Tag: Sri Lanka

  • ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಉಡುಪಿ: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಭಾನುವಾರದ ಉಡುಪಿ ಪ್ರವಾಸ ರದ್ದಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಲಂಕಾ ಪ್ರಧಾನಿಯವರ ಪ್ರವಾಸ ರದ್ದಾಗಿದೆ.

    ಬೆಂಗಳೂರಿನಲ್ಲಿ ಶನಿವಾರದಿಂದ ತಂಗಿರುವ ರಾನಿಲ್ ವಿಕ್ರಮಸಿಂಘೆ ಅವರು ಇಂದು ಕೊಲ್ಲೂರು ದೇವಿಯ ದರ್ಶನ ಮಾಡಿ, ನವಚಂಡಿ ಮಹಾಯಾಗದಲ್ಲಿ ಪಾಲ್ಗೊಳ್ಳಬೇಕಿತ್ತು. ಕಳೆದ ರಾತ್ರಿ ನವಚಂಡಿಯಾಗಕ್ಕೆ ದೇವಳದ ಅರ್ಚಕರು ಸಿದ್ಧತೆ ಮಾಡಿದ್ದು ಪಾರಾಯಣ- ಹೋಮಗಳನ್ನು ತಯಾರಿ ಮಾಡಿದ್ದರು.

    ಇಂದು ಪೂರ್ಣಾಹುತಿಗೆ ಎಲ್ಲಾ ಸಿದ್ಧತೆ ನಡೆದಿತ್ತು. ಹೆಲಿಪ್ಯಾಡ್‍ನಿಂದ 15 ಕಿಮೀ ದೂರದ ಕೊಲ್ಲೂರಿನವರೆಗೆ ಹೈ ಸೆಕ್ಯೂರಿಟಿ ನೀಡಲಾಗಿತ್ತು. ಆದರೆ ಮೋಡ ಮುಸುಕಿದ ವಾತಾವರಣವಿದ್ದ ಹಿನ್ನೆಲೆಯಲ್ಲಿ ಕುಂದಾಪುರದ ಅರೆ ಶಿರೂರಿನಲ್ಲಿ ಹೆಲಿಕಾಪ್ಟರ್ ಇಳಿಯಲು ಏರ್ ಫೋರ್ಸ್ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಟೇಕ್ ಆಫ್ ಆಗಿರಲಿಲ್ಲ.

    ಇತ್ತ ಕೊಲ್ಲೂರಿನಲ್ಲಿ ಪ್ರಧಾನ ಅರ್ಚಕರೇ ಶ್ರೀಲಂಕಾ ಪ್ರಧಾನಿಗಳ ಹೆಸರಿನಲ್ಲಿ ಪೂರ್ಣಾಹುತಿ ಮಾಡಿದರು. ರಾನಿಲ್ ವಿಕ್ರಮ್‍ಸಿಂಘೆ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದು ಸೋಮವಾರ ಕೊಲ್ಲೂರಿಗೆ ಬರುವ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಳಿದ್ದಾರೆ ಎನ್ನಲಾಗಿದೆ.

    ಜಿಲ್ಲಾಧಿಕಾರಿ, ಎಸ್ಪಿ, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು, ಕಳೆದೆರಡು ದಿನಗಳಿಂದ ಸಿದ್ಧತೆ ಮಾಡಿ ಇಂದು ಮಧ್ಯಾಹ್ನದವರೆಗೆ ಕಾದು ವಾಪಸ್ ಆದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಾವು ಎಲ್ಲಾ ಭದ್ರತಾ ವ್ಯವಸ್ಥೆ ಮಾಡಿದ್ದೆವು. ಮೋಡ, ಮಳೆಯ ಕಾರಣ ಏರ್ ಫೋರ್ಸ್ ಅಧಿಕಾರಿಗಳು ಸಮ್ಮತಿ ಸೂಚಿಸಲಿಲ್ಲ ಎಂದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಉಪ್ಪುಂದ ಮಾತನಾಡಿ, ಪ್ರಧಾನಿಗಳ ಪರವಾಗಿ ಹೋಮ, ನವಚಂಡಿ ಮಹಾಯಾಗ ದೇವಿಗೆ ಸಲ್ಲಿಕೆಯಾಗಿದೆ. ವಿಶೇಷ ಪೂಜೆಯನ್ನೂ ಸಮರ್ಪಿಸಲಾಗಿದೆ ಎಂದು ಹೇಳಿದರು.

  • ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಆಟ – ಟೀಂ ಇಂಡಿಯಾಗೆ 9 ವಿಕೆಟ್ ಗೆಲುವು

    ಶಿಖರ್ ಧವನ್, ವಿರಾಟ್ ಕೊಹ್ಲಿ ಭರ್ಜರಿ ಆಟ – ಟೀಂ ಇಂಡಿಯಾಗೆ 9 ವಿಕೆಟ್ ಗೆಲುವು

    ಡಂಬುಲ್ಲಾ: ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಭರ್ಜರಿ ಜಯಗಳಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕ ದಾಖಲಿಸಿ ಭಾರತದ ಗೆಲುವಿನ ರೂವಾರಿಯಾದರು.

    ಶಿಖರ್ ಧವನ್ 90 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 20 ಬೌಂಡರಿಗಳ ನೆರವಿನಿಂದ 132 ರನ್ ಗಳಿಸಿದರು. ವಿರಾಟ್ ಕೊಹ್ಲಿ 70 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 10 ಬೌಂಡರಿಗಳೊಂದಿಗೆ 82 ರನ್ ಗಳಿಸಿದರು. ಟೀಂ ಇಂಡಿಯಾ ಕೇವಲ 28.5 ಓವರ್ ಗಳಲ್ಲಿ 220 ರನ್ ಗಳಿಸಿ ಏಕದಿನ ಪಂದ್ಯದ ಸರಣಿಯಲ್ಲಿ ಗೆಲುವಿನ ಶುಭಾರಂಭ ಮಾಡಿತು.

    ಗೆಲ್ಲಲು 216 ರನ್ ಗಳ ಸುಲಭ ಟಾರ್ಗೆಟ್ ಬೆನ್ನತ್ತಿದ ಭಾರತ ಮೊದಲ ವಿಕೆಟನ್ನು 5ನೇ ಓವರ್ ನಲ್ಲಿ ಕಳೆದುಕೊಂಡಿತು. ರನ್ ಗಳಿಸಲು ಓಡುತ್ತಿದ್ದ ರೋಹಿತ್ ಶರ್ಮಾ ಸ್ಟಂಪ್ ತಲುಪುವ ವೇಳೆ ಬ್ಯಾಟ್ ಕೈತಪ್ಪಿದ್ದರಿಂದ ಶರ್ಮಾ ರನೌಟ್ ಆಗಬೇಕಾಯಿತು.

    ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾದ ಆರಂಭಿಕ ಆಟಗಾರರು ಮೊದಲ ವಿಕೆಟ್ ಗೆ 74 ರನ್ ಗಳ ಜೊತೆಯಾಟ ನೀಡಿದರು. ಆದರೆ 14ನೇ ಓವರ್ ನಲ್ಲಿ ಚಹಲ್ ಎಸೆತಕ್ಕೆ ಶ್ರೀಲಂಕಾದ ಆರಂಭಿಕ ಆಟಗಾರ ಗುಣತಿಲಕ 35 ರನ್ ಗಳಿಸಿ ಔಟಾದರು. 25ನೇ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ್ದ ಶ್ರೀಲಂಕಾ 43.2 ಓವರ್ ಗಳಲ್ಲಿ ಕೇವಲ 216 ರನ್ ಗಳಿಗೆ ಆಲೌಟಾಯ್ತು.

    ಟೀಂ ಇಂಡಿಯಾ ಪರವಾಗಿ ಅಕ್ಷರ್ ಪಟೇಲ್ 3, ಕೇದಾರ್ ಜಾಧವ್, ಚಾಹಲ್ ಹಾಗೂ ಬೂಮ್ರಾ ತಲಾ 2 ವಿಕೆಟ್ ಗಳಿಸಿದರು.

  • ಶ್ರೀಲಂಕಾ ವಿರುದ್ಧ ಶಿಖರ್ ಧವನ್ ಶತಕ

    ಶ್ರೀಲಂಕಾ ವಿರುದ್ಧ ಶಿಖರ್ ಧವನ್ ಶತಕ

    ಕ್ಯಾಂಡಿ: ಶ್ರೀಲಂಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಭರ್ಜರಿ ಶತಕ ದಾಖಲಿಸಿದ್ದಾರೆ. 107 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ ಶಿಖರ್ ಧವನ್ ಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಜೀವನದ 6ನೇ ಶತಕವನ್ನು ಧವನ್ ದಾಖಲಿಸಿದರು.

    ಇಲ್ಲಿನ ಕ್ಯಾಂಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

    ಆರಂಭಿಕ ಆಟಗಾರರಾದ ಶಿಖರ್ ಧವನ್ ಹಾಗೂ ಕೆ.ಎಲ್.ರಾಹುಲ್ ತಂಡಕ್ಕೆ ಉತ್ತಮ ಜೊತೆಯಾಟ ನೀಡಿ ಮೊದಲ ವಿಕೆಟ್‍ಗೆ 188 ರನ್ ಪೇರಿಸಿದರು. ಆದರೆ 40ನೇ ಓವರ್ ನಲ್ಲಿ ಪುಷ್ಪಕುಮಾರ್ ಎಸೆತದಲ್ಲಿ ಕೆ.ಎಲ್.ರಾಹುಲ್ 85 ರನ್ ಗೆ ಔಟಾದರು. 135 ಎಸೆತ ಎದುರಿಸಿದ್ದ ರಾಹುಲ್ 8 ಬೌಂಡರಿಗಳ ನೆರವಿನಿಂದ 85 ರನ್ ಗಳಿಸಿದರು. ಸದ್ಯ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಆಟವಾಡುತ್ತಿದ್ದಾರೆ.

    ಸದ್ಯ ಭಾರತ 43ನೇ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಆಟ ಮುಂದುವರಿಸಿದೆ.

  • ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಮೊದಲ ಟೆಸ್ಟ್ ಪಂದ್ಯ ಗೆದ್ದು ಟೀಂ ಇಂಡಿಯಾ ದಾಖಲೆ!

    ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ 304 ರನ್ ಅಂತರದಿಂದ ಗೆದ್ದು ದಾಖಲೆ ನಿರ್ಮಿಸಿದೆ. ಈ ಮೂಲಕ 3 ಟೆಸ್ಟ್ ಗಳ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆ ಸಾಧಿಸಿದೆ.

    304 ರನ್ ಗಳ ಗೆಲುವು ವಿದೇಶದಲ್ಲಿ ಭಾರೀ ಅಂತರದ ಗೆಲುವು. ಈ ಹಿಂದೆ 1986ರಲ್ಲಿ ಲೀಡ್ಸ್ ನಲ್ಲಿ ಇಂಗ್ಲೆಂಡ್ ವಿರುದ್ಧ 279 ರನ್ ಅಂತರದಲ್ಲಿ ಗೆದ್ದಿದ್ದೇ ಇದುವರೆಗಿನ ದಾಖಲೆಯಾಗಿತ್ತು.

    ಗೆಲ್ಲಲು 550 ರನ್ ಗಳ ಪ್ರಯಾಸಕರ ಟಾರ್ಗೆಟ್ ಪಡೆದುಕೊಂಡಿದ್ದ ಶ್ರೀಲಂಕಾ 76.5 ಓವರ್ ಗಳಲ್ಲಿ 245 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಕರುಣರತ್ನೆ 97 ರನ್ ಗಳಿಸಿ ಶತಕ ವಂಚಿತರಾದರು. ಇನ್ನುಳಿದಂತೆ ಡಿಕ್ವೆಲ್ಲಾ 67, ಮೆಂಡಿಸ್ 36, ಪಿರೇರಾ 21, ತರಂಗ 10 ರನ್ ಗಳಿಸಿದರು. ಶ್ರೀಲಂಕಾದ ಇಬ್ಬರು ಆಟಗಾರರು ಗಾಯಗೊಂಡಿದ್ದರಿಂದ ಬ್ಯಾಟಿಂಗ್ ಗೆ ಇಳಿಯಲಿಲ್ಲ. ಹೀಗಾಗಿ ಶ್ರೀಲಂಕಾ 245 ರನ್ ಗಳಿಗೆ ಆಲೌಟ್ ಆಯಿತು.

    ಭಾರತ ಪರ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಲಾ 3 ವಿಕೆಟ್ ಗಳಿಸಿದರೆ ಶಮಿ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಗಳಿಸಿದರು.

    ಇದಕ್ಕೂ ಮುನ್ನ ಇಂದು 4ನೇ ದಿನದಾಟ ಆರಂಭಿಸಿದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದರು. ತಕ್ಷಣ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಈ ವೇಳೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

  • ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ- ಶ್ರೀಲಂಕಾ ಮುಖಾಮುಖಿ

    ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ- ಶ್ರೀಲಂಕಾ ಮುಖಾಮುಖಿ

    ಲಂಡನ್‍: ಚಾಂಪಿಯನ್ಸ್ ಟ್ರೋಫಿಯಲ್ಲಿ ಇವತ್ತು ಭಾರತ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ. ಪಾಕಿಸ್ತಾನ ವಿರುದ್ಧ ದಾಖಲೆ ರನ್‍ಗಳಲ್ಲಿ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಇವತ್ತು ಲಂಕಾ ವಿರುದ್ಧ ಅಂಗಳಕ್ಕೆ ಇಳಿಯಲಿದೆ.

    ಪಾಕಿಸ್ತಾನ ವಿರುದ್ಧ ಗೆದ್ದ ಪಡೆಯನ್ನೇ ಕೊಹ್ಲಿ ಉಳಿಸಿಕೊಂಡಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ತಂಡದಲ್ಲಿ ಮ್ಯಾಥ್ಯೂ ಬೌಲಿಂಗ್ ಅನುಮಾನ ಎಂದು ಹೇಳಲಾಗುತ್ತಿದೆ. ಶ್ರೀಲಂಕಾ ಇತ್ತೀಚೆಗೆ ನಡೆದ 23 ಪಂದ್ಯಗಳಲ್ಲಿ ಗೆದ್ದಿರೋದು ಕೇವಲ 8 ಪಂದ್ಯಗಳನ್ನು ಮಾತ್ರ.

    ಲಂಡನ್‍ನ ಓವಲ್ಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಜಯಭೇರಿ ಕಂಡ್ರೆ ಕೊಹ್ಲಿ ಪಡೆ ಸೆಮಿಫೈನಲ್‍ಗೆ ತಲುಪುತ್ತೆ ಅನ್ನೋದು ಕ್ರಿಕೆಟ್ ತಜ್ಞರ ಲೆಕ್ಕಾಚಾರ ಆಗಿದೆ. ಆದರೆ ಮಳೆ ಬಂದರೆ ಪಂದ್ಯವನ್ನು ಯಾವ ದಿಕ್ಕಿಗಾದ್ರೂ ಬದಲಿಸಬಹುದು.