Tag: Sri Shivamurthy Murugha Sharanaru

  • ಬೆಡ್‌ಶೀಟ್ ಮೇಲೆ ಕಲೆಗಳಿರುತ್ತಿತ್ತು- ಶ್ರೀಗಳ ಬೆಡ್‌ರೂಂ ರಸಹ್ಯ ಬಯಲು

    ಬೆಡ್‌ಶೀಟ್ ಮೇಲೆ ಕಲೆಗಳಿರುತ್ತಿತ್ತು- ಶ್ರೀಗಳ ಬೆಡ್‌ರೂಂ ರಸಹ್ಯ ಬಯಲು

    ಚಿತ್ರದುರ್ಗ: ಮುರುಘಾ ಮಠದ (Murugha Mutt) ಶ್ರೀಗಳ ವಿರುದ್ಧ 2ನೇ ಪೋಕ್ಸೋ ಕಾಯ್ದೆ (POCSO Act) ದಾಖಲಾಗಿದ್ದು, 694 ಪುಟಗಳ ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿದೆ. ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಹೇಳಿಕೆ ಕೇಳಿಬರುತ್ತಿದೆ. ನಿನ್ನೆಯಷ್ಟೇ ಮಠದ ವಿದ್ಯಾರ್ಥಿನಿಯೊಬ್ಬರು (Students) ಶ್ರೀಗಳು ರೂಂಗೆ ಹೋದ ನಂತರ ಬಟ್ಟೆಬಿಚ್ಚಲು ಹೇಳ್ತಿದ್ರು ಎಂಬ ಹೇಳಿಕೆ ನೀಡಿದ್ದರು. ಇದೀಗ ಮುರುಘಾ ಶ್ರೀಗಳ ಸಹಾಯಕ ಮಹಾಲಿಂಗಪ್ಪ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಕೆಲವೊಮ್ಮೆ ಬೆಡ್‌ಶೀಟ್ ಮೇಲೆ ಕಲೆಗಳು ಆಗಿರುತ್ತಿದ್ದವು, ಬೆಡ್‌ಶೀಟ್ ಅನ್ನು ಸ್ವಚ್ಛವಾಗಿ ತೊಳೆಯುವಂತೆ ಶ್ರೀಗಳು ಹೇಳುತ್ತಿದ್ದರು. ಹಗಲಿನಲ್ಲಿ ರಶ್ಮಿ (Rashmi) ಆಗಾಗ ಮಕ್ಕಳೊಂದಿಗೆ ಬರುತ್ತಿದ್ದಳು. ಕೆಲವೊಮ್ಮೆ ರಾತ್ರಿ ವೇಳೆ ಬಾಲಕಿಯರು ಹಿಂಬಾಗಿಲಿನಿಂದ ಶ್ರೀಗಳ ರೂಮ್‌ಗೆ ಹೋಗುತ್ತಿದ್ದರು. ಹೀಗೆಲ್ಲಾ ಮಠದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ರೂಂಗೆ ಹೋದ ನಂತ್ರ ಬಟ್ಟೆ ಬಿಚ್ಚಲು ಶ್ರೀಗಳು ಹೇಳ್ತಿದ್ದರು: ಹಳೆ ವಿದ್ಯಾರ್ಥಿನಿ ಸ್ಫೋಟಕ ಹೇಳಿಕೆ

    ಮುರುಘಾ ಶ್ರೀಗಳ (Sri Shivamurthy Murugha Sharanaru) ಅಡುಗೆಭಟ್ಟ ಕರಿಬಸಪ್ಪ ಮಾತನಾಡಿದ್ದು, ರಶ್ಮಿ ಮತ್ತು ಮಕ್ಕಳು ಶ್ರೀಗಳ ರೂಮ್‌ಗೆ ಹೋದಾಗ ನನ್ನನ್ನ ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಸುಮಾರು ಗಂಟೆಗಳ ಬಳಿಕ ರಶ್ಮಿ ಮತ್ತು ಮಕ್ಕಳು ಹೊರಬರುತ್ತಿದ್ದರು. ಹಾಸ್ಟೆಲ್ ಬಾಲಕಿಯರನ್ನು ರೂಮ್‌ಗೆ ಕರೆಸಿಕೊಳ್ಳುತ್ತಾರೆಂದು ಜನ ಮಾತಾಡುತ್ತಿದ್ದರು. ನಮಗೂ ಸಹ ಕೆಲವೊಮ್ಮೆ ಅನುಮಾನ ಬರುತ್ತಿತ್ತು. ನಾವು ಬಾಯಿಬಿಟ್ಟರೆ ಕೆಲಸ ಬಿಡಿಸುತ್ತಾರೆಂಬ ಭಯವಿತ್ತು. ಹಾಸ್ಟೆಲ್‌ನ ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಮಠದಲ್ಲಿ ಮಾತುಗಳು ಕೇಳಿಬರುತ್ತಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    ಶ್ರೀಗಳ ಕಚೇರಿ ಕೆಲಸಗಾರ ಪ್ರಜ್ವಲ್ ಸಹ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಡ್ ರೂಮ್‌ನಲ್ಲಿ ಕೆಲಸವಿದೆ ಎಂದು ಕೆಲ ಬಾಲಕಿಯರನ್ನು ರೂಮ್‌ಗೆ ಕರೆಸಿಕೊಳ್ಳುತ್ತಿದ್ದರು. ಆದರೆ ರೂಮ್‌ನಲ್ಲಿ ಏನು ನಡೆದಿದೆ ಅಂತ ನನಗೆ ಗೊತ್ತಿಲ್ಲ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾಶ್ರೀ ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ, ತಕ್ಕ ಶಿಕ್ಷೆಯಾಗಲಿ- ಮೌನ ಮುರಿದ BSY

    ಮುರುಘಾಶ್ರೀ ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ, ತಕ್ಕ ಶಿಕ್ಷೆಯಾಗಲಿ- ಮೌನ ಮುರಿದ BSY

    ಉಡುಪಿ: ಮುರುಘಾಶ್ರೀ ವಿರುದ್ಧ ಲೈಂಗಿಕ (POCSO Case) ಕಿರುಕುಳ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಶ್ರೀಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಉಡುಪಿಯ (Udupi) ಕೊಲ್ಲೂರಿಗೆ ಇಂದು ಭೇಟಿ ನೀಡಿದ್ದ ಬಿಎಸ್‌ವೈ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾಂಗಣದಲ್ಲಿ ನಡೆದ ಮೂಕಾಂಬಿಕಾ ದೇವಿಯ ಉತ್ಸವದಲ್ಲಿ ಭಾಗಿಯಾದರು. ಬಳಿಕ ಮುರುಘಾಶ್ರೀಗಳ ಲೈಂಗಿಕ ಕಿರುಕುಳ ಕೇಸ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮುರುಘಾ ಶ್ರೀ (Sri Shivamurthy Murugha Sharanaru) ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಇದನ್ನು ಖಂಡಿಸಬೇಕು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರು, ಉಡುಪಿಯವರು ಶಿಸ್ತಿನ ಜನಗಳು: ಹಾಡಿಹೊಗಳಿದ ಬಿಎಸ್‍ವೈ

    ರಾಜ್ಯದಲ್ಲಿ ಬಿಜೆಪಿ 140 ಸೀಟು: ಈ ಬಾರಿಯ ಚುನಾವಣೆಯಲ್ಲಿ (Election 2023) ರಾಜ್ಯದಲ್ಲಿ ಬಿಜೆಪಿ 140 ಸೀಟು ಗೆಲ್ಲಲಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ನೂರಕ್ಕೆ ನೂರು ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 

    ಸತೀಶ್ ಜಾರಕಿಹೊಳಿ ಗರಂ: ಸತೀಶ್ ಜಾರಕಿಹೊಳಿ (Satish Jarkiholi) `ಹಿಂದೂ’ (Hindu) ಪದ ಅಶ್ಲೀಲ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಬಿಎಸ್‌ವೈ, ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ನವರೇ ಇದನ್ನು ಖಂಡಿಸಿದ್ದಾರೆ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ತಿಳುವಳಿಕೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಔಷಧ ಬೆರೆಸಿದ ಸೇಬು ನೀಡಿ ಮಕ್ಕಳ ಮೇಲೆ ರೇಪ್- ಮುರುಘಾಶ್ರೀ ವಿರುದ್ಧ 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ (Murugha Mutt) ಶ್ರೀಗಳ ವಿರುದ್ಧ 2ನೇ ಪೋಕ್ಸೋ (POCSO Act) ಕೇಸ್ ದಾಖಲಾಗಿದೆ. ಈ ಕುರಿತು ತನಿಖೆ ನಡೆಸಿರುವ ಡಿವೈಎಸ್ಪಿ (DYSP) ಅನಿಲ್ ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ (Court) ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

    ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ (Religious centre) ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಮುರುಘಾಶ್ರೀ, ಲೇಡಿ ವಾರ್ಡನ್ (ರಶ್ಮಿ), ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಮಠದ ಉತ್ತರಾಧಿಕಾರಿ ವಿರುದ್ಧ ಚಾರ್ಜ್ ಶೀಟ್ (ChargeSheet) ಸಲ್ಲಿಸಲಾಗಿದೆ. ಆದರೆ ವಕೀಲ ಗಂಗಾಧರಯ್ಯ ಭಾಗಿ ಆಗಿರುವ ಮಾಹಿತಿ ಇಲ್ಲ, ಈ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ ಮತ್ತೊಂದು ಕೇಸ್- ಮಠದ ಹಾಸ್ಟೆಲ್‍ನಲ್ಲಿ ಇಬ್ಬರು ಬಾಲಕಿಯರು ಪತ್ತೆ

    ಸೇಬು ನೀಡಿ ಮಕ್ಕಳ ಮೇಲೆ ಅತ್ಯಾಚಾರ: ಮುರುಘಾಶ್ರೀಗಳು ಲೇಡಿ ವಾರ್ಡನ್ ಮೂಲಕ ಮಕ್ಕಳನ್ನು ಕರೆಸಿ, ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಮತ್ತು ಬರುವ ಔಷಧಿ ಬೆರೆಸಿದ ಸೇಬು (Apple) ನೀಡಿ ಮಕ್ಕಳನ್ನು ಅತ್ಯಾಚಾರಕ್ಕೆ ಬಳಸಿಕೊಂಡಿದ್ದಾರೆ. ಕಚೇರಿ, ಬೆಡ್ ರೂಂ, ಬಾತ್ ರೂಂ ಗೆ ಕರೆದೊಯ್ದು ಬಲಾತ್ಕಾರ ಮಾಡಿದ್ದಾರೆ. ವಿರೋಧಿಸಿದವರಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಇದೇ ರೀತಿ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ- ಸಂತ್ರಸ್ತ ಬಾಲಕಿ, ತಾಯಿ ಹೇಳಿಕೆಯಲ್ಲಿ ಗೊಂದಲ

    ಅಲ್ಲದೇ ಕೆಲ ವರ್ಷದ ಹಿಂದೆ ಓರ್ವ ಬಾಲಕಿ ರೇಪ್ ಅಂಡ್ ಮರ್ಡರ್ ಸಹ ಆಗಿದ್ದಾಳೆ. ಈ ಬಗ್ಗೆ ಸಂತ್ರಸ್ತ ಬಾಲಕಿಯರಿಂದ ಹೇಳಿಕೆ ಪಡೆದು, ಆಂಧ್ರಕ್ಕೆ ತೆರಳಿದ್ದ ಪೊಲೀಸ್ ತಂಡ ಹಲವು ಮಾಹಿತಿಗಳನ್ನ ಕಲೆ ಹಾಕಿದೆ. ಮಠದ ಹಾಸ್ಟೆಲ್ ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದ್ದು, ಶ್ರೀಗಳ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]