Tag: Sri Lanka

  • ಶ್ರೀಲಂಕಾ ಉಗ್ರರ ಜೊತೆಗೆ ನಂಟು ಶಂಕೆ – 9 ಮುಸ್ಲಿಂ ಸಚಿವರು ರಾಜೀನಾಮೆ

    ಶ್ರೀಲಂಕಾ ಉಗ್ರರ ಜೊತೆಗೆ ನಂಟು ಶಂಕೆ – 9 ಮುಸ್ಲಿಂ ಸಚಿವರು ರಾಜೀನಾಮೆ

    ಕೊಲಂಬೋ: ಈಸ್ಟರ್ ಹಬ್ಬದಂದು ಶ್ರೀಲಂಕಾದಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ 9 ಮಂದಿ ಮುಸ್ಲಿಂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಈ ಒಂಬತ್ತು ಜನ ಸಚಿವರು ಈಸ್ಟರ್ ಹಬ್ಬದಂದು ಬಾಂಬ್, ಆತ್ಮಾಹುತಿ ದಾಳಿ ನಡೆಸಿದ ಇಸ್ಲಾಮಿಕ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ತಮ್ಮ ವಿರುದ್ಧ ಕೇಳಿ ಬಂದ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ರಾಜೀನಾಮೆ ನೀಡಿದ ಸಚಿವರು ಒತ್ತಾಯಿಸಿದ್ದಾರೆ.

    ಸರಣಿ ಬಾಂಬ್ ಸ್ಫೋಟದ ನಡೆಸಿದ ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ನಿಷೇಧಿತ ಉಗ್ರ ಸಂಘಟನೆಯೊಂದಿಗೆ 9 ಜನ ಮುಸ್ಲಿಂ ಸಂಪರ್ಕ ಇಟ್ಟುಕೊಂಡಿದ್ದಾರೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದೇಶವ್ಯಾಪಿ ಒತ್ತಾಯ ಕೇಳಿ ಬಂದಿತ್ತು.

    ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿರುವ ಬೌದ್ಧ ಧರ್ಮ ಗುರುಗಳು ಸಹ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಆರೋಪ ಎದುರಿಸುತ್ತಿರುವ 9 ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.

    ಶ್ರೀಲಂಕಾ ಸಂಸತ್ 225 ಸದಸ್ಯ ಬಲ ಹೊಂದಿದ್ದು, 11 ಮುಸ್ಲಿಂ ಸಂಸದರಿದ್ದಾರೆ. ಈ ಪೈಕಿ 9 ಜನ ಕ್ಯಾಬಿನೆಟ್, ರಾಜ್ಯ ಹಾಗೂ ಡೆಪ್ಯುಟಿ ಸಚಿವರಾಗಿ ನೇಮಕಗೊಂಡಿದ್ದರು.

    ಏಪ್ರಿಲ್ 21ರಂದು ನಡೆದ ಬಾಂಬ್ ದಾಳಿಯಲ್ಲಿ ಕನ್ನಡಿಗರು ಸೇರಿದಂತೆ 258 ಜನರು ಪ್ರಾಣ ಕಳೆದುಕೊಂಡಿದ್ದು, ಸುಮಾರು 500 ಜನರು ಗಂಭೀರವಾಗಿ ಗಾಯಗೊಂಡಿದ್ದರು.

  • ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ಲಕ್ಷದ್ವೀಪಕ್ಕೆ ಬರುತ್ತಿದ್ದಾರೆ 15 ಐಸಿಸ್ ಉಗ್ರರು – ಕೇರಳ ಕರಾವಳಿಯಲ್ಲಿ ಹೈ ಅಲರ್ಟ್

    ತಿರುವನಂತಪುರಂ: ಶ್ರೀಲಂಕಾದ ಸರಣಿ ಬಾಂಬ್ ಸ್ಫೋಟದ ನಂತರ ಲಕ್ಷದ್ವೀಪಕ್ಕೆ 15 ಐಸಿಸ್ ಉಗ್ರರು ಬರುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಕೇರಳದ ಕರಾವಳಿ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    15 ಜನ ಇಸ್ಲಾಮಿಕ್ ಸ್ಟೇಟ್ ಉಗ್ರರು ಶ್ರೀಲಂಕಾದಿಂದ ಬಿಳಿ ಬಣ್ಣದ ದೋಣಿಯಲ್ಲಿ ಲಕ್ಷದ್ವೀಪದ ಕಡೆ ತೆರಳುತ್ತಿದ್ದಾರೆ. ಅವರು ಲಕ್ಷದ್ವೀಪದಲ್ಲಿ ಇದ್ದುಕೊಂಡು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಭಾರತೀಯ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಮಾರ್ಚ್ 23 ರಂದು ಶ್ರೀಲಂಕಾ ಈ ಸೂಚನೆ ನೀಡಿದ ಬೆನ್ನಲ್ಲೇ ಕೇರಳದ ಕೋಸ್ಟಲ್ ಪೊಲೀಸ್ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ.

    ಶ್ರೀಲಂಕಾದಲ್ಲಿ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ನಾವು ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆಗಳು ಕರಾವಳಿ ಪ್ರದೇಶದಲ್ಲಿ ಕಂಡು ಬಂದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.

    ಸಮುದ್ರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಹಡಗುಗಳು ಕಂಡಬಂದರೆ ಆದರ ಬಗ್ಗೆ ಎಚ್ಚರಿಕೆ ವಹಿಸುವಂತೆ ಕರಾವಳಿ ಪೊಲೀಸ್ ಠಾಣೆಗೆ ಸೂಚನೆ ನೀಡಲಾಗಿದೆ.

    ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‍ಗಳು ಸೇರಿ ಎಂಟು ಕಡೆಯಲ್ಲಿ ಸರಣಿ ಅತ್ಮಾಹುತಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ ಕನ್ನಡಿಗರೂ ಸೇರಿ 250 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇದೇ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು.

  • ಹೊಸ ಪ್ರೇಯಸಿಯನ್ನು ಮದುವೆಯಾಗಲು ಹಳೇ ಪ್ರೇಯಸಿ ಹುಡುಕಿಕೊಂಡ ಬಂದ ಅಸಾಮಿ ಪೊಲೀಸರ ವಶಕ್ಕೆ

    ಹೊಸ ಪ್ರೇಯಸಿಯನ್ನು ಮದುವೆಯಾಗಲು ಹಳೇ ಪ್ರೇಯಸಿ ಹುಡುಕಿಕೊಂಡ ಬಂದ ಅಸಾಮಿ ಪೊಲೀಸರ ವಶಕ್ಕೆ

    ಬೆಂಗಳೂರು: ಹೊಸ ಪ್ರೇಯಸಿಯನ್ನು ಮದುವೆಯಾಗಲು ಹಳೇ ಪ್ರೇಯಸಿಯನ್ನು ಹುಡುಕಿಕೊಂಡು ಬಂದ ಶಂಕಿತ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಏಪ್ರಿಲ್ 29 ರಂದು ಉಕ್ರೇನ್ ನಿಂದ ಕತಾರ್ ಏರ್‍ವೇಸ್ ನಲ್ಲಿ ಬೆಂಗಳೂರಿಗೆ ಬಂದಿದ್ದ ಜೋಯೆಲ್ ನಿರುಶನ್ ಸ್ಯಾಮ್ಯುಯೆಲ್ ಎಂಬ ವ್ಯಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ವಲಸೆ ಆಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ವೇಳೆಯಲ್ಲಿ ಅವನ ಬಳಿ 2 ಪಾಸ್‍ಪೋರ್ಟ್‍ಗಳು ಸಿಕ್ಕಿದ್ದವು. ಇದರಿಂದ ಅನುಮಾನಗೊಂಡ ಅಧಿಕಾರಿಗಳು ಅವನನ್ನು ವಿಚಾರಣೆ ಮಾಡಿದಾಗ ಸ್ಫೋಟಕ ವಿಚಾರ ಹೊರಬಿದ್ದಿದೆ.

    ವಿಚಾರಣೆ ವೇಳೆ, ನಾನು ಶ್ರೀಲಂಕಾ ನಿವಾಸಿಯಾಗಿದ್ದು, ನನ್ನ ಹೆಸರು ಇರಿಸಹಾ ಟ್ರಿನಿಟಿ ಪಿರೇರಾ. ಹಳೆಯ ಪ್ರೇಯಸಿ ಬೆಂಗಳೂರಿನಲ್ಲಿ ನೆಲೆಸಿದ್ದು ಅವಳನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ. ಇರಿಸಹಾ ಟ್ರಿನಿಟಿ ಪೆರೆರಾಗೆ 35 ವರ್ಷವಾದರೂ ಮದುವೆ ಆಗಿರಲಿಲ್ಲ. ಶ್ರೀಲಂಕಾದಲ್ಲಿ ತನ್ನ ಹೊಸ ಪ್ರೇಯಸಿ ಜೊತೆ ಮದುವೆಯಾಗಲು ಸಿದ್ದತೆ ನಡೆಸಿದ್ದ. ಅದರೆ ಮದುವೆಯಾಗಲು ಚರ್ಚ್‍ವೊಂದಕ್ಕೆ ತನ್ನ ಹಳೆಯ ಪ್ರೇಯಸಿಯಿಂದ ‘ಅವಿವಾಹಿತ ಪತ್ರ’ ಬೇಕಿತ್ತು. ಈ ಪತ್ರ ಪಡೆಯಲು ಹಳೆಯ ಪ್ರೇಯಸಿಯನ್ನು ಹುಡುಕಿಕೊಂಡು ಬಂದಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ.

    ಮೂರು ದಿನಗಳ ಕಾಲ ವಿವಿಧ ತನಿಖಾ ಸಂಸ್ಥೆಗಳು ಆತನನ್ನು ವಿಚಾರಣೆ ನಡೆಸಿತ್ತು. ಈ ವ್ಯಕ್ತಿ ತನ್ನ ಪ್ರೇಯಸಿಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದಾನೆ ಎಂದು ಖಚಿತವಾದ ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಸದ್ಯ ಬಿಐಎಎಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಶ್ರೀಲಂಕಾ ಬಾಂಬ್ ದಾಳಿ: ಬೆಂಗ್ಳೂರಿಗೂ ಆಗಮಿಸಿದ್ದ ಉಗ್ರರು

    ಕೋಲಂಬೊ: ಶ್ರೀಲಂಕಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿ ರಕ್ತದೊಕುಳಿಯನ್ನ ಹರಿಸಿದ್ದ ಉಗ್ರರರು ತರಬೇತಿಗಾಗಿ ಭಾರತದ ಕೇರಳ, ಬೆಂಗಳೂರು ಹಾಗು ಕಾಶ್ಮೀರಕ್ಕೆ ಭೇಟಿ ನೀಡಿದ್ದರು ಎಂದು ಶ್ರೀಲಂಕಾ ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಈಸ್ಟರ್ ದಾಳಿಯ ಕುರಿತು ತನಿಖೆ ನಡೆಸುತ್ತಿರುವ ಶ್ರೀಲಂಕಾ ತನಿಖಾ ತಂಡ ಈ ಕುರಿತು ಮಾಹಿತಿ ಪಡೆದಿದ್ದರು. ದಾಳಿ ಮುಖ್ಯ ಸಂಚುಕೋರ ಅಬ್ದುಲ್ ಜಮೀಲ್ ಲತೀಫ್ ಸೇರಿದಂತೆ ದಾಳಿಕೋರರು ಕೇರಳದ ಕೆಲ ಪ್ರದೇಶಗಳು, ಕರ್ನಾಟಕದ ಬೆಂಗಳೂರು, ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ 2015ರಲ್ಲಿ ಸಿರಿಯಾಗೆ ತೆರಳಿ ಐಸಿಸ್ ಉಗ್ರ ಸಂಘಟನೆ ಸೇರ್ಪಡೆ ಆಗಿದ್ದರು. ಆ ಬಳಿಕ ಇತರೇ ಉಗ್ರರ ಜೊತೆ ಸಂಪರ್ಕ ಸಾಧಿಸಿದ್ದರು ಎಂದು ಸೇನೆ ಮುಖ್ಯಸ್ಥರು ತಿಳಿಸಿದ್ದಾರೆ.

    ಶ್ರೀಲಂಕಾ ಸೇನಾ ಮುಖ್ಯಸ್ಥರಾಗಿರುವ ಮಹೇಶ್ ಸೇನಾ ನಾಯಕ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬೇರೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿವುದು ಹಾಗೂ ದಾಳಿ ನಡೆಸಲು ಹೆಚ್ಚಿನ ತರಬೇತಿ ಪಡೆಯುವುದು ಅವರ ಉದ್ದೇಶವಾಗಿತ್ತು ಎಂಬುದು ಸದ್ಯಕ್ಕೆ ತಿಳಿದು ಬಂದಿದೆ ಎಂದಿದ್ದಾರೆ. ಅಲ್ಲದೇ ಸಂವಹನ ಕೊರತೆಯಿಂದಲೇ ದಾಳಿಗಳನ್ನು ತಡೆಯಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಈಸ್ಟರ್ ಭಾನುವಾರದ ದಿನ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಒಟ್ಟು 250 ಮಂದಿ ಬಲಿಯಾಗಿದ್ದರು. ಇದರಲ್ಲಿ ಕರ್ನಾಟಕದ 7 ಮಂದಿ ಕೂಡ ಪ್ರಾಣ ತೆತ್ತಿದ್ದರು. ಈ ದಾಳಿ ಬಗ್ಗೆ ಭಾರತ ರಾಷ್ಟ್ರೀಯ ತನಿಖಾ ಸಂಸ್ಥೆ ಮೂರು ಬಾರಿ ಎಚ್ಚರಿಕೆಯ ಸಂದೇಶ ರವಾನೆ ಮಾಡಿತ್ತು. ಅಲ್ಲದೇ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಮಾಹಿತಿ ಅನ್ವಯ ಸೂಕ್ಷ್ಮ ರೀತಿಯಲ್ಲಿ ಮಾಹಿತಿ ರವಾನೆ ಮಾಡಿತ್ತು. ಆದರೆ ಎಚ್ಚರಿಕೆಯ ಬಳಿಕವೂ ಶ್ರೀಲಂಕಾ ಪೊಲೀಸರು ದಾಳಿಯನ್ನ ತಡೆಯಲು ವಿಫಲರಾಗಿದ್ದರು. ಭದ್ರತೆ ವಿಫಲವಾದ ಕಾರಣ ಶ್ರೀಲಂಕಾ ಆಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

  • ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಶ್ರೀಲಂಕಾ ಪೊಲೀಸರಿಂದ ಭಾರತದ ಪತ್ರಕರ್ತನ ಬಂಧನ

    ಕೊಲಂಬೊ: ಈಸ್ಟರ್ ಭಾನುವಾರದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಈ ಸಮಯದಲ್ಲಿ ಅನಧಿಕೃತವಾಗಿ ಶಾಲೆಯೊಂದಕ್ಕೆ ಪ್ರವೇಶಿಸಲು ಯತ್ನಿಸಿದ ಭಾರತ ಮೂಲದ ಪತ್ರಕರ್ತನನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಪತ್ರಕರ್ತನನ್ನು ಭಾರತದ ದೆಹಲಿ ಮೂಲದ ಸಿದ್ದಿಕ್ ಅಹ್ಮದ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಇವರು ನ್ಯೂಸ್ ಏಜೆನ್ಸಿಯೊಂದರಲ್ಲಿ ಛಾಯಾಚಿತ್ರ ಗ್ರಾಹಕರಾಗಿದ್ದಾರೆ. ಇದನ್ನು ಓದಿ ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

    ಸಿದ್ದಿಕ್ ಅಹ್ಮದ್ ಏಪ್ರಿಲ್ 21 ರಂದು ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಶ್ರೀಲಂಕಾದಲ್ಲಿ ಆದ ಪರಿಣಾಮದ ಬಗ್ಗೆ ವರದಿ ಮಾಡಲು ಹೋಗಿದ್ದರು. ಸೇಂಟ್ ಸೆಬಾಸ್ಟಿಯಾನ್ ಚರ್ಚ್‍ನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಅಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆಯಲು ಶಾಲೆಗೆ ಹೋಗಿದ್ದಾರೆ. ಆ ಶಾಲೆಗೆ ಹೋಗಲು ಅನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಶಾಲೆಗೆ ಪ್ರವೇಶ ಬಯಸಿದ ಕಾರಣ ಶ್ರೀಲಂಕಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ. ಇದನ್ನು ಓದಿ  ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!

    ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ದಿನ ನಡೆದ ಸರಣಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, 500 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

  • ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

    ಸರಣಿ ಸ್ಫೋಟದ ಬಳಿಕ ಶ್ರೀಲಂಕಾದಲ್ಲಿ ಬುರ್ಕಾ ನಿಷೇಧ

    ಕೊಲಂಬೋ: ಸರಣಿ ಬಾಂಬ್ ದಾಳಿ ನಡೆದ ನಂತರ ಶ್ರೀಲಂಕಾ ಸರ್ಕಾರ ಬುರ್ಕಾ ಸೇರಿದಂತೆ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಹ ವಸ್ತ್ರ ಧರಿಸುವುದನ್ನು ನಿಷೇಧಿಸಿದೆ.

    ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ಸೋಮವಾರ ಈ ಆದೇಶವನ್ನು ಹೊರಡಿಸಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳುವ ವಸ್ತ್ರವನ್ನು ನಿಷೇಧಿಸಲಾಗಿದೆ ಎಂದು ಅಧ್ಯಕ್ಷರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಪೂರ್ಣ ವಸ್ತ್ರವನ್ನು ಧರಿಸಿದರೆ ಸೇನಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ. ಹೀಗಾಗಿ ಮುಖವನ್ನು ಮುಚ್ಚಿಕೊಳ್ಳುವ ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಶ್ರೀಲಂಕಾ ಸಂಸತ್ ಸದಸ್ಯರು ದೇಶದ ರಕ್ಷಣೆ ಸಂಬಂಧ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯ ಬೆನ್ನಲ್ಲೇ ಅಧ್ಯಕ್ಷರು ಈ ಆದೇಶ ಜಾರಿ ಮಾಡಿದ್ದಾರೆ.

    ಐಸಿಸ್ ಉಗ್ರರ ದಾಳಿ ಬಳಿಕ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿದ್ದು ಹೈ ಅಲರ್ಟ್ ಘೋಷಣೆಯಾಗಿದೆ. ಭಾನುವಾರ ಶ್ರೀಲಂಕಾದ ಪ್ರಮುಖ ಚರ್ಚ್‍ಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ರದ್ದುಗೊಳಿಸಲಾಗಿತ್ತು.

    ಸರಣಿ ಬಾಂಬ್ ಸ್ಫೋಟದ ಬಳಿಕ ಒಟ್ಟು 150 ಮಂದಿಯನ್ನು ಬಂಧಿಸಿದ್ದಾರೆ. ಲಂಕಾದ ಭದ್ರತಾ ಪಡೆ ಇನ್ನೂ ನಾಪತ್ತೆಯಾಗಿರುವ 140 ಮಂದಿಯ ಹುಡುಕಾಟದಲ್ಲಿ. ನಾಪತ್ತೆಯಾದ ವ್ಯಕ್ತಿಗಳು ಐಸಿಸ್ ಬೆಂಬಲಿಗರು ಮತ್ತು ಬಾಂಬ್ ತಯಾರಿಕೆಯಲ್ಲಿ ನಿಪುಣರಾಗಿದ್ದಾರೆ ಎಂದು ವರದಿಯಾಗಿದೆ.

    ದೇಶಾದ್ಯಂತ ಒಟ್ಟು 10 ಸಾವಿರ ಸೈನಿಕರನ್ನು ಸರ್ಕಾರ ಭದ್ರತೆಗೆ ನಿಯೋಜಿಸಿದೆ. ವಾಣಿಜ್ಯ ಕಟ್ಟಡಗಳು, ಶಾಲಾ ಕಾಲೇಜುಗಳು ಮತ್ತು ವಿಶ್ವ ವಿದ್ಯಾಲಯಗಳು ಬಾಂಬ್ ದಾಳಿಯ ನಂತರ ಸ್ಥಗಿತಗೊಂಡಿದೆ.

    ಬುರ್ಕಾವನ್ನು ನಿಷೇಧ ಮಾಡಿದ ದೇಶಗಳ ಪೈಕಿ ಶ್ರೀಲಂಕಾ ಮೊದಲನೆಯದ್ದಲ್ಲ. ಈಗಾಗಲೇ ವಿಶ್ವದ 13 ದೇಶಗಳಲ್ಲಿ ಬುರ್ಕಾ ನಿಷೇಧಗೊಂಡಿದೆ. 2010ರಲ್ಲಿ ಉಗ್ರರ ದಾಳಿ ಬಳಿಕ ಫ್ರಾನ್ಸ್ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ ಧರಿಸುವುದನ್ನು ನಿಷೇಧಿಸಿತ್ತು. ನಂತರ ಬೆಲ್ಜಿಯಂ, ನೆದರ್‍ಲ್ಯಾಂಡ್ ಸರ್ಕಾರಗಳು ಬುರ್ಕಾ ನಿಷೇಧಿಸಿತ್ತು.

  • ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!

    ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ -ಸಿಲಿಕಾನ್ ಸಿಟಿಯಲ್ಲಿ ತೀವ್ರ ಕಟ್ಟೆಚ್ಚರ!

    ಬೆಂಗಳೂರು: ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಆದ ಬೆನ್ನಲ್ಲೇ ಮಂಡ್ಯದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದು, ಇದೀಗ ಬೆಂಗಳೂರಿನಲ್ಲೂ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಪ್ರಮುಖವಾಗಿ ಪ್ರಾರ್ಥನಾ ಮಂದಿರಗಳು ಮತ್ತು ಹೋಟೆಲ್ ಮಾಲೀಕರ ಜೊತೆ ಸಭೆ ನಡೆಸಿದ್ದಾರೆ.

    ಹೌದು. ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ ಬಳಿಕ ಬೆಂಗಳೂರಿನಲ್ಲೂ ಹೈ ಅಲರ್ಟ್ ಘೋಷಣೆ ಆಗಿದೆ. ಶ್ರೀಲಂಕಾ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮಂದಿರ, ಮಸೀದಿ, ಚರ್ಚ್, ರೈಲು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಖಡಕ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬಾಂಬ್ ಬ್ಲಾಸ್ಟ್ – ಮಂಡ್ಯ ಜಿಲ್ಲೆಯಾದ್ಯಂತ ಕಟ್ಟೆಚ್ಚರ

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲ ಪಂಚತಾರ ಹೋಟೆಲ್ ಮಾಲೀಕರು, ಮಾಲ್ ಮಾಲೀಕರು, ಐಟಿ ಕಂಪನಿಗಳ ಮುಖ್ಯಸ್ಥರು ಹಾಗೂ ಸೆಕ್ಯೂರಿಟಿ ಆಫಿಸರ್‍ಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳು ಹಾಗೂ ಸ್ಫೋಟಕಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‍ಕುಮಾರ್ ಮಾಹಿತಿ ನೀಡಿದ್ದಾರೆ. ಜನರ ರಕ್ಷಣೆಗಾಗಿ ಹೋಟೆಲ್‍ಗಳು ಯಾವ ರೀತಿ ಮುಂಜಾಗೃತಾ ಕ್ರಮಗಳನ್ನ ವಹಿಸಬೇಕು. ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನಿಂಗ್, ಭದ್ರತೆಯ ನಿರ್ವಹಣೆ ಹೇಗೆ ಎಂದು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.

    ಸಭೆಯಲ್ಲಿ ನಗರದ ಎಲ್ಲಾ ವಿಭಾಗದ ಡಿಸಿಪಿಗಳು ಹಾಜರಾಗಿದ್ದರು. ಶಿವಾಜಿನಗರ ಚರ್ಚ್, ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ ಸೇರಿದಂತೆ ಎಲ್ಲ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಸೂಕ್ತ ಭದ್ರತೆ ನೀಡಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಆಯಾ ವಿಭಾಗದ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೂಚಿಸಿದ್ದಾರೆ.

  • ಶ್ರೀಲಂಕಾ ಬಾಂಬ್ ಸ್ಫೋಟ – ಓರ್ವ ಮಹಿಳೆ ಭಾಗಿ, ಸುಶಿಕ್ಷಿತರೇ ಬಾಂಬರ್‌ಗಳು!

    ಶ್ರೀಲಂಕಾ ಬಾಂಬ್ ಸ್ಫೋಟ – ಓರ್ವ ಮಹಿಳೆ ಭಾಗಿ, ಸುಶಿಕ್ಷಿತರೇ ಬಾಂಬರ್‌ಗಳು!

    ಕೊಲಂಬೋ: ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ ಓರ್ವ ಮಹಿಳೆಯೂ ಭಾಗಿಯಾಗಿದ್ದಳು ಎನ್ನುವ ಸ್ಫೋಟಕ ವಿಚಾರ ಶ್ರೀಲಂಕಾ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬುಧವಾರ ಶ್ರೀಲಂಕಾದ ಪೊಲೀಸ್ ವಕ್ತಾರ ರುವಾನ್ ಗುನಶೇಖರ ಮಾತನಾಡಿ, ಒಟ್ಟು 9 ಮಂದಿ ಕೃತ್ಯ ಎಸಗಿದ್ದು, ಈ ತಂಡದಲ್ಲಿ ಓರ್ವ ಮಹಿಳೆ ಭಾಗಿಯಾಗಿದ್ದಾಳೆ. ಈ ದಾಳಿ ಸಂಬಂಧ ಇಲ್ಲಿಯವರೆಗೆ 60 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

    ಓರ್ವ ಮಹಿಳೆ ಭಾಗಿಯಾಗಿರುವುದನ್ನು ಅಪರಾಧ ತನಿಖಾ ತಂಡ(ಸಿಐಡಿ) ಅಧಿಕೃತವಾಗಿ ತಿಳಿಸಿದೆ. ಬಂಧನಕ್ಕೆ ಒಳಗಾಗಿರುವ 60 ಮಂದಿಯಲ್ಲಿ 32 ಮಂದಿ ಸಿಐಡಿ ಕಸ್ಟಡಿಯಲ್ಲಿದ್ದಾರೆ. ಬಂಧನಕ್ಕೆ ಒಳಗಾದ ಎಲ್ಲರೂ ಶ್ರೀಲಂಕಾದ ಪ್ರಜೆಗಳು ಎಂದು ಮಾಹಿತಿ ನೀಡಿದ್ದಾರೆ.

    ಶ್ರೀಲಂಕಾದ ಉಪ ರಕ್ಷಣಾ ಸಚಿವ ರುವಾನ ವಿಜೆಯವರ್ಧನೆ ಮಾತನಾಡಿ, ಎಲ್ಲ ಆತ್ಮಹತ್ಯಾ ಬಾಂಬರ್‍ಗಳು ಸುಶಿಕ್ಷಿತರಾಗಿದ್ದು ಶ್ರೀಮಂತರಾಗಿದ್ದಾರೆ. ಓರ್ವ ಇಂಗ್ಲೆಂಡಿನಲ್ಲಿ ಪದವಿ ಪಡೆದಿದ್ದರೆ ಇನ್ನೊಬ್ಬ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಓದಿದ್ದ ಎಂಬುದನ್ನು ತಿಳಿಸಿದ್ದಾರೆ.

    ಪ್ರಾಥಮಿಕ ತನಿಖೆಯ ವೇಳೆ ನ್ಯೂಜಿಲೆಂಡಿನ ಕ್ರೈಸ್ಟ್‍ಚರ್ಚ್ ಮಸೀದಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನುವುದು ತಿಳಿದು ಬಂದಿದೆ. ಒಟ್ಟು ಈ ದಾಳಿಯಲ್ಲಿ 359 ಮಂದಿ ಮೃತಪಟ್ಟಿದ್ದು ಇದರಲ್ಲಿ 39 ಮಂದಿ ವಿದೇಶಿಯರು ಸೇರಿದ್ದಾರೆ. 17 ಮೃತ ದೇಹಗಳನ್ನು ಗುರುತಿಸಲಾಗಿದ್ದು ಆ ದೇಹಗಳನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಕೆಲವು ಅಧಿಕಾರಿಗಳಿಗೆ ಉಗ್ರರಿಂದ ದಾಳಿ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಿತ್ತು ಎನ್ನುವ ವಿಚಾರವನ್ನು ಒಪ್ಪಿಕೊಂಡ ಉಪ ರಕ್ಷಣಾ ಸಚಿವರು ಈ ವಿಚಾರವನ್ನು ಪ್ರಧಾನ ಮಂತ್ರಿಯವರಿಗೆ ತಿಳಿಸಿರಲಿಲ್ಲ ಎಂದು ಹೇಳಿದರು.

    ಈ ದಾಳಿಯ ಹಿಂದೆ ಐಸಿಸ್ ಪಾತ್ರ ಇದ್ಯಾ ಎನ್ನುವ ಪ್ರಶ್ನೆಗೆ, ಈ ದಾಳಿಗೆ ಐಸಿಸ್ ಅಥವಾ ಬೇರೆ ಅಂತರಾಷ್ಟ್ರೀಯ ಸಂಘಟನೆಯ ಸಂಬಂಧದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು.

    ಐಸಿಸ್ ಸಂಘಟನೆ ಮಂಗಳವಾರ ಶ್ರೀಲಂಕಾದಲ್ಲಿ ಕೃತ್ಯ ಎಸಗಿದ್ದು ನಾವೇ ಎಂದು ಹೇಳಿತ್ತು.

  • ಈಸ್ಟರ್ ಸ್ಫೋಟಕ್ಕೂ ಮುನ್ನ 3 ಬಾರಿ ಭಾರತದಿಂದ ಶ್ರೀಲಂಕಾಗೆ ಎಚ್ಚರಿಕೆ ಸಂದೇಶ

    ಈಸ್ಟರ್ ಸ್ಫೋಟಕ್ಕೂ ಮುನ್ನ 3 ಬಾರಿ ಭಾರತದಿಂದ ಶ್ರೀಲಂಕಾಗೆ ಎಚ್ಚರಿಕೆ ಸಂದೇಶ

    ನವದೆಹಲಿ: ಭಾನುವಾರದ ಈಸ್ಟರ್ ದಿನ ಚರ್ಚ್ ಹಾಗೂ ಹೋಟೆಲ್ ಗಳ ಮೇಲೆ ಆತ್ಮಾಹುತಿ ದಾಳಿ ನಡೆಯುವ ಮುನ್ನ ಭಾರತ ಮೂರು ಎಚ್ಚರಿಕೆಯ ಸಂದೇಶಗಳನ್ನು ಶ್ರೀಲಂಕಾಗೆ ನೀಡಿತ್ತು ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಈಸ್ಟರ್ ಸ್ಫೋಟ ದುರಂತದಲ್ಲಿ ಇದುವರೆಗೂ 321 ಮಂದಿ ಬಲಿಯಾಗಿದ್ದು, 500 ಮಂದಿ ಗಾಯಗೊಂಡಿದ್ದಾರೆ. ಈ ದಾಳಿ ನಡೆಯುವ ಬಗ್ಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಮೊದಲಿಗೆ ಏಪ್ರಿಲ್ 4 ರಂದು ಸಂದೇಶ ನೀಡಿತ್ತು. ಕೊಯಂಬತ್ತೂರಿನ ಐಸಿಸ್ ಉಗ್ರರ ಮೇಲಿನ ತನಿಖೆಯ ವೇಳೆ ಶ್ರೀಲಂಕಾದ ನ್ಯಾಷನಲ್ ತೌಹೀದ್ ಜಮಾತ್ (ಎನ್‍ಟಿಜೆ) ಸಂಘಟನೆಯ ಮುಖ್ಯಸ್ಥ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ವಿಡಿಯೋ ಸಿಕ್ಕಿತ್ತು. ಈ ವಿಚಾರವನ್ನು ಭಾರತ ಶ್ರೀಲಂಕಾದ ಜೊತೆ ಹಂಚಿಕೊಂಡಿತ್ತು.

    ಮೊದಲ ಎಚ್ಚರಿಕೆಯ ಸಂದೇಶದಲ್ಲಿ ಶ್ರೀಲಂಕಾದ ಚರ್ಚ್ ಹಾಗೂ ಕೊಲಂಬೋದಲ್ಲಿರುವ ಭಾರತದ ಹೈಕಮಿಷನರ್ ಕಚೇರಿಯನ್ನು ಐಸಿಸ್ ಉಗ್ರರು ಟಾರ್ಗೆಟ್ ಮಾಡಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನು ಭಾರತ ನೀಡಿತ್ತು.

    ದಾಳಿ ನಡೆಯುವ ಮುನ್ನ ದಿನವಾದ ಏ.20 ಶನಿವಾರದಂದು, ಮೊದಲ ಎಚ್ಚರಿಕೆ ಸಂದೇಶಕ್ಕಿಂತಲೂ ದಾಳಿ ನಡೆಯಲಿದೆ ಎನ್ನಲಾದ ನಿಖರ ಸ್ಥಳಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿತ್ತು. ಮೂರನೇ ಎಚ್ಚರಿಕೆ ಸಂದೇಶ ಆತ್ಮಾಹುತಿ ದಾಳಿ ನಡೆಯುವ ಕೆಲವೇ ಗಂಟೆಗಳ ಮುನ್ನ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ತಂತ್ರಜ್ಞಾನ ಮತ್ತು ವ್ಯಕ್ತಿಗಳ ಮೂಲಗಳಿಂದ ಭಾರತ ದಾಳಿಗೆ ಸಂಬಂಧಿಸಿದ ಖಚಿತ ಮಾಹಿತಿಯನ್ನು ಶ್ರೀಲಂಕಾಗೆ ರವಾನಿಸಿತ್ತು ಎನ್ನುವ ವಿಚಾರವನ್ನು ಮಾಧ್ಯಮಕ್ಕೆ ಸರ್ಕಾರದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

    ಶ್ರೀಲಂಕಾ ಪ್ರಧಾನ ಮಂತ್ರಿ ರಣಲ್ ವಿಕ್ರಮ್‍ಸಿಂಗೆ ಅವರು, ಭಾರತ ಉಗ್ರರ ದಾಳಿ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿತ್ತು. ಎಚ್ಚರಿಕೆ ಸಿಕ್ಕಿದ್ದರೂ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡು ದಾಳಿಯನ್ನು ತಪ್ಪಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದ್ದಾರೆ.

    ಮಾಹಿತಿ ಸಿಕ್ಕಿದ್ದು ಹೇಗೆ?
    ಭಾರತದ ತಮಿಳುನಾಡು, ಕೇರಳ ಹಾಗೂ ಶ್ರೀಲಂಕಾದಲ್ಲಿ ಇಸ್ಲಾಮಿಕ್ ಆಡಳಿತ ಜಾರಿ ಮಾಡಲು ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಮುಖ್ಯಸ್ಥ ವಿಡಿಯೋದಲ್ಲಿ ಕರೆ ನೀಡಿದ್ದ. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು.

    ಈ ವಿಡಿಯೋವನ್ನು ಸಿಡಿ, ಡಿವಿಡಿ, ಪೆನ್ ಡ್ರೈವ್ ಸೇರಿಂತೆ ವಿವಿಧ ಮಾದರಿಗಳಲ್ಲಿ ಸಂಗ್ರಹಿಸಿಡಲಾಗಿತ್ತು. 2018 ಡಿ.19 ರಂದು ಕುಣಿಯಾಮುತ್ತೂರ್, ಉಕ್ಕಡಮ್, ಚೆನ್ನೈನ ಓಟೇರಿ, ವಿಲ್ಲಿಪುರಾಂ ಬಳಿಯ ತಿಂಡಿವಣಂ ಹಾಗು ಕೊಯಮತ್ತೂರಿನ ವೆರೈಟಿ ಹಾಲ್ ರಸ್ತೆಯಲ್ಲಿ ಶಂಕಿತ ಐಸಿಸ್ ಉಗ್ರರನ್ನು ವಶಕ್ಕೆ ಪಡೆಯುವ ವೇಳೆ ಈ ವಿಡಿಯೋ ಸಿಕ್ಕಿತ್ತು. ಬಂಧನಕ್ಕೆ ಒಳಗಾದ 6 ಮಂದಿಯ ವಿಚಾರಣೆ ವೇಳೆ ಹಿಂದೂ ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು.

    ಹಶೀಮ್ ವಿಡಿಯೋ ತನಿಖೆ ನಡೆಸಿದ ವೇಳೆ ಶ್ರೀಲಂಕಾದಲ್ಲಿರುವ ಕೆಲ ಉಗ್ರರ ಜೊತೆ ಈತನಿಗೆ ಸಂಪರ್ಕ ಇರುವುದು ಸ್ಪಷ್ಟವಾಗಿತ್ತು. ಧರ್ಮದ ಹೆಸರಿನಲ್ಲಿ ಯುವಕರ ತಲೆಕೆಡಿಸಿ ಇಸ್ಲಾಮಿಕ್ ಉಗ್ರ ಸಂಘಟನೆಯತ್ತ ಯುವಕರನ್ನು ಈತ ಸೆಳೆಯುತ್ತಿದ್ದಾನೆ ಎನ್ನುವುದು ದೃಢಪಟ್ಟಿತ್ತು. ಶ್ರೀಲಂಕಾ, ಭಾರತ ಅಲ್ಲದೇ ಬಾಂಗ್ಲಾದೇಶದೊಂದಿಗೂ ಸಂಪರ್ಕ ಹೊಂದಿದ್ದ ವಿಚಾರ ಆತನ ಮೊಬೈಲ್ ಕರೆ ವಿವರಗಳಿಂದ ಮಾಹಿತಿ ಲಭ್ಯವಾಗಿತ್ತು. ಪರಿಣಾಮ ಬಾಂಗ್ಲಾದೇಶ ಕೂಡ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವ ಸಲಹೆಯನ್ನು ಭಾರತ ನೀಡಿತ್ತು.

    ಶಾಂಗ್ರಿಲಾ ಹೋಟೆಲ್ ನಲ್ಲಿ ಜಹ್ರಾನ್ ಬಿನ್ ಹಶೀಮ್ ಬಾಂಬ್ ಸ್ಫೋಟಿಸಿ ಕೃತ್ಯ ಎಸಗಿದ್ದಾನೆ ಎನ್ನುವ ವಿಚಾರ ಪ್ರಾಥಮಿಕ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

  • ದಾಳಿಯ ಬಗ್ಗೆ ಭಾರತ ಮೊದಲೇ ಎಚ್ಚರಿಕೆ ನೀಡಿತ್ತು: ಶ್ರೀಲಂಕಾ ಅಧ್ಯಕ್ಷ

    ದಾಳಿಯ ಬಗ್ಗೆ ಭಾರತ ಮೊದಲೇ ಎಚ್ಚರಿಕೆ ನೀಡಿತ್ತು: ಶ್ರೀಲಂಕಾ ಅಧ್ಯಕ್ಷ

    ಕೊಲಂಬೋ: ದಾಳಿಯ ಬಗ್ಗೆ ಭಾರತ ಎಚ್ಚರಿಕೆ ನೀಡಿದ್ದರೂ ದೇಶದ ಭದ್ರತಾ ಸಂಸ್ಥೆ ನನ್ನ ಗಮನಕ್ಕೆ ತಂದಿರಲಿಲ್ಲ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಗಂಭೀರ ಆರೋಪ ಮಾಡಿದ್ದಾರೆ.

    ಈಸ್ಟರ್ ಭಾನುವಾರದ ವೇಳೆ ನಡೆದ ಸರಣಿ ಬಾಂಬ್ ಸ್ಫೋಟದ ಕುರಿತು ದೇಶವನ್ನು ಉದ್ದೇಶಿಸಿ ಮಂಗಳವಾರ ರಾತ್ರಿ ದೂರದರ್ಶದ ಮೂಲಕ ಮಾತನಾಡಿದ ಅಧ್ಯಕ್ಷರು, ಉಗ್ರರ ದಾಳಿ ಬಗ್ಗೆ ನನಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ದಾಳಿಯ ಬಗ್ಗೆ ದೇಶದ ಭದ್ರತಾ ಸಂಸ್ಥೆಗೆ ಗುಪ್ತಚರ ಇಲಾಖೆ ಹಾಗೂ ಭಾರತದಿಂದ ಮೊದಲೇ ಮಾಹಿತಿ ಸಿಕ್ಕಿತ್ತು. ದರೆ ಇದನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರದೇ ನಿಷ್ಕಾಳಜಿ ತೋರಿದ್ದಾರೆ ಎಂದರು.

    ಭದ್ರತಾ ಸಂಸ್ಥೆಯು ದಾಳಿಯ ಬಗ್ಗೆ ನನಗೆ ಮಾಹಿತಿ ನೀಡಿದ್ದರೆ ತಕ್ಷಣವೇ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲು ಸೂಚನೆ ನೀಡುತ್ತಿದ್ದೆ. ಆದರೆ ಅವರು ಹಾಗೇ ಮಾಡಲಿಲ್ಲ. ಹೀಗಾಗಿ ಮಾಹಿತಿ ರವಾನಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. 24 ಗಂಟೆಯ ಒಳಗಾಗಿ ದೇಶದ ಭದ್ರತಾ ಪಡೆಯನ್ನು ಪುನರಚಿಸಲಾಗುವುದು ಎಂದು ತಿಳಿಸಿದರು.

    ಭಾರತ ಏನು ಹೇಳಿತ್ತು?
    ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ದೇಶದ ಒಳಗಡೆ ಇರುವ ಕೆಲವು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿತ್ತು. ಇವರ ವಿಚಾರಣೆ ವೇಳೆ ಒಬ್ಬಾತ ಶ್ರೀಲಂಕಾದ ಝಾರಂ ಹಸೀಂ ಬಗ್ಗೆ ಬಾಯಿ ಬಿಟ್ಟಿದ್ದ. ಈತ ಶ್ರೀಲಂಕಾದ ಮುಸ್ಲಿಂ ಸಂಘಟನೆಯ ಬಗ್ಗೆ ಸಂಪರ್ಕದಲ್ಲಿದ್ದಾನೆ ಎಂದು ತಿಳಿಸಿದ್ದ. ಈ ಮಾಹಿತಿಯನ್ನು ಭಾರತ ಶ್ರೀಲಂಕಾದ ಅಧಿಕಾರಿಗಳಿಗೆ ಹಂಚಿಕೊಂಡಿತ್ತು.

    ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಕನ್ನಡಿಗರು, ಭಾರತೀರು ಸೇರಿದಂತೆ 321 ಮಂದಿ ಸಾವನ್ನಪ್ಪಿದ್ದು, 500 ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ನಾವೇ ನಡೆಸಿದ್ದೇವೆ ಎಂದು ಐಸಿಸ್ ಉಗ್ರ ಸಂಘಟನೆ ಹೇಳಿಕೊಂಡಿದೆ. ಘಟನೆ ನಡೆದ 2 ದಿನಗಳ ನಂತರ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದ್ದು, ಶ್ರೀಲಂಕಾ ಕ್ರಿಶ್ಚಿಯನ್ ಹಾಗೂ ವಿದೇಶಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ತಿಳಿಸಿದೆ. ತನ್ನ `ಅಮಾಕ್’ ನ್ಯೂಸ್ ಮೂಲಕ ಐಸಿಸ್ ಈ ವಿಚಾರವನ್ನು ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಒಟ್ಟಿನಲ್ಲಿ ಈಗ ಇರಾಕ್, ಸಿರಿಯಾ ಬಳಿಕ ಶ್ರೀಲಂಕಾದಲ್ಲೂ ಐಸಿಸ್ ತನ್ನ ಜಾಲವನ್ನು ಹಬ್ಬಿಸಿರುವುದು ದೃಢಪಟ್ಟಿದೆ.

    ಘಟನೆ ಸಂಬಂಧ ಶ್ರೀಲಂಕಾ ಪೊಲೀಸ್ ತನಿಖೆ ನಡೆಸಿ ವಶಕ್ಕೆ ಪಡೆದಿರುವ 40ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ. ಅಲ್ಲದೇ ಸ್ಥಳೀಯರು ನೀಡಿದ ಮಾಹಿತಿ ಅನ್ವಯ ಸಿರಿಯಾ ಪ್ರಜೆಯನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಕೊಲಂಬೋದಲ್ಲಿ ನಡೆದ ದಾಳಿಯಲ್ಲಿ ಮೊದಲ 6 ದಾಳಿಗಳಲ್ಲಿ ಮೂರು ಚರ್ಚ್‍ನಲ್ಲಿ ಹಾಗೂ 3 ಹೋಟೆಲ್ ಗಳಲ್ಲಿ ನಡೆಸಲಾಗಿತ್ತು. ಕೇವಲ 20 ನಿಮಿಷಗಳ ಅವಧಿಯಲ್ಲಿ ಈ ದಾಳಿ ನಡೆಸಲಾಗಿತ್ತು. ಆ ಬಳಿಕ ಮತ್ತೆರಡು ಬಾಂಬ್ ಸ್ಫೋಟಗಳು ನಡೆದಿತ್ತು. ಘಟನೆಯಲ್ಲಿ 38 ವಿದೇಶಿಯರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಶ್ರೀಲಂಕಾ ಸರ್ಕಾರ ತಿಳಿಸಿದ್ದು, ಇದರಲ್ಲಿ ಭಾರತ ಸೇರಿದಂತೆ ಇಂಗ್ಲೆಂಡ್, ಯುಎಸ್, ಆಸ್ಟ್ರೇಲಿಯಾ, ಟರ್ಕಿ, ಚೀನಾ, ಡ್ಯಾನಿಷ್, ಡಚ್ ಮತ್ತು ಪೋರ್ಚುಗಿಸ್ ಪ್ರಜೆಗಳು ಸೇರಿದ್ದಾರೆ.