Tag: Sri Lanka

  • ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ವಿಂಡೀಸ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಕರಿನೆರಳು – ಲಂಕಾ ನಾಯಕನಿಗೆ ದಂಡ

    ಸೇಂಟ್ ಲೂಸಿಯಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಗೆ ದಂಡ ವಿಧಿಸಲಾಗಿದೆ.

    ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟ ಆರಂಭಕ್ಕೂ ಮುನ್ನ ಘಟನೆ ನಡೆದಿದ್ದು, ಅನ್ ಫೀಲ್ಡ್ ಅಂಪೈರ್ ಗಳು ಶ್ರೀಲಂಕಾ ತಂಡ ಆಟಗಾರರು ಚೆಂಡು ವಿರೂಪಗೊಳಿಸಿದ್ದಾರೆ ಶಂಕಿಸಿ ಚೆಂಡು ಬದಲಾಯಿಸಲು ನಿರ್ಧರಿಸಿದ್ದರು.

    ಅಂಪೈರ್ ಗಳ ನಡೆಗೆ ವಿರೋಧ ವ್ಯಕ್ತಪಡಿಸಿದ ದಿನೇಶ್ ಚಂಡಿಮಾಲ್ ಶನಿವಾರ ಆಟ ಮುಂದುವರಿಸಲು ವಿರೋಧ ವ್ಯಕ್ತಪಡಿಸಿ ಮೈದಾನಕ್ಕೆ ಆಗಮಿಸಲು ನಿರಾಕರಿಸಿದ್ದರು. ಈ ವೇಳೆ ಮ್ಯಾಚ್ ರೆಫರಿಯಾಗಿದ್ದ ಜಾವಗಲ್ ಶ್ರೀನಾಥ್ ಅವರೊಂದಿಗೆ ಶ್ರೀಲಂಕಾ ಕೋಚ್ ಸುದೀರ್ಘ ಮಾತುಕತೆ ನಡೆಸಿದ ಬಳಿಕ 2 ಗಂಟೆಗಳ ತಡವಾಗಿ ಪ್ರತಿಭಟನೆ ಮೇಲೆಯೇ ಲಂಕಾ ತಂಡ ಆಟ ಮುಂದುವರೆಸಿತು. ಮೈದಾನಕ್ಕೆ ತಡವಾಗಿ ಆಗಮಿಸಿದ ಕಾರಣ ಲಂಕಾ ತಂಡಕ್ಕೆ 5 ರನ್ ಗಳ ದಂಡವನ್ನು ವಿಧಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿದ್ದ ಐಸಿಸಿ, ಚಂಡಿಮಾಲ್ ಐಸಿಸಿ ನೀತಿ ಸಂಹಿತೆ 2.2.9 ರ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದೆ. ಈ ನಿಯಮವು ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದು, ಈಗಾಗಲೇ ಶ್ರೀಲಂಕಾ ತಂಡಕ್ಕೆ ಐದು ರನ್ ಗಳ ದಂಡ ವಿಧಿಸಿದ್ದರೂ ಮುಂದಿನ ದಿನಗಳಲ್ಲಿ ಶ್ರೀಲಂಕಾ ಆಟಗಾರರ ವರ್ತನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ. ಅಲ್ಲದೇ ಚಂಡಿಮಾಲ್ ಐಸಿಸಿ ನಿಯಮ ಉಲ್ಲಂಘಿಸಿದ ಕಾರಣ ಪಂದ್ಯದ ಸಂಭಾವನೆಯ ಶೇ.75 ರಷ್ಟು ದಂಡ ಹಾಗೂ 3 ಋಣಾತ್ಮಕ ಅಂಕದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದು ತಿಳಿಸಿದೆ.

    ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಆಟಗಾರರಿಗೆ ಮೈದಾನಕ್ಕೆ ತೆರಳಿ ಪಂದ್ಯ ಮುಂದುವರಿಸಲು ಸೂಚಿಸಿತ್ತು. ಆದರೆ ತಮ್ಮ ತಂಡ ಆಟಗಾರರು ಚೆಂಡು ವಿರೂಪಗೊಳಿಸುವ ಕುರಿತ ಆರೋಪವನ್ನು ತಳ್ಳಿ ಹಾಕಿದೆ.

    ಈ ವರ್ಷದ ಮಾರ್ಚ್ ನಲ್ಲಿ ಆಸೀಸ್ ಆಟಗಾರು ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಿದ್ದರು. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೇ ಅಸೀಸ್ ತಂಡದ ನಾಯಕ ಸ್ಮಿತ್, ಉಪನಾಯಕ ವಾರ್ನರ್ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದರು.

  • ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ಶಕ್ತಿ ತುಂಬಲು ರಾಹುಲ್ ದ್ರಾವಿಡ್ ಸಲಹೆ!

    ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ಶಕ್ತಿ ತುಂಬಲು ರಾಹುಲ್ ದ್ರಾವಿಡ್ ಸಲಹೆ!

    ಮುಂಬೈ: ಟೀಂ ಇಂಡಿಯಾ ಅಂಡರ್ 19 ತಂಡವನ್ನು ಮತ್ತಷ್ಟು ಬಲಗೊಳಿಸಲು ಕೋಚ್ ರಾಹುಲ್ ದ್ರಾವಿಡ್ ಆಯ್ಕೆ ಸಮಿತಿಗೆ ಕೆಲ ಸಲಹೆಗಳನ್ನು ನೀಡಿದ್ದು, ಈ ಹಿಂದೆ ತಾವು ಮಾಡಿದ್ದ ವಾದಕ್ಕೆ ವಿರುದ್ಧವಾಗಿ ಸಲಹೆ ನೀಡಿದ್ದಾರೆ.

    ದ್ರಾವಿಡ್ ಕೋಚ್ ಆಗಿ ನೇಮಕವಾದ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರು ಟೀಂ ಇಂಡಿಯಾ `ಎ’ ತಂಡದಲ್ಲಿ ಕಡ್ಡಾಯವಾಗಿ ಆಡಲೇಬೇಕು ಅಷ್ಟೇ ಅಲ್ಲದೇ ವಿಶ್ವ ಕಪ್ ಆಡಿದ ಆಟಗಾರರು ನಂತರ ಆಯೋಜನೆಗೊಳ್ಳಲಿರುವ ಟೂರ್ನಿಗಳಲ್ಲಿ ಅವರಿಗೆ ಅವಕಾಶ ನೀಡಬಾರದು. ಇದು ಅಂಡರ್ 19 ತಂಡಕ್ಕೆ ಆಯ್ಕೆ ಆಗುವ ಆಟಗಾರರ ವಯಸ್ಸಿನ ಕುರಿತು ಉಂಟಾಗುವ ಗೊಂದಲಗಳ ನಿವಾರಣೆಗೆ ಸಹಕಾರಿ ಆಗಲಿದೆ ಎಂದು ಸಲಹೆ ನೀಡಿದ್ದರು.

    ಆದರೆ ಈಗ ದ್ರಾವಿಡ್ ಸಲಹೆ ಮೇರೆಗೆ ಮುಂದಿನ ಶ್ರೀಲಂಕಾ ವಿರುದ್ಧದ 4 ದಿನ ಹಾಗೂ ಏಕದಿನ ಪಂದ್ಯ ಟೂರ್ನಿ ಬಿಸಿಸಿಐ ತಂಡವನ್ನು ಆಯ್ಕೆ ಮಾಡಿದೆ. ಈ ಬಾರಿಯ ಅಂಡರ್ 19 ವಿಶ್ವಕಪ್ ಟೂರ್ನಿಯ ಮೂಲಕ ತಮ್ಮ ಜರ್ನಿಯನ್ನು ಆರಂಭಿಸಿದ್ದ ವಿಕೆಟ್ ಕೀಪರ್ ಆರ್ಯನ್ ಜುಯಾಲ್ ರನ್ನು ಏಕದಿನ ತಂಡದ ನಾಯಕರಾಗಿ ಆಯ್ಕೆ ಮಾಡಲಾಗಿದ್ದು, ನಾಲ್ಕು ದಿನಗಳ ಪಂದ್ಯದ ಟೂರ್ನಿಗೆ ಅನುಜ್ ರಾವತ್ ರನ್ನು ಆಯ್ಕೆ ಮಾಡಲಾಗಿದೆ. ಅಂದಹಾಗೇ ರಾವತ್ ಸಹ ವಿಕೆಟ್ ಕೀಪರ್ ಆಗಿದ್ದು, ಅಂಡರ್ 19 ವಿಶ್ವಕಪ್ ತಂಡದಲ್ಲಿ ಆಡಿದ್ದರು.

    ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಜಂಟಿಯಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರ ಪರಿಣಾಮವಾಗಿ ಕಿರಿಯ ಆಟಗಾರರು ಬಹುಬೇಗ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಆದರೆ ಅಂಡರ್ 19 ವಿಶ್ವಕಪ್ ಗೆ ಮರು ಆಯ್ಕೆ ಮಾಡಬಾರದು ಎಂಬ ಯಾವುದೇ ಕಠಿಣ ನಿಯಮಗಳು ಇಲ್ಲ. ಇನ್ನು ತಂಡದ ಕೆಲ ಆಟಗಾರರು ತಮ್ಮಷ್ಟು ತರಬೇತಿ ಪಡೆಯುವ ಅಗತ್ಯವಿದ್ದು ಅವರನ್ನು ಹಿರಿಯ ತಂಡಕ್ಕೆ ಆಯ್ಕೆ ಮಾಡುವ ಮುನ್ನ ಮತ್ತಷ್ಟು ಶಕ್ತಿ ತುಂಬಬೇಕಿದೆ ಎಂಬ ಅಭಿಪ್ರಾಯ ಸಮಿತಿ ವ್ಯಕ್ತಪಡಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಾಹುಲ್ ಈ ಹಿಂದೆ ಒಮ್ಮೆ ಆಟಗಾರರ ರಾಜ್ಯ ತಂಡಿಂದ ಬ್ರೇಕಪ್ ಆದರೆ ಆತ ಕಿರಿಯ ತಂಡವನ್ನು ಕಡಿಮೆ ಪ್ರಮಾಣದಲ್ಲಿ ಆಡಬೇಕಿದೆ ಎಂದು ತಿಳಿಸಿದ್ದರು. 2016 ರಲ್ಲಿ ಅಂಡರ್ 19 ತಂಡದಲ್ಲಿ ಸ್ಥಾನ ಪಡೆದಿದ್ದ ಲೆಗ್ ಸ್ಪಿನರ್ ಝೀಶನ್ ಅನ್ಸಾರಿ, ಮುಂಬೈ ಬ್ಯಾಟ್ಸ್ ಮನ್ ಅರ್ಮಾನ್ ಜಾಫರ್, ರಾಜಸ್ಥಾನದ ಅಲ್‍ರೌಂಡರ್ ಮಹಿಪಾಲ್, ತಮಿಳುನಾಡಿನ ವಾಷಿಂಗ್ಟನ್ ಸುಂದರ್ ಮುಂದಿನ ಟೂರ್ನಿಯನ್ನು ಆಡಲು ಆರ್ಹರಾಗಿದ್ದಾರೆ. ಅಲ್ಲದೇ ಈ ಎಲ್ಲಾ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ಕೆಲ ಅವಧಿಯನ್ನು ತೆಗೆದುಕೊಂಡರು.

    ಸದ್ಯ ಗಾಯದ ಸಮಸ್ಯೆಯಿಂದ ಅಫ್ಘಾನಿಸ್ತಾನದ ಐತಿಹಾಸಿಕ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಗುಳಿದಿರುವ ನಾಯಕರ ಕೊಹ್ಲಿ ಅವರ ಸ್ಥಾನಕ್ಕೆ ಕರಣ್ ನಾಯರ್ ರನ್ನು ಆಯ್ಕೆ ಮಾಡಲಾಗಿದೆ.

  • ಶ್ರೀಲಂಕಾ ಕ್ರಿಕೆಟ್ ಆಟಗಾರನ ತಂದೆಯನ್ನು ಶೂಟ್ ಮಾಡಿ ಕೊಂದ ದುಷ್ಕರ್ಮಿಗಳು

    ಶ್ರೀಲಂಕಾ ಕ್ರಿಕೆಟ್ ಆಟಗಾರನ ತಂದೆಯನ್ನು ಶೂಟ್ ಮಾಡಿ ಕೊಂದ ದುಷ್ಕರ್ಮಿಗಳು

    ಕೊಲಂಬೊ: ಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರ ಧನಂಜಯ್ ಡಿ. ಸಿಲ್ವಾ ಅವರ ತಂದೆಯನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

    ಧನಂಜಯ್ ತಂದೆ ರಾಜನ್ ಕೊಲೆಯಾದವರು. ರಾಜನ್ ಸ್ಥಳೀಯ ರಾಜಕೀಯ ಮುಖಂಡರು ಸಹ ಆಗಿದ್ದು, ಕೊಲಂಬೊದ ರತ್ಮಾಲನ ಬಳಿ ಗುರುವಾರ ರಾತ್ರಿ ಗುಂಡು ಹಾರಿಸಿ ಕೊಲೆ ಮಾಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

    ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಸದ್ಯ ತಂದೆಯವರ ಕೊಲೆಯಾದ ಕಾರಣ 26 ವರ್ಷದ ಡಿ ಸಿಲ್ವಾ ಅವರು ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.

    ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿದ್ದು, ಘಟನೆಯಿಂದ ಶಾಕ್ ಗೆ ಒಳಗಾಗಿದ್ದೇವೆ. ತಮ್ಮ ತಂಡದ ಆಟಗಾರ ಧನಂಜಯ್ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ಘಟನೆಯ ಕುರಿತು ಧನಂಜಯ್ ಅವರಿಗೆ ಬೇಕಾದ ಎಲ್ಲ ಸಹಾಯವನ್ನು ಸಹ ನೀಡುವುದಾಗಿ ತಿಳಿಸಿದೆ. ಪೂರ್ವ ನಿಗಧಿಯಂತೆ ಮೇ 15 ರ ಸಂಜೆ ಶ್ರೀಲಂಕಾ ತಂಡದ ಜೊತೆ ಸರಣಿಯಲ್ಲಿ ಭಾಗವಹಿಸಲು ಡಿ ಸಿಲ್ವಾ ತೆರಳಬೇಕಿತ್ತು.

  • ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಆಹಾರಕ್ಕಾಗಿ ಪ್ರವಾಸಿಗರ ಜೀಪ್ ಒಳಗಡೆ ಸೊಂಡಿಲು ಹಾಕಿದ ಆನೆ!- ಫೋಟೋಗಳಲ್ಲಿ ನೋಡಿ

    ಕೊಲಂಬೊ: ಆಹಾರಕ್ಕಾಗಿ ಆನೆಯೊಂದು ಸಫಾರಿಗೆ ಬಂದಿದ್ದ ಜೀಪನ್ನೇ ಅಡ್ಡಹಾಕಿ ಅದರೊಳಗೆ ಸೊಂಡಿಲು ಹಾಕುವ ಮೂಲಕ ಪ್ರವಾಸಿಗರನ್ನು ಭಯಭೀತಗೊಳಿಸಿದ ಅಚ್ಚರಿಯ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.

    ಯಲಾ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ರಸ್ತೆಯ ಸಮೀಪ ಮರಗಳಿಂದ ಎಲೆ ಮತ್ತು ಹುಲ್ಲು ತಿನ್ನುತ್ತಿತ್ತು. ಈ ವೇಳೆ ಎದುರುಗಡೆಯಿಂದ ಜೀಪ್ ಬರುತ್ತಿರುವುದನ್ನು ನೋಡಿದೆ. ಅಲ್ಲದೇ ಜೀಪೊಳಗಡೆ ಆಹಾರವಿರುವುದು ಆನೆಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಆನೆ ಜೀಪ್ ಬಳಿ ತೆರಳಿ ಅಡ್ಡಹಾಕಿ, ಅದರೊಳಗೆ ತನ್ನ ಸೊಂಡಿಲನ್ನು ಹಾಕಿದೆ. ಇದರಿಂದ ಭಯಗೊಂಡ ಚಾಲಕ ಆನೆಯಿಂದ ತಪ್ಪಿಸಿಕೊಳ್ಳಲೆಂದು ಜೀಪನ್ನು ವೇಗವಾಗಿ ಚಲಾಯಿಸಲು ಯತ್ನಿಸಿದ್ದಾನೆ. ಆದರೆ ಜೀಪಿನಲ್ಲಿ ಕುಳಿತಿದ್ದ ಕೆಲ ಪ್ರಯಾಣಿಕರು ಭಯದಿಂದಲೇ ಆನೆಯನ್ನು ಕಂಡು ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆನೆಗೆ ಮತ್ತಷ್ಟು ಕೋಪ ಬಂದಿದೆ. ಪರಿಣಾಮ ಓರ್ವ ಪ್ರವಾಸಿಗ ಆನೆಯಿಂದ ರಕ್ಷಿಸಿಕೊಳ್ಳಲೆಂದು ಜೀಪ್ ನಿಂದ ಹಾರಲು ರೆಡಿಯಾಗಿದ್ದಾನೆ.

    ಈ ಭಯಾನಕ ದೃಶ್ಯಗಳನ್ನು ರಷ್ಯಾದ ವನ್ಯಜೀವಿ ಫೋಟೋಗ್ರಾಫರ್ ಸರ್ಗಿ ಅವರು ತನ್ನ ಪತ್ನಿ ಜೊತೆ ಸಫಾರಿ ಹೋಗುತ್ತಿದ್ದ ಸೆರೆಹಿಡಿದಿದ್ದಾರೆ. ಆ ಘಟನೆ ಅದ್ಭುತ ಮತ್ತು ಭಯಹುಟ್ಟಿಸುವಂತಿತ್ತು ಅಂತ ಅವರು ಹೇಳಿದ್ದಾರೆ.

    ಆನೆ ಜೋರಾಗಿ ಘೀಳಿಡುತ್ತಿತ್ತು. ಅಲ್ಲದೇ ತನ್ನ ಕಾಲಿನಿಂದ ಜೀಪನ್ನು ಉರುಳಿಸಲು ಯತ್ನಿಸುತ್ತಿತ್ತು. ತನ್ನ ಕಾಲನ್ನು ಸಿಟ್ಟಿನಿಂದ ನೆಲಕ್ಕಿಡುವಾಗ ಧೂಳು ಬರುತಿತ್ತು. ಆದ್ರೆ ಜೀಪ್ ತುಂಬಾ ಪ್ರವಾಸಿಗರು ಇದ್ದುದರಿಂದ ಆನೆಗೆ ಜೀಪನ್ನು ಉರುಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಜೀಪನ್ನು ಆನೆ ತಿರುಗಿಸಲು ಆರಂಭಿಸಿತು. ಆಗ ಜೀಪಿನಲ್ಲಿದ್ದ ಪ್ರಯಾಣಿಕರು ಕಿರಿಚಾಡಲು ಶುರುಮಾಡಿದ್ದು, ಅವರ ಕಿರಿಚೋದು, ಅಳುವುದನ್ನು ಕೇಳಿದ ಸ್ಥಳೀಯ ನಿವಾಸಿಗಳ ಗುಂಪು ಸ್ಥಳಕ್ಕೆ ದೌಡಾಯಿಸಿತ್ತು. ನಂತರ ಆನೆಯನ್ನು ಓಡಿಸಿ ಅವರನ್ನು ರಕ್ಷಿಸಿದ್ದಾರೆ.

    ಈ ಆನೆ ಏಷ್ಯಾದ ಆನೆಯಾಗಿದ್ದು, ಇದು ಖಂಡದ ದೊಡ್ಡ ಸಸ್ತನಿಗಳಾಗಿವೆ. ಇದು 9 ಅಡಿ ಎತ್ತರವಾಗಿದ್ದು, ಐದು ಟನ್‍ಗಳಷ್ಟು ತೂಕವಿರುತ್ತದೆ.

  • ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಸೋಲುವ ಭೀತಿಯಲ್ಲಿ ಹೈಡ್ರಾಮಾ ಸೃಷ್ಟಿಸಿದ ಬಾಂಗ್ಲಾ ಆಟಗಾರರು! ವಿಡಿಯೋ

    ಕೊಲಂಬೊ: ನಿದಾಸ್ ತ್ರಿಕೋನ ಟಿ20 ಸರಣಿಯ ಸೆಮಿಫೈನಲ್ ಎಂದೇ ಪರಿಗಣಿಸಲಾಗಿದ್ದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಎರಡು ವಿಕೆಟ್ ಜಯ ಪಡೆದು ಬಾಂಗ್ಲಾದೇಶ ಫೈನಲ್ ಪ್ರವೇಶಿಸಿದೆ. ಆದರೆ ಈ ಪಂದ್ಯದಲ್ಲಿ ಅಂಪೈರ್ ಹಾಗೂ ಆಟಗಾರ ನಡುವೆ ಭಾರೀ ವಾಗ್ವಾದ ನಡೆದಿದೆ.

    ಪಂದ್ಯದ ಅಂತಿಮ ಓವರ್ ವೇಳೆ ಬಾಂಗ್ಲಾದ ಮಹಮದುಲ್ಲ ಮತ್ತು ಮುಸ್ತಫಿಜೂರ್ ರೆಹ್ಮಾನ್ ಜೋಡಿ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಲಂಕಾ ವೇಗಿ ಉದಾನ ಸತತ 2 ಬೌನ್ಸರ್ ಹಾಕಿದರು. 2ನೇ ಎಸೆತದಲ್ಲಿ ಮುಸ್ತಫಿಜೂರ್ ರನೌಟಾದರು. ಒಂದು ಓವರ್ ನಲ್ಲಿ ಒಂದು ಬೌನ್ಸರ್ ಗೆ ಮಾತ್ರ ಅಕಾಶವಿದ್ದರೂ 2ನೇ ಬೌನ್ಸರನ್ನು ಅಂಪೈರ್ ನೋಬಾಲ್ ಎಂದು ಪರಿಗಣಿಸಲಿಲ್ಲ. ಇದರಿಂದ ಸಿಟ್ಟಾದ ಬಾಂಗ್ಲಾ ಆಟಗಾರು ಆನ್ ಫೀಲ್ಡ್ ಅಂಪೈರ್ ಗಳ ವಿರುದ್ಧ ಅಸಮಾಧಾನ ವ್ಯಕಪಡಿಸಿ ವಾಗ್ವಾದ ನಡೆಸಿದ್ದರು. ಅಲ್ಲದೇ ಬಾಂಗ್ಲಾ ತಂಡದ ನಾಯಕ ಶಕೀಬ್ ಬ್ಯಾಟ್ಸ್ ಮನ್ ಗಳನ್ನು ಮೈದಾನದಿಂದ ಹೊರಕ್ಕೆ ಬರಲು ಸೂಚಿಸಿದ್ದರು. ಅಂಪೈರ್ ಗಳ ಮಧ್ಯಪ್ರವೇಶದ ಬಳಿಕ ಕೊನೆಯ ಓವರ್ ನ ನಾಲ್ಕು ಎಸೆತ ಉಳಿದಿತ್ತು. ಈ ವೇಳೆ ಕ್ರಮವಾಗಿ 4, 2, 6 ರನ್ ಸಿಡಿಸುವ ಮೂಲಕ ಮಹಮದುಲ್ಲ ಬಾಂಗ್ಲಾ ತಂಡದ ಗೆಲುವಿಗೆ ಕಾರಣರಾದರು.

    https://twitter.com/Nishant96336349/status/974698788966211584

    ತನಿಖೆ: ಶ್ರೀಲಂಕಾ 70 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯ ನೆನಪಿನ ಹಿನ್ನೆಲೆ ತ್ರಿಕೋನ ಟಿ20 ಸರಣಿ ಆಯೋಜಿಸಿದೆ. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದ ನಂತರ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಕಿಟಕಿ ಗಾಜು ಒಡೆದ ಘಟನೆಯೂ ನಡೆದಿದೆ. ಘಟನೆ ಕುರಿತು ಕ್ರೀಡಾಂಗಣ ಸಿಬ್ಬಂದಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಬಳಿಕ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    https://twitter.com/beingnik07/status/974698903143555072

    ಘಟನೆಗೆ ಸಂಬಂಧಿಸಿದಂತೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಪಂದ್ಯದ ರೆಫರಿ ಕ್ರಿಸ್ ಬ್ರಾಡ್ ಹ್ಯಾಸ್ ಅಧಿಕಾರಿಗಳಿಗೆ ಕೊಠಡಿಯ ಸಿಸಿಟಿವಿ ದೃಶ್ಯಗಳನ್ನು ನೀಡಲು ಹೇಳಿದ್ದಾರೆ. ಐಸಿಸಿ ಮ್ಯಾಚ್ ರೆಫರಿ ಘಟನೆ ಕುರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

    ಪಂದ್ಯದ ಕೊನೆಯ ಓವರ್ ನಲ್ಲಿ ನಡೆದ ಆಟಗಾರರ ಹಾಗೂ ಅಂಪೈರ್ ಗಳ ನಡುವಿನ ವಾಗ್ವಾದ ಕುರಿತು ಕೂಡ ಅಂಪೈರ್ ಗಳು ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಆಟಗಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಭಾನುವಾರ ಭಾರತ ಮತ್ತು ಬಾಂಗ್ಲಾ ನಡುವೆ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

  • ಯುವರಾಜ್ ದಾಖಲೆ ಮುರಿದ ರೋ`ಹಿಟ್’

    ಯುವರಾಜ್ ದಾಖಲೆ ಮುರಿದ ರೋ`ಹಿಟ್’

    ಕೊಲಂಬೊ: ಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ ಟಿ20 ಮಾದರಿಯಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.

    ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಾಸ್ ತ್ರಿಕೋನ ಟಿ20 ಸರಣಿಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 5 ಸಿಕ್ಸರ್ ಸಿಡಿಸುವ ಮೂಲಕ ವೃತ್ತಿ ಜೀವನದಲ್ಲಿ 75 ಸಿಕ್ಸರ್ ಗಳಿಸಿ ದಾಖಲೆ ಬರೆದಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ 74 ಸಿಕ್ಸರ್ ಸಿಡಿಸಿದ್ದರು. ಸರಣಿಯ ಆರಂಭಿಕ ಪಂದ್ಯಗಳಲ್ಲಿ ಕಳಪೆ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ರೋಹಿತ್ ಈ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 89 ರನ್ ಗಳಿಸಿದರು.

    ಟಿ20 ಮಾದರಿಯಲ್ಲಿ ವೆಸ್ಟ್ ಇಂಡಿಸ್ ನ ಸ್ಫೋಟಕ ಆಟಗಾರರ ಕ್ರಿಸ್ ಗೇಲ್ ಹಾಗೂ ನ್ಯೂಜಿಲೆಂಡ್ ನ ಮಾರ್ಟಿನ್ ಗುಪ್ಟಿಲ್ 103 ಸಿಕ್ಸರ್ ಸಿಡಿಸಿ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ನ್ಯೂಜಿಲೆಂಡ್ ನ ಬ್ರೆಂಡನ್ ಮೆಕ್ಲಮ್ (91), ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ (83) ಸಿಕ್ಸರ್ ಮೂಲಕ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ನ ಕಾಲಿನ್ ಮನ್ರೋ 78 ಸಿಕ್ಸ್, ಇಂಗ್ಲೆಂಡಿನ ಇಯಾನ್ ಮಾರ್ಗನ್ 76 ಸಿಕ್ಸ್ ಸಿಡಿಸಿದ್ದಾರೆ.

    ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 8ನೇ ಸ್ಥಾನ ಪಡೆದಿದ್ದಾರೆ. ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ ತಮ್ಮ 13  ನೇ ಅರ್ಧ ಶತಕ ಸಿಡಿಸಿದರು.

    ಪಂದ್ಯದ ನಂತರ ಮಾತನಾಡಿದ ರೋಹಿತ್, ಸುರೇಶ್ ರೈನಾ (47) ಹಾಗೂ ವಾಷಿಂಗ್ಟಂನ್ ಸುಂದರ್ (3/22) ಅವರ ಪ್ರದರ್ಶನವನ್ನು ಪ್ರಶಂಸಿದರು. ಸರಣಿಯ ಪೈನಲ್ ಪಂದ್ಯದಲ್ಲಿ ಗೆಲ್ಲುವ ವಿಶ್ವ ವ್ಯಕ್ತಪಡಿಸಿದರು.

  • ಟಿ20ಯಲ್ಲಿ ಭಾರತದ ಪರ ಯಾರೂ ಮಾಡದ ಎಡವಟ್ಟು ಮಾಡ್ಕೊಂಡ ಕೆಎಲ್ ರಾಹುಲ್!- ವಿಡಿಯೋ

    ಟಿ20ಯಲ್ಲಿ ಭಾರತದ ಪರ ಯಾರೂ ಮಾಡದ ಎಡವಟ್ಟು ಮಾಡ್ಕೊಂಡ ಕೆಎಲ್ ರಾಹುಲ್!- ವಿಡಿಯೋ

    ಕೊಲಂಬೊ: ನಿದಾಸ್ ತ್ರಿಕೋನ ಸರಣಿಯ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ತಮ್ಮ ಎಡವಟ್ಟಿನಿಂದಾಗಿ ಕೆಎಲ್ ರಾಹುಲ್ ಭಾರತ ಪರ ಟಿ20 ಮಾದರಿಯಲ್ಲಿ ಹಿಟ್ ವಿಕೆಟ್ ಆದ ಮೊದಲ ಆಟಗಾರರ ಎಂಬ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ.

    ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ರಾಹುಲ್ ತಮ್ಮ ಸ್ವಯಂಕೃತ ತಪ್ಪಿನಿಂದ ಔಟ್ ಆದರು. ಪಂದ್ಯದ 10 ನೇ ಓವರ್ ಬೌಲ್ ಮಾಡಿದ ಲಂಕಾ ಸ್ಪಿನ್ನರ್ ಜೀವನ್ ಮೆಂಡಿಸ್ ಎಸೆತವನ್ನು ಎದುರಿಸಲು ರಾಹುಲ್ ಡೀಪ್ ಕ್ರಿಸ್ ನತ್ತ ನಡೆದರು. ಆದರೆ ಈ ವೇಳೆ ಅವರ ಬಲಗಾಲು ವಿಕೆಟ್ ಗೆ ತಾಗಿ ಹಿಟ್ ವಿಕೆಟ್ ಆದರು. ಈ ವೇಳೆ ರಾಹುಲ್ 17 ಎಸೆತಗಳಲ್ಲಿ 18 ರನ್ ಗಳಿಸಿದ್ದರು.

    ಈ ಹಿಂದೆ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ನಾಲ್ವರು ಆಟಗಾರು ಹಿಟ್ ವಿಕೆಟ್ ಆಗಿದ್ದು, 1995 ರಲ್ಲಿ ಪಾಕ್ ವಿರುದ್ಧ ಕೀಪರ್ ನಯಾನ್ ಮೊಂಗಿಯಾ ಮೊದಲ ಬಾರಿ ಹಿಟ್ ವಿಕೆಟ್ ಆಗಿದ್ದರು. ಬಳಿಕ 2003 ನ್ಯೂಜಿಲೆಂಡ್ ವಿರುದ್ಧ ಅನಿಲ್ ಕುಂಬ್ಳೆ, 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ತೆಂಡೂಲ್ಕರ್ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2001 ರಲ್ಲಿ ಇಂಗ್ಲೆಂಡ್ ವಿರುದ್ಧ ಔಟ್ ಆಗಿದ್ದರು.

    ವಿಶೇಷವಾಗಿ ವಿರಾಟ್ ಕೊಹ್ಲಿ ಟೆಸ್ಟ್ ಹಾಗೂ ಏಕದಿನ ಎರಡು ಮಾದರಿಗಳಲ್ಲಿ ಹಿಟ್ ವಿಕೆಟ್ ಆಗಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಮಾಜಿ ಆಟಗಾರ ಮೊಹಿಂದರ್ ಅಮರನಾಥ್ ತಮ್ಮ 69 ಪಂದ್ಯಗಳ ಟೆಸ್ಟ್ ವೃತ್ತಿ ಜೀವನದಲ್ಲಿ ಮೂರು ಬಾರಿ ಹಿಟ್ ವಿಕೆಟ್ ಆಗಿದ್ದಾರೆ.

    https://twitter.com/SwatiT_/status/973253050398801920

  • ಕಿಶೋರ್ ಕುಮಾರ್ ಹಾಡಿಗೆ ಧ್ವನಿ ನೀಡಿದ ರೈನಾ- ವಿಡಿಯೋ ನೋಡಿ

    ಕಿಶೋರ್ ಕುಮಾರ್ ಹಾಡಿಗೆ ಧ್ವನಿ ನೀಡಿದ ರೈನಾ- ವಿಡಿಯೋ ನೋಡಿ

    ಕೊಲಂಬೊ: ಹಲವು ದಿನಗಳ ಬಳಿಕ ಶ್ರೀಲಂಕಾದಲ್ಲಿ ನಡೆಯುತ್ತಿರುವ ನಿದಾಸ್ ತ್ರಿಕೋನ ಕ್ರಿಕೆಟ್ ಸರಣಿಗೆ ಕಮ್ ಬ್ಯಾಕ್ ಮಾಡಿರುವ ಸುರೇಶ್ ರೈನಾ ತಮ್ಮ ಬ್ಯಾಟಿಂಗ್ ನಿಂದ ಆಯ್ಕೆಗಾರರ ಗಮನ ಸೆಳೆದರೆ, ಮೈದಾನದ ಹೊರಗೆ ಗಾಯನ ಮೂಲಕ ಟೀಂ ಇಂಡಿಯಾ ಆಟಗಾರರನ್ನು ರಂಜಿಸಿದ್ದಾರೆ.

    ಬಾಲಿವುಡ್ ನ ಗಾಯಕ ಕಿಶೋರ್ ಕುಮಾರ್ ಆಡಿರುವ ಜನಪ್ರಿಯ ‘ಯೇ ಶಾಮ್ ಮಸ್ತಾನಿ ಮಧೋಶ್ ಕಿಯೆ ಜಾಯೆ’ ಹಾಡನ್ನು ಟೀಂ ಇಂಡಿಯಾ ಆಟಗಾರರ ಸಮ್ಮಖದಲ್ಲಿ ಹಾಡಿ ಗಮನಸೆಳೆದಿದ್ದಾರೆ. ಈ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತ್ರಿಕೋನ ಸರಣಿಯಲ್ಲಿ ಸೋಮವಾರ ಟೀಂ ಇಂಡಿಯಾ ಶ್ರೀಲಂಕಾ ತಂಡವನ್ನು ಎದುರಿಸುತ್ತಿದ್ದು, ರೈನಾ ವಿರಾಮದ ವೇಳೆಯಲ್ಲಿ ಹಾಡುಗಾರಿಕೆ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ರೈನಾ ಅವರ ಹಾಡುಗಾರಿಗೆ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ತಿಳಿದಿದ್ದು, ಈ ಹಿಂದೆ ತಮ್ಮ ಗಾಯನದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು. ಬಾಲಿವುಡ್ ನ `ಮಿರುಥಿಯಾ ಗ್ಯಾಂಗ್ ಸ್ಟರ್ಸ್’ ಸಿನಿಮಾದಲ್ಲಿ `ತು ಮಿಲಿ, ಸಬ್ ಮಿಲಾ’ ಎಂಬ ಹಾಡಿಗೆ ಧ್ವನಿ ನೀಡಿದ್ದರು.

    ತ್ರಿಕೋನ ಏಕದಿನ ಸರಣಿಯ ಬಾಂಗ್ಲಾ ವಿರುದ್ಧ ಪಂದ್ಯದದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಪರ ಟಿ20 ಕ್ರಿಕೆಟ್ ಮಾದರಿ 50 ಸಿಕ್ಸರ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು. ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್ (74 ಸಿಕ್ಸರ್), ರೋಹಿತ್ ಶರ್ಮಾ(69 ಸಿಕ್ಸರ್) ಮೊದಲ ಎರಡು ಸ್ಥಾನ ಪಡೆದಿದ್ದಾರೆ.

  • ನಾಗಿಣಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ ಮುಷ್ಫೀಕರ್- ವೈರಲ್ ವಿಡಿಯೋ ನೋಡಿ

    ನಾಗಿಣಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದ ಮುಷ್ಫೀಕರ್- ವೈರಲ್ ವಿಡಿಯೋ ನೋಡಿ

    ಕೊಲಂಬೊ: ಶ್ರೀಲಂಕಾ ಎದುರಿನ ನಿದಾಸ್ ತ್ರಿಕೋನ ಸರಣಿಯ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ಪಡೆದಿದೆ. ಈ ವೇಳೆ ಬಾಂಗ್ಲಾ ವಿಕೆಟ್ ಕೀಪರ್ ಮುಷ್ಫೀಕರ್ ರಹೀಮ್ ನಾಗಿಣಿ ನೃತ್ಯ ಮಾಡಿ ಸಂಭ್ರಮಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಶ್ರೀಲಂಕಾ ತಂಡದ ನೀಡಿದ 215 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟಿದ ಬಾಂಗ್ಲಾ ಎರಡು ಎಸೆತ ಬಾಕಿ ಇರುವಂತೆಯೇ ದಾಖಲೆಯ ಗೆಲುವು ಪಡೆಯಿತು. ಈ ಪಂದ್ಯದಲ್ಲಿ ಮುಷ್ಫೀಕರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ 72 ರನ್ (35 ಎಸೆತ, 5 ಬೌಂಡರಿ, 4 ಸಿಕ್ಸರ್) ಗಳಿಸುವ ಮೂಲಕ ಬಾಂಗ್ಲಾ ಗೆಲುವಿಗೆ ಕಾರಣರಾದರು. ಈ ವೇಳೆ ಗೆಲುವಿನ ರನ್ ಸಿಡಿಸಿದ ಮುಷ್ಫೀಕರ್ ಮೈದಾನದಲ್ಲೇ ನಾಗಿಣಿ ನೃತ್ಯ ಮಾಡಿ ಅಭಿಮಾನಿಗಳನ್ನು ರಂಜಿಸಿದರು.

    ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ರಹೀಮ್ ಅವರ ಈ ವಿಡಿಯೋಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೇ ನೀಡಿ ಟ್ವೀಟ್ ಮಾಡಿದ್ದಾರೆ.

    ಪಂದ್ಯದ ನಂತರ ಮಾತನಾಡಿದ ಬಾಂಗ್ಲಾ ನಾಯಕ ಮಹಮ್ಮುದುಲ್ಲಾ, ತಂಡದ ಆರಂಭಿಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ ಕಾರಣದಿಂದ ಬೃಹತ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಲು ಕಾರಣವಾಯಿತು. ಪಂದ್ಯದ ಆರಂಭದಿಂದಲೂ ಗೆಲುವಿನ ವಿಶ್ವಾಸ ಹೊಂದಿದ್ದೆವು. ರಹೀಮ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ತಿಳಿಸಿದರು.

    ತ್ರಿಕೋನ ಸರಣಿಯ ಮೊದಲ ಹಂತದ ಮುಕ್ತಾಯದ ನಂತರದ ಟೀಂ ಇಂಡಿಯಾ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ತಲಾ ಒಂದು ಪಂದ್ಯದಲ್ಲಿ ಜಯಗಳಿಸಿವೆ.

    https://twitter.com/debodipta_paul/status/972533043918352385?

  • ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಮುಸ್ಲಿಂ- ಬೌದ್ಧರ ನಡುವೆ ಹಿಂಸಾಚಾರ – ಶ್ರೀಲಂಕಾದಲ್ಲಿ 10 ದಿನ ತುರ್ತು ಪರಿಸ್ಥಿತಿ ಘೋಷಣೆ

    ಕೊಲೊಂಬೊ: ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಮತ್ತು ಮುಸ್ಲಿಂ ಸಮುದಾಯದ ನಡುವೆ ಭಾರೀ ಪ್ರಮಾಣ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರ್ಕಾರ ಘೋಷಿಸಿದೆ.

    ಮುಸ್ಲಿಮರು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ ಹಾಗೂ ಬೌದ್ಧರ ಪವಿತ್ರ ಸ್ಥಳಗಳನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಕೆಲ ಬೌದ್ಧ ಸಂಘಟನೆಗಳು ಈ ಹಿಂದೆ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಒಂದು ಕಳೆದ ಒಂದು ವರ್ಷದಿಂದ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆಯುತಿತ್ತು.

    ಈ ನಡುವೆ ಮ್ಯಾನ್ಮಾರ್ ನ ರೋಹಿಂಗ್ಯಾ ಮುಸ್ಲಿಮರಿಗೆ ಶ್ರೀಲಂಕಾದಲ್ಲಿ ಆಶ್ರಯ ನೀಡಬಾರದು ಎಂದು ಬೌದ್ಧ ಧರ್ಮದವರು ಪ್ರತಿಭಟಿಸುತ್ತಿದ್ದರು. ಈ ವಿಚಾರದ ಬಗ್ಗೆ ನಡೆಯುತ್ತಿದ್ದ ಜಗಳ ಈಗ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

    ಹಿಸಾಂಚಾರದ ಹಿನ್ನೆಲೆಯಲ್ಲಿ ಶ್ರೀಲಂಕಾ ಸರ್ಕಾರ ಇಂದು ವಿಶೇಷ ಸಂಪುಟ ಸಭೆ ನಡೆಸಿ, ಕೋಮುಗಲಭೆ ತಡೆಯುವ ನಿಟ್ಟಿನಲ್ಲಿ 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಷ್ಟೇ ಅಲ್ಲದೇ ಫೇಸ್‍ಬುಕ್ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.

    ಭಾರತ ಮತ್ತು ಶ್ರೀಲಂಕಾ ನಡುವೆ ಇಂದು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.