Tag: sri ram

  • ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

    ದೇಶದ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ ಮೋದಿ

    – ಪ್ರಭು ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ: ಪ್ರಧಾನಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ದೇಶದ ಜನತೆಗೆ ಶ್ರೀರಾಮನವಮಿ (Ram Navami) ಶುಭಾಶಯ ತಿಳಿಸಿದ್ದಾರೆ. ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸಿದ್ದಾರೆ.

    ಶ್ರೀರಾಮನವಮಿ ಹಿನ್ನೆಲೆಯಲ್ಲಿ ಎಕ್ಸ್‌ ಪೋಸ್ಟ್‌ ಹಾಕಿದ ಮೋದಿ, ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು. ಪ್ರಭು ಶ್ರೀರಾಮನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ ಮತ್ತು ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ನಮಗೆ ಮಾರ್ಗದರ್ಶನ ನೀಡಲಿ. ಇಂದು ತಡವಾಗಿ ರಾಮೇಶ್ವರಂನಲ್ಲಿ ಇರಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ರಾಮನವಮಿ ಇತಿಹಾಸ, ಆಚರಣೆಯ ಮಹತ್ವವೇನು?

    ಪ್ರಧಾನಿಯವರು ಇಂದು ಮಧ್ಯಾಹ್ನ ತಮಿಳುನಾಡಿನ ರಾಮೇಶ್ವರಂಗೆ ಭೇಟಿ ನೀಡಲಿದ್ದು, ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

    ರಾಮೇಶ್ವರಂನಲ್ಲಿ ಮೋದಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯನ್ನು (ಹೊಸ ಪಂಬನ್ ರೈಲು ಸೇತುವೆ) ಉದ್ಘಾಟಿಸಲಿದ್ದಾರೆ. ನಂತರ ಮಧ್ಯಾಹ್ನ 12:45 ರ ಸುಮಾರಿಗೆ ಅವರು ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಲಿದ್ದಾರೆ.

    ಮಧ್ಯಾಹ್ನ 1:30 ರ ಸುಮಾರಿಗೆ ರಾಮೇಶ್ವರಂನಲ್ಲಿ ಅವರು ತಮಿಳುನಾಡಿನಲ್ಲಿ 8,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ರೈಲು ಮತ್ತು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ಆಧ್ಯಾತ್ಮಿಕ ಶಕ್ತಿ ನೀಡುವ ಶ್ರೀರಾಮ ದೇವಾಲಯಗಳಿವು…!

  • ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

    – ಖುದ್ದು ಮಹಿಳೆಯರೇ ಧ್ವಜ ಹೊಲಿದು ಹಂಚಿಕೆ

    ಬೀದರ್: ಮಂತ್ರಾಕ್ಷತೆ ಬಳಿಕ ಮನೆ ಮನೆಗೆ ಭಗವಾಧ್ವಜ (Bhagwa Dhwaja) ವಿತರಣೆ ಮಾಡಲಾಗುತ್ತಿದೆ. ಬೀದರ್‌ನ ರಾಮಭಕ್ತರು ಈ ಕೆಲಸ ಮಾಡುತ್ತಿದ್ದಾರೆ. ಜನವರಿ 22ರಂದು ಪ್ರತಿ ಮನೆ ಮನೆಯ ಮೇಲೂ ಭಗವಾಧ್ವಜ ಹಾರಾಡುವಂತೆ ಮಾಡುತ್ತಿದ್ದಾರೆ.

    ಬೀದರ್‌ನ (Bidar) ಈ ಮಹಿಳಾ ಭಕ್ತರು ಶ್ರೀರಾಮನಿಗಾಗಿ (Sri Ram) ಬರೋಬ್ಬರಿ ಒಂದು ಸಾವಿರ ಭಗವಾಧ್ವಜ ಹಾರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಾಮಾಜಿಕ ಮಾಧ್ಯಮದಲ್ಲಿ ರಾಮಲಲ್ಲಾ ‘ದಿವ್ಯ ದರ್ಶನ’; ವಿಗ್ರಹದ ಫೋಟೋಗಳು ವೈರಲ್‌ – ಜೈ ಶ್ರೀರಾಮ್‌ ಘೋಷಣೆ

    ಬೀದರ್ ತಾಲೂಕಿನ ಕಾಡವಾದ ಗ್ರಾಮದ ರಾಮನ ಪರಮ ಭಕ್ತೆಯರು ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆ ವಿತರಣೆಯಿಂದ ಪ್ರೇರಣೆಗೊಂಡಿದ್ದಾರೆ. ಈ ಪ್ರೇರಣೆಯಿಂದ ಒಂದು ಸಾವಿರ ಭಗವಾ ಧ್ವಜಗಳನ್ನ ಸ್ವತಃ ತಾವೇ ಹೊಲಿದು ಹಂಚಿಕೆ ಮಾಡುತ್ತಿದ್ದಾರೆ. ಬಾಲ ರಾಮನ ಪ್ರತಿಷ್ಠಾಪನೆಯ ದಿನ ಗ್ರಾಮದ ಎಲ್ಲಾ ಮನೆಗಳ ಮೇಲೂ ಭಗವಾಧ್ವಜ ಹಾರಾಡಬೇಕೆಂದು ಪಣ ತೊಟ್ಟು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಆಗಮಿಸುವ ಗಣ್ಯರಿಗೆ ಕ್ಯೂಆರ್ ಕೋಡ್ ಪಾಸ್ ಕಡ್ಡಾಯ- ಸ್ಕ್ಯಾನ್ ಆದ ಬಳಿಕವಷ್ಟೇ ಪ್ರವೇಶ

    ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ಈಗಾಗಲೇ ಧ್ವಜದ ಬಟ್ಟೆ ವಿತರಿಸಿದ್ದಾರೆ. 500 ಧ್ವಜ ತಯಾರಿಸಿದ್ದು 1 ಸಾವಿರಕ್ಕೂ ಹೆಚ್ಚು ಭಗವಾಧ್ವಜ ತಯಾರಿಸುವ ಪಣ ತೊಟ್ಟಿದ್ದಾರೆ. ರಾಮನ ಪರಮ ಭಕ್ತೆಯರಾಗಿರುವ ಇಂದುಮತಿ ಮರಕಂದಾ, ಸವಿತಾ ನಿನ್ನಿ, ಶ್ರೀದೇವಿ ಮೀನಕೇರಿ, ಸವಿತಾ ಶೀಲವಂತ, ಪದ್ಮಾವತಿ ಕಾರ್ಕನಳ್ಳಿ, ಅಂಬಿಕಾ ಹೂಗಾರ ಎಂಬುವರು ಧ್ವಜ ತಯಾರಿಕೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

    ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆಯ ದಿನ ಬೀದರ್‌ನ ಈ ಗ್ರಾಮದ ಪ್ರತಿ ಮನೆಗಳ ಮೇಲೆ ಭಗವಾಧ್ವಜ ಹಾರಿಸುವ ಮೂಲಕ ಮಹಿಳೆಯರು ರಾಮನಿಗೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos 

  • ಅರುಣ್‌ ಕಣ್ಣು ಕಳೆದುಕೊಳ್ಳೋ ಸ್ಥಿತಿ ಎದುರಾಗಿತ್ತು, 15 ದಿನ ಒಂದೇ ಕಣ್ಣಿನಲ್ಲಿ ನೋಡಿಕೊಂಡು ಶಿಲ್ಪ ಕೆತ್ತನೆ ಮಾಡಿದ್ದಾರೆ: ಅರುಣ್ ಯೋಗಿರಾಜ್ ಪತ್ನಿ

    ಅರುಣ್‌ ಕಣ್ಣು ಕಳೆದುಕೊಳ್ಳೋ ಸ್ಥಿತಿ ಎದುರಾಗಿತ್ತು, 15 ದಿನ ಒಂದೇ ಕಣ್ಣಿನಲ್ಲಿ ನೋಡಿಕೊಂಡು ಶಿಲ್ಪ ಕೆತ್ತನೆ ಮಾಡಿದ್ದಾರೆ: ಅರುಣ್ ಯೋಗಿರಾಜ್ ಪತ್ನಿ

    ಮೈಸೂರು: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ವಿರಾಜಮಾನರಾಗಿರುವ ಭಗವಾನ್‌ ರಾಮಲಲ್ಲಾ‌ ಪ್ರಾಣಪ್ರತಿಷ್ಠೆಗೆ ದಿನಗಣನೆ ಬಾಕಿಯಿದೆ. ಮಂದಸ್ಮಿತವಾಗಿ ಎದ್ದು ಕಾಣುತ್ತಿರುವ ಬಾಲರಾಮನ ಮೂರ್ತಿ ಹೆಸರಿನ ಹಿಂದೆ ಕೇಳಿಬರುತ್ತಿರುವುದು ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಹೆಸರು. ಅದ್ಭುತವಾಗಿ ಮೂಡಿಬಂದಿರುವ ಶ್ರೀರಾಮನ ಮೂರ್ತಿಕಂಡು ದೇಶಾದ್ಯಂತ ನೆಲೆಸಿರುವ ಶ್ರೀರಾಮನ ಭಕ್ತರು ಶಿಲ್ಪಿಯನ್ನು ಹಾಡಿಹೊಗಳುತ್ತಿದ್ದಾರೆ.

    ಈ ಸಂತಸವನ್ನು ʻಪಬ್ಲಿಕ್‌ ಟಿವಿʼ ಜೊತೆಗೆ ಹಂಚಿಕೊಂಡಿರುವ ಅರುಣ್‌ ಯೋಗಿರಾಜ್‌ ಪತ್ನಿ ವಿಜೇತಾ, ಅಚ್ಚರಿಯ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: Ram Mandir: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ವಿಗ್ರಹ ಹೇಗಿದೆ ನೋಡಿ – Photos

    ಹೌದು. ಅರುಣ್‌ ಶಿಲ್ಪ ಕೆತ್ತನೆ ಮಾಡುವಾಗ ಒಂದು ಕಣ್ಣನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂರ್ತಿ ಕೆತ್ತನೆ ಮಾಡುವಾಗ ಒಂದು ಕಲ್ಲಿನ ಚೂರು ಅರುಣ್ ಯೋಗಿರಾಜ್ ಕಣ್ಣಿನ ಗುಡ್ಡೆಗೆ ಬಡಿದಿತ್ತು. ಕಣ್ಣಿಗೆ ಗಾಯ ಸಹ ಆಗಿತ್ತು. ತಕ್ಷಣ ಅಯೋಧ್ಯೆ ಟ್ರಸ್ಟ್‌ನವರು ಅವರನ್ನ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಿಸಿ, ಕಲ್ಲಿನ ಚೂರನ್ನು ಹೊರ ತೆಗೆಸಿದ್ದರು. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್‌

    ಸರಿಸುಮಾರು 15 ದಿನಗಳ ಕಾಲ ಅರುಣ್‌ ಒಂದು ಕಣ್ಣು ಮುಚ್ಚಿಕೊಂಡೇ ಶಿಲ್ಪ ಕೆತ್ತನೆ ಮಾಡಿದ್ದರು. ಈ ಬಗ್ಗೆ ನನಗಾಗಲಿ ನಮ್ಮ, ಕುಟುಂಬಸ್ಥರಿಗಾಗಿ ಹೇಳಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದವರು ವಿಷಯ ತಿಳಿಸಿದಾಗ ತುಂಬಾ ಭಯವಾಗಿತ್ತು. ಚಿಕಿತ್ಸೆ ಪಡೆದ ಒಂದೆರಡು ದಿನಗಳಲ್ಲಿ ಅವರೇ ಕರೆ ಮಾಡಿ ವಿಷಯ ತಿಳಿಸಿ, ಆರಾಮಾಗಿದ್ದೇನೆ ಎಂದು ಹೇಳಿದರು. ನಂತರ ನಮಗೆ ಸಮಾಧಾನವಾಯಿತು. ಅಷ್ಟಾದರೂ ವಿಶ್ರಾಂತಿ ತೆಗೆದುಕೊಳ್ಳದೇ ಶಿಲ್ಪ ಕೆತ್ತನೆ ಮಾಡಿದ್ದರು. ಇದೆಲ್ಲವು ಆ ಭಗವಂತನದ್ದೇ ಕೃಪೆ ಎಂದು ಭಾವುಕರಾಗಿದ್ದಾರೆ.

    ಇದೇ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದ ಪೀಠದಲ್ಲಿ ನೆಲೆಸಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ಇದನ್ನೂ ಓದಿ: Ayodhya Ram Mandir: ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ

  • ಅಯೋಧ್ಯೆಯ ಬಾಲರಾಮನಿಗೆ ಬೆಂಗ್ಳೂರಿನಿಂದ ತುಳಸಿಮಾಲೆಯ ಸೇವೆ!

    ಅಯೋಧ್ಯೆಯ ಬಾಲರಾಮನಿಗೆ ಬೆಂಗ್ಳೂರಿನಿಂದ ತುಳಸಿಮಾಲೆಯ ಸೇವೆ!

    – ಪ್ರಾಣ ಪ್ರತಿಷ್ಠೆಯ ದಿನವೂ ಅರ್ಪಣೆಯಾಗಲಿದೆ ಈ ವಿಶೇಷ ತುಳಸಿ

    ಬೆಂಗಳೂರು: ಅಯೋಧ್ಯೆಯಲ್ಲಿ (Ayodhya) ರಾಮೋತ್ಸವದ ಸಂಭ್ರಮಕ್ಕೆ ಇಡೀ ಭಾರತವೇ ಸಾಕ್ಷಿಯಾಗಲಿದೆ. ಎಲ್ಲೆಡೆ ರಾಮ.. ಎಲ್ಲರ ರಾಮ ಅನ್ನುವಂತಹ ಉದ್ಘೋಷಗಳು ಕೇಳಿಬರುತ್ತಿವೆ. ಈ ನಡುವೆ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಮಹತ್ಕಾರ್ಯದಲ್ಲಿ ಬೆಂಗಳೂರಿನ (Bengaluru) ಪಾಲೂ ಇದೆ ಅನ್ನೋದು ವಿಶೇಷವಾಗಿದೆ. ಏಕೆಂದರೆ ಬಾಲರಾಮನಿಗೆ ಬೆಂಗಳೂರಿನಿಂದ ತುಳಸಿಮಾಲೆ ಸೇವೆ ಅರ್ಪಣೆಯಾಗಲಿದೆ.

    ಹೌದು.. ಅಯೋಧ್ಯೆಗೆ ತುಳಸಿಮಾಲೆ (Tulsi Mala) ಅರ್ಪಿಸಬೇಕು ಅಂತಾ ಬೆಂಗಳೂರು ಜಯನಗರದ ಶಿವಕುಮಾರ್ ಹಾಗೂ ಸ್ನೇಹಿತರು ಅಂದುಕೊಂಡಿದ್ದರು. ಅದಾದ ಬಳಿಕ ಪೇಜಾವರ ಶ್ರೀಗಳ ಸಹಾಯದೊಂದಿಗೆ ಟ್ರಸ್ಟ್ ಒಪ್ಪಿಗೆ ಪಡೆದುಕೊಂಡು, ಗುಜರಾತ್‌ನ ತುಳಸಿವನದಿಂದ ವಿಶೇಷ ತುಳಸಿಬೀಜವನ್ನು ಪಡೆದುಕೊಂಡರು. ಇದನ್ನೂ ಓದಿ: ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಇಂದು ರಾಮಮಂದಿರ ಪ್ರವೇಶ – ದೇವಾಲಯದ ಸುತ್ತ ಪ್ರದಕ್ಷಿಣೆ

    ಈ ತುಳಸಿ ಬೆಳೆಯುವುದಕ್ಕಾಗಿಯೇ ಅಯೋಧ್ಯೆಯಿಂದ 60 ಕಿಲೋ ಮೀಟರ್ ದೂರದಲ್ಲಿ 2 ಎಕರೆ ಭೂಮಿ ಖರೀದಿಸಲಾಗಿತ್ತು. ಅಲ್ಲಿಯೇ ತುಳಸಿ ಬೆಳೆದು ಇದೀಗ ರಾಮಮಂದಿರಕ್ಕೆ ಅರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರಿನಿಂದ ಈಗಾಗಲೇ ಮೂರು ಜನ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ನಿರಂತರವಾಗಿ ರಾಮನಿಗೆ ತುಳಸಿಮಾಲೆಯನ್ನು ಸಮರ್ಪಣೆ ಮಾಡಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ದಿನವೂ ಇದೇ ತುಳಸಿಮಾಲೆ ಅರ್ಪಣೆಯಾಗಲಿದೆ ಎಂದು ತುಳಸಿಮಾಲೆ ಅರ್ಪಿಸಿದ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಪ್ರತಿದಿನ ಒಂದೊಂದು ಕೆಜಿ ಮೀಸಲು – ಶ್ರೀರಾಮನ ನೈವೇದ್ಯಕ್ಕೆ 1,265 KG ತೂಕದ ಲಡ್ಡು ಅರ್ಪಿಸಿದ ರಾಮಭಕ್ತ

    ಈ ಕುರಿತು ಮಾತನಾಡಿರುವ ಅವರು, ಕರ್ನಾಟಕ ಶಿಲೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮನಿಗೆ ಕರ್ನಾಟಕದಿಂದ ತುಳಸಿ ಕಾಣಿಕೆ ನೀಡುತ್ತಿರುವುದು ಮತ್ತಷ್ಟು ವಿಶೇಷ ಅನ್ನಿಸಿದೆ. ಶ್ರೀರಾಮನ ಸೇವೆಯಲ್ಲಿ ನಮ್ಮದೂ ಪಾಲಿದೆ ಅನ್ನುವ ಸಮಾಧಾನವಿದೆ. ಶ್ರೀರಾಮನ ಅನುಗ್ರಹ ಎಲ್ಲರ ಮೇಲೂ ಇರಲಿ ಎಂದು ನೆನೆದಿದ್ದಾರೆ. ಇದನ್ನೂ ಓದಿ: ಭಕ್ತರು ಚಳಿಯಿಂದ ರಕ್ಷಿಸಿಕೊಳ್ಳಲು ಅಯೋಧ್ಯೆಯಲ್ಲಿ ಮಾಡಲಾಗಿದೆ ವಿಶೇಷ ವ್ಯವಸ್ಥೆ