Tag: Sri Lanka

  • ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಲಂಕಾ T20, ಏಕದಿನ ಕ್ರಿಕೆಟ್‌ಗೆ ಹರ್ಮನ್ ಪ್ರೀತ್ ಕೌರ್ ನಾಯಕಿ

    ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕಿಯಾಗಿ ಬಿಸಿಸಿಐ ಘೋಷಿಸಿದೆ.

    ಮುಂದೆ ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ತಂಡದ ನಾಯಕಿಯಾಗಿ ಹರ್ಮನ್ ಪ್ರೀತ್ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದಾನ ಉಪನಾಯಕಿಯಾಗಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಭಾರತ ಕ್ರಿಕೆಟ್ ತಂಡದ ನಾಯಕಿಗೆ ನೆಟ್ಟಿಗರ ಪ್ರತಿಕ್ರಿಯೆ

    ಭಾರತದ ಕೈಗೊಂಡಿರುವ ಶ್ರೀಲಂಕಾ ಪ್ರವಾಸಕ್ಕಾಗಿ ತಂಡವನ್ನು ಆಯ್ಕೆ ಮಾಡಲು ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಇಂದು ಸಭೆ ನಡೆಸಿತು. ಮುಂದಿನ ಪ್ರವಾಸದಲ್ಲಿ ಶ್ರೀಲಂಕಾದ ದಂಬುಲಾ ಹಾಗೂ ಕ್ಯಾಂಡಿಯಲ್ಲಿ 3 ಟಿ20 ಹಾಗೂ ಏಕದಿನ ಪಂದ್ಯಗಳು ನಡೆಯಲಿವೆ ಎಂದು ಸಮಿತಿ ತಿಳಿಸಿದೆ.

    ಟಿ20 ಟೀಂ: ಶ್ರೀಲಂಕಾದೊಂದಿಗೆ ನಡೆಯಲಿರುವ ಟಿ20 ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ರಿಚಾ ಗೋಶ್(ವಿಕೆಟ್ ಕೀಪರ್), ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್, ರಾಧಾ ಯಾದವ್ ಹಾಗೂ ಜೆಮಿಮಾ ರಾಡ್ರಿಗಸ್.

    ಏಕದಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್(ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ರಿಚಾ ಗೋಶ್ ಮತ್ತು ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಎಸ್.ಮೇಘನಾ, ದೀಪ್ತಿ ಶರ್ಮಾ, ಪೂನಂ ಯಾದವ್, ರಾಜೇಶ್ವರಿ ಗಾಯಕ್ವಾಡ್, ಸಿಮ್ರನ್ ಬಹದ್ದೂರ್, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ರೇಣುಕಾ ಸಿಂಗ್ ಹಾಗೂ ಹರ್ಲೀನ್ ಡಿಯೋಲ್ ಏಕದಿನ ಪಂದ್ಯದಲ್ಲಿ ಶ್ರೀಲಂಕಾದೊಂದಿಗೆ ಸೆಣಸಲಿದ್ದಾರೆ.

  • ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಲಂಕಾಗೆ 3.3 ಟನ್‌ ಔಷಧ ಪೂರೈಕೆ – ಭಾರತ ಸರ್ಕಾರದಿಂದ ನೆರವು

    ಕೊಲಂಬೊ: ಸತತ ಆರ್ಥಿಕ ದಿವಾಳಿತನದಿಂದ ಔಷಧಗಳ ಕೊರತೆ ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ತನ್ನ ನೆರವನ್ನು ಮುಂದುವರಿಸಿದೆ.

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಔಷಧಗಳ ಕೊರತೆ ಎದುರಿಸುತ್ತಿದ್ದ ಶ್ರೀಲಂಕಾ, ತುರ್ತು ಚಿಕಿತ್ಸೆಗಳಿಗೆ ಮಾತ್ರವೇ ಆದ್ಯತೆ ನೀಡಿತ್ತು. ಪ್ರಮುಖ ಶಸ್ತ್ರ ಚಿಕಿತ್ಸೆಗಳನ್ನು ನಿಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸತತವಾಗಿ ಶ್ರೀಲಂಕಾದ ನೆರವಿಗೆ ನಿಂತಿರುವ ಭಾರತ ಸರ್ಕಾರ ಸರಿ ಸುಮಾರು 3.3 ಟನ್‌ಗಳಷ್ಟು ಅಗತ್ಯ ಔಷಧಗಳನ್ನು ಸರಬರಾಜು ಮಾಡಿದೆ. ಇದನ್ನೂ ಓದಿ: ʻಒಂದು ಕುಟುಂಬ, ಒಂದು ಸರ್ಕಾರಿ ಕೆಲಸʼ – ನೀತಿಯನ್ನು ಎತ್ತಿ ಹಿಡಿದ ಹೈಕೋರ್ಟ್‌

    ಜಾಫ್ನಾ ಟೀಚಿಂಗ್‌ ಆಸ್ಪತ್ರೆ (ಜೆಟಿಎಚ್‌)ಗೆ 2 ಟ್ರಕ್‌ ಲೋಡ್‌ಗಳಲ್ಲಿ 3.3 ಟನ್‌ಗಳಷ್ಟು ಜೀವ ರಕ್ಷಕ ಔಷಧಿ ಹಾಗೂ ವೈದ್ಯಕೀಯ ಸಾಧನಗಳನ್ನು ಸರಬರಾಜು ಮಾಡಿದೆ. ಭಾರತದ ಕನ್ಸೊಲೆಟ್‌ ಜನರಲ್‌ ಜಾಫ್ನಾ ರಾಕೇಶ್ ನಟರಾಜ್ ಅವರು ಜಾಫ್ನಾ ಆಸ್ಪತ್ರೆ ನಿರ್ದೇಶಕ ಡಾ.ನಂತಕುಮಾರ್ ಅವರಿಗೆ ಔಷಧಗಳನ್ನು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ 50ನೇ ಹುಟ್ಟುಹಬ್ಬಕ್ಕೆ 111 ಅಡಿ ಎತ್ತರ ಕೇಕ್ ಸಿದ್ಧ

    ಮಾರ್ಚ್ 2022 ರಲ್ಲಿ ಕೊಲಂಬೊದಲ್ಲಿರುವ ಸುವಾಸೇರಿಯಾ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈ ಶಂಕರ್ ಅವರಿಗೆ ಫೌಂಡೇಶನ್ ಎದುರಿಸುತ್ತಿರುವ ಔಷಧಗಳ ಕೊರತೆಯ ಬಗ್ಗೆ ಲಂಕಾದ ಅಧಿಕಾರಿ ಬಾಗ್ಲೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಶ್ರೀಲಂಕಾದ ನೆರವಿಗೆ ಮುಂದಾಗಿದೆ.

    ಮೇ 27 ರಂದು, ಶ್ರೀಲಂಕಾದಲ್ಲಿ ಭಾರತದ ಹಂಗಾಮಿ ಹೈ ಕಮಿಷನರ್ ವಿನೋದ್ ಕೆ. ಜೇಕಬ್ ಅವರು ಕೊಲಂಬೊದಲ್ಲಿ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಅವರಿಗೆ 25 ಟನ್‌ಗಳಷ್ಟು ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಿದ್ದರು. ಇದೀಗ ಮತ್ತೆ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಲಾಗಿದೆ.

  • 1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    1 ಲೀಟರ್ ಅಡುಗೆ ಎಣ್ಣೆ 555 ರೂ., ಕೆಜಿ ತುಪ್ಪ 605 ರೂ.ಗೆ ದಿಢೀರ್ ಏರಿಕೆ

    ಇಸ್ಲಾಮಾಬಾದ್: ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ದಿನೇ ದಿನೇ ಪರಿಸ್ಥಿತಿ ಕ್ಷೀಣಿಸುತ್ತಿದೆ. ಇದರಿಂದ ಜನಸಾಮಾನ್ಯರೂ ಪರದಾಡುವಂತಾಗಿದೆ. ಇದೀಗ ನೆರೆಯ ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಎದುರಾಗುತ್ತಿದೆ.

    ಆದಾಯದ ಬಹುಪಾಲನ್ನು ಸೇನೆಗೆ ಖರ್ಚು ಮಾಡುವ ಪಾಕಿಸ್ತಾನದಲ್ಲಿ ಇದೀಗ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಖಾದ್ಯ ತೈಲ, ತುಪ್ಪ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    Shehbaz Sharif

    ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಖಾದ್ಯ ತೈಲ ಬೆಲೆ ಗಗನಕ್ಕೇರಿದೆ. ಖಾದ್ಯ ತೈಲ ಒಂದೇ ಸಮನೇ 208 ರೂಪಾಯಿ ಹಾಗೂ ತುಪ್ಪದ ಬೆಲೆ ಪ್ರತಿ ಕೆಜಿಗೆ 213 ರೂಪಾಯಿ ಹೆಚ್ಚಾಗಿದೆ. ಇದರಿಂದ ಖಾದ್ಯ ತೈಲ 1 ಕೆಜಿಗೆ 555 ರೂಪಾಯಿ ಆಗಿದ್ದರೆ, 1 ಕೆಜಿ ತುಪ್ಪದ ಬೆಲೆ 605 ರೂಪಾಯಿ ಆಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 540 ರೂಪಾಯಿ ಇದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯ ಸರಿದೂಗಿಸಲು ಆಮದು ಮೇಲೆ ನಿರ್ಬಂಧ ಹೇರಿದೆ. ಆದರೂ ಪರಿಸ್ಥಿತಿ ಹದಗೆಡುತ್ತಿದೆ.

    ಇಂಡೋನೇಷಿಯಾದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಖಾದ್ಯ ತೈಲ ಹಾಗೂ ತುಪ್ಪದ ಬೆಲೆ ಶೇ.300 ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಜನರ ಮುಂದೆಯೇ ಬೆತ್ತಲೆ ಫೋಟೋ ಶೂಟ್ : ನಟಿ ಪೂನಂ ಪಾಂಡೆಗೆ ಸಂಕಷ್ಟ

    ಪಾಕ್ ರೂಪಾಯಿ ಬೆಲೆ ಪಾತಾಳಕ್ಕೆ: ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಪಾಕ್‌ನಲ್ಲಿ ರೂಪಾಯಿಯ ಮೌಲ್ಯ ದಾಖಲೆ ಪ್ರಮಾಣದ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜೊತೆ ಪಾಕಿಸ್ತಾನ ಪ್ಯಾಕೇಜ್ ಮಾತುಕತೆ ನಡೆಸುತ್ತಿದೆ. ಇದರ ನಡುವೆ ರೂಪಾಯಿ ಶೇ.7 ರಷ್ಟು ಕುಸಿತವಾಗಿದೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

    ಆರ್ಥಿಕ ಬಿಕ್ಕಟ್ಟು, ವಿದೇಶಿ ಸಾಲ, ವಿದೇಶಿ ವಿನಿಮಯ ಕೊರತೆ, ರೂಪಾಯಿ ಕುಸಿತ ಸೇರಿದಂತೆ ಹಲವು ಸಮಸ್ಯೆಗಳು ಪಾಕಿಸ್ತಾನ ಎದುರಿಸುತ್ತಿದೆ. ಇದರ ನಡುವೆ ಮುಂದಿನ ಹಣಕಾಸು ವರ್ಷದಲ್ಲಿ ಅಮೆರಿದಿಂದ ಪಡೆದಿರುವ 21 ಶತಕೋಟಿ ವಿದೇಶಿ ಸಾಲ ಮರುಪಾವತಿಸಬೇಕಿದೆ. ವಿದೇಶಿ ವಿನಿಮಯ ಕೊರತೆ ಎದುರಿಸುತ್ತಿರುವ ಪಾಕಿಸ್ತಾನ ತಲೆ ಮೇಲೆ ಕೈಹೊತ್ತು ಕೂತಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಜೊತೆ ಸಾಲಕ್ಕೆ ಮಾತುಕತೆ ನಡೆಸುತ್ತಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

  • ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    ಶ್ರೀಲಂಕಾದಲ್ಲಿ ಇಂಧನ ಕೊರತೆ – ಪರಿಹಾರಕ್ಕೆ ಸೈಕಲ್ ಸೇವೆ ಅನಾವರಣ

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ತೀವ್ರಗತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂಧನ ಕೊರತೆಯೊಂದಿಗೂ ಹೋರಾಡುತ್ತಿದೆ. ಇದೀಗ ನಾಗರಿಕರಿಗೆ ಸಹಾಯ ಮಾಡಲು ಶ್ರೀಲಂಕಾದ ಮುಖ್ಯ ಬಂದರು ಪ್ರದೇಶದಲ್ಲಿ ಉಚಿತ ಬೈಸಿಕಲ್ ಸೇವೆಯನ್ನು ಅನಾವರಣಗೊಳಿಸಲಾಗಿದೆ.

    ಶ್ರೀಲಂಕಾದಲ್ಲಿ ನಗದು ಕೊರತೆಯಿರುವ ಕಾರಣ ಇತರ ದೇಶಗಳಿಂದ ತೈಲವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಇಂಧನ ಚಾಲಿತ ವಾಹನಗಳನ್ನೂ ಜನರಿಂದ ಬಳಸಲು ಸಾಧ್ಯವಾಗುತ್ತಿಲ್ಲ. ಇದೀಗ ದ್ವೀಪ ರಾಷ್ಟ್ರ ಇಂಧನದ ಅವಶ್ಯಕತೆ ಇಲ್ಲದ ಸೈಕಲ್‌ಗಳನ್ನು ಜನರಿಗೆ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ದೇಶದ 10 ಕೋಟಿ ರೈತರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್

    ಡಾಲರ್ ಕೊರತೆಯಿರುವ ಕಾರಣ ಶ್ರೀಲಂಕಾದಲ್ಲಿ ಇಂಧನ ಹಾಗೂ ಇತರ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ವಾಹನ ಚಾಲಕರು ಗ್ಯಾಸ್ ಸ್ಟೇಶನ್‌ಗಳಲ್ಲಿ ಪಡಿತರ ಇಂಧನ ಪಡೆಯಲು ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಇದೀಗ ಶ್ರೀಲಂಕಾ ಇಂಧನವನ್ನು ಉಳಿಸುವ ಸಲುವಾಗಿ ಜನರಿಗೆ ಸೈಕಲ್ ಬಳಸಲು ಉತ್ತೇಜಿಸುತ್ತಿದೆ. ಇದನ್ನೂ ಓದಿ: ಯುರೋಪಿಯನ್ ಒಕ್ಕೂಟದ ಒಂದು ನಿರ್ಧಾರದಿಂದ ತೈಲ ಬೆಲೆ ಭಾರೀ ಏರಿಕೆ

    ಬಂದರಿನ ಕಡೆ ಬರುವ ಜನರಿಗೆ ಸದ್ಯ ಬಳಕೆಯಾಗದೇ ಇರುವ ರೈಲು ಮಾರ್ಗಗಳನ್ನು ಸೈಕಲ್ ಟ್ರ್ಯಾಕ್ ಆಗಿ ನಿರ್ಮಿಸಲಾಗಿದೆ ಎಂದು ವರದಿಯಾಗಿದೆ. ಬಂದರು, ಹಡಗು ಹಾಗೂ ಕಡಲ ತೀರದ ಜನನಿಬಿಡ ವ್ಯಾಪಾರ ಮಾರ್ಗಗಳಲ್ಲಿ ಜನರಿಗೆ ಹಾಗೂ ಮುಖ್ಯವಾಗಿ ಕಾರ್ಮಿಕರಿಗೆ ಸಾಯವಾಗುವಂತೆ 100 ಸೈಕಲ್‌ಗಳನ್ನು ಕೊಡುಗೆಯಾಗಿ ನೀಡಲಾಗಿದೆ ಎಂದು ಶ್ರೀಲಂಕಾ ಬಂದರು ಪ್ರಾಧಿಕಾರದ ಅಧ್ಯಕ್ಷ ಪ್ರಶಾಂತ್ ಜಯಮಣ್ಣ ಹೇಳಿದ್ದಾರೆ.

  • ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    ಶ್ರೀಲಂಕಾದಲ್ಲಿ ಲೀಟರ್‌ ಪೆಟ್ರೋಲ್‌ಗೆ 420 ರೂ., ಡೀಸೆಲ್‌ಗೆ 400 ರೂ.

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಪೆಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌ ಬೆಲೆ ಬರೋಬ್ಬರಿ 420 ರೂ. ಹಾಗೂ ಡೀಸೆಲ್‌ ಬೆಲೆ 400 ರೂ. ತಲುಪಿದೆ.

    ಶ್ರೀಲಂಕಾ ಸರ್ಕಾರ, ಪೆಟ್ರೋಲ್ ಬೆಲೆ ಶೇಕಡಾ 24.3 ಮತ್ತು ಡೀಸೆಲ್ ಬೆಲೆ ಶೇಕಡಾ 38.4 ರಷ್ಟು ಹೆಚ್ಚಿಸಿದೆ. ಅಗತ್ಯ ವಸ್ತುಗಳ ಖರೀದಿಗೆ ವಿದೇಶಿ ಕರೆನ್ಸಿ ಕೊರತೆ ಕಾರಣದಿಂದಾಗಿ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಪರಿಣಾಮವಾಗಿ ಇಂಧನ ಬೆಲೆಯಲ್ಲೂ ದಾಖಲೆಯ ಏರಿಕೆಯಾಗಿದೆ. ಇದನ್ನೂ ಓದಿ: ಮಹಿಳೆಯನ್ನು ಗುದ್ದಿ ಕೊಂದ ಟಗರಿಗೆ 3 ವರ್ಷ ಜೈಲು ಶಿಕ್ಷೆ

    SRILANKA

    ಏಪ್ರಿಲ್ 19 ರಿಂದ ಎರಡನೇ ಬಾರಿಗೆ ಇಂಧನ ಬೆಲೆ ಏರಿಕೆಯಾಗಿತ್ತು. ಈಗ ಹೆಚ್ಚು ಬಳಕೆಯಾಗುವ ಆಕ್ಟೇನ್ 92 ಪೆಟ್ರೋಲ್ ಬೆಲೆ 420 ರೂ. (1.17 ಡಾಲರ್‌) ಮತ್ತು ಡೀಸೆಲ್ 400 ರೂ. (1.11 ಡಾಲರ್) ಲೀಟರ್‌ಗೆ ಸಾರ್ವಕಾಲಿಕ ಗರಿಷ್ಠ ತಲುಪಿದೆ.

    ಆಕ್ಟೇನ್ 92 ಪೆಟ್ರೋಲ್ ಪ್ರತಿ ಲೀಟರ್‌ಗೆ ಶೇಕಡಾ 24.3 (82 ರೂ.) ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ ಶೇಕಡಾ 38.4 (111 ರೂ.) ಹೆಚ್ಚಿಸುವ ನಿರ್ಧಾರವನ್ನು ರಾಜ್ಯ ಇಂಧನ ಘಟಕವಾದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (CPC) ತೆಗೆದುಕೊಂಡಿದೆ. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ

    ಇಂದು ಮುಂಜಾನೆ 3 ಗಂಟೆಯಿಂದ ಇಂಧನ ಬೆಲೆ ಪರಿಷ್ಕರಣೆಯಾಗಲಿದ್ದು, ಕ್ಯಾಬಿನೆಟ್ ಅನುಮೋದಿಸಿದ ಇಂಧನ ಬೆಲೆ ಸೂತ್ರವನ್ನು ಬೆಲೆಗಳನ್ನು ಪರಿಷ್ಕರಿಸಲು ಅನ್ವಯಿಸಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಸ್ಕರ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

    ಅದಕ್ಕೆ ಅನುಗುಣವಾಗಿ ಸಾರಿಗೆ ಮತ್ತು ಇತರ ಸೇವಾ ಶುಲ್ಕಗಳ ಪರಿಷ್ಕರಣೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸೂತ್ರವನ್ನು ಪ್ರತಿ ಹದಿನೈದು ದಿನಗಳು ಅಥವಾ ತಿಂಗಳಿಗೊಮ್ಮೆ ಅನ್ವಯಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

  • ಎದೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದ ಲಂಕಾ ಕ್ರಿಕೆಟಿಗ

    ಎದೆ ಹಿಡಿದುಕೊಂಡು ಮೈದಾನದಲ್ಲೇ ಕುಸಿದು ಬಿದ್ದ ಲಂಕಾ ಕ್ರಿಕೆಟಿಗ

    ಢಾಕಾ: ಬಾಂಗ್ಲಾದೇಶದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ವೇಳೆ ಶ್ರೀಲಂಕಾ ಕ್ರಿಕೆಟಿಗ ಕುಶಲ್ ಮೆಂಡಿಸ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಮೈದಾನದಲ್ಲೇ ಎದೆ ಹಿಡಿದುಕೊಂಡು ಕುಸಿದು ಬಿದ್ದಿದ್ದಾರೆ.

    ಭೋಜನ ವಿರಾಮಕ್ಕೆ ಮುನ್ನ ಕೊನೆಯ ಓವರ್‌ನಲ್ಲಿ ಮೆಂಡಿಸ್‌ಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಕುಸಿದಿದ್ದಾರೆ. ಕೂಡಲೇ ಅವರನ್ನು ವೈದ್ಯಕೀಯ ಸಿಬ್ಬಂದಿ ಪರೀಕ್ಷಿಸಿದೆ. ಬಳಿಕ ಎದೆ ಹಿಡಿದುಕೊಂಡೇ ಅವರು ಹೊರಗೆ ತೆರಳಿದ್ದಾರೆ. ಮೆಂಡೀಸ್ ಅವರನ್ನು ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯ ಹೊಸೈನ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂದ್ಯವಾಡದೇ ಆರ್‌ಸಿಬಿ ಮನೆಗೆ ಬರುತ್ತಾ?

    https://twitter.com/Rahulc7official/status/1528639273448067072?ref_src=twsrc%5Etfw%7Ctwcamp%5Etweetembed%7Ctwterm%5E1528639273448067072%7Ctwgr%5E%7Ctwcon%5Es1_&ref_url=https%3A%2F%2Fwww.businessupturn.com%2Fsports%2Fcricket%2Fban-vs-sl-kusal-mendis-gets-hospitalised-as-he-leaves-the-match-holding-his-chest%2F

    ಮೆಂಡಿಸ್ ಅವರಿಗೆ ನಿರ್ಜಲೀಕರಣ (ನೀರಿನಾಂಶ ಕೊರತೆ) ಸಮಸ್ಯೆಯಿತ್ತು. ಅದೇ ಅವರ ಅನಾರೋಗ್ಯಕ್ಕೆ ಕಾರಣವಾಗಿರಬಹುದು. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಸ್ಪಷ್ಟ ಮಾಹಿತಿ ನೀಡಲಾಗುವುದು ಎಂದು ಬಿಸಿಬಿ ವೈದ್ಯ ಮಂಜೂರ್ ಹೊಸೈನ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಪಂದ್ಯ ಗೆದ್ದು IPL ಸೀಸನ್‌ಗೆ ಗುಡ್‌ಬೈ ಹೇಳಿದ ಮುಂಬೈ- ಸೋಲಿಗೆ ಕಾರಣ ಬಿಚ್ಚಿಟ್ಟ ರಿಷಭ್ ಪಂತ್

    ಕುಶಲ್ ಮೆಂಡಿಸ್ ಸ್ಥಾನಕ್ಕೆ ಕಮಿಂದು ಮೆಂಡಿಸ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮೆಂಡಿಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದರು. 2ನೇ ಟೆಸ್ಟ್ ಪಂದ್ಯದಲ್ಲಿ 48 ರನ್‌ಗಳಿಸಿದ್ದರು. ಎದೆನೋವು ಕಾಣಿಸಿಕೊಂಡ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು – ಭಾರತದಿಂದ ಅಗತ್ಯ ವಸ್ತುಗಳ ಪೂರೈಕೆ

    ಕೊಲಂಬೋ: ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಅಕ್ಕಿ, ಔಷಧ, ಹಾಲಿನ ಪುಡಿ ಹೀಗೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ. ಭಾನುವಾರ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋ ತಲುಪಿದ ಹಡಗು, ಅಗತ್ಯ ವಸ್ತುಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿದೆ.

    9,000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 25 ಮೆಟ್ರಿಕ್ ಟನ್‌ಗಿಂತ ಹೆಚ್ಚು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಲಂಕಾದ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಅವರಿಗೆ ಹಸ್ತಾಂತರಿಸಿದರು. ಇದನ್ನೂ ಓದಿ: ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಸೌದಿ ಅರೇಬಿಯಾ

    ಶ್ರೀಲಂಕಾ ಇಂದು ಭಾರತದಿಂದ ಹಾಲಿನ ಪುಡಿ, ಅಕ್ಕಿ ಹಾಗೂ ಔಷಧ ಸೇರಿದಂತೆ 200 ಕೋಟಿ ರೂ. ಮೌಲ್ಯದ ಮಾನವೀಯ ನೆರವು ಪಡೆದಿದೆ. ಈ ಸಹಾಯಕ್ಕೆ ತಮಿಳುನಾಡು ಮುಖ್ಯಮಂತ್ರಿಯವರಿಗೆ ಹಾಗೂ ಭಾರತಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ- ವಿಮಾನ ಸಂಚಾರದಲ್ಲಿ ತೊಡಕು

    ಭಾರತದ ಜನರು ಶ್ರೀಲಂಕಾದ ಜನರಿಗೆ 200 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ಕಿ, ಹಾಲಿನ ಪುಡಿ, ಔಷಧಿಯನ್ನು ನೀಡಿದೆ. ಇದನ್ನು ಕೊಲಂಬೋದಲ್ಲಿ ಜಿಎಲ್ ಪೀರೀಸ್ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

  • ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    ಶ್ರೀಲಂಕಾದಲ್ಲಿ ಸರ್ಕಾರಿ ಕಚೇರಿ, ಶಾಲೆ – ಕಾಲೇಜುಗಳು ಬಂದ್‌

    ಕೊಲಂಬೋ: ತೀವ್ರ ಸಂಕಷ್ಟದಲ್ಲಿರುವ ಶ್ರೀಲಂಕಾದ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಮುಖ್ಯವಾಗಿ ಇಂಧನ ಕೊರತೆ ಆ ದೇಶವನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.

    ಪೆಟ್ರೋಲ್ ಖಾಲಿಯಾದ ಪರಿಣಾಮ ದ್ವೀಪ ರಾಷ್ಟ್ರದಲ್ಲಿ ಇದೀಗ ಶಾಲೆ ಕಾಲೇಜು ಬಂದ್ ಆಗಿದೆ. ತುರ್ತು ಸೇವೆಗಳ ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಕಚೇರಿಗೆ ರಜೆ ನೀಡಲಾಗಿದೆ. ಈ ಪರಿಸ್ಥಿತಿ ಎಷ್ಟು ದಿನ ಮುಂದುವರೆಯಲಿದೆ ಎಂಬುದು ಗೊತ್ತಿಲ್ಲ. ಇದನ್ನೂ ಓದಿ: ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

    ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ ತನ್ನ 70 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಲಕಟ್ಟಲು ಆಗದೇ ಕೈ ಎತ್ತಿದೆ. 78 ಮಿಲಿಯನ್ ಡಾಲರ್ ಸಾಲಪಾವತಿಸಲು ನೀಡಲಾಗಿದ್ದ ಗ್ರೇಸ್ ಅವಧಿ ಶುಕ್ರವಾರಕ್ಕೆ ಕೊನೆಯಾಗಿದೆ. ಈ ಮೂಲಕ ಲಂಕಾ ಅಧಿಕೃತವಾಗಿ ಡಿಫಾಲ್ಟ್ ದೇಶಗಳ ಬಗ್ಗೆ ಪಟ್ಟಿ ಸೇರಿದೆ. ಎರಡು ಕ್ರೆಡಿಟ್ ಏಜೆನ್ಸಿಗಳು ಡಿಫಾಲ್ಟ್ ದೇಶ ಎಂದು ದೃಢೀಕರಿಸಿವೆ.

  • ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲಬೇಡಿ – ಲಂಕಾ ಸರ್ಕಾರ ನಾಗರಿಕರಲ್ಲಿ ಮನವಿ

    ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲಬೇಡಿ – ಲಂಕಾ ಸರ್ಕಾರ ನಾಗರಿಕರಲ್ಲಿ ಮನವಿ

    ಕೊಲಂಬೋ: ಶ್ರೀಲಂಕಾ ತನ್ನ ಸ್ವತಂತ್ರ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಇದೀಗ ಎದುರಿಸುತ್ತಿದೆ. ಆಹಾರದಿಂದ ಹಿಡಿದು ಅಡುಗೆ ಅನಿಲದವರೆಗಿನ ತೀವ್ರವಾದ ಕೊರತೆಯನ್ನು ದ್ವೀಪರಾಷ್ಟ್ರ ಅನುಭವಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಶೇ.30 ರಷ್ಟು ಏರಿಕೆಯಾಗಿದ್ದು, ಸಾಮಾಜಿಕವಾಗಿ ಅಶಾಂತಿ, ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದೆ.

    ಇದೀಗ ಕೈಗೆಟಕುವಷ್ಟು ದೂರದಲ್ಲಿ ಇಂಧನ ಹೊತ್ತ ಹಡಗುಗಳು ಪಾವತಿಗಾಗಿ ಕಾಯುತ್ತಿದ್ದರೂ ಶ್ರೀಲಂಕಾದ ಬಳಿ ಡಾಲರ್‌ಗಳಿಲ್ಲದ ಕಾರಣ ಖರೀದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶ್ರೀಲಂಕಾ ಸರ್ಕಾರ ತನ್ನ ನಾಗರಿಕರಲ್ಲಿ ಇಂಧನ ಕೊಳ್ಳಲು ಸರದಿ ಸಾಲಿನಲ್ಲಿ ನಿಲ್ಲದಂತೆ ಕೇಳಿಕೊಂಡಿದೆ. ಇದನ್ನೂ ಓದಿ: ಹಾಲಿ ಓಬಿಸಿ ನೀತಿಯಡಿ ಬಿಬಿಎಂಪಿ ಚುನಾವಣೆ ನಡೆಸಿ – ಸುಪ್ರೀಂ ಮರು ಆದೇಶ

    SRILANKA

    ನಮ್ಮ ನೀರಿನಲ್ಲಿ ಪೆಟ್ರೋಲ್ ಹಡಗು ಇದೆ. ಆದರೆ ಹಡಗಿಗೆ ಪಾವತಿಸಲು ವಿದೇಶೀ ವಿನಿಮಯ ಹೊಂದಿಲ್ಲ ಎಂದು ಇಂಧನ ಸಚಿವ ಕಾಂಚನಾ ವಿಜೆಶೇಖರ್ ಬುಧವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.

    ನಮ್ಮಲ್ಲಿ ಸದ್ಯ ಡೀಸೆಲ್‌ನಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಪೆಟ್ರೋಲ್‌ನ ಸೀಮಿತ ದಾಸ್ತಾನು ಇದೆ. ಮಾರ್ಚ್ 28ರಿಂದ ಪೆಟ್ರೋಲ್ ಹೊತ್ತಿರುವ ಹಡಗು ಇಲ್ಲಿನ ಸಮುದ್ರದಲ್ಲಿ ವಿನಿಮಯಕ್ಕೆ ಕಾದು ಕುಳಿತಿದೆ. ಆದರೆ ಪೆಟ್ರೋಲ್ ಪಡೆಯುವುದಕ್ಕಾಗಿ ಹಡಗಿಗೆ ಪಾವತಿಸಲು ನಮ್ಮಲ್ಲಿ ಅಮೇರಿಕನ್ ಡಾಲರ್‌ಗಳಿಲ್ಲ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 122 ಕೇಸ್ – ಇಂದು ದಾಖಲಾಯಿತು ಏಕೈಕ ಮರಣ ಪ್ರಕರಣ

    ಈ ಹಿನ್ನೆಲೆಯಲ್ಲಿ ವಿಜೆಶೇಖರ್, ನಾವು ಪೆಟ್ರೋಲ್‌ನ ಸೀಮಿತ ದಾಸ್ತಾನು ಹೊಂದಿದ್ದೇವೆ. ಅದನ್ನು ಅಗತ್ಯ ಸೇವೆಗಳಿಗೆ, ವಿಶೇಷವಾಗಿ ಅಂಬುಲೆನ್ಸ್ಗಳಿಗೆ ಉಪಯೋಗಕ್ಕೆ ವಿತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಭಾರತವು ಶ್ರೀಲಂಕಾದಂತೆ ಕಾಣುತ್ತಿದೆ: ರಾಹುಲ್ ಗಾಂಧಿ

    ಭಾರತವು ಶ್ರೀಲಂಕಾದಂತೆ ಕಾಣುತ್ತಿದೆ: ರಾಹುಲ್ ಗಾಂಧಿ

    ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ, ನಿರುದ್ಯೋಗ ಮತ್ತು ಕೋಮು ಹಿಂಸಾಚಾರದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಭಾರತವು ಶ್ರೀಲಂಕಾದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    BRIBE

    ಈ ಕುರಿತು ಭಾರತ ಮತ್ತು ಶ್ರೀಲಂಕಾದ ಪರಿಸ್ಥಿತಿಯನ್ನು ತುಲನೆ ಮಾಡುವ ಗ್ರಾಫ್‌ವೊಂದನ್ನು ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆ, ನಿರುದ್ಯೋಗ ಮತ್ತು ಕೋಮು ಹಿಂಸಾಚಾರದ ಬಗ್ಗೆ ತುಲನಾತ್ಮಕವಾಗಿ ಮಾಹಿತಿ ನೀಡಿದ್ದಾರೆ. ಜನರನ್ನು ತಬ್ಬಿಬ್ಬುಗೊಳಿಸುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆ ಕಾಣುತ್ತದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ಎಂದಿಗೂ ನಾನೇ ನೀಡಿದ್ದು ಎಂದು ಹೇಳಿರಲಿಲ್ಲ: ಸಿದ್ದುಗೆ ಟಾಂಗ್ ನೀಡಿದ ಸಿಟಿ ರವಿ

    ಸಶಸ್ತ್ರ ಸಂಘರ್ಷದ ಸ್ಥಳ, ಈವೆಂಟ್ ಡೇಟಾ ಯೋಜನೆ, ಲೋಕಸಭೆಯ ನಕ್ಷತ್ರರಹಿತ ಪ್ರಶ್ನೆ, ಸಿಎಮ್‍ಐಇ, ಪೆಟ್ರೋಲಿಯಂ ಯೋಜನೆ, ವಿಶ್ಲೇಷಣೆ ಕೋಶ ಮತ್ತು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಸೇರಿದಂತೆ ವಿವಿಧ ಮೂಲಗಳನ್ನು ಉಲ್ಲೇಖಿಸಿ ಭಾರತ ಮತ್ತು ಶ್ರೀಲಂಕಾದ ಒಂದೇ ರೀತಿಯ ಚಿತ್ರಗಳನ್ನು ಗ್ರಾಫ್ ಹೊಂದಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್

    ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇತ್ತೀಚಿನ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಮಹಿಂದಾ ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.