Tag: Sridhar Sambram

  • ಏಳು ಸಂಗೀತ ನಿರ್ದೇಶಕರ ಕಂಠದಲ್ಲಿ ಬಾಬಾ ಹಾಡುಗಳು

    ಏಳು ಸಂಗೀತ ನಿರ್ದೇಶಕರ ಕಂಠದಲ್ಲಿ ಬಾಬಾ ಹಾಡುಗಳು

    ಸಾಹಿತಿ, ನಿರ್ದೇಶಕ ಕೆ.ರಾಮ್‌ನಾರಾಯಣ್, ಶ್ರೀ ಶಿರಡಿ ಸಾಯಿಬಾಬಾ ಅಪ್ಪಟ ಭಕ್ತ. ಇವರ ನಿರ್ದೇಶನದ ’ರಾಜಾಮಾರ್ತಾಂಡ’, ’ಅಬ್ಬರ’ ಚಿತ್ರಗಳಲ್ಲಿ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು ’ಸಾಯಿ ನನ್ನಯ್ಯ’ ಶೀರ್ಷಿಕೆಯಲ್ಲಿ ಏಳು ಹಾಡುಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್

    ಸದರಿ ಗೀತೆಗಳನ್ನು ಮೆಚ್ಚಿಕೊಂಡ ಖ್ಯಾತ ಸಂಗೀತ ನಿರ್ದೇಶಕರು ತಾವೇ ಹಾಡಿಗೆ ಕಂಠದಾನ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ವಿ.ಮನೋಹರ್, ರವಿಬಸ್ರೂರು, ವೀರಸಮರ್ಥ್, ಧರ್ಮವಿಶ್, ಅನೂಪ್‌ಸೀಳನ್, ಶ್ರೀಧರ್‌ಸಂಭ್ರಮ್ ಹಾಗೂ ಆರ್.ಎಸ್.ಗಣೇಶ್‌ನಾರಾಯಣ್ ಭಕ್ತಿ ಪರವಶದಿಂದ ಹಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

    ಸಂಗೀತ ಎಸ್.ನಾಗು, ವಾದ್ಯಗಳ ಸಂಯೋಜಕರು ಕುಶಲ.ಎಸ್ ಅವರದಾಗಿದೆ. ಗುರುವಾರದಂದು ವಿ.ಮನೋಹರ್ ಹಾಡಿರುವ ’ಸಾಯಿ ನನ್ನಯ್ಯ’ ಶೀರ್ಷಿಕೆ ಮೊದಲ ಗೀತೆಯನ್ನು ಬಾಬಾ ಸನ್ನಿಧಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಪ್ರತಿ ಗುರುವಾರದಂದು ಸೆಲಿಬ್ರಿಟಿಗಳಿಂದ ಲೋಕಾರ್ಪಣೆ ಮಾಡಲು ತಂಡವು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ’ಆರೆಂಜ್ ಆಡಿಯೋ’ ಮೂಲಕ ಬಿಡುಗಡೆಗೊಂಡ ಹಾಡು ವೈರಲ್ ಆಗಿದ್ದು, ಎರಡನೇ ಗೀತೆಗೆ ಭಕ್ತಾದಿಗಳು ಕಾಯುತ್ತಿದ್ದಾರೆ. ಸದರಿ ಹಾಡುಗಳನ್ನು ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದೆ.

    Live Tv