Tag: srii murali

  • ‘ಮದಗಜ’ ರೋರಿಂಗ್ ಫಸ್ಟ್ ಲುಕ್ ಟೀಸರ್ ಔಟ್

    ‘ಮದಗಜ’ ರೋರಿಂಗ್ ಫಸ್ಟ್ ಲುಕ್ ಟೀಸರ್ ಔಟ್

    – ಮುರಳಿ ಮಾಸ್ ಡೈಲಾಗ್ ಅಬ್ಬರ ಜೋರು

    ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಮದಗಜ’ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಸ್ಯಾಂಡಲ್‍ವುಡ್ ಮೋಸ್ಟ್ ಟ್ಯಾಲೆಂಡೆಡ್ ಡೈರೆಕ್ಟರ್ ಪ್ರಶಾಂತ್ ನೀಲ್ ‘ಮದಗಜ’ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ನಟ ಶ್ರೀಮುರುಳಿ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾದ ಫಸ್ಟ್ ಲುಕ್ ಟೀಸರ್ ಅಬ್ಬರ ಜೋರಾಗಿದ್ದು, ಅಭಿಮಾನಿ ಬಳಗಕ್ಕೆ ಸಖತ್ ಕಿಕ್ ಕೊಟ್ಟಿದೆ. ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಟೀಸರ್ ಧೂಳೆಬ್ಬಿಸುತ್ತಿದ್ದು, ಎರಡೇ ಗಂಟೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

    ಟೀಸರ್‍ನಲ್ಲಿರುವ ಮಾಸ್ ಪಂಚಿಂಗ್ ಡೈಲಾಗ್ ಸಖತ್ ಕಿಕ್ ಕೊಡುತ್ತಿದ್ದು ರೋರಿಂಗ್ ಸ್ಟಾರ್ ಖಡಕ್ ಡೈಲಾಗ್ ಡೆಲಿವರಿಗೆ ಅಭಿಮಾನಿ ಬಳಗ ಫಿದಾ ಆಗಿದ್ದಾರೆ. ಶ್ರೀ ಮುರುಳಿ ಮಾಸ್ ಅವತಾರ ಕಮಾಲ್ ಮಾಡಿದ್ದು, ಡೈಲಾಗ್ ನಷ್ಟೇ ಕಿಕ್ ಕೊಡುತ್ತಿದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಪವರ್ ಫುಲ್ ಹಿನ್ನೆಲ್ಲೆ ಸಂಗೀತ.

    ಪಕ್ಕಾ ಮಾಸ್ ಅಂಡ್ ಆಕ್ಷನ್ ಓರಿಯೆಂಟೆಡ್ ಮದಗಜ’ ಸಿನಿಮಾಕ್ಕೆ ಎಸ್. ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಎರಡು ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರುವ ‘ಮದಗಜ’ ಚಿತ್ರತಂಡ ವಾರಣಾಸಿ ಹಾಗೂ ಮೈಸೂರಿನಲ್ಲಿ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ರೋರಿಂಗ್ ಸ್ಟಾರ್‍ಗೆ ಜೋಡಿಯಾಗಿ ಸ್ಯಾಂಡಲ್‍ವುಡ್ ಚೆಲುವೆ ಆಶಿಕಾ ರಂಗನಾಥ್ ನಟಿಸಿದ್ದು, ನವೀನ್ ಕುಮಾರ್ ಛಾಯಾಗ್ರಹಣ ‘ಮದಗಜ’ ಚಿತ್ರಕ್ಕಿದೆ.