Tag: srilanka

  • ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ಕೊನೆಯಲ್ಲಿ ಬೌಲರ್‌ಗಳ ಮ್ಯಾಜಿಕ್‌ – ಸೂಪರ್‌ ಓವರ್‌ನಲ್ಲಿ ಭಾರತಕ್ಕೆ ರೋಚಕ ಜಯ

    ದುಬೈ: ಏಷ್ಯಾಕಪ್‌ (Asia Cup) ಸೂಪರ್‌4 ಸೂಪರ್‌ ಓವರ್‌ನಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ (Team India) ಜಯಗಳಿಸಿ ಅಜೇಯವಾಗಿ ಫೈನಲ್‌ ಪ್ರವೇಶಿಸಿದೆ.

    ಆಟಕ್ಕುಂಟು ಲೆಕ್ಕಕ್ಕೆ ಇಲ್ಲದ ಪಂದ್ಯದಲ್ಲಿ ಪಾತುಮ್ ನಿಸ್ಸಂಕ (Pathum Nissanka) ಅವರ ಸ್ಫೋಟಕ ಶತಕ, ಕುಸಾಲ್ ಪೆರೆರಾ (Kusal Perera) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ 5 ವಿಕೆಟ್‌ ನಷ್ಟಕ್ಕೆ 202 ರನ್‌ ಗಳಿಸುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು. ಆದರೆ ಸೂಪರ್‌ ಓವರ್‌ನಲ್ಲಿ ಸೂರ್ಯ ಕುಮಾರ್‌ ಮೊದಲ ಎಸೆತದಲ್ಲಿ 3 ರನ್‌ ಹೊಡೆಯುವ ಮೂಲಕ ಭಾರತ ರೋಚಕ ಜಯ ಗಳಿಸಿತು.

    ಸೂಪರ್‌ ಓವರ್‌ ಹೇಗಿತ್ತು?
    ಆರ್ಶ್‌ದೀಪ್‌ ಎಸೆದ ಮೊದಲ ಓವರ್‌ ಮೊದಲ ಎಸೆತವನ್ನು ಕುಸಲ್ ಪೆರೆರಾ ಸಿಕ್ಸ್‌ ಹೊಡೆಯಲು ಹೋಗಿ ರಿಂಕು ಸಿಂಗ್‌ಗೆ ಕ್ಯಾಚ್‌ ನೀಡಿದರು. ನಂತರ ಎರಡನೇ ಎಸೆತದಲ್ಲಿ ಒಂದು ರನ್‌ ಬಂತು. ನಂತರದ ಎರಡು ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 4ನೇ ಎಸೆತ ವೈಡ್‌ ಆಯ್ತು. ನಂತರ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ಎಸೆತದಲ್ಲಿ ಶನಕ ಸಿಕ್ಸ್‌ ಸಿಡಿಸಲು ಹೋಗಿ ಜಿತೇಶ್‌ ಶರ್ಮಾಗೆ ಕ್ಯಾಚ್‌ ನೀಡಿದರು. ಸೂಪರ್‌ ಓವರ್‌ನಲ್ಲಿ ಎರಡು ವಿಕೆಟ್‌ ಪತನಗೊಂಡರೆ ಇನ್ನಿಂಗ್ಸ್‌ ಮುಗಿದ ಕಾರಣ ಲಂಕಾ ಭಾರತಕ್ಕೆ 3 ರನ್‌ಗಳ ಗುರಿಯನ್ನು ನೀಡಿತ್ತು.

    ಭಾರತದ ಪರ ಓಪನರ್‌ಗಳಾಗಿ ನಾಯಕ ಸೂರ್ಯಕುಮಾರ್‌ ಮತ್ತು ಶುಭಮನ್‌ ಗಿಲ್‌ ಕ್ರೀಸ್‌ಗೆ ಆಗಮಿಸಿದರು. ಹಸರಂಗ ಎಸೆದ ಮೊದಲ ಎಸೆತವನ್ನು ಸೂರ್ಯಕುಮಾರ್‌ ಎಕ್ಸ್‌ಟ್ರಾ ಕವರ್‌ಗೆ ತಳ್ಳಿ ಮೂರು ರನ್‌ ಓಡುವ ಮೂಲಕ ಭಾರತ ಜಯ ಸಾಧಿಸಿತು.

     

    ಪಂದ್ಯ ಟೈ ಆಗಿದ್ದು ಹೇಗೆ?
    ಕೊನೆಯ ಎರಡು ಓವರ್‌ಗಳಲ್ಲಿ 2 ಓವರ್‌ಗಳಲ್ಲಿ 23 ರನ್‌ ಬೇಕಿತ್ತು. ಅರ್ಶ್‌ದೀಪ್‌ ಎಸೆದ 19ನೇ ಓವರ್‌ನಲ್ಲಿ 11 ರನ್‌ ನೀಡಿದರು. ಕೊನೆಯ ಓವರ್‌ನಲ್ಲಿ 12 ರನ್‌ ಬೇಕಿತ್ತು. ಇದನ್ನೂ ಓದಿ:  ಸಿಕ್ಸ್‌ ಆಯ್ತು ಈಗ ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್‌ ಶರ್ಮಾ

    ಹರ್ಷಿತ್‌ ರಾಣಾ ಎಸೆದ ಮೊದಲ ಓವರ್‌ನಲ್ಲಿ  107 ರನ್‌(58 ಎಸೆತ, 7 ಬೌಂಡರಿ, 6 ಸಿಕ್ಸ್‌) ಹೊಡೆದಿದ್ದ ಪಾತುಮ್ ನಿಸ್ಸಂಕ ವರುಣ್‌ ಚಕ್ರವರ್ತಿಗೆ ಕ್ಯಾಚ್‌ ನೀಡಿ ಔಟಾದರು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ನಂತರದ ಎಸೆತದಲ್ಲಿ 2, 1 ಬೈ, 2, 4 ರನ್‌ ಬಂತು. ಕೊನೆಯ ಓವರ್‌ನಲ್ಲಿ 3 ರನ್‌ ಬೇಕಿತ್ತು. ಶನಕ ಬೌಂಡರಿ ಹೊಡೆಯುವ ಪ್ರಯತ್ನ ನಡೆಸಿದರೂ 2 ರನ್‌ ಓಡಿದ ಪರಿಣಾಮ ಪಂದ್ಯ ಟೈನಲ್ಲಿ ಅಂತ್ಯವಾಯಿತು.


    ಲಂಕಾದ ಉತ್ತಮ ಆಟ:
    ಗೆಲ್ಲಲು 203 ರನ್‌ಗಳ ಕಠಿಣ ಸವಾಲನ್ನು ಪಡೆದ ಲಂಕಾ ಮೊದಲ ಓವರಿನಲ್ಲಿ ಕುಸಾಲ್ ಮೆಂಡಿಸ್ ಅವರ ವಿಕೆಟ್‌ ಕಳೆದುಕೊಂಡಿತ್ತು. ಎರಡನೇ ವಿಕೆಟಿಗೆ ಪಾತುಮ್ ನಿಸ್ಸಂಕ, ಕುಸಾಲ್ ಪೆರೆರಾ 70 ಎಸೆತಗಳಲ್ಲಿ 127 ರನ್‌ ಜೊತೆಯಾಟವಾಡಿ ಭದ್ರವಾದ ಇನ್ನಿಂಗ್ಸ್‌ ಕಟ್ಟಿದರು. ಕುಸಾಲ್ ಪೆರೆರಾ 58 ರನ್‌ (32 ಎಸೆತ, 8 ಬೌಂಡರಿ, 1 ಸಿಕ್ಸ್‌) ಗಳಿಸಿದ್ದಾಗ ಸ್ಟಂಪ್‌ ಔಟಾದರು. ನಂತರ ಬಂದ ನಾಯಕ ಚರಿತ್‌ ಅಸಲಂಕಾ ಸಿಕ್ಸ್‌ ಸಿಡಿಸಲು ಹೋಗಿ 5 ರನ್‌ ಗಳಿಸಿ ಕ್ಯಾಚ್‌ ನೀಡಿದರು. ಕಮಿಂಡು ಮೆಂಡಿಸ್‌ 3 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು.

    ಇಂದಿನ ಪಂದ್ಯದಲ್ಲಿ ಬುಮ್ರಾ ಬದಲು ಅರ್ಶ್‌ದೀಪ್‌ ಸಿಂಗ್‌ ಅವರನ್ನು ಆಡಿಸಲಾಗಿತ್ತು. ಆದರೆ ಭಾರತದ ಬೌಲರ್‌ಗಳು ರನ್‌ ನಿಯಂತ್ರಣಕ್ಕೆ ಕಡಿವಾಣ ಹಾಕಲು ವಿಫಲರಾದರು. ಪಾಂಡ್ಯ ಕೇವಲ ಒಂದು ಓವರ್‌ ಎಸೆದು ಮೈದಾನ ತೊರೆದಿದ್ದು ಭಾರತಕ್ಕೆ ಹಿನ್ನಡೆ ಆಗಿತ್ತು.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಅಭಿಷೇಕ್‌ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 202 ರನ್‌ ಗಳಿಸಿತ್ತು.ಶ್ರೀಲಂಕಾ ವಿರುದ್ಧದ ಇಂದಿನ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ 31 ಎಸೆತಗಳಲ್ಲಿ 61 ರನ್‌(8 ಬೌಂಡರಿ, 2 ಸಿಕ್ಸ್‌ ) ಸಿಡಿಸಿ ಔಟಾದರು. ತಿಲಕ್‌ ವರ್ಮಾ ಔಟಾಗದೇ 49 ರನ್‌(34 ಎಸೆತ, 4 ಬೌಂಡರಿ, 1 ಸಿಕ್ಸ್‌), ಸಂಜು ಸ್ಯಾಮ್ಸನ್‌ 39 ರನ್‌(23 ಎಸೆತ, 1 ಬೌಂಡರಿ, 3 ಸಿಕ್ಸ್‌), ಅಕ್ಷರ್‌ ಪಟೇಲ್‌ ಔಟಾಗದೇ 21 ರನ್‌(15 ಎಸೆತ, 1 ಬೌಂಡರಿ, 1 ಸಿಕ್ಸ್‌) ಹೊಡೆದರು.

  • ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    2022-23ರಲ್ಲಿ ಶ್ರೀಲಂಕಾದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನಿಂದ ಜನರು ಇನ್ನಿಲ್ಲದ ಸಂಕಷ್ಟವನ್ನು ಎದುರಿಸಿದ್ದರು . ಉಚಿತ ಕೊಡುಗೆಗಳಿಂದ ಬೊಕ್ಕಸ ಬರಿದಾಗಿಸಿದ್ದ ಶ್ರೀಲಂಕಾ ಸರ್ಕಾರದ ವಿರುದ್ಧ ಬೀದಿಗೆ ಇಳಿದ ಜನರು ಅಂದಿನ ಸರ್ಕಾರ ಪತನ ಆಗುವಂತೆ ಮಾಡಿದ್ದರು. ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ದೇಶದ 60 ಲಕ್ಷ ಅಂದರೆ ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ಆಹಾರದ ಅಭದ್ರತೆಗೆ ತುತ್ತಾಗಿದ್ದರು.

    ಇದೀಗ ಮತ್ತೆ ಶ್ರೀಲಂಕಾ ಅಂತಹದೇ ಒಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಉಂಟಾಗಿದೆ. ಸುತ್ತಲೂ ಸಮುದ್ರವೇ ಇದ್ದರೂ ಶ್ರೀಲಂಕಾ ಉಪ್ಪಿನ ಕೊರತೆ ಎದರಿಸುತ್ತಿದೆ. ಹಾಗಿದ್ರೆ ಶ್ರೀಲಂಕಾದಲ್ಲಿ ಉಪ್ಪಿನ ಕೊರತೆಗೆ ಕಾರಣ ಏನು? ಉಪ್ಪಿನ ಬೆಲೆ ಎಷ್ಟಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ಅಕಾಲಿಕ ಮಳೆಯಲ್ಲಿ ಕೊಚ್ಚಿಹೋಯ್ತು ಉಪ್ಪು:
    ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ ಹಾಗೂ ಅಕ್ಟೋಬರ್- ನವೆಂಬರ್‌ನಲ್ಲಿ ಉಪ್ಪಿನ ಉತ್ಪಾದನೆ ಮಾಡಲಾಗುತ್ತದೆ. ಆದರೆ ಈ ಬಾರಿ ಮಾರ್ಚ್‌ನಿಂದಲೇ ಶ್ರೀಲಂಕಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಉಪ್ಪು ಉತ್ಪಾದನೆಗೆ ಸಂಕಷ್ಟ ತಂದೊಡ್ಡಿದೆ. ಅಕಾಲಿಕ ಮಳೆಯಿಂದಾಗಿ ಈಗಾಗಲೇ ತಯಾರಿಸಿದ್ದ 15 ಟನ್ ಉಪ್ಪು ಮಳೆಗೆ ಕೊಚ್ಚಿ ಹೋಗಿದೆ.

    ಸೂರ್ಯನ ಬೆಳಕಿಲ್ಲದೆ ಕೆಲವು ತಿಂಗಳಿಂದ ಶ್ರೀಲಂಕಾದಲ್ಲಿ ಉಪ್ಪಿನ ಉತ್ಪಾದನೆ ಬಹುತೇಕ ಸ್ಥಗಿತಗೊಂಡಿದೆ. ಹಲವೆಡೆ ಕೆಲವೊಮ್ಮೆ ಮಳೆ ಕೊಂಚ ಬಿಡುವು ಕೊಟ್ಟರೂ ಕೂಡ ಉಪ್ಪು ತಯಾರಿಕೆಗೆ ಬೇಕಾದಷ್ಟು ಪ್ರಮಾಣದಲ್ಲಿ ಬಿಸಿಲು ಸಿಗದೇ ಇರುವುದರಿಂದ ಸಂಕಷ್ಟ ಹೆಚ್ಚಾಗಿದೆ. ಮಾರ್ಚ್‌ನಲ್ಲಿ ಅಕಾಲಿಕ ಮಳೆ ಎದುರಾದ ಪರಿಣಾಮ ಮೇನಲ್ಲಿ ಉಪ್ಪು ಉತ್ಪಾದನೆ ಮಾಡುವ ಬಗ್ಗೆ ಶ್ರೀಲಂಕಾ ಯೋಚಿಸಿತ್ತು. ಆದರೆ ಈ ನಿರೀಕ್ಷೆಯೂ ಹುಸಿಯಾಗಿದೆ. ಉಪ್ಪು ಉತ್ಪಾದನೆ ಮಾಡಲಾಗದೆ ಬೇರೆ ದೇಶಗಳಿಂದ ಉಪ್ಪು ಆಮದು ಮಾಡಿಕೊಳ್ಳುವುದು ಶ್ರೀಲಂಕಾಗೆ ಅನಿವಾರ್ಯವಾಗಿದೆ.

    ದುಪ್ಪಟ್ಟು ದರ:
    ಭಾರಿ ಮಳೆಯಿಂದ ಬೇಡಿಕೆಗೆ ತಕ್ಕಂತೆ ಉಪ್ಪು ಪೂರೈಕೆ ಮಾಡಲಾಗದೇ ಶ್ರೀಲಂಕಾ ಇತರೆ ರಾಷ್ಟ್ರಗಳಿಂದ ಉಪ್ಪು ಆಮದು ಮಾಡಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಶ್ರೀಲಂಕಾದಲ್ಲಿ ಉಪ್ಪಿನ ಕೊರತೆ ಹೆಚ್ಚಾದಂತೆ ಬೆಲೆಯು ಹೆಚ್ಚಾಗಿದೆ. ಮೊದಲು 420 ರೂ.ಗೆ ದೊರೆಯುತ್ತಿದ್ದ 50 ಕೆಜಿ ಉಪ್ಪಿನ ಚೀಲ ಈಗ 2,000 ರೂ. ಸನಿಹ ತಲುಪಿದೆ. ಪ್ರಸ್ತುತ ಲಂಕಾದಲ್ಲಿ ಒಂದು ಕೆಜಿ ಉಪ್ಪಿಗೆ 145 ರೂ. ಇದೆ. ಮೊದಲೇ ಹಣದುಬ್ಬರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ರಾಷ್ಟ್ರ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ಉಪ್ಪನ್ನು ಕಡಿಮೆ ಬೆಲೆಗೆ ನೀಡುವುದು ಅಸಾಧ್ಯವೇ ಸರಿ.

    ದೇಶಿ ಉಪ್ಪು ಉತ್ಪಾದನೆ ಕುಂಠಿತ:
    ಶ್ರೀಲಂಕಾದ ಹಂಬಂಟೋಟ, ಎಲಿಫೆಂಟ್ ಪಾಸ್, ಪುಟ್ಟಲಾಂ, ಕುರಂಚತೀವು ನಗರಗಳಲ್ಲಿ ಪ್ರಮುಖ ಉಪ್ಪು ತಯಾರಿಕಾ ಘಟಕಗಳಿವೆ. ಅಕಾಲಿಕ ಮಳೆಯಿಂದ ಇಷ್ಟು ನಗರಗಳು ಉಪ್ಪು ತಯಾರಿಸಲು ಸಾಧ್ಯವಾಗಿಲ್ಲ. ಸುಮಾರು 60% ಉಪ್ಪಿನ ಪೂರೈಕೆಯನ್ನು ಪುಟ್ಟಲಾಂ ಒಂದರಿಂದಲೇ ಒದಗಿಸಲಾಗುತ್ತಿತ್ತು. ಅಲ್ಲದೆ ಎಲಿಫೆಂಟ್ ಪಾಸ್ ಹಾಗೂ ಕುರಂಚತೀವು ಘಟಕಗಳಲ್ಲಿ 1990ಕ್ಕೂ ಮುನ್ನ ಸುಮಾರು 85,000 ಟನ್ ಉಪ್ಪನ್ನು ವಾರ್ಷಿಕವಾಗಿ ತಯಾರಿಸಲಾಗುತ್ತಿತ್ತು. ಬಳಿಕ ಈ ಘಟಕಗಳನ್ನು ಎಲ್‌ಟಿಟಿಇ ಸಂಘಟನೆ ವಶಕ್ಕೆ ಪಡೆದ ಪರಿಣಾಮ ಉಪ್ಪು ತಯಾರಿಕೆ ಸ್ಥಗಿತಗೊಂಡಿತ್ತು.

    ಆ ಬಳಿಕ ಉತ್ಪಾದನೆ ಪುನಾರಂಭವಾದರೂ ಹಿಂದಿನಷ್ಟು ಪ್ರಮಾಣದಲ್ಲಿ ಉಪ್ಪು ತಯಾರಾಗುತ್ತಿರಲಿಲ್ಲ. ಸದ್ಯ ಎಲಿಫೆಂಟ್ ಪಾಸ್‌ನಲ್ಲಿ 20,000 ಟನ್ ಉಪ್ಪು ವಾರ್ಷಿಕವಾಗಿ ತಯಾರಿಸಲಾಗುತ್ತದೆ. ಆದರೆ ಶ್ರೀಲಂಕಾದಲ್ಲಿ ವಾರ್ಷಿಕವಾಗಿ 1,80,000 ಟನ್ ಉಪ್ಪಿನ ಬೇಡಿಕೆ ಇದೆ. ಪ್ರಸ್ತುತ ಈ ಎಲ್ಲಾ ಘಟಕಗಳು ಸೇರಿ 1,35,000 ಟನ್ ನಿಂದ 1,40,000 ಟನ್ ಉಪ್ಪು ಪೂರೈಸುತ್ತಿದೆ. ಸದ್ಯ ಮಾರ್ಚ್‌ನಿಂದ ಆರಂಭವಾದ ಅಕಾಲಿಕ ಮಳೆಯಿಂದಾಗಿ ಉಪ್ಪು ಉತ್ಪಾದನೆ ಕ್ಷೀಣಗೊಂಡು 23%ರಷ್ಟು ಉಪ್ಪಿನ ಉತ್ಪಾದನೆಯನ್ನು ಮಾತ್ರ ಮಾಡಲು ಸಾಧ್ಯವಾಗುತ್ತಿದೆ.

    ಶ್ರೀಲಂಕಾಗೆ ಭಾರತದ ನೆರವು:
    ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಭಾರತವನ್ನು ಬೆಂಬಲಿಸಿದ ನೆರೆಯ ರಾಷ್ಟ್ರ ಶ್ರೀಲಂಕಾಗೆ ಬಿಕ್ಕಟಿನ ಸಂದರ್ಭದಲ್ಲಿ ಭಾರತ ಸಹಾಯ ಹಸ್ತ ಚಾಚಿದೆ. ತೀವ್ರ ಉಪ್ಪಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ 3,050 ಮೆಟ್ರಿಕ್ ಟನ್ ಗಳಷ್ಟು ಉಪ್ಪು ಪೂರೈಸಲು ಮುಂದಾಗಿದೆ.

    ಒಟ್ಟು ಸಾಗಣೆಯಲ್ಲಿ ಸರ್ಕಾರಿ ಸ್ವಾಮ್ಯದ ಉಪ್ಪು ಕಂಪನಿಗಳು 2,800 ಮೆಟ್ರಿಕ್ ಟನ್ ಉಪ್ಪನ್ನು ರವಾನಿಸಿದೆ. ಇನ್ನುಳಿದ 250 ಮೆಟ್ರಿಕ್ ಟನ್‌ಗಳನ್ನು ಖಾಸಗಿ ಸಂಸ್ಥೆಗಳಿಂದ ಖರೀದಿಸಲಾಗುವುದು ಎಂದು ವರದಿಗಳು ತಿಳಿಸಿವೆ.

    2022ರಲ್ಲಿ ಆರ್ಥಿಕ ಬಿಕ್ಕಟ್ಟು:
    2022ರಲ್ಲಿ ಶ್ರೀಲಂಕಾ ಅತಿಯಾದ ಹಣದುಬ್ಬರ, ಆಹಾರದ ಕೊರತೆ, ತೈಲದ ಕೊರತೆ, ವಿದ್ಯುತ್ ಅಲಭ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದು ಸಾಮಾನ್ಯ ಜನತೆ ರೊಚ್ಚಿಗೇಳುವಂತೆ ಮಾಡಿತ್ತು. ಇಂತಹ ಅರ್ಥಿಕ ಪರಿಸ್ಥಿತಿಯನ್ನು ನಿಭಾಯಿಸಲು ಅಸಮರ್ಪಕವಾದ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು.

    2019ರ ವರದಿಯೊಂದರ ಪ್ರಕಾರ, ಶ್ರೀಲಂಕಾದ ರಾಷ್ಟ್ರೀಯ ಆದಾಯ ರಾಷ್ಟ್ರೀಯ ಖರ್ಚಿಗಿಂತ ಹೆಚ್ಚಿತ್ತು. ಹಾಗೆಂದು ಶ್ರೀಲಂಕಾ ತನ್ನ ಆದಾಯವನ್ನು ಅಪಾರವಾಗಿ ಹೆಚ್ಚಿಸುವಂತಹ ಏನನ್ನೂ ಉತ್ಪಾದಿಸುತ್ತಿಲ್ಲ. ಉಚಿತ ಯೋಜನೆಗಳೇ ಪ್ರಮುಖವಾಗಿ ಶ್ರೀಲಂಕಾದ ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣವಾಗಿತ್ತು.

    ಕೋವಿಡ್ – 19 ನಂತರದ ಆರ್ಥಿಕ ಸಂಕಷ್ಟವಂತೂ ದ್ವೀಪರಾಷ್ಟ್ರವನ್ನು ಪ್ರಕ್ಷುಬ್ಧವಾಗಿಸಿತು. ಅದು ಪ್ರವಾಸೋದ್ಯಮದ ಮೇಲೆ ಆಧಾರಿತವಾಗಿದ್ದ ಆರ್ಥಿಕತೆಯನ್ನೇ ನಾಶ ಮಾಡಿತು ಮತ್ತು ವಿದೇಶಗಳಲ್ಲಿ‌ ಕೆಲಸ ಮಾಡುತ್ತಿದ್ದವರು ಕಳುಹಿಸುತ್ತಿದ್ದ ಹಣವೂ ಕಡಿತವಾಗುವಂತೆ ಮಾಡಿತು. ಅತಿಯಾದ ಸರ್ಕಾರಿ ಸಾಲ, ಹೆಚ್ಚುತ್ತಿದ್ದ ತೈಲ ಬೆಲೆಗಳು ದ್ಚೀಪ ರಾಷ್ಟ್ರ ಶಿಥಿಲವಾಗುವಂತೆ ಮಾಡಿದರೆ ರಾಸಾಯನಿಕ ಗೊಬ್ಬರದ ಆಮದಿನ ನಿಷೇಧ ಕೃಷಿ‌ ಕ್ಷೇತ್ರ ಸಂಕಷ್ಟಕ್ಕೊಳಗಾಗುವಂತೆ ಮಾಡಿತು. ಶ್ರೀಲಂಕಾದ ತೈಲ ಆಮದೂ ನಿಂತು, ಶಾಲೆಗಳೂ ಮುಚ್ಚಲ್ಪಟ್ಟವು. ಅನಿವಾರ್ಯ ಉಪಯೋಗಗಳಿಗೆ ಪೆಟ್ರೋಲ್, ಡೀಸೆಲ್ ರೇಷನ್ನಿನಂತೆ ಹಂಚುವ ಪರಿಸ್ಥಿತಿ ಬಂತು. 2019ರ ಚುನಾವಣೆಯಲ್ಲಿ ರಾಜಪಕ್ಸೆ ಮಾತುಕೊಟ್ಟಂತೆ ಅತಿಯಾದ ತೆರಿಗೆ ಕಡಿತವೂ ಶ್ರೀಲಂಕಾದ ಆರ್ಥಿಕತೆಯನ್ನು ಇನ್ನಷ್ಟು ಹಾಳುಗೆಡವಿತು.

    ಈ ಎಲ್ಲಾ ಆರ್ಥಿಕ ಸಂಕಷ್ಟಗಳ ಮಧ್ಯವೂ, ರಾಜಪಕ್ಸ ಸರ್ಕಾರ ಸಹಾಯಕ್ಕಾಗಿ ಐಎಂಎಫ್ ಬಾಗಿಲು ಬಡಿಯತೊಡಗಿತು. ಆದರೆ ಇದರೊಂದಿಗೆ ಅತಿಯಾಗಿ ಅಪಮೌಲ್ಯಗೊಂಡ ಶ್ರೀಲಂಕಾದ ಕರೆನ್ಸಿ, ಹೆಚ್ಚುತ್ತಿದ್ದ ಹಣದುಬ್ಬರ ಸಾರ್ವಜನಿಕರ‌ ಸಂಕಷ್ಟಗಳನ್ನು ಹೆಚ್ಚಿಸಿತು.

    ಚೀನಾ ಇದೆಲ್ಲವನ್ನೂ ತನ್ನ ಕಾರ್ಯತಂತ್ರದ ಲಾಭಕ್ಕಾಗಿ ಸಿಗುವ ಅವಕಾಶ ಎಂದು ಪರಿಗಣಿಸಿ, ಶ್ರೀಲಂಕಾದ ಆರ್ಥಿಕತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಹೊಂಚಿಕೆ ಹಾಕಿತು. ಇದಕ್ಕಾಗಿ ಈಗಾಗಲೇ ಸಂಕಷ್ಟದಲ್ಲಿದ್ದ ಶ್ರೀಲಂಕಾಗೆ ಚೀನಾ ವಿಪರೀತ ಬಡ್ಡಿ ದರದಲ್ಲಿ ಇನ್ನಷ್ಟು ಸಾಲ ನೀಡಿತು. ಆರಂಭದಲ್ಲಿ ಚೀನಾ ಅಪಾರವಾಗಿ ಸಾಲ ನೀಡುವ ಮೂಲಕ ಶ್ರೀಲಂಕಾದ ಆಡಳಿತವನ್ನು ತನ್ನೆಡೆಗೆ ಸೆಳೆಯಿತು. ಆ ಬಳಿಕ ಶ್ರೀಲಂಕಾದ ಆರ್ಥಿಕತೆಯನ್ನೇ ಸಾಲದ ಸುಳಿಯಲ್ಲಿ ಸಿಲುಕಿಸುವ ಉಡುಗೊರೆ ನೀಡಿ, ಶ್ರೀಲಂಕಾಗೆ ಮಿತ್ರದ್ರೋಹ ಮಾಡಿತು.

  • ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ ಸಾಧ್ಯತೆ

    ನವದೆಹಲಿ: ಮುಂಬರುವ ಏಪ್ರಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಶ್ರೀಲಂಕಾಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಇದು ಭಾರತ-ಶ್ರೀಲಂಕಾ ಸಂಬಂಧಗಳ ಸುಧಾರಣೆಯ ಬಲವಾದ ಸಂಕೇತವಾಗಿದೆ. ಶ್ರೀಲಂಕಾದಲ್ಲಿ (Srilanka) ಭಾರತೀಯ ಭದ್ರತಾ ಸಿಬ್ಬಂದಿ ಹಿಂಪಡೆದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಭೇಟಿ ಇದಾಗಿದೆ.

    ಶ್ರೀಲಂಕಾ ಅಧ್ಯಕ್ಷ ಅನುರಾ ದಿಸನಾಯಕ ಅವರು ಕಳೆದ ಡಿಸೆಂಬರ್‌ನಲ್ಲಿ ದೆಹಲಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ಬಳಿಕ ಪ್ರಧಾನಿ ಮೋದಿ ಅವರ ಭೇಟಿ ನಡೆಯಲಿದೆ. ನರೇಂದ್ರ ಮೋದಿಯವರು ಪ್ರಧಾನಿಯಾಗಿ 2015, 2017 ಮತ್ತು 2019ರಲ್ಲಿ ಮೂರು ಬಾರಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.ಇದನ್ನೂ ಓದಿ: ಬಾಯಿಯಲ್ಲಿ ಚಾಕು ಹಿಡಿದು ರಗಡ್ ಅವತಾರದಲ್ಲಿ ಬಂದ ಜಾನ್ವಿ ಕಪೂರ್

    ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ, ಎರಡೂ ದೇಶಗಳ ನಡುವಿನ ಚರ್ಚೆಗಳು ಸಂಪರ್ಕ ಮತ್ತು ಆರ್ಥಿಕ ಸಂಬಂಧಗಳನ್ನು ಒಳಗೊಳ್ಳುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಭಾರತದ ರಾಮೇಶ್ವರಂ ಮತ್ತು ಶ್ರೀಲಂಕಾದ ತಲೈಮನ್ನರ್ ನಡುವೆ ಹೊಸ ದೋಣಿ ಮಾರ್ಗದ ಬಗ್ಗೆ ಚರ್ಚಿಸಲಾಗುತ್ತಿದೆ.

    ನಾಗಪಟ್ಟಣಂ ಅನ್ನು ತ್ರಿಕೋನಮಲಿಯೊಂದಿಗೆ ಸಂಪರ್ಕಿಸುವ ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್‌ಲೈನ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ಕೂಡ ಮುಂದುವರಿಯುವ ಸಾಧ್ಯತೆಯಿದೆ. ಈ ಯೋಜನೆಯಲ್ಲಿ ಭಾರತೀಯ ತೈಲ ನಿಗಮವು ಪ್ರಮುಖ ಪಾತ್ರ ವಹಿಸಿದೆ.ಇದನ್ನೂ ಓದಿ: ಮೈಸೂರು ಮಹಾರಾಜರ ಕುಟುಂಬ ರಕ್ಷಿಸಿದ್ದ `ಶ್ಯಾಡೋ’ ಚಿರತೆ ದಿಢೀರ್ ಸಾವು

  • ಚಿಕ್ಕಬಳ್ಳಾಪುರ | ಲಂಕಾಗೆ ಲಗಾಮು ಹಾಕಿದ ಭಾರತ – 6 ರನ್‌ಗಳ ರೋಚಕ ಜಯ

    ಚಿಕ್ಕಬಳ್ಳಾಪುರ | ಲಂಕಾಗೆ ಲಗಾಮು ಹಾಕಿದ ಭಾರತ – 6 ರನ್‌ಗಳ ರೋಚಕ ಜಯ

    – ಟಿ20 ಪಂದ್ಯದಲ್ಲಿ ಮಿಂಚಿದ ನಮನ್ ಓಜಾ-ವೆಂಕಟೇಶ್ ಪ್ರಸಾದ್

    ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಸಾಯಿಕೃಷ್ಣನ್ ಕ್ರೀಡಾಂಗಣದಲ್ಲಿ ನಡೆದ ʻವಸುಧೈವ ಕುಟುಂಬಕಂʼ ತತ್ವದಡಿ ನಡೆದ ʻಒಂದು ಜಗತ್ತು-ಒಂದು ಕುಟುಂಬʼ ಕಪ್‌ನ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಲಂಕಾ (Sri Lanka) ವಿರುದ್ಧ ಭಾರತ ಗೆದ್ದು ಬೀಗಿದೆ.

    ಯುವಮಾನವತವಾದಿ ಶ್ರೀ ಸದ್ಗುರು ಮಧುಸೂದನಸಾಯಿ ಆಯೋಜನೆ ಮಾಡಿದ್ದ ʻಒನ್ ವರ್ಲ್ಡ್-ಒನ್ ಫ್ಯಾಮಿಲಿʼ ಕಪ್‌ಗಾಗಿ ಭಾರತ (Team India) ಹಾಗೂ ಶ್ರೀಲಂಕಾ ನಿವೃತ್ತ ಕ್ರಿಕೆಟ್ ಆಟಗಾರರು ಈ ಪಂದ್ಯದಲ್ಲಿ ಸೆಣಸಾಟ ನಡೆಸಿದ್ರು. ಇದನ್ನೂ ಓದಿ: ಚಾಂಪಿಯನ್ಸ್‌ ಟ್ರೋಫಿ ಹೊತ್ತಲ್ಲೇ ಆಸೀಸ್‌ಗೆ ದೊಡ್ಡ ಆಘಾತ – ಏಕದಿನ ಕ್ರಿಕೆಟ್‌ಗೆ ಸ್ಟೋಯ್ನಿಸ್‌ ಗುಡ್‌ಬೈ

    ಭಾರತ ತಂಡದಲ್ಲಿ ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ನಮನ್ ಒಜಾ, ಎಸ್.ಬದ್ರೀನಾಥ್, ಅಶೋಕ್ ದಿಂಡಾ, ಪಿಯೂಷ್ ಚಾವ್ಲಾ, ವೆಂಕಟೇಶ್ ಪ್ರಸಾದ್, ಸುನಿಲ್ ಜೋಷಿ, ಪಾಥೀವ್ ಪಟೇಲ್, ಸುಜಿತ್ ಸೋಮಸುಂದರ್, ಮನೋಜ್ ತಿವಾರಿ, ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮಿಥುನ್ ಭಾಗವಹಿಸಿದ್ದರು.

    ಇನ್ನೂ ಶ್ರೀಲಂಕಾ ತಂಡದಿಂದ ನಾಯಕ ಮಾರ್ವಿನ್‌ ಅಟಪಟ್ಟು, ಉಪಲ್ ತರಂಗ, ರೋಮೇಶ್, ಮಿಲಿಂಡಾ, ಅಸೆಲಾ, ಅರವಿಂದ ಡಿ ಸಿಲ್ವಾ, ನೂವಾನ್, ಅಜೆಂತಾ ಮೆಂಡಿಸ್, ತಿಲಾನ್, ಮುತ್ತಯ್ಯ ಮುರಳೀಧರನ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ಟೀಂ ಇಂಡಿಯಾದ ಆಲ್‌ರೌಂಡರ್‌ ಆಟ – ಇಂಗ್ಲೆಂಡ್‌ ವಿರುದ್ಧ 4 ವಿಕೆಟ್‌ಗಳ ಜಯ

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತ್ತು. ಟೀಂ ಇಂಡಿಯಾ ಪರ ಯೂಸೂಫ್ ಪಠಾಣ್ 32 ಎಸೆತಗಳಲ್ಲಿ ಸ್ಫೋಟಕ 61 ರನ್ ಗಳಿಸಿದ್ದು, ನಮನ್ ಒಜಾ 27 ಎಸೆತಗಳಲ್ಲಿ 53 ರನ್ ಚಚ್ಚಿದರು. ಇನ್ನೂ 196 ರನ್‌ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 189 ರನ್‌ ಗಳಿಸಿ ವಿರೋಚಿತ ಸೋಲು ಕಂಡಿತು.

    ಲಂಕಾ ತಂಡ ಉತ್ತಮ ಆರಂಭ ಪಡೆದರು ಬಳಿಕ ಟೀಂ ಇಂಡಿಯಾ ವೇಗಿಗಳ ಆರ್ಭಟಕ್ಕೆ ಸಿಲುಕಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲೊಪ್ಪಿಕೊಂಡಿತು. ಇದನ್ನೂ ಓದಿ: 10 ಸಾವಿರ ಸಾಲ.. ಒಂದೂವರೆ ಲಕ್ಷ ಬಡ್ಡಿ – ಮೈಕ್ರೋ ಫೈನಾನ್ಸ್‌ ಬೆನ್ನಲ್ಲೇ ಮೀಟರ್ ಬಡ್ಡಿ ಹಾವಳಿ

  • NZ vs SL Test Series | ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 6 ದಿನಗಳ ಟೆಸ್ಟ್ ಪಂದ್ಯ!

    NZ vs SL Test Series | ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ 6 ದಿನಗಳ ಟೆಸ್ಟ್ ಪಂದ್ಯ!

    – 6 ದಿನಗಳ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲಲ್ಲ
    – ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ 6 ದಿನದ ಪಂದ್ಯ

    ಕೊಲಂಬೊ: ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ ಎರಡು ಟೆಸ್ಟ್‌ಗಳ ಸರಣಿಯ (NZ vs SL Test Series) ಮೊದಲ ಪಂದ್ಯ 6 ದಿನಗಳ ಕಾಲ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಟೆಸ್ಟ್ ಪಂದ್ಯ 5 ದಿನ ಮಾತ್ರ, 6 ದಿನ ಹೇಗೆ ಎಂದು ಅಚ್ಚರಿಪಡಬೇಡಿ. ಸೆಪ್ಟೆಂಬರ್ 18 ರಂದು ಪ್ರಾರಂಭವಾಗುವ ಮೊದಲ ಶ್ರೀಲಂಕಾ – ನ್ಯೂಜಿಲೆಂಡ್ ಟೆಸ್ಟ್ ಆರು ದಿನಗಳ ಕಾಲ ನಡೆಯಲಿದ್ದು, ಸೆಪ್ಟೆಂಬರ್ 21 ರಂದು ವಿಶ್ರಾಂತಿ ದಿನ ನಿಗದಿಪಡಿಸಲಾಗಿದೆ.

    ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ (Sri Lanka Presidential Election) ಸೆಪ್ಟೆಂಬರ್ 21ರಂದು ನಡೆಯಲಿದ್ದು ಅಂದು ದಿನದಾಟ ನಡೆಯುವುದಿಲ್ಲ. ಆದರೆ ಸೆ.22ರಿಂದ ಟೆಸ್ಟ್ ಪಂದ್ಯ ಮುಂದುವರೆಯಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೇಳಿದೆ. ಇದನ್ನೂ ಓದಿ: ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

    ಶ್ರೀಲಂಕಾ ಕ್ರಿಕೆಟ್ (SLC) ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಮುಂಬರುವ 2 ಪಂದ್ಯಗಳ ಟೆಸ್ಟ್ ಸರಣಿಯ ಪಂದ್ಯಗಳ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಎರಡೂ ಪಂದ್ಯಗಳು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (JICS) ನಡೆಯಲಿದೆ. ಸರಣಿಯ ಮೊದಲ ಪಂದ್ಯವು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದ್ದು, ಆರು ದಿನಗಳ ಕಾಲ ನಡೆಯಲಿದೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 26ರಂದು ಆರಂಭವಾಗಲಿದೆ. ಇದನ್ನೂ ಓದಿ: ಇಂಗ್ಲೆಂಡ್‌ ತಂಡದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಪುತ್ರ

    ಇದೇ ಮೊದಲಲ್ಲ!
    ಟೆಸ್ಟ್ ಪಂದ್ಯವೊಂದರಲ್ಲಿ ವಿಶ್ರಾಂತಿ ದಿನವನ್ನು ಸೇರಿಸಿರುವುದು ಇದೇ ಮೊದಲಲ್ಲ. ಕಳೆದ ಶತಮಾನದ ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಸಾಮಾನ್ಯವಾಗಿತ್ತು, ಇಂಗ್ಲೆಂಡ್‌ನಲ್ಲಿ ಆರು ದಿನಗಳ ಕಾಲ ಅನೇಕ ಪಂದ್ಯಗಳನ್ನು ಆಡಲಾಗುತ್ತಿತ್ತು. ಕೆಲವು ಬಾರಿ ಭಾನುವಾರ ಆಟಕ್ಕೆ ಒಂದು ದಿನದ ವಿಶ್ರಾಂತಿಯನ್ನು ನೀಡಲಾಗುತ್ತಿತ್ತು.

    20 ವರ್ಷಗಳ ನಂತರ ಶ್ರೀಲಂಕಾವು ಆರು ದಿನಗಳ ಟೆಸ್ಟ್ ಪಂದ್ಯದ ಆತಿಥ್ಯ ವಹಿಸಲಿದೆ. 2001ರಲ್ಲಿ ಕೊಲಂಬೋದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಒಂದು ದಿನದ ಬ್ರೇಕ್ ನೀಡಲಾಗಿತ್ತು. ಅಂದು ಪೋಯಾ ದಿನ (ಹುಣ್ಣಿಮೆ) ಕಾರಣದಿಂದಾಗಿ ವಿಶ್ರಾಂತಿ ದಿನವನ್ನು ನೀಡಿದ್ದರು. ಇದನ್ನೂ ಓದಿ: Ind vs Eng Test | 2025ರ ಭಾರತ – ಇಂಗ್ಲೆಂಡ್ ವೇಳಾಪಟ್ಟಿ ಬಿಡುಗಡೆಗೊಳಿಸಿದ ಬಿಸಿಸಿಐ

    2008ರಲ್ಲಿ ಢಾಕಾದಲ್ಲಿ ವಿಶ್ರಾಂತಿ ದಿನದೊಂದಿಗಿನ ಮತ್ತೊಂದು ಟೆಸ್ಟ್ ಪಂದ್ಯ ನಡೆದಿತ್ತು. ಬಾಂಗ್ಲಾದೇಶದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾದ ವಿರುದ್ಧದ ಪಂದ್ಯವನ್ನು 6 ದಿನಗಳ ಕಾಲ ಆಡಿತ್ತು. 2008ರ ಡಿಸೆಂಬರ್ 29ರಂದು ಚುನಾವಣೆ ಹಿನ್ನೆಲೆಯಲ್ಲಿ ವಿಶ್ರಾಂತಿ ದಿನವಾಗಿ ನಿಗದಿಪಡಿಸಲಾಗಿತ್ತು.

    ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಯಾವ ಸ್ಥಾನ?
    2023-2025ರ ನಡುವೆ ನಡೆಯುತ್ತಿರುವ ಈ ಟೆಸ್ಟ್ ಪಂದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭಾಗವಾಗಿದೆ. ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕ್ರಮವಾಗಿ ಮೂರು ಮತ್ತು 4ನೇ ಸ್ಥಾನದಲ್ಲಿದೆ.

    ಶ್ರೀಲಂಕಾ ವಿರುದ್ಧದ ಪಂದ್ಯದ ಬಳಿಕ ನ್ಯೂಜಿಲೆಂಡ್ ತಂಡ ಭಾರತಕ್ಕೆ ಆಗಮಿಸಲಿದ್ದು ಮೂರು ಪಂದ್ಯಗಳನ್ನು ಆಡಲಿದೆ. ಇದನ್ನೂ ಓದಿ: ಮುಟ್ಟಾಗಿದ್ದರೂ ನಿಗದಿತ ತೂಕ ಹೊಂದಿರಬೇಕು, ತೂಕದ ಮಾಪಕದಲ್ಲಿ ದೋಷವಿಲ್ಲ: ಫೋಗಟ್‌ ಅನರ್ಹತೆಗೆ ಕಾರಣ ನೀಡಿದ CAS 

  • ಮೊದಲ ಟೆಸ್ಟ್‌ನಲ್ಲೇ 41 ವರ್ಷದ ದಾಖಲೆ ಉಡೀಸ್‌ – 9ನೇ ಕ್ರಮಾಂಕದಲ್ಲಿ ಲಂಕಾ ಆಟಗಾರನ ಸಾಧನೆ

    ಮೊದಲ ಟೆಸ್ಟ್‌ನಲ್ಲೇ 41 ವರ್ಷದ ದಾಖಲೆ ಉಡೀಸ್‌ – 9ನೇ ಕ್ರಮಾಂಕದಲ್ಲಿ ಲಂಕಾ ಆಟಗಾರನ ಸಾಧನೆ

    ಮ್ಯಾಂಚೆಸ್ಟರ್: ಶ್ರೀಲಂಕಾದ (Srilanka) ಕ್ರಿಕೆಟ್ ಆಟಗಾರ ಮಿಲನ್ ರಥನಾಯಕೆ (Milan Rathnayake) ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ (Test Cricket) ದಾಖಲೆ ನಿರ್ಮಿಸಿದ್ದಾರೆ.

    ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ರಥನಾಯಕೆ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಪ್ರಭಾತ್ ಜಯಸೂರ್ಯ ಔಟಾದ ನಂತರ 9ನೇ ಕ್ರಮಾಂಕದಲ್ಲಿ  ಇಳಿದ ಅವರು 135 ಎಸೆತದಲ್ಲಿ 72 ರನ್ ಸಿಡಿಸಿದರು. ಈ ಮೂಲಕ 41 ವರ್ಷದ ನಂತರ 1983ರ ಭಾರತದ ವಿಶ್ವಕಪ್ ಸ್ಟಾರ್ ಕ್ರಿಕೆಟಿಗ ಬಲ್ವಿಂದರ್ ಸಿಂಧು ಅವರ ಹೆಸರಿನಲ್ಲಿದ್ದ ದಾಖಲೆ ಮುರಿದರು.

    ಬಲ್ವಿಂದರ್ ಸಿಂಧು (Balwinder Sandhu) 1983ರಲ್ಲಿ ಪಾಕಿಸ್ತಾನದ (Pakistan) ವಿರುದ್ಧ ಹೈದರಾಬಾದ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ 71 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಈಗ ಶ್ರೀಲಂಕಾದ ಆಟಗಾರ ಮಿಲನ್ ರಥನಾಯಕೆ ಕೂಡ 9ನೇ ಕ್ರಮಾಂಕದಲ್ಲಿ ಬ್ಯಾಟ್‌ಗೆ ಇಳಿದು 72 ರನ್ ಸಿಡಿಸಿ ಔಟಾದರು.

    9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಥನಾಯಕೆ ನಾಯಕ ಧನಂಜಯ್ ಜೊತೆ 63 ರನ್‌ ಜೊತೆಯಾಟವಾಡಿದ್ದರು. ನಂತರ ಧನಂಜಯ್ 8ನೇ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಕೊನೆಗೆ ಶೋಯಬ್ ಬಶೀರ್ ಎಸೆದ ಸ್ಪಿನ್ ಬೌಲಿಂಗ್‌ಗೆ ಕ್ಯಾಚ್ ಕೊಟ್ಟು ಔಟಾದರು. ಇದನ್ನೂ ಓದಿ: ಜಯ್‌ ಶಾ ಮುಂದಿನ ಐಸಿಸಿ ಅಧ್ಯಕ್ಷ? – ಆಸೀಸ್‌, ಇಂಗ್ಲೆಂಡ್‌ ಬೆಂಬಲ

    ನಾಯಕ ಧನಂಜಯ್ ಡಿಸಿಲ್ವಾ 84 ಎಸೆತದಲ್ಲಿ 74 ರನ್ (8 ಬೌಂಡರಿ), ಮಿಲನ್ ರಥನಾಯಕೆ 135 ಎಸೆತದಲ್ಲಿ 72 ರನ್ (2 ಸಿಕ್ಸ್, 6 ಬೌಂಡರಿ), ಕುಸಾಲ್ ಮೆಂಡಿಸ್ 34 ಎಸೆತದಲ್ಲಿ 24 ರನ್ (4 ಬೌಂಡರಿ) ಗಳಿಸಿದರು. ಇನ್ನುಳಿದ ಆಟಗಾರರು ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ನಿಲ್ಲದೇ ಪೆವಿಲಿಯನ್ ಸೇರಿದರು.

    ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 74 ಓವರ್‌ಗೆ 236 ರನ್ ಗಳಿಸಿ ಆಲೌಟ್ ಆಗಿದೆ. ಕ್ರಿಸ್ ವೋಕ್ಸ್ ಮತ್ತು ಶೋಯಬ್ ಬಶೀರ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರೆ, ಗಟ್ ಅಸ್ಕಿನ್ಸನ್ 2 ಮತ್ತು ಮಾರ್ಕ್ ವುಡ್ 1 ವಿಕೆಟ್ ಪಡೆದರು.

  • T20 World Cup: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್‌ಗಳ ಜಯ

    T20 World Cup: ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾಗೆ 6 ವಿಕೆಟ್‌ಗಳ ಜಯ

    ನ್ಯೂಯಾರ್ಕ್: ಇಲ್ಲಿನ ನಾಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಹಾಗೂ ದಕ್ಷಿಣ ಅಫ್ರಿಕಾ ನಡುವಿನ T20 World Cup ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ತಂಡ ದಕ್ಷಿಣ ಅಫ್ರಿಕಾ ತಂಡದ ಬೌಲರ್‌ ದಾಳಿಗೆ ತತ್ತರಿಸಿತು. 19.1 ಓವರ್​ಗಳಲ್ಲಿ ಕೇವಲ 77 ರನ್​ಗಳಿಗೆ ಶ್ರೀಲಂಕಾ ತಂಡ ಆಲೌಟ್ ಆಯಿತು. 78 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಅಫ್ರಿಕಾ ತಂಡ 16.2 ಓವರ್‌ಗಳಲ್ಲಿ 4ವಿಕೆಟ್‌ ನಷ್ಟಕ್ಕೆ 80 ರನ್‌ಗಳಿಸಿ ಗೆಲುವು ಸಾಧಿಸಿತು.

    ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟನ್ ಡೇ ಕೋಕ್ 27 ಎಸೆತಗಳಲ್ಲಿ 20, ಐಡೆನ್ ಮಾರ್ಕ್ರಾಮ್ 14 ಎಸೆತಗಳಲ್ಲಿ 12, ಟ್ರಿಸ್ಟಾನ್ ಸ್ಟಬ್ಸ್ 28 ಎಸೆತಗಳಲ್ಲಿ 13, ಹೆನ್ರಿಕ್ ಕ್ಲಾಸೆನ್ 22 ಎಸೆತಗಳಲ್ಲಿ 19 ರನ್‌ ಗಳಿಸಿದರು.

    ಶ್ರೀಲಂಕಾ ಪರ ನುವಾನ್ ತುಷಾರಾ, ದಾಸುನ್ ಶನಕ ತಲಾ 1, ವನಿಂದು ಹಸರಂಗ 2 ವಿಕೆಟ್‌ ಉರುಳಿಸಿದರು.

    ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಶ್ರೀಲಂಕಾ ತಂಡ ಆರಂಭದಿಂದಲೂ ವಿಕೆಟ್​ ಕಳೆದುಕೊಳ್ಳುತ್ತಲೇ ಸಾಗಿತು. ಕುಸಾಲ್ ಮೆಂಡಿಸ್​ 30 ಎಸೆತಗಳಲ್ಲಿ 19, ಮ್ಯಾಥ್ಯೂಸ್ 16 ಎಸೆತಗಳಲ್ಲಿ 16, ಕುಮಿಂಡು ಮೆಂಡ್​​​ ಎರಡಂಕಿ ದಾಟಿದ ಬ್ಯಾಟ್ಸ್​ಮನ್​ಗಳೆನಿಸಿಕೊಂಡರು. ಉಳಿದ ಬ್ಯಾಟರ್​ಗಳೆಲ್ಲಾ ಒಂದಂಕಿ ರನ್‌ಗೆ ಸುಸ್ತಾದರು. ನಾಯಕ ವನಿಂದು ಹಸರಂಗ, ಸದೀರಾ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಪಾತುಮ್ ನಿಸ್ಸಾಂಕ(3), ಚರಿತ್ ಅಸಲಂಕಾ (6), ದಾಸುನ್ ಶನಾಕ (9), ತೀಕ್ಷಾಣ 7 ರನ್​ಗಳಿಸಿದರು.

    ದಕ್ಷಿಣ ಅಫ್ರಿಕಾ ಪರ ಎನ್ರಿಚ್ ನೋಕಿಯಾ 4 ಓವರ್​ಗಳಲ್ಲಿ 7 ರನ್​ ನೀಡಿದ 4 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ 22ಕ್ಕೆ 2, ಕಗಿಸೋ ರಬಾಡ 21ಕ್ಕೆ 2 ಹಾಗೂ ಬಾರ್ಟ್ಮನ್​ 9ಕ್ಕೆ 1 ವಿಕೆಟ್ ಪಡೆದರು.

    ಟಿ20 ಕ್ರಿಕೆಟ್​ನ ಕನಿಷ್ಠ ಮೊತ್ತ
    ತನ್ನ ಮೊದಲ ಲೀಗ್ ಪಂದ್ಯದಲ್ಲಿ ಕೇವಲ 77 ರನ್​ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ ಟಿ20 ವಿಶ್ವಕಪ್​ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. 2012 ರ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 87ಕ್ಕೆ ಆಲೌಟ್ ಆಗಿದ್ದು, ಈವರೆಗಿನ ಕನಿಷ್ಠ ಮೊತ್ತವಾಗಿತ್ತು.

  • ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದೆ: ಜೈಶಂಕರ್‌

    ಕಂಪಾಲ (ಉಗಾಂಡಾ): ವಿದೇಶಾಂಗ ಸಚಿವ ಎಸ್. ಜೈಶಂಕರ್ (Jai Shankar) ಅವರು ಇಂದು ಉಗಾಂಡಾದ (Uganda) ಕಂಪಾಲಾದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ (Ranil Wickremesinghe) ಮತ್ತು ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ಡಾ.ರಿಯಾದ್ ಅಲ್-ಮಲಿಕಿ (Riyad al-Maliki) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ಶುಕ್ರವಾರ ಆರಂಭವಾದ ಅಲಿಪ್ತ ಚಳವಳಿಯ (NAM) ಎರಡು ದಿನಗಳ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜೈಶಂಕರ್ ಉಗಾಂಡಾದ ರಾಜಧಾನಿ ಕಂಪಾಲಾದಲ್ಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಜೈಶಂಕರ್ ಅವರು, ಡಾ. ರಿಯಾದ್ ಅಲ್-ಮಲಿಕಿ ಅವರನ್ನು ಭೇಟಿಯಾಗಲು ಸಂತೋಷವಾಯಿತು ಎಂದಿದ್ದಾರೆ. ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಕುರಿತು ಅವರೊಂದಿಗೆ ಸಮಗ್ರ ಚರ್ಚೆ ನಡೆಸಲಾಯಿತು. ಅವರು ಕೂಡ ಸಂಘರ್ಷದ ಮಾನವೀಯ ಮತ್ತು ರಾಜಕೀಯ ಆಯಾಮಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

    ಮಾನವೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಗಾಜಾಕ್ಕೆ ಸೂಕ್ತ ಪರಿಹಾರ ಕ್ರಮದ ಅಗತ್ಯವಿದ್ದು, ಇದು ಯುದ್ಧ ಸಂತ್ರಸ್ತರಿಗೆ ತಕ್ಷಣದ ಪರಿಹಾರ ನೀಡುವಂತಿರಬೇಕು ಎಂದು ಜೈಶಂಕರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅಗ್ನಿ ತೀರ್ಥ ಕಡಲತೀರದಲ್ಲಿ ನರೇಂದ್ರ ಮೋದಿ ಪವಿತ್ರ ಸ್ನಾನ

    ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ್ ಸಿಂಗ್ ಅವರೊಂದಿಗೆ ದ್ವಿಪಕ್ಷೀಯ ಉಪಕ್ರಮಗಳ ಪ್ರಗತಿಯನ್ನು ಚರ್ಚಿಸಿದರು. ಕಂಪಲಾದಲ್ಲಿ ನಡೆದ NAM ಶೃಂಗಸಭೆಯ ಸಂದರ್ಭದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಭೇಟಿಯಾಗಲು ಸಂತೋಷವಾಗಿದೆ ಎಂದು ಜೈಶಂಕರ್ ಅವರು ಪೋಸ್ಟ್ ಮಾಡಿದ್ದಾರೆ. ವಿದೇಶಿ ವಿನಿಮಯ ಮೀಸಲುಗಳ ತೀವ್ರ ಕೊರತೆಯಿಂದಾಗಿ 2022 ರಲ್ಲಿ ಶ್ರೀಲಂಕಾವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ದೇಶವು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ಭಾರತವು ತನ್ನ ‘ನೈಬರ್‌ಹುಡ್ ಫಸ್ಟ್’ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯಗಳು ಮತ್ತು ಕರೆನ್ಸಿ ಬೆಂಬಲದ ಮೂಲಕ ಬಹು ಆಯಾಮದ ಸಹಾಯವನ್ನು ನೀಡಿತು ಎಂದರು.

    ಒಟ್ಟಿನಲ್ಲಿ NAM ಶೃಂಗಸಭೆಯಲ್ಲಿ ಅತ್ಯುತ್ತಮ ವ್ಯವಸ್ಥೆಗಳಿಗಾಗಿ ಜೈಶಂಕರ್‌ ಅವರು ಧನ್ಯವಾದಗಳನ್ನು ತಿಳಿಸಿದರು. ಉಗಾಂಡಾದ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಶ್ರೀಲಂಕಾ, ಪ್ಯಾಲೆಸ್ಟೇನ್‌ ಜೊತೆಗೆ ಬಹ್ರೇನ್, ಸರ್ಬಿಯಾ, ಬೊಲಿವಿಯಾ, ಅಜೆರ್ಬೈಜಾನ್ ಮತ್ತು ವೆನೆಜುವೆಲಾದ ತಮ್ಮ ಸಹವರ್ತಿಗಳೊಂದಿಗೆ ಕೂಡ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

  • ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

    ಬಾಂಗ್ಲಾಗೆ 3 ವಿಕೆಟ್‌ ಜಯ – ಟೈಮ್ಡ್‌ ಔಟಾಗಿದ್ದಕ್ಕೆ ಶಕೀಬ್‌ ವಿರುದ್ಧ ಸೇಡು ತೀರಿಸಿಕೊಂಡ ಮ್ಯಾಥ್ಯೂಸ್‌

    ನವದೆಹಲಿ: ವಿಶ್ವಕಪ್‌ ಕ್ರಿಕೆಟ್‌ನಲ್ಲಿ (World Cup Cricket) ಶ್ರೀಲಂಕಾ (Srilanka) ವಿರುದ್ಧ ಬಾಂಗ್ಲಾದೇಶ (Bangladesh) 3 ವಿಕೆಟ್‌ ಜಯ ಸಾಧಿಸಿದೆ.

    ಗೆಲ್ಲಲು 280 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾದೇಶ ಇನ್ನೂ 53 ಎಸೆತ ಬಾಕಿ ಇರುವಂತೆಯೇ 7 ವಿಕೆಟ್‌ ಕಳೆದುಕೊಂಡು 283 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು.

    ಈ ಮೂಲಕ ಟೂರ್ನಿಯಲ್ಲಿ ಬಾಂಗ್ಲಾ ಎರಡನೇ ಗೆಲುವು ಸಾಧಿಸಿದರೆ, ಶ್ರೀಲಂಕಾ 6 ಬಾರಿ ಸೋಲು ಕಂಡಿತು. ಬಾಂಗ್ಲಾ ಪರ ನಜ್ಮುಲ್ ಹೊಸೈನ್ ಮತ್ತು ನಾಯಕ ಶಕೀಬ್‌ ಅಲ್‌ ಹಸನ್‌ (Shakib Al Hasan) ಅವರು ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್‌ ಜೊತೆಯಾಟವಾಡುವಾಗಲೇ ಬಾಂಗ್ಲಾದ ಗೆಲುವು ಖಚಿತವಾಗಿತ್ತು.

     

    View this post on Instagram

     

    A post shared by ICC (@icc)

    ನಜ್ಮುಲ್ ಹೊಸೈನ್ 90 ರನ್‌ (101 ಎಸೆತ, 12 ಬೌಂಡರಿ) ಶಕೀಬ್‌ ಉಲ್‌ ಹಸನ್‌ 82 ರನ್‌ (65 ಎಸೆತ, 12 ಬೌಂಡರಿ) ಗಳಿಸಿ ಔಟಾದರು.

    ಲಂಕಾ ಪರ ಚರಿತ ಅಸಲಂಕ 108 ರನ್‌ (105 ಎಸೆತ, 6 ಬೌಂಡರಿ, 5 ಸಿಕ್ಸರ್‌) ಧನಂಜಯ ಡಿಸಿಲ್ವಾ 34 ರನ್‌ (36 ಎಸೆತ, 4 ಬೌಂಡರಿ, 1 ಸಿಕ್ಸರ್)‌ ಹೊಡೆದು ಔಟಾದರು.

    ಶಕಿಬ್‌ಗೆ ತಿರುಗೇಟು:
    ಇಂದಿನ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್‌ (Angelo Mathews) ಟೈಮ್ಡ್‌ ಔಟಾಗಿದ್ದರು. ಟೈಮ್ಡ್‌ ಔಟ್‌ ವಿಚಾರಕ್ಕೆ ಶಕೀಬ್‌ ಜೊತೆ ಮಾಥ್ಯೂಸ್‌ ಮೈದಾನದಲ್ಲೇ ವಾದ ಮಾಡಿದ್ದರು.  ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್‌ – ಏನಿದು ಟೈಮ್ಡ್‌ ಔಟ್‌ ನಿಯಮ?

    82 ರನ್‌ಗಳಿಸಿದ್ದಾಗ ಶಕೀಬ್‌ ಮಾಥ್ಯೂಸ್‌ ಬೌಲಿಂಗ್‌ನಲ್ಲಿ ಅಸಲಂಕಾಗೆ ಕ್ಯಾಚ್‌ ನೀಡಿ ಔಟಾಗಿದ್ದರು. ಈ ವೇಳೆ ಮಾಥ್ಯೂಸ್‌ ಎಡಕೈಯಲ್ಲಿ ವಾಚ್‌ ಕಟ್ಟುವ ಜಾಗವನ್ನು ತೋರಿಸಿ ಟ್ರೋಲ್‌ ಮಾಡುವ ಮೂಲಕ ಸೇಡು ತೀರಿಸಿಕೊಂಡರು. 7.1 ಓವರ್‌ ಎಸೆದ ಮ್ಯಾಥ್ಯೂಸ್‌ 1 ಓವರ್‌ ಮೇಡನ್‌ ಮಾಡಿ 35 ರನ್‌ ನೀಡಿ 2 ವಿಕೆಟ್‌ ಪಡೆದರು.

  • Asian Games Women’s Cricket: ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

    Asian Games Women’s Cricket: ಬಾಂಗ್ಲಾ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

    ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನಲ್ಲಿ (Asian Games)  ಭಾರತೀಯ ಮಹಿಳಾ ಕ್ರಿಕೆಟ್‌ ತಂಡವು ಬಾಂಗ್ಲಾದೇಶವನ್ನ (Bangladesh) ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸೋಮವಾರ ಶ್ರೀಲಂಕಾ ವಿರುದ್ಧ ಚಿನ್ನದ ಪದಕಕ್ಕಾಗಿ ಕಾದಾಟ ನಡೆಸಲಿದೆ.

    ಝೆಜಿಯಾಂಗ್ ಟೆಕ್‌ ವಿವಿ ಕ್ರೀಡಾಂಗಣದಲ್ಲಿಂದು ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಫೈನಲ್‌ ತಲುಪಿದೆ. ಇದನ್ನೂ ಓದಿ: ರೋಯಿಂಗ್‌ನಲ್ಲಿ ಭಾರತಕ್ಕೆ ಮೂರು ಪದಕ – ಕ್ರಿಕೆಟ್‌ನಲ್ಲಿ ಫೈನಲ್‌ ಪ್ರವೇಶಿಸಿದ ಮಹಿಳೆಯರು

    ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 17.5 ಓವರ್‌ಗಳಲ್ಲಿ ಕೇವಲ 51 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತೀಯ ಮಹಿಳಾ ತಂಡ 8 ಓವರ್‌ಗಳಲ್ಲೇ 52 ರನ್‌ ಗಳಿಸಿ ಗೆಲುವು ಸಾಧಿಸಿತು.

    ಮೊದಲು ಕ್ರೀಸ್‌ಗಿಳಿದ ಬಾಂಗ್ಲಾದೇಶ ತಂಡ ಟೀಂ ಇಂಡಿಯಾದ ಬಿಗಿ ಬೌಲಿಂಗ್‌ ಹಿಡಿತಕ್ಕೆ ತತ್ತರಿಸಿತು. ಟೀಂ ಇಂಡಿಯಾ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಪೂಜಾ ವಸ್ತ್ರಾಕರ್‌ 4 ಓವರ್‌ಗಳಲ್ಲಿ 17 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಟಿಟಾಸ್‌ ಸಾಧು, ಅಮನ್‌ಜ್ಯೋತ್‌ ಕೌರ್‌, ರಾಜೇಶ್ವರಿ ಗಾಯಕ್ವಾಡ್‌ ಹಾಗೂ ದೇವಿಕಾ ವೈದ್ಯ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ

    ಟೀಂ ಇಂಡಿಯಾ ಪರ ಬ್ಯಾಂಟಿಂಗ್‌ನಲ್ಲಿ ಜೆಮಿಮಾ ರೊಡ್ರಿಗ್ಸ್‌ 15 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 20 ರನ್‌ ಗಳಿಸಿದ್ರೆ, ಶಫಾಲಿ ವರ್ಮಾ 21 ಎಸೆತಗಳಲ್ಲಿ 2 ಬೌಂಡರಿಯೊಂದಿಗೆ 17 ರನ್‌ಗಳಿಸಿದರು. ನಾಯಕಿ ಸ್ಮೃತಿ ಮಂಧಾನ 7 ರನ್‌ಗಳಿಗೆ ವಿಕೆಟ್‌ ಕೈಚೆಲ್ಲಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]