Tag: Sri Ram Mandir

  • ಕನ್ನಡದಲ್ಲೂ ಅಯೋಧ್ಯೆಯ ಶ್ರೀರಾಮಮಂದಿರದ ಬಯೋಪಿಕ್

    ಕನ್ನಡದಲ್ಲೂ ಅಯೋಧ್ಯೆಯ ಶ್ರೀರಾಮಮಂದಿರದ ಬಯೋಪಿಕ್

    ಯೋಧ್ಯೆಯಲ್ಲಿ (Ayodhya) ಶ್ರೀರಾಮನ ಪ್ರಾಣಪ್ರತಿಷ್ಠಾಪನೆಯಾದ ಮಹಾಪರ್ವ ಕಾಲವಿದು. ಆದರೆ ಶ್ರೀರಾಮ ತನ್ನ ಜನ್ಮಭೂಮಿಯಲ್ಲಿ ಪ್ರತಿಷ್ಠಾಪನೆಯಾಗಲು 500 ವರ್ಷಗಳು ಕಾಯಬೇಕಾಯಿತು. 1528 ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಯಿತು. ಆನಂತರ  ಆ ಜಾಗದಲ್ಲಿ ಶ್ರೀರಾಮನ ಮಂದಿರ (Sri Ram Mandir) ನಿರ್ಮಾಣವಾಗಬೇಕೆಂದು ಸಾಕಷ್ಟು ಹೋರಾಟಗಳು‌ ನಡೆದವು. ಈ ವಿವಾದ ಕೋರ್ಟ್ ಮೆಟ್ಟಿಲು ಏರಿತ್ತು. ನೂರಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದಾದರೂ ಒಂದು ಕೇಸ್ ಕೋರ್ಟ್ ನಲ್ಲಿ ನಡೆದಿದ್ದರೆ ಅದು ಶ್ರೀರಾಮ ಜನ್ಮಭೂಮಿಯದೆ ಇರಬಹುದು. ಕೊನೆಗೂ 2019 ರಲ್ಲಿ ನ್ಯಾಯಾಲಯ ಅಯೋಧ್ಯೆಯಲ್ಲಿ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. 2024 ರ ಜನವರಿಯಲ್ಲಿ ಅದ್ದೂರಿಯಾಗಿ ಶ್ರೀರಾಮನ ಪ್ರತಿಷ್ಠಾಪನೆಯಾಯಿತು. ಕೋಟ್ಯಾಂತರ ಜನರ ಕನಸು ನನಸ್ಸಾಯಿತು.

    ಈ ಅಯೋಧ್ಯೆಯ ಶ್ರೀರಾಮನ ಮಂದಿರದ ಬಯೋಪಿಕ್ ಅನ್ನು ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಶ್ರೀನಿವಾಸರಾಜು (Srinivasaraju) ಮುಂದಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಆದರೆ “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಇದೆ. “ಕೃಷ್ಣಂ ಪ್ರಣಯ ಸಖಿ” ಚಿತ್ರವನ್ನು ನಿರ್ಮಿಸಿರುವ ಪ್ರಶಾಂತ್ ಜಿ ರುದ್ರಪ್ಪ ತ್ರಿಶೂಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ..

    ಸಾಮಾನ್ಯವಾಗಿ ಮನುಷ್ಯರ ಬಯೋಪಿಕ್ ಇರುತ್ತದೆ. ಆದರೆ, ದೇವಸ್ಥಾನವೊಂದರ ಬಯೋಪಿಕ್ ಇರುವುದು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಮಾತ್ರ ಎನ್ನುವುದು ನನ್ನ ಅಭಿಪ್ರಾಯ.‌ ಸುಮಾರು 500 ವರ್ಷಗಳ ಇತಿಹಾಸವನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಬಾಬರಿ ಮಸೀದಿ ಗೂ ಮೊದಲು ರಾಜಾ ವಿಕ್ರಮಾದಿತ್ಯ ಪ್ರತಿಷ್ಠಾಪಿಸಿದ  ಶ್ರೀರಾಮ ಮಂದಿರದಿಂದ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ರಾಮಾಯಣದ ಕೆಲವು ಅಂಶಗಳನ್ನು ತೆಗೆದುಕೊಳ್ಳುತ್ತಿದ್ದೇನೆ‌. ಹಾಗಂತ ಇದು ಸಂಪೂರ್ಣ ರಾಮಾಯಣದ ಕಥೆಯಲ್ಲ.   ದಶರಥ, ರಾಮ, ಸೀತಾ, ಹನುಮಂತ, ವಾಲಿ ಹಾಗೂ ವಾಲ್ಮೀಕಿ ಈ ಆರು ಪಾತ್ರಗಳು ಮಾತ್ರ ಇರುತ್ತದೆ. ತುಳಿಸಿದಾಸರ ಪಾತ್ರ ಕೂಡ ಈ ಚಿತ್ರದಲ್ಲಿರಲಿದೆ. ಶ್ರೀರಾಮನ ಆದರ್ಶದ ಗುಣಗಳನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತದೆ.  “ಸತ್ಯಂ ಶಿವಂ ಸುಂದರಂ” ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದ್ದು, ಮೂರು ಭಾಗಗಳಲ್ಲಿ ಚಿತ್ರ ಬರಲಿದೆ. ಶೀರ್ಷಿಕೆ ಇನ್ನು ನಿಗದಿಯಾಗಿಲ್ಲ. ಚಿತ್ರ ಬಹಳ ಅದ್ದೂರಿಯಾಗಿ ನಿರ್ಮಾಣವಾಗಲಿದ್ದು, ಭಾರತದ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ. ಶ್ರೀರಾಮನವಮಿಯ ಪರ್ವಕಾಲದಲ್ಲಿ ಈ ನೂತನ ಚಿತ್ರದ ಕುರಿತು ಇಷ್ಟು ಹೇಳಲು ಬಯಸುತ್ತೇನೆ. ಮುಂದಿನ ದಿನಗಳಲ್ಲಿ  ಚಿತ್ರದ ಶೀರ್ಷಿಕೆ ಸೇರಿದಂತೆ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.

  • Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    Ayodhya Ram Mandir – ಶ್ರೀರಾಮಲಲ್ಲಾ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರು

    ಅಯೋಧ್ಯೆ: 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ (Sri Ram Mandir) ಉದ್ಘಾಟನೆ ನೆರವೇರಲಿದೆ. ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿರುವ ರಾಮಲಲ್ಲಾನ ಅಭಿಷೇಕಕ್ಕೆ ನೇಪಾಳದಿಂದ 16 ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ.

    ಹೌದು. ಜನವರಿ 22 ರಂದು ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಪ್ರಾಣ ಪ್ರತಿಷ್ಠಾಪನೆಗಾಗಿ ನೇಪಾಳ ವಿವಿಧ ರೀತಿಯ ಆಭರಣಗಳು, ವಸ್ತುಗಳು, ವಸ್ತ್ರ ಹಾಗೂ ಸಿಹಿ ತಿನಿಸುಗಳು ಸೇರಿ ಹಲವು ಸ್ಮರಣಿಕೆಗಳನ್ನು ಕಳುಹಿಸಲು ಸಜ್ಜಾಗಿದೆ. ಇದರೊಂದಿಗೆ ರಾಮಲಲ್ಲಾನ ಜಲಾಭಿಷೇಕಕ್ಕೆ ನೇಪಾಳದ ಪವಿತ್ರ ನದಿಗಳಿಂದಲೇ (Nepal Rivers Water) ನೀರನ್ನು ತರಿಸಿರುವುದು ವಿಶೇಷ, ಇದಕ್ಕೆ ಕಾರಣವೂ ಇದೆ.

    ನೇಪಾಳ ನದಿಗಳ ನೀರು ಏಕೆ?
    ಅಯೋಧ್ಯೆಗೂ, ನೆರೆಯ ರಾಷ್ಟ್ರ ನೇಪಾಳಕ್ಕೂ ವಿಶೇಷ ಸಂಬಂಧವಿದೆ. ನೇಪಾಳದಲ್ಲಿ ಜನಿಸಿದ ಸೀತಾಮಾತೆಯನ್ನು ಭಗವಾನ್ ಶ್ರೀರಾಮನು ವರಿಸಿದ್ದ. ಅಂದಿನಿಂದ ಭಾರತ-ನೇಪಾಳದ ಸಂಬಂಧವಿದೆ, ಇದನ್ನು ರೋಟಿ-ಭೇಟಿ ಸಂಬಂಧ ಅಂತಲೂ ಕರೆಯುತ್ತಾರೆ. ಈಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಗರ್ಭಗುಡಿ ಉದ್ಘಾಟನೆಯಾಗುತ್ತಿದ್ದು ಬಾಲರಾಮನ (Ram Lalla) ಅಭಿಷೇಕಕ್ಕೆ ಸೀತಾಮಾತೆಯ ತವರು ನೇಪಾಳದಿಂದ ಪವಿತ್ರ ನದಿಗಳ ನೀರನ್ನು ತರಿಸಲಾಗಿದೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ 84 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ- ಯೋಗಿ ಸರ್ಕಾರದ ಮಹತ್ವದ ನಿರ್ಧಾರ

    ಸಪ್ತಕೋಶಿ, ನಾರಾಯಿಣಿ, ಮಹಾಕಾಳಿ, ಕಾಳಿ ಗಂಡಕಿ, ಗಂಗಾ ಸಾಗರ್, ಬಾಗ್ಮತಿ, ಕಮಲಾ ನದಿಗಳು ಸೇರಿದಂತೆ 16 ಪವಿತ್ರ ನದಿಗಳ ನೀರನ್ನು ಶ್ರೀರಾಮನ ಅಭಿಷೇಕಕ್ಕಾಗಿ ತರಿಸಲಾಗಿದೆ. ನೇಪಾಳದಲ್ಲಿರುವ ರಾಮಭಕ್ತರ ಸಮಿತಿ ಮೂಲಕ ನೀರನ್ನು ಸಂಗ್ರಹಿಸಿ ಭಾರತಕ್ಕೆ ತರಿಸಲಾಗಿದೆ. ಈ ಜಲವನ್ನು ಅಯೋಧ್ಯಾ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮುಖ್ಯ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಹಸ್ತಾಂತರಿಸುತ್ತೇವೆ. ರಾಮಮಂದಿರ ಗರ್ಭಗುಡಿ ಉದ್ಘಾಟನೆಯ ದಿನ ವಿವಿಧ ಅಭಿಷೇಕಗಳು ನೇರವೇರುವ ಹೊತ್ತಿನಲ್ಲಿ, ಈ ಪವಿತ್ರ ಜಲದಿಂದ ಅಭಿಷೇಕ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರೈಲ್ವೇ ನಿಲ್ದಾಣಕ್ಕೆ `ಅಯೋಧ್ಯಾ ಧಾಮ್’ ಎಂದು ಮರುನಾಮಕರಣ- ವಿಶೇಷತೆ ಏನು?

    ಎಲ್ಲಿಂದ ಏನೇನು ಬರುತ್ತೆ?
    * ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕ ನಡೆಯಲಿದೆ. ಇದಾದ ನಂತರ ದೇವರಿಗೆ ವಿಶೇಷ ನೈವೇದ್ಯ ಸಮರ್ಪಿಸಲಾಗುತ್ತದೆ. ಭಗವಾನ್ ಶ್ರೀರಾಮನ ತಾಯಿಯ (ಕೌಸಲ್ಯೆ) ಮನೆ ಛತ್ತೀಸ್‌ಗಢದಿಂದ 3,000 ಕ್ವಿಂಟಾಲ್ ಅಕ್ಕಿ ಬರುತ್ತಿದೆ. ಇದು ಇಲ್ಲಿಯವರೆಗಿನ ಅತಿ ಹೆಚ್ಚಿನ ಪ್ರಮಾಣದ ಅಕ್ಕಿ ರವಾನೆಯಾಗಿದ್ದು, ಇದು ಅಯೋಧ್ಯೆಗೆ ತಲುಪಲಿದೆ. ಇದನ್ನು ಛತ್ತೀಸ್‌ಗಢದ ವಿವಿಧ ಜಿಲ್ಲೆಗಳಿಂದ ಸಂಗ್ರಹಿಸಲಾಗಿದೆ. ಇದನ್ನೂ ಓದಿ: Ayodhya Ram Mandir: ಅಹಮದಾಬಾದ್‌ ಗ್ರೂಪ್‌ನಿಂದ ಅಯೋಧ್ಯೆಗೆ 450 ಕೆ.ಜಿ ತೂಕದ ಮೆಗಾ ಡ್ರಮ್ ಗಿಫ್ಟ್‌

    * ಜನವರಿ 5 ರಂದು ಭಗವಾನ್ ರಾಮನ ಅತ್ತೆ ಮನೆಯಾದ ನೇಪಾಳದ ಜನಕ್‌ಪುರದಿಂದ ಬಟ್ಟೆ, ಹಣ್ಣುಗಳು ಮತ್ತು ಒಣ ಹಣ್ಣುಗಳು ಅಯೋಧ್ಯೆಗೆ ತಲುಪುತ್ತವೆ. ಇದಲ್ಲದೆ, ಉಡುಗೊರೆಗಳಿಂದ ಅಲಂಕರಿಸಲ್ಪಟ್ಟ 1,100 ಪ್ಲೇಟ್‌ಗಳು ಸಹ ಇರುತ್ತವೆ.

    * ನೇಪಾಳದಿಂದ ಆಭರಣಗಳು, ಪಾತ್ರೆಗಳು, ಬಟ್ಟೆಗಳು ಮತ್ತು ಸಿಹಿತಿಂಡಿಗಳು ಸಹ ಬರಲಿವೆ. ಇದರಲ್ಲಿ 51 ಬಗೆಯ ಸಿಹಿತಿಂಡಿಗಳು ಇರಲಿವೆ. ಜೊತೆಗೆ ಮೊಸರು, ಬೆಣ್ಣೆ ಮತ್ತು ಬೆಳ್ಳಿಯ ಪಾತ್ರೆಗಳು ಸೇರಿವೆ.

  • ಯಾರೋ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ: ಸೋಮಣ್ಣ ಬೇಸರ

    ಯಾರೋ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ: ಸೋಮಣ್ಣ ಬೇಸರ

    – ಜನವರಿ 9ಕ್ಕೆ ದೆಹಲಿಯಲ್ಲಿ ವರಿಷ್ಠರನ್ನ ಭೇಟಿ ಮಾಡ್ತೇನೆ
    – ನನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು
    – ಅನ್ಯಾಯ ಸರಿಪಡಿಸುವಂತೆ ಹೈಕಮಾಂಡ್‌ಗೆ ಕೇಳ್ತೀನಿ ಎಂದ ಸೋಮಣ್ಣ

    ಬೆಂಗಳೂರು: ಯಾರೋ ನನಗೆ ಮಾಟ ಮಾಡಿಸಿದ್ರೇನೋ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು ಎಂದು ಬಿಜೆಪಿ ಮಾಜಿ ಸಚಿವ ವಿ.ಸೋಮಣ್ಣ (V Somanna) ಸ್ವಪಕ್ಷೀಯರ ವಿರುದ್ಧ ಮತ್ತೆ ಬೇಸರ ಹೊರಹಾಕಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಅನ್ಯಾಯ ಆಗಿದೆ, ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ಗೋವಿಂದರಾಜನಗರ ಕ್ಷೇತ್ರ ಬಿಡಬಾರದಿತ್ತು. ಆಗ ಯಾರಾದ್ರು ನನಗೆ ಮಾಟ ಮಂತ್ರ ಮಾಡಿಸಿದ್ದರೇನೋ, ಕ್ಷೇತ್ರ ಬಿಟ್ಟೆ. ನನಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಜನವರಿ 9ಕ್ಕೆ ದೆಹಲಿಯಲ್ಲಿ (New Delhi) ವರಿಷ್ಠರ ಭೇಟಿ ಆಗುತ್ತೇನೆ, ನನಗೆ ಆದ ಅನ್ಯಾಯವನ್ನ ವರಿಷ್ಠರ ಬಳಿ ಹೇಳುತ್ತೇನೆ. ನರೇಂದ್ರ ಮೋದಿ (Narendra Modi) ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.

    ನನಗೆ ನೇರವಾಗಿ ತೊಂದರೆ ಆಗಿದೆ. ಯಾರು ಕಾರಣವೋ ಅವರನ್ನ ಕೂರಿಸಿ ಮಾತುಕತೆ ನಡೆಸಲಿ. ಇದನ್ನ ಸರಿಪಡಿಸಿ ಎಂದು ಹೈಕಮಾಂಡ್ ನಾಯಕರ ಬಳಿ ಕೇಳಿದ್ದೇನೆ. ಯಾರಿಂದ ತೊಂದರೆ ಆಗಿದೆಯೋ ಅವರನ್ನ ಕರೆಸಿ ಸೂಚನೆ ಕೊಡಿಸಬೇಕು. ಬಹುಶಃ ಜನವರಿ 10ರ ಒಳಗೆ ಎಲ್ಲವೂ ಬಗೆಹರಿಯಲಿದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ರಾಷ್ಟ್ರೀಯ ವರಿಷ್ಠರ ಮಾತಿಗೆ ಬದ್ಧನಿದ್ದೇನೆ. ಒಟ್ಟಿನಲ್ಲಿ ನಮ್ಮ ಮೇಲೆ ಗದಾಪ್ರಹಾರ ಆಗದಂತೆ ಎಲ್ಲರಿಗೂ ಕಟ್ಟುನಿಟ್ಟಿನ ಸೂಚನೆ ಆಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಹೆರಿಗೆಯಾಗಿದ್ದ ಬಾಣಂತಿ ರಾತ್ರಿ ಹೊಟ್ಟೆನೋವಿನಿಂದ ನರಳಿ ಸಾವು; ವೈದ್ಯರ ನಿರ್ಲಕ್ಷ್ಯ ಆರೋಪ

    500 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಮಮಂದಿರ ಯೋಜನೆ ಸಾಕಾರವಾಗಿದೆ. ಈಗಷ್ಟೇ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ರಾಮಜನ್ಮಭೂಮಿ ಅನ್ನೋದು ಕೇವಲ ಹೇಳುವಂತದ್ದಲ್ಲ, ಮೋದಿ ಬರ್ತಾರೆ, ರಾಮಮಂದಿರ ಮಾಡ್ತಾರೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಇದರಿಂದ ಭಾರತಕ್ಕೆ ಭವಿಷ್ಯ ಇದೆ. ರಾಮಮಂದಿರ ವಿರೋಧಿಸಿ ಅರ್ಜಿ ಕೊಟ್ಟವರೇ ಇವತ್ತು ರಾಮಮಂದಿರ ಉದ್ಘಾಟನೆಗೆ ಬರ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಪತ್ನಿ ಮಾಡ್ರನ್‌ ಡ್ರೆಸ್‌ ಧರಿಸುತ್ತಿದ್ದಕ್ಕೆ ಕೆಂಡವಾದ ಪತಿ – ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

  • Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    Ayodhya Ram Mandir: ಆಧಾರ್ ಕಡ್ಡಾಯ – ಒಂದು ಆಹ್ವಾನ ಪತ್ರಿಕೆಗೆ ಒಬ್ಬರಿಗೆ ಮಾತ್ರ ಪ್ರವೇಶ

    – ಅಯೋಧ್ಯೆ ಮಂದಿರ ಉದ್ಘಾಟನೆಗೆ ನಿಯಮ ಪಾಲಿಸಲು ಮನವಿ

    ಅಯೋಧ್ಯೆ: ಜನವರಿ 22ರಂದು ನಡೆಯುವ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ (Inivitation Card) ಹಂಚಿಕೆ ಕಾರ್ಯ ಮುಂದುವರಿದಿದ್ದು, ಬಿಗಿ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕಾರ್ಯಕ್ರಮಕ್ಕೆ ಆಗಮಿಸುವ ಸಾಧು ಸಂತರಿಗೆ, ಗಣ್ಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಇದರಲ್ಲಿ ಅಯೋಧ್ಯೆಯಲ್ಲಿ (Ayodhya) ಕಾರ್ಯಕ್ರಮಕ್ಕೆ ಬರುವುದಾದರೆ, ಸೂಚನೆಗಳನ್ನು ಪಾಲಿಸುವಂತೆ ಟ್ರಸ್ಟ್ ಕೋರಿಕೊಂಡಿದೆ.

    Ram Mandir Invitation

    ಸಾಧು ಸಂತರ ಬಳಿ ವಿನಮ್ರ ನಿವೇದನೆ:

    • ನಿಮ್ಮ ಆಧಾರ್ ಕಾರ್ಡ್ (Aadhar Card) ನಿಮ್ಮ ಜೊತೆ ಇರಲಿ.
    • ಭದ್ರತಾ ಕಾರಣಗಳಿಗಾಗಿ ಮೊಬೈಲ್, ಪರ್ಸ್, ಬ್ಯಾಗ್, ಛತ್ರಿ, ಸಿಂಹಾಸನ, ವೈಯಕ್ತಿಕ ಪೂಜೆ ಸಾಮಗ್ರಿ ಅಥವಾ ಗುರಪಾದುಕೆಯನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೊಂಡೊಯ್ಯುವುದು ಸಾಧ್ಯವಿಲ್ಲ.
    • ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೆಳಗ್ಗೆ 11.00 ಗಂಟೆ ಮೊದಲು ಪ್ರವೇಶಿಸಿ.
    • ಕಾರ್ಯಕ್ರಮ 3 ಗಂಟೆಗೂ ಅಧಿಕ ಕಾಲ ನಡೆಯಬಹುದು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲು ಮತ್ತು ವಾಪಸ್ ಬರಲು ಸುಮಾರು 1 ಕಿಲೋಮೀಟರ್ ನಡೆಯಬೇಕು.
    • ಇದು ವೈಯಕ್ತಿಕ ಆಮಂತ್ರಣ. ಒಂದು ಆಮಂತ್ರಣ ಪತ್ರಿಕೆ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ.
    • ನಿಮ್ಮ ಸಹಾಯಿಗಳು, ಶಿಷ್ಯಂದಿರು ನಿಮ್ಮ ಜೊತೆ ಬಂದರೂ ಅವರು ಕಾರ್ಯಕ್ರಮ ನಡೆಯುವ ಸ್ಥಳದಿಂದ ಹೊರಗೆ ಉಳಿಯಬೇಕು. ಶಿಷ್ಯಂದಿರು ಅಥವಾ ಸೇವಕರಿಗೆ ಪ್ರತ್ಯೇಕ ಆಮಂತ್ರಣ ಪತ್ರ ನೀಡುವುದಿಲ್ಲ.
    • ಯಾವುದೇ ಸಂತರು, ಸ್ವಾಮಿಗಳ ಜೊತೆ ಭದ್ರತಾ ಸಿಬ್ಬಂದಿ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಅವರಿಗೆ ಪ್ರವೇಶವಿಲ್ಲ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಪಾಲ್ಗೊಳ್ಳುವುದರಿಂದ ಈ ಸ್ಥಳ ಮೊದಲೇ ಸುರಕ್ಷಿತವಾಗಿರುತ್ತದೆ.
    • ಪ್ರಧಾನ ಮಂತ್ರಿ ಮಂದಿರದಿಂದ ವಾಪಸ್ ಹೋದ ಬಳಿಕವಷ್ಟೇ, ಮಂದಿರದಲ್ಲಿ ವಿರಾಜಮಾನವಾಗಿರುವ ಸಂತ ಮಹಾಪುರುಷ ರಾಮಲಲ್ಲಾನ ದರ್ಶನ ಪಡೆಯಬಹುದು.

  • ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

    ಅಯೋಧ್ಯೆ: ಕೋಟ್ಯಂತರ ರಾಮಭಕ್ತರ ಕನಸು ನನಸಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ. ಅಯೋಧ್ಯೆ ಶ್ರೀರಾಮ ಮಂದಿರ (Sri Ram Mandir) ಉದ್ಘಾಟನೆಯ ಆಮಂತ್ರಣ ಪತ್ರಿಕೆ (Personal Invitation) ಹಂಚಿಕೆ ಈಗಾಗಲೇ ಶುರುವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಜಿಸ್ಟರ್ ಪೋಸ್ಟ್ ಮೂಲಕ ಸಾಧು ಸಂತರಿಗೆ ಹಾಗೂ ಗಣ್ಯರಿಗೆ ಆಮಂತ್ರಣ ಪತ್ರಿಕೆ ಕಳಿಸುತ್ತಿದೆ.

    ಇದರಲ್ಲಿ ಕೆಲವು ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಟರ್ ಹೆಡ್‍ನಲ್ಲಿ ವೈಯಕ್ತಿಕವಾಗಿ ಆಹ್ವಾನಿತರ ಹೆಸರು ಉಲ್ಲೇಖಿಸಿ ಆಮಂತ್ರಣ ಪತ್ರಿಕೆ ಕಳಿಸಲಾಗುತ್ತಿದೆ. ಇದನ್ನೂ ಓದಿ: ಆಗಸ್ಟ್‌ 15 ರಷ್ಟೇ ಜನವರಿ 22 ಮಹತ್ವದ ದಿನ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ ಕಾರ್ಯದರ್ಶಿ

    ಆಮಂತ್ರಣ ಪತ್ರದಲ್ಲೇನಿದೆ..?

    ಶ್ರೀಚರಣಗಳಿಗೆ ವಂದನೆ.
    ಪ್ರಭು ಶ್ರೀರಾಮನ (Lord Rama) ಕೃಪೆಯಿಂದ ದೇವರ ಆರಾಧನೆ ಚೆನ್ನಾಗಿ ನಡೆದು, ಎಲ್ಲ ಆಶ್ರಮವಾಸಿಗಳು ಸಂತೋಷದಿಂದಿರಬಹುದು.

    ಸುದೀರ್ಘ ಹೋರಾಟದ ನಂತರ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಇದನ್ನೂ ಓದಿ: Ayodhya Shri Ram Airport: ಜ.6 ರಿಂದ ಬೆಂಗ್ಳೂರು ಸೇರಿದಂತೆ ಪ್ರಮುಖ ನಗರಗಳಿಗೆ ವಿಮಾನ ಹಾರಾಟ ಶುರು

    ಪೌಷ, ಶುಕ್ಲ ದ್ವಾದಶಿ ವಿಕ್ರಮ ಸಂವತ್ಸರ 2080, ಸೋಮವಾರ, 22 ಜನವರಿ 2024, ಗರ್ಭಗುಡಿಯಲ್ಲಿ ರಾಮ ಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಪುಣ್ಯ ಸಂದರ್ಭದಲ್ಲಿ ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಹಾಗೂ ಈ ದಿನದ ಘನತೆಯನ್ನು ಹೆಚ್ಚಿಸಬೇಕು ಎನ್ನುವುದು ನಮ್ಮ ಅಪೇಕ್ಷೆ.

    ನೀವು ಜನವರಿ 21ರೊಳಗೆ ಅಯೋಧ್ಯೆ ತಲುಪಲು ವ್ಯವಸ್ಥೆ ಮಾಡಿಕೊಳ್ಳಿ. ಎಷ್ಟು ಬೇಗ ನೀವು ಅಯೋಧ್ಯೆ ತಲುಪುತ್ತೀರೋ, ಅದರಿಂದ ನಿಮಗೆ ಅನುಕೂಲವಾಗಲಿದೆ. ಬರುವುದು ತಡವಾದರೆ ಸಮಸ್ಯೆಗಳನ್ನು ಎದುರಿಸಬೇಕಾದೀತು. 23 ಜನವರಿ 2024ರ ನಂತರವೇ ಅಯೋಧ್ಯೆಯಿಂದ ವಾಪಸ್ ಹೊರಡಲು ಪ್ಲ್ಯಾನ್ ಮಾಡಿ.

    ಈ ಶುಭ ಸಂದರ್ಭದಲ್ಲಿ ಅಯೋಧ್ಯಾ ಧಾಮದಲ್ಲಿ ನೀವು ಉಪಸ್ಥಿತರಿರಬೇಕು ಎಂದು ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ.

    ನಿಮ್ಮ ಶ್ರೀಚರಣಗಳಿಗೆ ಪ್ರಣಾಮ.
    ಚಂಪತ್ ರಾಯ್,
    ಮುಖ್ಯ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

  • ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ – ಮೋದಿಗೆ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ

    ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ – ಮೋದಿಗೆ ರಾಮ ಜನ್ಮಭೂಮಿ ಟ್ರಸ್ಟ್ ಆಹ್ವಾನ

    ನವದೆಹಲಿ: 2024 ಜನವರಿ 22 ರಂದು ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿರುವ (Ayodhya) ರಾಮಮಂದಿರ (Sri Ram Mandir) ಉದ್ಘಾಟನೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅಧಿಕೃತ ಆಹ್ವಾನ ನೀಡಿದೆ.

    ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನರೇಂದ್ರ ಮೋದಿ, ಇಂದು ನನಗೆ ಅತ್ಯಂತ ಭಾವನಾತ್ಮಕ ದಿನವಾಗಿದೆ. ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಅಧಿಕಾರಿಗಳು ನನ್ನ ನಿವಾಸಕ್ಕೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ತುಂಬಾ ಧನ್ಯನಾಗಿದ್ದೇವೆ. ನನ್ನ ಜೀವನದಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಮೋದಿ ತಿಳಿಸಿದ್ದಾರೆ.

    ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಚಂಪತ್ ರಾಯ್ ಅವರು ಜನವರಿ 22 ರಂದು ದೇವಾಲಯದಲ್ಲಿ ಶ್ರೀರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ಖಚಿತಪಡಿಸಿದ್ದಾರೆ ಮತ್ತು ಪ್ರಧಾನಿ ಮೋದಿ ಅವರ ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಮೈಸೂರಿನ ಆಧುನಿಕ ಶ್ರವಣ ಕುಮಾರ – ಹಳೆ ಸ್ಕೂಟರ್‌ನಲ್ಲಿ ತಾಯಿಯೊಂದಿಗೆ 4 ದೇಶ ಸುತ್ತಿದ

    2019ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ನಂತರ ಕೇಂದ್ರವು ದೇವಾಲಯ ನಿರ್ಮಾಣ ಹಂತದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅನ್ನು ಸ್ಥಾಪಿಸಿತು. 2020ರ ಆಗಸ್ಟ್ 5 ರಂದು ಪ್ರಧಾನಿ ಮೋದಿ ದೇವಾಲಯದ ಶಂಕುಸ್ಥಾಪನೆ ನೆರವೇರಿಸಿದರು. ಸದ್ಯ ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿ ದೇವಾಲಯ ನಿರ್ಮಾಣದ ಕೆಲಸ ಸ್ಥಿರವಾದ ವೇಗದಲ್ಲಿ ಸಾಗುತ್ತಿದೆ. ಇದನ್ನೂ ಓದಿ: ಇಸ್ರೇಲ್ ರಾಯಭಾರಿ ನೌರ್ ಗಿಲೋನ್ ಭೇಟಿಯಾದ ನಟಿ ಕಂಗನಾ ರಣಾವತ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]