Tag: Sri Rama Sena

  • ಹುಕ್ಕೇರಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ – ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ FIR

    ಹುಕ್ಕೇರಿಯಲ್ಲಿ ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣ – ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ FIR

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀ ರಾಮಸೇನೆ ಕಾರ್ಯಕರ್ತರನ್ನ ಗಿಡಕ್ಕೆ ಕಟ್ಟಿ ಥಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಹಲ್ಲೆಗೊಳಗಾದ ಗೋ ರಕ್ಷಕರು ಹಾಗೂ ಹಲ್ಲೆ ಮಾಡಿದವರ ಇಬ್ಬರ ಮೇಲೂ ಪ್ರಕರಣ ದಾಖಲಿಸಿಕೊಂಡು ಪೊಲೀಸರು (Belagavi Police) ತನಿಖೆ ಆರಂಭಿಸಿದ್ದಾರೆ.

    ಇಂಗಳಿ ಗ್ರಾಮದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಹೋದ ಶ್ರೀರಾಮಸೇನೆ ಕಾರ್ಯಕರ್ತರ (Sri Rama Sena Workers) ಮೇಲಿನ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಡೆತ ತಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಎಫ್‌ಐಅರ್ ದಾಖಲಾಗಿದೆ. ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಶಿವಪುತ್ರ ಸನದಿ ಎಂಬುವರು ದೂರು ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದ ಆರೋಪ ದಾಖಲಾಗಿದೆ. ಇದನ್ನೂ ಓದಿ: ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    Sri Rama Sena activists tied to a tree and attacked for trying to protect cows hukkeri

    ಇನ್ನು ಮರಕ್ಕೆ ಕಟ್ಟಿ ಹಾಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣವನ್ನ ಯಮಕನಮರಡಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಶಿವಪುತ್ರ ಸನದಿ, ಬಾಬುಸಾಬ್ ಮುಲ್ತಾನಿ ಮತ್ತು ಇಂಗಳಿ ಗ್ರಾಮದ ಕೆಲವರ ಮೇಲೆ ದೂರು ದಾಖಲಾಗಿದೆ. ಎರಡೂ ಕಡೆ ದೂರುಗಳನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

    ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿದ ಶ್ರೀರಾಮಸೇನೆ ಪ್ರತಿಭಟನೆಗೆ ಕರೆ ನೀಡಿದೆ. ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಜುಲೈ 3ರಂದು ಇಂಗಳಿ ಚಲೋ ಪ್ರತಿಭಟನೆಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್

    ನಾಲ್ವರ ಬಂಧನ
    ಗೋರಕ್ಷಕರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧ ಬೆಳಗಾವಿ (Belagavi) ಎಸ್‌ಪಿ ಭೀಮಾಶಂಕರ್ ಗುಳೇದ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶ್ರೀರಾಮಸೇನೆ ಕಾರ್ಯಕರ್ತರೇ ಮೊದಲು ಮನೆಗೆ ನುಗ್ಗಿದ್ದು ಬಳಿಕ ಅವರ ಮೇಲಿನ ಹಲ್ಲೆ ನಡೆದಿದ್ದು ದುರಾದೃಷ್ಟಕರ. ಹಲ್ಲೆ ಕುರಿತು ನಾವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದೇವೆ. ಜೂನ್ 28ರಂದು ಗೋ ಶಾಲೆಯಲ್ಲಿ ದನದ ಮಾಲೀಕ ಗೋವು ಬಿಡಿಸಿಕೊಳ್ಳಲು ಹೋಗ್ತಾನೆ. ಆತನನ್ನ ಹಿಂಬಾಲಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನದ ಮಾಲೀಕ ಬಾಬು ಸಾಬ್ ಮನೆಗೆ ನುಗ್ಗುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳಿರ್ತಾರೆ. ಈ ವೇಳೆ ಮಹಿಳೆಯರು ಕಿರುಚಿಕೊಂಡಾಗ ಪಕ್ಕದ ಜನರು ಬರ್ತಾರೆ. ಬಂದು ಎಲ್ಲರನ್ನೂ ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರ ಬಳಿ ಆ ದಿನವೇ ಇಬ್ಬರು ಯಾವುದೇ ತಂಟೆ ತಕರಾರು ಇಲ್ಲ ಅಂತಾ ಬರೆದುಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹಾಸನ ಯುವಜನತೆಯಲ್ಲಿ ಹೃದಯಾಘಾತ – ತನಿಖೆಗೆ ವಿಶೇಷ ಸಮಿತಿ ರಚಿಸಿದ ಸರ್ಕಾರ

    ಇನ್ನೂ ಈ ಘೋರ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿ ನಾಲ್ವರನ್ನು ಬಂಧಿಸಿದ್ದೇವೆ. ನಾಲ್ವರಲ್ಲಿ ಓರ್ವ ಹಿಂದೂ, ಮೂವರು ಮುಸ್ಲಿಮರ ಬಂಧನವಾಗಿದೆ. ಮುಸ್ಲಿಮರು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿಲ್ಲ. ಎಲ್ಲರೂ ಸೇರಿಕೊಂಡು ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಶ್ರೀರಾಮ ಸೇನೆ ಕಾರ್ಯಕರ್ತ ಮಹಾವೀರ್ ಸೊಲ್ಲಾಪುರೆ ಸೇರಿ ಇನ್ನುಳಿದವರ ಮೇಲೆ ಎಫ್‌ಐಆರ್ ದಾಖಲಾಗಿದೆ. ಶಿವಪುತ್ರ ಸನದಿ ಡ್ರೈವರ್‌ನಿಂದ ದೂರು ದಾಖಲಾಗಿದೆ. ಮಹಾವೀರ್‌ಗೆ ಕಲಬುರಗಿಗೆ ಗಡಿ ಪಾರು ಮಾಡಲಾಗಿತ್ತು. ಗಡಿ ಪಾರಾದ ರೌಡಿ ಶೀಟರ್ ಮಹಾವೀರ್ ಇಲ್ಲಿಗ್ಯಾಕೆ ಬಂದಿದ್ದ. ಒಬ್ಬ ರೌಡಿ ಶೀಟರ್‌ಗೆ ಸಂಘಟನೆಯವರು ಯಾಕೆ ಸಪೋರ್ಟ್ ಮಾಡ್ತಿದ್ದಾರೆ. ಇಂತವರ ಪರ ಪ್ರತಿಭಟನೆ ಮಾಡಲು ನಾವು ಅವಕಾಶ ಕೊಡಲ್ಲ ಎಂದು ಎಸ್‌ಪಿ ಶ್ರೀ ರಾಮಸೇನೆ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್

    ಶ್ರೀರಾಮಸೇನೆ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಲು ಹೋಗಿದ್ದು ತಪ್ಪು – ಪರಮೇಶ್ವರ್

    – ಹೊಸಬಾಳೆಯವರ ಹೇಳಿಕೆ ಕಾನೂನು ಬಾಹಿರವಾಗಿದ್ರೆ ಎಫ್ಐಆರ್ ಎಚ್ಚರಿಕೆ

    ಬೆಂಗಳೂರು: ಹುಕ್ಕೇರಿಯ ಇಂಗಳಿಯಲ್ಲಿ ಶ್ರೀರಾಮಸೇನೆ (Sri Rama Sena) ಕಾರ್ಯಕರ್ತರನ್ನು ಥಳಿಸಿದವರ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಪರಮೇಶ್ವರ್ (G Parameshwar) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾತಾಡಿದ ಪರಮೇಶ್ವರ್, ಯಾರೂ ಕಾನೂನು ಕೈಗೆ ತಗೋಬಾರದು. ಕಾನೂನು ಬಾಹಿರ ಚಟುವಟಿಕೆ ಕಂಡು ಬಂದರೆ ಪೊಲೀಸರಿಗೆ ತಿಳಿಸಲಿ. ಪೊಲೀಸರ ಕೆಲಸವೇ ಕಾನೂನು ಕಾಪಾಡೋದು. ಅದು ಬಿಟ್ಟು ಇವರು ಯಾಕೆ ಆ ಕೆಲಸ ಮಾಡೋಕ್ಕೆ ಹೋಗಿದ್ರು? ಅಂತ ಶ್ರೀರಾಮಸೇನೆ ಕಾರ್ಯಕರ್ತರ ನಡೆಯನ್ನು ಪ್ರಶ್ನಿಸಿದರು‌. ಇದನ್ನೂ ಓದಿ: ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    Sri Rama Sena activists tied to a tree and attacked for trying to protect cows hukkeri

    ಇನ್ನು ನೈತಿಕ ಪೊಲೀಸ್ ಗಿರಿ ಮಾಡಬಾರದು. ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ ಯಾರೇ ಮಾಡಿದರೂ ಸರಿಯಲ್ಲ. ಅಂತಹ ಪ್ರಕರಣಗಳನ್ನು ಪೊಲೀಸರು ಇದ್ದಾರೆ, ನೋಡ್ತಾರೆ ಅಂತ ಪರಮೇಶ್ವರ್ ಸ್ಪಷ್ಟ ಪಡಿಸಿದರು.

    ಶಿವಮೊಗ್ಗದಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದಲ್ಲಿ ಯಾರು ಕೃತ್ಯ ಎಸಗಿದ್ದಾರೋ ಅವರ ಮೇಲೆ ಸೂಮೋಟೋ ಕೇಸ್ ದಾಖಲಿಸಿ ಕ್ರಮ‌ ತಗೋತಾರೆ ಅಂದ್ರು. ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

    ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು ಕೊಟ್ಟ ವಿಚಾರ ಬಗ್ಗೆ ಮಾತಾಡಿ, ಪೊಲೀಸರು ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ತಗೋತಾರೆ. ಹೇಳಿಕೆ ಕಾನೂನು ವಿರೋಧಿ ಇದೆಯಾ? ಎಫ್ಐಆರ್ ಮಾಡಬೇಕಾ ಅಂತ ಪೊಲೀಸರು ಪರಿಶೀಲಿಸಿ ಕ್ರಮ ತಗೋತಾರೆ. ಕಾನೂನು ಬಾಹಿರ ಅನಿಸಿದರೆ ಎಫ್ಐಆರ್ ಮಾಡ್ತಾರೆ ಅಂದ್ರು.

  • ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    ಗೋ ರಕ್ಷಣೆ ಮಾಡಲು ಮುಂದಾಗಿದ್ದಕ್ಕೆ ಮರಕ್ಕೆ ಕಟ್ಟಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ

    ಬೆಳಗಾವಿ: ಗೋ ರಕ್ಷಣೆ ಮಾಡಲು ಮುಂದಾದ ಹಿಂದೂ ಕಾರ್ಯಕರ್ತರ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ ಘಟನೆ ಹುಕ್ಕೇರಿ (Hukkeri) ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ.

    ಗೋ ಶಾಲೆಯಿಂದ ಗೋವುಗಳನ್ನು ತೆಗೆದುಕೊಂಡು ಹೋಗಿದ್ದನ್ನು ನೋಡಿ 5 ಮಂದಿ ಶ್ರೀರಾಮ ಸೇನೆಯ (Sri Rama Sene) ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ದಲ್ಲಾಳಿಗಳು ಮರಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬ ಆಚರಣೆ – ಪಂಚಾಯತ್‌ ಸದಸ್ಯ ಅರೆಸ್ಟ್‌

     

    ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಥಳಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ.

    ಈ ಬಗ್ಗೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವಿಠ್ಠಲ್ ಗಡ್ಡಿ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ. ಇದು ಖಾನ್ ಸರ್ಕಾರ. ಪೊಲೀಸರಿಗೆ ದೂರು ಕೊಡಲು ಹೋದರೆ ರೇಪ್ ಮಾಡಿದ್ದೀರಿ ಎಂದು ಧಮಕಿ ಹಾಕಿದ್ದಾರೆ. ಕಾನೂನು ರೀತಿಯಲ್ಲಿ ಥಳಿಸಿದವರಿಗೆ ಶಿಕ್ಷೆಯಾಗಬೇಕು. ಸರಿಯಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

  • ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

    ಸುನಿಲ್ ಕುಮಾರ್ ವಿರುದ್ಧ ಸಿಡಿದ ಹಿಂದೂ ಕಾರ್ಯಕರ್ತರು

    ಬೆಂಗಳೂರು: ಹಿಂದೂ ಕಾರ್ಯಕರ್ತರ (Hindu Activists) ಮೇಲೆ ಕಾರ್ಕಳ ಕ್ಷೇತ್ರದಲ್ಲಿ (Karkala Constituency) ಸಚಿವ ಸುನಿಲ್ ಕುಮಾರ್ (Sunil Kumar) ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದಾರೆ.

    ಸಚಿವ ಸುನಿಲ್ ಕುಮಾರ್ ಅವರು ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಇದನ್ನು ಖಂಡಿಸಿ ಶ್ರೀರಾಮ ಸೇನೆಯ (Sri Rama Sena) ಬೆಂಗಳೂರು ವಿಭಾಗ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಟಿಕೆಟ್ ಫೈಟ್ – ಅಂತರ ಕಾಯ್ದುಕೊಂಡ ಹಾಲಿ ಶಾಸಕರು

    ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ನಾಯಕರ ಮೇಲೆ ಪದೇ ಪದೇ ದೌರ್ಜನ್ಯ ನಡೆಯುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಸುನಿಲ್ ಕುಮಾರ್ ವಿರುದ್ಧ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಚುನಾವಣೆಗೆ ಸಮೀಪದಲ್ಲಿ ಡಿಕೆಶಿಗೆ ಶಾಕ್ – 5 ವರ್ಷದಲ್ಲಿ ಎಷ್ಟು ಆಸ್ತಿ ಹೆಚ್ಚಾಗಿತ್ತು? ತನಿಖೆ ಎಲ್ಲಿಯವರೆಗೆ ಬಂದಿದೆ?

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ದೇವಸ್ಥಾನದ ಮೈಕ್‍ನಲ್ಲಿ ಮೊಳಗಿದ ರಾಮಜಪ, ಶಿವನಜಪ

    ಹಾಸನ: ಆಜಾನ್ ವಿರುದ್ಧ ಶ್ರೀರಾಮಸೇನೆ ಸಂಘಟನೆ ವತಿಯಿಂದ ಹಾಸನದ ದೇವಸ್ಥಾನಗಳಲ್ಲಿ ರಾಮಜಪ, ಶಿವನಜಪ ಹಮ್ಮಿಕೊಳ್ಳಲಾಗಿದೆ.

    ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ, ಸಂಗಮೇಶ್ವರ ದೇವಾಲಯದಲ್ಲಿ ಇಂದಿನಿಂದ ಮೈಕ್ ಮೂಲಕ ದೇವರ ಜಪ ಮಾಡುವುದಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಮತ್ತು ಪ್ರಧಾನ ಕಾರ್ಯದರ್ಶಿ ಹೇಮಂತ್ ಬೇಲೂರು ಬೆಳಗ್ಗೆ ಐದು ಗಂಟೆಗೆ ಮೈಕ್ ಮೂಲಕ ರಾಮಜಪ, ಶಿವನಜಪ ಆರಂಭಿಸಿದರು. ಇದನ್ನೂ ಓದಿ:  500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಇನ್ನು ಮುಂದೆ ಪ್ರತಿದಿನ ದೇವಾಲಯದಲ್ಲಿ ಸುಪ್ರಭಾತ, ಭಜನೆ, ರಾಮಜಪವನ್ನು ಮೈಕ್‍ನಲ್ಲಿ ಹಾಕಲಾಗುವುದು ಎಂದು ತಿಳಿಸಿದರು. ನಾವು ಮೈಕ್ ಮೂಲಕ ಸುಪ್ರಭಾತ, ಭಜನೆ, ಜಪ ಮಾಡಬಾರದು ಎಂದರೆ ಬೇರೆ ಧರ್ಮದವರಿಗೂ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.