Tag: Sri Rajarajeshwari Temple

  • ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪವಾಡ

    ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪವಾಡ

    ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬ್ರಹ್ಮಕಲಶದ ಸಂಭ್ರಮದಲ್ಲಿದ್ದು, ಧ್ವಜಸ್ತಂಭ ಪ್ರತಿಷ್ಠೆ ವೇಳೆ ಪವಾಡ ನಡೆದಿದೆ.

    ಧ್ವಜಸ್ತಂಭಕ್ಕೆ ಗರುಡನ ಮೂರ್ತಿಯನ್ನು ಮೇಲಕ್ಕೇರಿಸುತ್ತಿದ್ದಂತೆ ಅಚಾನಕ್ಕಾಗಿ ಪ್ರತ್ಯಕ್ಷವಾದ ಗರುಡವೊಂದು ದೇವಸ್ಥಾನದ ಮೇಲ್ಭಾಗದಿಂದ ಪ್ರದಕ್ಷಿಣೆ ಹಾಕಿದೆ. ಸೇರಿದ್ದ ಸಾವಿರಾರು ಭಕ್ತರು ಇದನ್ನು ಅಚ್ಚರಿಯಿಂದ ವೀಕ್ಷಿಸಿದ್ದು ದೇವರೇ ಗರುಡನ ರೂಪದಲ್ಲಿ ಪ್ರತ್ಯಕ್ಷವಾಗಿದ್ದಾರೆ ಎಂದು ಮಾತಾಡುತ್ತಿದ್ದಾರೆ.

    ಧ್ವಜಸ್ತಂಭ ಅಂದರೆ ಗರುಡ ಸ್ತಂಭವೆಂದೇ ಪ್ರತೀತಿ. ಹೀಗಾಗಿ ಗರುಡ ಒಂದು ಬಾರಿ ಪ್ರದಕ್ಷಿಣೆ ಹಾಕಿ, ಬಳಿಕ ಕಾಣದಾಗಿದ್ದು ಅಚ್ಚರಿಗೆ ಕಾರಣವಾಗಿದೆ. ಮಂಗಳೂರು ಹೊರವಲಯದ ಪೊಳಲಿ ದೇವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದ್ದು ಭಾರೀ ಕಾರಣಿಕದ ಕ್ಷೇತ್ರವಾಗಿದೆ.

    ಇತ್ತೀಚಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv