Tag: Sri Raghavendra Swamy Math

  • ಮಂತ್ರಾಲಯ ರಾಯರ ಮಠದಲ್ಲಿ ನರಕಚತುರ್ದಶಿ ಸಂಭ್ರಮ: ಶ್ರೀಗಳಿಂದ ವಿಶೇಷ ಪೂಜೆ

    ಮಂತ್ರಾಲಯ ರಾಯರ ಮಠದಲ್ಲಿ ನರಕಚತುರ್ದಶಿ ಸಂಭ್ರಮ: ಶ್ರೀಗಳಿಂದ ವಿಶೇಷ ಪೂಜೆ

    ರಾಯಚೂರು: ನರಕಚತುರ್ದಶಿಯ ಪ್ರಯುಕ್ತ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿಗಳ ಸನ್ನಿಧಿಯ (Mantralaya Sri Guru Raghavendra Swami) ಶ್ರೀ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿದರು.ಇದನ್ನೂ ಓದಿ:ಕೊಪ್ಪಳದಲ್ಲೂ ಭುಗಿಲೆದ್ದ ವಿವಾದ – ಜಿಲ್ಲೆಯ ಹಲವು ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದು

    ಶ್ರೀ ರಾಯರು ಮತ್ತು ಮಠದ ಇತರ ಬೃಂದಾವನಗಳು ಹಾಗೂ ಮೂಲ ಬೃಂದಾವನಗಳಿಗೆ ಗೋಪೂಜೆ, ತುಳಸಿ ಪೂಜೆ ಮತ್ತು ತೈಲ ಅಭ್ಯಂಜನವನ್ನು ಮಾಡಿದರು.

    ನಂತರ ನರಕೃತ ನೀರಾಜನಂ ಸಮಾರಂಭವನ್ನು ನಡೆಸಲಾಯಿತು. ಕಾರ್ಯಕ್ರಮ ಬಳಿಕ ಸುಬುಧೇಂದ್ರ ತೀರ್ಥ ಸ್ವಾಮಿ ಅನುಗ್ರಹ ಸಂದೇಶದ ಮೂಲಕ ನೆರೆದಿದ್ದ ಭಕ್ತರಿಗೆ ಆಶೀರ್ವದಿಸಿದರು.ಇದನ್ನೂ ಓದಿ: IPL Retention | ಇಂದು ಐಪಿಎಲ್‌ ರೀಟೆನ್ಶನ್‌ ಪಟ್ಟಿ ರಿಲೀಸ್‌ – ಕ್ಯಾಪ್ಟನ್‌ಗಳನ್ನೇ ಹೊರದಬ್ಬುವ ಸಾಧ್ಯತೆ!

  • ಮಂತ್ರಾಲಯದಿಂದಲೂ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ- 10 ಲಕ್ಷ ರೂ. ಕೊಡುಗೆ

    ಮಂತ್ರಾಲಯದಿಂದಲೂ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ- 10 ಲಕ್ಷ ರೂ. ಕೊಡುಗೆ

    – ಎಲ್ಲ ಶಾಖಾ ಮಠಗಳಲ್ಲಿ ಸಂತ್ರಸ್ತರಿಗೆ ಆಶ್ರಯ ವ್ಯವಸ್ಥೆ

    ರಾಯಚೂರು: ಉತ್ತರ ಕರ್ನಾಟಕ ಪ್ರವಾಹಕ್ಕೆ ರಾಜ್ಯದ ಜನತೆಯ ಮನ ಮಿಡಿಯುತ್ತಿದ್ದು, ಉದಾರತೆಯಿಂದ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಮಠಗಳೂ ಸಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಮಂತ್ರಾಲಯದಿಂದ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಲಾಗಿದೆ.

    ಈಗಾಗಲೇ ಮಂತ್ರಾಲಯ ಮಠದಿಂದ 10 ಲಕ್ಷ ರೂ.ಗಳ ಸಹಾಯ ಧನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದ್ದು, ಸಂತ್ರಸ್ತರಿಗೆ ಎಲ್ಲ ರೀತಿಯ ಸಹಾಯವನ್ನು ಮಠದಿಂದ ಮಾಡಲು ಸಿದ್ಧರಿದ್ದೇವೆ. ಶ್ರೀ ಮಠದಿಂದ ಬಡವರಿಗೆ ಮನೆ ಕಟ್ಟಿಕೊಡಲು ಸಹ ಚಿಂತನೆ ನಡೆಸಲಾಗಿದೆ ಎಂದು ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.

    ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧ ಶಾಖಾ ಮಠಗಳ ಮೂಲಕ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಣೆ ಆರಂಭವಾಗಿದೆ. ಸಂತ್ರಸ್ತರಿಗೆ ಮಂತ್ರಾಲಯ ಮಠದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು. ಅಲ್ಲದೆ, ಶಾಖಾ ಮಠಗಳಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು ಸಹ ಎಲ್ಲ ವ್ಯವಸ್ಥೆಯನ್ನು ಮಾಡುವಂತೆ ಆಯಾ ಮಠಗಳಿಗೆ ಸೂಚಿಸಲಾಗಿದೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.

    ಚಾತುರ್ಮಾಸ ವ್ರತ ಕೈಗೊಂಡಿದ್ದು, ವ್ರತ ಪೂರ್ಣಗೊಳ್ಳಬೇಕಿದೆ. ಅಲ್ಲದೆ ಆಗಸ್ಟ್ 14 ರಿಂದ ರಾಯರ ಆರಾಧನಾ ಮಹೋತ್ಸವ ಹಮ್ಮಿಕೊಂಡಿರುವ ಹಿನ್ನೆಲೆ ಮಠದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಹೀಗಾಗಿ ಈ ಎಲ್ಲ ಕಾರ್ಯಗಳು ಮುಗಿದ ನಂತರ ಸಪ್ಟೆಂಬರ್ ನಲ್ಲಿ ಕೃಷ್ಣಾ ನದಿಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.