Tag: Sri Reddy

  • ಲಾಕ್‍ಡೌನ್ ವಿಸ್ತರಣೆ- ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ನಟಿ

    ಲಾಕ್‍ಡೌನ್ ವಿಸ್ತರಣೆ- ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ನಟಿ

    ಹೈದರಾಬಾದ್: ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಟಾಲಿವುಡ್ ನಟಿ ಶ್ರೀ ರೆಡ್ಡಿ ಇದೀಗ ಪ್ರಧಾನಿ ಮೋದಿಯವರ ನಿರ್ಧಾರದ ಕುರಿತು ಪ್ರಶ್ನಿಸುವ ಮೂಲಕ ವಿವಾದಕಕ್ಕೆ ಕಾರಣವಾಗಿದ್ದಾರೆ. ಲಾಕ್‍ಡೌನ್ ವಿಸ್ತರಣೆ ಕುರಿತು ಮೋದಿಯವರಿಗೆ ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಅಲ್ಲೋಲ ಕಲ್ಲೋಲವಾಗಿದ್ದು, 15 ದಿನಗಳ ಬಳಿಕ ಮತ್ತೆ ಮೇ 3ರ ವರೆಗೆ ಪ್ರಧಾನಿ ಮೋದಿ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಈ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದ್ದಾರೆ. ಯಾಕೆಂದರೆ ಸದ್ಯದ ಪರಿಸ್ಥಿತಿಯಲ್ಲಿ ಲಾಕ್‍ಡೌನ್ ಮಾಡುವ ನಿರ್ಧಾರ ಹೊರತುಪಡಿಸಿದರೆ, ಇನ್ನಾವುದೇ ದಾರಿ ಇಲ್ಲ. ಆದರೆ ಈ ನಟಿ ಮಾತ್ರ ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

    ಈ ಕುರಿತು ಫೇಸ್ಬುಕ್‍ನಲ್ಲಿ ಸರಣಿ ಪೋಸ್ಟ್ ಮಾಡಿರುವ ನಟಿ ಶ್ರೀರೆಡ್ಡಿ, ಪ್ರಧಾನಿ ಮೋದಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ್ದು, ಎರಡೆರಡು ಅರ್ಥವನ್ನು ಕಲ್ಪಿಸಿದ್ದಾರೆ. ಮೇ 3ರ ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಮೋದಿಯವರು ತಿಳಿಸಿದ್ದಾರೆ. ಈ ಮೂಲಕ ಆರೋಗ್ಯವಾಗಿರಿ ಎಂದು ನೇರವಾಗಿ ಹೇಳಿದ್ದಾರೆ. ಅಲ್ಲದೆ ಅರ್ಥ ವ್ಯವಸ್ಥೆ ಕುಸಿದಿರುವ ಬಗ್ಗೆ ಹಾಗೂ ಬಡವರಿಗೆ ಸಹಾಯ ಮಾಡುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಪೋಸ್ಟ್ ನಲ್ಲಿ ಈ ನಿರ್ಧಾರದ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದು, ಮೇ 3ರ ನಂತರ ಕೊರೊನಾ ಆಕಾಶಕ್ಕೆ ಶಿಫ್ಟ್ ಆಗಲಿದೆಯೇ, ಬಡ ಜನತೆ ಬಗ್ಗೆ ಚಿಂತಿಸಿ, ಅವರನ್ನು ಉಳಿಸಿ. ಅಗತ್ಯ ವಸ್ತುಗಳನ್ನು ಕೊಳ್ಳಲಿಕ್ಕಾದರೂ ಅವರಿಗೆ ಹಣ ನೀಡಿ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಮೇ 3ರ ನಂತರವೂ ಕೊರೊನಾ ಸೋಂಕಿತ ವ್ಯಕ್ತಿ ಹೊರಗಿದ್ದರೆ, ಆತ ಸಹ ಲಕ್ಷಾಂತರ ಜನರಿಗೆ ವೈರಸ್ ಹರಡಿಸುತ್ತಾನೆ. ಆಗ ಏನು ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಮೋದಿಯವರ ಲಾಕ್‍ಡೌನ್ ವಿಸ್ತರಣೆ ಘೋಷಣೆಯನ್ನು ಪ್ರಶ್ನಿಸಿದ್ದಾರೆ. ಪೇಸ್ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಶ್ರೀ ರೆಡ್ಡಿಯವರನ್ನು ಹಲವರು ತರಾಟೆಗೆ ತೆಗೆದುಕೊಂಡಿದ್ದು, ಜೀವ ಮುಖ್ಯ ನಂತರ ಅರ್ಥಿಕತೆ, ಪ್ರಧಾನಿ ಮೋದಿ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಅಲ್ಲದೆ ಮತ್ತೊಬ್ಬರು ಕಮೆಂಟ್ ಮಾಡಿ ಅವರು ಸಾರ್ವಜನಿಕ ಜೀವನದಲ್ಲಿದ್ದಾರೆ, ಗೌರವವನ್ನಾದರೂ ಕೊಟ್ಟು ಮಾತನಾಡಿ ಎಂದಿದ್ದಾರೆ. ಹೊರಗಡೆ ಹೋಗಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಇದು ಆರ್ಥಿಕತೆಯ ಪ್ರಶ್ನೆಯಲ್ಲ, ಜೀವ ಉಳಿಸುವುದಾಗಿದೆ. ಅಲ್ಲದೆ ಈ ವರೆಗೆ ಆಹಾರದ ಕೊರತೆಯಿಂದ ಸಾವನ್ನಪ್ಪಿದ ಉದಾಹರಣೆಗಳಿಲ್ಲ. ಕೇವಲ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

  • ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಬಗ್ಗೆ ಅನುಪಮಾ ಪರಮೇಶ್ವರನ್ ಹೇಳಿದ್ದೇನು?

    ಕಾಸ್ಟಿಂಗ್ ಕೌಚ್ ಎಂಬ ಕಾಯಿಲೆ ಎಲ್ಲ ಚಿತ್ರರಂಗಗಳನ್ನೂ ಸಾಂಕ್ರಾಮಿಕವೆಂಬಂತೆ ಆವರಿಸಿಕೊಂಡಿರೋದು ದುರಂತ ಸತ್ಯ. ಆಗಾಗ ಯಾರೋ ನಟಿ ಬೀದಿಯಲ್ಲಿ ನಿಂತು ಮಾತಾಡಿದಾಗ, ಅನಾಹುತಗಳಾದಾಗ ಮಾತ್ರವೇ ಈ ಬಗ್ಗೆ ಚರ್ಚೆಗಳಾಗಿ ತಣ್ಣಗಾಗುತ್ತಿತ್ತು. ಆದರೆ ಈ ವಿಚಾರ ಇಡೀ ಭಾರತೀಯ ಚಿತ್ರರಂಗವನ್ನೇ ಅದುರುವಂತೆ ಮಾಡಿರೋದು ತೆಲುಗು ನಟಿ ಶ್ರೀರೆಡ್ಡಿಯ ದೆಸೆಯಿಂದ!

    ಇದೀಗ ಎಲ್ಲ ಭಾಷೆಗಳ ನಟಿಯರೂ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಲಾರಂಭಿಸಿದ್ದಾರೆ. ಈಗಿನ ಸರದಿ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್ ಅವರದ್ದು!

    ಆದರೆ ಅನುಪಮಾ ಕಾಸ್ಟಿಂಗ್ ಕೌಚಿಂಗ್ ವಿಚಾರವಾಗಿ ಯಾರ ವಿರುದ್ಧವೂ ದೂರು ಹೇಳಿಲ್ಲ. ಅಂಥಾದ್ದೊಂದು ಇದ್ದರೂ ಇದ್ದೀತೆಂಬ ಮಾತನ್ನೂ ಆಡಿಲ್ಲ. ತನಗೆ ಇದುವರೆಗೂ ಅಂಥಾ ಅನುಭವಗಳಾಗಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯ. ಇವರ ಈ ಅಭಿಪ್ರಾಯ ಯಾಕೆ ಮುಖ್ಯವೆಂದರೆ, ಅನುಪಮಾ 2016ರಿಂದಲೇ ತೆಲುಗು ಚಿತ್ರರಂಗದಲ್ಲಿದ್ದಾರೆ. ಕಾಸ್ಟಿಂಗ್ ಕೌಚ್ ಎಂಬ ಹೆಮ್ಮಾರಿ ಸದ್ಯ ವಿರಾಟ್ ರೂಪ ತಾಳಿರೋದು ಕೂಡಾ ತೆಲುಗಿನಲ್ಲಿಯೇ ಆದ್ದರಿಂದ ಅನುಪಮಾ ಹೇಳಿಕೆ ಮುಖ್ಯವಾಗುತ್ತದೆ.

    ಈಗಲೂ ಕೂಡಾ ಅನುಪಮಾ ನಟಿಸಿರೋ ತೆಲುಗು ಚಿತ್ರ ಹಲೋ ಗುರು ಪ್ರೇಮಂ ಕೋಸಮೇ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಇದೀಗ ಅವರು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಜೋಡಿಯಾಗಿ ನಟ ಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಾನು ನಟಿಸಿರೋ ತೆಲುಗು ಚಿತ್ರಕ್ಕೆ ಹಿನ್ನಡೆಯಾಗುತ್ತದೆ ಎಂಬ ಮುಲಾಜಿನಿಂದ ಅನುಪಮಾ ಕಾಸ್ಟಿಂಗ್ ಕೌಚ್ ಬಗ್ಗೆ ಇಂಥಾ ಅಭಿಪ್ರಾಯ ಹೇಳಿರಬಹುದೆಂಬ ಮಾತುಗಳೂ ಕೇಳಿ ಬರುತ್ತಿರೋದು ಸುಳ್ಳಲ್ಲ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಫಿಲ್ಮ್ ಇಂಡಸ್ಟ್ರಿ ರೇಪ್‍ಗೆ ಬದಲಾಗಿ ತುತ್ತು ಅನ್ನ ನೀಡುತ್ತೆ: ಸರೋಜ್ ಖಾನ್

    ಮುಂಬೈ: ಸಿನಿಮಾ ಉದ್ಯಮದಲ್ಲಿ ಕೆಲವು ದಿನಗಳಿಂದ ‘ಕಾಸ್ಟಿಂಗ್ ಕೌಚ್’ ಕುರಿತಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಬಾಲಿವುಡ್ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಕಾಸ್ಟಿಂಗ್ ಕೌಚ್ ಪರ ಹೇಳಿಕೆ ನೀಡುವ ಮೂಲಕ ಅಚ್ಚರಿಯನ್ನುಂಟು ಮಾಡಿದ್ದಾರೆ.

    ಬಾಲಿವುಡ್ ಕಾಸ್ಟಿಂಗ್ ಕೌಚ್ ನೆಪದಲ್ಲಿ ನಡೆಸುವ ರೇಪ್‍ಗೆ ಬದಲಾಗಿ ನಟಿಗೆ ಅನ್ನವನ್ನು ನೀಡುತ್ತದೆ ಅಂತಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಕಾಸ್ಟಿಂಗ್ ಕೌಚ್ ಕಿರುಕುಳ ಬಾಬಾ ಅಝಮ್ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸಿನಿಮಾ ಅಂಗಳದಲ್ಲಿರುವ ಪ್ರತಿಯೊಬ್ಬ ಹುಡುಗಿಯ ಮೇಲೆ ಒಬ್ಬರಾದ್ರೂ ಕೈ ಹಾಕುವ ಪ್ರಯತ್ನ ಮಾಡ್ತಾರೆ. ಇಂತಹ ಪ್ರಕರಣದಲ್ಲಿ ಸರ್ಕಾರದ ಪ್ರತಿನಿಧಿಗಳು ಸಹ ಇರ್ತಾರೆ. ಸರ್ಕಾರದ ಪ್ರತಿನಿಧಿಗಳು ಫಿಲ್ಮ್ ಇಂಡಸ್ಟ್ರಿಯ ಹಿಂದೆ ಯಾಕೆ ಬೀಳುತ್ತಾರೋ ಗೊತ್ತಾಗುತ್ತಿಲ್ಲ. ಕೊನೆ ಪಕ್ಷದಲ್ಲಿ ಸಿನಿಮಾದವರು ರೇಪ್ ಬದಲಾಗಿ ನಟಿಗೆ ತುತ್ತು ಅನ್ನವಾದ್ರೂ ನೀಡ್ತಾರೆ ಅಂತಾ ಹೇಳಿದ್ದಾರೆ.

    ಈ ಎಲ್ಲ ವಿಷಯಗಳು ನಟಿಯ ಮೇಲೆ ನಿರ್ಧರಿಸಲ್ಪಡುತ್ತವೆ. ನಟಿ ಲೈಂಗಿಕ ಕಿರುಕುಳಕ್ಕೆ ಒಳಗಾಗಲು ಇಷ್ಟ ಪಡದೇ ಇದ್ದರೆ ದೂರ ಉಳಿಯುವ ಸ್ವಾತಂತ್ರ್ಯ ಆಕೆಗಿದೆ. ಅವಳಲ್ಲಿ ನಟನೆಯ ಕಲೆ ಇದ್ರೆ, ಆಕೆ ಎಲ್ಲಿಯಾದ್ರೂ ಬದುಕಬಹುದು. ಆದ್ರೆ ಫಿಲ್ಮ್ ಇಂಡಸ್ಟ್ರಿಗೆ ಅವಮಾನಿಸುವಂತಹ ಹೇಳಿಕೆಗಳನ್ನು ನೀಡಬಾರದು. ಫಿಲ್ಮ್ ಇಂಡಸ್ಟ್ರಿ ನಮಗೆ ತಂದೆ-ತಾಯಿ. ಹೀಗಾಗಿ ಅನಾವಶ್ಯಕ ಹೇಳಿಕೆಗಳನ್ನು ನೀಡಬಾರದು ಅಂತಾ ಸರೋಜ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ್ರು ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಸ್ಯಾಂಡಲ್ ವುಡ್ ನಟಿ

    ಸರೋಜ್ ಖಾನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಾಲಿವುಡ್ ನಟಿ ಶ್ರೀರೆಡ್ಡಿ, ಇದೂವರೆಗೂ ಸರೋಜ್ ಖಾನ್ ಮೇಡಂ ಮೇಲಿದ್ದ ಗೌರವವೆಲ್ಲಾ ಕಡಿಮೆಯಾಗಿದೆ. ಸಿನಿಮಾ ರಂಗದಲ್ಲಿರುವ ಒಬ್ಬ ಹಿರಿಯ ಕಲಾವಿದೆಯಾಗಿ, ಯುವ ನಟಿಯರಿಗೆ ಒಳ್ಳೆಯ ದಾರಿಯನ್ನು ತೋರಿಸಬೇಕು. ಅದರ ಬದಲಾಗಿ ನಟಿಯರು ನಿರ್ಮಾಪಕರ ಗುಲಾಮರು ಇದ್ದಂತೆ ನಿಮ್ಮ ಹೇಳಿಕೆ ಇದೆ ಅಂತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

  • ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಬಟ್ಟೆ ಬಿಚ್ಚಿ ಶ್ರೀರೆಡ್ಡಿಗೆ ತಿರುಗೇಟು ಕೊಟ್ಟ ಕನ್ನಡದ ನಟಿ ಕವಿತಾ!

    ಬೆಂಗಳೂರು: ಕೆಲ ದಿನಗಳ ಹಿಂದೆ ಟಾಲಿವುಡ್ ಸಿನಿಮಾ ಕ್ಷೇತ್ರದಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಆರೋಪಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದ ಶ್ರೀ ರೆಡ್ಡಿಗೆ ಕನ್ನಡದ ನಟಿ ಕವಿತಾ ರಾಧೇಶಾಮ್ ವಿಡಿಯೋ ರಿಲೀಸ್ ಮಾಡಿ ತಿರುಗೇಟು ನೀಡಿದ್ದಾರೆ.

    ಈ ಸಂಬಂಧ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಮಾಡಿರುವ ನಟಿ ರಾಧೇಶಾಮ್, ಟಾಲಿವುಡ್ ನ ಸ್ಟಾರ್ ನಟರ ಹೆಸರು ಹೇಳಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಅಲ್ಲದೇ ಅರಬೆತ್ತಲೆ ಪ್ರತಿಭಟನೆ ನಡೆಸಿರುವ ಘಟನೆಯೂ ಸಹ ಸ್ಕ್ರೀಪ್ಟ್ ರೀತಿಯಲ್ಲೇ ಇದೆ. ಆದರೆ ಅವರಿಗೆ ಪ್ರತಿಭಟನೆ ಸಹ ಸರಿಯಾಗಿ ಮಾಡಲು ಬಂದಿಲ್ಲ ಎಂದು ಆರೋಪಿಸಿದ್ದಾರೆ.

    ತಮ್ಮ ಫೇಸ್‍ಬುಕ್ ಆರಂಭದಲ್ಲೇ ತಾವು ಈ ವಿಡಿಯೋ ಮಾಡುತ್ತಿರುವ ಕುರಿತು ಸ್ಪಷ್ಟನೆ ನೀಡಿರುವ ರಾಧೇಶಾಮ್, ತಾನು ಸದ್ಯ ಬಾಲಿವುಡ್ ಚಿತ್ರಗಳಲ್ಲಿ ನಟನೇ ಮಾಡುತ್ತಿದ್ದು, ಕನ್ನಡ ಸೇರಿದಂತೆ ಹಲವು ದಕ್ಷಿಣ ಭಾರತದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಸ್ನೇಹಿತರು ನನ್ನನ್ನು ಬೌಲ್ಡ್ ನಟಿ ಎಂದು ಕರೆಯುತ್ತಾರೆ. ಇದು ಎಷ್ಟು ಸತ್ಯ ಎಂದು ತಿಳಿಯಲು ಈ ವಿಡಿಯೋ ಮಾಡಿರುವುದಾಗಿ ತಿಳಿಸಿದ್ದಾರೆ.

    ಟಾಲಿವುಡ್ ಚಿತ್ರರಂಗ ಪವನ್ ಕಲ್ಯಾಣ್ ಸ್ಟಾರ್ ನಟ. ಇಂತಹ ನಟರ ಹೆಸರು ಬಳಕೆ ಮಾಡಿಕೊಂಡು ಕೆಲವರು ಪ್ರಚಾರ ಪಡೆಯುತ್ತಿದ್ದಾರೆ. ಉತ್ತರ ಭಾರತ ನಟಿಯರು ಎಲ್ಲದಕ್ಕೂ ಸಿದ್ಧರಿದ್ದು, ಅದ್ದರಿಂದಲೇ ಅವರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ ಎಂದು ಹೇಳಿರುವ ಕುರಿತು ರಾಧೇಶಾಮ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಹಲವು ಸೌತ್ ನಟಿಯರು ಬಾಲಿವುಡ್ ನಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ಆದರೆ ನಟನೆ ಮಾಡಲು ಬಾರದ ಇಂತಹ ನಟಿಯರು ಈ ರೀತಿ ಮಾಡುತ್ತಿದ್ದಾರೆ. ಮುಖ್ಯವಾಗಿ ಬೆತ್ತಲೆ ಪ್ರತಿಭಟನೆ ಎಂದರೆ ಖಾಸಗಿ ಅಂಗಾಂಗಳನ್ನು ಮುಚ್ಚಿಕೊಳ್ಳುವುದು ಅಲ್ಲ. ಇದನ್ನು ನಾನು ಮಾಡಿ ತೋರಿಸುತ್ತೇನೆ ಎಂದು ವಿಡಿಯೋದಲ್ಲೇ ಬೆತ್ತಲೆಯಾಗಿದ್ದಾರೆ.

    ಮುಖ್ಯವಾಗಿ ಶ್ರೀ ರೆಡ್ಡಿ ಅವರು ನಟ ಪವನ್ ಕಲ್ಯಾಣ್ ಅವರ ಬಗ್ಗೆ ಮಾಡಿರುವ ಆರೋಪಗಳ ಕುರಿತು ಕಿಡಿಕಾರಿರುವ ರಾಧೇಶಾಮ್, ತಾವು ಇದುವರೆಗೂ ನಟಿರುವ ಎಲ್ಲಾ ಸಿನಿಮಾ ರಂಗಗಳಲ್ಲೂ ಯಾವುದೇ ನಿರ್ದೇಶಕ, ನಿರ್ಮಾಪಕ ಈ ರೀತಿ ಮಾಡಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡುವುದು ಅವರ ನೈಜ ಮುಖವಾಡವನ್ನು ಬಿಚ್ಚಿಡುತ್ತದೆ ಎಂದು ಹೇಳಿದ್ದಾರೆ.

    ನಟಿ ಕವಿತಾ ರಾಧೇಶಾಮ್ ಕನ್ನಡ ರಾಗಿಣಿ ಐಪಿಎಸ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಜಾಗ್ವಾರ್, ಖತರ್ನಾಕ್ ಸಿನಿಮಾದಲ್ಲೂ ನಟಿಸಿದ್ದರು. ಸದ್ಯ ಕನ್ನಡ ಮತ್ತೊಂದು ಹೆಸರಿಡದ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.

    https://www.facebook.com/actresskavita/videos/1974854692555542/

    https://twitter.com/actresskavita/status/982883007932530688

  • ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಬಾಹುಬಲಿ ಸ್ಟಾರ್ ನಟನ ಸಹೋದರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ: ಶ್ರೀ ರೆಡ್ಡಿಯಿಂದ ಫೋಟೋ ರಿಲೀಸ್

    ಹೈದರಾಬಾದ್: ಟಾಲಿವುಡ್ ಫಿಲ್ಮ್ ಚೇಂಬರ್ ಮುಂದೇ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ್ದ ನಟಿ ಶ್ರೀ ರೆಡ್ಡಿ, ಸದ್ಯ ಖ್ಯಾತ ನಿರ್ಮಾಪಕರ ಪುತ್ರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಖ್ಯಾತ ತೆಲುಗು ನಿರ್ಮಾಪಕ ಸುರೇಶ್ ಬಾಬು ಅವರ ಪುತ್ರ ಹಾಗೂ ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಸರ್ಕಾರದ ಫಿಲ್ಮ್ ಸ್ಟುಡಿಯೊವೊಂದರಲ್ಲಿ ಈ ಘಟನೆ ನಡೆದಿರುವುದಾಗಿ ಖಾಸಗಿ ಮಾಧ್ಯಮೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

    ಈ ಕುರಿತು ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಹಾಗೂ ಅಭಿರಾಮ್ ನಡುವಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು ತಮ್ಮ ಆರೋಪಕ್ಕೆ ಸಾಕ್ಷಿಗಳನ್ನು ನೀಡಿದ್ದಾರೆ. ನಾನು ಹೇಳುತ್ತಿದ್ದ ವಿಷಯಗಳನ್ನು ಕೇವಲ ಸುಳ್ಳು ಎಂದು ಪ್ರತಿಪಾದಿಸುತ್ತಿದ್ದ ಹಲವರು ಈ ಫೋಟೋಗಳನ್ನು ಒಮ್ಮೆ ನೋಡಿ. ಅಭಿರಾಮ್ ನನ್ನ ಮುಖದ ಮೇಲೆ ಕೀಸ್ ಮಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ನಾನು ಈ ಫೋಟೋಗಳನ್ನು ರಿವಿಲ್ ಮಾಡುತ್ತಿರಲಿಲ್ಲ. ಆದರೆ ಆತನಿಗೆ ತನ್ನ ಕೃತ್ಯದ ಬಗ್ಗೆ ಸ್ವಲ್ಪವೂ ನಾಚಿಕೆ ಇಲ್ಲ. ಅದ್ದರಿಂದಲೇ ಇವುಗಳನ್ನು ಬಹಿರಂಗ ಪಡಿಸುತ್ತಿದ್ದೇನೆ. ಇದನ್ನು ನೋಡಿದ ಬಳಿಕವಾದರೂ ನನ್ನ ಹೋರಾಟಕ್ಕೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದಾರೆ.

    https://twitter.com/srireddyleaks/status/983927302475034624

    ನಟಿ ಶ್ರೀ ರೆಡ್ಡಿ ಈ ಫೋಟೋಗಳನ್ನು ಬಹಿರಂಗಗೊಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆಯೂ ಹಲವು ಸಿನಿಮಾ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ತನ್ನ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಕೇಳಿದ್ದರು. ಅಂತಹ ಫೋಟೋ ಕಳುಹಿಸಿದ ಬಳಿಕವೂ ತನಗೆ ಸಿನಿಮಾದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಶ್ರೀ ರೆಡ್ಡಿ ಆರೋಪಿಸಿದ್ದರು. ಆದರೆ ಆ ಸಂದರ್ಭದಲ್ಲಿ ಯಾರ ಹೆಸರನ್ನು ಬಹಿರಂಗ ಪಡಿಸಿರಲಿಲ್ಲ.

  • ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್ ನಟಿ!

    ನಡುರಸ್ತೆಯಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಟಾಲಿವುಡ್ ನಟಿ!

    ಹೈದರಾಬಾದ್: ಟಾಲಿವುಡ್ ನಟಿಯೊಬ್ಬರು ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆಯಾಗುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ಹೈದರಾಬಾದ್ ನಗರದ ಫಿಲ್ಮ್ ನಗರದಲ್ಲಿ ನಡೆದಿದೆ.

    ಟಾಲಿವುಡ್‍ನ ಕೆಲ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿರುವ ಶ್ರೀ ರೆಡ್ಡಿ ಅಲ್ಲಿನ ಫಿಲ್ಮ್ ಚೆಂಬರ್ ವಿರುದ್ಧ ನಡುರಸ್ತೆಯಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.

    ಇಂದು ಹೈದರಾಬಾದ್ ನಗರದ ಫಿಲ್ಮ ಚೆಂಬರ್ ಮುಂದೇ ಆಗಮಿಸಿದ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಟಾಲಿವುಡ್ ಹಿರೋಯಿನ್ ಆಗಿ ಗುರುತಿಸಿಕೊಂಡಿದ್ದರು ತಮಗೇ ಸಿನಿಮಾ ನಟರ ಆಸೋಸಿಯೇಷನ್ ಸಂಸ್ಥೆಯಲ್ಲಿ ಸದಸ್ಯತ್ವ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಪ್ರತಿಭಟನೆ ಬಳಿಕವೂ ಸಂಸ್ಥೆ ತಮಗೆ ಸದಸ್ಯತ್ವ ನೀಡದೆ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ನಟಿ ಶ್ರೀ ರೆಡ್ಡಿ ಟಾಲಿವುಡ್ ಅಂಗಳದಲ್ಲಿನ ಕಾಸ್ಟಿಂಗ್ ಕೋಚ್ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದರು.

    https://www.youtube.com/watch?v=5TiflmioJDA