Tag: Sri Ram Sena

  • ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ನಾನು ಕಲಿತ ಶಾಲೆಯನ್ನ ದತ್ತು ಪಡೆದು ಮಾದರಿ ಶಾಲೆ ಮಾಡುತ್ತೇನೆ: ಪ್ರಮೋದ್ ಮುತಾಲಿಕ್

    ಚಿಕ್ಕೋಡಿ: ಶ್ರೀ ರಾಮಸೇನಾ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕುಟುಂಬದವರ ಶ್ರೀ ಬನಶಂಕರಿ ಫೌಂಡೇಶನ್ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹಸಿರು ಬೋರ್ಡ್ ವಿತರಣಾ ಸಮಾರಂಭ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಜರುಗಿತು.

    ಪಟ್ಟಣದ ಹಳ್ಳದಕೆರಿಯಲ್ಲಿರಯವ ಕೋಟೆ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಟ್ರಸ್ಟ್ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ವಿರಕ್ತ ಮಠದ ಶಿವಬಸವ ಮಹಾಸ್ವಾಮಿಗಳು ಹಾಗೂ ಕ್ಯಾರಗುಡ್ಡದ ಅಭಿನವ ಮಂಜುನಾಥ್ ಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಪ್ರತಿ ವರ್ಗ ಕೊಠಡಿಗಳಿಗೆ ಗ್ರೀನ್ ಬೋರ್ಡ್ ಹಾಗೂ ವಿದ್ಯಾರ್ಥಿಗಳಿಗೆ ಪೆಟ್ ವಾಟರ್ ಬಾಟಲ್‍ಗಳನ್ನ ವಿತರಿಸಿದರು. ಇದನ್ನೂ ಓದಿ: ಪಾಸ್‍ಪೋರ್ಟ್ ಸುಟ್ಟುಹಾಕಿದ್ದಕ್ಕೆ ಪತ್ನಿ ಕತ್ತು ಸೀಳಿದ – ಆಕೆ ಕೈ ಹಿಡಿದು ಇಷ್ಟವಾದ ಹಾಡು ನುಡಿಸಿದ ಪಾಗಲ್ 

    ಈ ಸಂದರ್ಭದಲ್ಲಿ ಮಾತನಾಡಿದ ಮುತಾಲಿಕ್ ಅವರು, ನಮ್ಮ ತಂದೆ ತಾಯಿಗಳ ಸ್ಮರಣಾರ್ಥವಾಗಿ ಕಳೆದ ಎರಡು ವರ್ಷಗಳಿಂದ ನಾನು, ನಮ್ಮ ಸಹೋದರಿ ಹಾಗೂ ಸಹೋದರು ಶ್ರೀ ಬನಶಂಕರಿ ಫೌಂಡೇಶನ್ ಸ್ಥಾಪಿಸಿ ಸಾಮಾಜಿಕ ಕಾರ್ಯ ಮಾಡುತ್ತಿದ್ದೇವೆ. ಈ ವರ್ಷ ನಾವು ಕಲಿತ ಶಾಲೆಯ ಪ್ರತಿ ಕೊಠಡಿಗೆ ಆಧುನಿಕ ಹಸಿರು ಫಲಕ ನೀಡಿದ್ದೇವೆ ಎಂದು ವಿವರಿಸಿದರು.

    ಕೋಟೆ ಭಾಗ ಶಾಲೆಯು ಶತಮಾನೋತ್ಸವ ಗತಿಸಿ ನಮ್ಮೆಲ್ಲರಿಗೆ ವಿದ್ಯಾದಾನ ಮಾಡಿದ ಈ ಶಾಲೆಯನ್ನು ಇಂದಿನಿಂದ ದತ್ತು ಪಡೆದು ತಾಲೂಕಿನಲ್ಲಿ, ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಮಾಡುವ ಗುರಿ ಹೊಂದಿದ್ದೇವೆ. ಶಾಲೆ ಕಟ್ಟಡ ಸೇರಿದಂತೆ ಶಾಲೆಯ ಅಭಿವೃದ್ಧಿಗೆ ನಮ್ಮ ಟ್ರಸ್ಟ್ ವತಿಯಿಂದ ಶ್ರಮಿಸುತ್ತೇವೆ ಎಂದು ಭರವಸೆ ಕೊಟ್ಟರು. ಇದನ್ನೂ ಓದಿ:  ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ 

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ವಹಿಸಿಕೊಂಡಿದ್ದರು. ಪುರಸಭೆ ಅಧ್ಯಕ್ಷ ಎ.ಕೆ.ಪಾಟೀಲ್, ಉಪಾಧ್ಯಕ್ಷ ಆನಂದ್ ಗಂಧ, ಟ್ರಸ್ಟ್‌ನ ಸದಸ್ಯರಾದ ವಿನೋದ್ ಮುತಾಲಿಕ್, ಅನಂತ್ ಮುತಾಲಿಕ್, ತೇಜೆಶ್ವಿನಿ ಜೋಶಿ, ಸಂಜೀವ್ ಮುತಾಲಿಕ್ ಅರವಿಂದ್ ದೇಶಪಾಂಡೆ, ಮುಖ್ಯೋಪಾಧ್ಯಾಯೆ ಎಸ್.ಎಸ್.ನೋಗನಿಹಾಳ, ಮಂಜುಳಾ ಅಡಿಕೆ, ಮಹಾಂತೇಶ್ ಸಂಭಾಳ ಮುಂತಾದವರು ಉಪಸ್ಥಿತರಿದ್ದರು.

    Live Tv

  • ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು: ಮುತಾಲಿಕ್

    ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು: ಮುತಾಲಿಕ್

    ಕೊಪ್ಪಳ: ಮಸೀದಿ ಜಾಗದಲ್ಲಿ ಹಿಂದೂ ದೇವಸ್ಥಾನಗಳು ಪತ್ತೆಯಾಗುತ್ತಿದ್ದು, ಮುಸ್ಲಿಂ ಸಮುದಾಯದ ಮುಖಂಡರು ಸೌಹಾರ್ದಯುತವಾಗಿ ಆ ಸ್ಥಳಗಳನ್ನು ಹಿಂದೂಗಳಿಗೆ ಒಪ್ಪಿಸಿದರೆ ಮಾದರಿಯಾಗುತ್ತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಮಳಲಿ ಮಸೀದಿ ಜೀರ್ಣೋದ್ಧಾರದ ವೇಳೆ ದೇವಸ್ಥಾನ ಪತ್ತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಶಾಸ್ತ್ರೋಕ್ತವಾಗಿ ದೇವಸ್ಥಾನ ಪತ್ತೆ ಮಾಡಿರುವುದು ಸ್ವಾಗತಾರ್ಹವ. ಈ ಹಿಂದೆಯೇ ಇದು ದೇವಸ್ಥಾನ ಅಂತಾ ಗೊತ್ತಿತ್ತು. ಅಧಿಕೃತವಾಗಿ ಮತ್ತು ಶಾಸ್ತ್ರೋಕ್ತವಾಗಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಆ ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠವಿತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ವಿವರಿಸಿದರು. ಇದನ್ನೂ ಓದಿ: ಬಸವಣ್ಣ ಐಕ್ಯ ಸ್ಥಳ ಕೂಡಲಸಂಗಮಕ್ಕೆ ರಾಜ್ಯಪಾಲರ ಭೇಟಿ 

    ಮುಸ್ಲಿಂ ಸಮುದಾಯ ಹಠ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು. ದಾಳಿ ಮಾಡಿ, ದೇವಸ್ಥಾನ ಮಸೀದಿ ಮಾಡಿರುವ ದಾಳಿಕೋರರಿಗೆ ದೇಶದ ಮುಸ್ಲಿಮರಿಗೆ ಸಂಬಂಧವಿಲ್ಲ. ಇಲ್ಲಿನ ಹಿಂದೂ ಸಮಾಜಕ್ಕೆ ಗೌರವ ನೀಡಿ, ಮುಸ್ಲಿಮರು ದೇವಸ್ಥಾನ ಬಿಟ್ಟುಕೊಡಬೇಕು. ಮುಸಲ್ಮಾನರು ಸೌಹಾರ್ದತೆಯಿಂದ ಹಿಂದೂಗಳಿಗೆ ಒಪ್ಪಿಸಬೇಕು. ಸರ್ಕಾರ ದತ್ತ ಪೀಠದಲ್ಲಿ ಯಾಕೆ ಅರ್ಚಕರನ್ನು ನೇಮಕ ಮಾಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು.

    ಅಲ್ಲಿನ ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಆ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು. ಇಲ್ಲವಾದರೆ ವಿನಾಕಾರಣ ಗಲಭೆ, ಸಂಘರ್ಷಕ್ಕೆ ಕಾರಣವಾಗಬಾರದು. ಮಳಲಿಯ ದೇವಸ್ಥಾನವನ್ನು ಹಿಂದೂಗಳಿಗೆ ಒಪ್ಪಿಸಿದರೆ ಸೌಹಾರ್ದತೆ ಉಳಿಯುತ್ತದೆ. ಈ ಮೂಲಕ ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ. ಇಲ್ಲವಾದರೆ ಮತ್ತೆ ದ್ವೇಷ, ಸಂಘರ್ಷ, ಕೋರ್ಟ್ ಅಂತಾ ಶುರುವಾಗುತ್ತೆ. ಇದೆಲ್ಲ ಆಗಬಾರದು ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ವಿವರಿಸಿದರು.

    1983ರಲ್ಲಿ ರಾಷ್ಟ್ರಪತಿ ಅವರಿಗೆ ವಿಎಚ್‍ಪಿ ರಾಷ್ಟ್ರೀಯ ಅಧ್ಯಕ್ಷರು ಒಂದು ಮನವಿ ಸಲ್ಲಿಸಿದ್ದರು. ಅಶೋಕ್ ಸಿಂಘಾಲ್ ಅವರು ರಾಷ್ಟ್ರಪತಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಿದ್ದರು. ಸುಮಾರು 30 ಸಾವಿರ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ 3 ದೇವಸ್ಥಾನ ಮಾತ್ರ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದ್ದರು ಎಂದರು.

    ಮಥುರಾ, ಅಯೋಧ್ಯಾ ಮತ್ತು ಕಾಶಿ ದೇವಸ್ಥಾನಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಆಗಿನ ಸರ್ಕಾರ, ಮುಸ್ಲಿಮರು ಇದಕ್ಕೆ ಒಪ್ಪಿರಲಿಲ್ಲ. ಇದೀಗ ಒಂದೊಂದಾಗಿ ದೇವಸ್ಥಾನ ಪತ್ತೆಯಾಗುತ್ತಿವೆ. ಪ್ರತಿಯೊಂದನ್ನೂ ಹೋರಾಟ ಮಾಡಿ ನಾವು ವಾಪಾಸ್ ಪಡೆಯುತ್ತೇವೆ. ಕಾಂಗ್ರೆಸ್‍ಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಹಿಂದೂ ಸಮಾಜ ಜಾಗೃತವಾಗಿದ್ದು, ದೇವಸ್ಥಾನ ವಾಪಾಸ್ ಪಡೆಯುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುನೀಲ್ ಸಂಕ್, ಪ್ರಕಾಶ್ ಹುಕ್ಕೇರಿ ಗೆಲ್ಲುವ ವಿಶ್ವಾಸವಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

    ಬಿಜೆಪಿ, ಸರ್ಕಾರದ ದಿವ್ಯ ನಿರ್ಲಕ್ಷ್ಯ ಕಾಣಿಸುತ್ತಿದೆ. ಬಹುಷ ಅವರು ಎಲೆಕ್ಷನ್ ಸಮಯ ಕಾಯುತ್ತಿದ್ದಾರೇನೋ. ನಮ್ಮಂತಹ ಹೋರಾಟಗಾರರಿಗೆ, ಹಿಂದು ವಾದಿಗಳಿಗೆ, ಪ್ರಮಾಣಿಕರಿಗೆ ರಾಜಕೀಯದ ಬಾಗಿಲು ಮುಚ್ಚಿದೆ ಎಂದು ಹೇಳಿದರು.

     

  • ಮದರಸಾಗಳಲ್ಲಿ ಓದಿದವರು ಹಿಂದೂ ವಿರೋಧಿ, ಭಯೋತ್ಪಾದಕರಾಗಿ ಬರ್ತಾರೆ – ಮುತಾಲಿಕ್ ಕಿಡಿ

    ಮದರಸಾಗಳಲ್ಲಿ ಓದಿದವರು ಹಿಂದೂ ವಿರೋಧಿ, ಭಯೋತ್ಪಾದಕರಾಗಿ ಬರ್ತಾರೆ – ಮುತಾಲಿಕ್ ಕಿಡಿ

    ಧಾರವಾಡ: ಇಡೀ ದೇಶದಲ್ಲಿ 3 ಲಕ್ಷ ಮದರಸಾಗಳಿದ್ದು, ಅಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಮದರಸಾಗಳಲ್ಲಿ ತಯಾರಾಗುವ ವಿದ್ಯಾರ್ಥಿಗಳು ಹಿಂದೂ ವಿರೋಧಿಗಳು, ದೇಶ ವಿರೋಧಿ ಹಾಗೂ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌  ಮುತಾಲಿಕ್ ಹೇಳಿದ್ದಾರೆ.

    Pramod Muthali

    ಧಾರವಾಡದಲ್ಲಿ ಅವರಿಂದು ಮಾತನಾಡಿ, ದೇಶದಲ್ಲಿ ಕುರಾನ್ ಮತ್ತು ಶರಿಯಾ ಮುಸ್ಲಿಂ ಶಿಕ್ಷಣ ಕೊಡುವ ವಿಚಾರವಾಗಿ ಮದರಸಾ ತೆರೆಯಲಾಗಿದೆ. ಆದರೆ ಇಲ್ಲಿ ಹಿಂದೂ ವಿರೋಧಿ ವಿಚಾರಗಳನ್ನು ಅರೆದು ಕುಡಿಸಲಾಗುತ್ತಿದೆ. ಇದರಿಂದ ಅವರು ಮುಂದೆ ಭಯೋತ್ಪಾದಕರಾಗಿ ಹೊರ ಬರ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಹಿಂದೂಗಳಿಗೆ ಬಿಟ್ಟು ಕೊಡುವಂತೆ ಆಗ್ರಹ

    pramod muthalik

    ಪಾಕಿಸ್ತಾನದಲ್ಲೂ ಮದರಸಾ ಬಂದ್: ಮದರಾಗಳಲ್ಲಿ ಓದಿದ ಎಷ್ಟೋ ಮಂದಿ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಪಾಕಿಸ್ತಾನದಲ್ಲೂ ಈಗಾಗಲೇ ಮದರಸಾಗಳನ್ನು ಬಂದ್ ಮಾಡಲಾಗುತ್ತಿದೆ. ಮದರಸಾ ಯಾವ ರೀತಿ ಶಿಕ್ಷಣ ನೀಡುತ್ತಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆರೋಪಿ ನಾಗೇಶ್ ಬಂಧಿಸಿದ ಪೊಲೀಸರಿಗೆ ಆರಗ ಜ್ಞಾನೇಂದ್ರ ಧನ್ಯವಾದ

    ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮದರಸಾಗಳನ್ನು ಬ್ಯಾನ್ ಮಾಡಬೇಕು. ಜೊತೆಗೆ ಹಿಂದೂಗಳ ತೆರಿಗೆ ಹಣದಲ್ಲಿ ಸರ್ಕಾರದಿಂದ ಅನುದಾನ ಪಡೆದು ಬೋಗಸ್ ಆಗಿ ನಡೆಸುತ್ತಿರುವ ಮದರಸಾಗಳ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

  • ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

    ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

    ಚಿಕ್ಕೋಡಿ: ಶ್ರೀರಾಮ ಸೇನೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತ (ಬದನಾಮ್) ಆಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿರುಗೇಟು ನೀಡಿದ್ದಾರೆ.

    nalin kumar kateel

    ಪಬ್ಲಿಕ್ ಟಿವಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, ಕಟೀಲ್ ಅವರ ಈ ಹೇಳಿಕೆ ಸರಿಯಲ್ಲ. ಈಗಾಗಲೇ ಬಿಜೆಪಿ ಪಕ್ಷ ಕಾಂಗ್ರೆಸ್ ಹತ್ತಿರ ಬಂದು ಹಿಂದೂ ಹಿಂದೂತ್ವದ ದೃಷ್ಟಿಯಿಂದ ಉಳಿದಿಲ್ಲ. ಇಂಥ ಹೇಳಿಕೆ ಕೊಟ್ಟು ಕುಖ್ಯಾತರಾಗಬೇಡಿ. ನೀವು ಹಿಂದೂ ಪಕ್ಷ ಅಂತ ಹೇಳಲು ನಮ್ಮಂಥ ಸಂಘಟನೆಗಳೇ ಆಧಾರ. ಶ್ರೀರಾಮ ಸೇನಾ ದೂರ ಮಾಡಿದ್ದಕ್ಕೆ ಮುಂದಿನ ಚುನಾವಣೆಯಲ್ಲಿ ನಿಮಗೆ ಉತ್ತರ ಸಿಗಲಿದೆ. ಇಂಥ ಹೇಳಿಕೆ ಕೊಡದೇ ಮೌನವಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧೆ ಮಾಡುವ ಯಾವುದೇ ಚಿಂತನೆಯಿಲ್ಲ. ನನ್ನನ್ನು ಸೇರಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕೊಟ್ಟರೆ ಬೇಡ ಅನ್ನಲ್ಲ: ಎನ್.ಮಹೇಶ್

    ಇದೇ ವೇಳೆ ಹುಬ್ಬಳ್ಳಿ ಗಲಭೆಕೋರರ ಮೇಲೆ ಜಾಮೀನು ಸಿಗದಂತೆ ಕೋಕಾ ಪ್ರಕರಣ ದಾಖಲಿಸಬೇಕು. ಹುಬ್ಬಳ್ಳಿ ಗಲಭೆ ವ್ಯವಸ್ಥಿತ ಪೂರ್ವ ನಿಯೋಜಿತ ಸಂಚು. ಸ್ಟೇಟಸ್ ಹಾಕದೇ ಇದ್ದರೂ ಗಲಾಟೆ ಮಾಡುತ್ತಿದ್ದರು. ಗುರಿಯಿರುವುದು ಪೊಲೀಸ್ ಠಾಣೆ ಹಾಗೂ ಹಿಂದೂ ಮನೆಗಳು, ಅಂಗಡಿಗಳು ಮಾತ್ರ. ದಂಗೆ ಮಾಡಿ ಗಲಭೆ ಮಾಡಿ ಭಯ ಹುಟ್ಟಿಸುವುದಾಗಿದೆ. ಗಲಾಟೆ, ಗಲಭೆ ಮಾಡಿ ಯಶಸ್ವಿಯಾಗಿದ್ದಾರೆ. ಹಿಂದೂ ಸಮಾಜವನ್ನು ಭಯದ ಮೂಲಕ ಓಡಿಸುತ್ತಿದ್ದಾರೆ. ಸರ್ಕಾರ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

  • ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

    ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ: ಬೊಮ್ಮಾಯಿ

    ಕಲಬುರಗಿ: ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಮೇ 9 ರಿಂದ ಶ್ರೀರಾಮ ಸೇನೆ ಆಜಾನ್ ಸೇ ಆಜಾದಿ ಅಭಿಯಾನ ಪ್ರಾರಂಭಿಸಲು ಸಿದ್ದತೆ ನಡೆಸಿದ ಹಿನ್ನೆಲೆ ರಾಜ್ಯದಲ್ಲಿ ಮಸೀದಿಗಳ ಮೇಲಿನ ಧ್ವನಿವರ್ಧಕ ತೆರುವುಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಜಾನ್ ಬಗ್ಗೆ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶ ಇದೆ ಎಂದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    mosque-loudspeakers

    ಯಾವ ಯಾವ ಸಂದರ್ಭದಲ್ಲಿ ಎಷ್ಟು ಶಬ್ದದ ಡೆಸಿಬಲ್ ಇರಬೇಕು ಅಂತಾ ಸ್ಪಷ್ಟವಾಗಿ ಹೇಳಿದೆ. ಡಿಜಿ ಅವರು ಕೂಡ ಸಕ್ರ್ಯೂಲರ್ ಪಾಸ್ ಮಾಡಿದ್ದಾರೆ. ಠಾಣೆಯಲ್ಲಿ ಶಾಂತಿ ಸಭೆ ನಡೆಸುವುದಕ್ಕೆ ಸೂಚಿಸಲಾಗಿದೆ. ಮಹಾ ಮಂಗಳಾರತಿ ಮಾಡುವುದರ ಬಗ್ಗೆ ಮುಂದೆ ನೋಡೊಣ ಎಂದು ಹೇಳಿದರು. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಇನ್ನೂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೆಸರು ಇಡುವುದಕ್ಕೆ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೆಸರು ಇಡುವ ವಿಚಾರದಲ್ಲಿ ಯಾವ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದರು. ಇದೇ ವೇಳೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಅಸಮಾಧಾನದ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ಅಸಮಾಧಾನ ಇಲ್ಲ ಅಂತ ಹೇಳಿದರು.

  • ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

    ಗೋಹತ್ಯೆ, ಗೋಮಾಂಸ ತಿನ್ನುವುದನ್ನು ನಿಲ್ಲಿಸುವವರೆಗೂ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ: ಮುತಾಲಿಕ್

    ಬೆಳಗಾವಿ: ಮುಸ್ಲಿಂ ವಿಸ್ತಾರವಾದ, ಪ್ರತ್ಯೇಕವಾದ ಹಿನ್ನೆಲೆ ಆರ್ಥಿಕ ಬಹಿಷ್ಕಾರ, ಮುಸ್ಲಿಮರ ಜೊತೆಗೆ ವ್ಯಾಪಾರ ವಹಿವಾಟು ಮಾಡಬಾರದು ಅನ್ನೋದು ಪ್ರಾರಂಭವಾಗಿದೆ. ಹೀಗಾಗಿ ಜಾತ್ರೆಯಲ್ಲಿ ಮುಸ್ಲಿಂ ಅಂಗಡಿಗಳು ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆ ಬೆಂಬಲ ವ್ಯಕ್ತಪಡಿಸಲಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ. ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ. ಇದನ್ನ ನಿಲ್ಲಿಸುವವರೆಗೂ ರೀತಿ ಪ್ರಕ್ರಿಯೆ ನಡೆಯುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಮುಸ್ಲಿಂರ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಅನ್ನೋ ಬಹಿಷ್ಕಾರ ಮಾಡಲಾಗುತ್ತದೆ. ಅದು ಗೋಹತ್ಯೆ, ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ ಎಂದರು. ಇದನ್ನೂ ಓದಿ: ಮಾನಸಿಕತೆ ತಿದ್ದಬೇಕಾದರೆ ಮುಸ್ಲಿಮರಿಗೆ ಆರ್ಥಿಕ ಬಹಿಷ್ಕಾರ ಹಾಕಿದ್ರೆ ಮಾತ್ರ ಸಾಧ್ಯ: ಮುತಾಲಿಕ್

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತ್ರೆಯಲ್ಲಿ ಮುಸ್ಲಿಂ ಅಂಗಡಿ ನಡೆಯಬಾರದು ಅನ್ನೋದಕ್ಕೆ ಶ್ರೀರಾಮ ಸೇನೆಯ ಬೆಂಬಲವಿದೆ. ಮುಸ್ಲಿಂರ ಮಾನಸಿಕತೆ, ಕ್ರೌರ್ಯ ಮೊದಲಿನಿಂದಲೂ ಬಂದಿದೆ. ಇದನ್ನ ನಿಲ್ಲಿಸುವವರೆಗೂ ರೀತಿ ಪ್ರಕ್ರಿಯೆ ನಡೆಯುತ್ತಿರುತ್ತವೆ. ಮುಂದಿನ ದಿನಗಳಲ್ಲಿ ಮುಸ್ಲಿಂರ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಅನ್ನೋ ಬಹಿಷ್ಕಾರ ಮಾಡಲಾಗುತ್ತದೆ. ಅದು ಗೋಹತ್ಯೆ, ಗೋಮಾಂಸ ತಿನ್ನುವುದನ್ನ ನಿಲ್ಲಿಸುವವರೆಗೂ ಈ ಬಹಿಷ್ಕಾರ ಮುಂದುವರೆಯಲಿದೆ ಎಂದರು.

    ಬೆಳಗ್ಗೆ ಐದು ಗಂಟೆಗೆ ಆಜಾನ್ ಕೂಗುವುದನ್ನ ನಿಲ್ಲಿಸಬೇಕು. ಇಡೀ ರಾಜ್ಯಾದ್ಯಂತ ಆರ್ಥಿಕ ಬಹಿಷ್ಕಾರ ಹಾಕಲು ಶ್ರೀರಾಮ ಸೇನೆ ಆಂದೋಲನವಾಗಿದೆ. ಆಕ್ಷನ್‍ಗೆ ರಿಯಾಕ್ಷನ್ ನಾವು ಕೊಡುತ್ತಿದ್ದೇವೆ. ಬಹುಸಂಖ್ಯಾತ ಹಿಂದೂ ಸಮಾಜದ ಗೌರವ ಕಾಣುವ ಪ್ರಕ್ರಿಯೆ ಆಗಬೇಕು. ನಮ್ಮ ದೇವರನ್ನು ಒಪ್ಪದ ನೀವು ನಮ್ಮ ಜಾತ್ರೆಯಲ್ಲಿ ಯಾಕೆ ಬರುತ್ತೀರಿ. ಈ ದೇಶದ ಕಾನೂನು, ಸಂವಿಧಾನ, ಪೆÇಲೀಸ್ ನಿಯಮ ಪಾಲಿಸುವವರೆಗೂ ಬಹಿಷ್ಕಾರ ಮುಂದುವರೆಸುತ್ತೇವೆ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಪಿಎಸ್‍ಸಿಗೆ ಹೊಸ ರೂಪ ಕೊಡ್ತೀವಿ: ಬೊಮ್ಮಾಯಿ 

  • ಆರ್ಥಿಕ ಬಹಿಷ್ಕಾರ ಹಾಕಿದ್ರೆ ಮಾತ್ರ ಮುಸ್ಲಿಮರನ್ನು ತಿದ್ದಲು ಸಾಧ್ಯ: ಮುತಾಲಿಕ್

    ಆರ್ಥಿಕ ಬಹಿಷ್ಕಾರ ಹಾಕಿದ್ರೆ ಮಾತ್ರ ಮುಸ್ಲಿಮರನ್ನು ತಿದ್ದಲು ಸಾಧ್ಯ: ಮುತಾಲಿಕ್

    ಧಾರವಾಡ: ಮುಸ್ಲಿಮರಿಗೆ ಜಾತ್ರೆಗಳಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ನಾನು ಹೇಳುತ್ತಲೇ ಬಂದಿದ್ದೇನೆ ಎಂದು ಶ್ರೀರಾಮ ಸೇನೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

    ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಕುರಿತು ಮಾತನಾಡಿದ ಅವರು, ಮುಸ್ಲಿಮರ ಮಾನಸಿಕತೆ ತಿದ್ದಬೇಕಾದರೆ ಅವರಿಗೆ ಆರ್ಥಿಕ ಬಹಿಷ್ಕಾರ ಹಾಕಿದರೆ ಮಾತ್ರ ಸಾಧ್ಯ. ನಮಗೆ ದೇಶ ಹಾಗೂ ಹಿಂದುತ್ವ ಉಳಿಸಬೇಕಾಗಿದೆ, ನಾವು ಈ ದೇಶ ಕಳೆದುಕೊಳ್ಳಲು ತಯಾರಿಲ್ಲ. ನಮ್ಮ ಸಂವಿಧಾನದ ಮೇಲೆ ಮುಸ್ಲಿಮರು ಬೆಲೆ ಕೊಡ್ತಿಲ್ಲ, ಕಾನೂನಿಗೆ ಬೆಲೆ ಕೊಡ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ವ್ಯಾಪಾರದ ಬಹಿಷ್ಕಾರ ಅಹಿಂಸಾತ್ಮಕ ಶಸ್ತ್ರವು ಉಡುಪಿ ದೇವಸ್ಥಾನ ಮಂಡಳಿಯ ಒಳ್ಳೆಯ ನಿರ್ಣಯವಾಗಿದೆ. ಅದನ್ನ ನಾನು ಸ್ವಾಗತ ಮಾಡುತ್ತೇನೆ, ಅಭಿನಂದನೆ ಮಾಡುತ್ತೇನೆ. ಚುನಾವಣೆಗೆ ಹಾಗೂ ಈ ವಿವಾದಕ್ಕೆ ಸಂಬಂಧವಿಲ್ಲ. ಇದು ಬಹಳ ದಿನದಿಂದ ನಡೆದು ಬಂದಿರುವ ರೀತಿ ಎಂದ ಅವರು, ಮಸೀದಿಯ ಕಾಂಪ್ಲೆಕ್ಸ್‍ಗಳಲ್ಲಿ ಹಿಂದೂಗಳಿಗೆ ವ್ಯಾಪಾರಕ್ಕೆ ಬಾಡಿಗೆ ಕೊಡಲ್ಲ. ಈ ರೀತಿ ಬಹಳ ಉದಾಹರಣೆ ಇವೆ ಎಂದು ವಿವರಿಸಿದರು.

    ಬಾಂಗ್ಲಾದಲ್ಲಿ ದೇವಸ್ಥಾನ ಒಡೆದು ಹಾಕಿದ್ದಾರೆ. ನಾವು ಆ ರೀತಿ ಮಸೀದಿ ಹಾಗೂ ಚರ್ಚ್ ಒಡೆದಿಲ್ಲ. ನಮ್ಮ ಹಿಂದೂ ಸಮಾಜ ಉಳಿಯಬೇಕು. ಸಂವಿಧಾನ ಉಳಿಯಬೇಕು ಎಂಬ ಉದ್ದೇಶದಿಂದ ಈ ನಿರ್ಣಯ ಕೈಗೊಂಡಿದೆ. 32 ವರ್ಷದ ಹಿಂದೆ ನೀಲಕಂಠ ನ್ಯಾಯಮೂರ್ತಿಗೆ ಕಾಶ್ಮೀರದಲ್ಲಿ ಹೊಡೆದು ಹಾಕಿದರು. ಈಗ ಮತ್ತೇ ಮಧುರೈನ ಒಬ್ಬ ಮುಸ್ಲಿಂ ಸಂಘಟನೆಯವನು ನ್ಯಾಯಾಧೀಶರನ್ನ ಕೊಲ್ತೆವೆ ಎಂದು ಹೇಳ್ತಾನೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ 

    32 ವರ್ಷದ ಹಿಂದಿನ ಮಾನಸಿಕತೆ, ಈಗಿನ ಮಾನಸಿಕತೆ ಒಂದೇ ಇದೆ. ನಾವು ಎಲ್ಲರೂ ಈ ಹಿಡಿತವನ್ನು ದೇಶ ಉಳಿಸುವುದಕ್ಕೆ ಮಾಡಬೇಕಿದೆ. ಇದು ಬರಿ ಮಂಗಳೂರು ಶಿವಮೊಗ್ಗ ಅಲ್ಲಾ, ಇಡೀ ದೇಶಾದ್ಯಂತ ನಡೆಸಬೇಕು ಎಂದು ಶಾಪತ ಮಾಡಿದರು.

  • ಹರ್ಷ ಕುಟುಂಬಕ್ಕೆ  25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ

    ಹರ್ಷ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಿ-ಸರ್ಕಾರಕ್ಕೆ ಶ್ರೀರಾಮ ಸೇನೆ ಒತ್ತಾಯ

    ಬೆಳಗಾವಿ: ನಿನ್ನೆ ಮೃತನಾದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಖಂಡಿಸಿ ಶ್ರೀರಾಮ ಸೇನಾ ಜಿಲ್ಲಾ ಘಟಕ, ಹಿಂದೂ ರಾಷ್ಟ್ರ ಸೇನೆಯ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಪರ್ ಜಿಲ್ಲಾಧಿಕಾರಿ ಅಶೋಕ್‌ ದುಡಗುಂಟಿ ಅವರು ಈ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಅತ್ಯಂತ ಭೀಕರ, ರಾಕ್ಷಸಿವಾಗಿ ಹತ್ಯೆ ಮಾಡಲಾಗಿದೆ. ಆ ಯುವಕನ ಹತ್ಯೆಗೆ ಕಳೆದ ಹಲವು ವರ್ಷಗಳಿಂದ ಎಸ್.ಡಿ.ಪಿ.ಐ, ಪಿ.ಎಫ್.ಐ, ಸಿ.ಎಫ್.ಐ ಸಂಘಟನೆಗಳು ಪ್ರಯತ್ನ ನಡೆದಿದೆ. ಆದ್ದರಿಂದ ಈ ಸಂಘಟನೆಗಳನ್ನು ನಿಷೇಧಿಸಿ, ಪ್ರಮುಖರನ್ನು ಬಂಧಿಸಬೇಕು. ಹತ್ಯೆಯ ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಉಗ್ರ ಶಿಕ್ಷೆಯಾಗಬೇಕು. ಸರ್ಕಾರ ಮೃತನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನೂ ಓದಿ: ಉಕ್ರೇನ್ ಉದ್ವಿಗ್ನತೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಆತಂಕ

    ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಹಿಂದೂ ಕಾರ್ಯಕರ್ತರಿಗೆ ಹಾಗೂ ಹಿಂದೂ ನಾಯಕರಿಗೆ ಸೂಕ್ತ ಭದ್ರತೆ ಒದಗಿಸಬೇಕು. ನಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸದಿದ್ದರೇ ಉಗ್ರ ಹೋರಾಟ ನಡೆಸುತ್ತೇವೆ ಎಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ, ಜಿಲ್ಲಾ ಕಾರ್ಯಧ್ಯಕ್ಷ ವಿನಯ ಅಂಗ್ರೋಳ್ಳಿ, ನಾಗೇಶ ಷರಾಫ್, ವಿನೋದ್ ಹಂಗರೇಕರ, ಅಕ್ಷಯ ಪಾಟೀಲ್‌, ಸಂತೋಷ್ ಜಾಧವ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  • ಗಣೇಶ ಹಬ್ಬಕ್ಕೆ ಸ್ವಯಂ ಅನುಶಾಸನ ಅಗತ್ಯ: ಸುನಿಲ್ ಕುಮಾರ್

    ಗಣೇಶ ಹಬ್ಬಕ್ಕೆ ಸ್ವಯಂ ಅನುಶಾಸನ ಅಗತ್ಯ: ಸುನಿಲ್ ಕುಮಾರ್

    – ಶ್ರೀರಾಮ ಸೇನೆ ಎಚ್ಚರಿಕೆಗೆ ಸಚಿವರ ಪ್ರತಿಕ್ರಿಯೆ

    ಉಡುಪಿ: ಗಣೇಶೋತ್ಸವ ವಿಜೃಂಭಣೆಯಿಂದ ಆಚರಣೆ ಮಾಡಲು ನಮ್ಮ ಅಡ್ಡಿ ಇರಲಿಲ್ಲ. ಕೊರೊನಾ ಸಂದರ್ಭ ಎಲ್ಲರಿಗೂ ಸಾಮಾಜಿಕ ಜವಾಬ್ದಾರಿ ಇದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಹಬ್ಬ ಆಚರಿಸುವವರು ಸ್ವಯಂ ನಿಯಂತ್ರಣ ಹಾಕಿ ಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕವಾಗಿ ನಾವು ಹಬ್ಬ ಆಚರಿಸುವಾಗ, ವಿಜೃಂಭಣೆ ಮಾಡುವಾಗ ನಮ್ಮ ಕಾರ್ಯಕ್ರಮಗಳಿಂದ ಯಾರಿಗೂ ಅಡ್ಡಿಯಾಗಬಾರದು. ಸಮಾರಂಭ ಮಾಡುವ ಮೂಲಕ ನಮ್ಮಿಂದ ಯಾರಿಗೂ ಕೊರೊನಾ ಬರಬಾರದು. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸ್ವಯಂ ಅನುಶಾಸನವನ್ನು ಹಾಕಿಕೊಳ್ಳುವ ಅನಿವಾರ್ಯಯತೆ ಇದೆ ಎಂದರು. ಇದನ್ನೂ ಓದಿ: ಅವನು ಎಷ್ಟೇ ದೊಡ್ಡವನಾದರೂ ಬಿಡಲ್ಲ: ಅನುಶ್ರೀ

    ಸಾಂಕ್ರಾಮಿಕ ರೋಗ ಕೊರೊನಾದ ಭೀತಿ ನಡುವೆ ಹಲವಾರು ಕಠಿಣ ನಿಯಮಗಳನ್ನು ಹಾಕಿ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅವಕಾಶ ಕೊಟ್ಟಿದೆ. ವಿಜೃಂಭಣೆಯ ಆಚರಣೆಗೆ ಸರ್ಕಾರದ ಮಾರ್ಗಸೂಚಿಗಳು ಅಡ್ಡಿಯಾಗುತ್ತಿವೆ. ಗಣೇಶೋತ್ಸವ ಆಚರಣೆಗೆ ಅಡ್ಡ ಬಂದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಶ್ರೀರಾಮಸೇನೆ ಎಚ್ಚರಿಕೆ ನೀಡಿತ್ತು. ಇದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

  • ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ನೀಡಿ- ಶ್ರೀರಾಮ ಸೇನೆ ಪ್ರತಿಭಟನೆ

    ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆಗೆ ಅವಕಾಶ ನೀಡಿ- ಶ್ರೀರಾಮ ಸೇನೆ ಪ್ರತಿಭಟನೆ

    ಧಾರವಾಡ: ರಾಜ್ಯ ಸರ್ಕಾರ ಸಾರ್ವಜನಿಕ ಗಣಪತಿ ಪ್ರತಿಷ್ಟಾಪನೆ ನಿಷೇಧ ಮಾಡಿರುವುದನ್ನು ವಿರೋಧಿಸಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತ್ರತ್ವದಲ್ಲಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಎದುರು ಗಣೇಶ ಮೂರ್ತಿ ಇಟ್ಟು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ಶ್ರೀರಾಮ ಸೇನೆ ಕಾರ್ಯಕರ್ತರು, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡೆಯೇ ತೀರುತ್ತೇವೆ ಎಂದು ಘೋಷಣೆ ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಇಂದು 1,453 ಹೊಸ ಕೊರೊನಾ ಪ್ರಕರಣ, 17 ಮಂದಿ ಸಾವು

    ಕೂಡಲೇ ಸರ್ಕಾರ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಟಾನಕ್ಕೆ ಅವಕಾಶ ನೀಡಬೇಕು ಎಂದು ಶ್ರೀ ರಾಮ ಸೇನೆ ಕಾರ್ಯಕರ್ತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಮೋದ ಮುತಾಲಿಕ್, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಎಲ್ಲದಕ್ಕೂ ಅವಕಾಶ ನೀಡಲಾಗಿದೆ. ಆದರೆ ಸಾರ್ವಜನಿಕ ಗಣೇಶೋತ್ಸವ ನಿಷೇಧ ಮಾಡಿದ್ದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದರು.