Tag: Sri Lanka

  • ಲಂಕಾ ನಾಯಕನ ಏಕಾಂಗಿ ಹೋರಾಟ ವ್ಯರ್ಥ – ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

    ಲಂಕಾ ನಾಯಕನ ಏಕಾಂಗಿ ಹೋರಾಟ ವ್ಯರ್ಥ – ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

    ಧರ್ಮಶಾಲಾ: ಬೌಲರ್‌ಗಳ ಅಮೋಘ ಆಟ ಮತ್ತು ಶ್ರೇಯಸ್ ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ವಿರುದ್ಧ ಮೂರನೇ ಟಿ20 ಪಂದ್ಯವನ್ನು ಭಾರತ 6 ವಿಕೆಟ್‍ಗಳಿಂದ ಗೆದ್ದಿದೆ.

    ಗೆಲ್ಲಲು 147 ರನ್ ಟಾರ್ಗೆಟ್ ಪಡೆದ ಟೀಂ ಇಂಡಿಯಾ 16.5 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 148 ರನ್ ಸಿಡಿಸಿ 6 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಸಾಧಿಸಿ ಮೆರೆದಾಡಿದೆ. ಇದನ್ನೂ ಓದಿ: PAK Vs AUS: 24 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ

    ಆರಂಭಿಕ ಆಟಗಾರರ ವಿಫಲತೆ ನಡುವೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಲಂಕಾ ಬೌಲರ್‌ಗಳ ಚೆಂಡಾಡಿದ ಅಯ್ಯರ್ ಅಜೇಯ 73 ರನ್ (45 ಎಸೆತ, 9 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರೆ, ಇವರಿಗೆ ಉತ್ತಮ ಸಾಥ್ ನೀಡಿದ ದೀಪಕ್ ಹೂಡಾ 21 ರನ್ (16 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ನಂತರ ಬಂದ ಜಡೇಜಾ ಅಜೇಯ 22 ರನ್ (15 ಎಸೆತ, 3 ಬೌಂಡರಿ) ಬಾರಿಸಿ ತಂಡವನ್ನು ಗೆಲ್ಲಿಸಿದರು. ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್: ಸ್ಮೃತಿ ಮಂಧಾನಗೆ ಗಾಯ

    ದಸುನ್ ಶನಕ ಏಕಾಂಗಿ ಹೋರಾಟ
    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ಆರಂಭಿಸಿತು. ಕೇವಲ 29 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡುತ್ತಿದ್ದ ಲಂಕಾ ತಂಡಕ್ಕೆ ದಿನೇಶ್ ಚಂಡಿಮಾಲ್ ಮತ್ತು ನಾಯಕ ದಸುನ್ ಶನಕ ನೆರವಾದರು. ಚಂಡಿಮಾಲ್ 22 ರನ್ (27 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದರು. ಇತ್ತ ವಿಕೆಟ್ ಉರುಳುತ್ತಿದ್ದರು ದಸುನ್ ಶನಕ ಮಾತ್ರ ತನ್ನ ಹೋರಾಟ ನಿಲ್ಲಿಸಲಿಲ್ಲ. ಇನ್ನಿಂಗ್ಸ್‌ನ ಕೊನೆಯ ಬಾಲ್ ವರೆಗೂ ಬ್ಯಾಟಿಂಗ್ ಮಾಡಿದ ಶನಕ ಅಜೇಯ 74 ರನ್ (38 ಎಸೆತ, 9 ಬೌಂಡರಿ, 2 ಸಿಕ್ಸ್) ಸಿಡಿಸಿ ಏಕಾಂಗಿ ಹೋರಾಟ ನಡೆಸಿದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 146 ರನ್ ಗಳಿಸಿತು.

    ಭಾರತದ ಪರ ಆವೇಶ್ ಖಾನ್ 2 ವಿಕೆಟ್ ಪಡೆದರೆ, ಸಿರಾಜ್, ಹರ್ಷಲ್ ಪಟೇಲ್ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಕಿತ್ತರು.

  • ಅಯ್ಯರ್, ಜಡೇಜಾ ಜರ್ಬದಸ್ತ್ ಆಟ – ಭಾರತಕ್ಕೆ ಒಲಿದ ಹ್ಯಾಟ್ರಿಕ್‌ ಟಿ20 ಸರಣಿ

    ಅಯ್ಯರ್, ಜಡೇಜಾ ಜರ್ಬದಸ್ತ್ ಆಟ – ಭಾರತಕ್ಕೆ ಒಲಿದ ಹ್ಯಾಟ್ರಿಕ್‌ ಟಿ20 ಸರಣಿ

    ಧರ್ಮಶಾಲಾ: ಶ್ರೇಯಸ್ ಅಯ್ಯರ್ ಮತ್ತು ರವೀಂದ್ರ ಜಡೇಜಾರ ಬಿರುಸಿನ ಬ್ಯಾಟಿಂಗ್‍ಗೆ ಬೆಚ್ಚಿಬಿದ್ದ ಶ್ರೀಲಂಕಾ ಸೋಲೊಪ್ಪಿಕೊಂಡಿದೆ. ಲಂಕಾ ವಿರುದ್ಧ 7  ವಿಕೆಟ್‌ಗಳಿಂದ ಗೆದ್ದ ಭಾರತ 2-0 ಅಂತರದಿಂದ ಸರಣಿ ಕೈವಶ ಪಡಿಸಿಕೊಂಡಿದೆ.

    ಗೆಲ್ಲಲು 184 ರನ್‍ಗಳ ಗುರಿ ಪಡೆದ ಟೀಂ ಇಂಡಿಯಾ 17.1 ಓವರ್‌ಗಳಲ್ಲಿ ಇನ್ನೂ 17 ಎಸೆತ ಬಾಕಿ ಇರುವಂತೆ 186 ರನ್ ಸಿಡಿಸಿ 7 ವಿಕೆಟ್‌ಗಳ ಭರ್ಜರಿ ಗೆಲುವಿನ ನಗೆ ಬೀರಿತು. ಈ ಮೊದಲು ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಗೆದ್ದಿತ್ತು. ಇದೀಗ ಶ್ರೀಲಂಕಾ ವಿರುದ್ಧ ಸರಣಿ ಜಯದೊಂದಿಗೆ ಹ್ಯಾಟ್ರಿಕ್‌ ಸರಣಿ ಗೆದ್ದಂತಾಗಿದೆ. ಇದನ್ನೂ ಓದಿ: ಕೊಹ್ಲಿಯ 100ನೇ ಟೆಸ್ಟ್ ಪಂದ್ಯಕ್ಕಿಲ್ಲ ಪ್ರೇಕ್ಷಕರಿಗೆ ಎಂಟ್ರಿ

    ಭಾರತದ ಪರ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 1 ರನ್ ಮತ್ತು ಇಶನ್ ಕಿಶನ್ 16 ರನ್ (15 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಗೆ ಆಸರೆಯಾದ ಸಂಜು ಸ್ಯಾಮ್ಸನ್ 39 ರನ್ (25 ಎಸೆತ, 2 ಬೌಂಡರಿ, 3 ಸಿಕ್ಸ್) ಸಿಡಿಸಿ ನೆರವಾದರು. ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಆರ್ಭಟಿಸಿದರು. ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಯ್ಯರ್ ಅಜೇಯ 74 ರನ್ (44 ಎಸೆತ, 6 ಬೌಂಡರಿ, 4 ಸಿಕ್ಸ್) ಬಾರಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ 45 ರನ್ (18 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಇನ್ನೂ 17 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

    ನಿಸ್ಸಾಂಕ, ದಾಸುನ್ ಶನಕ ಹೋರಾಟ ವ್ಯರ್ಥ:
    ಈ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಿತು. ಪಾತುಂ ನಿಸ್ಸಾಂಕ ಮತ್ತು ದನುಷ್ಕ ಗುಣತಿಲಕ ಜೋಡಿ ಮೊದಲ ವಿಕೆಟ್‍ಗೆ 67 ರನ್ (52 ಎಸೆತ) ಜೊತೆಯಾಟವಾಡಿ ಗಮನ ಸೆಳೆಯಿತು. ದನುಷ್ಕ ಗುಣತಿಲಕ 38 ರನ್ (29 ಎಸೆತ, 4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆದರು ನಂತರ ಶ್ರೀಲಂಕಾ ವಿಕೆಟ್ ಕಳೆದುಕೊಂಡು ಸಾಗಿತು. ಇದನ್ನೂ ಓದಿ: ಟಿ20 ಸರಣಿಯಿಂದ ಗಾಯಕ್ವಡ್ ಔಟ್ – ಕನ್ನಡಿಗನಿಗೆ ಒಲಿದ ಅದೃಷ್ಟ

    ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಇನ್ನೊಂದೆಡೆ ಭಾರತದ ಬೌಲರ್‌ಗಳಿಗೆ ಪಾತುಂ ನಿಸ್ಸಾಂಕ ಕಾಡಿದರು. ಅಂತಿಮವಾಗಿ ನಿಸ್ಸಾಂಕ 75 ರನ್ (53 ಎಸೆತ, 11 ಬೌಂಡರಿ) ಸಿಡಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರ ಕೊನೆಯಲ್ಲಿ ಮಿಂಚಿದ ನಾಯಕ ದಾಸುನ್ ಶನಕ ಅಬ್ಬರದ ಅಜೇಯ 47 ರನ್ (19 ಎಸೆತ, 2 ಬೌಂಡರಿ, 5 ಸಿಕ್ಸ್) ಸಿಡಿಸಿ ತಂಡದ ಮೊತ್ತವನ್ನು 180ರ ಗಡಿದಾಟಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಶ್ರೀಲಂಕಾ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

    ಟೀಂ ಇಂಡಿಯಾ ಪರ ಭುವನೇಶ್ವರ್ ಕುಮಾರ್, ಬುಮ್ರಾ, ಹರ್ಷಲ್ ಪಟೇಲ್, ಚಹಲ್, ಜಡೇಜಾ ತಲಾ 1 ವಿಕೆಟ್ ಪಡೆದರು.

  • ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

    ತೈಲ ಖರೀದಿಸಲು ಶ್ರೀಲಂಕಾಗೆ 3 ಸಾವಿರ ಕೋಟಿ ಸಾಲ ನೀಡಿದ ಭಾರತ

    ಕೊಲಂಬೊ: ಶ್ರೀಲಂಕಾದಲ್ಲಿ ತುರ್ತು ತೈಲ ಖರೀದಿಗೆ ಭಾರತ ಬುಧವಾರ 500 ಮಿಲಿಯನ್ ಡಾಲರ್(ಸುಮಾರು 3 ಸಾವಿರ ಕೋಟಿ ರೂ.) ಸಾಲ ನೀಡಿದೆ. ಈ ಮೂಲಕ ಶ್ರೀಲಂಕಾಗೆ ತಾತ್ಕಾಲಿಕ ಆರ್ಥಿಕ ಪರಿಹಾರ ಲಭಿಸಿದೆ.

    ಶ್ರೀಲಂಕಾದಲ್ಲಿ ಸದ್ಯ ಆರ್ಥಿಕ ಕುಸಿತ ಕಂಡುಬಂದಿದ್ದು, ಇಂಧನದ ಕೊರತೆ ನಿಭಾಯಿಸಲು ಭಾರತ ಸಹಾಯ ಮಾಡುತ್ತಿದೆ.

    ಶ್ರೀಲಂಕಾದಲ್ಲಿ ಬೃಹತ್ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳಲ್ಲಿ ಸ್ಥಗಿತ ಹಾಗೂ ವಿದ್ಯುತ್ ಕಡಿತಗಳು ಹೆಚ್ಚಾಗಿವೆ. ಇದರಿಂದ ಅಲ್ಲಿನ ಜನರು ಅಡುಗೆ ಅನಿಲ ಹಾಗೂ ಸೀಮೆ ಎಣ್ಣೆ ಖರೀದಿಗೆ ಮುಂದಾಗುತ್ತಿದ್ದಾರೆ. ಹೀಗಾಗಿ ದೇಶ ತೈಲದ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್‌ ಯಾದವ್‌ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ

    ಜನವರಿ 15ರಂದು ನಡೆದ ವರ್ಚುವಲ್ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹಾಗೂ ಶ್ರೀಲಾಂಕಾದ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ನಡುವೆ ಮಾತುಕತೆ ನಡೆದಿದ್ದು, ಈ ಸಂದರ್ಭದಲ್ಲಿ ಭಾರತ ಸಾಲ ನೀಡಲು ನಿರ್ಣಯಿಸಿದೆ ಎಂದು ಬುಧವಾರದ ಅಧಿಕೃತ ಮಾಹಿತಿಯಲ್ಲಿ ತಿಳಿದುಬಂದಿದೆ. ಇದನ್ನೂ ಓದಿ: ಅಫ್ಘಾನಿಸ್ತಾನ ವಿಚಾರದಲ್ಲಿ ರಷ್ಯಾ,ಭಾರತದ ನಿಲುವು ಒಂದೇ: ವರ್ಶಿನಿನ್

    ಪೆಟ್ರೋಲಿಯಂ ಉತ್ಪನ್ನ ಖರೀದಿಗೆ ಭಾರತ ಶ್ರೀಲಂಕಾಗೆ 500 ಮಿಲಿಯನ್ ಡಾಲರ್ ನೀಡುತ್ತಿದೆ. ಅಕ್ಕಿ, ವಾಹನಗಳ ಬಿಡಿ ಭಾಗಗಳು ಹಾಗೂ ಸಿಮೆಂಟ್‌ನ ಕೊರತೆ ಕೂಡಾ ಶ್ರೀಲಂಕಾದಲ್ಲಿ ಉಂಟಾಗಿದೆ. ದ್ವೀಪ ರಾಷ್ಟ್ರದಲ್ಲಿ ವಿದೇಶಿ ವಿನಿಮಯದಿಂದ ಲಾಭಗಳಿಸುವ ವಲಯವೆಂದರೆ ಪ್ರವಾಸೋದ್ಯಮ. ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಶ್ರೀಲಂಕಾದ ಪ್ರವಾಸೋದ್ಯಮದಲ್ಲಿ ಕುಸಿತ ಉಂಟಾಗಿದೆ. ಹೀಗಾಗಿ ದೇಶ ಆರ್ಥಿಕ ಹಿನ್ನೆಡೆ ಅನುಭವಿಸುತ್ತಿದೆ ಎಂದು ತಿಳಿಸಿದೆ.

  • ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

    ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣನೇ?- ಲಂಕಾ ಅಧ್ಯಯನ

    ಕೊಲಂಬೋ: ರಾಮಾಯಣದಲ್ಲಿ ಲಂಕಾಧಿಪತಿ ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸುವ ಕತೆಯಿದೆ. ಹೀಗಾಗಿ ಜಗತ್ತಿನಲ್ಲಿ ಮೊಟ್ಟ ಮೊದಲು ವಿಮಾನ ಹಾರಿಸಿದವನು ರಾವಣ ಎಂದು ನಂಬಿರುವ ಶ್ರೀಲಂಕಾ, ಇದೀಗ ಈ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಲು ನಿರ್ಧರಿಸಿದೆ.

    ಲಂಕಾಕ್ಕೆ ರಾವಣ ರಾಜನಾಗಿದ್ದ ಈ ವೇಳೆ ದೇಶದಲ್ಲಿ ವಿಮಾನ ನಿಲ್ದಾಣ ಹಾಗೂ ವಿಮಾನ ಇದ್ದವು ಎಂದು ಲಂಕನ್ನರು ನಂಬುತ್ತಾರೆ. ಇದು ಕೇವಲ ಪುರಾಣದ ಕತೆಯಲ್ಲ, ವೈಜ್ಞಾನಿಕ ಆಧಾರಗಳಿರಬಹುದು ಎಂದು ಆ ಸ್ಥಳಗಳ ಹುಡುಕಾಟ ನಡೆದಿದೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    2 ವರ್ಷಗಳ ಹಿಂದೆ ಶ್ರೀಲಂಕಾ ಸರ್ಕಾರ 50 ಲಕ್ಷ ರೂಪಾಯಿ ನೆರವು ನೀಡಿ ಈ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸಲು ಸೂಚಿಸಿತ್ತು. ಕೋವಿಡ್ ಕಾರಣದಿಂದ ಸಂಶೋಧನೆ ನಿಂತಿತ್ತು. ಅದನ್ನ ಈಗ ಪುನಾರಂಭಿಸಲು ಹಾಲಿ ಸರ್ಕಾರದ ಅಧ್ಯಕ್ಷ ರಾಜಪಕ್ಸ್ ಒಲವು ತೋರಿಸಿದ್ದಾರೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ

  • ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

    ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

    ದುಬೈ: ಟಿ20 ವಿಶ್ವಕಪ್‍ನಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್‍ಎಂ) ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಂಡಿಯೂರಿ ನಿಲ್ಲಲು ಒಪ್ಪದೆ ದಕ್ಷಿಣ ಆಫ್ರಿಕಾ ತಂಡದಿಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಕ್ವಿಂಟನ್ ಡಿ ಕಾಕ್ ಹೊರ ನಡೆದಿದ್ದರು. ಆದರೆ ಇಂದು ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮಂಡಿಯೂರಿ ಆಫ್ರಿಕಾ ತಂಡದೊಂದಿಗೆ ಕಣಕ್ಕಿಳಿದಿದ್ದಾರೆ.

    ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಆರಂಭಕ್ಕೂ ಮೊದಲು ಡಿ ಕಾಕ್ ಆಡುವ ಹನ್ನೊಂದರ ಬಳಗದಲ್ಲಿ ಇದ್ದರು. ಆದರೆ ದಕ್ಷಿಣ ಆಪ್ರಿಕಾ ಕ್ರಿಕೆಟ್ ಮಂಡಳಿಯ ಆ ಒಂದು ಸಂದೇಶದ ವಿರುದ್ಧ ತಿರುಗಿಬಿದ್ದ ಡಿ ಕಾಕ್ ಕಡೆಯ ಕ್ಷಣದಲ್ಲಿ ಆಡುವ ಬಳಗದಿಂದ ಹೊರ ನಡೆದರು. ಇದಕ್ಕೆ ಕಾರಣ ಬಿಎಲ್‍ಎಂ ಆಂದೋಲನವಾಗಿತ್ತು. ಬಳಿಕ ಡಿ ಕಾಕ್ ಜೊತೆ ಆಫ್ರಿಕಾ ಕ್ರಿಕೆಟ್ ಮಂಡಳಿ ಚರ್ಚಿಸಿತ್ತು. ಡಿ ಕಾಕ್ ಕೂಡ ನಾನು ಈ ಆಂದೋಲನಕ್ಕೆ ಬೆಂಬಲ ಸೂಚಿಸುವುದಾಗಿ ತಿಳಿಸಿ ಇಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?

    ಏನಿದು ಬಿಎಲ್‍ಎಂ?
    ಬ್ಲ್ಯಾಕ್ ಲೈವ್ಸ್ ಮ್ಯಾಟರ್ (ಬಿಎಲ್‍ಎಂ) ಕಳೆದ ವರ್ಷ ಅಮೆರಿಕದಲ್ಲಿ ಕಪ್ಪು ವರ್ಣೀಯ ಆರೋಪಿಯೊಬ್ಬರನ್ನು ಅಲ್ಲಿಯ ಪೊಲೀಸರು ನಡು ರಸ್ತೆಯಲ್ಲೇ ಹಲ್ಲೆ ನಡೆಸಿ ಕೊಂದಿದ್ದರು. ಇದನ್ನು ಕಪ್ಪು ವರ್ಣೀಯರು ವಿರೋಧಿಸಿ ಬಿಎಲ್‍ಎಂ ಆಂದೋಲನ ಆರಂಭಿಸಿದರು. ಬಳಿಕ ವಿಶ್ವಾದ್ಯಂತ ವಿವಿಧ ಕ್ರೀಡೆಗಳಲ್ಲಿ ಆಟಗಾರರು ಈ ಆಂದೋಲನಕ್ಕೆ ಸಾಂಕೇತಿಕವಾಗಿ ಮಂಡಿಯೂರಿ ಒಂದು ಕೈ ಎತ್ತಿ ಬೆಂಬಲ ಕೊಡಲು ಆರಂಭಿಸಿದರು. ಇದು ಇದೀಗ ಟಿ20 ವಿಶ್ವಕಪ್ ಪಂದ್ಯದಲ್ಲೂ ಕೂಡ ಮುಂದುವರಿಯುತ್ತಿದೆ. ಪ್ರತಿ ಪಂದ್ಯ ಆರಂಭಕ್ಕೂ ಮುನ್ನ ಆಟಗಾರರು ಮೈದಾನದಲ್ಲಿ ವಿವಿಧ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ದಕ್ಷಿಣ ಆಫ್ರಿಕಾ ತಂಡದಲ್ಲಿ ಕಪ್ಪು ವರ್ಣೀಯ ಆಟಗಾರರು ಮತ್ತು ಬಿಳಿ ವರ್ಣೀಯ ಆಟಗಾರರು ಇದ್ದಾರೆ. ಹಾಗಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ಕಡ್ಡಾಯವಾಗಿ ಆಟಗಾರೆಲ್ಲರೂ ಮಂಡಿಯೂರಿ ಬಿಎಲ್‍ಎಂಗೆ ಬೆಂಬಲಿಸಬೇಕಾಗಿ ಆದೇಶ ಹೊರಡಿಸಿತ್ತು. ಇದಕ್ಕೆ ಒಪ್ಪದ ಡಿ ಕಾಕ್ ತಂಡದಿಂದ ಹಿಂದೆ ಸರಿದಿದ್ದರು. ಬಳಿಕ ಡಿ ಕಾಕ್ ನಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಡಿ ಕಾಕ್ ಆಫ್ರಿಕಾ ತಂಡದಿಂದಲೇ ಕಿಕ್ ಔಟ್ ಆಗುವ ಸಾಧ್ಯತೆ ಮೂಡಿತ್ತು. ಇದೀಗ ಡಿ ಕಾಕ್ ಮಂಡಿಯೂರಿ ಬಿಎಲ್‍ಎಂಗೆ ಬೆಂಬಲ ಸೂಚಿಸಿ ಈ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್

    ಬಿಎಲ್‍ಎಂ ಆಂದೋಲನಕ್ಕೆ ವಿಶ್ವಕಪ್‍ನಲ್ಲಿ ಎಲ್ಲಾ ತಂಡಗಳು ಕೂಡ ಬೆಂಬಲ ಸೂಚಿಸುತ್ತಿದೆ. ಇದರಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮುನ್ನ ಭಾರತದ ಆಟಗಾರರೆಲ್ಲರೂ ಮಂಡಿಯೂರಿ ಸಂಪೂರ್ಣವಾಗಿ ಬಿಎಲ್‍ಎಂಗೆ ಬೆಂಬಲ ಸೂಚಿಸಿದ್ದರು.

  • ಭಾರತ ಪರ ಕ್ರಿಕೆಟ್ ಆಡಿದ 21ನೇ ಶತಮಾನದಲ್ಲಿ ಜನಿಸಿದ ಮೊದಲ ಆಟಗಾರ ಯಾರು ಗೊತ್ತಾ?

    ಭಾರತ ಪರ ಕ್ರಿಕೆಟ್ ಆಡಿದ 21ನೇ ಶತಮಾನದಲ್ಲಿ ಜನಿಸಿದ ಮೊದಲ ಆಟಗಾರ ಯಾರು ಗೊತ್ತಾ?

    ಕೊಲಂಬೋ: ಭಾರತ ಹಾಗೂ ಶ್ರೀಲಂಕಾ ಸರಣಿ ಮುಕ್ತಾಯಗೊಂಡಿದೆ. ಆದರೆ ಈ ಸರಣಿಯಲ್ಲಿ ಹಲವು ಬಗೆಯ ವೈಶಿಷ್ಟ್ಯವನ್ನು ಭಾರತ ತಂಡ ಅನುಭವಿಸಿದೆ. ಅದರಂತೆ 21ನೇ ಶತಮಾನದಲ್ಲಿ ಜನಿಸಿದ ಆಟಗಾರನೊಬ್ಬ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಿ ಸಾಧನೆ ಮಾಡಿದ್ದಾರೆ.

    ಶ್ರೀಲಂಕಾ ಸರಣಿಗೆ ಭಾರತದ ಯುವ ತಂಡವನ್ನು ಕಳುಹಿಸಿಕೊಡಲಾಗಿತ್ತು. ಇದರಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಸ್ಥಾನ ಪಡೆದಿದ್ದರು. ಬಳಿಕ ಇವರಿಗೆ ಟಿ20 ಸರಣಿಯಲ್ಲಿ ಭಾರತದ ಪರ ಆಡುವ ಅವಕಾಶ ಕೂಡ ಸಿಕ್ಕಿತು. ಪಡಿಕ್ಕಲ್ 2000ರ ಜುಲೈ 7 ರಂದು ಜನಿಸಿದ್ದು, ಬಳಿಕ ಇದೀಗ ಭಾರತ ತಂಡದ ಪರ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಪಡಿಕ್ಕಲ್ 21ನೇ ಶತಮಾನದಲ್ಲಿ ಹುಟ್ಟಿ ಭಾರತ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಐಪಿಎಲ್‍ಗೂ ಮುನ್ನ ಡ್ಯಾಶಿಂಗ್ ಲುಕ್‍ನಲ್ಲಿ ಕಾಣಿಸಿಕೊಂಡ ಧೋನಿ

    ಪಡಿಕ್ಕಲ್ ಭಾರತ ತಂಡದ ಪರ ಎರಡು ಟಿ20 ಪಂದ್ಯಗಳನ್ನು ಆಡುವ ಅವಕಾಶ ಪಡೆದರು ಕೂಡ ಅದನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಎರಡು ಪಂದ್ಯಗಳಿಂದ ಕೇವಲ 38 ರನ್ ಗಳನ್ನು ಬಾರಿಸಲಷ್ಟೇ ಶಕ್ತರಾದರು. ಆದರೆ ಮುಂದಿನ ಭವಿಷ್ಯದ ತಾರೆಯಾಗಿ ಗುರುತಿಸಿಕೊಂಡಿರುವ ಪಡಿಕ್ಕಲ್‍ಗೆ ಇನ್ನಷ್ಟು ಅವಕಾಶ ಕೊಡಬೇಕಾಗಿದೆ.

    ಶ್ರೀಲಂಕಾ ಪ್ರವಾಸ ಕೈಗೊಂಡ ಭಾರತ ತಂಡದಲ್ಲಿ ನಾಯಕನಾಗಿ ಶಿಖರ್ ಧವನ್ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದರೆ, ತಂಡದ ಕೋಚ್ ಆಗಿ ಮೊದಲ ಬಾರಿಗೆ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಕಾರ್ಯ ನಿರ್ವಹಿಸಿದ್ದರು. ಸರಣಿಯಲ್ಲಿ ಭಾರತ ತಂಡ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದರೆ. ಟಿ20 ಸರಣಿಯನ್ನು 1-2 ಅಂತರದಲ್ಲಿ ಸೋತು ಮಿಶ್ರ ಫಲ ಅನುಭವಿಸಿದೆ.

  • ವಾನಿಂದು ಹಸರಂಗ ಮಾರಕ ದಾಳಿ- ಭಾರತ ವಿರುದ್ಧ ಟಿ20 ಸರಣಿ ಕೈವಶ ಪಡಿಸಿಕೊಂಡ ಶ್ರೀಲಂಕಾ

    ವಾನಿಂದು ಹಸರಂಗ ಮಾರಕ ದಾಳಿ- ಭಾರತ ವಿರುದ್ಧ ಟಿ20 ಸರಣಿ ಕೈವಶ ಪಡಿಸಿಕೊಂಡ ಶ್ರೀಲಂಕಾ

    ಕೊಲಂಬೋ: ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಮೂರನೇ ಟಿ20 ಸರಣಿಯನ್ನು ಹೀನಾಯವಾಗಿ ಸೋತು ಸರಣಿ ಕೈ ಚೆಲ್ಲಿದೆ.

    ವಾನಿಂದು ಹಸರಂಗ 4 ಓವರ್ 4 ವಿಕೆಟ್ ಮತ್ತು ಧನಂಜಯ ಡಿ ಸಿಲ್ವಾ ಅಜೇಯ 23ರನ್( 20 ಎಸೆತ, 2 ಬೌಂಡರಿ) ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ 2-1 ರಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

    ಭಾರತ ನೀಡಿದ 88 ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿ ಅವಿಷ್ಕಾ ಫರ್ನಾಂಡೊ 12ರನ್(18 ಎಸೆತ, 1 ಬೌಂಡರಿ) ಮತ್ತು ಮಿನೋಡ್ ಭನುಕಾ 18 ರನ್(27 ಎಸೆತ, 1 ಬೌಂಡರಿ) ಬೇಗನೆ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಬಂದ ಧನಂಜಯ ಡಿ ಸಿಲ್ವಾ ಅವರ ಸಮಯೋಚಿತ ಬ್ಯಾಟಿಂಗ್‍ನಿಂದಾಗಿ 14.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು 82ರನ್‍ಗಳನ್ನು ಚೇಸ್ ಮಾಡಿ ಗೆದ್ದು ಬೀಗಿತು.

    ಭಾರತದ ಆಟಗಾರರ ಪೆವಿಲಿಯನ್ ಪರೇಡ್
    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ವಾನಿಂದು ಹಸರಂಗ ಮಾರಕವಾದರು. ಇವರ ಬೌಲಿಂಗ್‍ಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡ ಸಾಗಿದ ಭಾರತ ತಂಡದ ಯುವ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಋತುರಾಜ್ ಗಾಯಕ್ವಾಡ್ 14 ರನ್(10 ಎಸೆತ, 2 ಬೌಂಡರಿ), ಭುವನೇಶ್ವರ್ ಕುಮಾರ್ 16 ರನ್(32 ಎಸೆತ) ಮತ್ತು ಕುಲದೀಪ್ ಯಾದವ್ ಅಜೇಯ 23 ರನ್( 28 ಎಸೆತ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಒಂದಕ್ಕಿ ಮೊತ್ತ ದಾಟಲಿಲ್ಲ. ಭಾರತ 3 ಆಟಗಾರರು ಸೊನ್ನೆ ಸುತ್ತಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಂತಿಮವಾಗಿ 20 ಓವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 81 ರನ್ ಹೊಡೆಯಲಷ್ಟೇ ಭಾರತ ಶಕ್ತವಾಯಿತು.

    ದಾಸುನ್ ಶಾನಕಾ 2 ವಿಕೆಟ್ ಪಡೆದರೆ, ರಮೇಶ್ ಮೆಂಡಿಸ್ , ದುಷ್ಮಂತ ಚಮೀರ ತಲಾ 1 ವಿಕೆಟ್ ಕಿತ್ತರು.

  • ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ

    ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ

    ಕೊಲಂಬೋ: ಭುವನೇಶ್ವರ್ ಕುಮಾರ್ ದಾಳಿಗೆ ನಲುಗಿದ ಶ್ರೀಲಂಕಾ ತಂಡ ಮೊದಲ ಟಿ20 ಪಂದ್ಯದಲ್ಲಿ ಭಾರತದೆದುರು ಮಂಡಿಯೂರಿದೆ. ಭಾರತ ತಂಡ 38ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

    ಶ್ರೀಲಂಕಾ ತಂಡಕ್ಕೆ ಮಾರಕವಾಗಿ ಎರಗಿದ ಭುವನೇಶ್ವರ್ ಕುಮಾರ್ 3.3 ಓವರ್ ಎಸೆದು 22 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಭುವಿ ಭಾರತಕ್ಕೆ 39ರನ್‍ಗಳ ಗೆಲುವು ತಂದು ಕೊಟ್ಟರು.

    ಗೆಲ್ಲಲು 165ರನ್‍ಗಳ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಚರಿತ್ ಅಸಲಂಕಾ 44ರನ್(26 ಎಸೆತ, 3 ಬೌಂಡರಿ, 3 ಸಿಕ್ಸ್), ಅವಿಷ್ಕಾ ಫರ್ನಾಂಡೊ 26ರನ್(23 ಎಸೆತ, 3 ಬೌಂಡರಿ), ದಾಸುನ್ ಶಾನಕಾ 16ರನ್(14 ಎಸೆತ, 1 ಸಿಕ್ಸ್) ಮಿನೋಡ್ ಭನುಕಾ 10ರನ್( 7 ಎಸೆತ, 2 ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‍ಮ್ಯಾನ್ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ 18.3 ಓವರ್‍ಗಳಲ್ಲಿ 126 ರನ್‍ಗಳಿಗೆ ಶ್ರೀಲಂಕಾ ತಂಡ ಸರ್ವಪತನ ಕಂಡಿತು.

    ದೀಪಕ್ ಚಹರ್ 2 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಿತ್ತರು.

    ಪೈಪೋಟಿ ಮೊತ್ತ ಕಲೆಹಾಕಿದ ಭಾರತ
    ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಖಾತೆ ತೆರೆಯುದರೊಳಗಡೆ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕಳೆದುಕೊಂಡಿತು. ಶಾ ತನ್ನ ಡೆಬ್ಯೂ ಪಂದ್ಯದಲ್ಲೇ ಶೂನ್ಯ ಸುತ್ತಿದ್ದರು. ಬಳಿಕ ಜೊತೆಯಾದ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ 51ರನ್ (36 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ಎಲ್‍ಬಿ ಬಲೆಗೆ ಬಿದ್ದ ಸಂಜು ಸ್ಯಾಮ್ಸನ್ 27 ರನ್(20 ಎಸೆತ, 1 ಸಿಕ್ಸ್) ಸಿಡಿಸಿ, ಡಿ ಸಿಲ್ವಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟ್ ಬೀಸಿದರು. ಧವನ್ ಜೊತೆಗೂಡಿ 3 ವಿಕೆಟ್‍ಗೆ 62(48)ರನ್ ಗಳ ಜೊತೆಯಾಟವಾಡಿ ಈ ಜೋಡಿ ಭಾರತದ ಮೊತ್ತವನ್ನು ನೂರರ ಗಡಿದಾಟಿಸಿತು.

    ಇನ್ನೇನೂ ಅರ್ಧಶತಕದ ಹೊಸ್ತಿಲ್ಲಲ್ಲಿ ಎಡವಿದ ಧವನ್ 46ರನ್(36 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇವರ ಹಿಂದೆಯೇ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 50 ರನ್(34 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕಡೆಯಲ್ಲಿ ಇಶಾನ್ ಕಿಶಾನ್ ಅಜೇಯ 20 ರನ್(14 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ಭಾರತದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 164ರನ್ ಗಳಿಸಿತು.

    ಶ್ರೀಲಂಕಾ ಪರ ದುಷ್ಮಂತ ಚಮೀರ ಮತ್ತು ವಾನಿಂದು ಹಸರಂಗ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಚಮಿಕಾ ಕರುಣರತ್ನ 1 ವಿಕೆಟ್ ಪಡೆದರು.

  • ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್?

    ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್?

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡದಿಂದ ಮೂವರು ಆಟಗಾರರು ಗಾಯದಿಂದಾಗಿ ಹೊರಬಿದ್ದಿದ್ದಾರೆ. ಈ ನಡುವೆ ಈ ಮೂವರಿಗೆ ಬದಲಿ ಆಟಗಾರರಾಗಿ ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್‍ಗೆ ತೆರಳಲಿದ್ದಾರೆ ಎಂಬ ಕುರಿತು ವರದಿಯಾಗಿದೆ.

    ಭಾರತ ತಂಡದ ಆಟಗಾರರಾದ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಗಾಯಕ್ಕೆ ತುತ್ತಾಗಿ ತವರಿಗೆ ಮರಳಿದ್ದಾರೆ. ಹಾಗಾಗಿ ಇವರ ಸ್ಥಾನಕ್ಕೆ ಬದಲಿಆಟಗಾರರಾಗಿ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಅವರನ್ನು ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಹಾಗೆ ಜಯಂತ್ ಯಾದವ್ ಅವರನ್ನು ಕಳುಹಿಸಿಕೊಡುವ ಸಾಧ್ಯತೆ ಇದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೋರ್ವರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯದ ಬರೆ

    ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಈಗಾಗಲೇ ಭಾರತ ಹಾಗೂ ಶ್ರೀಲಂಕಾ ಸರಣಿಗಾಗಿ ಲಂಕಾ ಪ್ರವಾಸ ಕೈಗೊಂಡಿದ್ದಾರೆ. ಈ ಸರಣಿಯ ಏಕದಿನ ಪಂದ್ಯದಲ್ಲಿ ಇಬ್ಬರು ಆಟಗಾರರು ಕೂಡ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಬಿಸಿಸಿಐ ಈ ಇಬ್ಬರು ಆಟಗಾರರನ್ನು ಇಂಗ್ಲೆಂಡ್‍ಗೆ ಕಳುಹಿಸಿಕೊಡಲು ತೀರ್ಮಾನಿಸಿದೆ. ಇವರೊಂದಿಗೆ ಜಯಂತ್ ಯಾದವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದ್ದು, ಇನ್ನೂ ಕೆಲ ದಿನಗಳಲ್ಲಿ ಈ ಕುರಿತು ಬಿಸಿಸಿಐ ಸ್ಪಷ್ಟ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

  • ಭಾರತ ವಿರುದ್ಧ ಕೊನೆಗೂ ಗೆಲುವಿನ ನಗೆ ಬೀರಿದ ಶ್ರೀಲಂಕಾ

    ಭಾರತ ವಿರುದ್ಧ ಕೊನೆಗೂ ಗೆಲುವಿನ ನಗೆ ಬೀರಿದ ಶ್ರೀಲಂಕಾ

    -46ರನ್ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಭಾರತ
    -ಭಾರತ ಪರ ಏಕದಿನ ಕ್ರಿಕೆಟ್‍ಗೆ ಐವರು ಆಟಗಾರರು ಪದಾರ್ಪಣೆ

    ಕೋಲಂಬೋ: ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಶ್ರೀಲಂಕಾ ತಂಡ 3 ವಿಕೆಟ್‍ಗಳಿಂದ ಗೆದ್ದು ವೈಟ್ ವಾಶ್‍ನಿಂದ ಪಾರಾಗಿದೆ.

    ಮಳೆಯಿಂದಾಗಿ 47 ಓವರ್‍ಗೆ ಮೀಸಲಾಗಿದ್ದ ಪಂದ್ಯದಲ್ಲಿ ಭಾರತ ನೀಡಿದ 224ರನ್‍ಗಳ ಮೊತ್ತವನ್ನು ಚೆಸ್ ಮಾಡಲು ಹೊರಟ ಶ್ರೀಲಂಕಾ ಆರಂಭದಲ್ಲೇ ಮಿನೋದ್ ಭಾನುಕ 7ರನ್(17 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಒಂದಾದ ಅವಿಷ್ಕಾ ಫರ್ನಾಂಡೊ ಮತ್ತು ಭಾನುಕ ರಾಜಪಕ್ಷ 109ರನ್(105 ಎಸೆತ) ಜೊತೆಯಾಟವಾಡಿ ಗೆಲುವಿನಂಚಿಗೆ ತಂದು ನಿಲ್ಲಿಸಿದರು. ಈ ವೇಳೆ ದಾಳಿಗಿಳಿದ ಚೇತನ್ ಸಕಾರಿಯಾ, 65ರನ್(56 ಎಸೆತ, 12 ಬೌಂಡರಿ) ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಭಾನುಕ ರಾಜಪಕ್ಷ ಅವರ ವಿಕೆಟ್ ಕಬಳಿಸಿದರು. ಬಳಿಕ ದಿಢೀರ್ ಕುಸಿತಕೊಳ್ಳಗಾದ ಲಂಕಾ ತಂಡ 20ರನ್‍ಗಳ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಿತು. ಉತ್ತಮವಾಗಿ ಆಡುತ್ತಿದ್ದ ಅವಿಷ್ಕಾ ಫರ್ನಾಂಡೊ 76ರನ್(98 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಕೊನೆಗೆ ಶ್ರೀಲಂಕಾ ತಂಡ 39 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 227 ಸಿಡಿಸಿ ಗೆಲುವಿನ ನಗೆ ಬೀರಿತು. ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಈ ಬಾರಿ ಪದಕಕ್ಕೆ ಕೊರಳೊಡ್ಡುವಂತಿಲ್ಲ ತಾವೇ ಧರಿಸಿಕೊಂಡರಾಯಿತು!

    ಭಾರತದ ಪರ ಡೆಬ್ಯೂ ಆಟಗಾರರಾದ ರಾಹುಲ್ ಚಹರ್ 3 ವಿಕೆಟ್, ಚೇತನ್ ಸಕಾರಿಯಾ 2 ವಿಕೆಟ್ ಮತ್ತು ಸಿ.ಎಂ ಗೌತಮ್ 1 ವಿಕೆಟ್ ಪಡೆದರು. ಇನ್ನುಳಿದ 1 ವಿಕೆಟ್ ಹಾರ್ದಿಕ್ ಪಾಂಡ್ಯ ಪಾಲಾಯಿತು.

    ಭಾರತದ ಪರ ಐವರು ಆಟಗಾರರು ಪದಾರ್ಪಣೆ
    ಈ ಮೊದಲು ಟಾಸ್ಕ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 6 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಭಾರತ ಪರ ಸಂಜು ಸ್ಯಾಮ್ಸನ್, ನಿತೇಶ್ ರಾಣಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್ ಮತ್ತು ಚೇತನ್ ಸಕಾರಿಯಾ ಏಕದಿನ ಕ್ರಿಕೆಟ್‍ಗೆ ಪಾದರ್ಪಣೆ ಮಾಡಿದರು.

    ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಧವನ್ 13ರನ್(11 ಎಸೆತ, 3 ಬೌಂಡರಿ) ಸಿಡಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ಪೃಥ್ವಿ ಶಾ ಜೋತೆಗೂಡಿ 80ರನ್(74 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ಅರ್ಧಶತದ ಹೊಸ್ತಿಲ್ಲಲ್ಲಿದ್ದ ಪೃಥ್ವಿ ಶಾ 49ರನ್( 49 ಎಸೆತ, 8ಬೌಂಡರಿ) ಸಿಡಿಸಿ ಔಟ್ ಅದರು. ಇವರ ಹಿಂದೆಯೇ ಸಂಜು ಸ್ಯಾಮ್ಸನ್ 46ರನ್(46 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಕೆಲ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 40ರನ್( 37 ಎಸೆತ, 7ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಕ್ರೀಸ್‍ಗಚ್ಚಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.

    46 ರನ್‍ಗಳ ಅಂತರದಲ್ಲಿ 6 ವಿಕೆಟ್ -ಕುಸಿತ ಕಂಡ ಭಾರತ
    ಅಖಿಲ ಧನಂಜಯ ಮತ್ತು ಪ್ರವೀಣ್ ಜಯವಿಕ್ರಮ ಅವರ ದಾಳಿಗೆ ನಳುಗಿದ ಭಾರತ ತಂಡ ಕುಸಿತಕ್ಕೊಳಗಾಯಿತು. ಕೆಲಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಎಲ್ಲ ಬ್ಯಾಟ್ಸ್‍ಮ್ಯಾನ್‍ಗಳು ಪೆವಿಲಯನ್ ಪರೇಡ್ ನಡೆಸಿದರು ಪರಿಣಾಮ 179 ರನ್‍ಗೆ 5 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ 46 ರನ್ ಅಂತರದಲ್ಲಿ ಇನ್ನೂಳಿದ 6 ವಿಕೆಟ್ ಕಳೆದುಕೊಂಡು 43.1 ಓವರ್‍ ಗಳಲ್ಲಿ 225ರನ್‍ಗೆ ಆಲ್‍ಔಟ್ ಆಯಿತು.

    ಶ್ರೀಲಂಕಾ ಪರ ಅಖಿಲಾ ಧನಂಜಯ ಮತ್ತು ಪ್ರವೀಣ್ ಜಯವಿಕ್ರಮ ತಲಾ 3 ವಿಕೆಟ್ ಕಿತ್ತು ಮಿಂಚಿದರು. ದುಷ್ಮಂತ ಚಮೀರ 2 ವಿಕೆಟ್, ಚಮಿಕಾ ಕರುಣರತ್ನ ಮತ್ತು ದಾಸುನ್ ಶಾನಕಾ ತಲಾ 1ವಿಕೆಟ್ ಪಡೆದರು.