Tag: Sri Ram Sena

  • ಉಡುಪಿಯಿಂದ ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದ್ಯೋ ಗೊತ್ತಿಲ್ಲ – ಮುತಾಲಿಕ್ ಆತಂಕ

    ಉಡುಪಿಯಿಂದ ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದ್ಯೋ ಗೊತ್ತಿಲ್ಲ – ಮುತಾಲಿಕ್ ಆತಂಕ

    ಮೈಸೂರು: ಉಡುಪಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣಕ್ಕೆ (Udupi College Video Case) ಸಂಬಂಧಿಸಿದಂತೆ ಮಾತನಾಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ (Pakistan) ಹೋಗಿದೆಯೋ ಗೊತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, ಪ್ರಕರಣದ ಹಿಂದೆ ಇಸ್ಲಾಮಿಕ್ ಸಂಘಟನೆಗಳ ಕೈವಾಡವಿದೆ. ಆದ್ರೆ ಈ ಬಗ್ಗೆ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಆರಂಭದಲ್ಲೇ ಪ್ರಕರಣ ದಾರಿ ತಪ್ಪಿಸುವ ಕೆಲಸ ಆಗಿತ್ತು ಎಂದು ದೂರಿದ್ದಾರೆ. ಇದನ್ನೂ ಓದಿ: ಕೇಳಿದಷ್ಟು ಹಣಕ್ಕೆ ಪ್ಲಾಸ್ಟಿಕ್ ಟೇಬಲ್ ಕೊಟ್ಟಿಲ್ಲವೆಂದು ವ್ಯಾಪಾರಿ ಮೇಲೆ ಹಲ್ಲೆ- ಮುಖ್ಯಪೇದೆ ಅಮಾನತು

    ಘಟನೆ ನಡೆಯದೇ ಇದ್ದಿದ್ದರೆ ಮಕ್ಕಳಿಂದ ಏಕೆ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ? ಪತ್ರ ಬರೆದುಕೊಟ್ಟಿದ್ದಾರೆ ಅಂದ ಮೇಲೆ ತಪ್ಪು ಮಾಡಿದ್ದಾರೆ ಅಂತಾ ಅಲ್ವಾ? ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ ಸಹ ಆ ರೀತಿ ಹೇಳಬಾರದಿತ್ತು. ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದೆಯೋ ಗೊತ್ತಿಲ್ಲ. ಎಲ್ಲವೂ ಸಮಗ್ರವಾಗಿ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಡ್ಡಿಗೆ ಸಾಲ ಪಡೆದು ಜರ್ಮನಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಬೆಳಗಾವಿ ಯುವತಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕ

    Gyanvapi mosque, 

    ಇದೇ ವೇಳೆ ಜ್ಞಾನವಾಪಿ ಮಸೀದಿ ವಿಚಾರವಾಗಿ ಮಾತನಾಡಿ, ದೇಶದ ಮುಸ್ಲಿಮರು (Muslims) ಸೌಜನ್ಯದಿಂದ ನಡೆದುಕೊಳ್ಳಬೇಕು. ಉದ್ಧಟತನದ ವರ್ತನೆ ತೋರಬಾರದು. ಕಾಶಿ ವಿಶ್ವನಾಥ ದೇಗುಲವನ್ನ ಹಿಂದೂಗಳಿಗೆ ಬಿಟ್ಟುಕೊಡಬೇಕು. 1992ರ ಡಿಸೆಂಬರ್ 6ರಲ್ಲಿ ನಡೆದ ಘಟನೆ ಮರುಕಳಿಸುವಂತೆ ಮಾಡಬೇಡಿ. ಹಿಂದೂಗಳನ್ನ ಕೆರಳಿಸುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಟೈಟ್‌ ಸೆಕ್ಯುರಿಟಿಯೊಂದಿಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆ ಆರಂಭ

    ಮುಸ್ಲಿಂ ಸಂಘಟನೆಗಳು ಹದ್ದುಮೀರಿ ವರ್ತಿಸುತ್ತಿವೆ. ದೇಶದ ಮುಸ್ಲಿಮರು ಬಾಬರ್‌ನನ್ನ ಅನುಸರಿಸುತ್ತಿದ್ದಾರೆ. ಪ್ರಪಂಚದಲ್ಲಿ ಎಲ್ಲಾದರೂ ಜ್ಞಾನವಾಪಿ ಹೆಸರಿನ ಮಸೀದಿ ಇದೆಯಾ? ಅದು ದೇವಸ್ಥಾನ ಎನ್ನಲು ಸಾಕಷ್ಟು ದಾಖಲೆಗಳಿವೆ. ಹೀಗಾಗಿ ಮುಸ್ಲಿಮರು ಸೌಜನ್ಯದಿಂದ ಬಿಟ್ಟು ಕೊಡಬೇಕು ಎಂದು ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ – ಪ್ರಮೋದ್ ಮುತಾಲಿಕ್ ಕಿಡಿ

    ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ – ಪ್ರಮೋದ್ ಮುತಾಲಿಕ್ ಕಿಡಿ

    ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ (BJP) ನೇರ ಹೊಣೆ ಎಂದು ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ (Pramod Muthali) ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ (Shivamogga) ತಡರಾತ್ರಿ ಹಿಂಸಾಚಾರ ವಿಚಾರ ಕುರಿತು ಹೀಗೆ ಪ್ರತಿಕ್ರಿಯಿಸಿದ್ದಾರೆ. ಶಿವಮೊಗದಲ್ಲಿ ಜಿಲ್ಲೆಯವರೇ ಗೃಹಸಚಿವರಾಗಿದ್ದರು. ಆದರೂ ಯಾಕೆ ಇದೆಲ್ಲಾ ಕಂಟ್ರೋಲ್ ಮಾಡಲಿಲ್ಲ? ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ. ಕಾಂಗ್ರೆಸ್ ಬಂದ ಮೇಲೆ ಇದು ಇನ್ನಷ್ಟು ಹೆಚ್ಚಾಗುತ್ತೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ದೇವಾಲಯ, ಮನೆಯಲ್ಲಿ ಕಳ್ಳರ ಕೈಚಳಕ – 2 ಲಕ್ಷ ನಗದು 250 ಗ್ರಾಂ ಬಂಗಾರ ದೋಚಿದ ಖದೀಮರು

    ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಪ್ರಮೋದ್ ಮುತಾಲಿಕ್ ದೂರು ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ (Government Of Karnataka) ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡೋದಕ್ಕೆ ನಮ್ಮ ವಿರೋಧವಿದೆ. ಮತಾಂತರ ಕಾಯ್ದೆಗೆ ತಿದ್ದುಪಡಿ ತರೋದಕ್ಕೂ ನಮ್ಮ ವಿರೋಧವಿದೆ. ಸ್ವಾತಂತ್ರ‍್ಯ ಹೋರಾಟಗಾರರ ಪಠ್ಯವನ್ನ ಪುಸ್ತಕದಿಂದ ತೆಗೆದಿರೋದು ಸರಿಯಲ್ಲ ಎಂಬ ಅಂಶಗಳನ್ನ ಉಲ್ಲೇಖಿಸಿ ದೂರು ಸಲ್ಲಿಸಿದ್ದು, ರಾಜ್ಯಪಾಲರ ಪರವಾಗಿ ರಾಜಭವನದ ಅಧಿಕಾರಿಗಳು ಮನವಿ ಸ್ವೀಕರಿಸಿದ್ದಾರೆ.

    TEXTBOOK

    ಮನವಿ ಸಲ್ಲಿಕೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮುತಾಲಿಕ್, 1984ರಲ್ಲಿಯೇ ಕಾಂಗ್ರೆಸ್ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತ್ತು. ಬಿಜೆಪಿ ಅದನ್ನ ಕೆಲ ಬದಲಾವಣೆ ಮಾಡಿತ್ತು ಅಷ್ಟೇ. ನೀವೇ ಕಾಯ್ದೆ ಮಾಡಿ, ಈಗ ವಿರೋಧ ಮಾಡ್ತಿರೋದು ಸರಿನಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಹೋಯ್ತು – ಇನ್ಮುಂದೆ ಮನೆ ಬೆಳಗೋದು ಗೃಹಜ್ಯೋತಿ ಮಾತ್ರ

    ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಿದೆ, ಸೋನಿಯಾ ಗಾಂಧಿ (Sonia Gandhi) ಅವರನ್ನ ಓಲೈಸೋದಕ್ಕೆ ಈ ರೀತಿ ಮಾಡಲಾಗುತ್ತಿದೆ. ಮೊದಲಿನಿಂದಲೂ ಮುಸ್ಲಿಂ (Muslims) ಓಲೈಕೆ ಮಾಡೋದು ಕಾಂಗ್ರೆಸ್‌ನ ಕಾಯಕವಾಗಿದೆ. ಬಿಜೆಪಿ ಮಾಡಿದ ತಪ್ಪಿಗೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಷ್ಟೇ. ಪಠ್ಯದಲ್ಲಿ ಸ್ವಾಂತತ್ರ್ಯ ಹೋರಾಟಗಾರರ ಪಠ್ಯ ತೆಗೆದಿರೋದು ಸರಿಯಲ್ಲ. ದೇಶದ್ರೋಹಿಗಳ, ದೇಶದ ಮೇಲೆ ದಾಳಿ ಮಾಡಿದವರ ಪಠ್ಯವನ್ನ ಮಕ್ಕಳು ಓದಬೇಕಾ..? ಸಾರ್ವರ್ಕರ್ ಒಬ್ಬ ದೇಶ ಪ್ರೇಮಿ, ಕ್ರಾಂತಿಕಾರಿ ಕಾಂಗ್ರೆಸ್‌ಗೆ ಚರಕ ತಿರುಗಿಸೋ ಗಾಂಧೀಜಿ ಬೇಕೆ ಹೊರತು ಕ್ರಾಂತಿಕಾರಿಗಳು ಬೇಡ ಎಂದು ತಿರುಗೇಟು ನೀಡಿದ್ದಾರೆ.

    ಪಠ್ಯ ಸೇರಿಸೋಕೆ ಪಿಹೆಚ್‌ಡಿನೇ ಮಾಡಬೇಕು ಅಂತೇನಿಲ್ಲ. ನಾಸ್ತಿಕ ವಿಚಾರಧಾರೆ ಇರುವವರು ಬರಗೂರು ರಾಮಚಂದ್ರಪ್ಪ, ಕಮ್ಯೂನಿಸ್ಟ್, ಇಸ್ಲಾಮಿನ ವಿಚಾರಧಾರೆಗಳನ್ನ ಪ್ರಚಾರ ಮಾಡೋದು ಬೇಡ. ಗೋ ಹತ್ಯೆ ವಿಚಾರವಾಗಿ ಅಧಿವೇಶನದಲ್ಲಿ ಸರ್ಕಾರ ಯಾವ ನಿಲುವು ಕೈಗೊಳ್ಳೊತ್ತೋ ಕಾದು ನೋಡೋಣ? ಒಂದು ವೇಳೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದ್ರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ. ಅಧಿವೇಶನದಲ್ಲಿ ಒಪ್ಪಿಗೆ ಪಡೆದರೂ ಅಂತಿಮ ಅಂಕಿತ ಹಾಕೋದು ರಾಜ್ಯಪಾಲರು. ಆದ್ದರಿಂದ ರಾಜ್ಯಪಾಲರಿಗೆ ಮನವಿ ಮಾಡಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ.

  • ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

    ಖಾದರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

    ಚಿಕ್ಕಮಗಳೂರು: ನೂತನ ಸ್ಪೀಕರ್ ಯುಟಿ ಖಾದರ್ (UT Khader) ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಶ್ರೀರಾಮಸೇನೆಯ (Sri Ram Sena) ನಾಯಕನ ವಿರುದ್ಧ ಕಾಂಗ್ರೆಸ್ (Congress) ದೂರು ದಾಖಲಿಸಿದೆ.

    ಶ್ರೀರಾಮಸೇನೆಯ ಮುಖಂಡ ಪ್ರೀತೇಶ್ ಎಂಬುವವರು ಯುಟಿ ಖಾದರ್ ಬಗ್ಗೆ ಅವಹೇಳನಕಾರಿಯಾಗಿ ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ ಕೋಮು ದ್ವೇಷ ಹಾಗೂ ಜನಾಂಗದ ನೋವಿಗೆ ಪ್ರೀತೇಶ್ ಕಾರಣರಾಗಿದ್ದಾರೆ. ಈ ರೀತಿ ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತೋರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಕ್ಷದ ಐಟಿ ಸೆಲ್‍ನ ಜಿಲ್ಲಾ ಕಾರ್ಯದರ್ಶಿ ಎಂಎಲ್‍ಎ ಮಂಜು ಎಂಬುವವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಶಾಸಕರಲ್ಲ, ಎಂಎಲ್‌ಸಿಯೂ ಆಗದೇ ಇದ್ರೂ ಮಂತ್ರಿ ಸ್ಥಾನ ಪಡೆದ ಬೋಸರಾಜು

    ಪೋಸ್ಟ್‌ನಲ್ಲಿ ಏನಿತ್ತು?
    `ಸದನದಲ್ಲಿ ಮಾನ್ಯ ಸಭಾಧ್ಯಕ್ಷರೇ ಅನ್ನಬೇಕಾ? ಸಾಬಾಧ್ಯಕ್ಷರೇ ಅನ್ನಬೇಕಾ?’ ಎಂದು ಶ್ರೀರಾಮ ಸೇನೆ ಮುಖಂಡ ಬರೆದುಕೊಂಡಿದ್ದರು. ಅಲ್ಲದೆ ಯುಟಿ ಖಾದರ್ ಅವರ ಹೆಸರಿನಲ್ಲಿ ಟ್ಯಾಗ್ ಬಳಸಿ ಪೋಸ್ಟ್ ಮಾಡಲಾಗಿತ್ತು.

    ಈ ಸಂಬಂಧ ಚಿಕ್ಕಮಗಳೂರು (Chikkamagaluru) ನಗರದ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದು ಸಂಪುಟದಲ್ಲಿ ಹಲವರಿಗೆ ಸಚಿವ ಸ್ಥಾನ ಮಿಸ್

  • ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ ಬ್ಯಾನ್ ಮಾಡಿದ್ದು ಯಾಕೆ ಅಂತ ಯೋಗಿ ಹೇಳಬೇಕು: ಡಿಕೆ ಸುರೇಶ್

    ರಾಮನಗರ: ಉತ್ತರ ಪ್ರದೇಶದಲ್ಲಿ ಶ್ರೀರಾಮ ಸೇನೆ (Sri Ram Sena) ಬ್ಯಾನ್ ಮಾಡಿದ್ದು ಯಾಕೆಂದು ಯೋಗಿ (Yogi Adityanath) ಹೇಳಬೇಕು ಎಂದು ಕಾಂಗ್ರೆಸ್ (Congress) ನಾಯಕ ಡಿ.ಕೆ ಸುರೇಶ್ (D.K. Suresh) ಕಿಡಿಕಾರಿದ್ದಾರೆ.

    ಕನಕಪುರದಲ್ಲಿ (Kanakapur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಆಡಳಿತದ ಮೂರು ರಾಜ್ಯಗಳಲ್ಲಿ ಶ್ರೀರಾಮ ಸೇನೆ ಬ್ಯಾನ್ ಆಗಿದೆ. ಯಾಕೆ ಬ್ಯಾನ್ ಮಾಡಿದ್ದಾರೆ ಎಂದು ಬಿಜೆಪಿಗರು ಹೇಳಬೇಕು. ಚುನಾವಣೆ ಹೊಸ್ತಿಲಲ್ಲಿ ಗೆಲ್ಲಲು ಆಗದೆ ಧರ್ಮದ ಹೆಸರಿನಲ್ಲಿ ಅಡ್ಡ ಬರುತ್ತಿರುವುದು ಒಳ್ಳೆಯದಲ್ಲ. ನಾವು ಸಹ ಹಿಂದೂಗಳು, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಸಲಹೆ ಪಡೆಯಬೇಕಾಗಿಲ್ಲ. ನಾವೂ ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡುತ್ತೇವೆ. ಆದರೆ ಚುನಾವಣಾ ಪ್ರಚಾರದಲ್ಲಿ ರಾಮ ಮತ್ತು ಹನುಮನ ತಂದು ಪೂಜೆ ಮಾಡುವುದಿಲ್ಲ. ವೋಟಿಗಾಗಿ ಪೂಜೆ ಮಾಡುವವರಿಗೆ ಜನ ಉತ್ತರಿಸಲಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ಬಾರಿ ರಾಹುಲ್ ಗಾಂಧಿ ಮಾಡಿದ್ದನ್ನು, ಈ ಬಾರಿ ಮೋದಿ ಮಾಡಿದ್ದಾರೆ: ಬೇಸರ ವ್ಯಕ್ತಪಡಿಸಿದ ಹೆಚ್‌ಡಿಡಿ

    ಇನ್ನೂ ಕನಕಪುರದಲ್ಲಿ ಅಮಿತ್ ಶಾ ಪ್ರಚಾರದ ವಿಚಾರವಾಗಿ ಮಾತನಾಡಿದ ಅವರು, ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ಅಮಿತ್ ಶಾ ಬಂದರೂ ಸಂತೋಷ, ಮೋದಿ ಬಂದರೂ ಸಂತೋಷ. ಅವರಿಬ್ಬರೂ ಮೇಕೆದಾಟು ಯೋಜನೆಗೆ ಯಾವಾಗ ಅನುಮತಿ ಕೊಡುತ್ತೀರಾ? ಅದರ ಬಗ್ಗೆ ನಿಲುವು ಸ್ಪಷ್ಟಪಡಿಸಲಿ ಎಂದಿದ್ದಾರೆ.

    ಕನಕಪುರದಲ್ಲಿ ಭಯದ ವಾತಾವರಣ ಇದೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿ.ಎಲ್ ಸಂತೋಷ್ ಅವರಿಗೆ ನಾನೇ ಎಲ್ಲಾ ರೀತಿಯ ರಕ್ಷಣೆ ನೀಡುತ್ತೇನೆ. ಅವರೇ ಮನೆಮನೆಗೆ ಬಂದು ಮತ ಕೇಳಲಿ. ನಾನು ಒಂದು ಮಾತು ಹೇಳಿದ್ರೆ ಸಾಕು ಅವರಿಗೆ ರಕ್ಷಣೆ ಸಿಗುತ್ತದೆ. ಅದಕ್ಕಾಗಿ ಬಿಎಸ್‍ಎಫ್‍ನ ಅಗತ್ಯವಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಬಜರಂಗದಳ ನಿಷೇಧಿಸಲು ನಿಮ್ಮ ಬಳಿ ಧೈರ್ಯ, ತಾಕತ್ ಇಲ್ಲ: ಕಾಂಗ್ರೆಸ್‌ ವಿರುದ್ಧ ಫಡ್ನವೀಸ್‌ ವಾಗ್ದಾಳಿ

  • ಪ್ರಮೋದ್‌ ಮುತಾಲಿಕ್‌ಗೆ ಕಾಸಿಗಿಂತ ಕೇಸೇ ಜಾಸ್ತಿ

    ಪ್ರಮೋದ್‌ ಮುತಾಲಿಕ್‌ಗೆ ಕಾಸಿಗಿಂತ ಕೇಸೇ ಜಾಸ್ತಿ

    – ಮುತಾಲಿಕ್‌ ಅಫಿಡವಿಟ್‌ನಲ್ಲಿ ಮಾಹಿತಿ ಬಹಿರಂಗ

    ಉಡುಪಿ: ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಶ್ರೀರಾಮಸೇನೆ (Sri Ram Sena) ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ (Pramod Muthalik) ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರ ಘೋಷಿಸಿದ್ದಾರೆ.

    ಮುತಾಲಿಕ್‌ ಅವರ ಅಫಿಡವಿಟ್‌ನಲ್ಲಿ ಕಾಸಿಗಿಂತ ಕೇಸೇ ಜಾಸ್ತಿಯಿರುವ ಮಾಹಿತಿ ಬಹಿರಂಗಗೊಂಡಿದೆ. ಪ್ರಮೋದ್ ಮತಾಲಿಕ್ ಬಳಿ ಸ್ಥಿರಾಸ್ತಿ, ವಾಹನ, ಸಾಲ ಇಲ್ಲ. ಮುತಾಲಿಕ್ ಕೈಯಲ್ಲಿ 10,500 ರೂ. ನಗದು, ಎರಡು ಬ್ಯಾಂಕುಗಳಲ್ಲಿ 2,63,500 ರೂ. ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ – ಕುಬೇರರ ಆಸ್ತಿ ಎಷ್ಟಿದೆ ಗೊತ್ತಾ?

    ರಾಜ್ಯದ 7 ಠಾಣೆಗಳಲ್ಲಿ ಸೌಹಾರ್ದಕ್ಕೆ ಧಕ್ಕೆ ಕೇಸು ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಮತ್ತು ಸಶಸ್ತ್ರ ಕಾಯ್ದೆ ಉಲ್ಲಂಘನೆ, ಮಾನನಷ್ಟ ಮೊಕದ್ದಮೆ, ಜೀವ ಬೆದರಿಕೆ, ಧರ್ಮಗಳ ನಡುವೆ ದ್ವೇಷ ಭಾವನೆ, ಧಾರ್ಮಿಕ ಭಾವನೆಗೆ ಧಕ್ಕೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೋಮು ಗಲಭೆ, ಜೀವ ಬೆದರಿಕೆ, ಪ್ರಚೋದನಕಾರಿ ಹೇಳಿಕೆ, ಅವಹೇಳನ, ಆದೇಶ ಉಲ್ಲಂಘನೆ ಕೇಸ್‌ಗಳು ದಾಖಲಾಗಿದೆ ಎಂದು ಆಯೋಗಕ್ಕೆ (Election Commission) ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ಬೆನ್ನಮೇಲೆ ಗುದ್ದಿದ ಭಾರ ನನ್ನ ಮೇಲಿದೆ; ಶಾಸಕನಾಗುವುದಕ್ಕಿಂತ ಪ್ರಧಾನಿ ಪ್ರೀತಿ ಮುಖ್ಯ – ರಾಮದಾಸ್

  • ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಕರಾವಳಿಯಲ್ಲಿ ಧರ್ಮದಂಗಲ್: ದೇವಸ್ಥಾನದ ಉತ್ಸವ, ಕಂಬಳ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ

    ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ (Udupi) ಮತ್ತೆ ಧರ್ಮ ದಂಗಲ್ ಶುರುವಾಗಿದೆ. ಹಿಜಬ್ (Hijab) ನಿಂದ ಆರಂಭವಾಗಿದ್ದ ಜಟಾಪಟಿ ಕೊಂಚ ತಣ್ಣಗಾಗಿತ್ತು. ಇದೀಗ ಮತ್ತೆ ಜಾತ್ರೆ ಉತ್ಸವ ಆರಂಭವಾಗುತ್ತಿದ್ದಂತೆ ವ್ಯಾಪಾರ ನಿರಾಕರಣೆಗೆ ಕರೆ ನೀಡಲಾಗಿದೆ. ಇದಕ್ಕೆ ಕಾರಣ ಮಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಕುಕ್ಕರ್ ಬಾಂಬ್ ಸ್ಫೋಟ (Mangaluru Bomb Blast Case) ಪ್ರಕರಣ ಕಾರಣವಾಗಿದೆ.

    ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಜಬ್ ಹೋರಾಟದ (Hijab Controversy) ನಂತರ ಧರ್ಮ ದಂಗಲ್ ಆರಂಭವಾಗಿತ್ತು. ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳಲ್ಲಿ ಮಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಬಾರದು ಎಂಬ ಅಸಹಕಾರ ಧೋರಣೆ ಕಳೆದ ವರ್ಷ ನಡೆದಿತ್ತು. 2-3 ತಿಂಗಳ ಜಟಾಪಟಿಯ ನಂತರ ಕೆಲವು ಉತ್ಸವ ಜಾತ್ರೆಗಳಲ್ಲಿ ಮುಸಲ್ಮಾನ ವ್ಯಾಪಾರಿಗಳು (Muslim Traders) ವ್ಯವಹಾರ ನಡೆಸಿದ್ದರು. ಇದೀಗ ಮತ್ತೆ ವೈಮನಸ್ಸಿಗೆ ಕಾರಣವಾಗಿದ್ದು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ. ಇದನ್ನೂ ಓದಿ: ಹಿರೇಕೊಡಗಲಿ ಗ್ರಾಮದ ಅಭಿಮಾನಿ ಮನೆಗೆ ಧ್ರುವ ಸರ್ಜಾ ಅಚ್ಚರಿಯ ಭೇಟಿ

    ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಒಂದು ವಾರಗಳ ಕಾಲ ನಡೆಯುವ ಜಾತ್ರೆ ಮತ್ತು ಉತ್ಸವದ ವ್ಯಾಪಾರಕ್ಕೆ ಈ ಬಾರಿ ತಡೆಯೊಡ್ಡಲಾಗಿದೆ. ಕೋಟ್ಯಂತರ ರೂಪಾಯಿ ವ್ಯವಹಾರ ಕೈ ತಪ್ಪಲಿದೆ. ಶಂಕಿತ ಉಗ್ರ ಶಾರಿಕ್ (Shariq) ನಿಂದ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಬೆಳವಣಿಗೆಯಿಂದ ಕರಾವಳಿಯಲ್ಲಿ ಹಿಂದೂ ಮುಸ್ಲಿಮರ ನಡುವೆ ಬಿರುಕು ಜಾಸ್ತಿಯಾಗಿದೆ. ಉಡುಪಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ವ್ಯಾಪಾರ ನಿರಾಕರಣೆ, ಚಳುವಳಿ ಮಾದರಿಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಸಂಗೀತ ವಿದ್ವಾನ್ ಎಂ.ನಾರಾಯಣಗೆ ಕದ್ರಿ ಸಂಗೀತ ಸೌರಭ 2022 ಜೀವಮಾನ ಶ್ರೇಷ್ಠ ರಾಷ್ಟ್ರ ಪ್ರಶಸ್ತಿ

    ವಿಶ್ವ ಹಿಂದೂ ಪರಿಷತ್ (VHP), ಭಜರಂಗದಳ (Bajrang Dal), ಹಿಂದೂ ಜಾಗರಣ ವೇದಿಕೆ ಶ್ರೀರಾಮ ಸೇನೆ (SriRam Sena) ತಮ್ಮ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂದು ಪತ್ರದ ಮುಖೇನ ಮನವಿ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಮೂಲಕ ಸಂದೇಶಗಳನ್ನು ಹರಿ ಬಿಡಲಾಗುತ್ತಿದೆ. ಎರಡು ದಿನಗಳ ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೆಯಲ್ಲಿ ಆಡಳಿತ ಮಂಡಳಿಯೇ ಈ ತೀರ್ಮಾನವನ್ನು ಮಾಡಿದೆ.

    ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಪಟ್ಟ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಆಡಳಿತ ಮಂಡಳಿಗೆ ಹಿಂದೂ ಸಂಘಟನೆಗಳು ಮನವಿ ಕೊಡುತ್ತಿವೆ. ಕಂಬಳ ದೈವಾರಾಧನೆ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭ ಅನ್ಯಧರ್ಮಿಯರ ವ್ಯಾಪಾರಕ್ಕೆ ಅವಕಾಶ ಕೊಡಬಾರದು ಎಂಬ ಕೂಗೂ ಜೋರಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ: ಮುತಾಲಿಕ್

    ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ: ಮುತಾಲಿಕ್

    – ಮೈಸೂರು ಶಾಸಕ ತನ್ವೀರ್‌ಸೇಠ್‌ರನ್ನ ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ
    – ಟಿಪ್ಪು ಜಯಂತಿ ಆಚರಣೆಯಿಂದ ಈದ್ಗಾ ಮೈದಾನ ಅಪವಿತ್ರವಾಗಿದೆ ಎಂದ ಮುತಾಲಿಕ್

    ಹುಬ್ಬಳ್ಳಿ: ಭಾರತ (India) ಮತ್ತು ಪಾಕಿಸ್ತಾನ (Pakistan) ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು. ಪಾಕಿಸ್ತಾನ ಹೇಗೆ ಮುಸ್ಲಿಮರಿಗೆ (Muslims) ಸೀಮಿತವಾಗಿದೆಯೋ ಹಾಗೆ ಭಾರತ ಹಿಂದೂ ರಾಷ್ಟ್ರ (Hindu Nation). ಆದರೆ ಸಂವಿಧಾನದಲ್ಲಿ (Constitution Of India)) ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ವಾಗ್ದಾಳಿ ನಡೆಸಿದ್ದಾರೆ.

    ಟಿಪ್ಪು 100 ಅಡಿ ಮೂರ್ತಿಯನ್ನು ಮೈಸೂರಿನಲ್ಲಿ (Mysuru) ಪ್ರತಿಷ್ಠಾಪನೆ ಮಾಡುತ್ತೇವೆಂಬ ಶಾಸಕ ತನ್ವೀರ್ ಸೇಠ್ (Tanveer Sait) ಹೇಳಿಕೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮುತಾಲಿಕ್, ಮುಸ್ಲಿಂ ಸಮುದಾಯದಲ್ಲಿ (Muslim Community) ಮೂರ್ತಿ ಪೂಜೆ ಇಲ್ಲ ಅದು ಹೇಗೆ ನೀವು ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೀರಿ? ಇದು ಧರ್ಮ ವಿರೋಧಿ ಹೇಳಿಕೆ ಹೀಗಾಗಿ ಸೇಠ್ ವಿರುದ್ಧ ಫತ್ವಾ ಹೊರಡಿಸಬೇಕು. ಈ ರೀತಿ ಹೇಳಿಕೆ ನೀಡಿದ್ದ ತನ್ವೀರ್ ಸೇಠ್‌ನನ್ನು ಮುಸ್ಲಿಮರೇ ಗಲ್ಲಿಗೇರಿಸುತ್ತಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಒಂದು ವೇಳೆ ಮೈಸೂರಿನಲ್ಲಿ ಟಿಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ, ನಾವು ಧ್ವಂಸ ಮಾಡುತ್ತೇವೆ. ಭಾರತ ಮತ್ತು ಪಾಕಿಸ್ತಾನ ಧರ್ಮದ ಆಧಾರದಲ್ಲಿ ಬೇರೆಯಾದ ರಾಷ್ಟ್ರಗಳು, ಪಾಕಿಸ್ತಾನ ಹೇಗೆ ಮುಸ್ಲಿಂರಿಗೆ ಸೀಮಿತವೋ, ಹಾಗೆ ಭಾರತ ಹಿಂದೂ ರಾಷ್ಟ್ರ. ಸಂವಿಧಾನದಲ್ಲಿ ಬಲವಂತವಾಗಿ ಜಾತ್ಯಾತೀತ ಶಬ್ದ ಸೇರಿಸಲಾಗಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: 

    ಗೋಮೂತ್ರದಿಂದ ಶುಚಿ:
    ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆ ಹಿನ್ನಲೆ, ಪ್ರಮೋದ್ ಮುತಾಲಿಕ್ ಗೋ ಮೂತ್ರ ಸಿಂಪಡಿಸಿ ಸ್ವಚ್ಚಗೊಳಿಸಿದ್ದಾರೆ. ನಿನ್ನೆ ಟಿಪ್ಪು ಜಯಂತಿ ಆಚರಣೆ ಮಾಡಿದ್ದರಿಂದ ಈದ್ಗಾ ಮೈದಾನ ಅಪವಿತ್ರವಾಗಿದೆ. ಹಾಗಾಗಿ ಕನಕ ಜಯಂತಿ ಆಚರಣೆಗೂ ಮುನ್ನ ಈದ್ಗಾ ಮೈದಾನ ಶುಚಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಳಿಕ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿ ಆಚರಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ಕನಕಪುರದಲ್ಲಿ ಮತ್ತೆ ಮತಾಂತರ ಸದ್ದು – ಪೊಲೀಸರಿಂದ 10ಕ್ಕೂ ಹೆಚ್ಚು ಮಂದಿ ವಿಚಾರಣೆ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ 10ಕ್ಕೂ ಹೆಚ್ಚು ಬಡ ಜನರನ್ನು ಟಾರ್ಗೆಟ್ ಮಾಡಿ, ಅವರೆಲ್ಲರನ್ನು ಮತಾಂತರಕ್ಕೆ (Conversion) ಯತ್ನಿಸಿದ ಆರೋಪ ಬಂದಿದೆ.

    ಕನಕಪುರ (Kanakpura) ಪಟ್ಟಣದ ನವಾಜಿಬಾರೆ ಬಡಾವಣೆಯ ಮನೆಯೊಂದರಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಮತಾಂತರ ಮಾಡಲಿ ಕೆಲ ಕ್ರೈಸ್ತ ಸಮುದಾಯದವರು ಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರೆಲ್ಲರನ್ನು ತಡರಾತ್ರಿ ಮತಾಂತರ ಮಾಡಲು ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ ಶ್ರೀರಾಮ ಸೇನೆಯ (Sri Ram Sena) ಮುಖಂಡರು ಟೌನ್ ಪೊಲೀಸರಿಗೆ (Police) ದೂರು ನೀಡಿದ್ದರು.

    ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಕನಕಪುರ ಟೌನ್ ಪೊಲೀಸರು 12 ಮಂದಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಎಲ್ಲರ ಮಾಹಿತಿ ಕಲೆಹಾಕಿ ಬಳಿಕ ವಾಪಸ್ ಕಳುಹಿಸಿದ್ದಾರೆ.

    ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್ ಮಾತನಾಡಿ, ಬಡ ಕುಟುಂಬಗಳನ್ನು ಗುರಿಯಾಗಿಸಿ ಮಾಡುತ್ತಿರುವ ಇಬ್ಬರು ಕ್ರೈಸ್ತ ಸಮುದಾಯದ ಮುಖಂಡರು ಮತಾಂತರಕ್ಕೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಗಿಲ್ಲ ಎಂದು ಕಿಡಿಕಾರಿದರು.

    ಘಟನೆಗೆ ಸಂಬಂಧಿಸಿ ಸಚಿವ ಅಶ್ವಥ್ ನಾರಾಯಣ್ (Ashwath Narayan) ಪ್ರತಿಕ್ರಿಯಿಸಿ, ಮತಾಂತರ ಆಗಬಾರದು ಅಂತಲೇ ಕಾಯ್ದೆಯನ್ನು ತರಲಾಗಿದೆ. ಧರ್ಮದ ಬದಲಾವಣೆಗೆ ಅವಕಾಶ ಕೊಡಬಾರದು. ಜನತೆಯ ಭಾವನೆಗೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಆ ರೀತಿ ಮತಾಂತರದಲ್ಲಿ ತೊಡಗಿದ್ದರೆ ಕಾನೂನಿನ ಬಿಸಿ ಮುಟ್ಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಅದ್ಧೂರಿ ದಸರಾಗೆ ಖರ್ಚಾಗಿದ್ದು ಬರೋಬ್ಬರಿ 28 ಕೋಟಿ

    ಕನಕಪುರ ಭಾಗದಲ್ಲಿ ಈ ರೀತಿ ಆರೋಪ ಕೇಳಿಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದಿನಿಂದಲೂ ಮತಾಂತರ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕಪಾಲಿ ಬೆಟ್ಟದ ಯೇಸು ಪ್ರತಿಮೆ ವಿಚಾರ ಇನ್ನೂ ಕೋರ್ಟ್‍ನಲ್ಲಿ ಇರುವಾಗಲೇ ಪಡಿತರ ಚೀಟಿ ಮೂಲಕ ಧರ್ಮ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದನ್ನೂ ಓದಿ: ಅಪ್ಪುಗೆ ಕರ್ನಾಟಕ ರತ್ನ : ಅಧಿಕೃತ ಆಹ್ವಾನವಿಲ್ಲ, ಹೋಗಲ್ಲ ಎಂದ ಸಿದ್ಧರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ – BJP ಶಾಸಕ ಎಚ್ಚರಿಕೆ

    ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ – BJP ಶಾಸಕ ಎಚ್ಚರಿಕೆ

    ಬೆಳಗಾವಿ: ರಾಮದುರ್ಗ ಪಟ್ಟಣದಲ್ಲಿ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದವರ ಆರೋಗ್ಯ ವಿಚಾರಿಸಿದ ಬಳಿಕ ಗಲಭೆಕೋರರಿಗೆ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ (Mahadevappa S Yadawad) ಎಚ್ಚರಿಕೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಮನೆಯಲ್ಲಿರುವ ಮಕ್ಕಳು, ಗೂಂಡಾಗಳಿಗೆ ಬುದ್ಧಿ ಹೇಳಿ. ನೀವು ಬುದ್ಧಿ ಹೇಳದೇ ಇದ್ದರೆ ರಾಮದುರ್ಗದಲ್ಲಿ ಮುಂದೆ ಬೇರೆನೇ ನಡೆಯುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RSS ಪಥಸಂಚಲನದಲ್ಲಿ ಮುಸ್ಲಿಂ ಸಮುದಾಯದವರು ಭಾಗಿ- ಹೆಡ್ಗೆವಾರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ನಮನ

    ಗಲಭೆಗೆ ಕುಮ್ಮಕ್ಕು, ಪ್ರಚೋದನೆ ನೀಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡುವುದಿಲ್ಲ. ನಾನು ಶಾಸಕನಾದ ಅವಧಿಯಲ್ಲಿ ಒಮ್ಮೆಯೂ ಹಿಂದೂ-ಮುಸ್ಲಿಂ ಗಲಭೆಯಾಗಲು ಅವಕಾಶ ಕೊಟ್ಟಿಲ್ಲ. ರಾಮದುರ್ಗ ಕ್ಷೇತ್ರದಲ್ಲಿ ಈವರೆಗೆ ಹಿಂದೂ-ಮುಸ್ಲಿಂ ಮಧ್ಯೆ ಒಂದೂ ಗಲಭೆ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: 40 ತಲೆಯ ರಾವಣನು ರಾಮನ ಬಿಲ್ಲು, ಬಾಣ ಕಿತ್ತುಕೊಂಡ : ಶಿಂಧೆಗೆ ಉದ್ಧವ್ ಠಾಕ್ರೆ ತಿರುಗೇಟು

    ಈದ್ ಮುಸ್ಲಿಮರ (Muslim Community) ದೊಡ್ಡ ಹಬ್ಬ. ಹಿಂದೂಗಳಿಗೂ ಭೂದೇವಿಗೆ ಚರಗ ಚೆಲ್ಲುವ ಶೀಗಿಹುಣ್ಣಿಮೆ ಹಬ್ಬವಾಗಿದೆ. ಇದೇ ದಿನವೇ ಇಂಥ ಘಟನೆ ನಡೆದಿರುವುದು ಖಂಡನೀಯ. ಕಿಡಿಗೇಡಿಗಳನ್ನು ಹದ್ದುಬಸ್ತಿನಲ್ಲಿಡಲು ಗೃಹಸಚಿವರು, ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತೇನೆ. ಆರೋಪಿಗಳ ವಿರುದ್ಧ ಗೂಂಡಾ ಕೇಸ್ ದಾಖಲಿಸಲು ಪೊಲೀಸರಿಗೆ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

    ಇದಕ್ಕೂ ಮೊದಲು ಶಾಸಕ ಮಹಾದೇವಪ್ಪ ಯಾದವಾಡ ಚಾಕುವಿನಿಂದ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿರುವ ರವಿ ಬಂಡಿವಡ್ಡರ ಅವರ ಆರೋಗ್ಯ ವಿಚಾರಿಸಿದರು. ಈ ವೇಳೆ ರವಿ ಬಂಡಿವಡ್ಡರ ಪೋಷಕರ ಬಳಿ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೇ ಕ್ರಮವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಆಜಾನ್ ವಿರುದ್ಧ ಮತ್ತೆ ಸಮರ – 23ರಂದು ರಾಜ್ಯಾದ್ಯಂತ ಹೋರಾಟಕ್ಕೆ ಶ್ರೀರಾಮಸೇನೆ ಕರೆ

    ಕಲಬುರಗಿ: ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ನೀಡಿದ್ದ ಆಜಾನ್ ಯುದ್ಧ ಮತ್ತೆ ಸದ್ದು ಮಾಡ್ತಿದೆ. ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಜಾನ್ ವಿರುದ್ಧ ಹಿಂದೂ ಸಂಘಟನೆಗಳು ಹೋರಾಟಕ್ಕೆ ನಿರ್ಧರಿಸಿವೆ.

    ಮಸೀದಿ ಧ್ವನಿವರ್ಧಕ ವಿರುದ್ಧ ಆಗಸ್ಟ್ 23ರಂದು, ರಾಜ್ಯಾದ್ಯಂತ ಶ್ರೀರಾಮಸೇನೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಎಲ್ಲಾ ಜಿಲ್ಲೆಯ ಎಸ್‌ಪಿ ಕಚೇರಿಗಳ ಎದುರು ಪ್ರತಿಭಟನೆ ಮಾಡೋದಾಗಿ ಶ್ರೀರಾಮಸೇನೆ ಕರೆ ನೀಡಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್

    loudspeakers

    ಈ ಕುರಿತು ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು, ರಾಜ್ಯದ ಅನೇಕ ಮಸೀದಿಗಳಲ್ಲಿ ಇನ್ನೂ ಅನಧಿಕೃತವಾಗಿ ಆಜಾನ್ ಕೂಗಲು ಮೈಕ್‌ಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23 ರಂದು ಹೋರಾಟದ ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]