Tag: Sri Krishna Math

  • ಸಿದ್ದರಾಮಯ್ಯಗೆ ಶ್ರೀ ಕೃಷ್ಣ ಮಠದಿಂದ ಆಹ್ವಾನ – 2 ದಶಕಗಳ ಬಳಿಕ ಮಠಕ್ಕೆ ಭೇಟಿ ಕೊಡ್ತಾರಾ ಸಿಎಂ?

    ಸಿದ್ದರಾಮಯ್ಯಗೆ ಶ್ರೀ ಕೃಷ್ಣ ಮಠದಿಂದ ಆಹ್ವಾನ – 2 ದಶಕಗಳ ಬಳಿಕ ಮಠಕ್ಕೆ ಭೇಟಿ ಕೊಡ್ತಾರಾ ಸಿಎಂ?

    ಉಡುಪಿ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಉಡುಪಿಯ (Udupi) ಶ್ರೀ ಕೃಷ್ಣ ಮಠ (Sri Krishna Math) ಆಹ್ವಾನ ನೀಡಿದೆ. ಸುಮಾರು ಎರಡು ದಶಕಗಳಿಂದ ಮಠದ ಜೊತೆ ಸಿಎಂ ಅಂತರ ಕಾಯ್ದುಕೊಂಡಿದ್ದರು. ಇದೀಗ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಪುತ್ತಿಗೆ ಮಠದ ವತಿಯಿಂದ ಆಹ್ವಾನ ನೀಡಲಾಗಿದೆ.

    48 ದಿನಗಳ ಮಂಡಲ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಮುಖ್ಯಪ್ರಾಣರ ಪ್ರಸಾದ ನೀಡಿ ಮಠದ ಸಿಬ್ಬಂದಿ ಆಹ್ವಾನಿಸಿದ್ದಾರೆ. ಬೆಂಗಳೂರು ಶಾಖಾ ಮಠದ ಎ.ಬಿ ಕುಂಜಾರ್, ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ ಆಹ್ವಾನ ನೀಡಿದ್ದಾರೆ. ಆಗಸ್ಟ್‌ನಲ್ಲಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಆಗಸ್ಟ್ 1 ರಿಂದ 48 ದಿನಗಳ ಕಾರ್ಯಕ್ರಮ ಸೆಪ್ಟೆಂಬರ್ 15ರವರೆಗೆ ನಡೆಯಲಿದೆ. ಇದನ್ನೂ ಓದಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ

    ಕನಕಗೋಪುರ ವಿವಾದ ಬಳಿಕ ಸಿಎಂ ಮಠದಿಂದ ಅಂತರ ಕಾಯ್ದುಕೊಂಡಿದ್ದರು. ಇದಾದ ಬಳಿಕ ಉಡುಪಿಗೆ ಬಂದರೂ ಸಹ ಸಿದ್ದಾರಾಮಯ್ಯ ಮಠಕ್ಕೆ ಭೇಟಿ ನೀಡಿರಲಿಲ್ಲ.

    ಶ್ರೀ ಕೃಷ್ಣ ದೇವಾಲಯದ ಹೊರ ಆವರಣದಲ್ಲಿರುವ ಕನಕನ ಕಿಂಡಿ ಎದುರಿನ ಗೋಪುರ ಶಿಥಿಲಗೊಂಡಿದ್ದರಿಂದ ಕೆಡವಲಾಗಿತ್ತು. ಇದು ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಮಾತುಕತೆಯ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿತ್ತು.

    ಇಷ್ಟಕ್ಕೂ ಸಿಎಂ ಸಿದ್ದರಾಮಯ್ಯ ಕೃಷ್ಣಮಠದಿಂದ ಅಂತರ ಕಾಯ್ದುಕೊಂಡಿದ್ದು ಯಾಕೆ?
    ಕಾರಣ 1: ಉಡುಪಿಯ ಕೃಷ್ಣಮಠದಲ್ಲಿ ಎರಡು ದಶಕದ ಹಿಂದೆ ನಡೆದ ಕನಕಗೋಪುರ ವಿವಾದ. ಕನಕನ ಕಿಂಡಿಯ ಮೇಲಿನ ಗೋಪುರ ಕೆಡವಿದಾಗ ಸಿದ್ದರಾಮಯ್ಯ ವಿರೋಧಿಸಿದ್ದರು. ಕುರುಬ ಸಮುದಾಯದ ಪ್ರತಿನಿಧಿಯಾಗಿ ಹೋರಾಟ ಮಾಡಿದ್ದರು. ಸಿಎಂ ಮತ್ತು ಕೃಷ್ಣಮಠದ ಸಂಬಂಧ ಅಲ್ಲಿಂದ ಹಳಸುತ್ತಲೇ ಬಂದಿತ್ತು.

    ಕಾರಣ 2: ಕೃಷ್ಣಮಠದ ಸರ್ಕಾರಿಕರಣವಾಗಬೇಕು ಎಂದು ಪ್ರತಿಪಾದಿಸಿದವರಲ್ಲಿ ಸಿಎಂ ಪ್ರಮುಖರು. ಹೋರಾಡುತ್ತಾ ಬಂದ ಸಿದ್ದರಾಮಯ್ಯ ಸಿಎಂ ಆದ ಬಳಿಕ ಯಾಕೋ ತಣ್ಣಗಾಗಿದ್ದರು.

    ಕಾರಣ 3: ಇನ್ನೊಂದು ಕಾರಣ ಬಹಳ ಕುತೂಹಲಕಾರಿ. ಬಾಲ್ಯದಲ್ಲಿ ಸಿದ್ದರಾಮಯ್ಯನವರು ತಂದೆಯ ಜೊತೆಗೆ ಮಠಕ್ಕೆ ಬಂದಾಗ ಆಗಿನ ಸ್ವಾಮಿಗಳು ಪ್ರಸಾದವನ್ನು ಎತ್ತರದಿಂದ ಕೈಗೆ ಹಾಕಿದ್ದರಂತೆ. ಹೀಗೆ ಪ್ರಸಾದ ಕೊಟ್ಟು ಅವಮಾನ ಮಾಡಿದ್ದಂತೆ. ಈ ಕಾರಣಕ್ಕೆ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಕಾಲಿಟ್ಟಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: Mysuru Dasara | ಸೆ.22ರಿಂದ 11 ದಿನಗಳ ಕಾಲ ವಿಜೃಂಭಣೆಯ ದಸರಾ

  • ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಹರಿಪ್ರಿಯಾ ಟೆಂಪಲ್ ರನ್: ಉಡುಪಿ ಮಠದ ಆನೆಯೊಂದಿಗೆ ಸಮಯ ಕಳೆದ ನಟಿ

    ಶೂಟಿಂಗ್ ನಿಂದ ಬಿಡುವು ತಗೆದುಕೊಂಡಿರುವ ಹರಿಪ್ರಿಯಾ, ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಸಾಮಾನ್ಯವಾಗಿ ಹರಿಪ್ರಿಯಾ ಸದ್ಗುರು ಆಶ್ರಮದಲ್ಲಿ ಕಾಲ ಕಳೆಯುತ್ತಿದ್ದರು. ಈ ಬಾರಿ ಅವರು ಉಡುಪಿಯ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ನಂತರ ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಆಚಾರ್ ಅವರಿಂದ ಪ್ರಸಾದ ಸ್ವೀಕರಿಸಿದರು.

    ಶ್ರೀಕೃಷ್ಣನ ದರ್ಶನ ಪಡೆದ ನಂತರ ಹರಿಪ್ರಿಯಾ ಅಲ್ಲಿರುವ ಆನೆಯೊಂದಿಗೆ ಸ್ವಲ್ಪ ಹೊತ್ತು ಸಮಯ ಕಳೆದಿದ್ದಾರೆ. ಆನೆಯೊಂದಿಗೆ ತೀರಾ ಆತ್ಮಿಯವಾಗಿರುವ ಫೋಟೋಗಳನ್ನು ಅವರು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಗೌನ್ ಬೆಲೆಯಷ್ಟು ಗೊತ್ತಾ? ಲಕಲಕ ಹೊಳಿತಿದ್ದಾಳೆ ರವಿಮಾಮನ ಬೆಡಗಿ

    ಚಂದನವನ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಹರಿಪ್ರಿಯಾ ತಮ್ಮ ನಟನೆಯಿಂದ ಸೈ ಎನಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಸಿನಿಮಾದ ನಂತರ ಹರಿಪ್ರಿಯಾ ಮತ್ತೆ ಯಾವ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಈ ಸಮಯವನ್ನು ಅವರು ಪ್ರವಾಸ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡಲು ಮೀಸಲಿಟ್ಟಿದ್ದಾರೆ.

    ‘ವ್ಯಾಪಾರಿ’ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಹರಿಪ್ರಿಯಾ, ನಂತರದ ದಿನಗಳಲ್ಲಿ ಕಲಾತ್ಮಕ ಚಿತ್ರಗಳತ್ತ ವಾಲಿದರು. ಅವರ ನಟನೆಯ ‘ಸೂಜಿದಾರ’, ‘ಅಮೃತಮತಿ’ ಚಿತ್ರಗಳು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದವು. ಅದರಲ್ಲೂ ‘ಅಮೃತಮತಿ’ ಚಿತ್ರ ಅವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಪ್ರಶಸ್ತಿಗಳನ್ನು ತಂದುಕೊಟ್ಟಿತು. ಈ ನಟಿ ಚಂದನವನದ ಬಹುತೇಕ ಸ್ಟಾರ್ ನಟರ ಜೊತೆಗೆಗೂ ನಟಿಸಿದ್ದು, ತಮ್ಮ ನೇರ ನುಡಿಯಿಂದ ಹೆಸರುವಾಸಿಯಾಗಿದ್ದಾರೆ. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

  • ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ ಕೃಷ್ಣ ಮಠದಲ್ಲಿ ಹಗಲು ಉತ್ಸವ – ಅಷ್ಟಮಠಾಧೀಶರು ಭಾಗಿ

    ಉಡುಪಿ: ಅಷ್ಟಮಠಗಳ ನಾಡು ಉಡುಪಿಯಲ್ಲಿ ಶ್ರೀಕೃಷ್ಣ ಮಠದ ವಾರ್ಷಿಕೋತ್ಸವ ನಡೆಯಿತು. ಕೃಷ್ಣನ ಪ್ರತಿಷ್ಠಾಪಿಸಿದ ಮಧ್ವಾಚಾರ್ಯರು ಹಗಲಿನಲ್ಲಿ ಒಂದು ಉತ್ಸವವನ್ನು ಮಾಡಿದ್ದರು. ಆ ಪರಂಪರೆ ಇಂದಿಗೂ ಮುಂದುವರೆದಿದ್ದು, ಕೊರೊನಾ ಸಾಂಕ್ರಾಮಿಕದ ನಡುವೆ ಸಾಂಪ್ರದಾಯಕ್ಕೆ ಚ್ಯುತಿ ಬರದಂತೆ ಉತ್ಸವ ನಡೆಸಲಾಯಿತು.

    ದೇವಾಲಯಗಳ ನಗರಿ ಉಡುಪಿಯಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ ನಡೆಯಿತು. ಕೃಷ್ಣ ಮುಖ್ಯಪ್ರಾಣ ದೇವರನ್ನು ರಥದಲ್ಲಿಟ್ಟು ಸಾಂಪ್ರದಾಯಿಕ ಹಗಲು ಉತ್ಸವ ಮಾಡಲಾಯಿತು. 8 ಶತಮಾನದ ಹಿಂದೆ ಆಚಾರ್ಯ ಮಧ್ವರು ಉಡುಪಿ ಕೃಷ್ಣ ಮಠವನ್ನು ಸ್ಥಾಪನೆ ಮಾಡಿದರು. ಸಂಕ್ರಾಂತಿಯಂದು ಕಡೆಗೋಲು ಕೃಷ್ಣನ ಪ್ರತಿಷ್ಠಾಪನೆ ಮಾಡಿದ ಮಾರನೆ ದಿನ ಬೆಳಗ್ಗೆ ಹಗಲು ಉತ್ಸವ ನಡೆಸಿದ್ದಾರೆ. ಈ ಪ್ರತೀತಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಇದನ್ನೂ ಓದಿ: ನೇತಾಜಿ ಜನ್ಮದಿನವಾದ ಜನವರಿ 23 ರಿಂದಲೇ ಗಣರಾಜ್ಯೋತ್ಸವ ಆಚರಣೆ ಪ್ರಾರಂಭ

    ಕೆಲ ಭಕ್ತರಿಂದ ನಿಯಮ ಉಲ್ಲಂಘನೆ
    ಕಳೆದ ಎರಡು ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ ವ್ಯಾಪಿಸಿರುವ ಕಾರಣ ಉತ್ಸವದಲ್ಲಿ ಸಾವಿರಾರು ಜನ ಭಾಗಿಯಾಗುತ್ತಿಲ್ಲ. ಉಡುಪಿ ಜಿಲ್ಲಾಡಳಿತ ಸಾಂಪ್ರದಾಯಿಕ ಆಚರಣೆಗೆ ಅವಕಾಶ ಕೊಟ್ಟಿರುವುದರಿಂದ ಇಂದು 500 ರಿಂದ 600 ಜನ ರಥೋತ್ಸವದಲ್ಲಿ ಭಾಗಿಯಾದರು.  ಭಾಗವಹಿಸಿದ್ದ ಬಹುತೇಕ ಜನ ಮಾಸ್ಕ್‌ ಧರಿಸಿದ್ದರೂ ಕೆಲವರು ಮಾಸ್ಕ್‌ ಧರಿಸದೇ ಕೋವಿಡ್‌ ನಿಯಮವನ್ನು ಉಲ್ಲಂಘಿಸಿದ್ದರು.

    ರಥ ಎಳೆಯುವ ಸಂದರ್ಭ ಮತ್ತು ರಥದಿಂದ ಪ್ರಸಾದ ಸ್ವೀಕರಿಸುವ ಸಂದರ್ಭ ಭಕ್ತರು ಕೊರೊನಾ ನಿಯಮ ಪಾಲಿಸಿಲ್ಲ. ಪ್ರತಿ ವರ್ಷ ನಡೆಯುವ ಹಗಲು ಉತ್ಸವದಲ್ಲಿ 10 ರಿಂದ 20 ಸಾವಿರ ಜನ ಪಾಲ್ಗೊಳ್ಳುತ್ತಾರೆ. ಅದ್ಧೂರಿ ಅವಕಾಶ ಇರದ ಕಾರಣ ಕೆಲ ಭಕ್ತರಿಗೆ ನೋವಾಗಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಮಠದ ಭಕ್ತ ರವಿಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ರಾಜಭವನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದ ರಾಜ್ಯಪಾಲರು

    ಅಷ್ಟಮಠಗಳ ಯತಿಗಳು ಉತ್ಸವದಲ್ಲಿ ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿದರು. ಕೃಷ್ಣನ ಪ್ರಸಾದವನ್ನು ತೇರಿನಿಂದಲೇ ವಿತರಣೆ ಮಾಡಿದರು. ಎರಡು ವರ್ಷಗಳ ಕಾಲ ಉಡುಪಿ ಕೃಷ್ಣನ ಪೂಜಾ ಅಧಿಕಾರ ಪರ್ಯಾಯ ಅದಮಾರು ಮಠಕ್ಕಿತ್ತು. ಜನವರಿ 18 ರಿಂದ ಮುಂದಿನ ಎರಡು ವರ್ಷ ಅಧಿಕಾರ ಕೃಷ್ಣಾಪುರ ಮಠಕ್ಕೆ ಹಸ್ತಾಂತರ ಆಗಲಿದೆ.

  • ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ನಾಳೆಯಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ- ತೀರ್ಥ, ಪ್ರಸಾದ ಇಲ್ಲ

    ಉಡುಪಿ: ಜುಲೈ 11 ಭಾನುವಾರ ಮಧ್ಯಾಹ್ನದಿಂದ ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠ ಹೇಳಿದೆ.

    ವಾರದ ಹಿಂದೆ ರಾಜ್ಯ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ಅವಕಾಶ ಕಲ್ಪಿಸಿತ್ತು. ರಾಜ್ಯಾದ್ಯಂತ ಮಠ, ಮಂದಿರಗಳು ತೆರೆದರೂ, ಉಡುಪಿ ಶ್ರೀ ಕೃಷ್ಣ ಮಠ ತೆರೆದಿರಲಿಲ್ಲ. ಕೊರೊನಾ ಹತೋಟಿಗೆ ಬಂದ ನಂತರ ಮಠದಲ್ಲಿ ಅವಕಾಶ ಕಲ್ಪಿಸುವುದಾಗಿ ಹೇಳಿತ್ತು.

    ಇದೀಗ ಪರ್ಯಾಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಇದೇ ಭಾನುವಾರದಿಂದ ಭಕ್ತರಿಗೆ ಮಠ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಮಧ್ಯಾಹ್ನದ ಪೂಜೆಯ ನಂತರ ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬಹುದು. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಠದ ಒಳಗೆ ಬರುವ ಅವಕಾಶವನ್ನು ನೀಡಲಾಗಿದೆ.

    ಉಡುಪಿ ಶ್ರೀಕೃಷ್ಣ ಮಠದ ಒಳಗೆ ಪ್ರವೇಶಿಸುವ ಸರತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಮಠದೊಳಗೆ ಬರಬೇಕು ಎಂದು ಮಠ ಹೇಳಿದೆ. ತೀರ್ಥ ಪ್ರಸಾದದ ಅವಕಾಶ ಇಲ್ಲ. ದೇವರ ದರ್ಶನಕ್ಕೆ ಮಾತ್ರ ವ್ಯವಸ್ಥೆ ಕಲ್ಪಿಸಲಾಗಿದೆ.

  • 2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    2 ದಿನ ಸಿಎಂ ಉಡುಪಿ ಪ್ರವಾಸ- ಯಾವೆಲ್ಲ ಸ್ಥಳಕ್ಕೆ ಭೇಟಿ?

    ಉಡುಪಿ: ಬಿಜೆಪಿಯ ಸಚಿವಾಕಾಂಕ್ಷಿಗಳ ಅಸಮಾದನ ಮತ್ತು ಸಿಡಿ ಗದ್ದಲದ ನಡುವೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎರಡು ದಿನ ಕರಾವಳಿಯ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ.

    ಮುಖ್ಯಮಂತ್ರಿಯಾದ ನಂತರ ಎರಡನೇ ಬಾರಿ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಿಎಸ್‍ವೈ ಭೇಟಿ ನೀಡುತ್ತಿದ್ದು, ಪರ್ಯಾಯ ಪಂಚ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಠದ ಕಾರ್ಯಕ್ರಮ ನಂತರ ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಡುಪಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

    ಕರಂಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಗಳವಾರ ಬೆಳಗ್ಗೆ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಜೊತೆ ಸಿಎಂ ಬಿಎಸ್‍ವೈ ಆಗಮಿಸಲಿದ್ದಾರೆ. ಕಾಪು ತಾಲೂಕಿನ ಹೆಜಮಾಡಿ ಬಂದರಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿ ಮಧ್ಯಾಹ್ನ ಕುಂದಾಪುರ ತಾಲೂಕು ಕುಂಭಾಸಿ ಆನೆಗುಡ್ಡೆ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

    ಸಿಎಂ ಆದ ನಂತರ ಬಿಎಸ್ ಯಡಿಯೂರಪ್ಪ ಅವರದ್ದು ಇದು ಉಡುಪಿಗೆ ನಾಲ್ಕನೇ ಭೇಟಿ. ಉಡುಪಿ ಜಿಲ್ಲೆಯ ಐದು ಬಿಜೆಪಿ ಶಾಸಕರು, ಸಂಸದೆ ಶೋಭಾ ಕರಂದ್ಲಾಜೆ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

  • ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    ನದಿ ದಾಟಿ ಸೀಮೋಲ್ಲಂಘನೆ, ಕುದುರೆ ಏರಿ ಪುರ ಪ್ರವೇಶಿಸಿದ ಪೇಜಾವರ ಶ್ರೀಗಳು

    – ಶ್ರೀಗಳ ಚಾತುರ್ಮಾಸ್ಯ ಸಮಾಪ್ತಿ

    ಉಡುಪಿ: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಚಾತುರ್ಮಾಸ್ಯ ವೃತಾಚರಣೆ ಅಂತ್ಯಗೊಂಡಿದೆ. ಪೇಜಾವರ ಮಠದ ಶಾಖಾ ಮಠವಾಗಿರುವ ನೀಲಾವರದಲ್ಲಿ ಈ ಬಾರಿ ಶ್ರೀಗಳು ವೃತಾಚರಣೆ ಕೈಗೊಂಡಿದ್ದರು. ಎರಡು ತಿಂಗಳುಗಳ ಕಾಲ ಪೂಜೆ ಪುನಸ್ಕಾರ, ವ್ರತಾಚರಣೆ ಜೊತೆ ಗೋವುಗಳ ಸೇವಾ ಕಾರ್ಯದಲ್ಲಿ ನಿರತರಾಗಿದ್ದರು.

    ಚಾತುರ್ಮಾಸ್ಯದ ಕೊನೆಯ ಪೂಜೆಯನ್ನು ಶ್ರೀಗಳು ನೆರವೇರಿಸಿದದರು. ಆರಂಭದಲ್ಲಿ ಪಟ್ಟದ ದೇವರಿಗೆ ನಂತರ ಗೋಶಾಲೆಯ ಕೆರೆಯ ಮಧ್ಯೆ ಇರುವ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆಯನ್ನು ಅರ್ಪಿಸಿದರು. ಚಾತುರ್ಮಾಸ್ಯ ಆರಂಭದಲ್ಲಿ ಮೃತ್ತಿಕೆಯನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಗುತ್ತದೆ. ಚಾತುರ್ಮಾಸದ ಅಂತ್ಯಕಾಲದಲ್ಲಿ ಮೃತ್ತಿಕಾ ವಿಸರ್ಜನೆಯನ್ನು ದೇವಸ್ಥಾನದ ಕೆರೆಯಲ್ಲಿ ಶ್ರೀಗಳು ನೆರವೇರಿಸಿದರು. ಚಾತುರ್ಮಸ್ಯ ವೃತಾಚರಣೆಯನ್ನು ಬಿಟ್ಟ ನಂತರ ಭಕ್ತಾದಿಗಳಿಗೆ ತೀರ್ಥವನ್ನು ಕೊಡುವ ಸಂಪ್ರದಾಯವಿದೆ. ಹೀಗಾಗಿ ಸ್ವತಃ ಸ್ವಾಮೀಜಿಯವರೇ ತೀರ್ಥ ವಿತರಣೆ ಮಾಡಿದರು.

    ಚತುರ್ಮಸ್ಯ ಸಮಾಪ್ತಿ ಆದ ಹಿನ್ನೆಲೆ ನೀಲಾವರ ಗೋಶಾಲೆಯಲ್ಲಿ ಭಜನಾ ಕಾರ್ಯಕ್ರಮ, ಯಕ್ಷಗಾನ ತಾಳಮದ್ದಳೆ ಏರ್ಪಡಿಸಲಾಗಿತ್ತು. ಒಂದು ಊರಿನಲ್ಲಿ ಸ್ವಾಮೀಜಿ ವ್ರತಾಚರಣೆಯನ್ನು ಕೈಗೊಂಡರೆ ವೃತ ಮುಗಿದ ಮೇಲೆ ಅವರು ಊರನ್ನು ಬಿಡಬೇಕು ಎಂಬ ನಂಬಿಕೆಯಿದೆ. ಸಂಪ್ರದಾಯದಂತೆ ಸ್ವಾಮೀಜಿಯವರು ಸೀಮೋಲ್ಲಂಘನ ಮಾಡಿದರು. ನೀಲಾವರದಿಂದ ಎರಡು ಕಿಲೋಮೀಟರ್ ನಷ್ಟು ದೂರ ಇರುವ ಸೀತಾನದಿಯಲ್ಲಿ ಪ್ರಕ್ರಿಯೆ ನೆರವೇರಿತು. ನದಿ ತಟದ ಪಂಚಮಿಕಾನ ನಾಗ ಕ್ಷೇತ್ರದಲ್ಲಿ ಸ್ವಾಮೀಜಿಗಳು ದೋಣಿಯಲ್ಲಿ ಕುಳಿತು ಸೀತಾನದಿಯನ್ನು ದಾಟುವ ಪ್ರಕ್ರಿಯೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರೀಗಳಿಗೆ ಗ್ರಾಮಸ್ಥರು, ಸ್ಥಳೀಯರಿಂದ ಗೌರವ ಸಲ್ಲಿಸಲಾಯಿತು. ಸ್ವಾಮೀಜಿ ಭಕ್ತರಿಗೆ ಮಂತ್ರಾಕ್ಷತೆಯನ್ನು ನೀಡಿ ಊರಿನ ಸಕಲ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದರು. ಬಿಳಿ ಕುದುರೆ ಏರಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪುರಪ್ರವೇಶ ನಡೆಸಿದರು.

    ಯತಿಗಳಿಗೆ ಚಾತುರ್ಮಾಸ್ಯ ವ್ರತ ಬಹಳ ಮಹತ್ವದ್ದು. ಈ ಸಂದರ್ಭದಲ್ಲಿ ಆಹಾರದ ನಿಯಮ, ಒಂದು ಪ್ರದೇಶದಲ್ಲಿ ಉಳಿದು ದೇವರ ಕಾರ್ಯ ಮಾಡುವಂತದ್ದು. ಈ ಸಂದರ್ಭದಲ್ಲಿ ನಾಲ್ಕು ತಿಂಗಳು ವೃತ ಆಚರಣೆ ಆಗುತ್ತದೆ. ಭಗವಂತ ಪವಡಿಸುವ ಸಂದರ್ಭದಲ್ಲಿ ವಿಶೇಷ ಸಾಧನ ಅನುಷ್ಠಾನಗಳನ್ನು ಮಾಡಬೇಕು. ನಾಲ್ಕು ಮಾಸಗಳ ಕಾಲ ನಾಲ್ಕು ಪ್ರತ್ಯೇಕ ಆಹಾರ ಪದ್ಧತಿಯನ್ನು ಕೂಡ ಅನುಸರಿಸಲಾಗುತ್ತದೆ. ಮೊದಲ ಮಾಸದಲ್ಲಿ ತರಕಾರಿ ಮತ್ತು ಕೆಲವು ಧಾನ್ಯಗಳನ್ನು ಸೇವಿಸುವುದು ನಿಷೇಧ ವಾಗಿರುತ್ತದೆ. 2ನೇ ಮಾಸ ಮೊಸರನ್ನು ಸಂಪೂರ್ಣವಾಗಿ ತ್ಯಾಗ ಮಾಡುತ್ತೇವೆ. 3ನೇ ತಿಂಗಳಿನಲ್ಲಿ ಹಾಲನ್ನು ಸಂಪೂರ್ಣವಾಗಿ ತ್ಯಾಗ ಮಾಡಿ, ಮತ್ತೆಲ್ಲ ವಸ್ತುಗಳನ್ನು ಉಪಯೋಗ ಮಾಡುತ್ತೇವೆ. ನಾಲ್ಕನೆ ತಿಂಗಳು ದ್ವಿದಳ ಧಾನ್ಯಗಳನ್ನು ಒಳಗೊಳ್ಳುವಂತಹ ತರಕಾರಿ ಮತ್ತು ಯಾವುದೇ ಆಹಾರ ವಸ್ತುಗಳನ್ನು ಸೇವನೆ ಮಾಡುವುದಿಲ್ಲ. ಅಹಿಂಸಾ ವ್ರತವನ್ನು ಪಾಲನೆ ಮಾಡಬೇಕು. ಅದರಲ್ಲೂ ಚಾತುರ್ಮಾಸ್ಯ ಸಂದರ್ಭದಲ್ಲಿ ಓಡಾಟ ಮಾಡುವಂತಿಲ್ಲ. ಇದಕ್ಕೆ ಧೃಡವಾದ ಕಾರಣಗಳಿವೆ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಜಂತುಗಳು ಹುಟ್ಟುವಂತಹ ಕಾಲ. ಸಂಚಾರ ಕಾಲದಲ್ಲಿ ನಡಿಗೆ, ವಾಹನಗಳ ಅಡಿಗೆ ಬಿದ್ದು ಜೀವಿಗಳು ಸಾವನ್ನಪ್ಪುವ ಸಾಧ್ಯತೆ ಇರುವುದರಿಂದ ಓಡಾಟ ಸಲ್ಲದು ಎಂದು ಪೇಜಾವರಶ್ರೀ ಹೇಳಿದರು.

    ಈ ಕುರಿತು ಮಠದ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ಹಿಂದಿನ ಕಾಲದಲ್ಲಿ ಒಂದು ಊರನ್ನು ಬೇರ್ಪಡಿಸುವುದು ಒಂದು ಬೆಟ್ಟ ಒಂದು ನದಿ. ಚಾತುರ್ಮಾಸ್ಯ ಕುಳಿತುಕೊಂಡ ಯತಿ ಊರನ್ನು ದಾಟಿ ಹೋಗುವುದು, ಒಂದು ಸೀಮೆಯನ್ನು ಬಿಡುವ ಪರಂಪರೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಚಾತುರ್ಮಾಸ್ಯ ವ್ರತವನ್ನು ಸಂಪೂರ್ಣಗೊಳಿಸಿದಂತಹ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಸೀತಾ ನದಿಯನ್ನು ದಾಟಿ ನಮ್ಮ ಸಂಚಾರವನ್ನು ಆರಂಭಿಸಿದ್ದಾರೆ. ಅವರ ಮಠಾಧೀಶರು 33ನೇ ಚಾತುರ್ಮಾಸ್ಯವನ್ನು ನೀಲಾವರದಲ್ಲಿ ಮಾಡಿದ್ದಾರೆ. ಅಷ್ಟಮಠಗಳ ಪೈಕಿ ಕಲ್ಯಾಣಪುರ ಹೊಳೆಯನ್ನು ದಾಟಿ ಸೀತಾ ನದಿ ಮತ್ತು ಸುವರ್ಣಾ ನದಿಯ ನಡುವೆ ಚಾತುರ್ಮಾಸ್ಯ ಕುಳಿತುಕೊಂಡಿರುವ ಮೊದಲ ಯತಿ ಎಂದು ಹೇಳಿದರು.

  • ಗ್ಲೋಬಲ್ ವಾರ್ಮಿಂಗ್ ವಿರುದ್ಧ ಸಮರ-ಉಡುಪಿಯಲ್ಲಿ 1 ಲಕ್ಷ ಸೀಡ್ ಬಾಲ್ ತಯಾರಿ

    ಗ್ಲೋಬಲ್ ವಾರ್ಮಿಂಗ್ ವಿರುದ್ಧ ಸಮರ-ಉಡುಪಿಯಲ್ಲಿ 1 ಲಕ್ಷ ಸೀಡ್ ಬಾಲ್ ತಯಾರಿ

    ಉಡುಪಿ: ಗ್ಲೋಬಲ್ ವಾರ್ಮಿಂಗ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಉಷ್ಣತೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಅಭಿವೃದ್ಧಿ ಹೆಸರಲ್ಲಿ ಕಾಡಿನ ನಾಶವೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ. ಉಸಿರು ನೀಡುವ ಹಸಿರಿಗಾಗಿ ಉಡುಪಿಯಲ್ಲಿ ಸೀಡ್ ಬಾಲ್ ಅಭಿಯಾನ ಶುರುವಾಗಿದೆ. ಪೇಜಾವರ ಕಿರಿಯ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಯಾನಕ್ಕೆ ಚಾಲನೆ ನೀಡಿದರು.

    ಕಾಲಕಾಲಕ್ಕೆ ಮಳೆ ಬರಲ್ಲ. ಬೇಸಿಗೆ ಶುರುವಾಗೋ ಮೊದಲೇ ನೀರು ಬತ್ತಿ ಹೋಗುತ್ತಿದೆ. ಸೂರ್ಯನ ಶಾಖ ವಿಪರೀತವಾಗಿದ್ದು ಉಷ್ಣಾಂಶದಲ್ಲಿ ಏರುಪೇರಾಗಿದೆ. ಕಾಡು ನಾಶವೇ ಇದಕ್ಕೆಲ್ಲಾ ಮೂಲಕಾರಣ ಅನ್ನೋದ್ರಲ್ಲಿ ಸಂಶಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಉಡುಪಿ ಶ್ರೀಕೃಷ್ಣಮಠದಲ್ಲಿ ಉತ್ತಿಷ್ಟ ಭಾರತ ತಂಡ ಸೀಡ್ ಬಾಲ್ ಅಭಿಯಾನ ಶುರುಮಾಡಿದೆ. ಮಠದ ರಾಜಾಂಗಣದಲ್ಲಿ ನೂರಾರು ಮಂದಿ ಯುವಕರು ಹಾಗು ಮಹಿಳೆಯರು ಬೀಜದುಂಡೆಗಳನ್ನು ತಯಾರು ಮಾಡಿದರು.

    ಹಿಂದೆಲ್ಲಾ ಬೀಜೋತ್ಪತ್ತಿ ತನ್ನಿಂದ ತಾನೆ ನಡೆಯುತ್ತಿತ್ತು. ಆದ್ರೆ ಈಗ ಪರಿಸ್ಥಿತಿ ಹಾಗೆ ಇಲ್ಲ. ನೆರವಾಗಿ ಬೀಜ ಒಗೆದರೆ, ಅದು ಮೊಳೆಕೆಯೊಡೆಯಲ್ಲ. ಭೂಮಿಯಲ್ಲಿ ಪೋಷಕಾಂಶ ಇರಲಿಕ್ಕಿಲ್ಲ. ಆ ನಿಟ್ಟಿನಲ್ಲಿ ಬೀಜದುಂಡೆ ಮಾಡಲಾಗುತ್ತಿದೆ. ಸಣ್ಣಪುಟ್ಟ ಸಂಘಟನೆ ತೊಡಗಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮಾಡಿದ್ರೆ ನಮ್ಮ ರಕ್ಷಣೆ ಮಾಡಿದಂತೆ. ಹೀಗಾಗಿ ಇಂದಿನ ಪೀಳಿಗೆಗೆ ನಮ್ಮ ಹಿರಿಯರು ಪರಿಸರ ಉಳಿಸಿದ್ದಾರೆ. ನಾವು ಮುಂದಿನ ಪೀಳಿಗೆಗೆ ಎನು ಮಾಡಿದ್ದೆವೆ ಎಂಬ ಪ್ರಶ್ನೆ ಹಾಕಿಕೊಂಡು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು.

    ಏನಿದು ಬೀಜದುಂಡೆ ಕಾನ್ಸೆಪ್ಟ್?:
    ಮಣ್ಣು- ಸಗಣಿ- ಗೋಮೂತ್ರವನ್ನು ಮಿಶ್ರಣ ಮಾಡಿ ಮಣ್ಣಿನ ಉಂಡೆಯನ್ನು ತಯಾರು ಮಾಡಿ, ಅದರೊಳಗೆ ಬೀಜವಿಟ್ಟು ಮುಚ್ಚಲಾಗುತ್ತದೆ. ಬೀಜದುಂಡೆಯನ್ನು ಹದ ಬಿಸಿಲಿನಲ್ಲಿ ಒಂದೆರಡು ದಿನ ಒಣಗಿಸಿ, ಮಳೆಗಾಲ ಆರಂಭದಲ್ಲಿ ಅಲ್ಲಲ್ಲಿ ಈ ಬೀಜದುಂಡೆಗಳನ್ನು ಎಸೆಯಲಾಗುತ್ತದೆ. ಮಳೆ ಬಿದ್ದೊಡನೆ ಮಣ್ಣು ತೇವಗೊಂಡು ಬೀಜ ಮೊಳಕೆಯೊಡೆಯುತ್ತದೆ. ಸಸಿಗೆ ಬೇಕಾದಷ್ಟು ಪೋಷಕಾಂಶ ಸುತ್ತಲೂ ಮೊದಲೇ ರೆಡಿಯಾಗಿರುತ್ತದೆ. ಗಿಡ ಮರವಾಗಿ ಬೆಳೆಯುತ್ತದೆ ಎಂಬೂದು ಈ ಸೀಡ್ ಬಾಲ್ ನ ಕಾನ್ಸೆಪ್ಟ್.

    ಉತ್ತಿಷ್ಟ ಭಾರತ ತಂಡ ರಾಜ್ಯಾದ್ಯಂತ ಈವರೆಗೆ 18 ಲಕ್ಷದಷ್ಟು ಸೀಡ್ ಬಾಲ್ ತಯಾರಿ ಮಾಡಿ ಎಸೆದಿದೆ. ಉಡುಪಿಯಲ್ಲಿ ಒಂದು ಲಕ್ಷದಷ್ಟು ಬೀಜದುಂಡೆ ತಯಾರು ಮಾಡುವ ಗುರಿಯನ್ನು ಹೊಂದಿದೆ.

    ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಈ ಅಭಿಯಾನ ಮಾಡಿದ್ದೆವು. ಇದೀಗ ಉಡುಪಿಗೆ ಬಂದಿದ್ದೇವೆ. ಐದಾರು ವರ್ಷಗಳಲ್ಲಿ ಬೃಹತ್ ಮರವಾಗಿ ಬೆಳೆಯುವ ಬೀಜಗಳನ್ನು ಈಗ ಬಿತ್ತುತ್ತಿದ್ದೇವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉತ್ತಿಷ್ಟ ಭಾರತ ಸಂಘಟನೆಯ ಕಾರ್ಯಕರ್ತ ಪ್ರಕಾಶ್ ಹೇಳಿದ್ದಾರೆ.

     

  • ಉಡುಪಿಯ ಕೃಷ್ಣ ಮಠ ನವೀಕರಣ: ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವಿಶೇಷ ವ್ಯವಸ್ಥೆ

    ಉಡುಪಿಯ ಕೃಷ್ಣ ಮಠ ನವೀಕರಣ: ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವಿಶೇಷ ವ್ಯವಸ್ಥೆ

    ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸೊಬಗನ್ನ ನೋಡದವರುಂಟೆ. ಆದ್ರೆ ನೀವಂದುಕೊಂಡ ಹಾಗೆ ಹಳೆ ಕೃಷ್ಣಮಠ ಉಡುಪಿಯಲ್ಲಿ ಕಾಣಸಿಗೋದಿಲ್ಲ. ಯಾಕೆಂದರೆ ಕಡೆಗೋಲು ಕೃಷ್ಣನ ಸನ್ನಿಧಾನ ಸಂಪೂರ್ಣ ಬದಲಾಗಿದೆ.

    ಕೃಷ್ಣಮಠಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಹೋಗುತ್ತಾರೆ. ಮಠದೊಳಗೆ ನೂರಿನ್ನೂರು ಜನ ಸೇರಿದ್ರೂ ಉಸಿರುಗಟ್ಟುವ ವಾತಾವರಣವಿರುತ್ತಿತ್ತು. ಮಹಾಪೂಜೆ ವೇಳೆ ಗಾಳಿಯ ಸಂಚಾರವೂ ಇರುತ್ತಿರಲಿಲ್ಲ. ಆದರೆ ಈಗ ಕೃಷ್ಣಮಠದ ಮೇಲೊಂದು ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ.

    800 ವರ್ಷಗಳ ಇತಿಹಾಸವುಳ್ಳ ಕೃಷ್ಣ ಮಠ 16 ವರ್ಷದ ಹಿಂದೊಮ್ಮೆ ನವೀಕರಣಗೊಂಡಿತ್ತು. ಪೇಜಾವರ ಶ್ರೀಗಳ ಪರ್ಯಾಯ ಹಿನ್ನೆಲೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನವೀಕರಣ ಮಾಡಲಾಗ್ತಿದೆ. ಮೇಲ್ಛಾವಣಿಗೆ ಹಿತ್ತಾಳೆಯ ತಟ್ಟೆಗಳನ್ನು ಅಳವಡಿಸಲಾಗಿದೆ. ಪೌಳಿಗೆ ಮರದ ಕೆತ್ತನೆಗಳು, ಬೃಹತ್ ಕಂಬಗಳನ್ನು ಅಳವಡಿಸಲಾಗಿದೆ.

    ಇದೇ ತಿಂಗಳ 18ರಂದು ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೊಡವಿಗೊಡೆಯನ ಮಠ ಹೊಸ ರೂಪಿನೊಂದಿಗೆ ಭಕ್ತಾದಿಗಳನ್ನು ಆಕರ್ಷಿಸ್ತಿದೆ.