Tag: Sri Shyam Das Prabhu

  • Bangladesh | ಭಾರತಕ್ಕೆ ತೆರಳದಂತೆ 50ಕ್ಕೂ ಹೆಚ್ಚು ಇಸ್ಕಾನ್‌ ಸದಸ್ಯರಿಗೆ ಗಡಿಯಲ್ಲಿ ತಡೆ

    Bangladesh | ಭಾರತಕ್ಕೆ ತೆರಳದಂತೆ 50ಕ್ಕೂ ಹೆಚ್ಚು ಇಸ್ಕಾನ್‌ ಸದಸ್ಯರಿಗೆ ಗಡಿಯಲ್ಲಿ ತಡೆ

    ಢಾಕಾ: ಬಾಂಗ್ಲಾದೇಶದಲ್ಲಿ ಇಸ್ಕಾನ್‌ (ISKCON) ಮೇಲಿನ ಸರ್ಕಾರದ ಪ್ರಹಾರ ಮುಂದುವರಿದಿದೆ. ಇತ್ತೀಚೆಗಷ್ಟೇ ಇಸ್ಕಾನ್‌ನ ಮೂವರು ಸನ್ಯಾಸಿಗಳನ್ನು ಬಂಧಿಸಿ, 17 ಮಂದಿಯ ಬ್ಯಾಂಕ್ ಖಾತೆಗಳನ್ನ (Bank Account) ಫ್ರೀಜ್‌ ಮಾಡಿತ್ತು. ಇದೀಗ ಇಸ್ಕಾನ್‌ನ 50ಕ್ಕೂ ಹೆಚ್ಚು ಸದಸ್ಯರು ಭಾರತಕ್ಕೆ ತೆರಳದಂತೆ ತಡೆಹಿಡಿದಿದೆ ಎಂದು ವರದಿಯಾಗಿದೆ.

    ಪ್ರಯಾಣಕ್ಕೆ ಬೇಕಾದ ಪಾಸ್‌ಪೋರ್ಟ್‌, ವೀಸಾ ಸೇರಿ ಪೂರಕ ದಾಖಲೆಗಳಿದ್ದರೂ ಗಡಿ ಅಧಿಕಾರಿಗಳು ಭಾರತಕ್ಕೆ (India) ತೆರಳಲು ಅನುಮತಿ ನಿರಾಕರಿಸಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಬಂಧನ – ಕೃಷ್ಣ ದಾಸ್ ಭೇಟಿಗೆ ತೆರಳಿದ್ದ ಅರ್ಚಕ ಅರೆಸ್ಟ್‌

    ಸುಮಾರು 54 ಇಸ್ಕಾನ್‌ ಸದಸ್ಯರು ಶನಿವಾರ ತಡರಾತ್ರಿ ಮತ್ತು ಭಾನುವಾರ ಬೆಳಗ್ಗೆ ಬೆನಪೋಲ್ ಗಡಿಭಾಗಕ್ಕೆ ಆಗಮಿಸಿದ್ದರು. ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವುದಕ್ಕಾಗಿ ಭಾರತಕ್ಕೆ ತೆರಳಲು ಗಂಟೆಗಟ್ಟಲೆ ಕಾದು ಕುಳಿತಿದ್ದರು. ಬಳಿಕ ಗಡಿ ಭದ್ರತಾ ಅಧಿಕಾರಿಗಳು ಅವರ ಪ್ರಯಾಣಕ್ಕೆ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಬಾಂಗ್ಲಾದೇಶವು ಇಸ್ಕಾನ್‌ ಸಂಘಟನೆಯನ್ನ ಗುರಿಯಾಗಿಸಿಕೊಂಡು ಪ್ರಮುಖರನ್ನ ಬಂಧಿಸುವುದು, ಗಡಿ ದಾಟದಂತೆ ತಡೆಹಿಡಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಗಡಿ ಪೊಲೀಸರು, ಎಲ್ಲ ಅಗತ್ಯ ದಾಖಲೆ ಇದ್ದರೂ, ಗಡಿ ದಾಟಲು ಸರ್ಕಾರದ ಅನುಮತಿ ಸಿಕ್ಕಿಲ್ಲ. ಅಂತಹ ಅನುಮೋದನೆಯಿಲ್ಲದೆ ಅವರು ಮುಂದುವರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್‌ ಮೀಡಿಯಾ ಬ್ಯಾನ್‌ – ಆಸ್ಟ್ರೇಲಿಯಾದಲ್ಲಿ ಮಸೂದೆ ಅಂಗೀಕಾರ

    ಚಿನ್ಮೊಯ್ ಕೃಷ್ಣ ದಾಸ್ ಬಂಧನ
    ಚಿತ್ತೋಗ್ರಾಮ್‌ನ ನ್ಯೂ ಮಾರ್ಕೆಟ್ ಪ್ರದೇಶದಲ್ಲಿ ಹಿಂದೂ ಸಮುದಾಯದ ರ‍್ಯಾಲಿ ಸಂದರ್ಭದಲ್ಲಿ ಬಾಂಗ್ಲಾದೇಶದ ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ್ದಾರೆ ಎಂದು ಆರೋಪಿಸಿ ಕೃಷ್ಣ ದಾಸ್ ಸೇರಿದಂತೆ 19 ಮಂದಿ ವಿರುದ್ಧ ಅ. 30ರಂದು ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಆ ಬಳಿಕ ಕೃಷ್ಣದಾಸ್‌ ಭೇಟಿಗೆ ತೆರಳಿದ್ದ ಇತರ ಸ್ವಾಮೀಜಿಗಳನ್ನು ಬಂಧಿಸಲಾಗಿತ್ತು.

  • ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಬಂಧನ – ಕೃಷ್ಣ ದಾಸ್ ಭೇಟಿಗೆ ತೆರಳಿದ್ದ ಅರ್ಚಕ ಅರೆಸ್ಟ್‌

    ಬಾಂಗ್ಲಾದಲ್ಲಿ ಮುಂದುವರೆದ ಹಿಂದೂಗಳ ಬಂಧನ – ಕೃಷ್ಣ ದಾಸ್ ಭೇಟಿಗೆ ತೆರಳಿದ್ದ ಅರ್ಚಕ ಅರೆಸ್ಟ್‌

    ಢಾಕಾ: ದೇಶದ್ರೋಹ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ (ISKCON) ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ (Chinmoy Krishna Das) ಅವರನ್ನು ಭೇಟಿಗೆ ತೆರಳಿದ್ದ ಅರ್ಚಕರೊಬ್ಬರನ್ನು ಬಾಂಗ್ಲಾದೇಶದ (Bangladesh) ಪೊಲೀಸರು (Police) ಬಂಧಿಸಿದ್ದಾರೆ.

    ಬಂಧಿತ ಅರ್ಚಕರನ್ನು ಶ್ಯಾಮ್ ದಾಸ್ ಪ್ರಭು (Sri Shyam Das Prabhu) ಎಂದು ಗುರುತಿಸಲಾಗಿದೆ. ಯಾವುದೇ ಅಧಿಕೃತ ವಾರಂಟ್ ಇಲ್ಲದೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಇಸ್ಕಾನ್‌ನ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧರಾಮ್ ದಾಸ್ ಅವರು, ಅರ್ಚಕರ ಬಂಧನದ ಕುರಿತು ಪೋಸ್ಟ್ ಮಾಡಿದ್ದಾರೆ. ಇನ್ನೊಬ್ಬ ಬ್ರಹ್ಮಚಾರಿ ಶ್ರೀ ಶ್ಯಾಮ್ ದಾಸ್ ಪ್ರಭು ಅವರನ್ನು ಇಂದು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ಬಾಂಗ್ಲಾದೇಶದದಲ್ಲಿ ಇಸ್ಕಾನ್ ಮಾಜಿ ಸದಸ್ಯ ಚಿನ್ಮಯ್ ಕೃಷ್ಣ ದಾಸ್ ಅವರನ್ನು ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಬಂಧಿಸಲಾಗಿತ್ತು. ಅವರ ಬಂಧನವು ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ವಿವಿಧ ಸ್ಥಳಗಳಲ್ಲಿ ಹಿಂದೂಗಳ ಪ್ರತಿಭಟನೆಗೆ ಕಾರಣವಾಗಿದೆ.

    ಚಿನ್ಮಯ್‌ ಕೃಷ್ಣ ದಾಸ್ ಅವರನ್ನು ಬಿಡುಗಡೆ ಮಾಡಲು ಒತ್ತಾಯಿಸಿ ನಡೆದ ಪ್ರತಿಭಟನೆ (Protest) ವೇಳೆ ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಇನ್ನೂ ಕೃಷ್ಣದಾಸ್‌ ಅವರಿಗೆ ಚಟ್ಟೋಗ್ರಾಮ್ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿತ್ತು.