Tag: Sri Krishna Temple

  • ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ ಪ್ರೇಮ್‌, ಶರಣ್ಯ ಶೆಟ್ಟಿ

    ವ್ಲಿ ಸ್ಟಾರ್ ಪ್ರೇಮ್ (Prem) ಮತ್ತು ಶರಣ್ಯ ಶೆಟ್ಟಿ (Sharanya Shetty) ಉಡುಪಿ ಶ್ರೀಕೃಷ್ಣ ದೇಗುಲಕ್ಕೆ (Sri Krishna Temple) ಭೇಟಿ ನೀಡಿದ್ದಾರೆ. ಚಿತ್ರತಂಡದ ಜೊತೆ ಪ್ರೇಮ್ ಹಾಗೂ ಶರಣ್ಯ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅಂಬಿ ಮೊಮ್ಮಗನ ನಾಮಕರಣ ಸಂಭ್ರಮ: ಕಿಚ್ಚ ಸುದೀಪ್‌ ಭಾಗಿ

    ಪ್ರೇಮ್ ನಟನೆಯ ಹೊಸ ಸಿನಿಮಾಗೆ ಶರಣ್ಯ ಶೆಟ್ಟಿ ನಾಯಕಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಗುವ ಮುನ್ನ ಚಿತ್ರತಂಡದೊಂದಿಗೆ ಉಡುಪಿಯ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Sharanya Shetty (@iamsharanyashetty)

    ಅಂದಹಾಗೆ, ಲವ್ಲಿ ಸ್ಟಾರ್ ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದಲ್ಲಿ ಪ್ರೇಮ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಶರಣ್ಯ ಅವರಿಗೂ ಉತ್ತಮ ಪಾತ್ರ ಸಿಕ್ಕಿದೆ. ಈ ಸಿನಿಮಾ ಮುಹೂರ್ತ ಕಾರ್ಯಕ್ರಮ ಈಗಾಗಲೇ ನೆರವೇರಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

  • ನಿಧಿ ಆಸೆಗೆ ದುಷ್ಕರ್ಮಿಗಳಿಂದ ಶ್ರೀ ಕೃಷ್ಣನ ದೇಗುಲ ಧ್ವಂಸ

    ನಿಧಿ ಆಸೆಗೆ ದುಷ್ಕರ್ಮಿಗಳಿಂದ ಶ್ರೀ ಕೃಷ್ಣನ ದೇಗುಲ ಧ್ವಂಸ

    ರಾಯಚೂರು: ನಿಧಿ ಆಸೆಗೆ ದುಷ್ಕರ್ಮಿಗಳು ಯಾಟಗಲ್ ಗ್ರಾಮದಲ್ಲಿದ್ದ ಶ್ರೀ ಕೃಷ್ಣನ ದೇಗುಲವನ್ನು ಧ್ವಂಸ ಮಾಡಿದ್ದಾರೆ.

    ಜಿಲ್ಲೆಯ ದೇವದುರ್ಗ ತಾಲೂಕಿನ ಯಾಟಗಲ್ ಗ್ರಾಮದಲ್ಲಿ ದುಷ್ಕರ್ಮಿಗಳು ನಿಧಿ ಆಸೆಗೆ ದೇವರ ವಿಗ್ರಹ ಕಿತ್ತೆಸೆದು, ಆ ಜಾಗದಲ್ಲಿ ಸುಮಾರು ಐದು ಅಡಿ ಗುಂಡಿ ತೋಡಿ ಚಿಕ್ಕ ದೇಗುಲವನ್ನ ಸಂಪೂರ್ಣ ಹಾಳು ಮಾಡಿದ್ದಾರೆ. ಇದನ್ನೂ ಓದಿ: ಅರಿಶಿನ ಶಾಸ್ತ್ರ ಸಂಭ್ರಮದ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್ 

    ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿ ಕೃಷ್ಣನ ದೇಗುಲವಿದ್ದು, ವಿಗ್ರಹದ ಕೆಳಗೆ ನಿಧಿ ಇರುವುದಾಗಿ ಪ್ರತೀತಿ ಇದ್ದಿದ್ದರಿಂದ ನಿಧಿಗಳ್ಳರು ನಿಧಿ ಆಸೆಗೆ ನಿನ್ನೆ ತಡ ರಾತ್ರಿ ಈ ದುಷ್ಕøತ್ಯ ಎಸಗಿದ್ದಾರೆ. ಗ್ರಾಮದ ಜನರೆಲ್ಲಾ ಪೂಜಿಸುವ ದೇವರ ಮೂರ್ತಿಯನ್ನು ಎಸೆದಿದ್ದಾರೆ.

    ಗ್ರಾಮಸ್ಥರು ಈ ಕೃತ್ಯವೆಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದು ಅಲ್ಲದೇ ಈ ದುಷ್ಕøತ್ಯ ಎಸಗಿರುವವರನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಈ ಘಟನೆ ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಉಡುಪಿ ಕಡೆಗೋಲು ಕೃಷ್ಣನ ದರ್ಶನಕ್ಕೆ ಇನ್ನೊಂದು ವಾರ ಕಾಯಬೇಕು

    ಉಡುಪಿ ಕಡೆಗೋಲು ಕೃಷ್ಣನ ದರ್ಶನಕ್ಕೆ ಇನ್ನೊಂದು ವಾರ ಕಾಯಬೇಕು

    ಉಡುಪಿ: ರಾಜ್ಯದ್ಯಂತ ಮಠ-ಮಂದಿರ ತೆರೆದು ದೇವರ ದರ್ಶನಕ್ಕೆ ಸರ್ಕಾರ ಅವಕಾಶ ಕೊಟ್ಟಿದೆ. ವಿಶ್ವಪ್ರಸಿದ್ಧ ಉಡುಪಿ ಶ್ರೀ ಕೃಷ್ಣನ ದರ್ಶನ ಸಿಗಲು ಇನ್ನೊಂದು ವಾರ ಕಾಯಬೇಕಾಗಿದೆ.

    ಮಹಾಮಾರಿ ಕೊರೊನಾದ ಆರ್ಭಟ ಕಡಿಮೆಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಲಾಕ್ ಡೌನ್ ಇನ್ನಷ್ಟು ಸಡಿಲ ಮಾಡಿದೆ. ಸೋಮವಾರದಿಂದ ದೇವಸ್ಥಾನ ಮಠ ಮಂದಿರ ಮಸೀದಿ ಯ ಬಾಗಿಲು ಓಪನ್ ಮಾಡಲು ಅವಕಾಶ ಕೊಟ್ಟಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನ ಸಿಗಲಿದೆ. ಉಡುಪಿಯ ಅಷ್ಟ ಮಠಗಳಿಗೆ ಒಳಪಟ್ಟ ಉಡುಪಿ ಕೃಷ್ಣಮಠ ಓಪನ್ ಆಗಲು ಇನ್ನೂ ಏಳು ದಿನ ಇದೆ.

    ಒಂಬತ್ತು ಮಠಗಳು ಎರಡು ದೇವಸ್ಥಾನ ಇರುವ ರಥಬೀದಿ ಸಾರ್ವಜನಿಕರು ಭಕ್ತರು ಇಲ್ಲದೆ ಬಿಕೋ ಅನ್ನುತ್ತಿದೆ. ಕಳೆದ ಎರಡು ವರ್ಷಗಳಿಂದ ಕೃಷ್ಣಮಠಕ್ಕೆ ಸಂಬಂಧಪಟ್ಟಂತೆ ಯಾವುದೇ ದೊಡ್ಡ ಉತ್ಸವ ನಡೆದಿಲ್ಲ. ಪ್ರವಾಸಿಗರನ್ನೇ ನಂಬಿರುವ ಅಂಗಡಿಗಳು ವ್ಯಾಪಾರವಿಲ್ಲದೆ ಬಡವಾಗಿವೆ. ಧಾರ್ಮಿಕ ಪ್ರವಾಸಿಗರನ್ನು ನಂಬಿರುವ ವ್ಯಾಪಾರಿಗಳು ದಿಕ್ಕೆಟ್ಟಿದ್ದಾರೆ.

    ರಥಬೀದಿಯಲ್ಲಿ ಓಡಾಡುವ ಜನ ಮಠದ ಹೊರಗೆ ನಿಂತು ಶ್ರೀಕೃಷ್ಣನಿಗೆ ಕೈಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಮಠದ ಸಿಬ್ಬಂದಿ ಪರ್ಯಾಯ ಅದಮಾರು ಮಠದವರು ದೈನಂದಿನ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಡಳಿತ ಮಂಡಳಿ, ಗೋಶಾಲೆಯ ಸಿಬ್ಬಂದಿ, ಅಡುಗೆಯವರು ಮಾತ್ರ ಕಳೆದ ಇಪ್ಪತ್ತು ದಿನಗಳಲ್ಲಿ ಮಠದ ಒಳಗೆ ಇದ್ದಾರೆ. ಸುತ್ತಮುತ್ತಲಿನ ವಾತಾವರಣ ನೋಡಿಕೊಂಡು, ಹೊರ ರಾಜ್ಯಗಳ ಚಿತ್ರಣವನ್ನು ಗಮನಿಸಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡುತ್ತೇವೆ ಎಂದು ಪರ್ಯಾಯ ಅದಮಾರು ಮಠ ಹೇಳಿದೆ. ವಿಶ್ವಕ್ಕೆ ಅಂಟಿರುವ ವ್ಯಾದಿ ಶೀಘ್ರ ಉಪಶಮನವಾಗಲಿ ಎಂದು ಪ್ರಾರ್ಥನೆ ಮಾಡುವುದಾಗಿ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.