಶ್ವಕಪ್ (T20 WorldCup) ಮೊದಲ ಪಂದ್ಯದಲ್ಲೇ ಶ್ರೀಲಂಕಾ (SriLanka) ವಿರುದ್ಧ ನಮೀಬಿಯಾ (Namibia) 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅರ್ಹತಾ ಸುತ್ತಿನ ಉದ್ಘಾಟನಾ ಪಂದ್ಯದಲ್ಲೇ ಶುಭಾರಂಭ ಪಡೆದುಕೊಂಡಿದೆ.

    ಶ್ರೀಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ನಮೀಬಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಲಂಕಾ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನಿಗದಿತ 19 ಓವರ್‌ಗಳಲ್ಲೇ 108 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನಮೀಬಿಯಾಕ್ಕೆ ನೀಡಿತು. ನಂತರ ಕ್ರೀಸ್‌ಗಳಿದ ಲಂಕಾಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ (Kusal Mendis)  ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ನಿಸ್ಸಾಂಕ 10 ಎಸೆತಗಳಲ್ಲಿ 9 ರನ್‌ಗಳಿಸಿದರೆ ಮೆಂಡಿಸ್ 6 ಎಸೆತಕ್ಕೆ 6ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟ್ ಬೀಸಿದ ಧನಂಜಯ ಡಿ ಸಿಲ್ವಾ 11 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 12 ರನ್ ಗಳಿಸಿ ನಿರ್ಗಮಿಸಿದರು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭಾನುಕಾ ರಾಜಪಕ್ಸೆ (Bhanuka Rajapaksa)ಹಾಗೂ ದಸುನ್ ಶನಕ ಉತ್ತಮ ಸಾಂಘಿಕ ಪ್ರದರ್ಶನದಿಂದ 49 ರನ್ ಕಲೆಹಾಕಿದರು. ಇಬ್ಬರ ಜೊತೆಯಾಟದಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿ 44 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಿಂದ ತಂಡ ಗೆಲುವಿನ ಕನಸು ಕಾಣುತ್ತಿರುವಾಗಲೇ ರಾಜಪಕ್ಸೆ ಆಟಕ್ಕೆ ನಮೀಬಿಯಾ ಬೌಲರ್ ಬ್ರೇಕ್ ಹಾಕಿದರು. ರಾಜಪಕ್ಸೆ 20 ರನ್ (21 ಎಸೆತ, 2 ಬೌಂಡರಿ), ದಸುಮ್ ಶನಕ 29 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು. ನಂತರದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಲಂಕಾ ಉದ್ಘಾಟನಾ ಪಂದ್ಯದಲ್ಲೇ ಸೋಲನ್ನು ಅನುಭವಿಸಬೇಕಾಯಿತು.

    ದನುಷ್ಕ ಗುಣತಿಲಕ, ಪ್ರಮೋದ್ ಮದುಶನ್ ಶೂನ್ಯಕ್ಕೆ ನಿರ್ಗಮಿಸಿದರೆ, ವನಿಂದು ಹಸರಂಗ 4 ರನ್, ಚಾಮಿಕಾ ಕರುಣಾರತ್ನೆ 5 ರನ್, ದುಷ್ಮಂತ ಚಮೀರ 8 ರನ್ ಗಳಿಸಿದರು. ಮಹೇಶ್ ತೀಕ್ಷಣ 11 ರನ್‌ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ತಂಡದ ಪರ ಪ್ರಮೋದ್ ಮದುಶನ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚಮೀರಾ, ಕರುಣರತ್ನೆ ಹಾಗೂ ವನಿಂದ ಹಸರಂಗ (Wanindu Hasaranga) ತಲಾ ಒಂದೊಂದು ವಿಕೆಟ್ ಪಡೆದರು. ಒಟ್ಟಿನಲ್ಲಿ ಲಂಕಾ ಬ್ಯಾಟಿಂಗ್ ವೈಫಲ್ಯ ಇಂದಿನ ಸೋಲಿಗೆ ಕಾರಣವಾಯಿತು.

    ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ವ್ಯಾನ್ ಲಿಂಗೆನ್ 3 ರನ್, ಡಿವನ್ ಲಾ ಕುಕ್ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜಾನ್ ನಿಕೊಲ್ ಈಟನ್ 20 ರನ್, ಸ್ಟಿಫನ್ ಬಾರ್ಡ್ 26, ನಾಯಕ ಗೆರ್ಹಾಡ್ ಬಾರ್ಡ್ 20 ರನ್ ಕಲೆಹಾಕಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.

    ಪ್ರೈಲಿಂಕ್ – ಸ್ಮಿತ್ ಆಲ್‌ರೌಂಡರ್ ಆಟ: ನಮೀಬಿಯಾ ತಂಡವು 14.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್ ಪ್ರೈಲಿಂಕ್ (JanFrylinck) ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಾನ್ ಪ್ರೈಲಿಂಕ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಪೇರಿಸಿ ತಂಡಕ್ಕೆ ಆಸರೆಯಾದರು.

    ಇನ್ನೂ ಬೌಲಿಂಗ್‌ನಲ್ಲೂ ಅಬ್ಬರಿಸಿದ ಪ್ರೈಲಿಂಕ್ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರೆ, ಜೆಜೆ ಸ್ಮಿತ್ 3 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ನಮೀಬಿಯಾ ತಂಡದ ಪರ ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್‌, ಬೆನ್ ಶಿಕೊಂಗೊ, ಜಾನ್ ಫ್ರಿಲಿಂಕ್, ತಲಾ ಎರಡು ವಿಕೆಟ್ ಪಡೆದರೆ, ಜೆಜೆ ಸ್ಮಿತ್ 1 ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಲಂಕಾ ಆರ್ಥಿಕ ಬಿಕ್ಕಟ್ಟು – ಶಾಲೆಗಳ ಪಠ್ಯಪುಸ್ತಕ ಮುದ್ರಣಕ್ಕೆ ಭಾರತದಿಂದ ಭಾರೀ ನೆರವು

    ಕೊಲಂಬೊ: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನರಳುತ್ತಿರುವ ಶ್ರೀಲಂಕಾಗೆ (Srilanka) 2023ನೇ ಸಾಲಿನ ಶಾಲಾ (School) ಮಕ್ಕಳಿಗೆ ಪಠ್ಯಪುಸ್ತಕಗಳ ಮುದ್ರಣಕ್ಕೆ ಅಗತ್ಯ ನೆರವು ನೀಡಲು ಭಾರತ ಮುಂದಾಗಿದ್ದು, 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ.

    ಭಾರತೀಯ ಸಾಲ ಯೋಜನೆ ಅಡಿಯಲ್ಲಿ ಪಠ್ಯಪುಸ್ತಕ (Text Book) ಮುದ್ರಣಕ್ಕೆ ಅಗತ್ಯವಿರುವ ಕಾಗದ, ಶಾಯಿ ಸೇರಿದಂತೆ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುಸಿಲ್ ಪ್ರೇಮೇಜನಾಥ ತಿಳಿಸಿದ್ದಾರೆ. ಇದನ್ನೂ ಓದಿ: ಗೇಮಿಂಗ್ ಆ್ಯಪ್ ಸ್ಕ್ಯಾಮ್- ಉದ್ಯಮಿ ಮನೆಯಿಂದ 12 ಕೋಟಿ ನಗದು ವಶ

    SRILANKA (1)

    ಡಾಲರ್ ಕೊರತೆ ಇರುವುದರಿಂದ ಪಠ್ಯಪುಸ್ತಕಗಳ ಮುದ್ರಣಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾದ ಕಚ್ಚಾವಸ್ತುಗಳ ಖರೀದಿಗೂ ಶ್ರೀಲಂಕಾ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷದ ಮಾರ್ಚ್ನಲ್ಲಿ ಪ್ರಶ್ನೆಪತ್ರಿಕೆ ಮುದ್ರಿಸಲು ಕಾಗದದ ಕೊರತೆ ಉಂಟಾಗಿದ್ದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಪರೀಕ್ಷೆ ರದ್ದುಪಡಿಸಲಾಗಿತ್ತು.

    ಉಚಿತ ಶಿಕ್ಷಣ ಯೋಜನೆಯಡಿ ಶ್ರೀಲಂಕಾವು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ಒದಗಿಸುತ್ತದೆ. 2023ರ ಶೈಕ್ಷಣಿಕ ವರ್ಷದಲ್ಲಿ ಪಠ್ಯಪುಸ್ತಕ ಮುದ್ರಣಕ್ಕೆ ಸುಮಾರು 44 ಮಿಲಿಯನ್ ಡಾಲರ್ ಖರ್ಚಾಗಲಿದೆ ಎಂದು ಅಂದಾಜಿಸಿದೆ. ಇದನ್ನೂ ಓದಿ: 6 ತಿಂಗಳು ರಜೆ ಹಾಕಿ- ಡೀನ್ ವಿರುದ್ಧ ಸಚಿವ ಸೋಮಣ್ಣ ಗರಂ

    ಹಾಗಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(IMF) ಆರ್ಥಿಕ ಬಿಕ್ಕಟ್ಟಿನಿಂದ ಲಂಕಾವನ್ನು ರಕ್ಷಿಸಲು ವಿವಿಧ ಷರತ್ತುಗಳೊಂದಿಗೆ 4 ವರ್ಷಗಳಲ್ಲಿ 2.9 ಶತಕೋಟಿ ಡಾಲರ್ ನೆರವು ನೀಡಲಿದೆ. ಇದರಿಂದ 2022ರಲ್ಲಿ ಭಾರತ ದೇಶವೊಂದರಿಂದಲೇ ಲಂಕಾಕ್ಕೆ 4 ಶತಕೋಟಿ ಡಾಲರ್ ನೆರವು ಒದಗಿಸಿದಂತಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ನೌಕಾಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

    ಶ್ರೀಲಂಕಾ ನೌಕಾಪಡೆಯಿಂದ 6 ಭಾರತೀಯ ಮೀನುಗಾರರ ಬಂಧನ

    ಕೊಲಂಬೋ: ಶ್ರೀಲಂಕಾದ ನೌಕಾಪಡೆಯು ಭಾನುವಾರ ಗಡಿ ದಾಟಿದ ಆರೋಪದ ಮೇರೆಗೆ 6 ಭಾರತೀಯ ಮೀನುಗಾರರನ್ನು ಬಂಧಿಸಿದೆ.

    ಭಾರತೀಯ ಮೀನುಗಾರರು ಶ್ರೀಲಂಕಾದ ಜಲಪ್ರದೇಶಕ್ಕೆ ಹೋದ ಹಿನ್ನೆಲೆಯಲ್ಲಿ ಅವರ ಬೋಟ್‍ನ್ನು ವಶಪಡಿಸಿಕೊಂಡು, 6 ಮೀನುಗಾರರನ್ನು ಬಂಧಿಸಿದ್ದಾರೆ. ಇದು ಒಂದು ತಿಂಗಳ ಅವಧಿಯಲ್ಲಿ ಎರಡನೇ ಘಟನೆಯಾಗಿದೆ.

    ಮನ್ನಾರ್ ದ್ವೀಪದ ವಾಯುವ್ಯ ಕರಾವಳಿಯಲ್ಲಿರುವ ವಸಾಹತು ಪ್ರದೇಶವಾದ ತಲೈಮನ್ನಾರ್‌ನಲ್ಲಿ ಮೀನುಗಾರರನ್ನು ಬಂಧಿಸಲಾಗಿದೆ ಎಂದು ನೌಕಾಪಡೆ ತಿಳಿಸಿದೆ. ತಲೈಮನ್ನಾರ್‌ನಲ್ಲಿ ನೌಕಾಪಡೆಯ ವಶದಲ್ಲಿರುವ ಮೀನುಗಾರರನ್ನು ಮನ್ನಾರ್‌ನಲ್ಲಿರುವ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯುತ್ ಶಾಕ್‍ನಿಂದ ದಂಪತಿ ಸಾವು- ಪತ್ನಿ ಉಳಿಸಲು ಹೋಗಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುರ್ಮರಣ

    ಆಗಸ್ಟ್ 22 ರಂದು ಶ್ರೀಲಂಕಾದ ಗಡಿ ಪ್ರವೇಶಿಸಿದ ಆರೋಪದ ಮೇಲೆ 10 ಭಾರತೀಯ ಮೀನುಗಾರರನ್ನು ಬಂಧಿಸಿದ್ದರು. ಇದಾದ ಬಳಿಕ ಇಂದು ಮತ್ತೆ ಬಂಧಿಸಿದ್ದಾರೆ. ಇದನ್ನೂ ಓದಿ: ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ – ಚಕ್ರವರ್ತಿ ಸೂಲಿಬೆಲೆ

    Live Tv
    [brid partner=56869869 player=32851 video=960834 autoplay=true]

  • ರಾಮೇಶ್ವರದ 6 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ರಾಮೇಶ್ವರದ 6 ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ

    ಕೊಲೊಂಬೋ: ರಾಮೇಶ್ವರಂನಿಂದ ಹೊರಟಿದ್ದ 6 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದೆ.

    ಅಗತ್ಯ ಅನುಮತಿ ಪಡೆದು ರಾಮೇಶ್ವರಂನಿಂದ ಒಟ್ಟು 400 ದೋಣಿಗಳು ಹೋರಟಿತ್ತು. ಅದರಲ್ಲಿ ತಲೈಮನ್ನಾರ್ ಮತ್ತು ನಾಚಿಕುಡವು ಬಳಿ ಮೀನುಗಾರಿಕೆ ನಡೆಸುತ್ತಿದ್ದ 6 ಮಂದಿಯ ದೋಣಿ ಸುತ್ತ ನೌಕಾಪಡೆಯ ಗಸ್ತು ಸುತ್ತುವರೆದಿದ್ದು, ಅಕ್ರಮವಾಗಿ ಮೀನುಗಾರಿಕೆ ಆರೋಪದ ಮೇರೆಗೆ ಅವರನ್ನು ಬಂಧಿಸಿದ್ದಾರೆ.

    ಆರಂಭದಲ್ಲಿ 11 ಮೀನುಗಾರರನ್ನು ಬಂಧಿಸಲಾಯಿತು. ಅವರಲ್ಲಿ ಐವರು ದೋಣಿ ಎಂಜಿನ್ ಸ್ಥಗಿತಗೊಂಡಿದ್ದರಿಂದ ಶ್ರೀಲಂಕಾದ ಸಮುದ್ರಕ್ಕೆ ತೇಲಿಹೋಗಿದೆ ಎಂದು ಖಚಿತ ಪಡೆಸಿಕೊಂಡ ಶ್ರೀಲಂಕಾ ನೌಕಾಪಡೆ ನಂತರ ಆ ಐವರನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಪ್ರಮಾಣವಚನ ಸ್ವೀಕಾರ

    ಬಂಧಿತರನ್ನು ಬಾಲಮುರುಗನ್, ಅಂತೋನಿ, ತಂಗಪಾಂಡಿ, ಅಜಿತ್, ಕೃಷ್ಣನ್ ಮತ್ತು ಮುದುಗು ಪಿಚೈ ಎಂದು ಗುರುತಿಸಲಾಗಿದೆ. ಮೀನುಗಾರರನ್ನು ತಲೈಮನ್ನಾರ್ ನೇವಿ ಕ್ಯಾಂಪ್‍ಗೆ ಕರೆದೊಯ್ಯಲಾಗಿದೆ. ಇದನ್ನೂ ಓದಿ: ಡಿಕೆಶಿಗೆ ಜಮೀರ್ ಡಿಚ್ಚಿ – ಸಿದ್ದರಾಮಯ್ಯಗೆ ಜಮೀರ್ ಜಿಂದಾಬಾದ್

    Live Tv
    [brid partner=56869869 player=32851 video=960834 autoplay=true]

  • ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು

    ಆರ್ಥಿಕ ಬಿಕ್ಕಟ್ಟು – ಒಂದೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆ ಹಾದಿ ಹಿಡಿಯುತ್ತಿರುವ ಲಂಕಾ ಮಹಿಳೆಯರು

    ಕೊಲಂಬೊ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟು ವಿಷಮಸ್ಥಿತಿ ತಲುಪುತ್ತಿದೆ. ಸುಮಾರು 60 ಲಕ್ಷ ಜನರು ಆಹಾರದ ಕೊರತೆ ಎದುರಿಸುತ್ತಿದ್ದಾರೆ. ಈ ನಡುವೆ ಅಗತ್ಯ ಔಷಧಗಳು ಹಾಗೂ ಎರಡು ಹೊತ್ತಿನ ಊಟಕ್ಕಾಗಿ ವೇಶ್ಯಾವಾಟಿಕೆಯ ಹಾದಿ ಹಿಡಿಯುತ್ತಿದ್ದಾರೆ ಎಂದು ವರದಿಯಾಗಿದೆ.

    ಅಂಕಿ-ಅಂಶಗಳ ವರದಿಯ ಪ್ರಕಾರ ಜನರು ಈಗ ಆಹಾರ ಉಳಿಸಲು ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದಾರೆ. ಶೇ.25 ರಷ್ಟು ಜನರು ತೀವ್ರ ತೊಂದರೆಯಲ್ಲಿದ್ದು ವೇಶ್ಯಾವಾಟಿಕೆಯಲ್ಲಿ ತೊಡಗಿರುವವರು ಹೆಚ್ಚಾಗುವುದರೊಂದಿಗೆ ಮಹಿಳೆಯರನ್ನು ಬಲವಂತದಿಂದಲೂ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

    ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹಣಕ್ಕಾಗಿ ಮಹಿಳೆಯರು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಮಾಡುತ್ತಿದೆ. ಆಯುರ್ವೇದ ಮತ್ತು ಸ್ಪಾ ಕೇಂದ್ರಗಳು ಈಗ ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿವೆ. ಮಹಿಳೆಯರು ಈ ವ್ಯವಹಾರದಲ್ಲಿ ವೇಗವಾಗಿ ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಅವರು ಕೊಂಚ ಹಣ ಸಂಪಾದಿಸಲು ಸಾಧ್ಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಸ್ಪಾ-ಕೇಂದ್ರಗಳಲ್ಲಿ ಕರ್ಟನ್‌ಗಳನ್ನು ನೇತುಹಾಕುವ ಮೂಲಕ ಲೈಂಗಿಕ ಕ್ರಿಯೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜವಳಿ ಉದ್ಯಮದಲ್ಲಿ ತೊಡಗಿರುವ ಮಹಿಳೆಯರು ಅತ್ಯಂತ ವೇಗವಾಗಿ ಈ ವ್ಯವಹಾರಕ್ಕೆ ಸೇರುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ, ಈ ದೇಶದಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಹರಡುತ್ತದೆ ಎಂದು ಇಲ್ಲಿನ ತಜ್ಞರು ಹೇಳುತ್ತಿದ್ದಾರೆ. ಜವಳಿ ಉದ್ಯಮ ಮುಚ್ಚುವ ಭೀತಿಯೂ ಎದುರಾಗಿದ್ದು, ಮಹಿಳೆಯರು ಜೀವನ ನಿರ್ವಹಣೆಗಾಗಿ ಪರ್ಯಾಯ ಮಾರ್ಗಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಕೆಲವರು ವೇಶ್ಯಾವಾಟಿಕೆಯನ್ನೇ ವೃತ್ತಿಯಾಗಿ ಮಾಡಿಕೊಳ್ಳುತ್ತಿದ್ದಾರೆ.

    ಈ ಕುರಿತು ಲೈಂಗಿಕ ಕಾರ್ಯಕರ್ತರೊಬ್ಬರು ಮಾತನಾಡಿ, ದೇಶದ ಆರ್ಥಿಕತೆ ಹದಗೆಟ್ಟಿರುವುದು ಮಹಿಳೆಯರನ್ನು ಈ ಉದ್ಯಮಕ್ಕೆ ಬರುವಂತೆ ಮಾಡಿದೆ. ಈ ಸಮಯದಲ್ಲಿ ನಾವು ನೋಡಬಹುದಾದ ಉತ್ತಮ ಪರಿಹಾರವೆಂದರೆ ಲೈಂಗಿಕ ಕೆಲಸ ಎಂದು ನಾವು ನಂಬಿದ್ದೇವೆ. ನಮ್ಮ ತಿಂಗಳ ಸಂಬಳ ಸುಮಾರು 28,000 ರೂ. ಮತ್ತು ನಾವು ಓವರ್‌ಟೈಮ್ ಮೂಲಕ 35 ಸಾವಿರದವರೆಗೆ ಗಳಿಸಬಹುದು. ಲೈಂಗಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದರಿಂದ ನಾವು ಇದಕ್ಕಿಂತ ಹೆಚ್ಚಿನದನ್ನು ಗಳಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]