Tag: Sriimurali

  • ನನ್ನ ಮೊದಲ ನಾಯಕ, ನನ್ನ ಮೊದಲ ಗ್ಯಾಂಗ್‍ಸ್ಟರ್ Happy Happy Birthday ಶ್ರೀಮುರುಳಿ: ಪ್ರಶಾಂತ್ ನೀಲ್

    ನನ್ನ ಮೊದಲ ನಾಯಕ, ನನ್ನ ಮೊದಲ ಗ್ಯಾಂಗ್‍ಸ್ಟರ್ Happy Happy Birthday ಶ್ರೀಮುರುಳಿ: ಪ್ರಶಾಂತ್ ನೀಲ್

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಶ್ರೀಮುರುಳಿ ಅವರು 40 ನೇ ವರ್ಷದ ಜನ್ಮ ದಿನಾಚರಣೆಯ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಸಿನಿಮಾ ತಾರೆಯಲು ಶುಭಕೋರಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರು ವಿಭಿನ್ನವಾಗಿ ಶುಭಾಶಯ ತಿಳಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ನನ್ನ ಮೊದಲ ನಾಯಕ, ನನ್ನ ಮೊದಲ ಗ್ಯಾಂಗ್‍ಸ್ಟರ್, ನನ್ನ ಮೊದಲ ಪ್ರೀತಿ. ಜನ್ಮದಿನದ ಶುಭಾಶಯಗಳು ಶ್ರೀಮುರುಳಿ ಎಂದು ಬರೆದುಕೊಂಡು ಶ್ರೀಮುರುಳಿ ಅವರ ಬ್ಲಾಕ್‌ ಆ್ಯಂಡ್ ವೈಟ್ ಇರುವ ಫೋಟೋನ್ನು ಟ್ವೀಟ್ ಮಾಡುವ ಮೂಲವಾಗಿ ನಿರ್ದೇಶಕ ಪ್ರಶಾಂತ್ ನೀಲ್ ವಿಭಿನ್ನವಾಗಿ ಶುಭ ಕೋರಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಶ್ರೀಮುರಳಿ ಬರ್ತ್‍ಡೇ ದಿನ ಅವರ ಅಭಿಮಾನಿಗಳು ಮನೆಯ ಮುಂದೆ ಜಮಾಯಿಸುತ್ತಿದ್ದರು. ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದರು. ಅವರು ಕೂಡ ಅಭಿಮಾನಿಗಳ ಜೊತೆಗೂಡಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಪುನೀತ್ ರಾಜ್‌ಕುಮಾರ್‌ ಸಾವಿನಿಂದ ಇಡೀ ಕರ್ನಾಟಕಕ್ಕೆ ಸೂತಕದ ಛಾಯೆ ಆವರಿಸಿದೆ. ಶ್ರೀಮುರಳಿ ಬರ್ತ್‍ಡೇ ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ಈ ಮೊದಲೇ ಅಭಿಮಾನಿಗಳಿಗೆ ಸಂದೇಶವನ್ನು ರವಾನಿಸಿದ್ದರು. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

    ನನ್ನ ಪ್ರೀತಿಯ ಅಭಿಮಾನಿಗಳೇ. ಈ ಬಾರಿ ನಿಮ್ಮೊಂದಿಗೆ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣವೇನೆಂದು ನಿಮಗೆ ಗೊತ್ತಿರುವುದೆಂದು ಭಾವಿಸುವೆ. ನಾನು ಬೆಂಗಳೂರಿನಲ್ಲೂ ಇರುವುದಿಲ್ಲ. ಸದಾ ನಿಮ್ಮ ಪ್ರೀತಿ ಹಾಗು ಆಶೀರ್ವಾದವನ್ನು ಬಯಸುವ ನಿಮ್ಮ, ಶ್ರೀಮುರಳಿ (ಅಭಿಮಾನಿಗಳ ಅಭಿಮಾನಿ) ಎಂದು ಶ್ರೀಮುರಳಿ ಟ್ವಿಟ್ಟರ್‌ನಲ್ಲಿ ತಿಳಿಸಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.

  • ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ

    ವೈದ್ಯಕೀಯ ಸಿಬ್ಬಂದಿಗೆ ಶ್ರೀಮುರಳಿ ಊಟದ ವ್ಯವಸ್ಥೆ

    ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಕೊರೊನಾ ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಸ್ಯಾಂಡಲ್‍ವುಡ್ ನಟ ರೊರಿಂಗ್ ಸ್ಟಾರ್ ಶ್ರೀ ಮುರಳಿ ಮಾಡುತ್ತಿದ್ದಾರೆ.

    ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದಂತೆ ಆಸ್ಪತ್ರೆಗಳು ರೋಗಿಗಳ ಆರೈಕೆಯಲ್ಲಿ ಬ್ಯುಸಿಯಾಗಿವೆ. ಡಾಕ್ಟರ್ಸ್, ನರ್ಸ್ ಹಾಗೇ ಆಸ್ಪತ್ರೆ ಸಿಬ್ಬಂದಿ ದಿನವಿಡೀ ಆಸ್ಪತ್ರೆಯಲ್ಲೇ ಇದ್ದು ಕಾರ್ಯ ಪ್ರವೃತ್ತರಾಗಿದ್ದಾರೆ. ಇದೀಗ ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ 5 ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

    ಕೆ.ಸಿ ಜನರಲ್ ಆಸ್ಪತ್ರೆ, ESI ರಾಜಾಜಿನಗರ, ಬೌರಿಂಗ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿವಿ ರಾಮನ್ ಜನರಲ್ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಸಿಬ್ಬಂದಿಗೆ ಮುರುಳಿ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟ ಜೊತೆಗೆ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬಾಲಿವುಡ್, ಸ್ಯಾಂಡಲ್‍ವುಡ್ ಹಲವು ನಟ, ನಟಿಯರು ಕೈಲಾದಷ್ಟು ಸಹಾಯ ಮತ್ತು ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

  • ಮತ್ತೆ ಕೌಟುಂಬಿಕ ಚಿತ್ರಗಳ ‘ಭರಾಟೆ’ಗಿಳಿದರೇ ಚಂದ್ರ ಚಕೋರಿಯ ಹುಡುಗ?

    ಮತ್ತೆ ಕೌಟುಂಬಿಕ ಚಿತ್ರಗಳ ‘ಭರಾಟೆ’ಗಿಳಿದರೇ ಚಂದ್ರ ಚಕೋರಿಯ ಹುಡುಗ?

    ಬೆಂಗಳೂರು: ವರ್ಷಾಂತರಗಳ ಹಿಂದೆ ಚಂದ್ರಚಕೋರಿ ಎಂಬ ಕೌಟುಂಬಿಕ ಮೌಲ್ಯ ಸಾರುವ ಚಿತ್ರದ ಮೂಲಕವೇ ಶ್ರೀಮುರಳಿ ನಾಯಕನಾಗಿ ಆಗಮಿಸಿದ್ದರು. ಆ ನಂತರದಲ್ಲಿ ಒಂದಷ್ಟು ಏಳು ಬೀಳುಗಳನ್ನು ಕಾಣುತ್ತಲೇ ಬಂದಿದ್ದ ಅವರನ್ನು ಪಕ್ಕಾ ಮಾಸ್ ಇಮೇಜಿನೊಂದಿಗೆ ಗೆಲ್ಲುವಂತೆ ಮಾಡಿದ್ದು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಉಗ್ರಂ. ಉಗ್ರಂ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತಲೇ ನರ್ತನ್ ನಿರ್ದೇಶನದ ಮಫ್ತಿ ತೆರೆ ಕಂಡಿತ್ತು. ಅದೂ ಸೂಪರ್ ಹಿಟ್ ಆಗುತ್ತಲೇ ಇದೀಗ ಶ್ರೀಮುರಳಿಯ ಭರಾಟೆ ಆರಂಭವಾಗಿದೆ.

    ಗಮನೀಯ ಅಂಶವೆಂದರೆ ಶ್ರೀಮುರಳಿ ಆರಂಭಿಕವಾಗಿ ಗೆದ್ದಿದ್ದೇ ಕೌಟುಂಬಿಕ ಚಿತ್ರದ ಮೂಲಕ. ಇದರೊಂದಿಗೆ ಆ ವರ್ಗದ ಪ್ರೇಕ್ಷಕರ ಮನ ಗೆದ್ದಿದ್ದ ಶ್ರೀಮುರಳಿ ಭರಾಟೆ ಮೂಲಕ ಮತ್ತೆ ಹಳೇ ಟ್ರ್ಯಾಕಿಗೆ ಮರಳಲಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿರೋದು ಚಿತ್ರತಂಡ ಬಿಟ್ಟುಕೊಟ್ಟಿರೋ ಕೆಲ ಅಂಶಗಳು. ನಿರ್ದೇಶಕ ಚೇತನ್ ಕುಮಾರ್ ಇದರಲ್ಲಿ ಕೌಟುಂಬಿಕ ಕಥನವನ್ನೇ ಪ್ರಧಾನವಾಗಿ ಬಳಸಿಕೊಂಡಿದ್ದಾರಂತೆ. ಈ ಕಾರಣದಿಂದಲೇ ಹಲವಾರು ವರ್ಷಗಳ ನಂತರ ಶ್ರೀಮುರಳಿ ಮತ್ತೆ ಕೌಟುಂಬಿಕ ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಭರಾಟೆ ಭಾರೀ ಆವೇಗದ ಪಕ್ಕಾ ಮಾಸ್ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ನಿರ್ದೇಶಕ ಚೇತನ್ ಕುಮಾರ್ ಇಂಥಾ ಮಾಸ್ ಕಥೆಯನ್ನು ಅದು ಹೇಗೆ ಕೌಟುಂಬಿಕ ಕಥನಕ್ಕೆ ಕನೆಕ್ಟ್ ಮಾಡಿದ್ದಾರೆಂಬ ಕುತೂಹಲ ಇದ್ದೇ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಚಿತ್ರತಂಡ ಹೇಳಿಕೊಂಡಿಲ್ಲವಾದರೂ ಭರಾಟೆ ಎಂಬುದು ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರವೂ ಹೌದೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ನಿರ್ಮಾಪಕ ಸುಪ್ರೀತ್ ಈ ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಶ್ರೀಮುರಳಿ ಮತ್ತೆ ಕೌಟುಂಬಿಕ ಪ್ರೇಕ್ಷಕರನ್ನೂ ತಲುಪಿಕೊಳ್ಳುವ ಖುಷಿಯಲ್ಲಿದ್ದಾರೆ.

  • ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋದು ಹದಿನೇಳು ಖಳರು!

    ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋದು ಹದಿನೇಳು ಖಳರು!

    ಬೆಂಗಳೂರು: ಈ ಹಿಂದೆ ಬಹದ್ದೂರ್ ಮತ್ತು ಭರ್ಜರಿ ಎಂಬೆರಡು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿರುವವರು ಚೇತನ್ ಕುಮಾರ್. ಈ ಎರಡೇ ಚಿತ್ರಗಳ ಮೂಲಕ ಯುವ ಮನಸುಗಳ ಡಾರ್ಲಿಂಗ್ ಅನ್ನಿಸಿಕೊಂಡಿರೋ ಚೇತನ್ ಪಾಲಿಗೆ ಪ್ರೇಕ್ಷಕರ ಆಕಾಂಕ್ಷೆಗಳೇನೆಂಬುದು ಸುಸ್ಪಷ್ಟ. ಈ ಬಾರಿ ಅವರದನ್ನು ಮತ್ತಷ್ಟು ಸ್ಪಷ್ಟವಾಗಿಸಿಕೊಂಡು ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಈಗಾಗಲೇ ಕೆಂಡದಂಥಾ ನಿರೀಕ್ಷೆ ಹುಟ್ಟು ಹಾಕಿರೋ ಭರಾಟೆಯನ್ನು ಫ್ಯಾಮಿಲಿ ಪ್ಯಾಕೇಜ್ ಆಗಿಯೂ ರೂಪಿಸುವ ನಿಟ್ಟಿನಲ್ಲಿ ಚೇತನ್ ಶ್ರಮ ವಹಿಸಿದ್ದಾರೆ. ಈ ಚಿತ್ರ ಆ ಕಾರಣದಿಂದಲೇ ಕುಟುಂಬ ಸಮೇತವಾಗಿ ನೋಡಿ ಎಂಜಾಯ್ ಮಾಡುವಂತೆ ಮೂಡಿ ಬಂದಿದೆಯಂತೆ.

    ಇದೊಂದು ಪಕ್ಕಾ ಮಾಸ್ ಕಥನ ಹೊಂದಿರೋ ಚಿತ್ರ. ಶ್ರೀಮುರಳಿ ಈ ಹಿಂದೆ ಎಂದೂ ನಟಿಸದ ಪಾತ್ರಕ್ಕಿಲ್ಲಿ ಜೀವ ತುಂಬಿದ್ದಾರೆ. ಆ ಛಾಯೆಯೇ ಕುಟುಂಬ ಸಮೇತರಾಗಿ ಪ್ರೇಕ್ಷಕರನ್ನೆಲ್ಲ ಚಿತ್ರಮಂದಿರದತ್ತ ಕರೆತರುವಷ್ಟು ಶಕ್ತವಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಆದರೆ, ಇದರಲ್ಲಿರೋ ಮಾಸ್ ಸನ್ನಿವೇಶಗಳು ಮಾತ್ರ ಬೇರೆಯದ್ದೇ ದಿಕ್ಕಿನಲ್ಲಿವೆ. ಭರಾಟೆಯಲ್ಲಿ ಶ್ರೀಮುರಳಿ ವಿರುದ್ಧ ತೊಡೆತಟ್ಟಿರೋ ಖಳರ ಸಂಖ್ಯೆಯೇ ಇದೊಂದು ಭರ್ಜರಿ ಫೋರ್ಸ್ ಹೊಂದಿರುವ ಮಾಸ್ ಚಿತ್ರವೆಂಬುದಕ್ಕೆ ಪುರಾವೆಯಂತಿದೆ.

    ಭರಾಟೆಯಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಬ್ರದರ್ಸ್ ಖಳರಾಗಿ ಅಬ್ಬರಿಸಿದರೆ, ಅವರೊಂದಿಗೆ ಮತ್ತೆ ಹದಿನಾಲಕ್ಕು ಮಂದಿ ಖಳ ನಟರು ಚಿತ್ರ ವಿಚಿತ್ರವಾದ ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಹದಿನೇಳೂ ಪಾತ್ರಗಳೂ ಕೂಡಾ ಒಂದಕ್ಕೊಂದು ಭಿನ್ನವಾಗಿದೆ ಎಂಬುದು ಈಗಾಗಲೇ ಟ್ರೇಲರ್‍ಗಳ ಮೂಲಕವೇ ಸಾಬೀತಾಗಿದೆ. ಮಾಮೂಲಿಯಂತಾದರೆ ಒಂದು ಚಿತ್ರದಲ್ಲಿ ಒಂದಿಬ್ಬರು ಖಳರಿರುತ್ತಾರೆ. ಆದರೆ ಈ ಪಾಟಿ ಖಳ ನಟರಿದ್ದಾರೆಂಬುದೇ ಭರಾಟೆಯತ್ತ ಮಾಸ್ ಅಭಿರುಚಿಯ ಪ್ರೇಕ್ಷಕರೆಲ್ಲ ವಾಲಿಕೊಳ್ಳುವಂತಾಗಿದೆ. ಅಂತೂ ಭರಾಟೆ ಈ ವಾರವೇ ಬಿಡುಗಡೆಯಾಗಲಿದೆ. ಒಂದೆರಡು ದಿನ ಕಳೆಯುತ್ತಲೇ ಭರಾಟೆ ನಿಮ್ಮೆದುರು ಆರ್ಭಟಿಸಲಿದೆ.

  • ಶ್ರೀಮುರಳಿ ‘ಭರಾಟೆ’ಗೆ ಶುರುವಾಯ್ತು ಕೌಂಟ್‍ಡೌನ್!

    ಶ್ರೀಮುರಳಿ ‘ಭರಾಟೆ’ಗೆ ಶುರುವಾಯ್ತು ಕೌಂಟ್‍ಡೌನ್!

    ಬೆಂಗಳೂರು: ಸಿನಿಮಾವೊಂದರ ಬಗ್ಗೆ ಬಿಡುಗಡೆಪೂರ್ವದಲ್ಲಿತಯೇ ಸಹಜವಾಗಿ ಹುಟ್ಟಿಕೊಳ್ಳೋ ನಿರೀಕ್ಷೆಗಳ ತೀವ್ರತೆಯಿದೆಯಲ್ಲಾ? ಅದಕ್ಕೆ ಮಾಸ್ಟರ್ ಪೀಸ್‍ನಂಥಾ ಚಿತ್ರಗಳು ಅನೇಕವಿವೆ. ಅದರಲ್ಲಿ ಇತ್ತೀಚಿನ ತಾಜಾ ಉದಾಹರಣೆಯಾಗಿ ನಿಲ್ಲುವಂಥಾ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ. ಅಷ್ಟಕ್ಕೂ ಈ ಟೈಟಲ್ಲು ಅನೌನ್ಸ್ ಆಗಿದ್ದ ಘಳಿಗೆಯಿಂದಲೇ ಸೆನ್ಸೇಷನಲ್ ಭರಾಟೆ ಶುರುವಾಗಿ ಹೋಗಿತ್ತು. ರಾಜಸ್ಥಾನದ ಸುಂದರ ಲೊಕೇಷನ್ನುಗಳಲ್ಲಿ, ವಿಭಿನ್ನ ಗೆಟಪ್ಪಿನಲ್ಲಿ ಮಿಂಚಿದ್ದ ರೋರಿಂಗ್ ಸ್ಟಾರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಬಿಟ್ಟಿದ್ದರು. ಅದೇ ಬಿರುಸಿನೊಂದಿಗೆ ಸಾಗಿ ಬಂದಿರೋ ಭರಾಟೆ ಪ್ರೇಕ್ಷಕರ ಮುಂದೆ ಬರಲು ಕೌಂಟ್ ಡೌನ್ ಶುರುವಾಗಿದೆ.

    ಯುವ ಆವೇಗದ ಕಥಾ ಹಂದರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಚೇತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭರಾಟೆ ಕಥೆಯನ್ನಂತೂ ರೋರಿಂಗ್ ಸ್ಟಾರ್ ಶ್ರೀಮುರಳಿಯ ಇಮೇಜಿಗೆ ತಕ್ಕುದಾಗಿಯೇ ಅವರು ಹೊಸೆದಿದ್ದಾರೆ. ಅದಕ್ಕೆ ತಕ್ಕುದಾದಂಥಾ ದೃಶ್ಯ ರೂಪವನ್ನೂ ನೀಡಿದ್ದಾರೆ. ಅದರ ಖದರ್ ಎಂಥಾದ್ದೆಂಬುದು ಈಗಾಗಲೇ ಟೀಸರ್ ಮುಂತಾದವುಗಳೊಂದಿಗೆ ಪ್ರೇಕ್ಷಕರನ್ನು ಮುಟ್ಟಿವೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಡೈಲಾಗ್ ಟ್ರೇಲರ್ ಅಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯೋದರೊಂದಿಗೆ ಭರಾಟೆ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ.

    ಅಷ್ಟಕ್ಕೂ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡು ಸಾಗಿ ಬಂದಿರೋದೇ ಇಂಥಾ ಕ್ರಿಯೇಟಿವಿಟಿಯಿಂದ ಕೂಡಿದ ಕೆಲಸ ಕಾರ್ಯಗಳಿಂದ. ರೋರಿಂಗ್ ಸ್ಟಾರ್ ಶ್ರೀಮುರಳಿ ಉಗ್ರಂ ಚಿತ್ರದ ನಂತರದಲ್ಲಿ ಪಕ್ಕಾ ಮಾಸ್ ಇಮೇಜಿಗೆ ಫಿಕ್ಸಾಗಿದ್ದಾರೆ. ಪ್ರೇಕ್ಷಕರೂ ಕೂಡಾ ಅವರನ್ನು ಅಂಥಾದ್ದೇ ಗೆಟಪ್ಪಿನಲ್ಲಿ ಕಾಣಲು ಇಷ್ಟ ಪಡುತ್ತಾರೆ. ಮಫ್ತಿಯಲ್ಲಿಯೂ ಶ್ರೀಮುರಳಿ ಅಂಥಾದ್ದೇ ಪಾತ್ರದಲ್ಲಿ ಮಿಂಚಿದ್ದರು. ಆದರೆ ಭರಾಟೆಯಲ್ಲಿ ಯಾರೂ ನಿರೀಕ್ಷೆ ಮಾಡಿರದಂಥಾ ರಗಡ್ ಪಾತ್ರದಲ್ಲಿ ಮುರಳಿ ಕಾಣಿಸಿಕೊಂಡಿದ್ದಾರೆ. ಅದರ ದರ್ಶನವಾಗಲು ಇನ್ನೊಂದು ವಾರವಷ್ಟೇ ಬಾಕಿ ಉಳಿದುಕೊಂಡಿದೆ.