Tag: sri lanka crisis

  • ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    ಶ್ರೀಲಂಕಾದಲ್ಲಿ ಜನಾಕ್ರೋಶ ಉಲ್ಬಣ – ಪ್ರಧಾನಿ ಸ್ಥಾನಕ್ಕೆ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾದಲ್ಲಿ ಜನತೆ ರೊಚ್ಚಿಗೆದ್ದು ಪ್ರತಿಭಟನೆ ನಡೆಸುತ್ತಿದ್ದು, ದೇಶದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ದ್ವೀಪ ರಾಷ್ಟ್ರ ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆಗೆ ಆಗ್ರಹಿಸಿ ಅಧ್ಯಕ್ಷರ ಭವನಕ್ಕೆ ನುಗ್ಗಿ ಜನರು ದಾಂಧಲೆ ನಡೆಸಿದರು. ಇದರ ಬೆನ್ನಲ್ಲೇ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗಿದೆ. ದೇಶದ ಜನತೆ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಪರಿಣಾಮವಾಗಿ ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿರುವ ದೇಶಕ್ಕೆ ಅನೇಕ ಕಡೆಯಿಂದ ಸಾಲ ಹಾಗೂ ಇನ್ನಿತರ ಸೌಲಭ್ಯಕ್ಕಾಗಿ ರನಿಲ್‌ ಪ್ರಯತ್ನಿಸಿದರು. ಆದರೆ ಆಡಳಿತದಲ್ಲಿ ಸುಧಾರಣೆ ತರುವುದು ಕಷ್ಟ ಎಂಬುದನ್ನು ಅರಿತು ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಗೆ ನುಗ್ಗಿದ ಸಾವಿರಾರು ಜನ – ಪೂಲ್‌ನಲ್ಲಿ ಪ್ರತಿಭಟನಾಕಾರರು, ರಾಜಪಕ್ಸೆ ಪರಾರಿ

    ರಾಜಪಕ್ಸೆ ಮನೆತನದ ಆಡಳಿತದ ವಿರುದ್ಧ ಶ್ರೀಲಂಕಾದಲ್ಲಿ ಜನಾಕ್ರೋಶ ವ್ಯಕ್ತವಾಗಿದೆ. ಪರಿಣಾಮವಾಗಿ ಇಂದು ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ನಿವಾಸಕ್ಕೆ ನುಗ್ಗಿ ಜನ ದಾಂಧಲೆ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ನಿವಾಸಕ್ಕೆ ಲಗ್ಗೆಯಿಟ್ಟ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈಜಾಡಿದರು. ಅಧ್ಯಕ್ಷರ ನಿವಾಸದ ಸೋಫಾ, ಬೆಡ್‌ ಮೇಲೆ ಬಿದ್ದು ಹೊರಳಾಡಿದರು. ಅಡುಗೆ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದರು.

    ಪ್ರತಿಭಟನಾಕಾರರ ಆಕ್ರೋಶದಿಂದ ಹೆದರಿದ ಗೊಟಬಯ ಅವರು ಪರಾರಿಯಾದರು. ಈ ಎಲ್ಲಾ ಘಟನೆಗಳು ನಡೆದ ನಂತರ ರನಿಲ್‌ ವಿಕ್ರಮಸಿಂಘೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಶ್ರೀಲಂಕಾದಲ್ಲಿ ಹೊಸ ಸರ್ಕಾರ ರಚನೆಗೆ ವಿಪಕ್ಷ ನಾಯಕ ಒಪ್ಪಿಗೆ

    ಕೊಲಂಬೊ: ಹಿಂಸಾತ್ಮಕ ಪ್ರತಿಭಟನೆಗಳು ಹಾಗೂ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಶ್ರೀಲಂಕಾದ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳುವ ಅಧ್ಯಕ್ಷ ಗೊಟಾಬಯ ರಾಜಪಕ್ಸ ಅವರ ಪ್ರಸ್ತಾಪಕ್ಕೆ ಶ್ರೀಲಂಕಾದ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಒಪ್ಪಿಗೆ ನೀಡಿದ್ದಾರೆ.

    ಶ್ರೀಲಂಕಾ ಅಧ್ಯಕ್ಷರಿಗೆ ಸಜಿತ್ ಪ್ರೇಮದಾಸ ಪತ್ರ ಬರೆದಿದ್ದು, ನಿಗದಿತ ಸಮಯದೊಳಗೆ ಗೊಟಬಯ ರಾಜಪಕ್ಸ ಅವರು ಅಧಿಕಾರವನ್ನು ತೊರೆಯಲು ಒಪ್ಪಿಗೆ ನೀಡಿದರೆ, ಹೊಸ ಸರ್ಕಾರ ರಚಿಸಲು ಅಧ್ಯಕ್ಷರ ಆಹ್ವಾನವನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆ ಕತ್ತು ಹಿಸುಕಿ ಸಮಾಧಿ ಮಾಡಲು ಹೋಗಿ ತಾನೇ ಸತ್ತ

    sri lanka

    ಈ ಹಿಂದೆ, ಬಿಕ್ಕಟ್ಟಿನಲ್ಲಿರುವ ದೇಶದ ಪ್ರಧಾನಿ ಹುದ್ದೆಯನ್ನು ಸಜಿತ್ ತಿರಸ್ಕರಿಸಿದ್ದರು. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಈ ವಾರದೊಳಗೆ ಹೊಸ ಪ್ರಧಾನಿಯನ್ನು ನೇಮಿಸುವುದಾಗಿ ಬುಧವಾರ ಹೇಳಿದ ಒಂದು ದಿನದ ನಂತರ ಅಜಿತ್‌ ಒಪ್ಪಿಗೆ ಸೂಚಿಸಿದ್ದಾರೆ. ಬಹುಪಾಲು ಸಂಸದರು ಮತ್ತು ಜನರ ವಿಶ್ವಾಸ ಹೊಂದಿರುವ ವ್ಯಕ್ತಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡಲಾಗುವುದು ಎಂದು ಗೊಟಬಯ ದೂರದರ್ಶನದ ಭಾಷಣದಲ್ಲಿ ಹೇಳಿದ್ದರು.

    19 ನೇ ತಿದ್ದುಪಡಿಯ ನಿಬಂಧನೆಗಳಿಗೆ ಅಧಿಕಾರ ನೀಡುವ ಹೊಸ ಸಾಂವಿಧಾನಿಕ ತಿದ್ದುಪಡಿಯನ್ನು ತರಲಾಗುವುದು. ಹೊಸ ಪ್ರಧಾನಿ ಮತ್ತು ಕ್ಯಾಬಿನೆಟ್ ದೇಶವನ್ನು ಸ್ಥಿರಗೊಳಿಸಲು ಯೋಜನೆಯನ್ನು ಪ್ರಸ್ತುತಪಡಿಸಬಹುದು ಎಂದು ತಿಳಿಸಿದ್ದರು. ಇದನ್ನೂ ಓದಿ: ಉತ್ತರ ಕೊರಿಯಾದಲ್ಲಿ ಮೊದಲ ಬಾರಿಗೆ ಕೊರೊನಾ ಪ್ರಕರಣ ಪತ್ತೆ- ಕಟ್ಟುನಿಟ್ಟಿನ ಲಾಕ್‌ಡೌನ್‌ ಘೋಷಣೆ

    ಕೆಲವರು ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನವನ್ನು ರದ್ದುಗೊಳಿಸುವಂತೆ ಕೇಳಿದ್ದಾರೆ. ಎಲ್ಲಾ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ ನಾನು ಅದಕ್ಕೆ ಅವಕಾಶ ನೀಡುತ್ತೇನೆ. ದೇಶವು ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಜ್ಯ ಯಂತ್ರವನ್ನು ಮುಂದುವರಿಸಲು ನಿಮ್ಮ ಬೆಂಬಲವನ್ನು ನಾನು ಕೋರುತ್ತೇನೆ ಎಂದು ರಾಜಪಕ್ಸ ಮನವಿ ಮಾಡಿದ್ದಾರೆ.ಒಂಬತ್ತು ಮಂದಿ ಮೃತಪಟ್ಟು ಸುಮಾರು 300 ಮಂದಿ ಗಾಯಗೊಂಡಿರುವ ಹಿಂಸಾಚಾರ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.

    ಸರ್ಕಾರದ ಪರ ಗುಂಪುಗಳು ಸರ್ಕಾರದ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯ ನಂತರ ಹಿಂಸಾತ್ಮಕ ಘಟನೆಗಳು ವರದಿಯಾದವು. ಬುಧವಾರದವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲಾಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ಮಿಲಿಟರಿಯನ್ನು ನಿಯೋಜಿಸಲಾಗಿದೆ.

  • ಶ್ರೀಲಂಕಾದಲ್ಲಿ ಪರಿಸ್ಥಿತಿ ಉದ್ವಿಗ್ನ – ಸರ್ಕಾರ ಬೆಂಬಲಿಗನನ್ನು ಬಸ್‌ನಿಂದ ಕೆಳಗಿಳಿಸಿ ಕಸದ ಗಾಡಿಗೆ ಎಸೆದ ಪ್ರತಿಭಟನಾಕಾರರು

    ಕೊಲಂಬೊ: ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತದ ವಿರುದ್ಧ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಜನರು ರೋಷಾವೇಷಕ್ಕೆ ಬೆಚ್ಚಿದ ಮಹಿಂದಾ ರಾಜಪಕ್ಸ ಸೋಮವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ಶ್ರೀಲಂಕಾ ದೇಶಾದ್ಯಂತ ಕಳೆದ ಒಂದು ವಾರದಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಅನೇಕ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಸಂಭವಿಸಿದೆ. ದೇಶದಲ್ಲಿ ಹಿಂಸಾಚಾರದಿಂದಾಗಿ ಐದು ಮಂದಿ ಸಾವನ್ನಪ್ಪಿದ್ದು, 225 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ರೊಚ್ಚಿಗೆದ್ದ ಜನ – ಸಂಸದ, ಮಾಜಿ ಸಚಿವರ ಮನೆಗೆ ಬೆಂಕಿ

    ಏಪ್ರಿಲ್ 9 ರಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ನಿರ್ಗಮಿತ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರ ಬೆಂಬಲಿಗರಿಂದ ದಾಳಿ ನಂತರ ಪ್ರತೀಕಾರ ನಡೆಸಲು ಮುಂದಾದರು.

    ಪ್ರತಿಭಟನಾಕಾರರ ಮೇಲೆ ಗುಂಡುಹಾರಿಸಿದ ಸಂಸದ
    ಸೋಮವಾರ ರಾಜಧಾನಿ ಕೊಲಂಬೊದಿಂದ ಹೊರಟಿದ್ದ ಆಡಳಿತ ಪಕ್ಷದ ಶಾಸಕ ಅಮರಕೀರ್ತಿ ಅತುಕೋರಾಲ ಅವರ ವಾಹನವನ್ನು ತಡೆದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು. ಈ ವೇಳೆ 27 ವರ್ಷದ ವ್ಯಕ್ತಿ ಗುಂಡಿಗೆ ಬಲಿಯಾಗಿ, ಇಬ್ಬರು ಗಾಯಗೊಂಡರು. ಘಟನೆ ನಂತರ ಸಂಸದರು ತಾವೇ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಅವರನ್ನು ಕೊಲೆ ಮಾಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಶಾಸಕರ ಅಂಗರಕ್ಷಕ ಕೂಡ ಸಾವನ್ನಪ್ಪಿದ್ದಾನೆ. ಅಲ್ಲಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

    ಸೋಮವಾರದಂದು ದಕ್ಷಿಣದ ವೀರಕೇಟಿಯ ಪಟ್ಟಣದಲ್ಲಿ ರಾಜಪಕ್ಸ ಅವರ ಪಕ್ಷದ ಪ್ರಾಂತೀಯ ರಾಜಕಾರಣಿಯೊಬ್ಬರು ಗುಂಡು ಹಾರಿಸಿ ಇಬ್ಬರನ್ನು ಕೊಂದು ಮೂವರನ್ನು ಗಾಯಗೊಳಿಸಿದ್ದಾರೆ. ಕೃತ್ಯದ ನಂತರ ರಾಜಕಾರಣಿ ಕಾಣೆಯಾಗಿದ್ದಾನೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಬುಗಿಲೆದ್ದ ಆಕ್ರೋಶಕ್ಕೆ ಆಡಳಿತ ಪಕ್ಷದ ಸಂಸದ ಬಲಿ

    srilanka

    ರಾಜಕಾರಣಿಗಳ ಮನೆಗಳಿಗೆ ಬೆಂಕಿ
    ಕರ್ಫ್ಯೂ ಹೊರತಾಗಿಯೂ ಆಡಳಿತ ಪಕ್ಷದ ಉನ್ನತ ರಾಜಕಾರಣಿಗಳ ಕನಿಷ್ಠ 41 ಮನೆಗಳನ್ನು ರಾತ್ರಿಯಿಡೀ ಸುಟ್ಟು ಹಾಕಲಾಗಿದೆ. ಆ ಮನೆಗಳಲ್ಲಿ ನಿಲ್ಲಿಸಿದ್ದ ನೂರಾರು ದ್ವಿಚಕ್ರ ವಾಹನಗಳೂ ಸುಟ್ಟು ಕರಕಲಾಗಿವೆ.

    ರಾಜಪಕ್ಸ ಮ್ಯೂಸಿಯಂ ಧ್ವಂಸ
    ಮೆಡಾ ಮುಲಾನಾ ಎಂಬ ಆಡಳಿತ ಕುಟುಂಬದ ಪೂರ್ವಜರ ಗ್ರಾಮದಲ್ಲಿರುವ ರಾಜಪಕ್ಸ ಮನೆತನದವರ ಕುರಿತಾದ ವಸ್ತುಸಂಗ್ರಹಾಲಯದ ಮೇಲೆ ಗುಂಪೊಂದು ದಾಳಿ ನಡೆಸಿ ಅದನ್ನು ನೆಲಸಮಗೊಳಿಸಿದೆ. ರಾಜಪಕ್ಸ ಪೋಷಕರ ಎರಡು ಮೇಣದ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ವಾಯುವ್ಯ ಪಟ್ಟಣವಾದ ಕುರುನೆಗಾಲದಲ್ಲಿ ರಾಜಪಕ್ಸರ ರಾಜಕೀಯ ಕಚೇರಿಯೂ ಸಹ ನಾಶವಾಗಿದೆ. ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ರಾಜೀನಾಮೆ

    ಆಸ್ಪತ್ರೆಯಲ್ಲಿ ನಿರ್ಬಂಧ
    ರಾಜಪಕ್ಸ ವಿರೋಧಿ ಪ್ರತಿಭಟನಾಕಾರರೊಂದಿಗಿನ ಘರ್ಷಣೆಯಲ್ಲಿ ಗಾಯಗೊಂಡ ಸರ್ಕಾರಿ ಬೆಂಬಲಿಗರನ್ನು ರಕ್ಷಿಸಲು ಮುಖ್ಯ ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವೈದ್ಯರು ಮುಂದಾದರು. ಆದರೆ ಅವರಿಗೆ ಚಿಕಿತ್ಸೆ ನೀಡದಂತೆ ಪ್ರತಿಭಟನಾಕಾರರು ತಡೆಯಲು ಮುಂದಾದರು. ʻಅವರು ಕೊಲೆಗಾರರಾಗಿರಬಹುದು, ಆದರೆ ಚಿಕಿತ್ಸೆ ಪಡೆಯಬೇಕಾದ ರೋಗಿಗಳುʼ ಎಂದು ವೈದ್ಯರು ನಿರ್ಬಂಧಕ್ಕೆ ವಿರೋಧ ವ್ಯಕ್ತಪಡಿಸಿದರು.

    ಒಟ್ಟು 219 ಮಂದಿಯನ್ನು ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐವರು ತೀವ್ರ ನಿಗಾದಲ್ಲಿದ್ದಾರೆ ಎಂದು ಆಸ್ಪತ್ರೆಯ ವಕ್ತಾರ ಪುಷ್ಪಾ ಸೊಯ್ಸಾ ತಿಳಿಸಿದ್ದಾರೆ. ಗಾಯಗೊಂಡ ಸರ್ಕಾರಿ ಬೆಂಬಲಿಗರನ್ನು ಕರೆತರಲು ಸೈನಿಕರು ಗೇಟ್‌ಗಳನ್ನು ಬಲವಂತವಾಗಿ ತೆರೆಯಬೇಕಾದ ಪರಿಸ್ಥಿತಿ ಇತ್ತು. ಪ್ರತಿಭಟನಾಕಾರರ ವಿರೋಧದಿಂದಾಗಿ ಆಸ್ಪತ್ರೆಗೆ ಪ್ರವೇಶಿಸಲು ಬೀಗಗಳನ್ನು ಮುರಿಯಬೇಕಾಯಿತು. ಇದನ್ನೂ ಓದಿ: 1945 ರಲ್ಲಿದ್ದಂತೆ, ವಿಜಯವು ನಮ್ಮದಾಗಿರುತ್ತದೆ: ಪುಟಿನ್ ಪ್ರತಿಜ್ಞೆ

    ಬಸ್‌ಗಳಿಗೆ ಬೆಂಕಿ
    ಕೊಲಂಬೊಗೆ ಪ್ರಯಾಣಿಸಲು ರಾಜಪಕ್ಸ ಬೆಂಬಲಿಗರು ಬಳಸುತ್ತಿದ್ದ ಹತ್ತಾರು ಬಸ್‌ಗಳಿಗೆ ದೇಶದಾದ್ಯಂತ ಬೆಂಕಿ ಹಚ್ಚಲಾಯಿತು. ಮಹಾರಾಗಮಾದ ಉಪನಗರದಲ್ಲಿ ಜನಸಮೂಹವು ಸರ್ಕಾರಿ ಪರ ಗುಂಪಿನ ನಾಯಕನನ್ನು ಬಸ್‌ನಿಂದ ಬಲವಂತವಾಗಿ ಕೆಳಗಿಳಿಸಿ ಕಸದ ಗಾಡಿಗೆ ಎಸೆದರು. ಮೊದಲು ವಾಹನವನ್ನು ಬುಲ್ಡೋಜರ್‌ನಿಂದ ಜಖಂಗೊಳಿಸಿದರು.

    ಜನರನ್ನು ಕೆರೆಗೆ ತಳ್ಳಿ ದುಷ್ಕೃತ್ಯ
    ಆಕ್ರೋಶಗೊಂಡ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಟೆಂಪಲ್ ಟ್ರೀಸ್ ನಿವಾಸದ ಬಳಿಯ ಕೆರೆಯೊಂದಕ್ಕೆ ಹತ್ತಾರು ಮಂದಿಯನ್ನು ತಳ್ಳಿ ಆಕ್ರೋಶ ಹೊರಕಾಕಿದರು. ಕೆರೆಗೆ ತಳ್ಳಲ್ಪಟ್ಟವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.