Tag: Sri ramulu

  • ಮಗನನ್ನ ಸಿಎಂ ಮಾಡೋಕೆ ಖರ್ಗೆಯವರೇ ಸರ್ಕಾರ ಬೀಳಿಸುತ್ತಾರೆ: ಶ್ರೀರಾಮುಲು

    ಮಗನನ್ನ ಸಿಎಂ ಮಾಡೋಕೆ ಖರ್ಗೆಯವರೇ ಸರ್ಕಾರ ಬೀಳಿಸುತ್ತಾರೆ: ಶ್ರೀರಾಮುಲು

    – ಸಿಎಂ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಪ್ರಸ್ತಾಪ ಎಂದು ಕಿಡಿ

    ಕಲಬುರಗಿ: ತಮ್ಮ ಮಗನನ್ನ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆಯವರೇ (Mallikarjuna Kharge) ಈ ಸರ್ಕಾರ ಬಿಳಿಸುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು (Sriramulu) ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಕಲಬುರಗಿಯಲ್ಲಿ (Kalaburagi) ನಡೆದ ಜನಾಕ್ರೋಶ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ (D K Shivakumar) ಈಗಾಗಲೇ ಸಿಎಂ ಗಾದಿಗೆ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮೂರನೇ ವ್ಯಕ್ತಿ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮಂಡ್ಯ | ಜೀವನೋಪಾಯಕ್ಕಿದ್ದ ಗೂಡ್ಸ್ ಆಟೋಗೆ ದುಷ್ಕರ್ಮಿಗಳಿಂದ ಬೆಂಕಿ – 7 ಲಕ್ಷ ನಷ್ಟ

    ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬಿಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್‌ ಮಾಡಿದ್ದಾರೆ ಎಂದು ಗುಡುಗಿದರು. ಇದನ್ನೂ ಓದಿ: ಮೋದಿ, ಎಲಾನ್ ಮಸ್ಕ್ ಸಂಭಾಷಣೆ – ಸ್ಟಾರ್‌ಲಿಂಕ್ ಭಾರತಕ್ಕೆ ಬರುತ್ತಾ?

    ತಂದೆ, ಮಕ್ಕಳು ಸೇರಿ ರಿಪಬ್ಲಿಕ್ ಆಫ್ ಕಲಬುರಗಿಯನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ಕೊಟ್ಟರೇ ಅವರ ಕಾರ್ಯಕರ್ತರು ದಬ್ಬಾಳಿಕೆ ಮಾಡುತ್ತಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ನಿನ್ನೆ ಜಾತಿಗಣತಿ ಬಗ್ಗೆ ನಿರ್ಧಾರ ಮಾಡುವುದಿಲ್ಲ ಎಂದು ಗೊತ್ತಿತ್ತು. ಹೀಗಾಗಿ ಪಲಾಯನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮಂಗಳೂರು, ಬೆಂಗಳೂರಲ್ಲಿ ಅದ್ದೂರಿ ಪಸ್ಕ ಹಬ್ಬ ಆಚರಣೆ – ಮಂಜೂಷ ಪೆಟ್ಟಿಗೆ ಸ್ಥಾಪನೆ

    ಸಿಎಂ ಕುರ್ಚಿಗೆ ಕಂಟಕ ಬಂದಾಗ ಜಾತಿಗಣತಿ ಪ್ರಸ್ತಾಪ ಮಾಡುತ್ತಾರೆ. ಅವರ ಕೈಯಲ್ಲಿ ಆಗೋದು ಅಷ್ಟೇ. ಮುಂದೆ ಒಂದು ಕಮಿಟಿ ನೇಮಕ ಮಾಡಿ ವರದಿ ತರಿಸಿಕೊಳ್ಳುತ್ತೇವೆ ಎನ್ನುತ್ತಾರೆ. ಈ ಸರ್ಕಾರ ಸುಮ್ಮನೇ ಕಾಲಹರಣ ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದರು.

  • ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

    ರೆಡ್ಡಿ ಜೊತೆ ಸಂಪರ್ಕವೇ ಬೇಡ – ಮನೆಯ ಗೇಟನ್ನೇ ಬಂದ್‌ ಮಾಡಿದ ರಾಮುಲು

    ಬಳ್ಳಾರಿ: ಜನಾರ್ದನ ರೆಡ್ಡಿ- ಶ್ರೀರಾಮುಲು (Sri Ramulu) ನಡುವೆ ದೋಸ್ತಿಯಲ್ಲಿ ಬಿರುಕು ಮೂಡಿದ ಹಿನ್ನೆಲೆ, ರೆಡ್ಡಿ ಮನೆ ಸಂಪರ್ಕದ ಗೇಟ್ ಅನ್ನು ರಾಮುಲು ಬಂದ್ ಮಾಡಿಸಿದ್ದಾರೆ.

    ಜನಾರ್ದನ ರೆಡ್ಡಿ (Janardhan Reddy) ಮನೆಗೆ ಸಂಪರ್ಕಿಸಲು ರಾಮುಲು ಮನೆಯ ಕೌಂಪೌಂಡ್‌ಗೆ ಗೇಟ್ ಹಾಕಲಾಗಿತ್ತು. ಇಬ್ಬರ ಸಂಬಂಧ ಹಳಸಿದ್ರಿಂದ ವಾಸ್ತು ಹೆಸರನಲ್ಲಿ ಗೇಟ್ ಬಂದ್ ಮಾಡಿಸಲಾಗಿದೆ. ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮುಖ್ಯಸ್ಥ ರಂಗನಾಥ್ ಪ್ರೇರಣೆ – ಇಡೀ ಗ್ರಾಮಕ್ಕೆ 24*7 ನೀರು ಸೌಲಭ್ಯ ಕಲ್ಪಿಸಿದ ಗ್ರಾಪಂ‌ ಅಧ್ಯಕ್ಷ

    ಬಳ್ಳಾರಿ ನಗರದ (Ballari City) ಅವಂಬಾವಿಯಲ್ಲಿ ಅಕ್ಕಪಕ್ಕದಲ್ಲೇ ಕೇವಲ 50 ಮೀಟರ್ ಅಂತರದಲ್ಲಿ ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಮನೆಗಳಿವೆ. ರಸ್ತೆಯಿಂದ ಬರಬಾರದು ಅನ್ನೋ ಕಾರಣಕ್ಕೆ ಕಂಪೌಂಡ್‌ಗೆ ಒಂದು ಗೇಟ್ ಮಾಡಿಸಲಾಗಿತ್ತು. ಇಬ್ಬರ ನಡುವೆ ವೈಮನಸ್ಸು ಆಗ್ತಿದಂತೆ ಇಟ್ಟಿಗೆ ಸಿಮೆಂಟ್ ಹಾಕಿ ಗೇಟನ್ನು ರಾಮುಲು ಬಂದ್ ಮಾಡಿಸಿದ್ದಾರೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲೇ 120 ಟನ್‌ ಕಬ್ಬು ಕಟಾವು ಮಾಡಿ ಲೋಡ್‌ – ಜೈ ಹನುಮಾನ್ ತಂಡಕ್ಕೆ ಜೈ

  • ಕ್ರಿಮಿನಲ್ ಬ್ಯಾಗ್ರೌಂಡ್‌ ಬಗ್ಗೆ ಸಾಚಾ ಅಂತಾರೆ, ಸಮಯ ಬಂದಾಗ ಜನರ ಮುಂದೆ ಬಿಚ್ಚಿಡ್ತೀನಿ: ರೆಡ್ಡಿಗೆ ರಾಮುಲು ವಾರ್ನಿಂಗ್‌

    ಕ್ರಿಮಿನಲ್ ಬ್ಯಾಗ್ರೌಂಡ್‌ ಬಗ್ಗೆ ಸಾಚಾ ಅಂತಾರೆ, ಸಮಯ ಬಂದಾಗ ಜನರ ಮುಂದೆ ಬಿಚ್ಚಿಡ್ತೀನಿ: ರೆಡ್ಡಿಗೆ ರಾಮುಲು ವಾರ್ನಿಂಗ್‌

    – ಡಿಕೆಶಿಯಿಂದ ಆಪರೇಷನ್‌ ಆರೋಪದ ಬಗ್ಗೆ ರಾಮುಲು ಹೇಳಿದ್ದೇನು?

    ಬಳ್ಳಾರಿ: ಆ ವ್ಯಕ್ತಿ ನನ್ನನ್ನ ಒಬ್ಬ ಕ್ರಿಮಿನಲ್‌ ರೀತಿ ಬಿಂಬಿಸಲು ಹೊರಟಿದ್ದಾರೆ. ನನ್ನ ಮೇಲೆ ಒಂದೇ ಒಂದು ಕ್ರಿಮಿನಲ್‌ ಕೇಸ್‌ ಇಲ್ಲ. ಆದ್ರೆ ನನ್ನ ವಿರುದ್ಧ ಆರೋಪ ಮಾಡಿದವರು ಕ್ರಿಮಿನಲ್ ಬ್ಯಾಗ್ರೌಂಡ್‌ ಬಗ್ಗೆ ಸಾಚಾರಂತೆ ಮಾತಾಡ್ತಾರೆ. ಆ ವ್ಯಕ್ತಿಯ ದಾಖಲೆಗಳು ನನ್ನ ಬಳಿಯಿದೆ. ಸಮಯ ಬಂದಾಗ ಸಾಕ್ಷಿ ಸಮೇತ ಜನರ ಮುಂದೆ ಬಿಚ್ಚಿಡ್ತೀನಿ ಅಂತ ಮಾಜಿ ಸಚಿವ ಶ್ರೀರಾಮುಲು ಅವರು ಪರೋಕ್ಷವಾಗಿ ಜನಾರ್ದನ ರೆಡ್ಡಿ ಅವರಿಗೆ ಎಚ್ಚರಿಕೆ ಕೊಟ್ಟರು.

    ಬಳ್ಳಾರಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಶ್ರೀರಾಮುಲು ಜನಾರ್ದನ ರೆಡ್ಡಿ ಆರೋಪಗಳಿಗೆ ಕೌಂಟರ್‌ ಕೊಟ್ಟಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿಯನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಕರೆದುಕೊಳ್ಳುವ ಸಂಬಂಧ ಮಾತುಕತೆ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿಯನ್ನ ಮಟ್ಟ ಹಾಕೋದಕ್ಕೆ ನಾನ್ಯಾರು? ಕಾಂಗ್ರೆಸ್ ನಲ್ಲೂ ವಾಲ್ಮೀಕಿ ಸಮುದಾಯದ ನಾಯಕರಿದ್ದಾರೆ. ನಾನು ಸೋತಿದ್ದರೂ ನನ್ನ ಪಾರ್ಟಿಯಲ್ಲಿ ಪ್ರಬಲವಾಗಿದ್ದೇನೆ. ಸತೀಶ್ ಅವರನ್ನ ತೊಂದ್ರೆ ಕೊಡೋದಕ್ಕೆ ಡಿಕೆಶಿ ನನ್ನ ಬಳಕೆ ಮಾಡಿಕೊಳ್ತಾರೆ ಅನ್ನೋದು ಸುಳ್ಳು ಸೃಷ್ಟಿ ಎಂದು ಸ್ಪಷ್ಟನೆ ನೀಡಿದ್ದಾರೆ.

    ಮೊನ್ನೆ ನಡೆದಂತ ಕೋರ್ ಕಮಿಟಿಯಲ್ಲಿ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಸಭೆ ಕರೆದಿದ್ರು. ಸಂಜೆ 7 ಗಂಟೆಗೆ ಸಭೆ ಆರಂಭವಾಗಿತ್ತು. ಆ ಬಳಿಕ ಬೇರೆ ಬೇರೆ ವಿಚಾರ ಜಿಲ್ಲಾ ಅಧ್ಯಕ್ಷರು, ಸಂಘಟನೆ ವಿಚಾರಗಳ ಬಗ್ಗೆ ಚರ್ಚೆ ಆಯಿತು. ಈ ವೇಳೆ ಒಬ್ಬರು ನನ್ನತ್ತ ಅಸಹ್ಯವಾಗಿ ನೋಡಿ ಸಂಡೂರು ಸೋಲಲು ನೀನೇ ಕಾರಣ ಅಂತ ಅರೋಪ ಮಾಡಿದ್ರು. ನಾನು ಇದು ಸರಿ ಅಲ್ಲ ಎಂದು ಹೇಳಿದೆ. ಶಿಗ್ಗಾಂವಿ ಜೊತೆಗೆ ಸಂಡೂರಿನಲ್ಲೂ ಕೆಲಸ ಮಾಡಿದ್ದೇನೆ ಅಂತ ಹೇಳಿದೆ. ಈ ರೀತಿ ಹೇಳಿದ್ರೆ ಕಳಂಕ ಹೊತ್ತುಕೊಂಡಂತೆ ಆಗುತ್ತದೆ ಅಂತ ಹೇಳಿದೆ. ಅದಕ್ಕೆ ಆ ವ್ಯಕ್ತಿಗೆ ನೀವು ಸರಿಯಿಲ್ಲ, ಡಬಲ್‌ ಗೇಮ್‌ ಆಡ್ತೀರಿ ಎಂದು ಗಟ್ಟಿಯಾಗಿ ವಾದಿಸಿದೆ ಎಂದರು.

    ಮುಂದುವರಿದು… ಕಳಂಕ ಇಲ್ಲದೇ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಇದನ್ನ ಸ್ಪಷ್ಟವಾಗಿ ಹೇಳಿದೆ, ನನಗೆ ಅಪಮಾನ ಮಾಡ್ತಿದ್ದೀರಿ. ಎರಡು ಬಾರಿ ಸೋತಿದ್ದೇನೆ. ಗಾಯದ ಮೇಲೆ ಬರೆ ಎಳೆಯಬೇಡಿ ಎಂದು ಸಭೆಯಿಂದ ಎದ್ದು ಹೋಗಲು ಮುಂದಾದೆ, ಆಗ ನಮ್ಮ ನಾಯಕರು ಇದು ಶೋಭೆಯಲ್ಲ ಎಂದು ನನ್ನ ಸಮಾಧಾನ ಮಾಡಿದ್ರು ಎಂದು ಹೇಳಿದರು.

    ರಾಜ್ಯಾಧ್ಯಕ್ಷರು ನನ್ನ ರಕ್ಷಣೆಗೆ ನಿಲ್ಲಬೇಕಿತ್ತು. ಅದ್ರೆ ಸಂಪೂರ್ಣ ಸೋಲು ನಿನ್ನಿಂದಲೇ ಆಗಿದೆ ಎಂದಾಗಲೂ ಸುಮ್ಮನಿದ್ರು ರಕ್ಷಣೆ ಬರಲಿಲ್ಲ. ನಾನೇನು ಮಾಡಲಿ ಎಂದು ರಾಜ್ಯಾಧ್ಯಕ್ಷ ಹೇಳಿದ್ರು. ಆಗ ಸದಾನಂದಗೌಡ ಮಾತಾಡಿದ್ರು, ನಾನೇ ಸಂಡೂರಿಗೆ ಹೋಗಿ ಬಂದಿದ್ದೇನೆ ಅಂದ್ರು. ಆಗ ಉಸ್ತುವಾರಿ ತಮ್ಮ ಮಾತು ವಾಪಾಸ್ ತಗೋತೀನಿ ಅಂದ್ರು. ಜನಾರ್ದನರೆಡ್ಡಿ ಮಾತು ಕೇಳಿಕೊಂಡು, ಸುಳ್ಳಿನ ಕೋಟೆ ಕಟ್ಟಿದ್ದಾರೆ. ಬಂಗಾರು ಹನುಮಂತು ಮಾತು ಕೇಳಿ ಆರೋಪ ಮಾಡಿದ್ದಾರೆ ಎಂದು ನೇರಾ ನೇರಾ ಆರೋಪ ಮಾಡಿದರು.

    ಅಲ್ಲೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದಾಗ ನಾನು ವಾಪಸ್ ಬಂದೆ. ಈಗ ಮಾಧ್ಯಮದಲ್ಲಿ ಬಂದಾಗ ನಾನು ಮಾತನಾಡಿದೆ. ನನ್ನ ವಿರುದ್ಧ ಹೇಳಿಕೆ ನೀಡಿದಾಗಲೂ ನಾನು ಮಾತನಾಡದೇ ಇದ್ದರೆ ತಪ್ಪಿತಸ್ಥನಾಗುತ್ತೇನೆ. ಏಕೆಂದರೆ ನನ್ನ ಪಕ್ಷ ನನಗೆ ತಾಯಿ ಇದ್ದಂತೆ, ತಾಯಿಗೆ ದ್ರೋಹ ಮಾಡೋ ಕೆಲಸ ಮಾಡಲ್ಲ. ಆ ಸಂಸ್ಕೃತಿಯನ್ನ ನಮ್ಮ ಹಿರಿಯರೂ ನನಗೆ ಹೇಳಿಕೊಟ್ಟಿಲ್ಲ ಎಂದು ಭಾವುಕರಾದರು.

    ಇನ್ನೂ ಪಕ್ಷ ಬಿಡ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನನಗೆ ತುಂಬ ಜನ ಈ ಪ್ರಶ್ನೆ ಕೇಳಿದ್ರು, ನಾನು ಪಕ್ಷ ತೊರೆಯಲ್ಲ. ಪ್ರಧಾನಿಗಳನ್ನ, ವರಿಷ್ಠರನ್ನ ಭೇಟಿ ಮಾಡ್ತೀನಿ ಅಂತ ಹೇಳಿದೆ. ಪ್ರಧಾನಿ, ಅಮಿತ್ ಶಾ ಅವರ ವಿಶ್ವಾಸ ಕಳೆದುಕೊಳ್ಳಲ್ಲ ಎಂದು ಹೇಳಿದೆ. ಎಲ್ಲಾ ಕೇಂದ್ರ ನಾಯಕರಿಗೆ ತಿಳಿಸ್ತೇನೆ ಎಂದು ಹೇಳಿದೆ. ಸುಳ್ಳು ಬಲಾಢ್ಯರ ಕೈಯಲ್ಲಿದ್ದಾಗ ಅದು ಸತ್ಯ ಆಗ್ತದೆ. ಸುಳ್ಳಿನ ಮುಂದೆ ಸತ್ಯ ಸೋಲುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

    ಈತನೇ ಗೆಲ್ಲಿಸಿಬಿಟ್ನಾ?
    ನಮ್ಮದು ಪೊಲಿಟಿಕಲ್‌ ಫ್ಯಾಮಿಲಿ, ನಾನು ಹಾದಿ-ಬೀದಿಯಿಂದ ಬಂದವನಲ್ಲ. ನಮ್ಮ ಮಾವನವರಿಂದ, ಅಜ್ಜಿ ಕಾಲದಿಂದಲೂ ರಾಜಕೀಯದಲ್ಲಿದ್ದೀನಿ. ಹೋರಾಟದಿಂದ ಮೇಲೆ ಬಂದಿದ್ದೇನೆಯೇ ಹೊರತು, ಯಾರದ್ದೋ ಕೃಪಾಕಟಾಕ್ಷದಿಂದ ಮೇಲೆ ಬಂದಿಲ್ಲ. ನಮಗೆ ಪಕ್ಷದ ಕ್ರೆಡಿಬಲಿಟಿ ಮುಖ್ಯವೇ ಹೊರತು. ಸೋಲು-ಗೆಲುವಲ್ಲ. ಮೊಣಕಾಲ್ಮೂರಿನಲ್ಲಿ ಮ್ಯಾಜಿಕ್ ಮಾಡಿ 43,000 ವೋಟ್‌ನಿಂದ ಗೆಲ್ಲಿಸಿದ್ದೀನಿ ಎಂದು ಹೇಳಿದ್ದಾರೆ. ಆಗ ಪಕ್ಷ ಎರಡೂ ಕಡೆ ನಿಲ್ಲಲು ಅವಕಾಶ ಮಾಡಿಕೊಟ್ಟಿತು. ಏನೂ ಇಲ್ಲದೇ ಈತ ಮ್ಯಾಜಿಕ್‌ ಮಾಡಿ ಗೆಲ್ಲಿಸಿಬಿಡ್ನಾ? ಈತನೇ ಗೆಲ್ಲಿಸಿಬಿಟ್ನಾ? ಯಾರೂ ಯಾರನ್ನೂ ಗೆಲ್ಲಿಸಿಲ್ಲ, ಸೋಲಿಸಿಲ್ಲ. 2018ರಲ್ಲಿ ರಾಮುಲು ಅಲ್ಲಿ ನಿಂತಿದ್ದಕ್ಕೆ 6 ಕ್ಷೇತ್ರದಲ್ಲಿ ಗೆದ್ವಿ. ರಾಮುಲು ಪ್ರಭಾವದಿಂದಲೇ ಅಲ್ಲಿ ಅಷ್ಟು ಸ್ಥಾನ ಬಂದ್ವು ಎಂದು ಹೆಸರು ಹೇಳದೆಯೇ ಜನಾರ್ದನ ರೆಡ್ಡಿ ವಿರುದ್ಧ ಕಿಡಿ ಕಾರಿದರು.

    ಎಲ್ಲದಕ್ಕಿಂತ ಸ್ವಾಭಿಮಾನ ದೊಡ್ಡದು ಅದಕ್ಕೆ ನಾನು ಪಾರ್ಟಿ ಬಿಡೀನಿ ಅಂತ ಹೇಳಿದ್ದೆ. ಜನಾರ್ದನರೆಡ್ಡಿಗೆ ಸುಪ್ರೀಂ ಕೋರ್ಟ್ ಬಳ್ಳಾರಿಗೆ ನಿಷೇಧ ಹೇರಿದಾಗ ಪಾರ್ಟಿ ಬೆಳೆಸಿದ್ದು ನಾನು. ನು 6 ಬಾರಿ ಶಾಸಕನಾಗಿದ್ದೇನೆ, ಜನಾರ್ದನರೆಡ್ಡಿ ಒಂದು ಬಾರಿ ಆಗಿದ್ದಾನೆ. ಹಿಂದೆ ಎನ್‌ಡಿಎ ಸರ್ಕಾರ ಇದ್ದಾಗ, ನಾನು ಸಂದನಾಗಿದ್ದೆ. ಆಗ ರೆಡ್ಡಿ ಜೈಲಿನಲ್ಲಿದ್ದರು. ಜೈಲಿನಲ್ಲಿದ್ದಾಗ ಅವರನ್ನ ಹೊರ ತರೋದಕ್ಕೆ ಸಾಕಷ್ಟು ಪ್ರಯತ್ನಿಸಿದೆ. ಎಲ್ಲರೂ ಸೇರಿ ಪಾರ್ಟಿ ಕಟ್ಟಿದ್ದೇವೆ. ಜನಾರ್ದನರೆಡ್ಡಿ 2018ರಲ್ಲಿ ಜೈಲಿನಿಂದ ಮೊದಲ ಬಾರಿಗೆ ಬಳ್ಳಾರಿಗೆ ಬಂದಿದ್ರು. ಆಗ ನಾನು ಮಂತ್ರಿ ಇದ್ದೆ. ಆಗ 25,000 ಜನರನ್ನ ಸೇರಿಸಿ ಭವ್ಯ ಸ್ವಾಗತ ಮಾಡಿ ಕರೆತಂದಿದ್ದು ನಾನು. ಮೊನ್ನೆ ಬಂದಾಗ ಅವರನ್ನ ಸ್ವಾಗತಿಸಲು ಬಂದಿಲ್ಲ ಅನ್ನೋದು ಕೋಪ ಎಂದು ವ್ಯಂಗ್ಯವಾಡಿದ್ರು.

  • ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರೆಡ್ಡಿ-ರಾಮುಲು

    ಹಲವು ವರ್ಷಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ರೆಡ್ಡಿ-ರಾಮುಲು

    – ಬಿಜೆಪಿ ಗೆಲುವಿಗೆ ಪಕ್ಷವನ್ನು ಗಟ್ಟಿಯಾಗಿ ಕಡ್ತೀವಿ ಎಂದ ದೋಸ್ತ್

    ಬಳ್ಳಾರಿ: ಉಪಚುನಾವಣೆ ಹೊತ್ತಲ್ಲೇ ಹಲವು ವರ್ಷಗಳ ಬಳಿಕ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ನಾಯಕರು, ಇಂದಿನಿಂದ ಒಂದು ದಿನವನ್ನೂ ನಾವು ವ್ಯರ್ಥ ಮಾಡಲ್ಲ. ನಾವು ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದೇವೆ. ಬಿಜೆಪಿ ಯಾವ ರೀತಿ ಶಕ್ತಿಶಾಲಿಯಾಗಿತ್ತೋ ಹಾಗೇ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ಇಂದಿನಿಂದಲೇ ನಾವು ಪ್ರಚಾರ ಕಾರ್ಯ ಆರಂಭಿಸ್ತೇವೆ. ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಭ್ರಷ್ಟಾಚಾರ ಆಗಿರೋದು ಜಗಜ್ಜಾಹೀರಾಗಿದೆ. ಭ್ರಷ್ಟಾಚಾರ, ಅತ್ಯಾಚಾರ, ಭೂ ಕಬಳಿಕೆಯನ್ನ ಜನರು ನೋಡಿದ್ದಾರೆ. ನಮ್ಮ ಅಭ್ಯರ್ಥಿ ಬಂಗಾರು ಹನುಮಂತ ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನ ಗಟ್ಟಿಯಾಗಿ ಕಟ್ತೇವೆ ಎಂದು ಶಪಥ ಮಾಡಿದ್ದಾರೆ.

    ದಿವಾಕರ್ ಕೂಡಾ ಪ್ರಬಲ ಆಕಾಂಕ್ಷಿ ಆಗಿದ್ರು. ಇದು ಪಾರ್ಟಿ ತೀರ್ಮಾನ. ಹನುಮಂತು ಗೆಲುವು ಪಾರ್ಟಿ ಗೆಲುವಾಗ್ತದೆ. ಬಿಜೆಪಿ ಸಂಡೂರಿನಲ್ಲಿ ಗೆಲ್ಲಬೇಕು ಅನ್ನೋ ವಿಶ್ವಾಸದಿಂದ ಪ್ರಯತ್ನ ಮಾಡಿದ್ವಿ. ಈ ಬಾರಿ ವಾತಾವರಣ ಇದೆ ನಾವು ಗೆಲ್ತೇವೆ

    ವಾಲ್ಮೀಕಿ ಹಣ ಬಳಕೆ ಮಾಡಿ ಲೋಕಸಭೆ ಗೆದ್ದಿದ್ದಾರೆ. ನಾಗೇಂದ್ರ ಭ್ರಷ್ಟಾಚಾರ ಮಾಡಿ ಜೈಲಿಗೋಗಿದ್ದಾರೋ ಅಥವಾ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೊ? ಅಷ್ಟು ಟಾಪ್ ಆಗಿದ್ದಾನೆ. ನಾಗೇಂದ್ರನ ರೋಷಾವೇಷ ನೋಡಿದ್ರೆ ನಗುಬರುತ್ತೆ ಎಂದು ವ್ಯಂಗ್ಯವಾಡಿದ್ದಾರೆ.

    ಪಕ್ಷದ ಹಿರಿಯರ ಆದೇಶದಂತೆ ಸಂಡೂರಿನಲ್ಲಿ ಮನೆ ಮಾಡಿದ್ದೇನೆ. ಕಳೆದ ಒಂದು ವಾರದಿಂದ ನಿರಂತರವಾಗಿ ಸಭೆ ಮಾಡ್ತಿದ್ದೇನೆ. ಈ ಬಾರಿ ಬಿಜೆಪಿ ಗೆಲ್ಲಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ತುಕಾರಾಂ ನಾಲ್ಕು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ. ನಾನು ಮಾಡಿರುವ ರಸ್ತೆಗಳೇ ಇದುವರೆಗೂ ಇದೆ. ನಾವು ಅಧಿಕಾರಕ್ಕೆ ಬಂದ್ರೆ ದೊಡ್ಡಮಟ್ಟದ ಅಭಿವೃದ್ಧಿ ನಿರೀಕ್ಷೆ ಮಾಡಬಹುದು. ಸ್ವರ್ಗದಂತೆ ಸಂಡೂರು ನಿರ್ಮಾಣ ಮಾಡಲು ನಾನು ಜನರಲ್ಲಿ ಬಿಚ್ಚಿಟ್ಟಿದ್ದೇನೆ ಬಂಗಾರು ಹನುಮಂತ ದೊಡ್ಡ ಮತಗಳ ಅಂತರದಿಂದ ಗೆಲ್ಲಲ್ಲಿದ್ದಾರೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

  • ದ್ವೇಷದ ರಾಜಕಾರಣ ಮಾಡೋ ಕಾಂಗ್ರೆಸ್ಸಿನ ಅಂತ್ಯಕಾಲ ಆರಂಭವಾಗಿದೆ: ರಾಮುಲು

    ದ್ವೇಷದ ರಾಜಕಾರಣ ಮಾಡೋ ಕಾಂಗ್ರೆಸ್ಸಿನ ಅಂತ್ಯಕಾಲ ಆರಂಭವಾಗಿದೆ: ರಾಮುಲು

    ಬೆಂಗಳೂರು: ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ದ್ವೇಷ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.

    ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ (Narendra Modi) ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರ್ಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಪ್ರಕರಣಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರ್ಕಾರ ಎಂದು ಟೀಕಿಸಿದರು.

    ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ (Ayodhya) ಮಹರ್ಷಿ ವಾಲ್ಮೀಕಿ ದೇವಾಲಯದ ಬಗ್ಗೆ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದರು. ಮೋದಿಜೀ ಅವರು ಅಯೋಧ್ಯೆ ವಿಮಾನ ನಿಲ್ದಾಣವನ್ನು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದೇನೆ, ಆಹ್ವಾನ ಬರದಿದ್ದರೂ ಅಯೋಧ್ಯೆಗೆ ತೆರಳುತ್ತೇನೆ – ಕಾಂಗ್ರೆಸ್‌ ಸಚಿವ

    ಶ್ರೀರಾಮಮಂದಿರ ನಿರ್ಮಾಣದ ಕುರಿತು ಸಂತಸ ಸೂಚಿಸಿ ದೇಶದ 125 ಕೋಟಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಅಲ್ಲದೆ ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.

  • ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    ದಾವಣಗೆರೆ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂಬ ನೋವಿದೆ ಅವರಿಗಿದೆ. ನಾನು ಹಿಂದೆ ಸರಿಯುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು (SriRamulu) ಮೀಸಲಾತಿ ಕೊಡಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದಾರೆ.

    Prasannananda swamiji

    ವಿಜಯನಗರ (Vijayanagar) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ಮಾತನಾಡಿದ ಅವರು, ಪರಮ ಪೂಜ್ಯ ಪ್ರಸನ್ನಾನಂದಪುರಿ ಶ್ರೀಗಳು (Prasannananda Puri Sri) ಕಳೆದ ಮೂರು ತಿಂಗಳಿನಿಂದ ಧರಣಿ ಮಾಡುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಎಂಬ ನೋವು ಅವರಿಗಿದೆ. ಕರ್ನಾಟಕದಲ್ಲಿ ಬೇರೆ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿವೆ. ಪರಮಪೂಜ್ಯರ ಮೀಸಲಾತಿ ಹೋರಾಟ ಮಾಡುತ್ತಿರುವ ಬಗ್ಗೆ ಸಮುದಾಯಕ್ಕೆ ನೋವು ಇದೆ, ಸಮುದಾಯಕ್ಕೆ ನೋವು ಬಂದಾಗ ನಾನು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದಿದ್ದಾರೆ.  ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ನಾನು ಅಕ್ಟೋಬರ್ 8 ರಂದು ಸರ್ವ ಪಕ್ಷ ಸಭೆ ಕರೆಯುತ್ತಿದ್ದೇವೆ, ಅದರಲ್ಲಿ ಜೆಡಿಎಸ್ (JDS) ಕಾಂಗ್ರೆಸ್ (Congress) ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರಿರುತ್ತಾರೆ. ಅಲ್ಲಿ ತೀರ್ಮಾನ ತೆಗೆದುಕೊಂಡು ಎಸ್‍ಸಿಗೆ ಶೇ. 18 ಎಸ್‍ಟಿಗೆ 7.5 ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಮೀಸಲಾತಿ ವಿಚಾರದಲ್ಲಿ ನಮ್ಮ ಶಾಸಕರು ನಮ್ಮ ಬೆಂಬಲಕ್ಕಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಯಿಂದ ಬೇರ್ಪಡಿಸಿ ಪರಿಶಿಷ್ಟ ವರ್ಗಗಳ ಸಚಿವಾಲಯ ಮಾಡಿದ್ದಾರೆ. ನಮ್ಮ ಸಮುದಾಯದ ಜನರಿಗೆ ಸೌಲಭ್ಯಗಳು ಸಿಗಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿ ನಮ್ಮ ಸಮುದಾಯಕ್ಕೆ ಕೊಡಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮೇಳೈಸಿದ ದಸರಾ ವೈಭವ – ರಂಗೋಲಿ ಸ್ಪರ್ಧೆಯಲ್ಲಿ ಮಿಂಚಿದ ನಾರಿಯರು

    Live Tv
    [brid partner=56869869 player=32851 video=960834 autoplay=true]

  • ಸಾರಿಗೆ ಸಚಿವರ ಹಿಂಬಾಲಕರಿಂದ ನಡೀತಿದ್ಯಾ ವರ್ಗಾವಣೆ ದಂಧೆ..?

    ಸಾರಿಗೆ ಸಚಿವರ ಹಿಂಬಾಲಕರಿಂದ ನಡೀತಿದ್ಯಾ ವರ್ಗಾವಣೆ ದಂಧೆ..?

    ಬೆಂಗಳೂರು: ಸಾರಿಗೆ ಸಚಿವರಿಗೆ ಇಲಾಖೆ ಬೇಡವಾದ ಕೂಸು ಅನ್ನೋ ಆರೋಪ ಮೊದಲಿನಿಂದಲೂ ಇದೆ. ಒಲ್ಲದ ಮನಸಲ್ಲೇ ಇಲಾಖೆ ವಹಿಸಿಕೊಂಡ ಸಚಿವರು ತಮ್ಮ ಭಟ್ಟಂಗಿಗಳಿಗೆ ನಿಗಮಗಳನ್ನ ವಹಿಸಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸಾರಿಗೆ ಸಚಿವರ ಕಚೇರಿಯಲ್ಲಿ ನಡೆಯುತ್ತಿರೋ ವರ್ಗಾವಣೆ ಭ್ರಷ್ಟಾಚಾರದ ಆರೋಪವಾಗಿದೆ.

    ರಾಜ್ಯ ಸರ್ಕಾರದ ಅತ್ಯಂತ ಪ್ರಭಾವಿ ಸಚಿವರಲ್ಲೊಬ್ಬರಾದ ಶ್ರೀರಾಮುಲುಗೆ ತಮ್ಮ ಸಾರಿಗೆ ಇಲಾಖೆ ಮೇಲೆ ಅದ್ಯಾಕೋ ಮೋಹ ಕಡಿಮೆ. ಸಚಿವರು ಸಾರಿಗೆ ನಿಗಮಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೂ ಕಡಿಮೆ. ಸಚಿವರ ಈ ವರ್ತನೆ ಈಗ ಅವರ ಹಿಂಬಾಲಕರಿಗೆ ಹಣ ಮಾಡಿಕೊಳ್ಳೋ ದಾರಿಯಾಗಿದ್ಯಾ ಅನ್ನೋ ಅನುಮಾನಕ್ಕೆ ಕಾರಣವಾಗಿದೆ. ಕಾರಣ ನಾಲ್ಕೂ ಸಾರಿಗೆ ನಿಗಮಗಳಲ್ಲಿ ಎಲ್ಲಾ ವರ್ಗಾವಣೆ ನೇರವಾಗಿ ಸಚಿವರ ಕಚೇರಿಯಿಂದಲೇ ನಡೆಯಲಾರಂಭಿಸಿದೆ.

    ಈ ವರ್ಗಾವಣೆಗೆ ಏಂಜಟರುಗಳಿದ್ದು ಹಣ ವಸೂಲಿ ಮಾಡ್ತಿದ್ದಾರೆ. ಪ್ರತೀ ವರ್ಗಾವಣೆಗಿಷ್ಟು ಎಂದು ಹಣ ಪಡೆಯಲಾಗ್ತಿದೆ. ಸಾರಿಗೆ ಸಚಿವರ ಕಚೇರಿಯಿಂದ ಟ್ರಾನ್ಸ್‍ಫರ್ ದಂಧೆಯ ವಾಸನೆ ಬರಲಾರಂಭಿಸಿದೆ ಎಂದು ಕೆಎಸ್‍ಆರ್ಟಿಸಿ ಸ್ಟಾಫ್ ಅಂಡ್ ಫೆಡರೇಷನ್ ನೇರವಾಗೇ ಆರೋಪ ಮಾಡಿದೆ. ಜೊತೆಗೆ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ನೌಕರರ ಮುಖಂಡ ಅನಂತ್ ಸುಬ್ಬಾರಾವ್ ಪತ್ರ ಬರೆದು ಆಗ್ರಹಿಸಿದ್ದಾರೆ. ಇದನ್ನೂ ಓದಿ: CommonwealthGames: ಬೆಳ್ಳಿಗೆ ಮುತ್ತಿಟ್ಟ ಭಾರತದ ವನಿತೆ ತುಲಿಕಾ ಮಾನ್

    ಸಾರಿಗೆ ನಿಗಮದಲ್ಲಿ ಒಂದು ನಿಯಮವಿದೆ. ಯಾವುದೇ ಟ್ರಾನ್ಸ್ ಫರ್ ನಡೆಯೋದಾದ್ರೂ ಅದನ್ನ ನಿಗಮದ ಎಂಡಿಗಳೇ ಮಾಡಬೇಕು. ವರ್ಗಾವಣೆಗೂ ಸಾರಿಗೆ ಸಚಿವರಿಗೂ ಯಾವುದೇ ಸಂಬಂಧ ಇಲ್ಲ. ಹೀಗಿರುವಾಗ ಸಚಿವರ ಕಚೇರಿಯೇಕೆ ಮಧ್ಯ ಪ್ರವೇಶ ಮಾಡ್ಬೇಕು ಎಂದು ನೌಕರರ ಫೆಡರೇಷನ್ ಹೇಳುತ್ತಿದ್ದಾರೆ.

    ಒಟ್ಟಿನಲ್ಲಿ ಸಾರಿಗೆ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಆಗಾಗ ಪ್ರೂವ್ ಆಗ್ತಲೇ ಇದೆ. ಮಾನವೀಯತೆ ದೃಷ್ಟಿಯಿಂದ ಯಾವುದೋ ನೌಕರರಿಗೆ ಟ್ರಾನ್ಸ್ ಫರ್ ಮಾಡಿ ಒಳಿತು ಮಾಡಿದ್ರೆ ಅದ್ರ ಬಗ್ಗೆ ಯಾರ ಆಕ್ಷೇಪಣೆಯೂ ಇಲ್ಲ. ಆದ್ರೆ ನೌಕರರ ಸಂಘಟನೆ ಆರೋಪದಂತೆ ಸಚಿವರ ಗಮನಕ್ಕೆ ಬಾರದೇ ಅವ್ರ ಹಿಂಬಾಲಕರು ಬಡನೌಕರರಿಂದ ಹಣ ಪೀಕಿ ವರ್ಗಾವಣೆ ದಂಧೆಗಿಳಿದಿದ್ರೆ ನಿಜಕ್ಕೂ ಅದು ದುರದೃಷ್ಟಕರ. ಈಬಗ್ಗೆ ಸಚಿವರು ಎಚ್ಚೆತ್ತುಕೊಳ್ಳೋ ಅನಿವಾರ್ಯತೆ ಇದೆ.

    Live Tv
    [brid partner=56869869 player=32851 video=960834 autoplay=true]

  • 10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    10 ವರ್ಷಗಳಿಂದ ಸ್ಥಗಿತಗೊಂಡಿದ್ದ ವಾಡಿಗೆ ಬಸ್ ಸಂಚಾರ – ಗ್ರಾಮಸ್ಥರ ಹರ್ಷ

    ಬೆಂಗಳೂರು: 10 ವರ್ಷಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದ ವಾಡಿಗೆ ಇದೀಗ ಬಸ್ ಸಂಚಾರ ಆರಂಭವಾಗಿದೆ. ಇದನ್ನೂ ಓದಿ: 80 ಕಡೆ ದುರ್ಗಾಮೂರ್ತಿ ಪ್ರತಿಷ್ಠಾಪನೆಗೆ ಮನವಿ – ದಸರಾ ಮಾರ್ಗಸೂಚಿಗಾಗಿ ಎದುರುನೋಡ್ತಿರುವ ಬಿಬಿಎಂಪಿ

    ಹುಮನಾಬಾದ ಮತಕ್ಷೇತ್ರದ ನಮದಾಪೂರು ವಾಡಿ ಗ್ರಾಮಕ್ಕೆ ಸುಮಾರು 10 ವರ್ಷಗಳಿಂದ ಯಾವುದೇ ಬಸ್ ಸಂಚಾರ ಇಲ್ಲದೇ ಸಂಚಾರಕ್ಕೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ತಿಳಿದು ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚಾರವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಮನೆ ಖರೀದಿಸಿದ ರಶ್ಮಿಕಾ – ಹೊಟ್ಟೆ ಕಿಚ್ಚಾಯ್ತಾ ಅಂತ ಪ್ರಶ್ನಿಸಿದ್ಯಾರಿಗೆ?

    ಈ ಗ್ರಾಮಕ್ಕೆ ಬಸ್ ಸಂಚಾರ ಇಲ್ಲದೇ ಸಾರ್ವಜನಿಕರಿಗೆ, ಅದರಲ್ಲೂ ವಿದ್ಯಾರ್ಥಿಗಳಿಗೆ, ಆರೋಗ್ಯ ತಪಾಸಣೆಗೆ ಹೋಗುವವರಿಗೆ, ಮಹಿಳೆಯರಿಗೆ ತುಂಬ ತೊಂದರೆಯಾಗುತ್ತಿದೆ ಎನ್ನುವ ವಿಷಯವನ್ನು ಕಾರ್ಯಕರ್ತರೊರ್ವರಿಂದ ತಿಳಿದು ಮನ ಕಲಕಿತು. ಕೂಡಲೇ ಈ ಗ್ರಾಮಕ್ಕೆ ಬಸ್ ಸಂಚರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾವು ಸೂಚಿಸಿದ ಹಿನ್ನೆಲೆಯಲ್ಲಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರು ಬಸ್ ಅನ್ನು ಶೃಂಗರಿಸಿ ಧನ್ಯವಾದಗಳನ್ನು ತಿಳಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

  • ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ರು ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್..!

    ಮುನಿಸು ಬಿಟ್ಟು ಒಗ್ಗಟ್ಟು ಪ್ರದರ್ಶಿಸಿದ್ರು ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್..!

    – ಭರವಸೆಗಳ ಮಹಾಪೂರವೇ ಹರಿಸಿದ ಶ್ರೀರಾಮುಲು

    ಬೆಳಗಾವಿ/ರಾಯಚೂರು: ಲೋಕಸಭಾ ಚುನಾವಣೆಗೆ ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಈಗ ಒಗ್ಗಟ್ಟಿನ ಪ್ರದರ್ಶನ ಆಗ್ತಿದೆ.

    ಕಳೆದ ಬಾರಿ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ವೈಮನಸ್ಸು ಹೊಂದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ಈಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸತೀಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಕೆಲ ಹೊತ್ತು ಸಮಾಲೋಚನೆ ಮಾಡಿದ್ದಾರೆ. ಬಳಿಕ ಸತೀಶ್ ಜಾರಕಿಹೊಳಿ ಪರ ಲಕ್ಷ್ಮಿ ಹೆಬ್ಬಾಳ್ಕರ್ ಬೆಳಗಾವಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ರು.

    ಪ್ರಚಾರ ಭಾಷಣದ ವೇಳೆಯೂ ಸತೀಶ್ ಜಾರಕಿಹೊಳಿಯರನ್ನೂ ಸೂಕ್ತ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದಾರೆ. ಸತೀಶ್ ಜಾರಕಹೊಳಿ ಮಾತನಾಡಿ, ಇದು ಕಾರ್ಯಕರ್ತರು ಮಾಡುವ ಚುನಾವಣೆ, ಕೇಂದ್ರ ಸರ್ಕಾರದ 7 ವರ್ಷದ ವೈಫಲ್ಯವನ್ನ ಜನರೇ ಹೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಇತ್ತ ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಸಚಿವ ಶ್ರೀರಾಮುಲು ಮೀಸಲಾತಿ ನೀಡುವ ಕುರಿತ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ. ನಾನೇ ಸಮಾಜ ಕಲ್ಯಾಣ ಸಚಿವನಾಗಿದ್ದೇನೆ. ಪರಿಶಿಷ್ಟ ಜಾತಿಯವರಿಗೆ ಶೇ.17, ಪರಿಶಿಷ್ಟ ವರ್ಗಕ್ಕೆ ಶೇ 7.5, ಮೀಸಲಾತಿ, ಲಿಂಗಾಯತರನ್ನ 2 ಎಗೆ, ಕುರುಬರನ್ನ ಎಸ್‍ಟಿಗೆ ಸೇರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಒಂದು ಲೋಕಸಭೆ, ಎರಡು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವು ನಿಶ್ಚಿತ ಅಂದ್ರು.

  • ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ಟಾಂಗ್

    ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ: ಸಿದ್ದರಾಮಯ್ಯ ಹೇಳಿಕೆಗೆ ಶ್ರೀರಾಮುಲು ಟಾಂಗ್

    ರಾಯಚೂರು: ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲಟ್ ಇದ್ದಂತೆ, ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

    ರಾಯಚೂರಿನ ಮಸ್ಕಿಯ ವಟಗಲ್‍ನಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನೆ ಬಳಿಕ ಮಾತನಾಡಿದ ಶ್ರೀರಾಮುಲು ನಮ್ಮ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ, ಕಲ್ಯಾಣ ಕರ್ನಾಟಕಕ್ಕೆ ಒತ್ತು ನೀಡುತ್ತಿದೆ. ಉಪ ಚುನಾವಣೆ ಬಳಿಕ ಮತ್ತಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ. ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಇಬ್ಬರು ಅಥವಾ ಮೂವರು ಮಂತ್ರಿಗಳಾಗುವ ಅವಕಾಶ ಇದೆ ಎಂದು ಹೇಳಿದರು.

    ಈ ವೇಳೆ ನಮ್ಮ ಸಿಎಂ ಯಡಿಯೂರಪ್ಪ ಜೆಟ್ ಪೈಲೆಟ್ ಇದ್ದಂತೆ. ಆ ಜೆಟ್ ಪೈಲಟ್ ನಲ್ಲಿ ಕುಳಿತು ನಾವು ಪ್ರಯಾಣ ಮಾಡುತ್ತಿದ್ದೇವೆ. ಜೆಟ್ ಎಷ್ಟು ವೇಗವಾಗಿ ಹೋಗುತ್ತೋ ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ನಡೆದಿದೆ ಎಂದು ಹೇಳುವ ಮೂಲಕ ರಾಜ್ಯದ ಬಿಎಸ್ ವೈ ಸರ್ಕಾರ ಡಕೋಟಾ ಬಸ್ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

    ಅಲ್ಲದೆ ರಾಜ್ಯದಲ್ಲಿ ಕುರುಬರು ಹಾಗೂ ಪಂಚಮಸಾಲಿಯವರು ಹೋರಾಟ ನಡೆಸಿದ್ದಾರೆ. ಎರಡು ಸಮಾಜದ ಗುರುಗಳ ಪಾದಯಾತ್ರೆ ನಾನು ನೋಡಿದ್ದೇನೆ. ಕುರುಬರಿಗೆ ಎಸ್ ಟಿ ಸೇರಿಸಲು ಕೆಲವು ಕಾನೂನು ತೊಡಕುಗಳು ಇವೆ. ಕುಲಶಾಸ್ತ್ರ ಅಧ್ಯಯನ ನಡೆಯಬೇಕಿದೆ. ಅಧ್ಯಯನದ ಬಳಿಕ ಸರ್ಕಾರ ಅಂತಿಮ ತೀರ್ಮಾನಕ್ಕೆ ಬರುತ್ತೆ. ಪಂಚಮ ಸಾಲಿಗೆ 2 ಎ ನೀಡುವ ವಿಚಾರದ ಬಗ್ಗೆ ಸಿಎಂ ಬಿಎಸ್ ವೈ ಈಗಾಗಲೇ ಅಧ್ಯಯನಕ್ಕಾಗಿ ಆದೇಶ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದಿಂದ ಅಧ್ಯಯನದ ವರದಿ ಬರಲಿ ಎಂದು ಸಚಿವ ಶ್ರೀ ರಾಮುಲು ಹೇಳಿದ್ದಾರೆ.

    ಇದಕ್ಕೂ ಮುನ್ನ ನಡೆದ ಇಂದಿರಾ ಗಾಂಧಿ ವಸತಿ ಶಾಲೆಯ ಉದ್ಘಾಟನಾ ಸಮಾರಂಭದ ವೇದಿಕೆ ಸರ್ಕಾರಿ ಕಾರ್ಯಕ್ರಮದ ಬದಲು ರಾಜಕೀಯ ಮತ ಪ್ರಚಾರ ವೇದಿಕೆಯಾಗಿ ಮಾರ್ಪಟ್ಟಿತ್ತು. ಸಚಿವ ಶ್ರೀರಾಮುಲು, ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮುಂಬರುವ ಮಸ್ಕಿ ಉಪಚುನಾವಣೆಗೆ ಈಗಾಗಲೇ ಮತಯಾಚನೆ ಮಾಡಿದರು. ಮಸ್ಕಿ ಉಪಚುನಾವಣೆ ಬಿಜೆಪಿ ಉಸ್ತುವಾರಿಯಾಗಿರುವ ಶ್ರೀರಾಮುಲು, ಪ್ರತಾಪ್ ಗೌಡರಿಂದ ನಾನು ಸಚಿವನಾಗಿದ್ದೇನೆ ಹಾಗಾಗಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಶಾಸಕ ಪ್ರತಾಪ್ ಗೌಡ ಪಾಟೀಲ್ ತಮ್ಮ ಸಾಧನೆಗಳನ್ನ ಹೇಳಿ ಮತಯಾಚನೆ ಮಾಡಿದರು.