Tag: Sri Lanka

  • 21 ವರ್ಷದ ಹಿಂದೆ ಈ ದಿನ ತ್ರಿಶತಕದ ಜೊತೆಯಾಟ- ವಿಶ್ವದಾಖಲೆ ನಿರ್ಮಿಸಿದ್ದ ದಾದಾ, ದ್ರಾವಿಡ್

    21 ವರ್ಷದ ಹಿಂದೆ ಈ ದಿನ ತ್ರಿಶತಕದ ಜೊತೆಯಾಟ- ವಿಶ್ವದಾಖಲೆ ನಿರ್ಮಿಸಿದ್ದ ದಾದಾ, ದ್ರಾವಿಡ್

    ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರರಾದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಸ್ಮರಣೀಯ ಜೊತೆಯಾಟವನ್ನು 1999ರ ಮೇ 26ರಂದು ದಾಖಲಿಸಿದ್ದರು. ಅವರ ಈ ಸಾಧನೆ ಇಂದಿಗೂ ಅಭಿಮಾನಿಗಳ ನೆನಪಿನಲ್ಲಿದೆ.

    1999ರ ವಿಶ್ವಕಪ್ ಟೂರ್ನಿಯ ಭಾಗವಾಗಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಇಂಗ್ಲೆಂಡ್‍ನ ಟೌಂಟನ್‍ನಲ್ಲಿ ಪಂದ್ಯ ನಡೆದಿತ್ತು. ಆಗ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ 318 ರನ್‍ಗಳ ಜೊತೆಯಾಟದ ದಾಖಲೆ ಬರೆದಿದ್ದರು. ಈ ದಾಖಲೆಗೆ ಇಂದಿಗೆ ಸರಿಯಾಗಿ 21 ವರ್ಷದ ಸಂಭ್ರಮ.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿತು. ಕೇವಲ 6 ರನ್ ಗಳಿಸಿದ್ದಾಗ ಆರಂಭಿಕ ಬ್ಯಾಟ್ಸ್‍ಮನ್ ಎಸ್.ರಮೇಶ್ ಚಾಮಿಂಡ ವಾಸ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದ್ದರು. ಆದರೆ ಅದಾದ ಬಳಿಕ ಲಂಕಾದ ಬೌಲರ್ ಗಳಿಗೆ ಮುಂದಿನ ವಿಕೆಟ್ ಪಡೆಯಲು ಹೆಚ್ಚು ಸಮಯವೇ ಬೇಕಾಯಿತು.

    ಎರಡನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ರಾಹುಲ್ ದ್ರಾವಿಡ್ ಕ್ರೀಸ್‍ನಲ್ಲಿದ್ದ ದಾದಾ ಖ್ಯಾತಿ ಗಂಗೂಲಿಗೆ ಸಾಥ್ ನೀಡಿದರು. ಈ ಜೋಡಿಯು ಎರಡನೇ ವಿಕೆಟ್‍ಗೆ ದಾಖಲೆಯ 318 ರನ್‍ಗಳ ಗಳಿಸಿತು. ಈ ಜೊತೆಯಾಟದಲ್ಲಿ ಗಂಗೂಲಿ 183 ರನ್ ಮತ್ತು ರಾಹುಲ್ ದ್ರಾವಿಡ್ 145 ರನ್ ಗಳಿಸಿದ್ದರು.

    145 ರನ್ (129 ಎಸೆತ, 17 ಬೌಂಡರಿ, 1 ಸಿಕ್ಸ್) ಗಳಿಸಿದ್ದ ರಾಹುಲ್ ದ್ರಾವಿಡ್ 46ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದ್ದರು. ಬ್ಯಾಟಿಂಗ್ ಮುಂದುವರಿಸಿದ ಗಂಗೂಲಿ ಇನ್ನಿಂಗ್ಸ್ ನ ಕೊನೆಯ ಓವರಿನಲ್ಲಿ ವಿಕೆಟ್ ನೀಡಿದರು. ಈ ಪಂದ್ಯದಲ್ಲಿ ದಾದಾ ತಮ್ಮ ಏಕದಿನ ವೃತ್ತಿ ಜೀವನ ಅತ್ಯಧಿಕ ರನ್ 183 (158 ಎಸೆತ, 17 ಬೌಂಡರಿ, 7 ಸಿಕ್ಸ್) ಸಿಡಿಸಿದರು.

    ದಾದಾ- ದ್ರಾವಿಡ್ ಜೋಡಿಯ ಸಹಾಯದಿಂದ ಭಾರತ 6 ವಿಕೆಟ್‍ಗಳಿಗೆ 373 ರನ್‍ಗಳ ಬೃಹತ್ ಸ್ಕೋರ್ ಗಳಿಸಿತ್ತು. ಟೀಂ ಇಂಡಿಯಾ ನೀಡಿದ್ದ ಗುರಿಯನ್ನು ಹಿಂದಿಕ್ಕುವಲ್ಲಿ ಶ್ರೀಲಂಕಾ ವಿಫಲವಾಯಿತು. 43ನೇ ಓವರ್ ನಲ್ಲಿ 216 ರನ್ ಗಳಿಸಿದ್ದ ಶ್ರೀಲಂಕಾ ಸರ್ವಪತನ ಕಂಡಿತ್ತು. ಈ ಮೂಲಕ ಪಂದ್ಯವನ್ನು ಭಾರತವು 157 ರನ್‍ಗಳಿಂದ ಗೆದ್ದುಕೊಂಡಿತ್ತು. ರಾಬಿನ್ ಸಿಂಗ್ ಭಾರತ ಪರ ಐದು ವಿಕೆಟ್ ಪಡೆದು ಮಿಂಚಿದ್ದರು.

    ದ್ರಾವಿಡ್ ಮತ್ತು ಗಂಗೂಲಿ ನಡುವಿನ 312 ರನ್ ಗಳ ಜೊತೆಯಾಟವು ಏಕದಿನ ಪಂದ್ಯಗಳಲ್ಲಿ ನಾಲ್ಕನೇ ಅತಿದೊಡ್ಡ ಜೊತೆಯಾಟವಾಗಿದೆ. 1999ರ ವಿಶ್ವಕಪ್‍ನಲ್ಲಿ ಭಾರತದ ಪ್ರಯಾಣವು ಸೂಪರ್ ಸಿಕ್ಸ್ ನಲ್ಲಿ ಕೊನೆಗೊಂಡಿತ್ತು. ಹೀಗಾಗಿ ತಂಡವು ಸೆಮಿಫೈನಲ್‍ಗೆ ಪ್ರವೇಶಿಸಲಿಲ್ಲ.

    312 ರನ್ ಜೊತೆಯಾಟ ವಿಶ್ವದಾಖಲೆಯನ್ನು ಕೆಲವೇ ತಿಂಗಳ ಅಂತರದಲ್ಲಿ ಭಾರತೀಯ ಜೋಡಿಯೇ ಮುರಿದಿತ್ತು. ಅದರಲ್ಲೂ ರಾಹುಲ್ ದ್ರಾವಿಡ್ ಇದ್ದರು ಎಂಬುದು ಮತ್ತೊಂದು ವಿಶೇಷ. ಸಚಿನ್ ತೆಂಡೂಲ್ಕರ್ (ಔಟಾಗದೆ 186 ರನ್) ಹಾಗೂ ರಾಹುಲ್ ದ್ರಾವಿಡ್ (153 ರನ್) ಎರಡನೇ ವಿಕೆಟ್‍ಗೆ 331 ರನ್‍ಗಳನ್ನು ಚಚ್ಚಿತ್ತು. ಈ ದಾಖಲೆ ಮಾತ್ರ ಸುಮಾರು 14 ವರ್ಷಗಳ ಕಾಲ ಮುರಿಯದೆ ಉಳಿದಿತ್ತು.

  • ಅಭಿಮಾನಿಗಳ ಪಾಲಿಗೆ ಅಂದು ನಾನು ಖಳನಾಯಕನಾಗಿದ್ದೆ: ಯುವರಾಜ್ ಸಿಂಗ್

    ಅಭಿಮಾನಿಗಳ ಪಾಲಿಗೆ ಅಂದು ನಾನು ಖಳನಾಯಕನಾಗಿದ್ದೆ: ಯುವರಾಜ್ ಸಿಂಗ್

    – ‘ನನ್ನ ಮನೆಗೆ ಕಲ್ಲು ಎಸೆದಿದ್ದರು’

    ಮುಂಬೈ: 2014ರ ಟಿ20 ವಿಶ್ವಕಪ್ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ಮಾಜಿ ಆಲ್‍ರೌಂಡರ್ ಆಟಗಾರ ಯುವರಾಜ್ ಸಿಂಗ್ ಕಾರಣ ಎಂಬ ವಿಮರ್ಶೆಗಳು ಕೇಳಿ ಬಂದಿದ್ದವು. ಪಂದ್ಯದಲ್ಲಿ 21 ಎಸೆತಗಳಲ್ಲಿ ಯುವಿ ಕೇವಲ 11 ರನ್ ಗಳಿಸಿದ್ದ ಕಾರಣ ಸೋಲಿಗೆ ಪರೋಕ್ಷ ಜವಾಬ್ದಾರಿ ವಹಿಸಿಕೊಂಡಿದ್ದರು. ಶ್ರೀಲಂಕಾ 6 ವಿಕೆಟ್‍ಗಳ ಗೆಲುವು ಪಡೆದು ವಿಶ್ವಕಪ್‍ಗೆ ಮುತ್ತಿಟ್ಟು. ಇದರೊಂದಿಗೆ ಯುವರಾಜ್ ಸಿಂಗ್ ಬ್ಯಾಟಿಂಗ್ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯನ್ನು ಯುವರಾಜ್ ಸಿಂಗ್ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.

    ‘ಅಂದು ನಡೆದ ಪಂದ್ಯದ ಸೋಲಿನ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತಿದ್ದೇನೆ. ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಾನು ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ನಡೆಸಲಿಲ್ಲ. ಬೇರೆ ಪಂದ್ಯವಾಗಿದ್ದರೆ ಇದು ನನ್ನನ್ನು ಅಷ್ಟು ಬಾಧಿಸುತ್ತಿರಲಿಲ್ಲ. ಆ ಬಳಿಕ ನಾನು ಸಾಕಷ್ಟು ನಿದ್ದೆ ರಹಿತ ರಾತ್ರಿಗಳನ್ನು ಕಳೆದಿದ್ದೇನೆ. ನಾನು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಕಣ್ಣು ನನ್ನ ಮೇಲೆಯೇ ಇತ್ತು. ಅವರು ಪ್ರಶ್ನಿಸುತ್ತಿದ್ದ ಸಂದರ್ಭದಲ್ಲಿ ಕಿವಿಗೆ ಹೆಡ್‍ಫೋನ್ ಹಿಡಿದುಕೊಂಡು ಅಲ್ಲಿಂದ ಆಗಮಿಸಿದ್ದೆ. ಮನೆಗೆ ಆಗಮಿಸಿದ ಬಳಿಕ ಎಲ್ಲರು ನನ್ನನ್ನು ಖಳನಾಯಕರಾಗಿ ನೋಡುತ್ತಿದ್ದರು. ನನ್ನ ನಿವಾಸದ ಮೇಲೆ ಕಲ್ಲು ತೂರಾಟ ಕೂಡ ನಡೆಸಿದ್ದರು. ಆಗ ನಾನು ಅಭಿಮಾನಿಗಳಿಗೆ ಮೋಸ ಮಾಡಿದೆ ಎಂಬ ಭಾವನೆ ಉಂಟಾಗಿತ್ತು. ನಾನು ಯಾರನ್ನೋ ಕೊಲೆ ಮಾಡಿ ಜೈಲಿಗೆ ಹೋಗುತ್ತಿದ್ದ ಅನುಭವ ಉಂಟಾಗಿತ್ತು. ಸಾಕಷ್ಟು ಸಮಯದ ಬಳಿಕ ನಾನು ಅದರಿಂದ ಹೊರ ಬಂದಿದೆ ಎಂದು ಯುವಿ ಹೇಳಿದ್ದಾರೆ.

    2007ರ ಟಿ20, 2011ರ ಏಕದಿನ ವಿಶ್ವಕಪ್‍ಗಳನ್ನು ಟೀಂ ಇಂಡಿಯಾ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಎರಡು ಟೂರ್ನಿಗಳಲ್ಲಿ ಯುವಿ ನೀಡಿದ್ದ ಆಲ್‍ರೌಂಡ್ ಪ್ರದರ್ಶನದಿಂದ ಪ್ಲೇಯರ್ ಆಫ್ ಸೀರಿಸ್ ಆಗಿ ಹೊರಹೊಮ್ಮಿದ್ದರು. ಪ್ರಮುಖವಾಗಿ 2007ರ ಟಿ20 ವಿಶ್ವಕಪ್‍ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಯುವಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಮಿಂಚಿದ್ದರು. 2011ರ ವಿಶ್ವಕಪ್ ಬಳಿಕ ಕ್ಯಾನ್ಸರ್ ಗೆ ತುತ್ತಾಗಿ ಲಂಡನ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಿದ್ದರೂ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಟೀಂ ಇಂಡಿಯಾ ಪರ ಯುವಿ 304 ಏಕದಿನ, 40 ಟೆಸ್ಟ್, 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

  • 4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    4 ಓವರ್‌ಗಳಲ್ಲಿ 24 ರನ್ ನೀಡಿ, 4 ವಿಕೆಟ್ ಕಿತ್ತ ರಾಧಾ- ಶ್ರೀಲಂಕಾಗೆ 7 ವಿಕೆಟ್ ಸೋಲು

    – ಗೆಲುವಿನ ಓಟ ಮುಂದುವರಿಸಿದ ಭಾರತ
    – ಅರ್ಧ ಶತಕ ಕೈಚೆಲ್ಲಿಕೊಂಡ ಶೆಫಾಲಿ
    – ಕೊನೆಗೂ ಎರಡಂಕಿ ರನ್ ದಾಟಿದ ಕೌರ್

    ಮೆಲ್ಬರ್ನ್: ಶೆಫಾಲಿ ವರ್ಮಾ ಬ್ಯಾಟಿಂಗ್ ಹಾಗೂ ರಾಧಾ ಯಾದವ್ ಬೌಲಿಂಗ್ ಸಹಾಯದಿಂದ ಭಾರತ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದು ಬೀಗಿದೆ.

    ಮೆಲ್ಬರ್ನ್ ನ ಜಂಕ್ಷನ್ ಓವಲ್‍ನಲ್ಲಿ ನಡೆದ ಎ ಗುಂಪಿನ ತನ್ನ ಕೊನೆ ಪಂದ್ಯದಲ್ಲಿ ಭಾರತದ 32 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 114 ರನ್‍ಗಳ ಗುರಿ ನೀಡಿತ್ತು. ಭಾರತ ತಂಡ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.

    ಭಾರತದ ಓಪನರ್ ಶೆಫಾಲಿ ವರ್ಮಾ 47 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದರು. ಅವರು ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಅರ್ಧಶತಕ ಕೈಚೆಲ್ಲಿಕೊಂಡರು. ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಕೊನೆಗೂ ಈ ಪಂದ್ಯದಲ್ಲಿ ಎರಡಂಕಿ ರನ್ ದಾಟಿದ್ದಾರೆ. ಆದರೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂದನಾ 17 ರನ್ ಗಳಿಸಿದರು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತ್ತು. ಕ್ಯಾಪ್ಟನ್ ಚಮರಿ ಅಟ್ಟಪಟ್ಟ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಕವಿಶಾ ಡೆಲ್ಹಾರಿ 25 ರನ್ (16 ಎಸೆತ, 2 ಬೌಂಡರಿ) ಗಳಿಸಿದರು. ಉಳಿದಂತೆ 6 ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.

    ರಾಧಾ ಯಾದವ್ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ಓವರ್‌ಗಳಲ್ಲಿ 23 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ ಒಂದು ವಿಕೆಟ್ ಕಿತ್ತರು.

    ಕೌರ್, ಮಂದನಾ ವೈಫಲ್ಯ:
    ಸ್ಮೃತಿ ಮಂದನಾ ಮತ್ತು ನಾಯಕಿ ಹರ್ಮನ್‍ಪ್ರೀತ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದ್ದಾರೆ. ಸ್ಮೃತಿ 17 ರನ್ ಮತ್ತು ಕೌರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಶೆಫಾಲಿ, ಮತ್ತೆ ಬ್ಯಾಟ್‍ನ ಮ್ಯಾಜಿಕ್ ತೋರಿಸಿದರು. ಅವರು 47 ರನ್ ಗಳಿಸಿದರು. ಆದರೆ ಶೆಫಾಲಿ ಸತತ ಎರಡನೇ ಬಾರಿ ಅರ್ಧಶತಕವನ್ನು ಕಳೆದುಕೊಂಡಿದ್ದಾರೆ.

    ಈಗಾಗಲೇ ಸೆಮಿ ತಲುಪಿರುವ ಭಾರತ:
    ಈ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಶ್ರೀಲಂಕಾ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 17 ರನ್, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 3 ರನ್‍ಗಳಿಂದ ಮಣಿಸಿತ್ತು.

    ಶೆಫಾಲಿ, ಪೂನಂ ಅದ್ಭುತ ಪ್ರದರ್ಶನ:
    ಓಪನರ್ ಸ್ಮೃತಿ ಮಂದಾನಾ ಮತ್ತು ಹರ್ಮನ್‍ಪ್ರೀತ್ ಅವರು ಈವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲತೆ ತೋರಿದರು. ಅಂತಹ ಪರಿಸ್ಥಿತಿಯಲ್ಲಿ ಈ ಆಟಗಾರರಿಗೆ ಸೆಮಿಫೈನಲ್ ಪಂದ್ಯದ ಮೊದಲು ಶ್ರೀಲಂಕಾ ವಿರುದ್ಧ ಅವಕಾಶವಿತ್ತು. ಓಪನರ್ ಶೆಫಾಲಿ ವರ್ಮಾ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.

  • ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಬ್ಲೂಮ್‍ಫಾಂಟೈನ್: ಶ್ರೀಲಂಕಾ ದೇಶದ ಅಂಡರ್ 19 ತಂಡದ ಬೌಲರ್ ಮತೀಶಾ ಪತಿರಣ ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 175 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಆದರೆ ಈ ಸಾಧನೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

    ಕಿರಿಯರ ವಿಶ್ವಕಪ್ ಟೂರ್ನಿಯಲ್ಲಿ ಬ್ಲೂಮ್‍ಫಾಂಟೈನ್‍ನಲ್ಲಿ ನಡೆದ ಭಾರತ ತಂಡದ ಎದುರಿನ ‘ಎ’ ಗುಂಪಿನ ಲೀಗ್ ಪಂದ್ಯದ ವೇಳೆ ಮತೀಶಾ ಪತಿರಣ ಈ ಸಾಧನೆ ಮಾಡಿದ್ದಾರೆ.

    https://twitter.com/GOATKingKohli/status/1219214778050072576

    ಭಾರತದ ಇನಿಂಗ್ಸ್ ನ 4ನೇ ಓವರ್ ಬೌಲಿಂಗ್ ಮಾಡಿದ ಪತಿರಣ ಕೊನೆಯ ಎಸೆತವನ್ನು ಭಾರೀ ವೇಗದಲ್ಲಿ ಎಸೆದರು. ಸ್ಟ್ರೈಕ್‍ನಲ್ಲಿ ಇದ್ದ ಯಶಸ್ವಿ ಜೈಸ್ವಾಲ್ ಎದುರು ಪತಿರಣ ಎಸೆದ ಬೌನ್ಸರ್ ಲೆಗ್‍ಸೈಟ್ ಕಡೆಗೆ ವೈಡ್ ಆಗಿತ್ತು. ಆದರೆ ಟೆಲಿವಿಷನ್ ಪರದೆ ಮೇಲೆ ಪತಿರಣ ಎಸೆದ ಆ ಎಸೆತದ ವೇಗವನ್ನು ಗಂಟೆಗೆ 175 ಕಿ.ಮೀ ವೇಗ ಹೊಂದಿದೆ ಎಂದು ಪ್ರದರ್ಶಿಸಲಾಯಿತು.

    ಆದರೆ ಕೆಲವರು ಈ ದಾಖಲೆಯನ್ನು ಅಲ್ಲಗಳೆದಿದ್ದಾರೆ. ಏಕೆಂದರೆ ಪತಿರಣ ಅವರು ಅದೇ ಓವರ್ ನಲ್ಲಿ ಎಸೆದ ಉಳಿದ ಐದು ಎಸೆತಗಳು ಹೆಚ್ಚು-ಕಡಿಮೆ ಗಂಟೆಗೆ 140 ಕಿ.ಮೀ. ವೇಗದಲ್ಲಿತ್ತು. ಹೀಗಾಗಿ ರೆಕಾರ್ಡಿಂಗ್‍ನಲ್ಲಿ ದೋಷವಿದೆ ಎಂದು ತಿಳಿದುಬಂದಿದೆ. ಆದ್ದರಿಂದ ಅತಿ ವೇಗದ ಬೌಲಿಂಗ್ ದಾಖಲೆ ಶೋಯೆಬ್ ಅಖ್ತರ್ ಅವರ ಹೆಸರಿನಲ್ಲಿ ಉಳಿದಿದೆ.

    ಶ್ರೀಲಂಕಾ ತಂಡದ ನಾಯಕ, ವೇಗದ ಬೌಲರ್ ಲಸಿತ್ ಮಾಲಿಂಗ ಅವರ ಶೈಲಿಯಲ್ಲೇ ಪತಿರಣ ಬೌಲಿಂಗ್ ಮಾಡುತ್ತಿದ್ದಾರೆ. ಈ ಹಿಂದೆಯೂ ಅವರು ಭಾರೀ ಸುದ್ದಿಯಾಗಿದ್ದರು. ಪತಿರಣ ಅವರು 2019ರ ಸೆಪ್ಟೆಂಬರ್ ನಲ್ಲಿ ಕಾಲೇಜು ಮಟ್ಟದ ಟೂರ್ನಿಯೊಂದರಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್‍ಗಳನ್ನು ಕಬಳಿಸಿದ್ದರು. ಅವರ ಈ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಅಖ್ತರ್ ಹೆಸರಲ್ಲಿದೆ ವಿಶ್ವದಾಖಲೆ:
    ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೌಲ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಅವರ ಹೆಸರಲ್ಲಿದೆ. ಅಖ್ತರ್ 2003ರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 161.3 ಕಿ.ಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅಕ್ತರ್ ಹೊರತಾಗಿ ಆಸ್ಟ್ರೇಲಿಯಾದ ವೇಗಿಗಳಾದ ಬ್ರೆಟ್ ಲೀ ಮತ್ತು ಶಾನ್ ಟೈಟ್ ಕೂಡ 160 ಕಿ.ಮೀ ವೇಗದ ಗಡಿ ಮುಟ್ಟಿದ್ದಾರೆ. ಭಾರತದ ಪರ ಜಸ್‍ಪ್ರೀತ್ ಬುಮ್ರಾ 153 ಕಿ.ಮೀ ವೇಗದಲ್ಲಿ ಬೌಲ್ ಮಾಡಿರುವುದು ದಾಖಲೆಯಾಗಿದೆ.

  • ಎರಡಂಕಿ ದಾಟದ 9 ಆಟಗಾರರು- ಶ್ರೀಲಂಕಾ ವಿರುದ್ಧ ಭಾರತಕ್ಕೆ 78ರನ್‍ಗಳ ಜಯ

    ಎರಡಂಕಿ ದಾಟದ 9 ಆಟಗಾರರು- ಶ್ರೀಲಂಕಾ ವಿರುದ್ಧ ಭಾರತಕ್ಕೆ 78ರನ್‍ಗಳ ಜಯ

    – ಬುಮ್ರಾ ವಿಕೆಟ್ ದಾಖಲೆ, ಶಾರ್ದೂಲ್ ಕಮಾಲ್
    – 2-0 ಅಂತರಿಂದ ಸರಣಿ ಗೆದ್ದ ಕೊಹ್ಲಿ ಪಡೆ

    ಪುಣೆ: ಶಾರ್ದೂಲ್ ಠಾಕೂರ್ ಆಲ್‍ರೌಂಡರ್ ಕಮಾಲ್, ಜಸ್‍ಪ್ರೀತ್ ಬುಮ್ರಾ ದಾಖಲೆ ಹಾಗೂ ಕೆ.ಎಲ್.ರಾಹುಲ್ ಭರ್ಜರಿ ಬ್ಯಾಟಿಂಗ್‍ನಿಂದ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ 78 ರನ್‍ಗಳ ಬೃಹತ್ ಮೊತ್ತದ ಅಂತರದರಿಂದ ಗೆಲುವು ಸಾಧಿಸಿದೆ.

    ಪುಣೆಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟೀಂ ಇಂಡಿಯಾ 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಓಟವನ್ನು ಮುಂದುರಿಸಿದೆ. ಟೀಂ ಇಂಡಿಯಾ ನೀಡಿದ್ದ 202ರನ್ ಗಳ ಬೃಹತ್ ಮೊತ್ತಕ್ಕೆ ಸವಾಲೋಡ್ಡಲು ಶ್ರೀಲಂಕಾ ವಿಫಲವಾಯಿತು. ಲಂಕಾ ಪರ ಏಂಜಲೊ ಮ್ಯಾಥ್ಯೂಸ್ 31 ರನ್ (20 ಎಸೆತ, ಬೌಂಡರಿ, 3 ಸಿಕ್ಸರ್), ಧನಂಜಯ ಡಿ ಸಿಲ್ವಾ 57 ರನ್ (36 ಎಸೆತ, 8 ಬೌಂಡರಿ, ಸಿಕ್ಸ್) ಪರಿಣಾಮ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಗಳಿಸಲು ಶಕ್ತವಾಯಿತು. ಇದನ್ನೂ ಓದಿ: 8 ಎಸೆತಗಳಲ್ಲಿ 22 ರನ್ ಸಿಡಿಸಿದ ಶಾರ್ದೂಲ್

    ಟೀಂ ಇಂಡಿಯಾ ನೀಡಿದ್ದ 202ರನ್ ಬೃಹತ್ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವು ಆರಂಭದಲ್ಲೇ ಮುಗ್ಗರಿಸಿತು. ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳಾದ ಧನುಷ್ಕಾ ಗುಣತಿಲಕ (1 ರನ್), ಒಶಾದ ಫರ್ನಾಂಡೊ (9 ರನ್), ಕುಸಲ್ ಪೆರೆರಾ (7 ರನ್), ಅವಿಷ್ಕಾ ಫರ್ನಾಂಡೊ (2ರನ್) ಪೆಲಿವಿಯನ್ ಕಡೆಗೆ ಪರೇಡ್ ನಡೆಸಿದರು. ಇದರಿಂದಾಗಿ ಇನ್ನಿಂಗ್ಸ್ ನ 6ನೇ ಓವರ್ ಮುಕ್ತಾಯಕ್ಕೆ ಶ್ರೀಲಂಕಾ ತಂಡವು ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು 35 ರನ್ ಗಳಿಸಿತು.

    ಬಳಿಕ ತಂಡಕ್ಕೆ ಆಸರೆಯಾದ ಏಂಜಲೊ ಮ್ಯಾಥ್ಯೂಸ್ ಹಾಗೂ ಧನಂಜಯ ಡಿ ಸಿಲ್ವಾ ಉತ್ತಮ ಜೊತೆಯಾಟ ಕಟ್ಟಿಕೊಟ್ಟರು. ಈ ಜೋಡಿ 5ನೇ ವಿಕೆಟ್‍ಗೆ 68 ರನ್‍ಗಳ ಜೊತೆಯಾಟ ನೀಡಿತು. ಆದರೆ 31 ರನ್ ಗಳಿಸಿದ್ದ ಏಂಜಲೊ ಮ್ಯಾಥ್ಯೂಸ್ ಇನ್ನಿಂಗ್ಸ್ ನ 12ನೇ ಓವರ್ ನಲ್ಲಿ ಹಾಗೂ ಧನಂಜಯ ಡಿ ಸಿಲ್ವಾ ಇನ್ನಿಂಗ್ಸ್ 14ನೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿಳಿದ ಆಟಗಾರರು ಎರಡಂಕಿ ದಾಟಲು ಪರದಾಡಿ ಬಹುಬೇಗ ಪೆವಿಲಿಯನ್ ಕಡೆಗೆ ಸಾಗಿದರು. ಈ ಮೂಲಕ ಶ್ರೀಲಂಕಾ ತಂಡವು 15.2 ಓವರ್ ಗೆ ಎಲ್ಲಾ ವಿಕೆಟ್ ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು.

    ಬುಮ್ರಾ ದಾಖಲೆ:
    ಟೀಂ ಇಂಡಿಯಾ ವೇಗದ ಬೌಲರ್ ಜಸ್‍ಪ್ರೀತ್ ಬುಮ್ರಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಬರೆದಿದ್ದಾರೆ. 2016ರಲ್ಲಿ ಟಿ20 ಪ್ರವೇಶ ಮಾಡಿದ ಬುಮ್ರಾ 44 ಇನ್ನಿಂಗ್ಸ್ ಆಡಿ 53 ವಿಕೆಟ್ ಪಡೆದಿದ್ದಾರೆ. ಇನ್ನು ತಲಾ 52 ವಿಕೆಟ್ ಪಡೆದಿರುವ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಹಾಗೂ ಆರ್.ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.

    ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಶಾರ್ದೂಲ್ ಠಾಕೂರ್ ಬೌಲಿಂಗ್‍ನಲ್ಲೂ ಮಿಂಚಿದ್ದಾರೆ. ಮೂರು ಓವರ್ ಮಾಡಿದ ಶಾದೂಲ್ 19 ರನ್ ನೀಡಿ 2 ವಿಕೆಟ್ ಕಿತ್ತಿದ್ದಾರೆ. ಈ ಬಾರಿಯೂ ಟೀಂ ಇಂಡಿಯಾ ಯುವ ವೇಗಿ ನವದೀಪ್ ಶೈನಿ ಮಿಂಚಿದ್ದು, 3.5 ಓವರ್ ಮಾಡಿ ಅವರು 3 ವಿಕೆಟ್ ಪಡೆದು 28 ರನ್ ನೀಡಿದ್ದಾರೆ. ಉಳಿದಂತೆ ಬುಮ್ರಾ 1 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದಿದ್ದಾರೆ. ಯಜುವೇಂದ್ರ ಚಾಹಲ್ ಯಾವುದೇ ವಿಕೆಟ್ ಪಡೆಯಲಿಲ್ಲ.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಕೆ.ಎಲ್.ರಾಹುಲ್ 54 ರನ್ ( 36 ಎಸೆತ, 5 ಬೌಂಡರಿ, ಸಿಕ್ಸ್), ಶಿಖರ್ ಧವನ್ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್), ಮನೀಶ್ ಪಾಂಡ್ಯ ಔಟಾಗದೆ 31 ರನ್ (18 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ ಔಟಾಗದೆ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್) ಗಳಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು.

  • 8 ಎಸೆತಗಳಲ್ಲಿ 22 ರನ್ ಸಿಡಿಸಿದ ಶಾರ್ದೂಲ್- ಶ್ರೀಲಂಕಾಗೆ 202 ರನ್‍ಗಳ ಗುರಿ

    8 ಎಸೆತಗಳಲ್ಲಿ 22 ರನ್ ಸಿಡಿಸಿದ ಶಾರ್ದೂಲ್- ಶ್ರೀಲಂಕಾಗೆ 202 ರನ್‍ಗಳ ಗುರಿ

    – ರಾಹುಲ್, ಧವನ್ ಅರ್ಧ ಶತಕ

    ಪುಣೆ: ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್, ಶಿಖರ್ ಧವನ್ ಅರ್ಧ ಶತಕ ಹಾಗೂ ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ ಶ್ರೀಲಂಕಾ ತಂಡಕ್ಕೆ 202 ರನ್‍ಗಳ ಬೃಹತ್ ಮೊತ್ತದ ಗುರಿ ನೀಡಿದೆ.

    ಪುಣೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಕೆ.ಎಲ್.ರಾಹುಲ್ 54 ರನ್ ( 36 ಎಸೆತ, 5 ಬೌಂಡರಿ, ಸಿಕ್ಸ್), ಶಿಖರ್ ಧವನ್ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್), ಮನೀಶ್ ಪಾಂಡ್ಯ ಔಟಾಗದೆ 31 ರನ್ (18 ಎಸೆತ, 4 ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ ಔಟಾಗದೆ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್‌) ಗಳಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ ತಂಡಕ್ಕೆ ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ಕಾಡಿದರು. ಇನ್ನಿಂಗ್ಸ್ ಆರಂಭದಲ್ಲೇ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದರು. ಇದಕ್ಕೆ ಅನುಭವಿ ಆಟಗಾರ ಶಿಖರ್ ಧವನ್ ಸಾಥ್ ನೀಡಿದರು. ಈ ಜೋಡಿಯು ಯಾವುದೇ ವಿಕೆಟ್ ನಷ್ಟವಿಲ್ಲದೆ ಇನ್ನಿಂಗ್ಸ್ ನ ಐದನೇ ಓವರ್ ಮುಕ್ತಾಯಕ್ಕೆ 52 ರನ್ ಪೇರಿಸಿತ್ತು. ಆದರೆ ಮುಂದಿನ ಐದು ಓವರ್ ಗಳಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹೀಗಾಗಿ ಇನ್ನಿಂಗ್ಸ್ ನ 10ನೇ ಓವರ್ ಮುಕ್ತಾಯಕ್ಕೆ ತಂಡದ ಮೊತ್ತವು 92 ರನ್‍ಗೆ ಏರಿಕೆ ಕಂಡಿತು.

    ಧವನ್ ಫಿಫ್ಟಿ:
    ಶಿಖರ್ ಧವನ್ ಇನ್ನಿಂಗ್ಸ್ ನ 11ನೇ ಓವರ್‌ನ ಎರಡನೇ ಎಸೆತದಲ್ಲಿ 1 ರನ್ ಗಳಿಸಿ ಅರ್ಧ ಶತಕ ಪೂರೈಸಿದರು. ಬಳಿಕ ಸ್ಫೋಟಕ ಬ್ಯಾಟಿಂಗ್ ಮುಂದಾಗಿ ಇದೇ ಓವರ್‌ನ 5ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಟಿ20ಯಲ್ಲಿ 15 ಇನ್ನಿಂಗ್ಸ್ ಗಳ ಬಳಿಕ ಶಿಖರ್ ಧವನ್ ಅರ್ಧ ಶತಕ ಗಳಿಸಿದ್ದಾರೆ. 34 ವರ್ಷದ ಶಿಖರ್ ಧವನ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧವನ್ 76 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ 32 ರನ್ ಗಳಿಸಲು ಶಕ್ತರಾಗಿದ್ದರು. ಆದರೆ ಈ ಪಂದ್ಯದಲ್ಲಿ 52 ರನ್ (36 ಎಸೆತ, 7 ಬೌಂಡರಿ, ಸಿಕ್ಸ್) ಗಳಿಸಿದರು.

    ಶಿಖರ್ ಧವನ್ ಬಳಿಕ ಮೈದಾಕ್ಕಿಳಿದ ಯುವ ಆಟಗಾರ ಸಂಜು ಸ್ಯಾಮ್ಸನ್ ಬಹುಬೇಗ (6 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ಮರಳಿದರು. ಈ ಬೆನ್ನಲ್ಲೇ ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದರು. ಕೆ.ಎಲ್.ರಾಹುಲ್ 54 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಇದು ಅವರ 9ನೇ ಅರ್ಧ ಶತಕವಾಗಿದೆ.

    ಕೆ.ಎಲ್.ರಾಹುಲ್ ವಿಕೆಟ್ ಬಳಿಕ ಮೈದಾನಕ್ಕಿಳಿದ ಶ್ರೇಯಷ್ ಅಯ್ಯರ ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು. ಆದರೆ ಎರಡನೇ ವಿಕೆಟ್ ಒಪ್ಪಿಸಿದರು. ನಿರಂತರವಾಗಿ ಮೂರು ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮನೀಶ್ ಪಾಂಡ್ಯ ಉತ್ತಮ ಜೊತೆಯಾಟ ಕಟ್ಟಿಕೊಟ್ಟರು. ಈ ಜೋಡಿಯು 5ನೇ ವಿಕೆಟ್‍ಗೆ 42 ರನ್ ಗಳಿಸಿ ತಂಡಕ್ಕೆ ಆಸರೆಯಾಯಿತು.

    ಇನ್ನಿಂಗ್ಸ್ ನ 18ನೇ ಓವರ್ ನಲ್ಲಿ ಎರಡು ರನ್ ಕದಿಯಲು ಮುಂದಾಗಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಅವರು 26 ರನ್ (17 ಎಸೆತ, 2 ಬೌಂಡರಿ, ಸಿಕ್ಸ್) ಗಳಿಸಿ ಪೆವಿಲಿಯನ್‍ಗೆ ತರೆಳಿದರು. ಬಳಿಕ ಮೈದಾನಕ್ಕಿಳಿ ವಾಷಿಂಗ್ಟನ್ ಸುಂದರ್ ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಬಳಿಕ ಮನೀಶ್ ಪಾಂಡ್ಯ ( ಎಸೆತ, ಬೌಂಡರಿ) ಹಾಗೂ ಶಾರ್ದೂಲ್ ಠಾಕೂರ್ 22 ರನ್ (8 ಎಸೆತ, ಬೌಂಡರಿ, 2 ಸಿಕ್ಸರ್‌) ಗಳಿಂದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 201 ರನ್‍ಗಳ ಬೃಹತ್ ಮೊತ್ತವನ್ನು ಪೇರಿಸಿದೆ.

  • ಯುವಿಯನ್ನ ಹಿಂದಿಕ್ಕಿದ ರಾಹುಲ್, ಕೊಹ್ಲಿ ನಂಬರ್.1- ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳ ಗೆಲುವು

    ಯುವಿಯನ್ನ ಹಿಂದಿಕ್ಕಿದ ರಾಹುಲ್, ಕೊಹ್ಲಿ ನಂಬರ್.1- ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳ ಗೆಲುವು

    ಇಂದೋರ್: ಯುವ ವೇಗಿಗಳ ಉತ್ತಮ ಬೌಲಿಂಗ್ ದಾಳಿ, ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್‍ನಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 15 ಎಸೆತಗಳು ಬಾಕಿ ಇರುವಂತೆ ಗೆದ್ದು ಬೀಗಿದೆ.

    ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಶ್ರೀಲಂಕಾ ತಂಡವನ್ನು 143 ರನ್‍ಗಳಿಗೆ ಕಟ್ಟಿ ಹಾಕಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ಇನ್ನಿಂಗ್ಸ್ ನ 17ನೇ ಓವರ್‌ನ 3 ಎಸೆತದಲ್ಲಿ ಕೊಹ್ಲಿ ಸಿಕ್ಸ್ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್.ರಾಹುಲ್ 45 ರನ್ (32 ಎಸೆತ, 6 ಬೌಂಡರಿ), ಶಿಖರ್ ಧವನ್ 32 ರನ್ (29 ಎಸೆತ, 2 ಬೌಂಡರಿ), ಶ್ರೇಯಸ್ ಅಯ್ಯರ್ 34 ರನ್ ( 26 ಎಸೆತ, 3 ಬೌಂಡರಿ, ಸಿಕ್ಸ್), ವಿರಾಟ್ ಕೊಹ್ಲಿ ಔಟಾಗದೆ 30 ರನ್ ( 17 ಎಸೆತ, ಬೌಂಡರಿ, 2 ಸಿಕ್ಸರ್) ಗಳಿಂದ 3 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಗೆಲುವು ದಾಖಲಿಸಿತು.

    ರಾಹುಲ್ ಭರ್ಜರಿ ಬ್ಯಾಟಿಂಗ್:
    ಆರಂಭಿಕ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಶಿಖರ್ ಧವನ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇನ್ನಿಂಗ್ಸ್ ನ 3ನೇ ಓವರ್‌ನಲ್ಲಿ ಶ್ರೀಲಂಕಾ ನಾಯಕ ಲಸಿತ್ ಮಾಲಿಂಗ ಅವರ 2 ಎಸೆತಗಳನ್ನು ಕೆ.ಎಲ್.ರಾಹುಲ್ ಬೌಂಡರಿಗೆ ಅಟ್ಟಿದರು. ಈ ಓವರ್ ನಲ್ಲಿ 11 ರನ್ ಸಿಡಿಸಿದ ರಾಹುಲ್ ಸ್ಫೋಟಕ ಬ್ಯಾಂಟಿಂಗ್ ಆರಂಭಿಸಿದರು. ಆದರೆ ಇನ್ನಿಂಗ್ಸ್ ನ 10ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.

    ಈ ಪಂದ್ಯದಲ್ಲಿ 45 ರನ್ ಗಳಿಸುವ ಮೂಲಕ ಕೆ.ಎಲ್.ರಾಹುಲ್ ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ 51 ಇನ್ನಿಂಗ್ಸ್ ಗಳಲ್ಲಿ 1,177 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 32 ಇನ್ನಿಂಗ್ಸ್ ಗಳಲ್ಲಿ 1,183 ರನ್ ಪೇರಿಸಿದ್ದಾರೆ.

    ಕೊಹ್ಲಿ ನಂಬರ್ 1:
    ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಲಭ್ಯವಿಲ್ಲ. ಆಯ್ಕೆ ಸಮಿತಿಯು ಅವರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಿದೆ. ಹೀಗಾಗಿ ರನ್ ಮೆಷಿನ್ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20ಯಲ್ಲಿ ಅತಿ ಹೆಚ್ಚು ರನ್‍ಗಳಿಸಿದ ದಾಖಲೆಯನ್ನು ಬರೆದಿದ್ದಾರೆ.

    ಈ ಪಂದ್ಯದಲ್ಲಿ 30 ರನ್ ಗಳಿಸಿ ವಿರಾಟ್ ಕೊಹ್ಲಿ ಭಾರತದ ಪರ ಅಂತರಾಷ್ಟ್ರೀಯ ಟಿ20 ಅತಿ ಹೆಚ್ಚು ರನ್‍ಗಳಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ 96 ಇನ್ನಿಂಗ್ಸ್ ಗಳಲ್ಲಿ 2,633 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 71 ಇನ್ನಿಂಗ್ಸ್ ಗಳಲ್ಲಿ 2,663 ರನ್ ದಾಖಲಿಸಿದ್ದಾರೆ.

    ಕೆ.ಎಲ್.ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಮೈದಾನಕ್ಕಿಳಿದ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಅವರು 34 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಭ್ ಪಂತ್ ಔಟಾಗದೆ 1 ರನ್ ಹಾಗೂ ವಿರಾಟ್ ಕೊಹ್ಲಿ ಔಟಾಗದೆ 30 ರನ್ ಸಿಡಿಸಿ 15 ಎಸೆತಗಳು ಬಾಕಿ ಇರುವಂತೆ ದಂಡವನ್ನು ಗೆಲುವಿನ ಗುರಿ ದಾಟಿಸಿದರು.

  • ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತ ಶಾರ್ದೂಲ್- ಭಾರತಕ್ಕೆ 143 ರನ್‍ಗಳ ಗುರಿ

    ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಿತ್ತ ಶಾರ್ದೂಲ್- ಭಾರತಕ್ಕೆ 143 ರನ್‍ಗಳ ಗುರಿ

    – ಎರಡಂಕಿ ರನ್ ದಾಟದ ನಾಲ್ವರು ಶ್ರೀಲಂಕಾ ಆಟಗಾರರು
    – ಭರ್ಜರಿ ಬೌಲಿಂಗ್ ಮಾಡಿದ ಯುವ ವೇಗಿಗಳು

    ಇಂದೋರ್: ಟೀಂ ಇಂಡಿಯಾ ಯುವ ವೇಗದ ಬೌಲರ್ ಶಾರ್ದೂಲ್ ಠಾಕೂರ್, ನವದೀಪ್ ಸೈನಿ ಹಾಗೂ ಸ್ಪಿನ್ನರ್ ಕುಲದೀಪ್ ಯಾದವ್ ಅವರ ದಾಳಿಗೆ ನಲುಗಿದ ಶ್ರೀಲಂಕಾ ತಂಡವು 142 ರನ್ ಗಳಿಸಲು ಶಕ್ತವಾಯಿತು.

    ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವು ಕುಸಲ್ ಪೆರೆರಾ 34 ರನ್, ಅವಿಷ್ಕಾ ಫರ್ನಾಂಡೊ 22 ರನ್, ಧನುಷ್ಕಾ ಗುಣತಿಲಕ 20 ರನ್‍ಗಳಿಂದ 9 ವಿಕೆಟ್ ನಷ್ಟಕ್ಕೆ 142 ರನ್ ಪೇರಿಸಿದೆ. ಈ ಮೂಲಕ ಟೀಂ ಇಂಡಿಯಾಗೆ 143 ರನ್‍ಗಳ ಸುಲಭದ ಗುರಿ ನೀಡಿದೆ.

    ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ ಶ್ರೀಲಂಕಾ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಇನ್ನಿಂಗ್ಸ್ ನ 5ನೇ ಓವರ್ ನಲ್ಲಿ ವಾಷಿಂಗ್ಟನ್ ಸುಂದರ್ ಅವರು ಅವಿಷ್ಕಾ ಫರ್ನಾಂಡೊ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ಭರ್ಜರಿ ತಿರುವು ನೀಡಿದರು. 16 ಎಸೆತಗಳಲ್ಲಿ ಅವಿಷ್ಕಾ ಫರ್ನಾಂಡೊ 22 ರನ್ (3 ಸಿಕ್ಸರ್) ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ 7ನೇ ಓವರ್ ನಲ್ಲಿ ನವದೀಪ್ ಸೈನಿ ಧನುಷ್ಕಾ ಗುಣತಿಲಕ ವಿಕೆಟ್ ಕಿತ್ತರು. ಧನುಷ್ಕಾ ಗುಣತಿಲಕ 21 ಎಸೆತಗಳಲ್ಲಿ ಧನುಷ್ಕಾ ಗುಣತಿಲಕ 20 ರನ್ (3 ಬೌಂಡರಿ) ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

    ಬಳಿಕ ಮೈದಾನಕ್ಕಿಳಿದ ಕುಸಲ್ ಪೆರೆರಾ 34 ರನ್ ಸಿಡಿಸಿ ತಂಡದ ಮೊತ್ತವನ್ನು ಏರಿಸಿದರು. ಆದರೆ ಇನ್ನಿಂಗ್ಸ್ ನ 14ನೇ ಓವರ್ ನಲ್ಲಿ ಅವರು ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ಮೈದಾನಕ್ಕಿಳಿದ ಆಟಗಾರರು ಸಾಲಾಗಿ ಪೆವಿಲಿಯನ್ ಕಡೆ ಪರೇಡ್ ನಡೆಸಿದರು. ಈ ಪೈಕಿ ನಾಲ್ವರು ಎರಡಂಕಿ ರನ್ ದಾಟಲು ವಿಫಲರಾದರು. ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ ಯುವ ವೇಗಿ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಉರುಳಿಸಿ ತಂಡಕ್ಕೆ ಆಸರೆಯಾದರು. ಈ ಮೂಲಕ ಶ್ರೀಲಂಕಾ 9 ವಿಕೆಟ್ ಕಳೆದುಕೊಂಡು 142 ರನ್ ಪೇರಿಸಿತು.

  • ಟಿ20ಯಲ್ಲಿ 13 ಇನ್ನಿಂಗ್ಸ್‌ಗಳಿಂದ 50 ರನ್ ಗಡಿ ದಾಟದ ಧವನ್

    ಟಿ20ಯಲ್ಲಿ 13 ಇನ್ನಿಂಗ್ಸ್‌ಗಳಿಂದ 50 ರನ್ ಗಡಿ ದಾಟದ ಧವನ್

    ಇಂದೋರ್: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಅವರು ಟಿ20ಯಲ್ಲಿ ಕಳೆದ 13 ಇನ್ನಿಂಗ್ಸ್‌ಗಳಲ್ಲಿ ಒಂದು ಬಾರಿಯೂ 50 ರನ್ ಗಡಿ ದಾಟಿಲ್ಲ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಇಂದು ನಡೆಯಲಿರುವ ಎರಡನೇ ಟಿ20 ಪಂದ್ಯದಲ್ಲಿ ಧವನ್ ಮತ್ತೆ ಫಾರ್ಮ್ ಗೆ ಮರಳುವ ಸಾಧ್ಯತೆ ಇದೆ.

    ಗುವಾಹಟಿಯಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಹಾಗೂ ಭಾರತದ ತಂಡಗಳ ನಡುವಿನ ಮೊದಲ ಪಂದ್ಯ ಭಾನುವಾರ ಮಳೆಯಿಂದಾಗಿ ರದ್ದುಗೊಂಡಿತ್ತು. ಹೀಗಾಗಿ ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆಲ್ಲಲು ದಾಖಲಿಸಲು ಟೀಂ ಇಂಡಿಯಾ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಅದೇ ಸಮಯದಲ್ಲಿ ಶಿಖರ್ ಧವನ್ ಅವರು ಫಾರ್ಮ್ ಗೆ ಮರಳಲು ಅವಕಾಶವಿದೆ. 34 ವರ್ಷದ ಶಿಖರ್ ಧವನ್ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧವನ್ 76 ರನ್ ಗಳಿಸಿದ್ದರು. ಇದನ್ನೂ ಓದಿ: ಯುವಿಯನ್ನು ಹಿಂದಿಕ್ಕಲು ರಾಹುಲ್‍ಗೆ ಬೇಕಿದೆ 40 ರನ್- 1 ರನ್ ಹೊಡೆದ್ರೆ ಕೊಹ್ಲಿ ಮತ್ತೆ ನಂ.1

    ಧವನ್ ಕಳೆದ ವರ್ಷ 12 ಪಂದ್ಯಗಳಲ್ಲಿ 110 ಸ್ಟ್ರೈಕ್ ದರದಲ್ಲಿ 272 ರನ್ ಗಳಿಸಿದ್ದು, ತಂಡದಲ್ಲಿ ಮತ್ತೆ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಸರಣಿಯಲ್ಲಿ ಕೆ.ಎಲ್. ರಾಹುಲ್ ಉತ್ತಮ ಪ್ರದರ್ಶನ ನೀಡಿ, ತಮ್ಮ ಸ್ಥಾನವನ್ನು ಭದ್ರವಾಗಿಸಿಕೊಂಡಿದ್ದಾರೆ. ಟಿ20 ಮತ್ತು ಏಕದಿನ ಪಂದ್ಯಗಳ ಒಟ್ಟು ಆರು ಇನ್ನಿಂಗ್ಸ್ ಗಳಲ್ಲಿ ಅವರು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದರು.

    ಶ್ರೀಲಂಕಾ ಹಾಗೂ ಭಾರತ ತಂಡಗಳು ಎರಡು ವರ್ಷಗಳ ಬಳಿಕ ಇಂದೋರ್‍ನಲ್ಲಿ ಮುಖಾಮುಖಿಯಾಗಿವೆ. ಈ ಮೈದಾನದಲ್ಲಿ ಡಿಸೆಂಬರ್ 2017ರ ನಂತರ ಉಭಯ ತಂಡಗಳು ಮೊದಲ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು 88 ರನ್‍ಗಳಿಂದ ಸೋಲಿಸಿತ್ತು. ಆಗ ಭಾರತ ಪರ ರೋಹಿತ್ ಶರ್ಮಾ 118 ಮತ್ತು ಕೆ.ಎಲ್.ರಾಹುಲ್ 89 ರನ್ ಗಳಿಸಿದ್ದರು. ಇಂದಿನ ಪಂದ್ಯದಲ್ಲಿ ರಾಹುಲ್ ಲಭ್ಯವಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಮೈದಾನಕ್ಕೆ ಇಳಿಯಲಿದ್ದಾರೆ. ಆದರೆ ರೋಹಿತ್ ತಂಡದಿಂದ ಹೊರಗುಳಿದಿದ್ದು, ಅವರಿಗೆ ವಿಶ್ರಾಂತಿ ನೀಡಲಾಗಿದೆ.

    ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಮನೀಶ್ ಪಾಂಡೆ, ಯುಜ್ವೇಂದ್ರ ಚಾಹಲ್, ರವೀಂದ್ರ ಜಡೇಜಾ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಆಡುವ ಇಲೆವೆನ್‍ನಿಂದ ಹೊರಗಿಡಲಾಗಿತ್ತು. ಇಂದೋರ್‍ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಆಡುವ ಇಲೆವೆನ್‍ನಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ತಂಡಕ್ಕೆ ಮರಳಿದ ಜಸ್ಪ್ರಿತ್ ಬುಮ್ರಾ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಅವರು ಶಾರ್ದುಲ್ ಠಾಕೂರ್ ಮತ್ತು ನವದೀಪ್ ಸೈನಿ ಅವರೊಂದಿಗೆ ವೇಗದ ಬೌಲಿಂಗ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

  • ಹಳೆ ಮೊಬೈಲ್ ಬಳಸಿ ಕೊಹ್ಲಿ ಭಾವಚಿತ್ರ ಬಿಡಿಸಿದ ಅಭಿಮಾನಿ – ವಿಡಿಯೋ ವೈರಲ್

    ಹಳೆ ಮೊಬೈಲ್ ಬಳಸಿ ಕೊಹ್ಲಿ ಭಾವಚಿತ್ರ ಬಿಡಿಸಿದ ಅಭಿಮಾನಿ – ವಿಡಿಯೋ ವೈರಲ್

    ಗುವಾಹಟಿ: ಟೀಂ ಇಂಡಿಯಾ ವಿರಾಟ್ ಕೊಹ್ಲಿ ಮೇಲಿನ ಅಭಿಮಾನವನ್ನು ಯುವಕ ವಿಶೇಷವಾಗಿ ವ್ಯಕ್ತಪಡಿಸಿದ್ದು, ಹಳೆಯ ಮೊಬೈಲ್ ಫೋನ್ ವ್ಯರ್ಥ ವಸ್ತುಗಳನ್ನು ಬಳಕೆ ಮಾಡಿಕೊಂಡು ಭಾವಚಿತ್ರ ರೂಪಿಸಿದ್ದಾರೆ.

    ರಾಹುಲ್ ಎಂಬ ಅಭಿಮಾನಿ ಈ ವಿಶೇಷ ಫೋಟೋವನ್ನು ರಚಿಸಿದ್ದು, ಸದ್ಯ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತಂಡ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಗುವಾಹಟಿಗೆ ಆಗಮಿಸಿದೆ. ಈ ಸಂದರ್ಭದಲ್ಲಿ ರಾಹುಲ್, ಕೊಹ್ಲಿರನ್ನು ಹೋಟೆಲ್‍ನಲ್ಲಿ ಭೇಟಿ ಮಾಡಿ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಕೊಹ್ಲಿ ಉಡುಗೊರೆಯ ಮೇಲೆ ತಮ್ಮ ಸಹಿ ಹಾಕಿ ರಾಹುಲ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ರಾಹುಲ್‍ರ ವಿಶೇಷ ಉಡುಗೊರೆಯ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಕುರಿತು ಮತನಾಡಿರುವ ರಾಹುಲ್, ಕೆಲ ತಿಂಗಳ ಹಿಂದೆ ಕೊಹ್ಲಿ ಪಂದ್ಯಕ್ಕಾಗಿ ಗುವಾಹತಿಗೆ ಆಗಮಿಸುತ್ತಾರೆ ಎಂದು ತಿಳಿಯಿತು. ಈ ವೇಳೆ ಹಳೆಯ ಮೊಬೈಲ್ ಫೋನ್ ಗಳಿಂದ ಕೊಹ್ಲಿರ ಚಿತ್ರ ರೂಪಿಸಿದೆ. ಸರಿ ಸುಮಾರು 3 ದಿನಗಳ ಕಾಲ ಇದನ್ನು ಚಿತ್ರಪಡಿಸಿದೆ. ಇದಕ್ಕೆ ಫೋನ್, ವೈರ್ ಗಳಿಂದ ರೂಪಿಸಿದ್ದೇನೆ. ಕೊಹ್ಲಿ ಭೇಟಿ ನನಗೆ ಸಂತಸ ನೀಡಿದ್ದು, ಅವರಿಂದ ಆಟೋಗ್ರಾಫ್ ಕೂಡ ಪಡೆದಿದ್ದೇನೆ ಎಂದರು.

    ಟೀಂ ಇಂಡಿಯಾ 2020ರ ವರ್ಷದಲ್ಲಿ ಮೊದಲ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡುತ್ತಿದ್ದು, ಇಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಸರಣಿಗೆ ಟೀಂ ಇಂಡಿಯಾ ಪ್ರಮುಖ ಆಟಗಾರ ಶಿಖರ್ ಧವನ್, ಜಸ್ಪ್ರೀತ್ ಬುಮ್ರಾ ತಂಡಕ್ಕೆ ಕಮ್‍ಬ್ಯಾಕ್ ಮಾಡಿದ್ದು, ಧವನ್ ಫಾರ್ಮ್‍ಗೆ ಮರಳುವ ಒತ್ತಡದಲ್ಲಿದ್ದಾರೆ. 2019ರಲ್ಲಿ 12 ಟಿ20 ಪಂದ್ಯಗಳನ್ನು ಆಡಿರುವ ಧವನ್ 272 ರನ್ ಗಳನ್ನು ಮಾತ್ರ ಗಳಿಸಿದ್ದರು. 26 ವರ್ಷ ಬುಮ್ರಾ 2019ರಲ್ಲಿ ನಂ.1 ಬೌಲರ್ ಆಗಿ ಮಿಂಚಿದ್ದರು. ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 6 ಸ್ಥಾನದೊಂದಿಗೆ 2009ರ ವರ್ಷವನ್ನು ಅಂತ್ಯಗೊಳಿಸಿದ್ದರು.