Tag: Sri Subudhendra Teertharu

  • ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ: ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗಿ

    ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ಮಹಾರಥೋತ್ಸವ: ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗಿ

    – ಕೊನೆಕ್ಷಣದಲ್ಲಿ ರದ್ದಾದ ಹೆಲಿಕ್ಯಾಪ್ಟರ್ ಪುಷ್ಪವೃಷ್ಠಿ

    ರಾಯಚೂರು: ಮಂತ್ರಾಲಯದಲ್ಲಿ (Mantralaya) ಗುರು ರಾಘವೇಂದ್ರ ಸ್ವಾಮಿಗಳ (Guru Raghavendra) 353 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಹಾರಥೋತ್ಸವ ಅದ್ದೂರಿಯಾಗಿ ನಡೆಯಿತು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

    ಉತ್ತರಾರಾಧನೆಯ ಮಹಾರಥೋತ್ಸವದ ವೈಭವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಸಾಕ್ಷಿಯಾದರು. ಗುರು ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನು ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು.ಇದನ್ನೂ ಓದಿ: iPhone Pro, Pro Max | ದುಬಾರಿ ಫೋನ್‌ಗಳು ಫಸ್ಟ್‌ ಟೈಂ ಭಾರತದಲ್ಲೇ ತಯಾರು – ಬೆಲೆ ಎಷ್ಟು ಕಡಿಮೆಯಾಗಬಹುದು?

    ಮಹಾರಥೋತ್ಸವ ವೇಳೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ( Sri Subudhendra Teertharu ) ಭಕ್ತರನ್ನು ಉದ್ದೇಶಿಸಿ ಆಶೀವಚನ ನೀಡಿದ ಅವರು, ಜಾತಿ, ಮತ, ಬೇಧವಿಲ್ಲದೆ ದೇಶದಲ್ಲಿ ನಡೆಯುವ ಹಬ್ಬ ರಾಯರ ಆರಾಧನಾ ಮಹೋತ್ಸವ. ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ, ಮನುಕುಲಕ್ಕೆ ಒಳ್ಳೆಯದಾಗಲಿ. ಗಲಭೆಗಳು ಆಗದಂತೆ ಭಗವಂತ ಆರ್ಶೀವದಿಸಲಿ ಎಂದು ಪ್ರಾರ್ಥಿಸೋಣ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ ಅದನ್ನು ಖಂಡಿಸೋಣ. ಎಲ್ಲರೂ ಅಣ್ಣ-ತಮ್ಮಂದಿರ ಹಾಗೇ ಬಾಳುವಂತೆ ಆಗಬೇಕು. ದೇಶ-ವಿದೇಶಗಳ ನಡುವೆ ಗಲಭೆಯಾಗದಂತೆ ಭಗವಂತ ಕಾಪಾಡಲಿ ಎಂದು ಎಲ್ಲರ ಪರವಾಗಿ ಕೇಳಿಕೊಳ್ಳುತ್ತೇನೆ ಎಂದರು.

    ಈ ಬಾರಿ ಉತ್ತರಾರಾಧನೆಯಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣರಾಜ ಚಾಮರಾಜ ಒಡೆಯರ್ ಭಾಗವಹಿಸಿದ್ದರು. ಯದುವೀರ್ ಒಡೆಯರ್‌ಗೆ ಮಠದಿಂದ ರಾಘವೇಂದ್ರ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿನ್ನದ ಸರ, ನಗದು ಜೊತೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯದುವೀರ್ ಒಡೆಯರ್ (Yaduveer Wadiyar) ಮೈಸೂರು ದಸರಾದಷ್ಟೇ ವಿಜೃಂಭಣೆಯಿಂದ ರಾಯರ ಆರಾಧನೆ ನಡೆಯುತ್ತಿದೆ. ಪ್ರಾಚೀನ ಕಾಲದಿಂದಲೂ ರಾಯರ ಆರಾಧನೆ ನಡೆಯುತ್ತಿದೆ ಮುಂದೆಯೂ ನಡೆಯುತ್ತದೆ. ಗುರುಗಳು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲರೂ ನಡೆಯೋಣ. ನಮ್ಮ ವಂಶದ ಪರವಾಗಿ ಇಂದು ಸನ್ಮಾನ ಸ್ವೀಕಾರ ಮಾಡಿದ್ದೇನೆ. ಮೈಸೂರು ಸಂಸ್ಥಾನದ ಪರವಾಗಿ ಮಂತ್ರಾಲಯ ಮಠಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಲೋಕಾಯುಕ್ತ, ಸಿಬಿಐಗಿಂತ ಜಾಸ್ತಿ ಹಿಂಸೆ ಕೊಡ್ತಿದೆ – ಡಿಕೆಶಿ

    ಮಂತ್ರಾಲಯದಲ್ಲಿ ಮಹಾರಥೋತ್ಸವಕ್ಕೆ ಪ್ರತೀವರ್ಷ ನಡೆಯುತ್ತಿದ್ದ ಪುಷ್ಪವೃಷ್ಠಿ ಈ ಬಾರಿ ಕೊನೆಕ್ಷಣದಲ್ಲಿ ರದ್ದಾಯಿತು. ಜಿಲ್ಲಾಡಳಿತದಿಂದ ಅನುಮತಿ ಸಿಗದ ಹಿನ್ನೆಲೆ ಪುಷ್ಪವೃಷ್ಠಿ ನಡೆಯಲಿಲ್ಲ. ಹೆಲಿಕಾಪ್ಟರ್ ಹಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿದ್ದು, ಪುಷ್ಪ ವೃಷ್ಟಿಗೆ ಅನುಮತಿ ಸಿಗದ ಹಿನ್ನೆಲೆ ಈ ಬಾರಿ ರದ್ದುಮಾಡಲಾಗಿದೆ.

  • ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ರಾಯರ 401 ನೇ ಪಟ್ಟಾಭಿಷೇಕ

    ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ರಾಯರ 401 ನೇ ಪಟ್ಟಾಭಿಷೇಕ

    ರಾಯಚೂರು: ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ ಮನೆ ಮಾಡಿದೆ. ಇಂದು ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಶ್ರೀ ಮಠದಲ್ಲಿ ವಿಶೇಷ ಪೂಜೆಗಳು ಆರಂಭಗೊಂಡಿವೆ. ರಾಯರ ಪಾದುಕೆಗಳಿಗೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ನೆರವೇರಿಸಿದರು.

    ಶ್ರೀ ಮಠದ ಪ್ರಾಂಗಣದಲ್ಲಿ ಪ್ರಹ್ಲಾದ್ ರಾಜರಿಗೆ ಮುತ್ತು, ರನ್ನ ಮತ್ತು ಕನಕಗಳಿಂದ ಅಭಿಷೇಕ ಮಾಡಿದರು. ಗುರು ವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಮಠದ ಪ್ರಾಂಗಣದಲ್ಲಿ ಸ್ವರ್ಣ ರಥೋತ್ಸವ ಜರುಗಿತು. ರಾಯರ ಪಾದುಕೆಗಳನ್ನು ರಥದಲ್ಲಿಟ್ಟು ಕೋಲಾಟ, ಭಜನೆಯ ಮೆರಗಿನೊಂದಿಗೆ ನಡೆದ ಸ್ವರ್ಣ ರಥೋತ್ಸವ ನಡೆಯಿತು. ರಾಯರ ಪಟ್ಟಾಭಿಷೇಕ ಸಂಭ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

    ಈ ವರ್ಷದ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಭಾಗವಹಿಸಿದ್ದು ವಿಶೇಷವಾಗಿತ್ತು. ಇನ್ನೂ ಐದು ದಿನಗಳ ಕಾಲ ಗುರು ವೈಭವೋತ್ಸವ ನಡೆಯಲಿದ್ದು, ಮಾರ್ಚ್ 9 ರಂದು ರಾಯರ 427 ನೇ ವರ್ಧಂತಿ ಉತ್ಸವ ಜರುಗಲಿದೆ. ಈ ಸಂಭ್ರಮದಲ್ಲಿ ಭಾಗವಹಿಸಲು ಭಕ್ತರ ದಂಡು ಮಂತ್ರಾಲಯಕ್ಕೆ ಹರಿದು ಬರುತ್ತಿದೆ.