Tag: Sri Lanka

  • ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ

    ಪೇಪರ್ ಕೊರತೆಯಿಂದ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ ಸರ್ಕಾರ

    ಕೊಲಂಬೊ: ಶ್ರೀಲಂಕಾದಲ್ಲಿ ಮುದ್ರಣ ಕಾಗದಕ್ಕೆ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಎಲ್ಲ ಅಂದುಕೊಂಡಂತೆಯೇ ಆಗಿದ್ದರೆ ದೇಶಾದ್ಯಂತ ಸುಮಾರು 45 ಲಕ್ಷ ಮಂದಿ ಶಾಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ ಹಾಗಾಗಲಿಲ್ಲ. ದೇಶದಲ್ಲಿ ಪೇಪರ್ ಕೊರತೆ ಕಂಡುಬಂದಿದ್ದರಿಂದ ಸರ್ಕಾರ ಪರೀಕ್ಷೆಯನ್ನು ರದ್ದುಗೊಳಿಸಿದೆ. ಇದನ್ನೂ ಓದಿ: ಪರೀಕ್ಷೆಗೆ ಗೈರಾದ್ರೆ ಅಲ್ಲಿಗೇ ಮುಗೀತು, ಅವಕಾಶ ನೀಡಲ್ಲ: ಬಿ.ಸಿ.ನಾಗೇಶ್

    ಶ್ರೀಲಂಕಾ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದು ಜಗತ್ತಿಗೆ ಗೊತ್ತಿದೆ. ಇತ್ತೀಚಿಗಷ್ಟೆ ಭಾರತ ಸರ್ಕಾರ ಕೋಟ್ಯಂತರ ರೂಪಾಯಿ ನೆರವನ್ನು ಶ್ರೀಲಂಕಾಗೆ ನೀಡುವುದಾಗಿ ಘೋಷಿಸಿತ್ತು. 1948ರಲ್ಲಿ ಸ್ವಾತಂತ್ರ್ಯ ಗಿಟ್ಟಿಸಿಕೊಂಡ ನಂತರ ಇದೇ ಮೊದಲ ಬಾರಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿ ಹದಗೆಡುತ್ತಿದ್ದು, ಅಗತ್ಯ ವಸ್ತೈಗಳಿಗೂ ಭಾರೀ ಕೊರತೆ ಉಂಟಾಗಿದೆ. ಇದರ ಬೆನ್ನಲ್ಲೇ ಈ ಮುಗ್ಗಟ್ಟು ಪರೀಕ್ಷೆಯ ಮೆಲೂ ಪರಿಣಾಮ ಸೃಷ್ಟಿಸಿದೆ.

    ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಕೊರತೆ ಉಂಟಾಗಿದ್ದು, ಸರ್ಕಾರದ ಬಳಿ ಮುದ್ರಣ ಕಾಗದ ಹಾಗೂ ಶಾಯಿಯನ್ನು ಖರೀದಿಸುವಷ್ಟೂ ಹಣವಿಲ್ಲ. ಹೀಗಾಗಿ ಇಂದು ನಡೆಯಬೇಕಾಗಿದ್ದ ಪರೀಕ್ಷೆಗಳು ಅನಿರ್ದಿಷ್ಟ ಅವರೀಗೆ ಮುಂದೂಡಲಾಗಿದೆ. ಇದರಿಂದ ಸುಮಾರು 30 ಲಕ್ಷ ಮಕ್ಕಳ ಭವಿಷ್ಯದ ಮೇಲೆ ತೂಗುಕತ್ತಿ ನೇತಾಡುತ್ತಿದೆ. ಇದನ್ನೂ ಓದಿ: ಪರ್ವತಕ್ಕೆ ಅಪ್ಪಳಿಸಿದ 133 ಪ್ರಯಾಣಿಕರಿದ್ದ ಚೀನಾ ವಿಮಾನ – ಹೊತ್ತಿ ಉರಿದ ಅರಣ್ಯ ಪ್ರದೇಶ

    ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ನೆರವಿಗಾಗಿ ವಿಶ್ವ ಬ್ಯಾಂಕ್ ಅನ್ನೂ ಸಂಪರ್ಕಿಸಿದ್ದಾರೆ. ಈ ಬಗ್ಗೆ ವಿಶ್ವ ಬ್ಯಾಂಕ್ ಇದುವರೆಗೂ ಏನನ್ನೂ ಹೇಳಿಲ್ಲ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಯಾವಾಗ ಕೈಗೊಳ್ಳಲಾಗುವುದು ಎಂಬುದರ ಬಗ್ಗೆ ಸರ್ಕಾರ ಇನ್ನೂ ಖಚಿತವಾಗಿ ಹೇಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.

  • ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಚಿನ್ನಸ್ವಾಮಿ ಪಿಚ್‍ಗೆ -1 ರೇಟಿಂಗ್ – ಐಸಿಸಿ ಅಸಮಾಧಾನ

    ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯಕ್ಕೆ ಬಳಸಲಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ -1 ರೇಟಿಂಗ್ ನೀಡಿದೆ.

    ಭಾರತ ಹಾಗೂ ಶ್ರೀಲಂಕಾ ನಡುವಿನ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯ ಕೇವಲ ಮೂರೇ ದಿನಕ್ಕೆ ಮುಕ್ತಾಯವಾಗಿತ್ತು. ಬಳಿಕ ಪಿಚ್ ಬಗ್ಗೆ ಐಸಿಸಿ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಐಸಿಸಿಗೆ ವರದಿ ಸಲ್ಲಿಸಿದ್ದರು. ಪಿಚ್ ಮೊದಲ ದಿನವೇ ಸ್ಪಿನ್ನರ್‌ಗಳಿಗೆ ನಿರೀಕ್ಷೆಗಿಂತ ಹೆಚ್ಚು ನೆರವು ನೀಡಿತ್ತು. ಪಿಚ್ ಸ್ಪರ್ಧಾತ್ಮಕವಾಗಿರಲಿಲ್ಲ ಎಂದು ಶ್ರೀನಾಥ್ ಐಸಿಸಿಗೆ ವರದಿ ಸಲ್ಲಿಕೆ ಮಾಡಿದ್ದಾರೆ. ಬಳಿಕ ಪಿಚ್ ಸಾಧಾರಣವಾಗಿತ್ತು ಎಂದು ಐಸಿಸಿ -1 ರೇಟಿಂಗ್ ನೀಡಿದೆ. ಇದನ್ನೂ ಓದಿ: ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ

    ಅಂತಾರಾಷ್ಟ್ರೀಯ ಪಂದ್ಯ ಕೈತಪ್ಪುವ ಭೀತಿ:
    ಐದು ದಿನಗಳ ಕಾಲ ನಡೆಯುವ ಟೆಸ್ಟ್ ಪಂದ್ಯಗಳು ನಿಗದಿಪಡಿಸಿದ ದಿನಕ್ಕಿಂತ ಮುಂಚಿತವಾಗಿ ಪೂರ್ಣಗೊಂಡರೆ ಮ್ಯಾಚ್ ರೆಫ್ರಿ ಪಿಚ್ ಬಗ್ಗೆ ಐಸಿಸಿಗೆ ವರದಿ ಸಲ್ಲಿಸಬೇಕು. ಮ್ಯಾಚ್ ರೆಫ್ರಿ ಸಲ್ಲಿಸಿದ ವರದಿ ಪರಿಶೀಲಿಸಿದ ಬಳಿಕ ಐಸಿಸಿ ಪಿಚ್ ಕಳಪೆ ಮಟ್ಟದ್ದಾಗಿದ್ದರೆ -3 ಹಾಗೂ ಆಟಕ್ಕೆ ಯೋಗ್ಯವಲ್ಲದ ಪಿಚ್‍ಗೆ -5 ಅಂಕ ನೀಡುತ್ತದೆ. 5 ವರ್ಷಗಳೊಳಗೆ -5 ಅಂಕ ಪಡೆಯುವ ಪಿಚ್‍ಗಳಲ್ಲಿ 1 ವರ್ಷಗಳ ಕಾಲ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವುದಿಲ್ಲ. ಇದೀಗ ಕೆಎಸ್‍ಸಿಎಗೆ -1 ಅಂಕ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಪಿಚ್ ಸಿದ್ಧಪಡಿಸುವಾಗ ಬಹಳ ಎಚ್ಚರಿಕೆ ವಹಿಸಬೇಕಿದೆ. ಅಲ್ಲದೇ ಗುಣಮಟ್ಟದ ಪಿಚ್ ತಯಾರಿಕೆಗಾಗಿ ಗಮನಹರಿಸಬೇಕಾಗಿದೆ. ಇದನ್ನೂ ಓದಿ: 238 ರನ್‍ಗಳ ಜಯದೊಂದಿಗೆ ದಾಖಲೆ ನಿರ್ಮಿಸಿದ ಭಾರತ

    ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ:
    ಕೆಎಸ್‍ಸಿಎಯಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ ಭಾರತ 252ಕ್ಕೆ ಆಲೌಟ್ ಆಗಿತ್ತು. ಬಳಿಕ ಶ್ರೀಲಂಕಾ ಬ್ಯಾಟಿಂಗ್ ಆರಂಭಿಸಿ 109 ರನ್‍ಗಳಿಗೆ ಸರ್ವಪತನ ಕಂಡಿತು. 143 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 303 ರನ್‍ಗಳಿಗೆ 9 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತ್ತು. ಗೆಲ್ಲಲು 447 ರನ್ ಗುರಿ ಪಡೆದ ಶ್ರೀಲಂಕಾ ತಂಡ 208 ರನ್‍ಗಳಿಗೆ ಆಲೌಟ್ ಆಯಿತು. ಭಾರತ ತಂಡ 238 ರನ್‍ಗಳ ಜಯ ಗಳಿಸಿತು. ಈ ಮೂಲಕ ಮೂರೇ ದಿನಕ್ಕೆ ಟೆಸ್ಟ್ ಪಂದ್ಯ ಅಂತ್ಯಗೊಂಡಿತ್ತು.

  • 13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    13 ಗಂಟೆಯಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಸ್ವಿಮ್ಮಿಂಗ್ ಮಾಡಿದ 13ರ ಬಾಲಕಿ

    ಚೆನ್ನೈ: ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದ ತಲೈಮನ್ನಾರ್‍ನಿಂದ ತಮಿಳುನಾಡಿನ ಧನುಷ್ಕೋಡಿಯ ಅರಿಚಲ್ಮುನೈವರೆಗೆ 28.5 ಕಿ.ಮೀ ಸ್ವಿಮ್ಮಿಂಗ್ ಮಾಡಿದ ಮುಂಬೈ ಮೂಲದ 13 ವರ್ಷದ ಬಾಲಕಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಜಿಯಾ ರೈ ನೌಕಾಪಡೆಯ ಅಧಿಕಾರಿಯೊಬ್ಬರ ಮಗಳಾಗಿದ್ದು, ಶ್ರೀಲಂಕಾ ಮತ್ತು ಭಾರತೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದು ಮಾರ್ಚ್ 20ರ ಭಾನುವಾರ ಬೆಳಗ್ಗೆ 4.22ಕ್ಕೆ ತಮ್ಮ ಪ್ರಯಾಣವನ್ನು ಪ್ರಾರಂಭಿಸಿ ನಂತರ ಸಂಜೆ 5.32ರ ಹೊತ್ತಿಗೆ ಅರಿಚಲ್ಮುನೈ ತಲುಪಿದ್ದಾರೆ. ಇದನ್ನೂ ಓದಿ: ‘ಶಾಸಕನ ಮೊಮ್ಮಗ’ ಎನ್ನುವುದೇ ಬೈಕ್ ನಂಬರ್ ಪ್ಲೇಟ್!

    ಈ ವೇಳೆ ಹಾಜರಿದ್ದ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಅವರು, ಈ ಸಮುದ್ರದಲ್ಲಿ ಹಾವುಗಳು, ಶಾರ್ಕ್‍ಗಳು ಮತ್ತು ಜೆಲ್ಲಿ ಮೀನುಗಳು ಹೆಚ್ಚಾಗಿದೆ. ಅಲ್ಲದೆ ಈ ನೀರಿನ ಪ್ರವಾಹವನ್ನು ನೀವು ಊಹಿಸಲು ಸಾಧ್ಯವಿಲ್ಲ. ಆದರೆ ಜಿಯಾ ರೈ ಈ ನೀರಿನಲ್ಲಿ ಸ್ವಿಮ್ಮಿಂಗ್ ಮಾಡಿದ್ದಾಳೆ ಎಂದರೆ ಖಂಡಿತವಾಗಿಯೂ ಪ್ರಶಂಶಿಸಬೇಕು ಎಂದು ಅವರ ತಂದೆ, ತಾಯಿಯ ಬಳಿ ಶ್ಲಾಘಿಸಿದ್ದಾರೆ.

    ಜಿಯಾ ರೈ ಸ್ವಿಮ್ಮಿಂಗ್ ಮಾಡುವ ವೇಳೆ ಶ್ರೀಲಂಕಾದ ನೌಕಾಪಡೆಯು ಭಾರತೀಯ ಕರಾವಳಿ ಭದ್ರತಾಪಡೆಯು ಸ್ವಾಧೀನಪಡಿಸಿಕೊಳ್ಳುವ ಅಂತರಾಷ್ಟ್ರೀಯ ಕಡಲ ಗಡಿಯವರೆಗೆ ರಕ್ಷಣೆ ನೀಡಿದೆ. ಇದನ್ನೂ ಓದಿ: 2.8 ಕೋಟಿ ಸಾಗಾಟ -ಸಿಕ್ಕಿ ಬಿದ್ದ ಮಾಜಿ ಸಂಸದನ ಪತ್ನಿ

  • ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ

    ಟಿ20 ಮಾದರಿಯಲ್ಲಿ ಏಷ್ಯಾ ಕಪ್ – ಶ್ರೀಲಂಕಾದಲ್ಲಿ ಆಗಸ್ಟ್ 27ಕ್ಕೆ ಆರಂಭ

    ಮುಂಬೈ: 2022ರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ ಶ್ರೀಲಂಕಾದಲ್ಲಿ ಆಗಸ್ಟ್ 27 ರಿಂದ ಆರಂಭವಾಗಲಿದೆ ಎಂದು ವರದಿಯಾಗಿದೆ.

    ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧರಿಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಏಷ್ಯಾ ಖಂಡದ ದೇಶಗಳ ನಡುವೆ ನಡೆಯುವ ಈ ಕ್ರಿಕೆಟ್ ಟೂರ್ನಿ 2 ವರ್ಷಗಳಿಗೊಮ್ಮೆ ನಡೆಯುತ್ತಿತ್ತು. 2020ರಲ್ಲಿ ಕೊರೊನಾ ಕಾರಣದಿಂದಾಗಿ ಟೂರ್ನಿ ನಡೆದಿರಲಿಲ್ಲ. ಇದೀಗ 2022ರಲ್ಲಿ ಮತ್ತೆ ಟೂರ್ನಿ ಆಯೋಜಿಸಲು ಎಸಿಸಿ ತೀರ್ಮಾನಿಸಿದೆ. ಏಷ್ಯಾದ ತಂಡಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಕ್ವಾಲಿಫೈಯರ್ ಆಗಿ ಟೂರ್ನಿಗೆ ಆಯ್ಕೆಯಾಗುವ ಒಟ್ಟು 6 ತಂಡಗಳ ಮಧ್ಯೆ ಟೂರ್ನಿ ನಡೆಯಲಿದೆ. ಇದನ್ನೂ ಓದಿ: 7 ನಂಬರ್ ಜೆರ್ಸಿ ಹಿಂದಿನ ಕಹಾನಿ ಬಿಚ್ಚಿಟ್ಟ ಧೋನಿ

    ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ತಂಡ ಯಶಸ್ವಿ ತಂಡವಾಗಿ ಹೊರಮ್ಮಿದ್ದು, ಈವರೆಗೆ ಒಟ್ಟು 7 ಬಾರಿ ಏಷ್ಯಾ ಕಪ್ ಗೆದ್ದಿದೆ. ಉಳಿದಂತೆ ಶ್ರೀಲಂಕಾ 5 ಬಾರಿ ಗೆದ್ದರೆ, ಪಾಕಿಸ್ತಾನ 2 ಬಾರಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ಇದನ್ನೂ ಓದಿ: ಕೀವ್ ರಕ್ಷಣೆಗಾಗಿ ರಾಕೆಟ್ ಬಿಟ್ಟು ಗನ್ ಹಿಡಿದು ಹೋರಾಟಕ್ಕೆ ಮುಂದಾದ ಟೆನ್ನಿಸ್ ಆಟಗಾರ

  • ಜಡೇಜಾ ಆಲ್‍ರೌಂಡರ್ ಆಟಕ್ಕೆ ಮಂಕಾದ ಲಂಕಾ – ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ

    ಜಡೇಜಾ ಆಲ್‍ರೌಂಡರ್ ಆಟಕ್ಕೆ ಮಂಕಾದ ಲಂಕಾ – ಭಾರತಕ್ಕೆ ಭರ್ಜರಿ ಇನ್ನಿಂಗ್ಸ್ ಜಯ

    ಮೊಹಾಲಿ: ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ಸ್ಪಿನ್ ಜೋಡಿಯ ಮೋಡಿಗೆ ಮಂಕಾದ ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲೊಪ್ಪಿಕೊಂಡಿದೆ. ಭಾರತ ಇನ್ನಿಂಗ್ಸ್ ಹಾಗೂ 222 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತದ ಪರ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಆಲ್‍ರೌಂಡರ್ ಆಟ ಪ್ರದರ್ಶಿಸಿದ ರವೀಂದ್ರ ಜಡೇಜಾ ಬ್ಯಾಟಿಂಗ್‍ನಲ್ಲಿ ಅಜೇಯ 175 ರನ್ ಮತ್ತು ಬೌಲಿಂಗ್‍ನಲ್ಲಿ 9 ವಿಕೆಟ್ ಕಿತ್ತು ಶ್ರೀಲಂಕಾಗೆ ಕಾಡಿದರು. ಈ ಜಯದೊಂದಿಗೆ ಭಾರತ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಇದನ್ನೂ ಓದಿ: ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

    ಈ ಮೊದಲು 2ನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್‍ಗಳಿಸಿದ್ದ ಲಂಕಾ 3ನೇ ದಿನದಾಟ ಮುಂದುವರಿಸಿತು. ದಿನದಾಟದ ಆರಂಭದಿಂದಲೂ ವಿಕೆಟ್ ಕಳೆದುಕೊಂಡು ಸಾಗಿದ ಲಂಕಾ ಅಂತಿಮವಾಗಿ 65 ಓವರ್‌ಗಳಲ್ಲಿ 174 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ರವೀಂದ್ರ ಜಡೇಜಾ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಂಟಕವಾದರು. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‍ಗಳ ಗೊಂಚಲು ಪಡೆದು ಮಿಂಚಿದರು. ಇದನ್ನೂ ಓದಿ: ಮಹಿಳಾ ವಿಶ್ವಕಪ್ 2022- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

    ನಂತರ 400 ರನ್‍ಗಳ ಹಿನ್ನಡೆಯೊಂದಿಗೆ ಫಾಲೋ ಆನ್ ಏರಿದ ಲಂಕಾ ಎರಡನೇ ಇನ್ನಿಂಗ್ಸ್‌ನಲ್ಲೂ ತನ್ನ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿತು. ಆರಂಭಿಕ ಆಟಗಾರ ಲಹಿರು ತಿರಿಮನ್ನೆ ಶೂನ್ಯ ಸುತ್ತಿದರೆ, ನಾಯಕ ದಿಮುತ್ ಕರುಣಾರತ್ನೆ 27 ರನ್ (46 ಎಸೆತ, 6 ಬೌಂಡರಿ)ಗೆ ಸುಸ್ತಾದರು. ಬಳಿಕ ಬಂದ ಪಾತುಂ ನಿಸ್ಸಾಂಕ 6 ರನ್ (19 ಎಸೆತ, 1 ಬೌಂಡರಿ) ಸಿಡಿಸಿ ಔಟ್ ಆದರು. 94 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾಗೆ ಏಂಜೆಲೊ ಮ್ಯಾಥ್ಯೂಸ್ 28 ರನ್ (75 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಧನಂಜಯ ಡಿಸಿಲ್ವ 30 ರನ್ (58 ಎಸೆತ, 5 ಬೌಂಡರಿ) ಸಿಡಿಸಿ ಅಲ್ಪ ಚೇತರಿಕೆ ನೀಡದರು. ಈ ಜೋಡಿ 4ನೇ ವಿಕೆಟ್‍ಗೆ 49 ರನ್ (102 ಎಸೆತ) ಗಳ ಜೊತೆಯಾಟವಾಡಿತು. ಇವರಿಬ್ಬರ ವಿಕೆಟ್ ಕಳೆದುಕೊಂಡ ಬಳಿಕ ಶ್ರೀಲಂಕಾ ಮತ್ತೆ ಕುಸಿತಕಂಡಿತು. ಟೀಂ ಇಂಡಿಯಾದ ಸ್ಪಿನ್ ಜೋಡಿ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ನಾ ಮುಂದು ತಾ ಮುಂದು ಎಂಬಂತೆ ವಿಕೆಟ್ ಬೇಟೆ ಆರಂಭಿಸಿದರು. ಇವರಿಬ್ಬರ ದಾಳಿಗೆ ನಲುಗಿದ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಾದ ಚರಿತ್ ಅಸಲಂಕಾ 20 ರನ್ (9 ಎಸೆತ, 2 ಬೌಂಡರಿ, 2 ಸಿಕ್ಸ್), ಸುರಂಗ ಲಕ್ಮಲ್ 0, ಲಸಿತ್ ಎಂಬುಲ್ದೇನಿಯ 2, ವಿಶ್ವ ಫೆರ್ನಾಂಡೋ 0, ಲಹಿರು ಕುಮಾರ್‌ 4 ರನ್‌ ವಿಕೆಟ್‌ ಒಪ್ಪಿಸಿದರು. ನಿರೋಶನ್ ಡಿಕ್ವೆಲ್ಲಾ ಅಜೇಯ 51  ರನ್‍  (81 ಎಸೆತ, 6 ಬೌಂಡರಿ) ಸಿಡಿಸಿ ಮಿಂಚಿದರು. ಅಂತಿಮವಾಗಿ 60 ಓವರ್‌ಗಳ ಅಂತ್ಯಕ್ಕೆ 178 ರನ್ ಗಳಿಗೆ ಆಲೌಟ್ ಆಗಿ ಸೋಲು ಕಂಡಿದೆ. ಇದನ್ನೂ ಓದಿ: ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ


    ಟೀಂ ಇಂಡಿಯಾ ಪರ ಭರ್ಜರಿ ದಾಳಿ ನಡೆಸಿದ ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ ತಲಾ  4 ವಿಕೆಟ್‌ ಪಡೆದು ಸಂಭ್ರಮಿಸಿದರು., ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು.

  • ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

    ರವೀಂದ್ರ ಜಡೇಜಾ ಅದ್ವಿತೀಯ ಸಾಧನೆ

    ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಭಾನುವಾರ ಒಂದೇ ಟೆಸ್ಟ್‌ನಲ್ಲಿ 150ಕ್ಕೂ ಅಧಿಕ ರನ್ ಸಿಡಿಸಿದ ಮತ್ತು ಐದು ವಿಕೆಟ್‍ಗಳನ್ನು ಪಡೆದ ವಿಶ್ವದ ಆರನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

    ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ನ 3ನೇ ದಿನದಾಟದಲ್ಲಿ ಜಡೇಜಾ ಐದು ವಿಕೆಟ್‍ಗಳನ್ನು ಕಬಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಜಡೇಜಾ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 175 ರನ್ ಸಿಡಿಸುವ ಮೂಲಕ ಭಾರತವನ್ನು 450 ರನ್‍ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಈ ಮೊದಲು ವಿನೂ ಮಂಕಡ್, ಡೆನಿಸ್ ಅಟ್ಕಿನ್ಸನ್, ಪೊಲ್ಲಿ ಉಮ್ರಿಗರ್, ಗ್ಯಾರಿ ಸೋಬರ್ಸ್ ಮತ್ತು ಮುಷ್ತಾಕ್ ಮೊಹಮ್ಮದ್ ಈ ಸಾಧನೆ ಮಾಡಿದ ಇತರ ಐದು ಆಟಗಾರರಾಗಿದ್ದರು.

    ಶ್ರೀ ಲಂಕಾ ತಂಡವು ಮೊದಲ ಇನ್ನಿಂಗ್ಸ್‍ನಲ್ಲಿ 138/4ಕ್ಕೆ ತಮ್ಮ 3ನೇ ದಿನದ ಆಟವಾವನ್ನು ಪ್ರಾರಂಭಿಸಿತ್ತು. ಲಂಕಾದ ಬ್ಯಾಟರ್‌ಗಳಾದ ಪಾತುಮ್ ನಿಸ್ಸಾಂಕ್ ಮತ್ತು ಚರಿತ್ ಅಸಲಂಕಾ ಜೋಡಿಯು ಒಟ್ಟು 53 ರನ್‍ಗಳನ್ನು ತಂಡಕ್ಕೆ ಸೇರಿಸಿದ್ದರು. ನಂತರದಲ್ಲಿ ಅಂತಿಮವಾಗಿ 58ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅಸಲಂಕಾ (29) ಅವರ ವಿಕೆಟ್ ತೆಗೆಯುವ ಮೂಲಕ ಈ ಜೋಡಿ ಆಟಕ್ಕೆ ಬ್ರೇಕ್ ಹಾಕಿದರು.

    ನಂತರದಲ್ಲಿ ಬ್ಯಾಟಿಂಗ್‍ಗೆ ಇಳಿದ ನಿರೋಶನ್ ಡಿಕ್ವೆಲ್ಲಾ ಕೇವಲ (2) ರನ್ ಗಳಿಸುವಷ್ಟರಲ್ಲಿ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ಜಡೇಜಾ ಸುರಂಗಾ ಲಕ್ಮಲ್ (0) ವಿಕೆಟ್‍ನ್ನು ಪಡೆಯುವಲ್ಲಿ ಯಶಸ್ವಿಯಾದರೂ.

    ಕೊನೆಯಲ್ಲಿ ಶ್ರೀಲಂಕಾ ತಂಡವು 174 ರನ್‍ಗಳಿಗೆ ಆಲೌಟ್ ಆಗಿದೆ. ಈ ವೇಳೆ ಭಾರತವು 400 ರನ್‍ಗಳ ಮುನ್ನಡೆ ಸಾಧಿಸಿದ್ದು, ಅತಿಥೇಯರ ಮೇಲೆ ಫಾಲೋ-ಆನ್ ಹೆರಿದ್ದಾರೆ.

  • ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ

    ಅಶ್ವಿನ್ ನೂತನ ಮೈಲಿಗಲ್ಲು – ಸಂಕಷ್ಟದಲ್ಲಿ ಲಂಕಾ

    ಮೊಹಾಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ಸ್ಪಿನ್ನರ್ ಆರ್. ಅಶ್ವಿನ್ ನೂತನ ಮೈಲಿಗಲ್ಲು ನೆಟ್ಟಿದ್ದಾರೆ.

    ಅಶ್ವಿನ್ ಒಟ್ಟು 85 ಟೆಸ್ಟ್ ಪಂದ್ಯದಿಂದ 432 ವಿಕೆಟ್ ಪಡೆಯುವ ಮೂಲಕ ರಿಚರ್ಡ್ ಹ್ಯಾಡ್ಲೀ ಅವರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದ್ದಾರೆ. ರಿಚರ್ಡ್ ಹ್ಯಾಡ್ಲೀ 86 ಟೆಸ್ಟ್‌ಗಳಿಂದ 431 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದೀಗ ಈ ದಾಖಲೆಯನ್ನು ಅಶ್ವಿನ್ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ

    ಎರಡನೇ ದಿನ ಟೀಂ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮಿಂಚುಹರಿಸಿದೆ. ಮೊದಲ ದಿನ 85 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 375 ರನ್ ಪೇರಿಸಿದ್ದ ಭಾರತ 2ನೇ ದಿನ ರವೀಂದ್ರ ಜಡೇಜಾರ ಆಕರ್ಷಕ ಶತಕ ಮತ್ತು ಆರ್ ಅಶ್ವಿನ್‍ರ ಅರ್ಧಶತಕದ ನೆರವಿನಿಂದ 550ರ ಗಡಿದಾಟಿತು. ಇದನ್ನೂ ಓದಿ: ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ಆರ್. ಅಶ್ವಿನ್ 61 ರನ್ (82 ಎಸೆತ, 8 ಬೌಂಡರಿ) ಸಿಡಿಸಿ ಔಟ್ ಆದರು. ಈ ಮೊದಲು ಜಡೇಜಾ ಜೊತೆ ಅಶ್ವಿನ್ 7ನೇ ವಿಕೆಟ್‍ಗೆ 130 ರನ್ (174 ಎಸೆತ) ಗಳ ಜೊತೆಯಾಟವಾಡಿದರು. ಎರಡನೇ ದಿನ ಜಡ್ಡು ಮನಮೋಹಕ ಹೊಡೆಗಳಿಂದ ಟೀಂ ಇಂಡಿಯಾದ ರನ್ ಶಿಖರವನ್ನು ಕಟ್ಟಿದರು. ಅಂತಿಮವಾಗಿ 129.2 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡ ಭಾರತ 574 ರನ್ ಪೇರಿಸುತ್ತಿದ್ದಂತೆ, ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು. ಜಡೇಜಾ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಮತ್ತು ಮೊಹಮ್ಮದ್ ಶಮಿ 20 ರನ್ (34 ಎಸೆತ, 3 ಬೌಂಡರಿ) ಸಿಡಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

    ನಂತರ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಆರಂಭದಲ್ಲೇ ಜಡೇಜಾ ಬೌಲಿಂಗ್‍ನಲ್ಲಿ ಶಾಕ್ ನೀಡಿದರು. ದಿಮುತ್ ಕರುಣಾರತ್ನೆ 28 ರನ್ (71 ಎಸೆತ, 5 ಬೌಂಡರಿ) ಸಿಡಿಸಿ ಜಡೇಜಾ ಬೌಲಿಂಗ್‍ನಲ್ಲಿ ಎಲ್‍ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು. ನಂತರ ಅಶ್ವಿನ್ 2 ವಿಕೆಟ್ ಕಿತ್ತು ಲಂಕಾ ಬ್ಯಾಟ್ಸ್‌ಮ್ಯಾನ್‌ಗಳಿಗೆ ಮುಳುವಾದರು. ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 108 ರನ್ ಗಳಿಸಿದ್ದು, ಇನ್ನೂ 466 ರನ್‍ಗಳ ಹಿನ್ನಡೆಯಲ್ಲಿದೆ.

  • ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ

    ಅಂದು ಸಚಿನ್, ಇಂದು ಜಡೇಜಾ – ದ್ರಾವಿಡ್, ರೋಹಿತ್ ನಡೆಗೆ ನೆಟ್ಟಿಗರು ಕಿಡಿ

    ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ವಿಚಾರಕ್ಕೆ ಈಗ ಕೋಚ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಟೀಕೆಗೆ ಗುರಿಯಾಗಿದ್ದಾರೆ.

    ಎರಡನೇ ದಿನದಾಟದ 129.2 ಓವರ್ ಆದಾಗ ಭಾರತ 8 ವಿಕೆಟ್ ನಷ್ಟಕ್ಕೆ 574 ರನ್ ಗಳಿಸಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ದ್ವಿಶತಕದ ಹೊಸ್ತಿಲಲ್ಲಿದ್ದ ರವೀಂದ್ರ ಜಡೇಜಾ ಆಟಕ್ಕೆ ಬ್ರೇಕ್ ಬಿತ್ತು. ಇದನ್ನೂ ಕಂಡ ಅಭಿಮಾನಿಗಳು ದ್ರಾವಿಡ್ ಮತ್ತು ರೋಹಿತ್ ಶರ್ಮಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ. ಇದನ್ನೂ ಓದಿ: ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ರವೀಂದ್ರ ಜಡೇಜಾ ಮೊದಲದಿನದಾಟದ ಅಂತ್ಯಕ್ಕೆ ಅಜೇಯ 45 ರನ್ (82 ಎಸೆತ, 5 ಬೌಂಡರಿ) ಸಿಡಿಸಿದ್ದರು. ಎರಡನೇ ದಿನದಾಟ ಮುಂದುವರಿಸಿದ ಜಡ್ಡು ಬೌಂಡರಿ, ಸಿಕ್ಸರ್‌ಗಳ ಅಬ್ಬರದಾಟ ಆರಂಭಿಸಿದರು. 87 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಮತ್ತಷ್ಟು ಬಿರುಸಿನ ಬ್ಯಾಟಿಂಗ್‍ಗೆ ಮುಂದಾದ ಜಡ್ಡು 160 ಎಸೆತಗಳಲ್ಲಿ 100 ರನ್ ಸಿಡಿಸಿ ಶತಕ ಪೂರೈಸಿದರು. ಆ ಬಳಿಕವು ತನ್ನ ಬ್ಯಾಟಿಂಗ್ ವೈಭವ ಮುಂದುವರಿಸಿದ ಜಡೇಜಾ 211 ಎಸೆತಗಳಲ್ಲಿ 150 ರನ್ ಪೂರೈಸಿದರು. ಅಲ್ಲದೆ ಮೊಹಮ್ಮದ್ ಶಮಿ ಜೊತೆ 9ನೇ ವಿಕೆಟ್‍ಗೆ 100 ರನ್ (91 ಎಸೆತ)ಗಳ ಜೊತೆಯಾಟವಾಡಿದರು. ಇದರಲ್ಲಿ 69 ರನ್ ಜಡೇಜಾ ಸಿಡಿಸಿದರೆ, ಇನ್ನೂಳಿದ 20 ರನ್ ಶಮಿ ಬ್ಯಾಟ್‍ನಿಂದ ಬಂದಿತ್ತು. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

    150 ರನ್ ಸಿಡಿಸಿದ ಬಳಿಕ ಜಡ್ಡು ಬ್ಯಾಟಿಂಗ್‍ನಲ್ಲಿ ಮತ್ತಷ್ಟು ಆಕರ್ಷಕ ಹೊಡೆತಗಳು ಕಂಡುಬಂದವು. ಜಡೇಜಾ ಚೊಚ್ಚಲ ದ್ವಿಶತಕ ಸಿಡಿಸುತ್ತಾರೆ ಎಂದು ಕಾಯುತ್ತಿದ್ದವರಿಗೆ ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು. ಜಡೇಜಾ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಸಿಡಿಸಿ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರೋಹಿತ್ ಶರ್ಮಾ ಅಷ್ಟೂತ್ತಿಗಾಗಲೇ ಡಿಕ್ಲೇರ್ ಘೋಷಿಸಿದ್ದರು. ಇದರಿಂದ ಜಡೇಜಾ ಚೊಚ್ಚಲ ದ್ವಿಶತಕವನ್ನು 25 ರನ್‍ಗಳ ಅಂತರದಿಂದ ತಪ್ಪಿಸಿಕೊಂಡರು. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

    https://twitter.com/AbduswamadMH/status/1500051643328446468

    ಇದೀಗ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಬಗ್ಗೆ ವಿವಿಧ ಕಾಮೆಂಟ್ ಹರಿದಾಡುತ್ತಿದೆ. ಈ ಹಿಂದೆ ಪಾಕಿಸ್ತಾನ ವಿರುದ್ಧ 2004ರಲ್ಲಿ ಮುಲ್ತಾನ್ ಟೆಸ್ಟ್ ವೇಳೆ ಸಚಿನ್ ತೆಂಡೂಲ್ಕರ್ 194 ರನ್ ಸಿಡಿಸಿದ್ದ ವೇಳೆ ಟೀಂ ಇಂಡಿಯಾದ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಡಿಕ್ಲೇರ್ ಘೋಷಿಸಿದ್ದರು. ದ್ವಿಶತಕ ಕೈತಪ್ಪಿದ್ದಕ್ಕೆ ಸಚಿನ್ ಅಭಿಮಾನಿಗಳು ರಾಹುಲ್ ದ್ರಾವಿಡ್ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಜಡೇಜಾ 175 ರನ್ ಸಿಡಿಸಿದ್ದ ವೇಳೆ ನಾಯಕ ರೋಹಿತ್ ಶರ್ಮಾ ಡಿಕ್ಲೇರ್ ಘೋಷಿಸಿದ್ದಾರೆ. ಇಷ್ಟು ಬೇಗ ಡಿಕ್ಲೇರ್ ಘೋಷಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ರೋಹಿತ್ ಮತ್ತು ದ್ರಾವಿಡ್ ಅವರನ್ನು ಟೀಕಿಸುತ್ತಿದ್ದಾರೆ.

  • ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ವಾರ್ನ್ ಭವಿಷ್ಯ ನುಡಿದ ಯುವಕ – ರಾಕ್‍ಸ್ಟಾರ್ ಜಡೇಜಾ ದಾಖಲೆಯ ಶತಕ

    ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನ ಭಾರತದ ಆಲ್‍ರೌಂಡರ್ ಆಟಗಾರ ರವೀಂದ್ರ ಜಡೇಜಾ ದಾಖಲೆಯ ಶತಕ ಸಿಡಿಸಿ ಮೆರೆದಿದ್ದಾರೆ.

    ಎರಡನೇ ದಿನದಾಟದ ಆರಂಭದಿಂದಲು ಬೌಂಡರಿ ಸಿಕ್ಸರ್‌ಗಳ ಮೂಲಕ ಅದ್ಭುತ ಇನ್ನಿಂಗ್ಸ್ ಕಟ್ಟಿದ ಜಡೇಜಾ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಶತಕದ ಬಳಿಕ ಮತ್ತೆ ರನ್ ವೇಗ ಹೆಚ್ಚಿಸಿಕೊಂಡ ಜಡ್ಡು ಅಜೇಯ 175 ರನ್ (228 ಎಸೆತ, 17 ಬೌಂಡರಿ, 3 ಸಿಕ್ಸ್) ಹೊಡೆಯುತ್ತಿದ್ದಂತೆ ನಾಯಕ ರೋಹಿತ್ ಶರ್ಮಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ಇದರೊಂದಿಗೆ ಜಡ್ಡು 7ನೇ ಕ್ರಮಾಂಕದಲ್ಲಿ ಬ್ಯಾಟ್ಸ್‌ಮ್ಯಾನ್ ಒಬ್ಬ ಸಿಡಿಸಿದ ಅತೀ ಹೆಚ್ಚು ರನ್‍ಗಳ ಸರದಾರ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: 10 ವರ್ಷದ ಹುಡುಗ ಎಂದಿದ್ದ ಶೇನ್ ವಾರ್ನ್ ಕನಸಲ್ಲಿ ಸಚಿನ್ ಬಂದಿದ್ದು ಹೇಗೆ..?

    ಈ ಮೊದಲು 7ನೇ ಕ್ರಮಾಂಕದಲ್ಲಿ ಕಪಿಲ್ ದೇವ್ 163 ರನ್ ಸಿಡಿಸಿದ ದಾಖಲೆ ಇತ್ತು. ಈ ದಾಖಲೆಯನ್ನು ಜಡೇಜಾ ಮುರಿದು ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. 7ನೇ ಕ್ರಮಾಂಕದಲ್ಲಿ ಅತೀ ಹೆಚ್ಚು ರನ್ ಸಿಡಿಸಿದವರ ಪಟ್ಟಿಯಲ್ಲಿ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, ಆ ಬಳಿಕ ಕಪಿಲ್ ದೇವ್, ನಂತರ ಕ್ರಮವಾಗಿ 159 ರನ್ ಸಿಡಿಸಿರುವ ರಿಷಬ್ ಪಂತ್ ಮತ್ತು 144 ರನ್ ಸಿಡಿಸಿರುವ ಮಹೇಂದ್ರ ಸಿಂಗ್ ಧೋನಿ ಇದ್ದಾರೆ. ಇದನ್ನೂ ಓದಿ: ಇಂದು ಭಾವನಾತ್ಮಕ ಪೋಸ್ಟ್ ಮಾಡಿದ್ದ ಶೇನ್ ವಾರ್ನ್

    ಜಡೇಜಾ ತನ್ನ ಟೆಸ್ಟ್ ಕ್ರಿಕೆಟ್‍ನ ಎರಡನೇ ಶತಕ ಸಿಡಿಸಿದ ಬಳಿಕ ನಿನ್ನೆ ಹೃದಾಯಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಲೆಜೆಂಡ್ ಕ್ರಿಕೆಟಿಗ ಶೇನ್ ವಾರ್ನ್ ಅವರಿಗೆ ಅರ್ಪಿಸಿದ್ದಾರೆ. ವಾರ್ನ್ ಈ ಹಿಂದೆ ರವೀಂದ್ರ ಜಡೇಜಾ ಮುಂದೊಂದು ದಿನ ಕ್ರಿಕೆಟ್‍ನ ರಾಕ್‍ಸ್ಟಾರ್ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು. ಇದೀಗ ಈ ಮಾತು ವಾರ್ನ್ ನಿಧನದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.

  • ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ

    ಶತಕ ವಂಚಿತ ಪಂತ್ – ಬೃಹತ್ ಮೊತ್ತದತ್ತ ಭಾರತ

    ಮೊಹಾಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬೃಹತ್ ಮುನ್ನಡೆಯತ್ತ ಸಾಗಿದೆ. ಬ್ಯಾಟಿಂಗ್‍ನಲ್ಲಿ ಮಿಂಚಿದ ವಿಕೆಟ್ ಕೀಪರ್ ರಿಷಬ್ ಪಂತ್ ಶತಕದಂಚಿನಲ್ಲಿ ಔಟ್ ಆಗಿ ನಿರಾಸೆ ಅನುಭವಿಸಿದ್ದಾರೆ.

    ಕೊಹ್ಲಿಯ ನೂರನೇ ಟೆಸ್ಟ್‌ನ ಸಂಭ್ರಮದೊಂದಿಗೆ ಆಡಿದ ಟೀಂ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನದೊಂದಿಗೆ ಗಮನಸೆಳೆದರು. ದಿನದಾಟದ ಅಂತ್ಯಕ್ಕೆ ಭಾರತ 85 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 375 ರನ್ ಪೇರಿಸಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಇದನ್ನೂ ಓದಿ: ನೂರನೇ ಟೆಸ್ಟ್ ಪಂದ್ಯದಲ್ಲಿ ನೂತನ ಮೈಲಿಗಲ್ಲು ಬರೆದ ವಿರಾಟ್ ಕೊಹ್ಲಿ

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‍ಗೆ 51 ರನ್ (61 ಎಸೆತ) ಸೇರಿಸಿ ಬೇರ್ಪಟ್ಟಿತು. ರೋಹಿತ್ 29 ರನ್ (28 ಎಸೆತ, 6 ಬೌಂಡರಿ) ಮತ್ತು ಅಗರ್ವಾಲ್ 33 ರನ್ (49 ಎಸೆತ, 5 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ಒಂದಾದ ಹನುಮ ವಿಹಾರಿ ಮತ್ತು ವಿರಾಟ್ ಕೊಹ್ಲಿ ಭರ್ಜರಿಯಾಗಿ ಬ್ಯಾಟ್‍ಬೀಸಿದರು. ಈ ಜೋಡಿ ಮೂರನೇ ವಿಕೆಟ್‍ಗೆ 90 ರನ್ (155 ಎಸೆತ) ಜೊತೆಯಾಟವಾಡಿ ಮಿಂಚಿತು.

    ವಿಹಾರಿ 58 ರನ್ (128 ಎಸೆತ, 5 ಬೌಂಡರಿ) ಅರ್ಧಶತಕ ಸಿಡಿಸಿ ಗಮನಸೆಳೆದರೆ, ಕೊಹ್ಲಿ 45 ರನ್ (76 ಎಸೆತ, 5 ಬೌಂಡರಿ) ಸಿಡಿಸಿ ಅರ್ಧಶತಕ ವಂಚಿತರಾದರು. ಇವರಿಬ್ಬರ ಬಳಿಕ ಭಾರತವನ್ನು ಆಧಾರಿಸಿದ್ದು, ರಿಷಬ್ ಪಂತ್, ತಮ್ಮ ಭರ್ಜರಿ ಹೊಡೆತಗಳ ಮೂಲಕ ಬೌಂಡರಿ, ಸಿಕ್ಸರ್‌ಗಳ ಮೂಲಕ ಲಂಕಾ ಬೌಲರ್‌ಗಳ ಬೆವರಿಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 27 ರನ್ (48 ಎಸೆತ, 3 ಬೌಂಡರಿ) ಬಾರಿಸಿ ಎಲ್‍ಬಿಡಬ್ಲ್ಯೂ ಆಗಿ ಔಟ್ ಆದರು. ಇದನ್ನೂ ಓದಿ: ಅಕ್ಷಯ್ ಹುಕ್ ಸ್ಟೆಪ್‌ಗೆ ಫೇಮಸ್ ಕ್ರಿಕೆಟಿಗರು ಫಿದಾ

    ಆ ಬಳಿಕ ಒಂದಾದ ಪಂತ್, ರವೀಂದ್ರ ಜಡೇಜಾ ಜೋಡಿ ಇನ್ನೊಂದು ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ನೆರವಾಯಿತು. 6 ನೇ ವಿಕೆಟ್‍ಗೆ 104 ರನ್ (118 ಎಸೆತ) ಕೊಳ್ಳೆ ಹೊಡೆದ ಈ ಜೋಡಿ ಲಂಕಾ ತಂಡಕ್ಕೆ ಕಾಟ ಕೊಟ್ಟಿತ್ತು. ಈ ವೇಳೆ ಇನ್ನೇನೂ ಶತಕದಂಚಿನಲ್ಲಿದ್ದ ಪಂತ್ 96 ರನ್ (97 ಎಸೆತ, 9 ಬೌಂಡರಿ, 4 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡು ಶತಕ ವಂಚಿತರಾದರು. ಇದನ್ನೂ ಓದಿ: ಆಸ್ಟ್ರೇಲಿಯಾದ ಲೆಜೆಂಡರಿ ವಿಕೆಟ್ ಕೀಪರ್ ರಾಡ್ ಮಾರ್ಷ್ ವಿಧಿವಶ

    ಮೊದಲ ದಿನದಾಟದಂತ್ಯಕ್ಕೆ ರವೀಂದ್ರ ಜಡೇಜಾ ಅಜೇಯ 45 ರನ್ (82 ಎಸೆತ, 5 ಬೌಂಡರಿ) ಮತ್ತು ಆರ್ ಅಶ್ವಿನ್ 10 ರನ್ (11 ಎಸೆತ, 2 ಬೌಂಡರಿ) ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.