ಚಿತ್ರರಂಗದಲ್ಲಿ ಈಗಾಗಲೇ ಸಂಜಯ್ ದತ್, ಎಂ.ಎಸ್ ಧೋನಿ, ಜಯಲಲಿತಾ ಸೇರಿದಂತೆ ಅನೇಕರ ಸಿನಿಮಾ ಬೆಳ್ಳಿಪರದೆಯಲ್ಲಿ ರಾರಾಜಿಸಿವೆ. ಇದೀಗ ಲೆಜೆಂಡರಿ ನಟಿ ಶ್ರೀದೇವಿ (Sridevi) ಕುರಿತು ಬಯೋಪಿಕ್ ಮಾಡಲು ನಿರ್ದೇಶಕರೊಬ್ಬರು ಸಿದ್ಧತೆ ನಡೆಸುತ್ತಿದ್ದಾರೆ. ಶ್ರೀದೇವಿ ಪಾತ್ರಕ್ಕೆ ಜೀವ ತುಂಬಲು ಅನೇಕ ನಟಿಯರು ತುದಿಗಾಲಿನಲ್ಲಿ ನಿಂತಿದ್ದಾರೆ. ಇದನ್ನೂ ಓದಿ:‘ಸಿಕಂದರ್’ ಸೋಲಿನ ಬೆನ್ನಲ್ಲೇ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ

ಶ್ರೀದೇವಿ ಬಯೋಪಿಕ್ ಸಿನಿಮಾ ರೂಪದಲ್ಲಿ ತರಲು ಪ್ಲ್ಯಾನಿಂಗ್ ನಡೆಯುತ್ತಿದೆ. ಚಿತ್ರತಂಡ ನಟಿಯ ಹುಡುಕಾಟದಲ್ಲಿದೆ. ಇದರ ನಡುವೆ ಪೂಜಾ ಹೆಗ್ಡೆ (Pooja Hegde) ಅವರು ಸಂದರ್ಶನದಲ್ಲಿ ಶ್ರೀದೇವಿ ಬಯೋಪಿಕ್‌ನಲ್ಲಿ Sridevi Biopic) ನಟಿಸಲು ಆಸಕ್ತಿಯಿದೆ. ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ವರುಣ್ ಧವನ್ ಜೊತೆ ಗಂಗಾರತಿ ಮಾಡಿದ ಪೂಜಾ ಹೆಗ್ಡೆ

ಈಗಾಗಲೇ ನಾನು ಶ್ರೀದೇವಿ ನಟನೆಯ ಹಾಡೊಂದಕ್ಕೆ ಡ್ಯಾನ್ಸ್ ಮಾಡಿದ್ದೇನೆ. ನಾನು ಅವರ ದೊಡ್ಡ ಅಭಿಮಾನಿ. ಅವರ ಜೀವನ ಚರಿತ್ರೆಯಲ್ಲಿ ನಟಿಸಲು ಚಾನ್ಸ್ ಸಿಕ್ಕರೆ ಅಭಿನಯಿಸಲು ಸಿದ್ಧ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. ನಾನು ಇದುವರೆಗೂ ಬಯೋಪಿಕ್‌ನಲ್ಲಿ ನಟಿಸಿಲ್ಲ. ನಿಜ ಜೀವನದಲ್ಲಿ ಹೀರೋ ಆಗಿರುವ ವ್ಯಕ್ತಿಗಳ ಪಾತ್ರವನ್ನು ತೆರೆಯ ಮೇಲೆ ಪ್ರತಿನಿಧಿಸುವುದಕ್ಕೆ ಖುಷಿ ಆಗುತ್ತದೆ. ಇದರೊಂದಿಗೆ ಕ್ರೀಡೆಗೆ ಸಂಬಂಧಿಸಿದ ಸಿನಿಮಾಗಳಲ್ಲಿಯೂ ನಟಿಸಲು ಇಷ್ಟ ಎಂದಿದ್ದಾರೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಶ್ರೀದೇವಿ ಬಯೋಪಿಕ್‌ನಲ್ಲಿ ಪೂಜಾನೇ ಆಯ್ಕೆ ಆಗ್ತಾರಾ ಅಥವಾ ಬೇರೆ ನಟಿಗೆ ನಿರ್ದೇಶಕರು ಮಣೆ ಹಾಕ್ತಾರಾ ಎಂದು ಕಾಯಬೇಕಿದೆ.

ಅಂದಹಾಗೆ, ಬಾಲಿವುಡ್‌ನ ‘ದೇವ’ ಚಿತ್ರದ ಬಳಿಕ ತಮಿಳು ನಟ ಸೂರ್ಯ ಜೊತೆ ‘ರೆಟ್ರೋ’ ಸಿನಿಮಾದಲ್ಲಿ ಪೂಜಾ ನಟಿಸಿದ್ದಾರೆ. ಮೇ 1ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇನ್ನೂ ವರುಣ್ ಧವನ್ ನಟನೆಯ ಹೊಸ ಸಿನಿಮಾಗೆ ಅವರು ಆಯ್ಕೆ ಆಗಿದ್ದಾರೆ.















ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸುವ ಇಚ್ಛೆಯ ಬಗ್ಗೆ ಕಥೆ ಇಷ್ಟವಾದರೇ ಖಂಡಿತವಾಗಿಯೂ ದಕ್ಷಿಣದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್ ಲೆಜೆಂಡರಿ ಆಕ್ಟರ್ ಅವರ ಜತೆ ಕೆಲಸ ಮಾಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಈ ಮೂಲಕ ಕಥೆ ಚೆನ್ನಾಗಿದ್ದರೆ ದಕ್ಷಿಣದ ಸಿನಿಮಾಗಳಲ್ಲಿ ಮಿಂಚಲು ರೆಡಿ ಎಂದ ಸೂಚನೆ ನೀಡಿದ್ದಾರೆ.





