Tag: Sri Raghavendra Swamy Mutt

  • ಮಂತ್ರಾಲಯ ರಾಯರ ಮಠದ ಹುಂಡಿ ಹಣ ಎಣಿಕೆ – 27 ದಿನದಲ್ಲಿ 3.5 ಕೋಟಿ ಕಾಣಿಕೆ

    ಮಂತ್ರಾಲಯ ರಾಯರ ಮಠದ ಹುಂಡಿ ಹಣ ಎಣಿಕೆ – 27 ದಿನದಲ್ಲಿ 3.5 ಕೋಟಿ ಕಾಣಿಕೆ

    ರಾಯಚೂರು: ಮಂತ್ರಾಲಯದ (Mantralaya) ಶ್ರೀ ರಾಘವೇಂದ್ರ ಸ್ವಾಮಿ ಮಠದ (Sri Raghavendra Swamy Mutt) ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕಳೆದ 27 ದಿನದಲ್ಲಿ 3.5 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ.

    ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಂತ್ರಾಲಯ ಮಠಕ್ಕೆ ಕೋಟ್ಯಂತರ ರೂ. ಕಾಣಿಕೆ ಹರಿದು ಬಂದಿದೆ. ಸಂಗ್ರಹವಾದ ಕಾಣಿಕೆಯಲ್ಲಿ 3,39,12,143 ರೂ. ನೋಟುಗಳು, 11 ಲಕ್ಷ 5,000 ರೂ. ನಾಣ್ಯಗಳಿವೆ. ಇನ್ನೂ 138 ಗ್ರಾಂ ಚಿನ್ನ, 950 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಇದನ್ನೂ ಓದಿ: ಗ್ರಾಹಕರಿಗೆ ಗುಡ್‌ನ್ಯೂಸ್‌- ನಂದಿನಿಯ ಕೆಲ ಉತ್ಪನ್ನಗಳ ಬೆಲೆ ಸೋಮವಾರದಿಂದ ಇಳಿಕೆ

    ಮಂತ್ರಾಲಯ ಮಠದಲ್ಲಿ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರ ಸೇವಕರು ಭಾಗವಹಿಸಿದ್ದರು.

  • ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಇಂದು ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ

    ಮಂತ್ರಾಲಯದಲ್ಲಿ ಗುರುವೈಭವೋತ್ಸವ ಸಂಭ್ರಮ – ಇಂದು ರಾಯರ 404ನೇ ಪಟ್ಟಾಭಿಷೇಕ ಮಹೋತ್ಸವ

    ರಾಯಚೂರು: ಮಂತ್ರಾಲಯ (Mantralaya) ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ (Guru Raghavendra Swamy Mutt) ಗುರುವೈಭವೋತ್ಸವ ಸಂಭ್ರಮದಲ್ಲಿ ರಾಯರ 404ನೇ ಪಟ್ಟಾಭಿಷೇಕ ನೆರವೇರಿತು.

    ದೇಶದ ಮೂಲೆ ಮೂಲೆಯಿಂದ ಆಗಮಿಸಿರುವ ರಾಯರ ಭಕ್ತರು ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಯರಿಗೆ ಪಟ್ಟಾಭಿಷೇಕವಾಗಿ 403 ವರ್ಷಗಳು ಕಳೆದಿದ್ದು, ಈಗ 404ನೇ ಪಟ್ಟಾಭಿಷೇಕದಲ್ಲಿ, ರಾಘವೇಂದ್ರ ತೀರ್ಥರ ಶಿಷ್ಯ ಯತಿ ಯೋಗೀಂದ್ರ ತೀರ್ಥರ ಪಾರ್ಥನೆಯಂತೆ ಮೂಲ ಪಾದುಕೆಗಳ ಪಟ್ಟಾಭಿಷೇಕ ನೆರವೇರಿಸಲಾಯಿತು. ಮಠದ ಪ್ರಸ್ತುತ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ರಾಯರ ಮೂಲ ಪಾದುಕೆಗಳಿಗೆ ಪಟ್ಟಾಭಿಷೇಕ ನೆರವೇರಿಸಿದರು.ಇದನ್ನೂ ಓದಿ: ವಿವಿಗಳಿಂದ ಲಾಭವಿಲ್ಲ ಎಂದಿದೆ ಕಾಂಗ್ರೆಸ್ ಸರ್ಕಾರ.. ಶಿಕ್ಷಣವೆಂದರೆ ವ್ಯಾಪಾರವಲ್ಲ: ಅಶೋಕ್ ಕಿಡಿ

    ಪಟ್ಟಾಭಿಷೇಕ ಮಹೋತ್ಸವ ಹಿನ್ನೆಲೆ ರಾಯರ ಮೂಲವೃಂದಾವನಕ್ಕೆ ಅಭಿಷೇಕ, ರಾಯರ ಸಮಗ್ರ ಗ್ರಂಥಗಳ ಪಾರಾಯಣ, ಭಜನಾ ಮಂಡಳಿಗಳ ಸಾಮೂಹಿಕ ಭಜನೆ, ಪ್ರವಚನ, ರಾಯರ ಪಾದುಕೆಗಳ ಪೂಜೆ, ಮುತ್ತುರತ್ನಗಳಿಂದ ಅಭಿಷೇಕ, ಪುಷ್ಪವೃಷ್ಠಿ, ಫಲಸಮರ್ಪಣೆ, ಮಂಗಳಾರತಿ ಹಾಗೂ ಪಾದುಕೆಗಳ ರಥೋತ್ಸವ ನಡೆದವು. ರಾಯರ ಪಟ್ಟಾಭಿಷೇಕ ಹಾಗೂ ಜನ್ಮದಿನ ಉತ್ಸವವನ್ನು ಗುರುವೈಭವೋತ್ಸವವಾಗಿ ಮಂತ್ರಾಲಯ ಮಠದಲ್ಲಿ ಮಾರ್ಚ್ 1ರಿಂದ 6ರವರೆಗೆ ಆರು ದಿನಗಳ ಕಾಲ ಆಚರಿಸಲಾಗುತ್ತಿದೆ.

    ಇಂದು ಆಂಧ್ರಪ್ರದೇಶ ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಗುರುವೈಭವೋತ್ಸವದಲ್ಲಿ ಭಾಗವಹಿಸಿ, ರಾಯರ ದರ್ಶನ ಪಡೆದರು. ಬಳಿಕ ಮಠದ ಮುಂಭಾಗದಲ್ಲಿ ಮಧ್ವದ್ವಾರದ ಕಾರಿಡಾರ್ ಉದ್ಘಾಟನೆ ಮಾಡಿದರು. ಸಂಜೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.ಇದನ್ನೂ ಓದಿ: ಕೋಲ್ಕತ್ತಾ| ತಂದೆ, ಮಗಳು ನೇಣಿಗೆ ಶರಣು – ಮಗಳ ಅನಾರೋಗ್ಯಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ

     

  • ಹೊಸ ವರ್ಷದ ಸಂಭ್ರಮ – ಮಂತ್ರಾಲಯ ರಾಯರ ಮಠಕ್ಕೆ ಭಕ್ತರ ದಂಡು

    ಹೊಸ ವರ್ಷದ ಸಂಭ್ರಮ – ಮಂತ್ರಾಲಯ ರಾಯರ ಮಠಕ್ಕೆ ಭಕ್ತರ ದಂಡು

    ರಾಯಚೂರು: ಹೊಸ ವರ್ಷಾಚರಣೆ ಹಿನ್ನೆಲೆ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ಭಕ್ತರ ದಂಡು ಹರಿದು ಬಂದಿದೆ. ಬೆಳಗಿನ ಜಾವದಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?

    ಹೊಸ ವರ್ಷದ (New Year) ಆರಂಭದ ಹಿನ್ನೆಲೆ ರಾಯರ ದರ್ಶನಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ದೇಶದ ಮೂಲೆ ಮೂಲೆಯಿಂದ ಭಕ್ತರ ಸಾಗರ ಹರಿದು ಬಂದಿದೆ. ಮಂಚಾಲಮ್ಮ ದೇವಿ ಹಾಗೂ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

    ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮಂತ್ರಾಲಯದಲ್ಲಿ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭಕ್ತರು ಪರದಾಟವೂ ನಡೆಸಿದ್ದರು. ಸತತ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನಲೆ ಕಳೆದ ನಾಲ್ಕೈದು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಮಠದ ರೂಂಗಳ ಆನ್‌ಲೈನ್ ಬುಕ್ಕಿಂಗ್ ಬಂದ್ ಮಾಡಲಾಗಿದೆ. ಮಠದ ಆಡಳಿತ ಮಂಡಳಿ ಕೇವಲ ಆಫ್‌ಲೈನ್‌ನಲ್ಲಿ ರೂಂ ನೀಡುತ್ತಿದೆ.ಇದನ್ನೂ ಓದಿ: ತಾಯಿಗೆ ಮಕ್ಕಳಿಂದ ಪಾದಪೂಜೆ – ವಿನೂತನವಾಗಿ ಹೊಸ ವರ್ಷ ಆಚರಣೆ

  • ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

    ರಾಯಚೂರಿನ ಸೂಗುರೇಶ್ವರ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್- ಮಂತ್ರಾಲಯ ಮಠದಲ್ಲಿ ಶಾಂತಿ ಹೋಮ

    ರಾಯಚೂರು: ತಾಲೂಕಿನ ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ತನ್ನ ವಿಶಿಷ್ಠ ವಾಸ್ತುಶಿಲ್ಪದಿಂದ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ (Solar Eclipse) ವೇಳೆಯೂ ಎಂದಿನಂತೆ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ.

    ಇತ್ತ ಮಂತ್ರಾಲಯದಲ್ಲೂ (Mantralaya) ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ವೇಳೆ ದಿನನಿತ್ಯದ ಪೂಜೆ ಪುರಸ್ಕಾರಗಳಿಗೆ ಮಾತ್ರ ನಿರ್ಬಂಧ ಮಾಡಲಾಗಿದೆ. ಗ್ರಹಣದ ಬಳಿಕ ರಾಯರ ಮಠದಲ್ಲಿ (Sri Raghavendra Swamy Mutt) ಗ್ರಹಣ ಶಾಂತಿ ಹೋಮ ನಡೆಯಲಿದೆ. ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮಿ ಗ್ರಹಣ ಶಾಂತಿ ಹೋಮ ನೆರವೇರಿಸಲಿದ್ದಾರೆ.

    ಇನ್ನೂ ರಾಯಚೂರಿನ (Raichur) ಜವಾಹರ್ ನಗರದ ರಾಘವೇಂದ್ರ ಸ್ವಾಮಿಗಳ ಶಾಖಾ ಮಠ ಹಾಗೂ ಸತ್ಯನಾಥ ಕಾಲೋನಿಯ ಉತ್ತರಾಧಿ ಮಠದಲ್ಲಿ ಗ್ರಹಣದ ವೇಳೆ ಗ್ರಹಣ ಶಾಂತಿ ಹೋಮ ಹಾಗೂ ಗೋಗ್ರಾಸ ಹೋಮ ಜರುಗಲಿವೆ. ಗ್ರಹಣದ ಬಳಿಕ ದೇವಾಲಯ, ಮಠಗಳ ಸ್ವಚ್ಛತಾ ಕಾರ್ಯ ನಡೆಯಲಿದೆ. ಸೂರ್ಯಾಸ್ತದ ಸಮಯದಲ್ಲಿ ಗ್ರಹಣ ಮುಕ್ತಾಯವಾಗುವ ಹಿನ್ನೆಲೆ ಸಂಜೆ ವೇಳೆ ಯಾವುದೇ ಪೂಜೆಗಳು ನಡೆಯುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

    ಸೂಗುರೇಶ್ವರ ದೇವಾಲಯಕ್ಕಿಲ್ಲ ಎಫೆಕ್ಟ್:
    ರಾಯಚೂರು (Mantralaya) ತಾಲೂಕಿನ ದೇವಸುಗೂರಿನ ಸೂಗುರೇಶ್ವರ ದೇವಸ್ಥಾನ ತನ್ನ ವಿಶಿಷ್ಟವಾದ ವಾಸ್ತುಶಿಲ್ಪದಿಂದಾಗಿ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ ವೇಳೆಯೂ ದೇವಾಲಯದ ಗರ್ಭಗುಡಿ ಬಾಗಿಲು ಬಂದ್ ಆಗುವುದಿಲ್ಲ. ಎಂದಿನಂತೆ ಎಲ್ಲಾ ಪೂಜಾ ಕೈಂಕರ್ಯಗಳು ಯಾವುದೇ ಅಡ್ಡಿಯಿಲ್ಲದೇ ಸಾಗುತ್ತವೆ.

    800 ವರ್ಷಗಳ ಇತಿಹಾಸ:
    ಸುಗೂರೇಶ್ವರ ದೇವಸ್ಥಾನದಲ್ಲಿ ಗ್ರಹಣದೋಷದ ವಾಸ್ತುಶಿಲ್ಪದ ಶಾಸನಗಳು, ಹಾಲಗಂಭಗಳು ಪ್ರತಿಷ್ಟಾಪನೆಯಾಗಿವೆ. ಇಲ್ಲಿನ ಎರಡು ಶಾಸನ ಕಂಬಗಳ ಮೇಲೆ ಸೂರ್ಯಚಂದ್ರ ಕೆತ್ತನೆಗಳಿದ್ದು, 13ನೇ ಶತಮಾನದಿಂದಲೂ ಗ್ರಹಣಮುಕ್ತ ದೇವಾಲಯವಾಗಿದೆ. ಈ ಹಿನ್ನೆಲೆ ಸೂಗುರೇಶ್ವರ ದೇವಸ್ಥಾನಕ್ಕೆ ಗ್ರಹಣದೋಷ ತಟ್ಟುವುದಿಲ್ಲ, ದೋಷಪರಿಹಾರವನ್ನ ಇಲ್ಲಿನ ವಾಸ್ತುಶಿಲ್ಪವೇ ಮಾಡುತ್ತದೆ ಅನ್ನೋ ಪ್ರತೀತಿಯಿದೆ. ಹೀಗಾಗಿ ಸೂರ್ಯಗ್ರಹಣದ ವೇಳೆಯೂ ಇಲ್ಲಿ ತ್ರಿಕಾಲ ಪೂಜೆಗಳು ನಡೆಯುವುದು ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷಾಚರಣೆ – ಮಂತ್ರಾಲಯದಲ್ಲಿ ಭಕ್ತರ ದಂಡು

    ಹೊಸ ವರ್ಷಾಚರಣೆ – ಮಂತ್ರಾಲಯದಲ್ಲಿ ಭಕ್ತರ ದಂಡು

    ರಾಯಚೂರು: ಹೊಸ ವರ್ಷದ ಆರಂಭ ಹಿನ್ನೆಲೆ ರಾಯಚೂರಿನ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ರಾಯರ ಸನ್ನಿಧಿ ಮಂತ್ರಾಲಯದಲ್ಲೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡು ಹರಿದು ಬಂದಿತ್ತು.

    ಹೊಸ ವರ್ಷದ ಹಿನ್ನೆಲೆ ರಾಯರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬಂದಿದ್ದರು. ಸಹಸ್ರಾರು ಭಕ್ತರು ತುಂಗೆಯಲ್ಲಿ ಮಿಂದೆದ್ದು ಪುಣ್ಯಸ್ನಾನ ಮಾಡಿ, ರಾಯರ ದರ್ಶನ ಪಡೆದರು. ಇದನ್ನೂ ಓದಿ: PM ಕಿಸಾನ್ ಯೋಜನೆ 10ನೇ ಕಂತಿನಡಿ ಕರ್ನಾಟಕಕ್ಕೆ 685 ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ

    ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ ಸೇರಿದಂತೆ ಹಲವೆಡೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಹೊಸ ವರ್ಷಾಚರಣೆ ಹಿನ್ನೆಲೆ ದೇವಾಲಯಗಳಲ್ಲಿ ವಿಶೇಷ ಪೂಜಾಲಂಕಾರ, ರುದ್ರಾಭಿಷೇಕ ಸೇರಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ