Tag: Sri Lanka Cricket

  • ಸೋಲಿನ ಬೆನ್ನಲ್ಲೇ ಲಂಕಾಗೆ ಮತ್ತೆ ಶಾಕ್‌ – ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ICC

    ಸೋಲಿನ ಬೆನ್ನಲ್ಲೇ ಲಂಕಾಗೆ ಮತ್ತೆ ಶಾಕ್‌ – ಕ್ರಿಕೆಟ್‌ ಮಂಡಳಿಯನ್ನೇ ಅಮಾನತುಗೊಳಿಸಿದ ICC

    ಕೊಲಂಬೊ: ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ (ICC ODI World Cup 2023) ಕಳಪೆ ಪ್ರದರ್ಶನ ನೀಡಿ ಸೆಮಿಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾದ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ (Sri Lanka Cricket) ಮತ್ತೊಂದು ಆಘಾತವಾಗಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (International Cricket Board) ಶ್ರೀಲಂಕಾ ಕ್ರಿಕೆಟ್​ ಮಂಡಳಿಯ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಶ್ರೀಲಂಕಾ ಸರ್ಕಾರ ಹಸ್ತಕ್ಷೇಪ ನಡೆಸುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಇದನ್ನೂ ಓದಿ: World Cup 2023: ಮೈಲಿಗಲ್ಲು ಸ್ಥಾಪಿಸಲು RO-KO ವೇಯ್ಟಿಂಗ್‌ – ಸೂಪರ್‌ ಸಂಡೇ ಡಬಲ್‌ ಧಮಾಕ..!

    ಐಸಿಸಿ ಮಂಡಳಿಯು ಇಂದು ಸಭೆ ನಡೆಸಿತು. ಜೊತೆಗೆ ಶ್ರೀಲಂಕಾ ಕ್ರಿಕೆಟ್ ಸದಸ್ಯರಾಗಿ ಅದರ ಜವಾಬ್ದಾರಿಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿದೆ. ಶ್ರೀಲಂಕಾದಲ್ಲಿ ಕ್ರಿಕೆಟ್ ಹಾಗೂ ಅದರ ವ್ಯವಹಾರಗಳನ್ನು ಸ್ವಾಯತ್ತವಾಗಿ ನಿರ್ವಹಿಸುವ ಅವಶ್ಯಕತೆ ಮತ್ತು ಆಡಳಿತ, ನಿಯಂತ್ರಣ ಮತ್ತು/ಅಥವಾ ಆಡಳಿತದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿರಬಾರದು ಎನ್ನುವ ಅಗತ್ಯವನ್ನು ಪೂರೈಸುವಲ್ಲಿ ಮಂಡಳಿ ವಿಫಲವಾಗಿದೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಅಮಾನತುಗೊಳಿಸುವಿಕೆಯ ಷರತ್ತುಗಳನ್ನು ಐಸಿಸಿ ಮಂಡಳಿಯು ಸರಿಯಾದ ಸಮಯದಲ್ಲಿ ನಿರ್ಧರಿಸುತ್ತದೆ. ನವೆಂಬರ್‌ 21 ರಂದು ಐಸಿಸಿ ಮತ್ತೆ ಸಭೆ ಸೇರಲಿದೆ. ಸಭೆಯ ನಂತರ ಮುಂದಿನ ಕ್ರಮವು ಸ್ಪಷ್ಟವಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಆ ಒಬ್ಬ ಆಟಗಾರ 20-30 ಓವರ್‌ ಆಡಿದ್ರೆ, ಸೆಮಿಸ್‌ ಪ್ರವೇಶ ಮಾಡ್ತೀವಿ – ಬಾಬರ್‌ ಆಜಂ

    2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ 9 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಮಾತ್ರ ಗೆಲುವು ಸಾಧಿಸಿದ್ದು, 4 ಅಂಕ ಪಡೆದುಕೊಂಡಿತು. ಬ್ಯಾಟಿಂಗ್‌ ಬೌಲಿಂಗ್‌ ಹಾಗೂ ಕಳಪೆ‌ ಫೀಲ್ಡಿಂಗ್‌ನಿಂದಾಗಿ ವಿಶ್ವಕಪ್‌ನಲ್ಲಿ ಮುಖಬಂಗ ಅನುಭವಿಸುವಂತಾಯಿತು.

  • ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಕೊಲಂಬೊ: ಅತ್ಯಾಚಾರ ಆರೋಪ ಕೇಳಿಬಂದಿರುವ ಶ್ರೀಲಂಕಾ ಕ್ರಿಕೆಟಿಗ (Sri Lankan Cricketer) ದನುಷ್ಕ ಗುಣತಿಲಕ (Danushka Gunathilaka) ಅವರನ್ನ ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ (Sri Lanka Cricket) ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

    ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಡ್ನಿ ಪೊಲೀಸರು (Sydney Police) ಬಂಧಿಸಿದ ಒಂದು ದಿನದ ನಂತರ ಲಂಕಾ ಕ್ರಿಕೆಟ್ ಮಂಡಳಿ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಮುಕ್ತಾಯದ ನಂತರ ಅವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ದನುಷ್ಕಗೆ ದಂಡ ವಿಧಿಸುವ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯಾದ (Australia) ಕಾನೂನು ಅಧಿಕಾರಿಗಳಿಗೆ ಅಗತ್ಯ ಬೆಂಬಲ ನೀಡುತ್ತದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ

    ಏನಿದು ಪ್ರಕರಣ?
    ಟಿ20 ವಿಶ್ವಕಪ್‌ನ (T20 WorldCup) ಶ್ರೀಲಂಕಾದ ತಂಡದಲ್ಲಿದ್ದ ಕ್ರಿಕೆಟಿಗ ದನುಷ್ಕಾ ಗುಣತಿಲಕ (31) ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ (Aating App) ಹಲವು ದಿನಗಳ ಹಿಂದೆ ಮಹಿಳೆಯ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣತಿಲಕ ಅವರನ್ನು ಬಂಧಿಸಿ ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

    2015 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಕೊನೆ ಪಂದ್ಯವಾಡಿ ಸೋತು ಲಂಕಾ ತಂಡ ತವರಿಗೆ ಮರಳಿದೆ.

    Live Tv
    [brid partner=56869869 player=32851 video=960834 autoplay=true]